ಅರಾಕ್ನೋಫೋಬಿಯಾ ಎಂಬುದು ಜೇಡ, ಚೇಳು ಮತ್ತು ಉಣ್ಣಿಗಳಂತಹ ಇತರ ಅರಾಕ್ನಿಡ್‌ಗಳ ಭಯವಾಗಿದೆ. ಅರಾಕ್ನೋಫೋಬಿಯಾ ಎಂಬ ಪದವು ಗ್ರೀಕ್ ಪದಗಳಾದ ಅರಾಕ್ನೆ ಮತ್ತು ಫೋಬಿಯಾದಿಂದ ಬಂದಿದೆ.[]

ಅರಾಕ್ನೋಫೋಬಿಯಾ
ಸಮಾನಾರ್ಥಕ ಹೆಸರು/ಗಳುಅರಾಚ್ನೆಫೋಬಿಯಾ[]
ಅರಾಕ್ನಿಡ್‌ಗಳು ನಿರುಪದ್ರವಿಯಾಗಿದ್ದರೂ, ಅರಾಕ್ನೋಫೋಬಿಯಾ ರೋಗವನ್ನು ಹೊಂದಿರುವ ವ್ಯಕ್ತಿಯು ಇನ್ನೂ ಭಯಭೀತರಾಗಬಹುದು ಅಥವಾ ಇನ್ನೊಬ್ಬರ ಸುತ್ತಲೂ ಆತಂಕವನ್ನು ಸೃಷ್ಟಿಸಬಹುದು. ಕೆಲವೊಮ್ಮೆ, ಜೇಡವನ್ನು ಹೋಲುವ ವಸ್ತುವು ಸಹ ಅರಾಕ್ನೋಫೋಬಿಕ್ ವ್ಯಕ್ತಿಯಲ್ಲಿ ಪ್ಯಾನಿಕ್ ದಾಳಿಯನ್ನು ಪ್ರಚೋದಿಸುತ್ತದೆ. ಮೇಲಿನ ವ್ಯಂಗ್ಯಚಿತ್ರವು ನರ್ಸರಿ ಪ್ರಾಸವಾದ "ಲಿಟಲ್ ಮಿಸ್ ಮಫೆಟ್" ನ ಚಿತ್ರಣವಾಗಿದೆ. ಇದರಲ್ಲಿನ ಶೀರ್ಷಿಕೆ ಪಾತ್ರವು ಜೇಡದಿಂದ ಭಯಭೀತವಾದ ದೃಶ್ಯವಾಗಿದೆ.
ಉಚ್ಚಾರ
ವೈದ್ಯಕೀಯ ವಿಭಾಗಗಳುಮನೋವೈದ್ಯಶಾಸ್ತ್ರ
ಚಿಕಿತ್ಸೆಎಕ್ಸ್ ಪೋಷರ್ ಥೆರಪಿ

ರೋಗದ ಸೂಚನೆ ಹಾಗೂ ಲಕ್ಷಣಗಳು

ಬದಲಾಯಿಸಿ

ಅರಾಕ್ನೋಫೋಬಿಯಾ ಹೊಂದಿರುವ ಜನರು ಜೇಡಗಳ ಆಶ್ರಯತಾಣಗಳು ಅಥವಾ ಅವುಗಳ ಬಲೆಯಲ್ಲಿ ಉಪಸ್ಥಿತಿಯ ಗೋಚರ ಚಿಹ್ನೆಗಳನ್ನು ಕಂಡಾಗ ಆತಂಕವನ್ನು ಅನುಭವಿಸುತ್ತಾರೆ. ಅರಾಕ್ನೋಫೋಬಿಯಾ ಹೊಂದಿರುವ ಜನರು ಜೇಡವನ್ನು ನೋಡಿದರೆ, ಅವುಗಳ ಭಯಕ್ಕೆ ಸಂಬಂಧಿಸಿದ ಪ್ಯಾನಿಕ್ ದಾಳಿಯನ್ನು ಜಯಿಸುವವರೆಗೆ ಅವರು ಸಾಮಾನ್ಯ ಸುತ್ತಮುತ್ತಲಿನ ಪ್ರದೇಶವನ್ನು ಪ್ರವೇಶಿಸುವುದಿಲ್ಲ. ಕೆಲವು ಜನರು ಕಿರುಚುವುದು, ಅಳುವುದು, ಭಾವನಾತ್ಮಕ ಪ್ರಕೋಪಗಳನ್ನು ಹೊರಹಾಕುವುದು, ಉಸಿರಾಟದ ತೊಂದರೆ, ಬೆವರುವಿಕೆಯನ್ನು ಅನುಭವಿಸುತ್ತಾರೆ. ಜೇಡಗಳು ಅಥವಾ ಅವುಗಳ ಜಾಲಗಳ ಹತ್ತಿರದ ಪ್ರದೇಶಕ್ಕೆ ಸಂಪರ್ಕಕ್ಕೆ ಬಂದಾಗ ಜೋರಾದ ಹೃದಯ ಬಡಿತವನ್ನು ಅನುಭವಿಸುತ್ತಾರೆ. ಇನ್ನೂ ವಿಪರೀತ ಸಂದರ್ಭಗಳಲ್ಲಿ, ಜೇಡದ ಚಿತ್ರಗಳು, ಆಟಿಕೆ ಅಥವಾ ವಾಸ್ತವಿಕ ರೇಖಾಚಿತ್ರವು ಕಂಡಾಗ ತೀವ್ರವಾದ ಭಯವನ್ನು ಪ್ರಚೋದಿಸುತ್ತಾರೆ.

ಕಾರಣಗಳು

ಬದಲಾಯಿಸಿ

ಅರಾಕ್ನೋಫೋಬಿಯಾವು ಸಹಜ ಪ್ರತಿಕ್ರಿಯೆಯ ಉತ್ಪ್ರೇಕ್ಷಿತ ರೂಪವಾಗಿದೆ. ಇದು ಆರಂಭಿಕ ಮಾನವರು ಬದುಕಲು ಸಹಾಯ ಮಾಡಿತು ಹಾಗೂ ಪ್ರಧಾನವಾಗಿ ಯುರೋಪಿಯನ್ ಸಮಾಜಗಳಲ್ಲಿ ಹೆಚ್ಚು ಸಾಮಾನ್ಯವಾಗಿರುವ ಸಾಂಸ್ಕೃತಿಕ ವಿದ್ಯಮಾನವಾಗಿದೆ.[]

ಅರಾಕ್ನೋಫೋಬಿಯಾದ ಭಯಕ್ಕೆ ವಿಕಸನೀಯ ಕಾರಣವು ಬಗೆಹರಿಯದೆ ಉಳಿದಿದೆ. ವಿಕಸನೀಯ ಮನೋವಿಜ್ಞಾನದಲ್ಲಿ ಒಂದು ದೃಷ್ಟಿಕೋನವೆಂದರೆ, ವಿಷಕಾರಿ ಜೇಡಗಳ ಉಪಸ್ಥಿತಿಯು ಜೇಡಗಳ ಭಯದ ವಿಕಸನಕ್ಕೆ ಕಾರಣವಾಯಿತು.[] ಈ ಗುಣಲಕ್ಷಣಗಳಂತೆ, ಜೇಡಗಳ ಭಯದ ತೀವ್ರತೆಯಲ್ಲಿ ವ್ಯತ್ಯಾಸವಿದೆ ಮತ್ತು ಹೆಚ್ಚು ತೀವ್ರವಾದ ಭಯವನ್ನು ಹೊಂದಿರುವವರನ್ನು ಫೋಬಿಕ್ ಎಂದು ವರ್ಗೀಕರಿಸಲಾಗಿದೆ. ತುಲನಾತ್ಮಕವಾಗಿ ಚಿಕ್ಕದಾದ ಗಾತ್ರವನ್ನು ಹೊಂದಿರುವ ಜೇಡಗಳು ಬೆದರಿಕೆಯ ಸಾಮಾನ್ಯ ಮಾನದಂಡಕ್ಕೆ ಸರಿಹೊಂದುವುದಿಲ್ಲ. ಆದರೆ, ಅವು ವೈದ್ಯಕೀಯವಾಗಿ ಗಮನಾರ್ಹವಾದ ವಿಷವನ್ನು ಹೊಂದಿದೆ ಮತ್ತು ಅವುಗಳ ಸೆಟೇಯೊಂದಿಗೆ ಚರ್ಮದ ಕಿರಿಕಿರಿಯನ್ನು ಉಂಟುಮಾಡಬಹುದು..[] ಆದಾಗ್ಯೂ, ಇದರ ಭಯವು ತರ್ಕಬದ್ಧ ಭಯಕ್ಕೆ ವಿರುದ್ಧವಾಗಿ ತರ್ಕಬದ್ಧವಲ್ಲದ ಭಯವಾಗಿದೆ.

ತಮ್ಮ ಸುತ್ತಮುತ್ತಲಿನ ಪ್ರದೇಶವು ಜೇಡಗಳಿಂದ ಮುಕ್ತವಾಗಿದೆ ಎಂದು ಖಚಿತಪಡಿಸಿಕೊಳ್ಳುವ ಮೂಲಕ, ಅರಾಕ್ನೋಫೋಬ್‌ಗಳು ಪೂರ್ವಜರ ಪರಿಸರದಲ್ಲಿ ಕಚ್ಚುವ ಅಪಾಯವನ್ನು ಕಡಿಮೆ ಮಾಡಬಹುದಾಗಿತ್ತು.[] ಇದು ಬದುಕುಳಿಯುವಿಕೆಯ ವಿಷಯದಲ್ಲಿ ಅರಾಕ್ನೋಫೋಬ್‌ಗಳಲ್ಲದವರಿಗಿಂತ ಸ್ವಲ್ಪ ಪ್ರಯೋಜನವನ್ನು ನೀಡುತ್ತದೆ. ಆದಾಗ್ಯೂ, ಜೇಡಗಳ ಬಗ್ಗೆ ಅಸಮಂಜಸವಾದ ಭಯವಿದೆ. ಹೋಮೋ ಸೇಪಿಯನ್ಸ್‌ನ ಪರಿಸರದ ವಿಕಸನೀಯ ಹೊಂದಾಣಿಕೆಯ ಸಮಯದಲ್ಲಿ ಇರುವ ಇತರ ಸಂಭಾವ್ಯ ಅಪಾಯಕಾರಿ ಜೀವಿಗಳಿಗೆ ಹೋಲಿಸಿದರೆ ನ್ಯೂನತೆಗಳನ್ನು ಹೊಂದಿದೆ.

ದಿ ಹ್ಯಾಂಡ್‌ಬುಕ್ ಆಫ್ ದಿ ಎಮೋಷನ್ಸ್ (೧೯೯೩) ನಲ್ಲಿ, ಮನಶ್ಶಾಸ್ತ್ರಜ್ಞರಾದ ಅರ್ನೆ ಓಹ್ಮನ್ ಅವರು ವಿಕಸನೀಯವಾಗಿ-ಸಂಬಂಧಿತ ಭಯ-ಪ್ರತಿಕ್ರಿಯೆ, ತಟಸ್ಥ ಪ್ರಚೋದಕಗಳೊಂದಿಗೆ (ಹಾವುಗಳು ಮತ್ತು ಜೇಡಗಳು) ಹಾಗೂ ವಿಕಸನೀಯವಾಗಿ-ಅಪ್ರಸ್ತುತ, ಭಯ-ಪ್ರತಿಕ್ರಿಯೆಯ ತಟಸ್ಥ ಪ್ರಚೋದಕಗಳೊಂದಿಗೆ ಪ್ರಚೋದನೆಯನ್ನು ಜೋಡಿಸುವ ಅಧ್ಯಯನ ಮಾಡಿದರು.[] ಮಾನವನ ವಿಷಯಗಳ ಮೇಲೆ ಭಯ-ಪ್ರತಿಕ್ರಿಯೆ, ತಟಸ್ಥ ಪ್ರಚೋದನೆಗಳು (ಅಣಬೆಗಳು, ಹೂವುಗಳು, ಪಾಲಿಹೆಡ್ರಾ, ಬಂದೂಕುಗಳು ಮತ್ತು ವಿದ್ಯುತ್ ಕೇಂದ್ರಗಳ ಭೌತಿಕ ಪ್ರಾತಿನಿಧ್ಯ) ಮತ್ತು ಒಫಿಡಿಯೋಫೋಬಿಯಾ (ಹಾವುಗಳ ಭಯ) ಮತ್ತು ಅರಾಕ್ನೋಫೋಬಿಯಾವು ನಿಯಮಾಧೀನ ಪ್ರತಿಕ್ರಿಯೆಯನ್ನು ಅಭಿವೃದ್ಧಿಪಡಿಸಲು ಕೇವಲ ಒಂದು ಜೋಡಿಯ ಅಗತ್ಯವಿದೆ ಎಂದು ಅಧ್ಯಯನ ತಿಳಿಸಿದೆ.[] ಆದರೆ, ಮೈಕೋಫೋಬಿಯಾ, ಆಂಥೋಫೋಬಿಯಾ, ಪಾಲಿಹೆಡ್ರಾ, ಬಂದೂಕುಗಳು ಮತ್ತು ವಿದ್ಯುತ್ ಮಳಿಗೆಗಳ ಭೌತಿಕ ಪ್ರಾತಿನಿಧ್ಯದ ಫೋಬಿಯಾಗಳ ಬಹು ಜೋಡಿಗಳ ಅಗತ್ಯವಿತ್ತು ಮತ್ತು ನಿಯಮಾಧೀನ ಒಫಿಡಿಯೋಫೋಬಿಯಾ ಮತ್ತು ಅರಾಕ್ನೋಫೋಬಿಯಾ ಶಾಶ್ವತವಾಗಿದ್ದಾಗ ನಿರಂತರ ಷರತ್ತುಗಳು ಇಲ್ಲದೆ ಅಳಿವಿನಂಚಿಗೆ ಹೋಯಿತು.

ಮನೋವೈದ್ಯರಾದ ರಾಂಡೋಲ್ಫ್ ಎಂ. ನೆಸ್ಸೆ ಹೇಳುವಂತೆ, ವಿದ್ಯುತ್ ಔಟ್ ಲೆಟ್‌ಗಳಂತಹ ವಿಕಸನಾತ್ಮಕವಾಗಿ ನವೀನ ಅಪಾಯಕಾರಿ ವಸ್ತುಗಳಿಗೆ ನಿಯಂತ್ರಿತ ಭಯದ ಪ್ರತಿಕ್ರಿಯೆಗಳ ಷರತ್ತುಗಳು ನಿಧಾನವಾಗಿದೆ.[] ಏಕೆಂದರೆ, ಅಂತಹ ಸೂಚನೆಗಳು ಭಯಕ್ಕೆ ಯಾವುದೇ ಪೂರ್ವನಿರ್ಧರಿತ ಸಂಪರ್ಕವನ್ನು ಹೊಂದಿರುವುದಿಲ್ಲ. ಒಬ್ಬ ಚಾಲಕನ ಶಿಕ್ಷಣದಲ್ಲಿ ವೇಗ ಮತ್ತು ಕುಡಿದು ವಾಹನ ಚಲಾಯಿಸುವ ಅಪಾಯಗಳಿಗೆ ಒತ್ತು ನೀಡಿದ್ದರೂ, ಸಂಚಾರ ಘರ್ಷಣೆಗಳ ವಿರುದ್ಧ ವಿಶ್ವಾಸಾರ್ಹ ರಕ್ಷಣೆಯನ್ನು ಒದಗಿಸುವುದಿಲ್ಲ ಮತ್ತು ೨೦೧೪ ರಂದು, ಯುನೈಟೆಡ್ ಸ್ಟೇಟ್ಸ್‌ನಲ್ಲಿ ೧೫ ರಿಂದ ೨೪ ವರ್ಷ ವಯಸ್ಸಿನಲ್ಲಿ ನಡೆದ ಎಲ್ಲಾ ಅಪಘಾತ ಸಾವುಗಳು ಕಾಲು ಭಾಗದಷ್ಟು ಸಂಚಾರ ಘರ್ಷಣೆಗಳಲ್ಲಿ ಸಂಭವಿಸಿವೆ.[೧೦] ಮನೋವೈದ್ಯರುಗಳಾದ ರಾಂಡೋಲ್ಫ್ ಎಂ. ನೆಸ್ಸೆ, ಐಸಾಕ್ ಮಾರ್ಕ್ಸ್, ಮತ್ತು ವಿಕಸನೀಯ ಜೀವಶಾಸ್ತ್ರಜ್ಞರಾದ ಜಾರ್ಜ್ ಸಿ. ವಿಲಿಯಮ್ಸ್ ಅವರು ವಿವಿಧ ಹೊಂದಾಣಿಕೆಯ ಭಯಗಳಿಗೆ ಪ್ರತಿಕ್ರಿಯೆಗಳನ್ನು ಹೊಂದಿರುವ ಜನರನ್ನು ಗಮನಿಸಿದ್ದಾರೆ (ಉದಾ. ಅರಾಕ್ನೋಫೋಬಿಯಾ, ಒಫಿಡಿಯೋಫೋಬಿಯಾ, ಬಾಸೊಫೋಬಿಯಾ).[೧೧] ಹೆಚ್ಚು ಮನೋಧರ್ಮದ ಅಜಾಗರೂಕತೆ ಮತ್ತು ಮಾರಣಾಂತಿಕವಾದ ಉದ್ದೇಶಪೂರ್ವಕವಲ್ಲದ ಗಾಯಗೊಳ್ಳುವ ಸಾಧ್ಯತೆ ಹೆಚ್ಚು ಮತ್ತು ಅಂತಹ ಕೊರತೆಯ ಫೋಬಿಯಾವನ್ನು ಅದರ ಸ್ವಾರ್ಥಿ ಆನುವಂಶಿಕ ಪರಿಣಾಮಗಳಿಂದಾಗಿ "ಹೈಪೋಫೋಬಿಯಾ" ಎಂದು ವರ್ಗೀಕರಿಸಬೇಕು ಎಂದು ಪ್ರಸ್ತಾಪಿಸಿದ್ದಾರೆ.[೧೨]

೨೦೦೧ ರ ಅಧ್ಯಯನವು ಜನರು ಜೇಡಗಳ ಚಿತ್ರಗಳ ನಡುವೆ ಹೂವುಗಳು ಅಥವಾ ಅಣಬೆಗಳ ಚಿತ್ರಗಳನ್ನು ಕಂಡುಹಿಡಿಯುವುದಕ್ಕಿಂತ, ವೇಗವಾಗಿ ಹೂವುಗಳು ಮತ್ತು ಅಣಬೆಗಳ ಚಿತ್ರಗಳಲ್ಲಿ ಜೇಡಗಳ ಚಿತ್ರಗಳನ್ನು ಕಂಡುಹಿಡಿಯಬಹುದು ಎಂದು ಕಂಡುಹಿಡಿದಿದೆ.[೧೩] ಜೇಡಗಳಿಗೆ ವೇಗದ ಪ್ರತಿಕ್ರಿಯೆಯು ಮಾನವ ವಿಕಾಸಕ್ಕೆ ಹೆಚ್ಚು ಪ್ರಸ್ತುತವಾಗಿದೆ ಎಂದು ಸಂಶೋಧಕರು ಸೂಚಿಸಿದ್ದಾರೆ.

ಸಾಂಸ್ಕೃತಿಕ

ಬದಲಾಯಿಸಿ

ಒಂದು ಪರ್ಯಾಯ ದೃಷ್ಟಿಕೋನವೆಂದರೆ, ಜೇಡಗಳಿಂದ ಉಂಟಾಗುವ ಅಪಾಯಗಳು ಹೆಚ್ಚುತ್ತಿವೆ ಮತ್ತು ವಿಕಾಸದ ಮೇಲೆ ಪ್ರಭಾವ ಬೀರುತ್ತಿವೆ.[೧೪] ಆನುವಂಶಿಕ ಭಯಗಳು ಬದುಕುಳಿಯುವಿಕೆಯ ಮೇಲೆ ನಿರ್ಬಂಧಿತ ಮತ್ತು ದುರ್ಬಲಗೊಳಿಸುವ ಪರಿಣಾಮಗಳನ್ನು ಬೀರುತ್ತವೆ. ಪಪುವಾ ನ್ಯೂ ಗಿನಿಯಾ ಮತ್ತು ಕಾಂಬೋಡಿಯಾದಂತಹ ಕೆಲವು ಸಮುದಾಯಗಳು, ಜೇಡಗಳನ್ನು ಸಾಂಪ್ರದಾಯಿಕ ಆಹಾರವಾಗಿ ಸೇವಿಸುತ್ತಾರೆ. ಅರಾಕ್ನೋಫೋಬಿಯಾವು, ಆನುವಂಶಿಕ ಗುಣಲಕ್ಷಣಕ್ಕಿಂತ ಹೆಚ್ಚು ಪರಿಣಾಮವಾಗಿದೆ ಎಂದು ಇದು ಸೂಚಿಸುತ್ತದೆ.

ಮಾಧ್ಯಮಗಳಲ್ಲಿನ ಜೇಡಗಳ ಬಗೆಗಿನ ಕಥೆಗಳು ಹೆಚ್ಚಾಗಿ ದೋಷಗಳನ್ನು ಹೊಂದಿರುತ್ತವೆ ಮತ್ತು ಸಂವೇದನಾಶೀಲ ಶಬ್ದಕೋಶವನ್ನು ಬಳಸುತ್ತವೆ. ಇದು ಜೇಡಗಳ ಭಯಕ್ಕೆ ಕಾರಣವಾಗಬಹುದು.[೧೫]

ಚಿಕಿತ್ಸೆಗಳು

ಬದಲಾಯಿಸಿ

ಜೇಡಗಳ ಭಯವನ್ನು ನಿರ್ದಿಷ್ಟ ಭಯಗಳಿಗೆ ಸೂಚಿಸಲಾದ ಯಾವುದೇ ಸಾಮಾನ್ಯ ತಂತ್ರಗಳಿಂದ ಚಿಕಿತ್ಸೆ ನೀಡಬಹುದು. ಚಿಕಿತ್ಸೆಯ ಮೊದಲ ವ್ಯವಸ್ಥಿತ ಡಿಸೆನ್ಸಿಟೈಸೇಶನ್ ಮಾಡುತ್ತಾರೆ. ಇದನ್ನು ಎಕ್ಸ್ಪೋಷರ್ ಥೆರಪಿ ಎಂದೂ ಕರೆಯಲಾಗುತ್ತದೆ.[೧೬] ವ್ಯವಸ್ಥಿತ ಡಿಸೆನ್ಸಿಟೈಸೇಶನ್‌ನಲ್ಲಿ ತೊಡಗುವ ಮೊದಲು, ಅರಾಕ್ನೋಫೋಬಿಯಾ ಹೊಂದಿರುವ ವ್ಯಕ್ತಿಗೆ ವಿಶ್ರಾಂತಿ ತಂತ್ರಗಳಲ್ಲಿ ತರಬೇತಿ ನೀಡುವುದು ಸಾಮಾನ್ಯವಾಗಿದೆ. ಇದು ರೋಗಿಯನ್ನು ಶಾಂತವಾಗಿಡಲು ಸಹಾಯ ಮಾಡುತ್ತದೆ. ವಿವೋದಲ್ಲಿ (ಜೀವಂತ ಜೇಡಗಳೊಂದಿಗೆ) ಅಥವಾ ಜೇಡಗಳನ್ನು ಒಳಗೊಂಡಿರುವ ಸಂದರ್ಭಗಳನ್ನು ಕಲ್ಪಿಸಿಕೊಳ್ಳುವಂತೆ ಮಾಡುವ ಮೂಲಕ, ನಂತರ ಪೀಡಿತ ವ್ಯಕ್ತಿಗೆ ಜೇಡಗಳೊಂದಿಗೆ ಸಂವಹನವನ್ನು ಮಾಡೆಲಿಂಗ್ ಮಾಡುವ ಮೂಲಕ ಮತ್ತು ಅಂತಿಮವಾಗಿ ನಿಜವಾದ ಜೇಡಗಳೊಂದಿಗೆ ಸಂವಹನ ನಡೆಸುವ ಮೂಲಕ ವ್ಯವಸ್ಥಿತ ಡಿಸೆನ್ಸಿಟೈಸೇಶನ್ ಮಾಡುತ್ತಾರೆ.[೧೭] ಈ ತಂತ್ರವು ಕೇವಲ ಒಂದು ಸೆಷನ್‌ನಲ್ಲಿ ಪರಿಣಾಮಕಾರಿಯಾಗಿರಬಹುದು. ಆದರೂ, ಇದು ಸಾಮಾನ್ಯವಾಗಿ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ತಂತ್ರಜ್ಞಾನದಲ್ಲಿನ ಇತ್ತೀಚಿನ ಪ್ರಗತಿಗಳು ಚಿಕಿತ್ಸೆಯಲ್ಲಿ ಬಳಸುವ ವರ್ಚುವಲ್ ಅಥವಾ ವರ್ಧಿತ ರಿಯಾಲಿಟಿ ಜೇಡಗಳ ಬಳಕೆಯನ್ನು ಶಕ್ತಗೊಳಿಸಿವೆ.[೧೮] ಈ ತಂತ್ರಗಳು ತುಂಬಾ ಪರಿಣಾಮಕಾರಿ ಎಂದು ಸಾಬೀತಾಗಿದೆ. ಸ್ಪೈಡರ್ ಮ್ಯಾನ್ ಚಲನಚಿತ್ರಗಳ ಕಿರು ತುಣುಕುಗಳಿಗೆ ಒಡ್ಡಿಕೊಳ್ಳುವುದು ವ್ಯಕ್ತಿಯ ಅರಾಕ್ನೋಫೋಬಿಯಾವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸೂಚಿಸಲಾಗಿದೆ.[೧೯]

ಸಾಂಕ್ರಾಮಿಕ ರೋಗಶಾಸ್ತ್ರ

ಬದಲಾಯಿಸಿ

ಅರಾಕ್ನೋಫೋಬಿಯಾ ಜಾಗತಿಕ ಜನಸಂಖ್ಯೆಯ ೩.೫ ರಿಂದ ೬.೧ ಪ್ರತಿಶತದಷ್ಟು ಪರಿಣಾಮ ಬೀರುತ್ತದೆ.[೨೦]

ಇದನ್ನೂ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Patricia Bowen (ed.), Internal Medicine Words, Rayve Productions, 1997, p. 18.
  2. Friedenberg, J.; Silverman, G. (2005). Cognitive Science: An Introduction to the Study of Mind. SAGE. pp. 244–245. ISBN 1-4129-2568-1. Retrieved 2008-10-11.
  3. Davey, G.C.L. (1994). "The "Disgusting" Spider: The Role of Disease and Illness in the Perpetuation of Fear of Spiders". Society and Animals. 2 (1): 17–25. doi:10.1163/156853094X00045.
  4. Isbister, Geoffrey; White, Julian (April 2004). "Clinical consequences of spider bites: recent advances in our understanding". Toxicon. 43 (5): 477–92. doi:10.1016/j.toxicon.2004.02.002. PMID 15066408. Retrieved 7 December 2020.
  5. "The Fear Factor: Phobias".
  6. Gerdes, Antje B.M.; Uhl, Gabriele; Alpers, Georg W. (2009). "Spiders are special: fear and disgust evoked by pictures of arthropods" (PDF). Evolution and Human Behavior. 30: 66–73. doi:10.1016/j.evolhumbehav.2008.08.005. Archived (PDF) from the original on 2022-10-09.
  7. Öhman, Arne (1993). "Fear and anxiety as emotional phenomena: Clinical phenomenology, evolutionary perspectives, and information-processing mechanisms". In Lewis, Michael; Haviland, Jeannette M. (eds.). The Handbook of the Emotions (1st ed.). New York: Guilford Press. pp. 511–536. ISBN 978-0898629880.
  8. Nesse, Randolph (2019). Good Reasons for Bad Feelings: Insights from the Frontier of Evolutionary Psychiatry. Dutton. pp. 75–76. ISBN 978-1101985663.
  9. Nesse, Randolph; Williams, George C. (1994). Why We Get Sick: The New Science of Darwinian Medicine. New York: Vintage Books. pp. 212–214. ISBN 978-0679746744.
  10. Nesse, Randolph M. (2005). "32. Evolutionary Psychology and Mental Health". In Buss, David M. (ed.). The Handbook of Evolutionary Psychology (1st ed.). Hoboken, NJ: Wiley. pp. 911–913. ISBN 978-0471264033.
  11. Nesse, Randolph M. (2016) [2005]. "43. Evolutionary Psychology and Mental Health". In Buss, David M. (ed.). The Handbook of Evolutionary Psychology, Volume 2: Integrations (2nd ed.). Hoboken, NJ: Wiley. p. 1014. ISBN 978-1118755808.
  12. Nesse, Randolph (2019). Good Reasons for Bad Feelings: Insights from the Frontier of Evolutionary Psychiatry. Dutton. pp. 64–74. ISBN 978-1101985663.
  13. Wagener, Alexandra L.; Zettle, Robert D. (2011). "Targeting Fear of Spiders With Control-, Acceptance-, and Information-Based Approaches" (PDF). The Psychological Record. 61 (1): 77–91. doi:10.1007/BF03395747. S2CID 44385538. Archived from the original (PDF) on 2011-06-14.
  14. Ohman, A; Mineka, S (2001). "Fears, Phobias, and Preparedness: Toward an Evolved Module of Fear and Fear Learning" (PDF). Psychological Review. 108 (3): 483–522. doi:10.1037/0033-295X.108.3.483. PMID 11488376. Archived (PDF) from the original on 2022-10-09.
  15. Mammola, Stefano; et al. (2022). "The global spread of misinformation on spiders". Current Biology. 32 (16): R871–R873. doi:10.1016/j.cub.2022.07.026. hdl:10400.3/6470. PMID 35998593. S2CID 251727654.
  16. Sperry, Len (2015). Mental Health and Mental Disorders: An Encyclopedia of Conditions, Treatments, and Well-Being [3 volumes]: An Encyclopedia of Conditions, Treatments, and Well-Being (in ಇಂಗ್ಲಿಷ್). ABC-CLIO. p. 430. ISBN 9781440803833.
  17. Ost, L. G. (1989). "One-session treatment for specific phobias". Behaviour Research and Therapy. 27 (1): 1–7. doi:10.1016/0005-7967(89)90113-7. PMID 2914000.
  18. Bouchard, S.; Côté, S.; St-Jacques, J.; Robillard, G.; Renaud, P. (2006). "Effectiveness of virtual reality exposure in the treatment of arachnophobia using 3D games". Technology and Healthcare. 14 (1): 19–27. PMID 16556961.
  19. Gabe Friedman (April 25, 2019). "Israeli Researchers: "Spider Man" movies decrease Spider Phobia". Arutz Sheva. Retrieved April 25, 2019.
  20. Schmitt, WJ; Müri, RM (2009). "Neurobiologie der Spinnenphobie". Schweizer Archiv für Neurologie. 160 (8): 352–355. Archived from the original on 23 August 2016.

ಬಾಹ್ಯ ಕೊಂಡಿಗಳು

ಬದಲಾಯಿಸಿ