ಅರುಣ್ ಶೌರಿ
ಅರುಣ್ ಶೌರಿ (ಹಿಂದಿ: अरूण शौरी) (ಜನನ: 1941 ನವೆಂಬರ್ 2) ಭಾರತದ ಒಬ್ಬ ಪತ್ರಿಕೋದ್ಯಮಿ, ಲೇಖಕ, ಬುದ್ಧಿಜೀವಿ ಮತ್ತು ರಾಜಕಾರಣಿಯಾಗಿದ್ದಾರೆ. ಇವರು ವಿಶ್ವ ಬ್ಯಾಂಕ್‌ನ (1968-72 ಮತ್ತು 1975-77) ಅರ್ಥಶಾಸ್ತ್ರಜ್ಞರು, ಭಾರತದ ಯೋಜನಾ ಆಯೋಗದ ಸಲಹೆಗಾರ, ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ಟೈಮ್ಸ್ ಆಫ್ ಇಂಡಿಯದ ಸಂಪಾದಕ ಮತ್ತು ಭಾರತ ಸರಕಾರದಲ್ಲಿ (1998-2004) ಸಚಿವರಾಗಿ ಕೆಲಸಮಾಡಿದ್ದಾರೆ.[೧]
ಅರುಣ್ ಶೌರಿ | |
---|---|
ವೈಯಕ್ತಿಕ ಮಾಹಿತಿ | |
ಜನನ | ಜಲಂಧರ್, ಭಾರತ | ನವೆಂಬರ್ ೨, ೧೯೪೧
ರಾಜಕೀಯ ಪಕ್ಷ | ಭಾರತೀಯ ಜನತಾ ಪಾರ್ಟಿ |
ಸಂಗಾತಿ(ಗಳು) | ಅನಿತ |
ವೃತ್ತಿ | ರಾಜಕಾರಣಿ |
ಉದ್ಯೋಗ | ಪತ್ರಕರ್ತ ಮತ್ತು ವಿಶ್ವ ಬ್ಯಾಂಕ್‍ನ ಅರ್ಥಶಾಸ್ತ್ರಜ್ಞ |
ಆರಂಭಿಕ ಜೀವನ
ಬದಲಾಯಿಸಿಭಾರತದ ಜಲಂಧರ್ನಲ್ಲಿ ಅವರು ಜನಿಸಿದರು. ಅವರ ತಂದೆ ಪೌರಾಡಳಿತ ಅಧಿಕಾರಿಯಾಗಿರುವ (IAS) ಹರಿ ದೇವ್ ಶೌರಿ, ನಂತರ ಗ್ರಾಹಕ ಹಕ್ಕುಗಳ ರಕ್ಷಣೆ ಕಾರ್ಯಕರ್ತರಾದರು. ಭಾರತದ ವಿಭಜನೆಯ ಸಮಯದಲ್ಲಿ, ಅವರ ತಂದೆ ಲಾಹೋರ್‌ನ ಮ್ಯಾಜಿಸ್ಟ್ರೇಟ್ ಆಗಿದ್ದರು. ವಿಭಜನೆಯ ನಂತರ ಕುಟುಂಬವು ಭಾರತಕ್ಕೆ ಸ್ಥಳಾಂತರಗೊಂಡಿತು. ಅರುಣ್ ಬರಾಖಂಬಾದ ಮಾಡರ್ನ್ ಸ್ಕೂಲ್ ಮತ್ತು ದೆಹಲಿಯ ಸೇಂಟ್ ಸ್ಟೀಫನ್'ಸ್‌ನಲ್ಲಿ ತಮ್ಮ ವಿದ್ಯಾಭ್ಯಾಸ ಮಾಡಿದರು. ಅವರು ಅಮೆರಿಕಾದ ಸೆರಕ್ಯುಸ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಸ್ನಾತಕೋತ್ತರ ಪದವಿ ಪಡೆದರು.[೨] ಅವರ ಸಹೋದರಿ ನಳಿನಿ ಸಿಂಗ್ ಸಹ ಪತ್ರಿಕೋದ್ಯಮಿಯಾಗಿದ್ದಾರೆ.
ವೃತ್ತಿ ಜೀವನ
ಬದಲಾಯಿಸಿಅನೇಕ ಹಗರಣಗಳ ಸರಣಿಯನ್ನು ಸ್ವತಃ ಅವರೇ ಬರೆದು ಪತ್ರಿಕೆಯಲ್ಲಿ ಬಯಲುಮಾಡಿದರು. ಶೌರಿ ಮತ್ತು ಅವರು 1979ರಲ್ಲಿ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ ಇಂಡಿಯನ್ ಎಕ್ಸ್‌ಪ್ರೆಸ್ ಸರ್ಕಾರದ ಉನ್ನತ ಮಟ್ಟಗಳಲ್ಲಿ ಭ್ರಷ್ಟಾಚಾರವನ್ನು ಬಹಿರಂಗ ಮಾಡಿತು ಹಾಗೂ ಅನೇಕ ಪ್ರಮುಖ ಹಗರಣಗಳನ್ನು ಬಯಲು ಮಾಡಿತು. “ಭಾರತದ ವಾಟರ್‌ಗೇಟ್“ ಎಂದು ಹೆಸರಾದ ಹಗರಣವೂ ಇದರಲ್ಲಿ ಸೇರಿದೆ. ಶೌರಿ 1981ರಲ್ಲಿ ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದಅಬ್ದುಲ್ ರೆಹಮಾನ್ ಅಂತುಳೆ ವಿರುದ್ಧ ಏಕಾಂಗಿಯಾಗಿ ಧರ್ಮಯುದ್ಧ ಪ್ರಾರಂಭಿಸಿದ್ದರು. ಅಂತುಳೆ ಅವರು ರಾಜ್ಯದ ಸಂಪನ್ಮೂಲಗಳನ್ನು ಅವಲಂಬಿಸಿದ ಉದ್ಯಮಗಳಿಂದ ಲಕ್ಷಾಂತರ ಡಾಲರ್‌ಗಳನ್ನು ಸುಲಿಗೆ ಮಾಡಿಇಂದಿರಾ ಗಾಂಧಿಹೆಸರಿನಲ್ಲಿದ್ದ ಖಾಸಗಿ ದತ್ತಿನಿಧಿಯಲ್ಲಿ ಇಟ್ಟಿದ್ದರು ಎಂದು ಆರೋಪಿಸಲಾಗಿತ್ತು. ಈ ಲೇಖನದಿಂದಾಗಿ ಮುಖ್ಯಮಂತ್ರಿ ರಾಜಿನಾಮೆ ನೀಡಬೇಕಾಯಿತು. ಪತ್ರಿಕಾ ಸುದ್ದಿಯಿಂದ ಭಾರತದಲ್ಲಿನ ಅತ್ಯುನ್ನತ ದರ್ಜೆಯ ಅಧಿಕಾರಿ ಪದವಿಯಿಂದ ನಿರ್ಗಮಿಸಿದ್ದರಿಂದ ಕೇವಲ ಇಂದಿರಾ ಗಾಂಧಿಗೆ ಮಾತ್ರವಲ್ಲದೆ ಅವರ ಕಾಂಗ್ರೆಸ್ ಪಕ್ಷದ ಆಡಳಿತಕ್ಕೆ ಕಸಿವಿಸಿಯುಂಟುಮಾಡಿತ್ತು.[೩] ಶೌರಿಯಿಂದ ಈ ಹಗರಣಗಳ ಬಹಿರಂಗದಿಂದಾಗಿ, ಇಂಡಿಯನ್ ಎಕ್ಸ್‌ಪ್ರೆಸ್‌ನ ಮುಂಬಯಿ ಕಛೇರಿಗಳಲ್ಲಿ ಸುದೀರ್ಘ ಕಾರ್ಮಿಕ ವಿವಾದಕ್ಕೆ ನಾಂದಿಯಾಯಿತು. ಅಲ್ಲಿ ಅಂತುಳೆಯೊಂದಿಗೆ ಸಂಪರ್ಕ ಹೊಂದಿರುವ ಕಾರ್ಮಿಕ ಸಂಘಟನೆಕಾರ ಕಾರ್ಮಿಕರನ್ನು ಕನಿಷ್ಠ ವೇತನಕ್ಕಾಗಿ ಹೋರಾಡುವಂತೆ ಪ್ರೇರೇಪಿಸಿದರು. ಅದು ಭಾರತದ ಇತರ ಪತ್ರಿಕೆಗಳು ನೀಡುವ ವೇತನಕ್ಕಿಂತ ಎರಡು ಪಟ್ಟು ಹೆಚ್ಚಿನದಾಗಿತ್ತು. ಸರಕಾರ ಪತನದಲ್ಲಿ ಸಹ ಇದು ಫಲಿತಾಂಶ ಕಂಡಿತು. ವಿವಿಧ ಏಜೆನ್ಸಿಗಳು ಇಂಡಿಯನ್ ಎಕ್ಸ್‌ಪ್ರೆಸ್ ವಿರುದ್ಧ ಕಾನೂನು ದಾವೆಗಳನ್ನು ಹೂಡಿದ್ದು ಸಹ ಇದರಲ್ಲಿ ಸೇರಿದೆ. ಸರಕಾರದ ಒತ್ತಡ ಜಾಸ್ತಿಯಾದ ಹಿನ್ನೆಲೆಯಲ್ಲಿ, 1982ರಲ್ಲಿ ಪತ್ರಿಕೆಯ ಮಾಲೀಕರಾದ ರಾಮ್‌ನಾಥ್ ಗೋಯಂಕಾ ಶೌರಿಯವರನ್ನು ಪದಚ್ಯುತಿಗೊಳಿಸಿದರು.[೪] ಸುಮಾರು 1982 ಮತ್ತು 1986 ನಡುವಿನ ಅವಧಿಯಲ್ಲಿ ಶೌರಿ ಹಲವಾರು ಪತ್ರಿಕೆ ಮತ್ತು ನಿಯತಕಾಲಿಕೆಗಳಿಗೆ ಲೇಖನಗಳನ್ನು ಬರೆದರು. ಅದೇ ವೇಳೆಯಲ್ಲಿ ಪೀಪಲ್'ಸ್ ಯುನಿಯನ್ ಫಾರ್ ಸಿವಿಲ್ ಲಿಬರ್ಟಿಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. 1986ರಲ್ಲಿ ಅವರು ಟೈಮ್ಸ್ ಆಫ್ ಇಂಡಿಯಾನ ಕಾರ್ಯನಿರ್ವಾಹಕ ಸಂಪಾದಕರಾಗಿ ನೇಮಕಗೊಂಡರು. ಆದರೆ 1987ರಲ್ಲಿ ಗೋಯಂಕಾ ಅವರನ್ನು ಮತ್ತೆ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ವಾಪಸು ಕರೆಸಿಕೊಂಡರು. ನಂತರ ಶೌರಿ ಬೊಫೋರ್ಸ್ ಹೋವಿಟ್ಜರ್ ಬಂದೂಕು ಖರೀದಿ ಹಗರಣದಲ್ಲಿ ಆಗಿನ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯ ವಿರುದ್ಧ ಹರಿತವಾದ ದಾಳಿ ಪ್ರಾರಂಭಿಸಿದರು. ಇದರಿಂದಾಗಿ ನಂತರದ ಲೋಕಸಭೆ ಚುನಾವಣೆಗಳಲ್ಲಿ ರಾಜೀವ್ ಗಾಂಧಿ ಸೋಲಬೇಕಾಯಿತು. ಪತ್ರಿಕಾ ಸ್ವಾತಂತ್ರ್ಯ ಎತ್ತಿಹಿಡಿಯಲು ಶೌರಿ ಹಲವು ಬಾರಿ ಹೋರಾಡಿದ್ದರು. 1988ರಲ್ಲಿ ಮಾನನಷ್ಟ ಮಸೂದೆಯನ್ನು ಮಂಡಿಸುವ ಸರಕಾರದ ಪ್ರಸ್ತಾವನೆ ವಿರುದ್ಧ ಅವರ ಹೋರಾಟವು ಬಹುಶಃ ಅತ್ಯಂತ ಖ್ಯಾತಿ ಪಡೆದಿದೆ. ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಬಾಯಿಕಟ್ಟುವ ಪ್ರಯತ್ನವಾಗಿ ಅಸಾಮಾನ್ಯ ವೇಗದಲ್ಲಿ ಮಸೂದೆಯನ್ನು ಮಂಡಿಸಲಾಯಿತು ಎಂಬ ವ್ಯಾಪಕವಾಗಿ ಗ್ರಹಿಸಲಾಗಿತ್ತು. ಈ ಕ್ರಮದ ವಿರುದ್ಧ ಇಡೀ ಪತ್ರಿಕಾ ಸಮುದಾಯ ಶೌರಿ ಮತ್ತು ಇಂಡಿಯನ್ ಎಕ್ಸ್‌ಪ್ರೆಸ್ ಜತೆ ಕೈಜೋಡಿಸಿತು. ಅದೇ ಸಂದರ್ಭದಲ್ಲಿ ಸರಕಾರವು ಇಂಡಿಯನ್ ಎಕ್ಸ್‌ಪ್ರೆಸ್‌ನ ವಿರುದ್ಧ 300 ಪ್ರಕರಣಗಳನ್ನು ದಾಖಲಿಸಿತ್ತು. ಬ್ಯಾಂಕುಗಳಿಂದ ಪತ್ರಿಕೆಗೆ ಹಣಕಾಸಿನ ನೆರವನ್ನು ಕಡಿತಗೊಳಿಸಲಾಗಿತ್ತು. ಶೌರಿ, ಸರಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರಿಸಿದರು. 1990ರಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್‌ನ ಸಂಪಾದಕೀಯ ನೀತಿ ಕುರಿತು ಭಿನ್ನಾಭಿಪ್ರಾಯಗಳು ಉಂಟಾದ್ದರಿಂದ ಶೌರಿ ರಾಜೀನಾಮೆ ನೀಡಬೇಕಾಗಿ ಬಂದಿತು. ಮಂಡಲ್ ಆಯೋಗದ ವರದಿಯ ಅನುಷ್ಠಾನಕ್ಕೆ ಶೌರಿ ವಿರೋಧಿಸಿದ್ದೇ ಈ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ಮಂಡಲ್ ಆಯೋಗದ ವರದಿಯಂತೆ ಇತರ ಹಿಂದುಳಿದ ವರ್ಗಗಳಿಗೆ (OBC) ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಒದಗಿಸಬೇಕೆಂದು ಹೇಳಲಾಗಿತ್ತು. ಇದಕ್ಕೆ ಆಗಿನ V.P. ಸಿಂಗ್‌ರ ಸರಕಾರವು ಉಪಕ್ರಮ ಕೈಗೊಂಡಿತ್ತು. ಇದಾದ ನಂತರ, ಅವರು ಪುಸ್ತಕಗಳು ಮತ್ತು ನಿಯಮಿತ ಅಂಕಣಗಳನ್ನು ಬರೆಯಲು ತಮ್ಮ ಶಕ್ತಿಯನ್ನು ವಿನಿಯೋಗಿಸಿದರು. ಅವರು ಭಾರತದ ಸುಮಾರು 30 ದಿನಪತ್ರಿಕೆಗಳಲ್ಲಿ ವಿವಿಧ ಭಾಷೆಗಳಲ್ಲಿ ಅವರ ಲೇಖನಗಳು ಪ್ರಕಟವಾಗುತ್ತಿದ್ದವು. ಶೌರಿ ಭಾರತೀಯ ಜನತಾ ಪಕ್ಷದ (BJP) ಸದಸ್ಯರಾಗಿದ್ದಾರೆ. ಅವರು ರಾಜ್ಯಸಭೆಯ ಸದಸ್ಯರಾಗಿದ್ದರು ಮತ್ತು ಭಾರತ ಸರ್ಕಾರದಲ್ಲಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಸಚಿವಸಂಪುಟದಲ್ಲಿ ಬಂಡವಾಳ ಹಿಂದೆಗೆತ,ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವರಾಗಿದ್ದರು. ಬಂಡವಾಳ ಹಿಂದೆಗೆತ ಸಚಿವರಾಗಿ, ಇತರ ಸಂಸ್ಥೆಯೊಂದಿಗೆ ಮಾರುತಿ, VSNL, ಹಿಂದುಸ್ತಾನ್ ಜಿಂಕ್ ಮಾರಾಟದಲ್ಲಿ ಮುಂದಾಳತ್ವ ವಹಿಸಿದ್ದರು. ಸಚಿವರಾಗಿ ಅವರ ಸ್ಥಾನವು ವಿವಾದಾತ್ಮಕವಾಗಿತ್ತು, ಆದರೆ ಅವರು ಮತ್ತು ಅವರ ಕಾರ್ಯದರ್ಶಿ ಪ್ರದೀಪ್ ಬೈಜಲ್‌ರವರು ಅತ್ಯುತ್ತಮ ದರ್ಜೆಯದೆಂದು ಜನರು ನಂಬಿದ ಪ್ರಕ್ರಿಯೆಗಳಿಗೆ ಚಾಲನೆ ನೀಡಿದ್ದಕ್ಕಾಗಿ ಗೌರವಾನ್ವಿತರಾಗಿದ್ದರು. ಭಾರತದ ಅತಿ ಶ್ರೇಷ್ಠ 100 CEOಗಳ ಅಭಿಪ್ರಾಯ ಸಂಗ್ರಹದ ಫಲಿತಾಂಶದಲ್ಲಿ ವಾಜಪೇಯಿ ಸರಕಾರದಲ್ಲಿ ಅತ್ಯುತ್ತಮ ಸಚಿವರೆಂಬ ಶ್ರೇಯಾಂಕ ಗಳಿಸಿದ್ದಾರೆ.[೫] ವರ್ಷ 2000ದಲ್ಲಿ ಶೌರಿ ಇಡೀ ಮೊತ್ತವನ್ನು,(ರೂ. 11.90 ಕೋಟಿ)ಅವರಿಗೆ ಲಭ್ಯವಾದ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ (MPLADS)ಸಿಕ್ಕಿದ ವಿವೇಚನಾ ಕೋಟಾದಡಿ ಖರ್ಚು ಮಾಡುವ ಹಣವನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರ್‌ದಲ್ಲಿ ಬಯೋ-ಸೈನ್ಸಸ್ ಆಂಡ್ ಬಯೋ-ಇಂಜಿನಿಯರಿಂಗ್ ಇಲಾಖೆ ಸ್ಥಾಪಿಸಲು ವಿನಿಯೋಗಿಸಿದರು. 2005ರಲ್ಲಿ ಅವರು ಶಿಕ್ಷಣ ಸಂಸ್ಥೆಯಲ್ಲಿ ಪರಿಸರ ವಿಜ್ಞಾನಗಳು ಮತ್ತು ಪರಿಸರ ಇಂಜಿನಿಯರಿಂಗ್ ಗಾಗಿ ಪ್ರತ್ಯೇಕ,ಪೂರ್ಣ ಪ್ರಮಾಣದ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕಾಗಿ 11 ಕೋಟಿ ರೂಪಾಯಿ ಮುಡಿಪಾಗಿಡುವುದರ ಮೂಲಕ ಆ ಅಭಿಯಾನಕ್ಕೆ ತಮ್ಮ ಬದ್ಧತೆ ಪ್ರದರ್ಶಿಸಿದರು. 2007ರಲ್ಲಿ ಭಾರತದ ರಾಷ್ಟ್ರಪತಿಯಾಗಿ ಪ್ರತಿಭಾ ಪಾಟೀಲ್ ನಾಮ ನಿರ್ದೇಶನವನ್ನು ವಿರೋಧಿಸಿ ದನಿ ಎತ್ತಿದವರಲ್ಲಿ ಶೌರಿ ಸಹ ಒಬ್ಬರು. ಅರುಣ್ ಶೌರಿ 'ಡಸ್ ದಿಸ್ ಟೈಂಟೆಡ್ ಪರ್ಸನ್ ಡಿಸರ್ವ್ ಟು ಬಿಕಮ್ ಪ್ರೆಸಿಡೆಂಟ್ ಆಫ್ ಇಂಡಿಯಾ?' ಎಂಬ ಹೆಸರಿನ ಎರಡು ಲೇಖನಗಳನ್ನು ಒಳಗೊಂಡಿರುವ ಕಿರುಪುಸ್ತಕವನ್ನು ಪ್ರಕಟಿಸಿದರು. ಇದರಲ್ಲಿ ಕಾಂಗ್ರೆಸ್ ರಾಷ್ಟ್ರಪತಿ ಅಭ್ಯರ್ಥಿಯ ಅತೀ ಪ್ರಶ್ನಾರ್ಹ ಹಿನ್ನೆಲೆಯನ್ನು ಅವರು ಚರ್ಚಿಸಿದ್ದಾರೆ. ಕರಣ್ ಥಾಪರ್‌ರೊಂದಿಗಿನ ಸುದೀರ್ಘ ಸಂದರ್ಶನದಲ್ಲಿ, ಶೌರಿಯವರು ಪ್ರತಿಭಾ ಪಾಟೀಲ್ ಸ್ಥಾಪಿಸಿ ಅದರ ಉಸ್ತುವಾರಿ ಹೊತ್ತಿರುವ ಪ್ರತಿಭಾ ಮಹಿಳಾ ಸಹಕಾರಿ ಬ್ಯಾಂಕ್‌ನಿಂದ ಹಣದ ದುರುಪಯೋಗದ ಕುರಿತು ಪ್ರತಿಭಾಪಾಟೀಲ್ ಮತ್ತು ಅವರ ಬಂಧುಗಳ ವಿರುದ್ಧ ಆರೋಪಗಳ ಬಗ್ಗೆ ಭಾರೀ ಪ್ರಮಾಣದ ಸಾಕ್ಷ್ಯಗಳನ್ನು ನೀಡಿದರು. ಈ ಬ್ಯಾಂಕ್ ಪ್ರತಿಭಾ ಪಾಟೀಲ್‌ರ ಹಲವು ಕುಟುಂಬ ಸದಸ್ಯರಿಗೆ ಕಾನೂನುಬಾಹಿರವಾಗಿ ಸಾಲದ ಮೇಲೆ ಬಡ್ಡಿಯನ್ನು ಮನ್ನಾ ಮಾಡಿದರೆಂದು ಕಂಡಬಂದಿದ್ದರಿಂದ 2003ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್‌ನ ಪರವಾನಗಿಯನ್ನು ರದ್ದುಗೊಳಿಸಿತು.[೬] ಪ್ರತಿಭಾರವರು ಸಹೋದರ G.N.ಪಾಟೀಲ್ ವಿರುದ್ಧ ಕೊಲೆಯ ಪ್ರಕರಣವೊಂದರಲ್ಲಿ ವಿಚಾರಣೆಗೆ ಅಡ್ಡಿಪಡಿಸಿದರೆಂದು ಶೌರಿ ಆರೋಪಿಸಿದ್ದಾರೆ.
ಕಳೆದ 2009ರ ಸಾರ್ವತ್ರಿಕ ಚುನಾವಣೆಯುಲ್ಲಿ BJP ಪಕ್ಷವು ಸೋತ ನಂತರ, ಯಶವಂತ್ ಸಿನ್ಹಾ ಮತ್ತು ಜಸ್ವಂತ್ ಸಿಂಗ್‌ರೊಂದಿಗೆ ಸೇರಿ BJP ಪಕ್ಷದೊಳಗೆ ಆತ್ಮಾವಲೋಕನ ಮತ್ತು ನಾಯಕರ ಉತ್ತರದಾಯಿತ್ವಕ್ಕೆ ಒತ್ತಾಯಿಸಿದ ಧ್ವನಿಗಳಲ್ಲಿ ಅರುಣ್ ಶೌರಿ ಅವರೂ ಸೇರಿದ್ದರು. ಹಿರಿಯ BJP ನಾಯಕ ಜಸ್ವಂತ್ ಸಿಂಗ್ ಬರೆದ ಪುಸ್ತಕದಲ್ಲಿ ಮಹಮದ್ ಅಲಿ ಜಿನ್ನಾರನ್ನು ಹೊಗಳಿದ್ದಾರೆ, ಎಂಬ ಕಾರಣಕ್ಕೆ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ನಂತರ ವಿಷಯ ಕೆರಳುವ ಹಂತ ತಲುಪಿತು. ಶೌರಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ತಮ್ಮ ಲೇಖನಗಳಲ್ಲಿ ಜಸ್ವಂತ್ ಸಿಂಗ್‌ರನ್ನು ಸಮರ್ಥಿಸಿಕೊಂಡರು.ಈ ನಿರ್ಣಯವನ್ನು ತೆಗೆದುಕೊಂಡಿದ್ದಕ್ಕಾಗಿ BJP ಪಕ್ಷದ ರಾಷ್ಟ್ರಾಧ್ಯಕ್ಷರಾಗಿದ್ದ ರಾಜ್‌ನಾಥ್ ಸಿಂಗ್‌ಅವರನ್ನು ಹಂಪ್ಟಿ ಡಂಪ್ಟಿ ಮತ್ತು ಅಲೈಸ್ ಇನ್ ಬ್ಲಂಡರ್‌ಲ್ಯಾಂಡ್ ಎಂಬ ಆಯ್ದ ಪದಗಳನ್ನು ಬಳಸಿ ಅವರ ಸ್ವೇಚ್ಛಾವರ್ತನೆ ಬಗ್ಗೆ ಟೀಕಿಸಿದರು.[೭]
ವೈಯಕ್ತಿಕ ಜೀವನ
ಬದಲಾಯಿಸಿಅರುಣ್ ಶೌರಿ ಅನಿತಾ ಶೌರಿಯವರನ್ನು ಮದುವೆಯಾದರು. ಅವರಿಗೆ ಒಬ್ಬ ಪುತ್ರನಿದ್ದಾನೆ.
ಪ್ರಕಟಣೆಗಳು
ಬದಲಾಯಿಸಿತಮ್ಮ ಬರಹಗಳಿಂದಾಗಿ ದೇಶಾದ್ಯಂತ ಅವರಿಗೆ ಗಣನೀಯ ಅನುಯಾಯಿಗಳಿದ್ದರು. ಹಾಗೆಯೇ ಅವರಿಗೆ ದೇಶ-ವಿದೇಶದ ಗೌರವಗಳು ಲಭಿಸಿದವು. ಅವುಗಳಲ್ಲಿ ಪದ್ಮ ಭೂಷಣ, ಮ್ಯಾಗ್ಸೆಸೆ ಪ್ರಶಸ್ತಿ, ದಾದಾಭಾಯಿ ನವರೋಜಿ ಪ್ರಶಸ್ತಿ, ಆಸ್ಟರ್ ಪ್ರಶಸ್ತಿ, K.S. ಹೆಗ್ಡೆ ಪ್ರಶಸ್ತಿ, ವರ್ಷದ ಅಂತಾರಾಷ್ಟ್ರೀಯ ಸಂಪಾದಕ ಪ್ರಶಸ್ತಿ ಮತ್ತು ದಿ ಫ್ರಿಡಮ್ ಟು ಪಬ್ಲಿಶ್ ಅವಾರ್ಡ್ ಪ್ರಮುಖವಾದವು.[ಸೂಕ್ತ ಉಲ್ಲೇಖನ ಬೇಕು]
- ಶೌರಿ ತಮ್ಮ ಪುಸ್ತಕ ವರ್ಶಿಪ್ಪಿಂಗ್ ಫಾಲ್ಸ್ ಗಾಡ್ಸ್ ನಲ್ಲಿ ದಲಿತರ ನಾಯಕ B.R. ಅಂಬೇಡ್ಕರ್ ಬ್ರಿಟಿಷರೊಂದಿಗೆ ಶಾಮೀಲಾಗಿದ್ದರೆಂದು ಆರೋಪಿಸಿದರಲ್ಲದೇ ಅಧಿಕಾರ ಮತ್ತು ಸಂಪತ್ತಿನ ಆಸೆಗಾಗಿ ಅವರನ್ನು ಟೀಕಿಸಿದರು.
- ಶೌರಿ ತಮ್ಮ ಪುಸ್ತಕ ಎ ಸೆಕ್ಯುಲರ್ ಎಜೆಂಡಾ ದಲ್ಲಿ (1997, ISBN 81-900199-3-7) ಭಾರತೀಯ ರಾಜಕಾರಣಿಗಳು ಆಚರಿಸುವ ಅಲ್ಪ ಸಂಖ್ಯಾತರ ಓಲೈಕೆ ಮತ್ತು ನಕಲಿ-ಜಾತ್ಯತೀತತೆ ಕಾರಣದಿಂದಾಗಿ ಎದುರಿಸುವ ಹಲವು ಸಮಸ್ಯೆಗಳನ್ನು ಚರ್ಚಿಸಿದ್ದಾರೆ.[೮] ಪುಸ್ತಕದ ಮೊದಲ ಪುಟಗಳು ರಾಷ್ಟ್ರದ ಬಗ್ಗೆ ವ್ಯಾಖ್ಯಾನದ ಉಪನ್ಯಾಸದಿಂದ ಆರಂಭವಾಗುತ್ತದೆ. ಭಾರತವು ವಿವಿಧ ಭಾಷೆ ಮತ್ತು ಧರ್ಮಗಳನ್ನು ಹೊಂದಿರುವುದರಿಂದ, ಒಂದು ರಾಷ್ಟ್ರವಾಗಿ ಪರಿಗಣಿಸದಿರುವ ಜನರ ವಾದಗಳಿಗೆ ಪ್ರತಿಯಾಗಿ ಅವರು ಯುರೋಪ್‌ನ ಇತರ ರಾಷ್ಟ್ರಗಳನ್ನು ಉದಾಹರಣೆಯಾಗಿ ನೀಡುತ್ತಾರೆ. ಅವರು ಏಕರೂಪದ ಪೌರ ನೀತಿ[೮] ಗಾಗಿ ಮತ್ತು ಭಾರತ ಸಂವಿಧಾನದ ವಿಧಿ 370ದ ರದ್ದತಿಗಾಗಿ ತಮ್ಮ ಪುಸ್ತಕದಲ್ಲಿ ವಾದ ಮಂಡಿಸಿದ್ದಾರೆ. ಅಲ್ಲದೇಬಾಂಗ್ಲಾದೇಶದಿಂದ ಅಕ್ರಮ ಒಳನುಸುಳುವಿಕೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಅವುಗಳನ್ನು ಪರಿಹರಿಸಲು ಭಾರತ ಸರಕಾರದ ಅಸಮರ್ಥತೆಯ ಬಗ್ಗೆ ಚರ್ಚಿಸಿದ್ದಾರೆ.
- ಎಮಿನೆಂಟ್ ಹಿಸ್ಟೋರಿಯನ್ಸ್: ದೇರ್ ಟೆಕ್ನಾಲಜಿ, ದೇರ್ ಲೈನ್, ದೇರ್ ಫ್ರಾಡ್ ನಲ್ಲಿ (1998, ISBN 81-900199-8-8) ಭಾರತದ ರಾಜಕೀಯದಲ್ಲಿ NCERT ವಿವಾದ ಮತ್ತು ಮಾರ್ಕ್ಸ್‌ವಾದಿ ಇತಿಹಾಸ ಲೇಖನಗಳನ್ನು ಕುರಿತು ದಾಳಿ ಮಾಡಿದ್ದಾರೆ. ಇತಿಹಾಸ ಸಂಶೋಧನೆಯ ಭಾರತೀಯ ಮಂಡಳಿ(ICHR), ಶಿಕ್ಷಣಾ ಸಂಶೋಧನಾ ತರಬೇತಿಯ ರಾಷ್ಟ್ರೀಯ ಮಂಡಳಿ(NCERT)ಮುಂತಾದ ಪ್ರಮುಖ ಸಂಸ್ಥೆಗಳು, ಶೈಕ್ಷಣಿಕ ಮತ್ತು ಮಾಧ್ಯಮದ ಬಹುಭಾಗವನ್ನು ಮಾರ್ಕ್ಸ್‌ವಾದಿ ಇತಿಹಾಸತಜ್ಞರು ನಿಯಂತ್ರಿಸಿದರು ಹಾಗೂ ದುರ್ಬಳಕೆ ಮಾಡಿದರು ಎಂದು ಅರುಣ್ ಶೌರಿ ಪ್ರತಿಪಾದಿಸಿದರು. ಅವರು ರೋಮಿಲಾ ತಾಪರ್ ಮತ್ತು ಇರ್ಫಾನ್ ಹಬೀಬ್‌ರಂತಹ ಪ್ರಸಿದ್ಧ ಇತಿಹಾಸತಜ್ಞರನ್ನು ಟೀಕಿಸಿದ್ದಾರೆ. ಮಾರ್ಕ್ಸ್‌ವಾದಿ ಇತಿಹಾಸತಜ್ಞರು ಘಜನಿ ಮಹಮದ್ ಮತ್ತು ಔರಂಗಜೇಬ್‌ನಂತಹ ದೊರೆಗಳ ದಾಖಲೆಗಳನ್ನು ಅಳಿಸಿಹಾಕಿದ್ದಾರೆ ಎಂದು ಶೌರಿ ಆಪಾದಿಸಿದ್ದಾರೆ. ಪಠ್ಯಪುಸ್ತಕಗಳಲ್ಲಿ ಕಾರ್ಲ್ ಮಾರ್ಕ್ಸ್ ಮತ್ತು ಸ್ಟಾಲಿನ್‌ರಂತಹ ಪ್ರಸಿದ್ಧ ವಿದೇಶಿ ವ್ಯಕ್ತಿಗಳ ಕುರಿತು ಎಷ್ಟು ಪಠ್ಯಪುಸ್ತಕಗಳು ವಿವರವಾಗಿ ಬರೆದಿವೆಯೆಂದು ಉದಾಹರಣೆಗಳನ್ನು ನೀಡುವ ಮೂಲಕ ಶೌರಿ ತಮ್ಮ ವಾದಕ್ಕೆ ಪುಷ್ಟಿನೀಡಿದರು.ಭಾರತದ ಪ್ರಸಿದ್ಧ ವ್ಯಕ್ತಿಗಳನ್ನು ಕುರಿತು ಅಥವಾ ಭಾರತದ ರಾಜ್ಯಗಳನ್ನು ಕುರಿತು ಆಗಾಗ್ಗೆ ಸಂಕ್ಷಿಪ್ತವಾಗಿ ಪ್ರಸ್ತಾಪಿಸಲಾಗಿದೆಯೆಂದು ಅವರು ಹೇಳಿದ್ದಾರೆ. ಇವುಗಳು ರಷ್ಯಾದ ಮಾರ್ಕ್ಸ್‌ವಾದಿ ಪಠ್ಯ ಪುಸ್ತಕಗಳಿಗೆ ಹೋಲಿಸಿದರೆ ವೈರುದ್ಧ್ಯದಿಂದ ಕೂಡಿದೆ ಎಂದು ಶೌರಿ ಬರೆದಿದ್ದಾರೆ. ಭಾರತೀಯ ಮಾರ್ಕ್ಸ್‌ವಾದಿಗಳು ಬರೆದ ಇತಿಹಾಸ ಪುಸ್ತಕಗಳಿಗಿಂತ ಸೋವಿಯತ್ನ "ಎ ಹಿಸ್ಟರಿ ಆಫ್ ಇಂಡಿಯಾ"ವು (1973) ಹೆಚ್ಚು ವಾಸ್ತವಿಕವಾಗಿದ್ದು, ಸತ್ಯಾಂಶಗಳಿಂದ ಕೂಡಿದೆ, ಎಂದು ಶೌರಿ ಅಭಿಪ್ರಾಯಪಟ್ಟಿದ್ದಾರೆ.
- ಫಾಲಿಂಗ್ ಒವರ್ ಬ್ಯಾಕ್ವರ್ಡ್ಸ್: ಆನ್ ಎಸ್ಸೆ ಅಗೇಸ್ಟ್ ರಿಸರ್ವೇಷನ್ ಆಂಡ್ ಅಗೇಸ್ಟ್ ಜ್ಯುಡಿಶಿಯಲ್ ಪಾಪ್ಯುಲಿಸಮ್: ಮೀಸಲಾತಿಯನ್ನು ಮೊದಲು ಏಕೆ ಪರಿಚಯಿಸಿದರು, ಭಾರತೀಯ ಸಂವಿಧಾನದಲ್ಲಿ ಅದಕ್ಕೆ ಸಂಬಂಧಿಸಿದ ವಿಭಾಗಗಳು ಮತ್ತು ಆ ನಿರ್ದಿಷ್ಟ ಪದಗಳನ್ನು ಬಳಸಿದ್ದರ ಹಿಂದಿನ ಉದ್ದೇಶ ತಿಳಿಯಲು ಶೌರಿ ಮೀಸಲಾತಿಗಳ ಇತಿಹಾಸವನ್ನು ಪರಾಮರ್ಶಿಸಿದರು. ಮೂಲ ಮೌಲ್ಯಗಳನ್ನು ಎತ್ತಿಹಿಡಿಯುವುದರಲ್ಲಿ ನ್ಯಾಯಾಂಗ ದುರ್ಬಲವಾಗಿ ಬಹಿರಂಗ ಅಪಮಾನ ಮಾಡುತ್ತಿದೆಯೆಂದು ಸ್ಪಷ್ಟಪಡಿಸಲು ಅವರು ನ್ಯಾಯಾಲಯದ ತೀರ್ಪುಗಳನ್ನು ಉದಾಹರಿಸಿದರು. ಸಂವಿಧಾನ ರಚನಕಾರರ ಮೂಲ ಆಶಯಕ್ಕೆ ಸಂಪೂರ್ಣ ವಿರುದ್ಧವಾದ ತೀರ್ಮಾನಗಳುಳ್ಳ ಕ್ರಮಾನುಗತ ನ್ಯಾಯಾಲಯದ ತೀರ್ಪುಗಳ ಮೂಲಕ ಸಂವಿಧಾನವನ್ನು ಉದಾರವಾಗಿ ವ್ಯಾಖ್ಯಾನಿಸಿರುವುದನ್ನು ಅವರು ಪರಿಶೀಲಿಸುತ್ತಾರೆ. ತಮ್ಮ ಅಭಿಪ್ರಾಯವನ್ನು ಸಮರ್ಥಿಸುವ ನಿಖರವಾದ ನಿರ್ಣಯಗಳು ಮತ್ತು ತೀರ್ಪುಗಳನ್ನು ಅವರು ಉದಾಹರಿಸಿದ್ದಾರೆ. ಬಡ್ತಿಗಳಲ್ಲಿ ಮೀಸಲಾತಿಗಳನ್ನು ಪರಿಚಯಿಸಿರುವುದು, ರೋಸ್ಟರ್ ವ್ಯವಸ್ಥೆ, 50% ಮಿತಿಗೆ ಬಂದಿರುವುದು ಮತ್ತು ತರುವಾಯ ಅದರ ಉಲ್ಲಂಘನೆ ಕುರಿತು ಅವರು ಚರ್ಚಿಸಿದ್ದಾರೆ. ನಂತರ ಮಂಡಲ ಸಮಿತಿಯ ಶಿಫಾರಸುಗಳ ಹಿಂದಿರುವ ತಾರ್ಕಿಕತೆ ಮತ್ತು ಅವುಗಳನ್ನು ಯಾವು ಆಧಾರದ ಮೇಲೆ ರಚಿಸಲಾಗಿದೆ ಎನ್ನುವುದನ್ನು ಅವರು ವಿವರಿಸುವರು. ನಂತರ ಅವರು ಆಯೋಗಗಳ ತೀರ್ಪುಗಳ ಮೂಲವನ್ನು ಪರಿಶೀಲಿಸುತ್ತಾರೆ,ಅದು 1931ರ ಜನಗಣತಿ(ಹಿಂದಿನ ಬಾರಿ ಭಾರತದಲ್ಲಿ ನಡೆದ ಜಾತಿ ಆಧಾರಿತ ಜನಗಣತಿ)ಹಾಗೂ ಜನಗಣತಿದಾರರ ಸ್ವಂತ ಹೇಳಿಕೆಗಳಿಂದ ಆರಂಭಿಸುವುದು ಸಂದೇಹಾತ್ಮಕವಾಗಿದ್ದರೂ,ವರದಿಗಳನ್ನು ನಿರಾಯಾಸವಾಗಿ ಆಯೋಗ ಹೇಗೆ ಬಳಸಿಕೊಂಡಿತು ಎನ್ನುವುದನ್ನು ತೋರಿಸಿದ್ದಾರೆ. ಪುಸ್ತಕದ ಕೊನೆಯ ಭಾಗದಲ್ಲಿ ಶೌರಿ,ಆಡಳಿತಶಾಹಿಯಲ್ಲಿ ಮತ್ತು ಇತರ ಕಡೆ ಮೀಸಲಾತಿಗಳ ಪರಿಣಾಮಗಳನ್ನು ವಿಮರ್ಶಿಸಿದ್ದಾರೆ. ಅಲ್ಲದೆ ಮೀಸಲಾತಿಯಿಂದ ಉಂಟಾದ ಅಸಂಬದ್ಧತೆ ಮತ್ತು ಶಿಕ್ಷಣಸಂಸ್ಥೆಗಳ ಮೇಲೆ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ನಿರ್ದಿಷ್ಟ ಉದಾಹರಣೆಗಳು ಮತ್ತು ಪ್ರಕರಣಗಳ ನೀಡುವ ಮೂಲಕ ಗಮನಸೆಳೆಯುತ್ತಾರೆ. ಮೀಸಲಾತಿ ಪ್ರವೃತ್ತಿಯ ಮುನ್ಸೂಚನೆಗಳ ಬಗ್ಗೆ ಭವಿಷ್ಯವನ್ನು ಅವರು ಚರ್ಚಿಸಿ,ಈ ಹಾದಿಯನ್ನು ನಿಲ್ಲಿಸದಿದ್ದರೆ ಅಶುಭ ಭವಿಷ್ಯಗಳು ಕಾದಿವೆಯೆಂದು ಹೇಳಿದ್ದಾರೆ. 'ಈ ಹಾದಿಯಲ್ಲಿ ಮೂರ್ಖತನವಲ್ಲ, ಆದರೆ ವಿನಾಶ ಸೇರಿಕೊಂಡಿದೆ' ಎಂಬ ಮೀಸಲಾತಿಯ ಕುರಿತು ನೆಹರು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಶೌರಿ ಪುಸ್ತಕವನ್ನು ಅಂತ್ಯಗೊಳಿಸಿದ್ದಾರೆ.
- ಗವರ್ನೆನ್ಸ್ ಆಂಡ್ ದಿ ಸ್ಕ್ಲೆಲೆರೊಸಿಸ್ ದ್ಯಾಟ್ ಹ್ಯಾಸ್ ಸೆಟ್ ಇನ್: ಆಡಳಿತಶಾಹಿಯಲ್ಲಿನ ಕೊಳೆತ ಸ್ಥಿತಿ ಮತ್ತು ಪ್ರತಿಯೊಂದು ಕೆಲಸವನ್ನು ಜತೆಗೂಡುವ ಅತಿಯಾದ ವಿಳಂಬದ ಬಗ್ಗೆ ಅರುಣ್ ಶೌರಿ ಚರ್ಚಿಸಿದ್ದಾರೆ. ಕಾಲಮಾನದೊಂದಿಗೆ ಹಾಗೂ ವಿವಿಧ ಚಾನೆಲ್‌ಗಳ ಮೂಲಕ ಅವುಗಳ ಚಿತ್ರವನ್ನು ವಿವಿಧ ಪ್ರಕರಣಗಳಲ್ಲಿ ಉದಾಹರಿಸಿದ್ದಾರೆ ಹಾಗೂ ವ್ಯವಸ್ಥೆಯ ಅದಕ್ಷತೆಯನ್ನು ಮನೆ ಮನೆಗೆ ತಲುಪಿಸಿದ್ದಾರೆ. ಶೌರಿ ವಾಜಪೇಯಿ ಸರಕಾರದಲ್ಲಿ ಬಂಡವಾಳ ಹಿಂದೆಗೆಯುವಿಕೆಯ ಮಂತ್ರಿಯಾಗಿ, ತಮ್ಮ ಅಧಿಕಾರಾವಧಿಯಲ್ಲಿ ನಡೆದ ಘಟನೆಗಳನ್ನು ಚರ್ಚಿಸಿದ್ದಾರೆ. ವಿವಿಧ ರಾಜ್ಯ ಸರಕಾರಗಳು, PSUಗಳು ಮತ್ತು ಇಲಾಖೆಗಳ ದಕ್ಷತೆಯ ಕೊರತೆಯನ್ನು ಸಹ ಇಲ್ಲಿ ಚರ್ಚಿಸಲಾಗಿದೆ. ಶೌರಿ ಹಳೆಯ ಶಾಸನಗಳಿಂದ ದೂರವುಳಿದು ಪ್ರಕ್ರಿಯೆಗಳನ್ನು ಸರಳಗೊಳಿಸುವ ಬಗ್ಗೆ ಸಲಹೆ ನೀಡಿದ್ದಾರೆ.
ಗ್ರಂಥಸೂಚಿ
ಬದಲಾಯಿಸಿ- ಆರ್ ವಿ ಡಿಸೀವಿಂಗ್ ಅವರ್‌ಸೆಲ್ವಸ್ ಅಗೈನ್ [೧][ಶಾಶ್ವತವಾಗಿ ಮಡಿದ ಕೊಂಡಿ]
- ವೇರ್ ವಿಲ್ ಆಲ್ ದಿಸ್ ಟೇಕ್ ಅಸ್ [೨][ಶಾಶ್ವತವಾಗಿ ಮಡಿದ ಕೊಂಡಿ]
- ದಿ ಪಾರ್ಲಿಮೆಂಟರಿ ಸಿಸ್ಟಮ್
- ಕೋರ್ಟ್ಸ್ ಆಂಡ್ ದೇಯರ್ ಜಡ್ಜ್‌ಮೆಂಟ್ಸ್: ಪ್ರೆಮಿಸಸ್, ಪ್ರೀರಿಕ್ವಿಸಿಟ್ಸ್, ಕಾನ್ಸೆಕ್ವೆಸಸ್
- ಎಮಿನೆಂಟ್ ಹಿಸ್ಟೊರಿಯನ್ಸ್: ದೇರ್ ಟೆಕ್ನಾಲಜಿ, ದೇರ್ ಲೇನ್, ದೇರ್ ಫ್ರಾಡ್
- ಫಾಲಿಂಗ್ ಒವರ್ ಬ್ಯಾಕ್ವರ್ಡ್ಸ್: ಆನ್ ಎಸ್ಸೆ ಅಗೈಸ್ಟ್ ರಿಸರ್ವೇಷನ್ಸ್ ಆಂಡ್ ಅಗೈನ್‌ಸ್ಟ್ ಜ್ಯುಡಿಶಿಯಲ್ ಪಾಪ್ಯುಲಿಸಮ್
- ಗವರ್ನೆನ್ಸ್ ಆಂಡ್ ದಿ ಸ್ಕಿರೋಸಿಸ್ ದ್ಯಾಟ್ ಹ್ಯಾಸ್ ಸೆಟ್ ಇನ್ [೩][ಶಾಶ್ವತವಾಗಿ ಮಡಿದ ಕೊಂಡಿ]
- ಹಾರ್ವೆಸ್ಟಿಂಗ್ ಅವರ್ ಸೋಲ್
- ಹಿಂದುಯಿಸಮ್: ಎಸೆನ್ಸ್ ಆಂಡ್ ಕಾನ್ಸಿಕ್ವೆನ್ಸ್
- ಇಂಡಿಯನ್ ಕಾಂಟ್ರವರ್ಸೀಸ್
- ಇಂಡಿವಿಜ್ಯುವಲ್ಸ್, ಇನ್‌ಸ್ಟಿಟ್ಯುಶನ್ಸ್, ಪ್ರೋಸೆಸಸ್ : ಹೌ ಒನ್ ಮೇ ಸ್ಟ್ರೆಂಥನ್ ದಿ ಅದರ್ ಇನ್ ಇಂಡಿಯಾ ಟುಡೇ
- ಇನ್‌ಸ್ಟಿಟ್ಯುಷನ್ಸ್ ಇನ್ ಜನತಾ ಫೇಸ್
- ಮಿಷನರಿಸ್ ಇನ್ ಇಂಡಿಯಾ [೪] Archived 2018-11-16 ವೇಬ್ಯಾಕ್ ಮೆಷಿನ್ ನಲ್ಲಿ.
- Mrs ಗಾಂಧಿ'ಸ್ ಸೆಕೆಂಡ್ ರೇನ್
- ಒನ್ಲಿ ಫಾದರ್‌ಲೆಂಡ್ : ಕಮ್ಯುನಿಸ್ಟ್ಸ್, 'ಕ್ವಿಟ್ ಇಂಡಿಯಾ,' ಆಂಡ್ ದಿ ಸೋವಿಯತ್ ಯುನಿಯನ್
- ರಿಲಿಜನ್ ಇನ್ ಪಾಲಿಟಿಕ್ಸ್
- ಎ ಸೆಕ್ಯುಲರ್ ಎಜೆಂಡಾ
- ಸಿಂಪ್ಟಮ್ಸ್ ಆಫ್ ಫೇಸಿಸಮ್
- ದೀಸ್ ಲೇಥಲ್, ಇನೆಕ್ಸೊರೇಬಲ್ ಲಾವ್ಸ್: ರಾಜೀವ್, ಹಿಸ್ ಮೆನ್ ಆಂಡ್ ಹಿಸ್ ರೆಜಿಮ್
- ದಿ ಸ್ಟೇಟ್ ಆಸ್ ಷರಾಡ್: V.P. ಸಿಂಗ್, ಚಂದ್ರ ಶೇಖರ್ ಆಂಡ್ ದಿ ರೆಸ್ಟ್
- ವಿಲ್ ದಿ ಐರಾನ್ ಫೆನ್ಸ್ ಸೇವ್ ಎ ಟ್ರೀ ಹಲೊವ್ಡ್ ಬೈ ಟರ್ಮಿಟೆಸ್?
- ವರ್ಶಿಪಿಂಗ್ ಫಾಲ್ಸ್ ಗಾಡ್ಸ್ [೫] Archived 2010-06-09 ವೇಬ್ಯಾಕ್ ಮೆಷಿನ್ ನಲ್ಲಿ. [೬]
- ದಿ ವರ್ಲ್ಡ್ ಆಫ್ ಫಥ್ವಾಸ್ [೭] Archived 2009-08-26 ವೇಬ್ಯಾಕ್ ಮೆಷಿನ್ ನಲ್ಲಿ.
ಸಹ ಲೇಖಕರಾಗಿ:
- ಸೀತಾ ರಾಮ್ ಜಿಯೊಲ್, ಹರ್ಷಾ ನಾರಾಯನ್, ಜೈ ದುಬಾಶಿ ಮತ್ತು ರಾಮ್ ಸ್ವರೂಪ್ರೊಂದಿಗೆ ಹಿಂದೂ ಟೆಂಪಲ್ಸ್ - ವಾಟ್ ಹ್ಯಾಪನ್ಡ್ ಟು ದೆಮ್ ಸಂ. I, (ಆರಂಭಿಕ ಸಮೀಕ್ಷೆ) (1990, ISBN 81-85990-49-2)
- ಸೀತಾ ರಾಮ್ ಜಿಯೊಲ್, ಕೋಯನ್ರಾಡ್ ಎಲ್ಸ್ಟ್, ರಾಮ್ ಸ್ವರೂಪ್ರೊಂದಿಗೆ ಫ್ರೀಡಮ್ ಆಫ್ ಏಕ್ಸ್ಪ್ರೆಷನ್ - ಸೆಕ್ಯುಲರ್ ಥಿಯೊಕ್ರ್ಯಾಸಿ ವರ್ಸಸ್ ಲಿಬರಲ್ ಡೆಮೊಕ್ರಸಿ , ವಾಯಿಸ್ ಆಫ್ ಇಂಡಿಯಾ (1998).
ಆಕರಗಳು
ಬದಲಾಯಿಸಿ- ↑ http://www.answers.com/topic/arun-shourie
- ↑ "ಆರ್ಕೈವ್ ನಕಲು". Archived from the original on 2010-04-24. Retrieved 2010-03-22.
- ↑ http://catalogue.nla.gov.au/Record/2612231
- ↑ "ಆರ್ಕೈವ್ ನಕಲು". Archived from the original on 2015-04-03. Retrieved 2010-03-22.
- ↑ http://offstumped.wordpress.com/2009/07/17/arun-shourie-on-bjp-final-part/
- ↑ http://en.wikipedia.org/wiki/Pratibha_Patil
- ↑ http://www.indianexpress.com/news/arun-shourie-hits-out-at-bjp-top-leadership/506470/
- ↑ ೮.೦ ೮.೧ "A Secular Agenda". Indiaclub.com. Archived from the original on 2007-09-27. Retrieved 2006-09-27.
ಹೊರಗಿನ ಕೊಂಡಿಗಳು
ಬದಲಾಯಿಸಿ- ಅರುಣ್ ಶೌರಿ ವೆಬ್ಸೈಟ್ Archived 2015-04-03 ವೇಬ್ಯಾಕ್ ಮೆಷಿನ್ ನಲ್ಲಿ.
- ಛಾಯಾಚಿತ್ರ ಮೂಲ
- ಶೌರಿಯ ಪುಸ್ತಕಗಳಿಂದ ಎತ್ತಿ ತೆಗೆದ ಭಾಗಗಳ ಚಿಕ್ಕ ಸಂಗ್ರಹ Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ.
- CNN IBNನಲ್ಲಿ ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಕರಣ್ ಥಾಪರ್ರೊಂದಿಗೆ ಸಂದರ್ಶನ Archived 2009-03-10 ವೇಬ್ಯಾಕ್ ಮೆಷಿನ್ ನಲ್ಲಿ.
- CNN IBNನಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಕರಣ್ ಥಾಪರ್ರೊಂದಿಗೆ ಸಂದರ್ಶನ Archived 2008-03-11 ವೇಬ್ಯಾಕ್ ಮೆಷಿನ್ ನಲ್ಲಿ.
- ಪತ್ರಿಕೋದ್ಯಮದಲ್ಲಿನ ಸಾಧನೆಗಾಗಿ 1982ರಲ್ಲಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಉಲ್ಲೇಖ Archived 2010-01-17 ವೇಬ್ಯಾಕ್ ಮೆಷಿನ್ ನಲ್ಲಿ.
- ಶೌರಿರೊಂದಿಗೆ ಸಂದರ್ಶನ Archived 2008-11-22 ವೇಬ್ಯಾಕ್ ಮೆಷಿನ್ ನಲ್ಲಿ.
- ಸಂದರ್ಶನಗಳು Archived 2009-09-24 ವೇಬ್ಯಾಕ್ ಮೆಷಿನ್ ನಲ್ಲಿ.
- rediff.comನಲ್ಲಿ ಸಂದರ್ಶನ
- ವಿವೇಕಾನಂದರ ಬಗ್ಗೆ ನಂಬಿಕೆಗಳು Archived 2008-08-21 ವೇಬ್ಯಾಕ್ ಮೆಷಿನ್ ನಲ್ಲಿ.
- ಜೀವನ ಚರಿತ್ರೆ Archived 2010-01-16 ವೇಬ್ಯಾಕ್ ಮೆಷಿನ್ ನಲ್ಲಿ.
- 13 ಜುಲೈ 2007ಯಲ್ಲಿ ಪ್ರತಿಭಾ ಪಾಟೀಲ್ ಅಭ್ಯರ್ಥಿಯಾಗಿದ್ದ ರಾಷ್ಟ್ರಪತಿ ಚುನಾವಣೆಗೆ ಮುಂಚೆ ಅವರನ್ನು ಕುರಿತು ಅರುಣ್ ಶೌರಿಯವರ ಧ್ವನಿಮುದ್ರಿಕೆ
- 1 ಡಿಸೆಂಬರ್ 2008ರಲ್ಲಿ ಮುಂಬಯಿ ಭಯೋತ್ಪಾದಕರ ದಾಳಿಗಳ ಕುರಿತು ಅರುಣ್ ಶೌರಿಯವರ ಧ್ವನಿಮುದ್ರಿಕೆ