ಅಪರಾಧ-ಶಾಸ್ತ್ರ
ಅಪರಾಧ-ಶಾಸ್ತ್ರ ವೆಂದರೆ (ಲ್ಯಾಟಿನ್ [crīmen] Error: {{Lang}}: text has italic markup (help), "ಆಪಾದನೆ"; ಮತ್ತು ಗ್ರೀಕ್ -λογία, -ಲಾಜಿಯಾ ) ಜನರ ಮತ್ತು ಸಮಾಜದಲ್ಲಿನ ಅಪರಾಧದ ರೀತಿ, ವ್ಯಾಪ್ತಿ, ಕಾರಣ ಮತ್ತು ನಿಯಂತ್ರಣದ ವೈಜ್ಞಾನಿಕ ಅಧ್ಯಯನವಾಗಿದೆ. ಅಪರಾಧ-ಶಾಸ್ತ್ರವು ವರ್ತನೆಯ ವಿಜ್ಞಾನದ ಒಂದು ಅಂತಶ್ಯಾಸ್ತ್ರೀಯ ವಿಭಾಗವಾಗಿದೆ. ಇದು ವಿಶೇಷವಾಗಿ ಸಮಾಜ ಶಾಸ್ತ್ರಜ್ಞರು (ನಿರ್ದಿಷ್ಟವಾಗಿ ವಕ್ರತೆಯ ಸಮಾಜ ಅಧ್ಯಯನದಲ್ಲಿ), ಸಾಮಾಜಿಕ ಮಾನವಶಾಸ್ತ್ರಜ್ಞರು ಮತ್ತು ಮನಶ್ಶಾಸ್ತ್ರಜ್ಞರ ಸಂಶೋಧನೆಯನ್ನು ಮಾತ್ರವಲ್ಲದೆ ಕಾನೂನಿನ ದಾಖಲೆಗಳನ್ನು ಒಳಗೊಳ್ಳುತ್ತದೆ. ಅಪರಾಧ-ಶಾಸ್ತ್ರದ ಸಂಶೋಧನೆಯ ವಲಯಗಳು ಅಪರಾಧದ ಹುಟ್ಟು, ಸ್ವರೂಪಗಳು, ಕಾರಣಗಳು ಮತ್ತು ಪರಿಣಾಮಗಳನ್ನು ಮಾತ್ರವಲ್ಲದೆ ಅಪರಾಧಕ್ಕೆ ಸಮಾಜದ ಮತ್ತು ಸರ್ಕಾರದ ನಿಬಂಧನೆ ಮತ್ತು ಪ್ರತಿಕ್ರಿಯೆಗಳನ್ನು ಒಳಗೊಳ್ಳುತ್ತವೆ. ಅಪರಾಧದ ಹರಡುವಿಕೆ ಮತ್ತು ಕಾರಣಗಳನ್ನು ಅಧ್ಯಯನ ಮಾಡಲು ಅಪರಾಧ-ಶಾಸ್ತ್ರವು ಮುಖ್ಯವಾಗಿ ಪರಿಮಾಣಾತ್ಮಕ ವಿಧಾನಗಳನ್ನು ಆಧರಿಸಿದೆ. ಕ್ರಿಮಿನಾಲಜಿ(ಅಪರಾಧ-ಶಾಸ್ತ್ರ) ಪದವನ್ನು 1885ರಲ್ಲಿ ಇಟಲಿಯ ಕಾನೂನು ಪ್ರಾಧ್ಯಾಪಕ ರಾಫೆಲೆ ಗ್ಯಾರೊಫಾಲೊ ಕ್ರಿಮಿನಾಲಜಿಯಾ ಎಂಬುದಾಗಿ ಸೃಷ್ಟಿಸಿದರು. ಸರಿಸುಮಾರಾಗಿ ಅದೇ ಸಂದರ್ಭದಲ್ಲಿ ಫ್ರೆಂಚ್ ಮಾನವಶಾಸ್ತ್ರಜ್ಞ ಪಾಲ್ ಟೋಪಿನಾರ್ಡ್ ಅದಕ್ಕೆ ಹೋಲುವ ಫ್ರೆಂಚ್ ಪದ ಕ್ರಿಮಿನಾಲಜಿಯೆ ಯನ್ನು ಬಳಸಿದರು.[೧]
ಇತಿಹಾಸ
ಬದಲಾಯಿಸಿಈ ಶಾಸ್ತ್ರದ ಮೂಲ ಉದ್ದೇಶ ದುರ್ವರ್ತನೆಗೆ ಕಾರಣ ಹಾಗೂ ಅದರ ಸೂಕ್ತ ಪರಿಹಾರೋಪಾಯಗಳನ್ನು ಕಂಡುಹಿಡಿಯುವುದೇ ಆಗಿದೆ. ಸೆರೆಸಿಕ್ಕಿದ ಅಪರಾಧಿಗೆ ಯಾವ ಶಿಕ್ಷೆ ವಿಧಿಸಬೇಕು, ಯಾವ ರೀತಿ ನಡೆಸಿಕೊಳ್ಳಬೇಕು, ಅವನನ್ನು ಮತ್ತೆ ಸಮಾಜದಲ್ಲಿ ಪ್ರತಿಷ್ಠಿತನನ್ನಾಗಿ ಮಾಡಲು ಏನು ಮಾಡಬೇಕು ಎಂಬ ಜಿಜ್ಞಾಸೆಗೆ ಸಂಬಂಧಿಸಿದ್ದರೂ ಇದು ಈ ಶಾಸ್ತ್ರದ ಉಪಶಾಖೆಯಾದ ದಂಡನಶಾಸ್ತ್ರಕ್ಕೆ (ಪೀನಾಲಜಿ) ಸಂಬಂಧಿಸಿದೆ.ಕಾನೂನಿಗೆ ವಿರುದ್ಧವಾದ ನಡತೆಯೇ ಅಪರಾಧ. ಇದು ಎಲ್ಲ ದೇಶ ಎಲ್ಲ ಕಾಲಗಳಲ್ಲಿ ಕಾಣುವ ವಿಷಯ. ಮಾನವ ವ್ಯವಸ್ಥಿತಜೀವನವನ್ನು ಎಂದಿನಿಂದ ನಡೆಸಲು ಆರಂಭಿಸಿದನೋ ಅಂದಿನಿಂದಲೂ ಇಂಥ ವರ್ತನೆಗೆ ಕಾರಣಗಳನ್ನು ಹುಡುಕುತ್ತಿದ್ದಾನೆ. ಆದರೂ ಇದರ ಶಾಸ್ತ್ರೀಯ ವಿಶ್ಲೇಷಣೆ ಪ್ರಾರಂಭವಾದದ್ದು ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ.ಅಪರಾಧಗಳನ್ನು ವೈಜ್ಞಾನಿಕ ವಿಧಾನಗಳಿಂದ ಸಮೀಕ್ಷಿಸಲು ಯತ್ನಿಸಿದ ಮೊದಮೊದಲಿನ ವಿದ್ವಾಂಸರಲ್ಲಿ ಇಟಲಿಯ ವೈದ್ಯ ಹಾಗೂ ಮಾನವಶಾಸ್ತ್ರಜ್ಞನಾದ ಸೆಸಾರ್ ಲೋಂಬ್ರೋಸೊ ಮುಖ್ಯನಾಗಿದ್ದಾನೆ. 1876 ರಲ್ಲಿ ಪ್ರಕಟವಾದ ಆತನ ಯೊಮೊ ಡೆಲಿನ್‍ಕ್ವೆಂಡೆ (ಅಪರಾಧಿ ಮಾನವ) ಗ್ರಂಥ ಅಪರಾಧಶಾಸ್ತ್ರಗ್ರಂಥಗಳಲ್ಲಿ ಮೊಟ್ಟಮೊದಲನೆಯದೆಂದು ಭಾವಿಸಲಾಗಿದೆ. ಈ ಶಾಸ್ತ್ರವ್ಯಾಸಂಗದ ಮೇಲೆ ಆ ಗ್ರಂಥ ಬೀರಿದ ಪರಿಣಾಮ ಕ್ರಾಂತಿಕಾರಕವಾಗಿತ್ತು. ಲೋಂಬ್ರೋಸೊ ಮಾನವ ಶಾಸ್ತ್ರೀಯಮಾನಗಳನ್ನೂ ಸುವ್ಯವಸ್ಥಿತ ಸಮೀಕ್ಷಣ ವಿಧಾನವನ್ನೂ ಉಪಯೋಗಿಸಿಕೊಂಡು ಒಂದು ಸಿದ್ಧಾಂತಕ್ಕೆ ಬಂದ. ಮನುಷ್ಯನ ಕೇಡಿಗತನ ಹುಟ್ಟಿನಿಂದ ಬಂದದ್ದು. ಆತ ನಾಗರಿಕರ ಮಧ್ಯೆ ಇರುವ ಅನಾಗರಿಕ, ಕಾಡುಮನುಷ್ಯ. ಆತನ ದೇಹದಲ್ಲೂ ಮನಸ್ಸಿನಲ್ಲೂ ಕೆಲವು ಕಳಂಕದ ಕರೆಗಳು ಇದ್ದುಕೊಂಡು ಆತ ಇಂಥವನೆಂಬುದನ್ನು ತೋರಿಸಿಕೊಡುತ್ತವೆ-ಇದನ್ನು ಯಥಾರ್ಥವಾದವೆಂದು ಪರಿಗಣಿಸಲಾಗಿದೆ.
ಚಿಂತನೆಗಳ ಕೇಂದ್ರ(ಸ್ಕೂಲ್ಸ್ ಆಫ್ ಥಾಟ್)
ಬದಲಾಯಿಸಿಮಧ್ಯ-18ನೇ ಶತಮಾನದಲ್ಲಿ, ಸಾಮಾಜಿಕ ತತ್ತ್ವಶಾಸ್ತ್ರಜ್ಞರು ಅಪರಾಧ ಮತ್ತು ಕಾನೂನಿನ ಕಲ್ಪನೆಗಳಿಗೆ ತಮ್ಮ ಅಭಿಪ್ರಾಯಗಳನ್ನು ನೀಡಿದ್ದರಿಂದ ಅಪರಾಧ-ಶಾಸ್ತ್ರವು ಹುಟ್ಟಿಕೊಂಡಿತು. ಸಮಯ ಕಳೆದಂತೆ ಅನೇಕ ಚಿಂತನೆಗಳ ಕೇಂದ್ರಗಳು ಅಭಿವೃದ್ಧಿಗೊಂಡವು. ಇತಿಹಾಸದಾದ್ಯಂತ ಅಪರಾಧ ಶಾಸ್ತ್ರೀಯ ಚಿಂತನೆಯ ಹಲವಾರು ಕೇಂದ್ರಗಳಿದ್ದರೂ, ಹೆಚ್ಚಿನ ಹೊಸ ಕೇಂದ್ರಗಳು ಹಿಂದಿನದರ ಪುನರುಜ್ಜೀವನವಾಗಿವೆ. ಅಲ್ಲದೇ ಅವು ಪೈಪೋಟಿ ನಡೆಸುವ ದೃಷ್ಟಿಕೋನವನ್ನು ಹೊಂದಿಲ್ಲವೆಂಬುದು ಗಮನಾರ್ಹವಾಗಿದೆ. ಪ್ರಸ್ತುತ ಹೆಚ್ಚು ಅಪರಾಧ-ಶಾಸ್ತ್ರಜ್ಞರಿರುವ ಕೇಂದ್ರವೆಂದರೆ ಚಿಕಾಗೊ ಸ್ಕೂಲ್; ಆದರೂ, ಅಲ್ಲಿ ವಕ್ರ ನಡವಳಿಕೆಯ ಉಪ-ಸಂಸ್ಕೃತಿಯ ಸಿದ್ಧಾಂತವು ಅಪರಾಧ-ಶಾಸ್ತ್ರದ ಉತ್ತಮ ವಿವರಣೆಯಾಗಿದೆಯೆಂದು ಭಾವಿಸುವ ಹಲವರಿದ್ದಾರೆ.
ಕ್ಲಾಸಿಕಲ್ ಸ್ಕೂಲ್(ಪ್ರಾಚೀನ ಕೇಂದ್ರ)
ಬದಲಾಯಿಸಿ17ನೇ ಶತಮಾನದಲ್ಲಿ ಅಭಿವೃದ್ಧಿಗೊಂಡ ಕ್ಲಾಸಿಕಲ್ ಸ್ಕೂಲ್ ಪ್ರಯೋಜನ ವಾದಿ ತತ್ತ್ವಶಾಸ್ತ್ರವನ್ನು ಆಧರಿಸಿತ್ತು. ಆನ್ ಕ್ರೈಮ್ಸ್ ಆಂಡ್ ಪನಿಶ್ಮೆಂಟ್ಸ್ ನ (1763–64) ಲೇಖಕ ಕೇಸರೆ ಬೆಕ್ಕಾರಿಯಾ, ಮಂಡಲಾಕಾರದ ಕಾರಾಗೃಹ ವನ್ನು ಕಂಡುಹಿಡಿದ ಜೆರೆಮಿ ಬೆಂತಾಮ್ ಮತ್ತು ಇತರ ಕ್ಲಾಸಿಕಲ್ ಸ್ಕೂಲ್ ತತ್ತ್ವಶಾಸ್ತ್ರಜ್ಞರು ಹೀಗೆಂದು ವಾದಿಸಿದ್ದಾರೆ - (1) ಬಿಡುವಿರುವವರು ಅಪರಾಧ ಮಾಡಲು ಬಯಸುತ್ತಾರೆ. (2) ಡಿಟೆರೆನ್ಸ್(ನಿರೋಧವು) ಸಂತೋಷವನ್ನು ಅರಸುವ ಮತ್ತು ನೋವನ್ನು ತಪ್ಪಿಸುವ ಭೋಗವಾದಿಯಾಗಿರುವ ಮಾನವನ ಭಾವನೆಯನ್ನು ಹಾಗೂ ಪ್ರತಿಯೊಂದು ಅಪರಾಧದ ಪರಿಣಾಮಗಳ ಹಾನಿ ಮತ್ತು ಪ್ರಯೋಜನಗಳ ಮೌಲ್ಯ ನಿರ್ಣಯಿಸುವ 'ತರ್ಕಬದ್ಧ ಲೆಕ್ಕಿಗ'ವನ್ನು ಆಧರಿಸಿರುತ್ತದೆ. ಆದ್ದರಿಂದ ಇದು ಅಸಂಬದ್ಧತೆಯ ಸಂಭವವನ್ನು ದೂರಮಾಡುತ್ತದೆ ಮತ್ತು ಮೈಮೇಲೆ ಎಚ್ಚರವಿಲ್ಲದಿರುವಿಕೆಯು ಪ್ರೇರಕ ಅಂಶವಾಗಿ ಕಾರ್ಯಮಾಡುತ್ತದೆ, (3)ಹಾನಿಯು (ದಂಡಗಳು) ಪ್ರಯೋಜನವನ್ನು ಮೀರಿಸುವುದರಿಂದ ಶಿಕ್ಷೆಯು (ಸಾಕಷ್ಟು ತೀವ್ರದ) ಅಪರಾಧ ಮಾಡದಂತೆ ತಡೆಯುತ್ತದೆ ಹಾಗೂ ಶಿಕ್ಷೆಯ ತೀವ್ರತೆಯು ಅಪರಾಧಕ್ಕೆ ಅನುಗುಣವಾಗಿರಬೇಕು.[೨] (4) ಶಿಕ್ಷೆಯನ್ನು ಹೆಚ್ಚು ಬೇಗನೆ ಮತ್ತು ಖಂಡಿತವಾಗಿ ನೀಡುವುದರಿಂದ, ಅಪರಾಧ ವರ್ತನೆಯ ತಡೆಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಚಿಂತನೆಯ ಕ್ಲಾಸಿಕಲ್ ಸ್ಕೂಲ್ ದಂಡನೆಯಲ್ಲಿ ಪ್ರಮುಖ ಸುಧಾರಣೆಯು ಕಂಡುಬಂದ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದಿತು, ಈ ಸಂದರ್ಭದಲ್ಲಿ ಕಾರಾಗೃಹಗಳು ಶಿಕ್ಷೆಯ ಒಂದು ರೂಪವಾಗಿ ಅಭಿವೃದ್ಧಿಗೊಂಡವು. ಅಲ್ಲದೆ ಈ ಸಂದರ್ಭದಲ್ಲಿ ಅನೇಕ ಕಾನೂನು ಸುಧಾರಣೆಗಳಾದವು, ಫ್ರೆಂಚ್ ಕ್ರಾಂತಿ ಕಂಡುಬಂದಿತು ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಕಾನೂನು ವ್ಯವಸ್ಥೆಯು ಅಭಿವೃದ್ಧಿಯಾಯಿತು.
ಪ್ರತ್ಯಕ್ಷೈಕ ಪ್ರಮಾಣವಾದಿ ಕೇಂದ್ರ
ಬದಲಾಯಿಸಿಪ್ರತ್ಯಕ್ಷೈಕ ಪ್ರಮಾಣವಾದಿ ಶೈಕ್ಷಣಿಕ ಕೇಂದ್ರವು ಅಪರಾಧಿ ವರ್ತನೆಯು ವ್ಯಕ್ತಿಯ ನಿಯಂತ್ರಣ ಮೀರಿದ ಆಂತರಿಕ ಮತ್ತು ಬಾಹ್ಯ ಅಂಶಗಳಿಂದ ಉಂಟಾಗುತ್ತದೆಂದು ಹೇಳುತ್ತದೆ. ಮಾನವನ ವರ್ತನೆಯನ್ನು ಅಧ್ಯಯನ ಮಾಡಲು ವೈಜ್ಞಾನಿಕ ವಿಧಾನವನ್ನು ಬಳಕೆಗೆ ತರಲಾಯಿತು. ಪ್ರತ್ಯಕ್ಷೈಕ ಪ್ರಮಾಣವಾದವನ್ನು ಮೂರು ವಿಭಾಗಗಳಾಗಿ ವಿಂಗಡಿಸಬಹುದು, ಅವುಗಳೆಂದರೆ - ಜೀವವಿಜ್ಞಾನದ, ಮನಶ್ಶಾಸ್ತ್ರದ ಮತ್ತು ಸಾಮಾಜಿಕ ಪ್ರತ್ಯಕ್ಷೈಕ ಪ್ರಮಾಣವಾದ.
ಇಟಲಿಯ ಕೇಂದ್ರ
ಬದಲಾಯಿಸಿ19ನೇ ಶತಮಾನದ ಉತ್ತರಾರ್ಧದಲ್ಲಿ ಕಾರಾಗೃಹದ ವೈದ್ಯನಾಗಿ ಕೆಲಸ ಮಾಡುತ್ತಿದ್ದ ಮತ್ತು ಕೆಲವೊಮ್ಮೆ ಅಪರಾಧ-ಶಾಸ್ತ್ರದ ಪಿತಾಮಹನೆಂದು ಪರಿಗಣಿಸಲಾಗುವ ಕೇಸರೆ ಲೋಂಬ್ರೊಸೊ ಜೀವಶಾಸ್ತ್ರದ ಪ್ರತ್ಯಕ್ಷೈಕ ಪ್ರಮಾಣವಾದಕ್ಕೆ ಅತ್ಯಂತ ಹೆಚ್ಚು ಕೊಡುಗೆ ನೀಡಿದವರಲ್ಲಿ ಒಬ್ಬರಾಗಿದ್ದಾರೆ ಹಾಗೂ ಅಪರಾಧ-ಶಾಸ್ತ್ರದ ಇಟಲಿಯ ಕೇಂದ್ರದ ಸ್ಥಾಪಕರಾಗಿದ್ದಾರೆ.[೩] ಲೋಂಬ್ರೊಸೊ ಅಪರಾಧವನ್ನು ಅಧ್ಯಯನ ಮಾಡಲು ಪ್ರಯೋಗವಾದಿ ಸಾಕ್ಷ್ಯವನ್ನು ಸಮರ್ಥಿಸುವ ವೈಜ್ಞಾನಿಕ ಮಾರ್ಗವನ್ನು ಆರಿಸಿದರು.[೪] ಅಪರಾಧ ಮಾನವಶಾಸ್ತ್ರದ ಪಿತಾಮಹನೆಂದು ಪರಿಗಣಿಸಲಾದ ಅವರು ಹೀಗೆಂದು ಸೂಚಿಸಿದ್ದಾರೆ - ವ್ಯಕ್ತಿಯ ಗಲ್ಲದ ಎಲುಬುಗಳ ಅಥವಾ ಕೂದಲಿನ ಎಳೆಗಳ ಅಥವಾ ಸೀಳಿದ-ಅಂಗುಳಿನ ಅಳತೆಗಳಂತಹ ಶರೀರ ವೈಜ್ಞಾನಿಕ ವಿಶೇಷ ಲಕ್ಷಣಗಳು "ಪೂರ್ವಜಸದೃಶ" ಅಪರಾಧ ರೀತಿಗಳ ಸೂಚಕಗಳಾಗಿವೆ, ಇವನ್ನು ನಿಯಾಂಡರ್ಟಾಲ್ ಮಾನವನಿಗೆ ಆಧರಿಸಿದವೆಂದು ಪರಿಗಣಿಸಲಾಗುತ್ತದೆ. ಹಿಂದಿನ ಕಪಾಲಾಧ್ಯಯನ ಹಾಗೂ ಚಾರ್ಲ್ಸ್ ಡಾರ್ವಿನ್ ಮತ್ತು ಆತನ ವಿಕಾಸವಾದದಿಂದ ಪ್ರಭಾವಕ್ಕೊಳಗಾದ ಈ ಮಾರ್ಗವು ತಳ್ಳಿಹಾಕಲ್ಪಟ್ಟಿತು. ಲೋಂಬ್ರೊಸೊನ ವಿದ್ಯಾರ್ಥಿ ಎನ್ರಿಕೊ ಫೆರ್ರಿಯು ಸಾಮಾಜಿಕ ಮತ್ತು ಜೀವವೈಜ್ಞಾನಿಕ ಅಂಶಗಳು ಪ್ರಮುಖ ಪಾತ್ರವಹಿಸುತ್ತವೆಂದು ನಂಬುತ್ತಾರೆ ಹಾಗೂ ಅಪರಾಧಕ್ಕೆ ಕಾರಣವಾಗುವ ಅಂಶಗಳು ಅಪರಾಧಿಗಳ ಹಿಡಿತವನ್ನು ಮೀರಿದ್ದರೆ ಅವರನ್ನು ಆ ಅಪರಾಧದ ಜವಾಬ್ದಾರರನ್ನಾಗಿ ಮಾಡಬಾರದೆಂದು ಅಭಿಪ್ರಾಯ ಸೂಚಿಸಿದ್ದಾರೆ. ಆದ್ದರಿಂದ ನಿಯಂತ್ರಣ ಗುಂಪುಗಳನ್ನು ಆತನ ಅಧ್ಯಯನಗಳಲ್ಲಿ ಬಳಸದೇ ಇರುವುದಕ್ಕೆ ಅಪರಾಧ ಶಾಸ್ತ್ರಜ್ಞರು ಲೋಂಬ್ರೊಸೊನ ಜೀವವೈಜ್ಞಾನಿಕ ಸಿದ್ಧಾಂತಗಳನ್ನು ನಿರಾಕರಿಸಿದರು.[೫]
ಲಕಾಸ್ಸಾಗ್ನೆ ಕೇಂದ್ರ
ಬದಲಾಯಿಸಿಲೋಂಬ್ರೊಸೊನ ಇಟಲಿಯ ಕೇಂದ್ರಕ್ಕೆ ಫ್ರಾನ್ಸಿನಲ್ಲಿ ಅಲೆಕ್ಸಾಂಡ್ರೆ ಲಕಾಸ್ಸಾಗ್ನೆ ಹಾಗೂ ಲ್ಯೋನ್‌ನಲ್ಲಿರುವ ಮತ್ತು 1885ರಿಂದ 1914ರವರೆಗೆ ಪ್ರಭಾವ ಹೊಂದಿದ್ದ ಅವರ ಚಿಂತನೆಯ ಕೇಂದ್ರವು ಪ್ರತಿಸ್ಪರ್ಧಿಯಾಗಿತ್ತು.[೬] ಲಕಾಸ್ಸಾಗ್ನೆ ಕೇಂದ್ರವು ಲೋಂಬ್ರೊಸೊನ "ಅಪರಾಧ ಪ್ರಕಾರ" ಮತ್ತು "ಹುಟ್ಟು ಅಪರಾಧಿಗಳ" ಸಿದ್ಧಾಂತವನ್ನು ನಿರಾಕರಿಸಿತು ಹಾಗೂ ಸಾಮಾಜಿಕ ಅಂಶಗಳ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಿತು. ಆದರೆ ದುರ್ಖೈಮ್‌ನ ಸಾಮಾಜಿಕ ನಿಯಂತ್ರಣವಾದದಿಂದ ಪ್ರಭಾವಕ್ಕೊಳಗಾದ ಅಪರಾಧ ಶಾಸ್ತ್ರದ ರೀತಿಗಳಿಗೆ ವಿರುದ್ಧವಾದ ಇದು ಜೀವವಿಜ್ಞಾನದ ಅಂಶಗಳನ್ನು ನಿರಾಕರಿಸಲಿಲ್ಲ. ಲಕಾಸ್ಸಾಗ್ನೆಯು ಪ್ರತ್ಯಕ್ಷೈಕ ಪ್ರಮಾಣವಾದ, ಕಪಾಲಾಧ್ಯಯನ ಮತ್ತು ಆರೋಗ್ಯಶಾಸ್ತ್ರದಿಂದ ಪ್ರಭಾವಕ್ಕೊಳಗಾದ ಎರಡೂ ರೀತಿಗಳ ಮೂಲತಃ ವಿಶ್ಲೇಷಣೆಯನ್ನು ರೂಪಿಸಿದರು. ಅದು ಮಿದುಳಿನ ಮೇಲೆ ಸಾಮಾಜಿಕ ಪರಿಸರದ ನೇರ ಪ್ರಭಾವವನ್ನು ಆಪಾದಿಸುತ್ತದೆ ಮತ್ತು ಸಮಾಜವನ್ನೇ ಆರ್ಗನಿಸಿಸ್ಟ್ ಸ್ಥಾನವನ್ನು ಹೊಂದಿರುವ ಮಿದುಳಿಗೆ ಹೋಲಿಸುತ್ತದೆ.[೬] ಲಕಾಸ್ಸಾಗ್ನೆಯು ಕಾರಾಗೃಹದ ಪರಿಣಾಮಕಾರಿತ್ವದ ಕೊರತೆಯ ಬಗ್ಗೆ ಟೀಕಿಸಿದರು, ಅಪರಾಧದಲ್ಲಿ ಸಾಮಾಜಿಕ ಜವಾಬ್ದಾರಿಗಳನ್ನು ಮತ್ತು ಅಪರಾಧಕ್ಕೆ ಪರಿಹಾರವಾಗಿ ರಾಜಕೀಯ ಸ್ವಯಂಸಹಾಯತತ್ತ್ವವನ್ನು ಒತ್ತಿಹೇಳಿದರು. ಉದಾಹರಣೆಗಾಗಿ ದಂಡನೆಯ ನೆಲೆಯ 1895ರ ಕಾನೂನನ್ನು ಬೆಂಬಲಿಸುವ ಮೂಲಕ ಅಥವಾ 1906ರ ಮರಣ ದಂಡನೆಯ ನಿಷೇಧವನ್ನು ವಿರೋಧಿಸುವ ಮೂಲಕ ಉದ್ಧರಿಸಲಾಗದ ("ತಿದ್ದಿಕೊಳ್ಳದ") ಅಪರಾಧಿಗಳಿಗೆ ಕಠಿಣ ದಂಡನೆಗಳನ್ನು ವಿಧಿಸಬೇಕೆಂದು ವಾದಿಸಿದರು.[೬] ಬಹಿರ್ಮುಖಿ ಸ್ವಭಾವ(ಎಕ್ಸ್ಟ್ರಾವರ್ಷನ್) ಮತ್ತು ನರವಿಕೃತಿಯಂತಹ ಮನೋವೈಜ್ಞಾನಿಕ ಅಂಶಗಳು ಅಪರಾಧವೆಸಗುವಂತೆ ಹೆಚ್ಚಿನ ಉತ್ತೇಜನವನ್ನು ನೀಡುತ್ತವೆಂದು ಬ್ರಿಟಿಷ್ ಮನಶ್ಶಾಸ್ತ್ರಜ್ಞ ಹ್ಯಾನ್ಸ್ ಐಸೆಂಕ್ (1964, 1977) ಹೇಳಿದ್ದಾರೆ. ಈ ಮನೋವಿಕೃತಿಯು ಮನೋರೋಗದ ಲಕ್ಷಣಗಳನ್ನು ಹೋಲುವ ವಿಶಿಷ್ಟ ಗುಣಗಳನ್ನು ಒಳಗೊಳ್ಳುತ್ತದೆಂದೂ ಸೂಚಿಸಿದ್ದಾರೆ, ಇದನ್ನು ಹರ್ವಿ M. ಕ್ಲೆಕ್ಲಿ ಮತ್ತು ನಂತರ ರಾಬರ್ಟ್ ಹ್ಯಾರೆ ಅಭಿವೃದ್ಧಿಪಡಿಸಿದರು. ಅವರ ಮಾದರಿಯು ಮಗುವಿನ ಹಿಂದಿನ ಮಾತಾಪಿತೃಗಳ ಸಾಮಾಜಿಕೀಕರಣವನ್ನು ಆಧರಿಸಿತ್ತು; ಅವರ ಸಾಧನೆಯು ಜೀವವಿಜ್ಞಾನದ ವಿವರಣೆಗಳು ಮತ್ತು ಪರಿಸರದ ಅಥವಾ ಸಾಮಾಜಿಕ ಅಧ್ಯಯನ ಆಧಾರಿತ ಸಾಧನೆಗಳ ನಡುವಿನ ಅಂತರವನ್ನು ಸರಿದೂಗಿಸುತ್ತದೆ. (ಗಮನಿಸಿ - ಉದಾ. ಸಾಮಾಜಿಕ ಮನಶ್ಶಾಸ್ತ್ರಜ್ಞ B.F. ಸ್ಕಿನ್ನರ್ (1938), ಆಲ್ಬರ್ಟ್ ಬಂದುರ (1973) ಮತ್ತು "ನೇಚರ್ ವರ್ಸಸ್ ನರ್ಚರ್".)
ಸಮಾಜಶಾಸ್ತ್ರೀಯ ಪ್ರತ್ಯಕ್ಷೈಕ ಪ್ರಮಾಣವಾದ
ಬದಲಾಯಿಸಿಬಡತನ, ಉಪಸಂಸ್ಕತಿಯ ಸದಸ್ಯತ್ವ ಅಥವಾ ಕಳಪೆ ಮಟ್ಟದ ಶಿಕ್ಷಣ ಮೊದಲಾದ ಸಾಮಾಜಿಕ ಅಂಶಗಳು ಜನರು ಅಪರಾಧವೆಸಗುವಂತೆ ಮಾಡುತ್ತದೆಂದು ಸಮಾಜಶಾಸ್ತ್ರೀಯ ಪ್ರತ್ಯಕ್ಷೈಕ ಪ್ರಮಾಣವಾದವು ಸಮರ್ಥಿಸುತ್ತದೆ. ಅಪರಾಧ ಮತ್ತು ಸಮಾಜಶಾಸ್ತ್ರೀಯ ಅಂಶಗಳ ನಡುವಿನ ಸಂಬಂಧದ ಬಗ್ಗೆ ತಿಳಿಯಲು ಅಡೋಲ್ಫೆ ಕ್ವೆಟೆಲೆಟ್ ಮಾಹಿತಿ ಮತ್ತು ಅಂಕಿಅಂಶಗಳ ವಿಶ್ಲೇಷಣೆಯನ್ನು ಬಳಸಿಕೊಂಡರು. ಆತನು ವಯಸ್ಸು, ಲಿಂಗ, ಬಡತನ, ಶಿಕ್ಷಣ, ಮತ್ತು ಆಲ್ಕೊಹಾಲ್ ಬಳಕೆಯು ಅಪರಾಧವೆಸಗುವುದಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳಾಗಿವೆಯೆಂದು ಹೇಳಿದ್ದಾರೆ.[೭] ಜನಸಂಖ್ಯಾ ಸಾಂದ್ರತೆ ಮತ್ತು ಅಪರಾಧ ದರದ ನಡುವಿನ ಸಂಬಂಧವನ್ನು ಸೂಚಿಸಲು ರಾವ್ಸನ್ W. ರಾವ್ಸನ್ ಅಪರಾಧ ಅಂಕಿಅಂಶಗಳನ್ನು ಬಳಸಿಕೊಂಡರು. ಕಿಕ್ಕಿರಿದ ನಗರಗಳು ಅಪರಾಧಕ್ಕೆ ನೆರವಾಗುವ ಪರಿಸರವನ್ನು ಸೃಷ್ಟಿಸುತ್ತವೆ.[೮] ಜೋಸೆಫ್ ಫ್ಲೆಟ್ಚರ್ ಮತ್ತು ಜಾನ್ ಗ್ಲೈಡ್ ಅಪರಾಧ ಮತ್ತು ಅದರ ಹಂಚಿಕೆಯ ಬಗೆಗಿನ ಅವರ ಅಧ್ಯಯನಗಳ ಬಗ್ಗೆ ಸ್ಟ್ಯಾಟಿಸ್ಟಿಕಲ್ ಸೊಸೈಟಿ ಆಫ್ ಲಂಡನ್‌ಗೆ ಪ್ರಬಂಧಗಳನ್ನು ಮಂಡಿಸಿದರು.[೯] ಸಾಮಾಜಿಕ ಆಕ್ಷೇಪಣೆಗಳು ಮತ್ತು ಬಡತನದ ಬಗ್ಗೆ ತಿಳಿಸಲು ಹೆನ್ರಿ ಮೇಹ್ಯೂ ಪ್ರಯೋಗವಾದಿ ವಿಧಾನಗಳು ಮತ್ತು ಜನಾಂಗ ವಿವರಣೆಯ ಮಾರ್ಗವನ್ನು ಬಳಸಿದರು ಹಾಗೂ ಅವರ ಅಧ್ಯಯನಗಳನ್ನು ಲಂಡನ್ ಲೇಬರ್ ಆಂಡ್ ದಿ ಲಂಡನ್ ಪುವರ್ ನಲ್ಲಿ ಮಂಡಿಸಿದರು.[೧೦] ಜನರ ನಡುವೆ ಸಂಪತ್ತಿನ ಏಕರೀತಿಯಾಗಿಲ್ಲದ ಹಂಚಿಕೆ ಮತ್ತು ಇತರ ವ್ಯತ್ಯಾಸಗಳೊಂದಿಗೆ ಅಪರಾಧವನ್ನು ಸಮಾಜದ ಸ್ವಾಭಾವಿಕ ಅಂಶವೆಂದು ಎಮಿಲ್ ದುರ್ಖೈಮ್ ಹೇಳಿದ್ದಾರೆ.
ಚಿಕಾಗೊ ಕೇಂದ್ರ
ಬದಲಾಯಿಸಿಚಿಕಾಗೊ ಕೇಂದ್ರವು ಇಪ್ಪತ್ತನೇ ಶತಮಾನದ ಆರಂಭದಲ್ಲಿ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ರಾಬರ್ಟ್ E. ಪಾರ್ಕ್, ಅರ್ನೆಸ್ಟ್ ಬರ್ಗೆಸ್ ಮತ್ತು ಇತರ ನಗರದ ಸಮಾಜಶಾಸ್ತ್ರಜ್ಞರ ಪ್ರಯತ್ನದಿಂದ ಹುಟ್ಟಿಕೊಂಡಿತು. 1920ರಲ್ಲಿ, ಪಾರ್ಕ್ ಮತ್ತು ಬರ್ಗೆಸ್ ನಗರದ ಬೆಳವಣಿಗೆಯಲ್ಲಿ ಪಾಲ್ಗೊಳ್ಳುವ ಐದು ಏಕಕೇಂದ್ರ ವಲಯಗಳನ್ನು ಗುರುತಿಸಿದರು. ಅವುಗಳಲ್ಲಿ ಒಂದು "ಬದಲಾವಣೆಯ ವಲಯ", ಇದನ್ನು ಹೆಚ್ಚು ಅಸ್ಥಿರ ಮತ್ತು ಬೇಗನೆ ಅಸ್ತವ್ಯಸ್ತಗೊಳ್ಳುವ ವಲಯವೆಂದು ಗುರುತಿಸಲಾಗಿದೆ. 1940ರಲ್ಲಿ, ಹೆನ್ರಿ ಮ್ಯಾಕ್‌ಕೇ ಮತ್ತು ಕ್ಲಿಫ್ಫರ್ಡ್ R. ಶಾ ಬಾಲಾಪರಾಧಿಗಳ ಬಗ್ಗೆ ಹೆಚ್ಚು ಗಮನ ಹರಿಸಿದರು ಹಾಗೂ ಅವರು 'ಬದಲಾವಣೆಯ ವಲಯ'ದಲ್ಲಿ ಕೇಂದ್ರೀಕೃತರಾಗಿದ್ದಾರೆಂದು ಕಂಡುಹಿಡಿದರು. ಚಿಕಾಗೊ ಕೇಂದ್ರದ ಸಮಾಜಶಾಸ್ತ್ರಜ್ಞರು ನಗರಗಳ ಬಗ್ಗೆ ಅಧ್ಯಯನ ಮಾಡಲು ಸಾಮಾಜಿಕ ಪರಿಸರವಿಜ್ಞಾನದ ಮಾರ್ಗವನ್ನು ಆರಿಸಿಕೊಂಡರು ಹಾಗೂ ಹೆಚ್ಚಿನ ಬಡತನವನ್ನು ಹೊಂದಿರುವ ನಗರಗಳು ಹೆಚ್ಚಾಗಿ ಸಾಮಾಜಿಕ ರಚನೆ ಹಾಗೂ ಕುಟುಂಬ ಮತ್ತು ಶಾಲೆಗಳಂತಹ ಸಂಘಟನೆಗಳಲ್ಲಿ ಕುಸಿತವನ್ನು ಕಾಣುತ್ತವೆ. ಇದರಿಂದಾಗಿ ಸಾಮಾಜಿಕ ಅಸ್ತವ್ಯಸ್ತತೆಯು ಉಂಟಾಗುತ್ತದೆ. ಇದು ಈ ಸಂಘಟನೆಗಳ ನಿಯಂತ್ರಿಸುವ ವರ್ತನೆಯ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಹಾಗೂ ವಕ್ರ ವರ್ತನೆಗೆ ಸೂಕ್ತವಾದ ವಾತಾವರಣವನ್ನು ಸೃಷ್ಟಿಸುತ್ತದೆ. ಇತರ ಸಂಶೋಧಕರು ಹೆಚ್ಚಿದ ಸಾಮಾಜಿಕ-ಮಾನಸಿಕ ಸಂಬಂಧವನ್ನು ಸೂಚಿಸಿದ್ದಾರೆ. ಜನರು ಅವರ ಸಂಪರ್ಕಕ್ಕೆ ಬರುವ ಹಿರಿಯ, ಹೆಚ್ಚು ಅನುಭವಸ್ಥ ಅಪರಾಧಿಗಳಿಂದ ಅಪರಾಧವೆಸಗುವುದನ್ನು ಕಲಿಯುತ್ತಾರೆಂದು ಎಡ್ವಿನ್ ಸುದರ್‌ಲ್ಯಾಂಡ್ ಹೇಳಿದ್ದಾರೆ.
ಅಪರಾಧದ ಸಿದ್ಧಾಂತಗಳು
ಬದಲಾಯಿಸಿಅಪರಾಧ-ಶಾಸ್ತ್ರದಲ್ಲಿ ಬಳಸಿದ ಸೈದ್ಧಾಂತಿಕ ದೃಷ್ಟಿಕೋನಗಳೆಂದರೆ - ಮನೋವಿಶ್ಲೇಷಣೆ, ಕಾರ್ಯೋದ್ದೇಶವಾದ, ಪರಸ್ಪರ ಕ್ರಿಯೆ, ಮಾರ್ಕ್ಸ್ ವಾದ, ಅರ್ಥಮಾಪನ ಶಾಸ್ತ್ರ, ವ್ಯವಸ್ಥೆಯ ಸಿದ್ಧಾಂತ, ನವ್ಯೋತ್ತರತೆ, ಇತ್ಯಾದಿ.
ಸಾಮಾಜಿಕ ರಚನಾ ಸಿದ್ಧಾಂತಗಳು
ಬದಲಾಯಿಸಿಈ ಸಿದ್ಧಾಂತವನ್ನು ಅಪರಾಧ-ಶಾಸ್ತ್ರದಲ್ಲಿ ವಿವಿಧ ಸಾಧನೆಗಳಿಗಾಗಿ ಹಾಗೂ ಸಮಾಜಶಾಸ್ತ್ರದಲ್ಲಿ ಸಾಮಾನ್ಯವಾಗಿ ಸಂಘರ್ಷ ಸಿದ್ಧಾಂತ ಅಥವಾ ರಚನಾತ್ಮಕ ಸಂಘರ್ಷ ದೃಷ್ಟಿಕೋನವಾಗಿ ಬಳಸಲಾಗುತ್ತದೆ. ಈ ದೃಷ್ಟಿಕೋನವು ಸಾಕಷ್ಟು ವಿಸ್ತಾರವಾದುದರಿಂದ, ಇದು ವಿವಿಧ ಸ್ಥಾನಗಳನ್ನು ಒಳಗೊಳ್ಳುತ್ತದೆ.[೧೧]
ಸಾಮಾಜಿಕ ಅವ್ಯವಸ್ಥೆ (ನೆರೆಹೊರೆ)
ಬದಲಾಯಿಸಿಸಾಮಾಜಿಕ ಅವ್ಯವಸ್ಥೆ ಸಿದ್ಧಾಂತವು ಚಿಕಾಗೊ ಕೇಂದ್ರದ ಹೆನ್ರಿ ಮ್ಯಾಕ್‌ಕೇ ಮತ್ತು R. ಶಾ ಮೊದಲಾದವರ ಕೆಲಸಗಳನ್ನು ಆಧರಿಸಿದೆ.[೧೨] ಬಡತನ ಮತ್ತು ಆರ್ಥಿಕ ಕುಸಿತದ ಪ್ರಭಾವಕ್ಕೊಳಗಾದ ನೆರೆಹೊರೆಯು ಹೆಚ್ಚಿನ ಜನಸಂಖ್ಯಾ ಅಸ್ತವ್ಯಸ್ತತೆಯನ್ನು ಅನುಭವಿಸುತ್ತದೆಂದು ಸಾಮಾಜಿಕ ಅವ್ಯವಸ್ಥೆ ಸಿದ್ಧಾಂತವು ಸೂಚಿಸುತ್ತದೆ.[೧೩] ಈ ನೆರೆಹೊರೆಯು ಹೆಚ್ಚಿನ ಜನಸಂಖ್ಯಾ ಮಿಶ್ರರೂಪತೆಯನ್ನೂ ಹೊಂದಿರುತ್ತದೆ.[೧೩] ಹೆಚ್ಚಿನ ಅಸ್ತವ್ಯಸ್ತ, ಕ್ರಮರಹಿತ ಸಾಮಾಜಿಕ ರಚನೆಯು ಅಭಿವೃದ್ಧಿ ಹೊಂದುವುದಿಲ್ಲ. ಇದು ಸಮುದಾಯದಲ್ಲಿ ಸಾಮಾಜಿಕ ಕ್ರಮವನ್ನು ನಿರ್ವಹಿಸಲು ಕಷ್ಟಸಾಧ್ಯವಾಗಿಸುತ್ತದೆ.
ಸಾಮಾಜಿಕ ಪರಿಸರ ವಿಜ್ಞಾನ
ಬದಲಾಯಿಸಿ1950ರಲ್ಲಿ ಸಾಮಾಜಿಕ ಪರಿಸರ ವಿಜ್ಞಾನದ ಅಧ್ಯಯನಗಳನ್ನು ಸಾಮಾಜಿಕ ಅವ್ಯವಸ್ಥೆ ಸಿದ್ಧಾಂತಗಳ ಆಧಾರದಲ್ಲಿ ಮಾಡಲಾಗಿದೆ. ಅಪರಾಧ ಪ್ರಮಾಣವು ಬಡತನ, ಅವ್ಯವಸ್ಥೆ, ಹೆಚ್ಚಿನ ಸಂಖ್ಯೆಯ ತೊರೆದ ಕಟ್ಟಡಗಳು ಹಾಗೂ ಸಮುದಾಯದ ಕೀಳು ಸ್ಥಿತಿಯ ಇತರ ಲಕ್ಷಣಗಳೊಂದಿಗೆ ಸಂಬಂಧಿಸಿರುತ್ತದೆಂದು ಹೆಚ್ಚಿನ ಅಧ್ಯಯನಗಳು ಕಂಡುಹಿಡಿದಿವೆ.[೧೩][೧೪] ಕೂಲಿ ಕೆಲಸ ಮಾಡುವ ಮತ್ತು ಮಧ್ಯಮ ವರ್ಗದ ಜನರು ಸಮಾಜವನ್ನು ಕೆಡಿಸುವ ಸಮುದಾಯದವರಾಗಿರುವುದರಿಂದ, ಸಮಾಜದಲ್ಲಿ ಹೆಚ್ಚು ಕೇಡನ್ನುಂಟುಮಾಡುವ ಜನರು ಉಳಿಯಬಹುದು. ಬಡತನ "ಕೇಂದ್ರೀಕರಣ ಪರಿಣಾಮ"ವು ಸಮುದಾಯದವರು ಸಮಾಜದಿಂದ ಪ್ರತ್ಯೇಕವಾಗಿರುವಂತೆ ಮತ್ತು ಹಿಂಸೆಗೆ ಗುರಿಯಾಗುವಂತೆ ಮಾಡುತ್ತದೆಂದು ವಿಲಿಯಂ ಜೂಲಿಯಸ್ ವಿಲ್ಸನ್ ಸೂಚಿಸಿದ್ದಾರೆ.
ಸ್ಟ್ರೈನ್(ಒತ್ತಡ) ಸಿದ್ಧಾಂತ (ಸಾಮಾಜಿಕ ವರ್ಗ)
ಬದಲಾಯಿಸಿಅಮೆರಿಕಾದ ಸಮಾಜ ಶಾಸ್ತ್ರಜ್ಞ ರಾಬರ್ಟ್ ಮೆರ್ಟನ್ ಅಭಿವೃದ್ಧಿಪಡಿಸಿದ ಸ್ಟ್ರೈನ್ ಸಿದ್ಧಾಂತವು (ಮೆರ್ಟೋನಿಯನ್ ಅನೋಮೀ ಎಂದೂ ಕರೆಯಲಾಗುತ್ತದೆ), ಮುಖ್ಯ ಸಂಸ್ಕೃತಿಯು ವಿಶೇಷವಾಗಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಅವಕಾಶ, ಸ್ವಾತಂತ್ರ್ಯ ಮತ್ತು ಯಶಸ್ಸಿನ ಕನಸುಗಳೊಂದಿಗೆ ಸಂಪೂರ್ಣಗೊಳ್ಳುತ್ತದೆಂದು ಸೂಚಿಸುತ್ತದೆ; ಇದನ್ನು ಮರ್ಟನ್ ಅಮೆರಿಕನ್ ಡ್ರೀಮ್ ಎಂಬುದಾಗಿ ಮಾಡಿದ್ದಾರೆ. ಹೆಚ್ಚಿನ ಜನರು ಈ ಕನಸಿನ ಪಾಲುದಾರಿಕೆಯನ್ನು ಕೊಂಡುಕೊಳ್ಳುತ್ತಾರೆ. ಆದ್ದರಿಂದ ಇದು ಪ್ರಬಲ ಸಾಂಸ್ಕೃತಿಕ ಮತ್ತು ಮಾನಸಿಕ ಪ್ರೇರಕ ಶಕ್ತಿಯಾಗುತ್ತದೆ. ಮರ್ಟನ್ ಅನೋಮೀ ಎಂಬ ಪದವನ್ನೂ ಬಳಸಿದರು. ಆದರೆ ಇದು ಅವರಿಗೆ ದರ್ಖೈಮ್‌ಗಿಂತ ಸ್ವಲ್ಪ ಭಿನ್ನವಾಗಿ ತೋರಿತು. ಮರ್ಟನ್ ಆ ಪದವು, ಸಮಾಜವು ಅದರ ನಾಗರಿಕರಿಂದ ಏನನ್ನು ನಿರೀಕ್ಷಿಸುತ್ತದೆ ಮತ್ತು ಆ ನಾಗರಿಕರು ನಿಜವಾಗಿ ಏನನ್ನು ಸಾಧಿಸುತ್ತಾರೆ ಎಂಬುದರ ನಡುವಿನ ದ್ವಿಭಜನೆ ಎಂಬ ಅರ್ಥವನ್ನು ಕೊಡುತ್ತದೆಂದು ಹೇಳಿದ್ದಾರೆ. ಆದ್ದರಿಂದ ಸದವಕಾಶಗಳ ಸಾಮಾಜಿಕ ರಚನೆಯು ಅಸಮವಾಗಿದ್ದರೆ ಮತ್ತು ಕನಸನ್ನು ಕೈಗೂಡಿಸಿಕೊಳ್ಳುವುದನ್ನು ತಡೆಗಟ್ಟಿದರೆ, ಅವುಗಳಲ್ಲಿ ಕೆಲವು ಅದನ್ನು ಸಾಧಿಸುವುದಕ್ಕಾಗಿ ನ್ಯಾಯ ವಿರುದ್ಧ(ಅಪರಾಧ)ವಾಗಿ ಬದಲಾಗುತ್ತವೆ. ಇತರೆಗಳು ವಕ್ರ ಉಪಸಂಸ್ಕೃತಿಗಳಾಗಿ (ಗ್ಯಾಂಗ್ ಸದಸ್ಯರು, "ಅಲೆಮಾರಿಗಳು": ನಗರದ ಮನೆಮಠವಿಲ್ಲದ ಕುಡುಕರು ಮತ್ತು ಮಾದಕ ವಸ್ತುಗಳ ವ್ಯಸನಿಗಳು) ಬೆಳೆಯುತ್ತವೆ.[೧೫]..
ಉಪಸಂಸ್ಕೃತಿಯ ಸಿದ್ಧಾಂತ
ಬದಲಾಯಿಸಿಚಿಕಾಗೊ ಕೇಂದ್ರ ಮತ್ತು ಸ್ಟ್ರೈನ್ ಸಿದ್ಧಾಂತವನ್ನು ಅನುಸರಿಸಿದ ಹಾಗೂ ಎಡ್ವಿನ್ ಸುದರ್‌ಲ್ಯಾಂಡ್‌ನ ವೈಲಕ್ಷಣದ ಸಂಬಂಧದ ಕಲ್ಪನೆಯನ್ನು ಅವಲಂಬಿಸಿದ ಉಪಸಂಸ್ಕೃತಿಯ ತಾತ್ತ್ವಿಕ ಸಿದ್ಧಾಂತಿಗಳು, ಜೀವನಕ್ಕೆ ತಮ್ಮದೇ ಆದ ಸ್ವಂತ ಮೌಲ್ಯ ಮತ್ತು ಅರ್ಥವನ್ನು ನೀಡಲು ಸಮಾಜದ ಮುಖ್ಯಭಾಗದಿಂದ ಛಿದ್ರಗೊಳ್ಳುವ ಸಣ್ಣ ಉಪಸಂಸ್ಕೃತಿಯ ಗುಂಪುಗಳನ್ನು ಕೇಂದ್ರೀಕರಿಸಿದರು. ಆಲ್ಬರ್ಟ್ K. ಕೊಹೆನ್ ಅನೋಮೀ ಸಿದ್ಧಾಂತವನ್ನು ಫ್ರಾಡ್‌ನ ಪ್ರತಿಕ್ರಿಯೆ ರಚನೆ ಕಲ್ಪನೆಯೊಂದಿಗೆ ಸೇರಿಸಿದ್ದಾರೆ ಹಾಗೂ ಕೆಳ ವರ್ಗದ ಯುವಜನಾಂಗದ ಅಪರಾಧ ಪ್ರವೃತ್ತಿಯು ಮಧ್ಯಮ ವರ್ಗದ ಸಾಮಾಜಿಕ ರೂಢಿಯ ವಿರುದ್ಧದ ಪ್ರತಿಕ್ರಿಯೆಯಾಗಿರುತ್ತದೆಂದು ಸೂಚಿಸಿದ್ದಾರೆ.[೧೬] ವಿಶೇಷವಾಗಿ ಸದವಕಾಶಗಳು ವಿರಳವಾಗಿರುವ ಬಡ ಪ್ರದೇಶಗಳ ಕೆಲವು ಯುವಜನಾಂಗದವರು ಆ ಸ್ಥಳಗಳಿಗೆ ನಿರ್ದಿಷ್ಟವಾಗಿರುವ ಸಾಮಾಜಿಕ ರೂಢಿಗಳನ್ನು ಆರಿಸಿಕೊಳ್ಳಬಹುದು, ಅವು ಅಧಿಕಾರಕ್ಕೆ ಅಗೌರವ ತೋರಿಸುವುದನ್ನು ಮತ್ತು ಕಷ್ಟಸಾಧ್ಯತೆಯನ್ನು ಒಳಗೊಳ್ಳಬಹುದು. ಯುವಜನಾಂಗವು ವಕ್ರ ಉಪಸಂಸ್ಕೃತಿಯ ರೂಢಿಗಳನ್ನು ಅನುಸರಿಸಿದಾಗ ಅಪರಾಧದ ಚಟುವಟಿಕೆಗಳು ಸಂಭವಿಸಬಹುದು.[೧೭] ರಿಚಾರ್ಡ್ ಕ್ಲೊವರ್ಡ್ ಮತ್ತು ಲಾಯ್ಡ್ ಓಹ್ಲಿನ್ ಕೆಳ ವರ್ಗದ ಜನರಿಗೆ ಭೇದ ತೋರಿಸುವ ಅವಕಾಶಗಳಿರುವುದರಿಂದಾಗಿ ಅವರಲ್ಲಿ ಅಪರಾಧ ಪ್ರವೃತ್ತಿಯು ಬೆಳೆಯುತ್ತದೆಂದು ಸೂಚಿಸಿದ್ದಾರೆ.[೧೮] ಅಂತಹ ಯುವಜನರು ಅಪರಾಧ ಕಾರ್ಯಗಳನ್ನು ಮಾಡಲು ಪ್ರಚೋದನೆಯನ್ನು ಪಡೆಯುತ್ತಾರೆ. ಅವರು ನ್ಯಾಯ ವಿರುದ್ಧ ಮಾರ್ಗಗಳನ್ನು ಆರಿಸಿಕೊಳ್ಳುತ್ತಾರೆ. ಅವು ಅವರಿಗೆ ಲಭ್ಯಯಿರುವ ಕನಿಷ್ಠ-ವೇತನ-ನೀಡುವ ಉದ್ಯೋಗಗಳಂತಹ ಕಾನೂನು ಸಮ್ಮತ ಆಯ್ಕೆಗಳಲ್ಲಿ ಸಾಂಪ್ರದಾಯಿಕದ ಬದಲಿಗೆ ಹೆಚ್ಚು ಲಾಭದಾಯಕ ಆರ್ಥಿಕ ಪ್ರಯೋಜನಗಳನ್ನು ಒದಗಿಸುತ್ತವೆ.[೧೮] ಬ್ರಿಟಿಷ್ ಉಪಸಂಸ್ಕೃತಿಯ ತಾತ್ತ್ವಿಕ ಸಿದ್ಧಾಂತಿಗಳು, ಕೆಲವು ಅಪರಾಧ ಕಾರ್ಯಗಳನ್ನು ಕೆಳ ವರ್ಗದವರ ಸಮಸ್ಯೆಗಳಿಗೆ 'ಕಾಲ್ಪನಿಕ ಪರಿಹಾರ'ಗಳೆಂದು ಪರಿಗಣಿಸುವ ವರ್ಗಗಳ ಸಮಸ್ಯೆಯ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ. ವಯಸ್ಕರ ಮೇಲ್ವಿಚಾರಣೆಯಡಿಯಲ್ಲಿ ಗ್ಯಾಂಗು ಮುಖಂಡರ ನಡುವಿನ ಪರಸ್ಪರ ಕ್ರಿಯೆಯ ಪ್ರಭಾವ ಮತ್ತು ಗ್ಯಾಂಗುಗಳ ಬಗ್ಗೆ ಚಿಕಾಗೊ ಕೇಂದ್ರವು ಹೆಚ್ಚುವರಿ ಅಧ್ಯಯನವೊಂದನ್ನು ನಡೆಸಿತು. ರೇಮಂಡ್ D. ಗ್ಯಾಸ್ಟಿಲ್‌ರಂತಹ ಸಮಾಜ ಶಾಸ್ತ್ರಜ್ಞರು ಹಿಂಸಾದಾಯಕ ಅಪರಾಧ ಪ್ರಮಾಣಗಳ ಮೇಲೆ ದಕ್ಷಿಣದ ಗೌರವಾರ್ಹ ಸಂಸ್ಕೃತಿಯ ಪರಿಣಾಮದ ಬಗ್ಗೆ ಪರಿಶೋಧಿಸಿದರು.[೧೯]
ವೈಯಕ್ತಿಕ ಸಿದ್ಧಾಂತಗಳು
ಬದಲಾಯಿಸಿವಿಶೇಷ ಲಕ್ಷಣದ ಸಿದ್ಧಾಂತಗಳು
ಬದಲಾಯಿಸಿಸಾಮಾನ್ಯವಾಗಿ ಬಾಲ್ಯದಲ್ಲಿ ಮಕ್ಕಳು ಪೋಷಕರಿಂದ ಅಥವಾ ಸಮಾನ ವಯಸ್ಕರಿಂದ ಪಾಶವೀಕರಣಕ್ಕೆ ಒಳಗಾಗಿದ್ದರೆ ಅವರು ಯೌವನಾವಸ್ಥೆಯಲ್ಲಿ ಹೇಗೆ ಹಿಂಸಾದಾಯಕ ಅಪರಾಧಗಳನ್ನು ಮಾಡುತ್ತಾರೆಂಬುದರ ಬಗ್ಗೆ ಅಪರಾಧ ಶಾಸ್ತ್ರಜ್ಞ ಲೊನ್ನೀ ಅಥೆನ್ಸ್ ಸಿದ್ಧಾಂತವೊಂದನ್ನು ಅಭಿವೃದ್ಧಿಪಡಿಸಿದರು. ರಿಚಾರ್ಡ್ ರೋಡ್ಸ್‌ನ ವೈ ದೆ ಕಿಲ್ , ಅಪರಾಧಿಯ ಹಿನ್ನೆಲೆಯಲ್ಲಿ ಮನೆಯ ಮತ್ತು ಸಮಾಜದ ಹಿಂಸೆಯ ಬಗೆಗಿನ ಅಥೆನ್ಸ್‌ನ ವೀಕ್ಷಣೆಗಳ ಬಗ್ಗೆ ವಿವರಿಸುತ್ತದೆ. ಅಥೆನ್ಸ್ ಮತ್ತು ರೋಡ್ಸ್ ಇಬ್ಬರೂ ಆನುವಂಶಿಕ ಲಕ್ಷಣ ಸಿದ್ಧಾಂತವನ್ನು ಅಲ್ಲಗಳೆಯುತ್ತಾರೆ.[೨೦]
ನಿಯಂತ್ರಣ ಸಿದ್ಧಾಂತ
ಬದಲಾಯಿಸಿಮತ್ತೊಂದು ಸಾಧನೆಯನ್ನು ಸಾಮಾಜಿಕ ಕಟ್ಟುಪಾಡು ಅಥವಾ ಸಾಮಾಜಿಕ ನಿಯಂತ್ರಣ ಸಿದ್ಧಾಂತದಿಂದ ಮಾಡಲಾಗಿದೆ. ಜನರು ಅಪರಾಧಗಳನ್ನು ಮಾಡಲು ಕಾರಣವಾಗುವ ಅಂಶಗಳ ಬಗ್ಗೆ ಗಮನ ಹರಿಸುವ ಬದಲಿಗೆ ಈ ಸಿದ್ಧಾಂತಗಳು ಜನರು ಏಕೆ ಅಪರಾಧಿಗಳಾಗುವುದಿಲ್ಲ ಎಂಬುದನ್ನು ವಿವರಿಸಲು ಪ್ರಯತ್ನಿಸುತ್ತವೆ. ಟ್ರಾವಿಸ್ ಹಿರ್ಸ್ಚಿ ನಾಲ್ಕು ವಿಶಿಷ್ಟ ಲಕ್ಷಣಗಳನ್ನು ಗುರುತಿಸಿದ್ದಾರೆ: "ಇತರರ ಬಗ್ಗೆ ಒಲವು ಹೊಂದಿರುವುದು", "ನಿಯಮಗಳ ನೈತಿಕ ನ್ಯಾಯಸಮ್ಮತತೆಯಲ್ಲಿ ನಂಬಿಕೆಯನ್ನು ಹೊಂದಿರುವುದು", "ಸಾಧನೆಗೈಯಲು ಕಟ್ಟುಬೀಳುವುದು" ಮತ್ತು "ಸಾಂಪ್ರದಾಯಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು".[೨೧] ಈ ವಿಶಿಷ್ಟ ಲಕ್ಷಣಗಳನ್ನು ಹೆಚ್ಚು ಹೊಂದಿದಂತೆ ಜನರು ರೂಢಿಯ ನಡವಳಿಕೆಯನ್ನು ಬಿಟ್ಟು ಬೇರೆ ರೀತಿ ನಡೆದುಕೊಳ್ಳುವ (ಅಥವಾ ಅಪರಾಧಿಗಳಾಗುವ) ಸಂಭವವು ಕಡಿಮೆ ಇರುತ್ತದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಆ ಅಂಶಗಳು ವ್ಯಕ್ತಿಯಲ್ಲಿ ಇಲ್ಲದಿದ್ದರೆ, ಆ ವ್ಯಕ್ತಿಯು ಅಪರಾಧಿಯಾಗುವ ಸಂಭವವು ಹೆಚ್ಚಿರುತ್ತದೆ. ಹಿರ್ಸ್ಚಿ ಈ ಸಿದ್ಧಾಂತವನ್ನು ವಿಸ್ತರಿಸಿ, ಕಡಿಮೆ ಆತ್ಮಸಂಯಮವನ್ನು ಹೊಂದಿರುವ ವ್ಯಕ್ತಿಯು ಅಪರಾಧಿಯಾಗುವ ಸಂಭವವು ಹೆಚ್ಚಿರುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.[೨೨] ಒಂದು ಸರಳ ಉದಾಹರಣೆ: ವ್ಯಕ್ತಿಯು ದೊಡ್ಡ ಓಡುದೋಣಿಯನ್ನು ಖರೀದಿಸಲು ಬಯಸುತ್ತಾನೆ, ಆದರೆ ಒಂದನ್ನು ಖರೀದಿಸುವ ಹಣವನ್ನೂ ಹೊಂದಿರುವುದಿಲ್ಲ. ಆ ವ್ಯಕ್ತಿಯು ಸ್ವನಿಯಂತ್ರಣವನ್ನು ಹೊಂದಿರದಿದ್ದರೆ, ಆ ಓಡುದೋಣಿಯನ್ನು ಪಡೆಯಲು ಅಕ್ರಮ ಮಾರ್ಗವನ್ನು ಪ್ರಯತ್ನಿಸಬಹುದು; ಅದೇ ಹೆಚ್ಚು ಸ್ವನಿಯಂತ್ರಣವನ್ನು ಹೊಂದಿರುವವರು ಕಾಯುತ್ತಾರೆ ಅಥವಾ ಅದನ್ನು ನಿರಾಕರಿಸುತ್ತಾರೆ. ಸಮಾನ ವಯಸ್ಕರು, ಪೋಷಕರು ಮತ್ತು ಇತರರೊಂದಿಗಿನ ಸಾಮಾಜಿಕ ಸಂಬಂಧವು ಕಡಿಮೆ ಆತ್ಮ-ಸಂಯಮದ ಮೇಲೆ ವಿರುದ್ಧ ಪರಿಣಾಮವನ್ನು ಹೊಂದಿರುತ್ತದೆ. ಕಡಿಮೆ ಸಾಮಾಜಿಕ-ಆರ್ಥಿಕ ಸ್ಥಾನಮಾನವನ್ನು ಹೊಂದಿರುವ ಕುಟುಂಬಗಳಲ್ಲಿ, ಅಪರಾಧಿ ಮಕ್ಕಳನ್ನು ಹೊಂದಿರುವ ಕುಟುಂಬಗಳನ್ನು ಅಪರಾಧಿ ಮಕ್ಕಳನ್ನು ಹೊಂದಿರದ ಕುಟುಂಬಗಳಿಂದ ಭೇದ ಕಲ್ಪಿಸುವ ಒಂದು ಅಂಶವೆಂದರೆ ಪೋಷಕರು ಅಥವಾ ಸಂರಕ್ಷಿಕರು ತೋರಿಸುವ ನಿಯಂತ್ರಣವಾಗಿದೆ.[೨೩] ಇದಕ್ಕೆ ಹೆಚ್ಚುವರಿಯಾಗಿ, ಮಾಟ್ಜ ಮತ್ತು ಸೈಕ್ಸ್ ಮೊದಲಾದ ತಾತ್ತ್ವಿಕ ಸಿದ್ಧಾಂತಿಗಳು, ಅಪರಾಧಿಗಳು ನಿಷ್ಪರಿಣಾಗೊಳಿಸುವ ತಂತ್ರಗಳ ಮೂಲಕ ಆಂತರಿಕ ನೈತಿಕ ಮತ್ತು ಸಾಮಾಜಿಕ ವರ್ತನೆಯ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ನಿಷ್ಪರಿಣಾಮಗೊಳಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆಂದು ವಾದಿಸಿದ್ದಾರೆ.
ಸಾಂಕೇತಿಕ ಪರಸ್ಪರ ಕ್ರಿಯೆ
ಬದಲಾಯಿಸಿಸಾಂಕೇತಿಕ ಪರಸ್ಪರ ಕ್ರಿಯೆಯು ಎಡ್ಮಂಡ್ ಹಸ್ಸರ್ಲ್ ಮತ್ತು ಜಾರ್ಜ್ ಹರ್ಬರ್ಟ್ ಮೀಡ್‌ನ ಮನೋವಿಕಾಸವಿಜ್ಞಾನವನ್ನು ಮಾತ್ರವಲ್ಲದೆ ಉಪಸಂಸ್ಕೃತಿ ಸಿದ್ಧಾಂತ ಮತ್ತು ಸಂಘರ್ಷ ಸಿದ್ಧಾಂತವನ್ನು ಆಧರಿಸಿದೆ.[೨೪] ಈ ಚಿಂತನೆಯ ಕೇಂದ್ರವು ಒಂದು ಕಡೆಯಲ್ಲಿ ಪ್ರಬಲ ರಾಜ್ಯ, ಮಾಧ್ಯಮ ಮತ್ತು ಸಾಂಪ್ರದಾಯಿಕ ಆಳುವ ಗಣ್ಯರ ನಡುವಿನ ಸಂಬಂಧವನ್ನು ಹಾಗೂ ಮತ್ತೊಂದು ಕಡೆಯಲ್ಲಿ ಕಡಿಮೆ ಸಾಮರ್ಥ್ಯದ ಗುಂಪುಗಳನ್ನು ಕೇಂದ್ರಕರಿಸಿರುತ್ತದೆ. ಪ್ರಬಲ ಗುಂಪುಗಳು ಕಡಿಮೆ ಸಾಮರ್ಥ್ಯದ ಗುಂಪುಗಳ ಮಹತ್ವವನ್ನು ಉಂಟುಮಾಡುವ ಕ್ರಿಯೆಯಲ್ಲಿ 'ಪ್ರಾಮುಖ್ಯತೆ'ಯನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಕೆಲವೊಮ್ಮೆ ಪ್ರಬಲ ಗುಂಪುಗಳು ಅವುಗಳ ಪ್ರಾಮುಖ್ಯತೆಯನ್ನು ಕಡಿಮೆ ಸಾಮರ್ಥ್ಯದ ಗುಂಪುಗಳ ಮೇಲೆ ವಿಧಿಸುತ್ತವೆ. ಆದ್ದರಿಂದ ಅವು ಕಿರಿಯ ಅಪರಾಧಿ ಯುವಜನರನ್ನು ಅಪರಾಧಿಗಳೆಂದು ಸೂಚಿಸಲು ಸಮರ್ಥವಾಗಿರುತ್ತವೆ. ಆ ಯುವಜನರು ಈ ಸೂಚನೆಯನ್ನು ಪಡೆಯಲು ಸಿದ್ಧರಾಗಿರುತ್ತಾರೆ, ಅಪರಾಧದಲ್ಲಿ ಅತಿ ಸುಲಭದಲ್ಲಿ ಆಸಕ್ತರಾಗುತ್ತಾರೆ ಹಾಗೂ ಪ್ರಬಲ ಗುಂಪುಗಳ 'ಸ್ವಂತ ಬೇಡಿಕೆಯನ್ನು ಪೂರೈಸುವ ಭವಿಷ್ಯ'ದಲ್ಲಿ ಕಾರ್ಯಭಾಗಿಗಳಾಗುತ್ತಾರೆ. ಈ ಸಿದ್ಧಾಂತಗಳ ನಂತರದ ಅಭಿವೃದ್ಧಿಗಳನ್ನು ಹೊವಾರ್ಡ್ ಬೆಕರ್ ಮತ್ತು ಎಡ್ವಿನ್ ಲೆಮರ್ಟ್ ಮಧ್ಯ 20ನೇ ಶತಮಾನದಲ್ಲಿ ಮಾಡಿದರು.[೨೫] ಸ್ಟ್ಯಾನ್ಲಿ ಕೊಹೆನ್ "ನೈತಿಕ ಭಯ" ಎಂಬ ಕಲ್ಪನೆಯನ್ನು ಅಭಿವೃದ್ಧಿಪಡಿಸಿದರು (ಅದ್ಭುತ ಘಟನೆಗೆ ಸಮಾಜದ ಪ್ರತಿಕ್ರಿಯೆಯನ್ನು ವಿವರಿಸುತ್ತದೆ, ಎರಡನೇ ವಿಶ್ವ ಸಮರದ ನಂತರದ ಯುವಜನರ ಸಂಸ್ಕತಿಗಳು (ಉದಾ. UKಯಲ್ಲಿ 1964ರಲ್ಲಿ ಮೋಡ್ಸ್ ಆಂಡ್ ರಾಕರ್ಸ್ ), AIDS ಮತ್ತು ಫುಟ್ಬಾಲ್ ಗೂಂಡಾಗಿರಿ ಮೊದಲಾದ ಸಾಮಾಜಿಕ ಘಟನೆಯ ಬಗ್ಗೆ ಎಚ್ಚರಿಕೆ ನೀಡುತ್ತದೆ).
ತರ್ಕಬದ್ಧ ಆಯ್ಕೆಯ ಸಿದ್ಧಾಂತ
ಬದಲಾಯಿಸಿತರ್ಕಬದ್ಧ ಆಯ್ಕೆಯ ಸಿದ್ಧಾಂತವು ಕೇಸರೆ ಬೆಕ್ಕಾರಿಯಾನ ಪ್ರಯೋಜನವಾದಿ, ಕ್ಲಾಸಿಕಲ್ ಸ್ಕೂಲ್ ತತ್ತ್ವಚಿಂತನೆಗಳನ್ನು ಆಧರಿಸಿದೆ, ಅವು ಜೆರೆಮಿ ಬೆಂಥ್ಯಾಮ್‌ನಿಂದ ಜನಪ್ರಿಯಗೊಂಡಿವೆ. ಶಿಕ್ಷೆಯು, ಅಪರಾಧಕ್ಕೆ ಖಂಡಿತವಾಗಿದ್ದರೆ, ಶೀಘ್ರದಲ್ಲಾದರೆ ಮತ್ತು ಅನುಗುಣವಾಗಿದ್ದರೆ, ಅಪರಾಧವನ್ನು ತಡೆಯುತ್ತದೆಂದು ಅವರು ವಾದಿಸಿದ್ದಾರೆ. ಅದರ ಅಪಾಯಗಳು ಅಪರಾಧಿಯ ಸಂಭಾವ್ಯ ಪ್ರಯೋಜನಗಳನ್ನು ಮೀರಿಸುತ್ತವೆ. ದೈ ಡೆಲಿಟ್ಟಿ ಇ ಡೆಲ್ಲೆ ಪೆನೆ ಯಲ್ಲಿ (ಆನ್ ಕ್ರೈಮ್ಸ್ ಆಂಡ್ ಪನಿಶ್ಮೆಂಟ್ಸ್, 1763–1764) ಬೆಕ್ಕಾರಿಯಾ ಒಂದು ತರ್ಕಬದ್ಧ ದಂಡನಶಾಸ್ತ್ರವನ್ನು ವಾದಿಸಿದ್ದಾರೆ. ಬೆಕ್ಕಾರಿಯಾ ಶಿಕ್ಷೆಯನ್ನು ಅಪರಾಧಕ್ಕೆ ಅವಶ್ಯಕ ಕಾನೂನಿನ ಬಳಕೆ ಎಂದು ನಿರೂಪಿಸಿದ್ದಾರೆ. ಆದ್ದರಿಂದ ತೀರ್ಪು ಅಪರಾಧಿಯ ಶಿಕ್ಷೆಯನ್ನು ಕಾನೂನಿಗೆ ಸರಿಹೊಂದಿಸುವುದಾಗಿತ್ತು. ಬೆಕ್ಕಾರಿಯಾ ಅಪರಾಧ ಮತ್ತು ಪಾಪದ ನಡುವೆ ವ್ಯತ್ಯಾಸವಿದೆಯೆಂದು ಹೇಳಿದ್ದಾರೆ ಹಾಗೂ ಮರಣ ದಂಡನೆ ಮಾತ್ರವಲ್ಲದೆ ಚಿತ್ರಹಿಂಸೆ ನೀಡುವುದು ಮತ್ತು ದಯಾಹೀನವಾಗಿ ನಡೆಸಿಕೊಳ್ಳುವುದು ತರ್ಕಬದ್ಧ ತಡೆಗಳಲ್ಲವೆಂದು ವಾದಿಸಿದ್ದಾರೆ. ಈ ತತ್ತ್ವಚಿಂತನೆಯ ಸ್ಥಾನವನ್ನು ಪ್ರತ್ಯಕ್ಷೈಕ ಪ್ರಮಾಣವಾದಿ ಮತ್ತು ಚಿಕಾಗೊ ಕೇಂದ್ರವು ಆಕ್ರಮಿಸಿಕೊಂಡಿತು ಹಾಗೂ ಜೇಮ್ಸ್ Q. ವಿಲ್ಸನ್‌ನ ಬರಹಗಳು, ಗ್ಯಾರಿ ಬೆಕರ್‌ನ 1965ರ ಬರಹ "ಕ್ರೈಮ್ ಆಂಡ್ ಪನಿಶ್ಮೆಂಟ್"[೨೬] ಮತ್ತು ಜಾರ್ಜ್ ಸ್ಟಿಗ್ಲರ್‌ನ 1970ರ ಲೇಖನ "ದಿ ಆಪ್ಟಿಮಮ್ ಎನ್ಫೋರ್ಸ್ಮೆಂಟ್ ಆಫ್ ಲಾಸ್"[೨೭] ಒಂದಿಗೆ ಇದು 1970ರವರೆಗೆ ಪುನಶ್ಚೈತನ್ಯಗೊಳ್ಳಲಿಲ್ಲ. ಅಪರಾಧಿಗಳು ಅಪರಾಧವನ್ನು ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವಾಗ ಮತ್ತು ಲಾಭ ನೀಡುವ ವಿಷಯಗಳ ಬಗ್ಗೆ ಯೋಚಿಸುವಾಗ ಇತರರಂತೆ ಹಾನಿಗಳು/ಅಪಾಯಗಳನ್ನು ಎದುರಿಸುತ್ತಾರೆ ಮತ್ತು ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ತರ್ಕಬದ್ಧ ಆಯ್ಕೆಯ ಸಿದ್ಧಾಂತವು ವಾದಿಸುತ್ತದೆ.[೨೮] ಅಪರಾಧಿಗಳು ಸಮಯ, ಸ್ಥಳ ಮತ್ತು ಇತರ ಪರಿಸ್ಥಿತಿಯ ಅಂಶಗಳನ್ನು ಪರಿಗಣಿಸುವ ಮೂಲಕ ಅಪರಾಧದ ಅಪಾಯಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಾರೆ.[೨೮] ಉದಾಹರಣೆಗಾಗಿ, ಹೆಚ್ಚಿನವರು ಹೆಚ್ಚು ನೈತಿಕ ಮತ್ತು ನಿಯಮಕ್ಕನುಗುಣವಾದ ಇತಿಮಿತಿಯಲ್ಲಿ ಕಾರ್ಯನಿರ್ವಹಿಸುತ್ತಾರೆಂದು ಗ್ಯಾರಿ ಬೆಕರ್ ಅಂಗೀಕರಿಸಿದ್ದಾರೆ. ಆದರೆ ಅಪರಾಧಿಗಳು ಅವರ ಅಪರಾಧದ ಪ್ರಯೋಜನಗಳು ಅಪಾಯದ ಸಂಭವ, ಅಪರಾಧ ನಿರ್ಣಯ, ಶಿಕ್ಷೆ ಮೊದಲಾದ ಹಾನಿಯನ್ನು ಮತ್ತು ಅವರ ಪ್ರಸ್ತುತದ ಸದವಕಾಶಗಳನ್ನು ಮೀರಿಸುತ್ತದೆಯೇ ಎಂಬುದನ್ನು ತರ್ಕಬದ್ಧವಾಗಿ ನೋಡುತ್ತಾರೆ. ಸಾರ್ವಜನಿಕ ನೀತಿಯ ದೃಷ್ಟಿಕೋನದಿಂದ, ದಂಡವನ್ನು ಹೆಚ್ಚಿಸುವುದರ ಹಾನಿಯು ಎಚ್ಚರದ ಕಾವಲನ್ನು ಹೆಚ್ಚಿಸುವುದರ ಹಾನಿಗಿಂತ ಪರಿಣಾಮಕಾರಿಯಾಗಿಲ್ಲದರಿಂದ ದಂಡವನ್ನು ಏರಿಸುವುದು ಮತ್ತು ಎಚ್ಚರದ ಕಾವಲನ್ನು ಕಡಿಮೆ ಮಾಡುವುದು ಒಂದು ಉತ್ತಮ ನಿಯಮವೆಂದು ತೀರ್ಮಾನಿಸಬಹುದು. ಈ ದೃಷ್ಟಿಕೋನದೊಂದಿಗೆ, ಅಪರಾಧವನ್ನು ತಡೆಯುವ ಅಥವಾ ಕಡಿಮೆ ಮಾಡುವ ಕಾರ್ಯಗಳು ಅಪರಾಧವೆಸಗಲು ಗುರಿಯನ್ನು ಬಿಗಿಗೊಳಿಸುವಂತಹ ಹೆಚ್ಚಿನ ಪ್ರಯತ್ನದ ಅಗತ್ಯವಿರುತ್ತದೆಂದು ಸೂಚಿಸುತ್ತವೆ.[೨೯] ಎಚ್ಚರದ ಕಾವಲು, ಪೋಲೀಸ್ ಅಥವಾ ಭದ್ರತಾಪಾಲಕರ ಅಸ್ತಿತ್ವ, ಬೀದಿ ದೀಪಗಳ ವ್ಯವಸ್ಥೆ ಮತ್ತು ಇತರ ಪರಿಮಿತಿಗಳ ಮೂಲಕ ರಕ್ಷಿಸಿಕೊಳ್ಳುವ ಮತ್ತು ಸಿಕ್ಕಿಬೀಳುವ ಅಪಾಯದ ಏರಿಕೆಯು ಅಪರಾಧವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿರುತ್ತದೆಂದೂ ತರ್ಕಬದ್ಧ ಆಯ್ಕೆಯ ಸಿದ್ಧಾಂತಗಳು ನಿರೂಪಿಸುತ್ತವೆ.[೨೯] ಈ ಸಿದ್ಧಾಂತ ಮತ್ತು ಅಪರಾಧ-ಶಾಸ್ತ್ರದಲ್ಲಿ ಬಿಟ್ಟುಬಿಡಲಾದ ಜೆರೆಮಿ ಬೆಂತ್ಯಾಮ್‌ನ ತರ್ಕಬದ್ಧ ಆಯ್ಕೆಯ ಸಿದ್ಧಾಂತದ ಮುಖ್ಯ ವ್ಯತ್ಯಾಸವೆಂದರೆ - ಬೆಂತ್ಯಾಮ್ ಅಪರಾಧವನ್ನು ಸಂಪೂರ್ಣವಾಗಿ ನಿರ್ಮೂಲನಗೊಳಿಸಲು (ಮಂಡಲಾಕಾರದ ಕಾರಾಗೃಹದ ಮೂಲಕ) ಸಾಧ್ಯವೆಂದು ಹೇಳಿದ್ದಾರೆ ಹಾಗೂ ಬೆಕರ್‌ನ ಸಿದ್ಧಾಂತವು ಸಮಾಜಕ್ಕೆ ಅಪರಾಧವನ್ನು ಒಂದು ಮಟ್ಟಕ್ಕಿಂತ ಕೆಳಗೆ ನಾಶಮಾಡಲು ಸಾಧ್ಯವಿಲ್ಲವೆಂದು ಸೂಚಿಸಿದೆ. ಉದಾಹರಣೆಗಾಗಿ, 25%ನಷ್ಟು ಸೂಪರ್‌ರ್ಮಾರ್ಕೆಟ್‌ನ ಉತ್ಪನ್ನಗಳು ಕದಿಯಲ್ಪಟ್ಟರೆ ಈ ದರವನ್ನು 15%ನಷ್ಟಕ್ಕೆ ಕಡಿಮೆ ಮಾಡಲು ತುಂಬಾ ಸುಲಭವಾಗಿರುತ್ತದೆ, ಇದನ್ನು ಮತ್ತೆ 5%ನಷ್ಟಕ್ಕೆ ಇಳಿಸಲು ಇನ್ನಷ್ಟು ಸುಲಭವಾಗಿರುತ್ತದೆ, 3%ಗಿಂತ ಕೆಳಗೆ ಇಳಿಸಲು ಕಷ್ಟಕರವಾಗಿರುತ್ತದೆ ಮತ್ತು ಇದನ್ನು ಶೂನ್ಯಕ್ಕೆ ಇಳಿಸಲು ಹೆಚ್ಚುಕಡಿಮೆ ಅಸಾಧ್ಯವಾಗಿರುತ್ತದೆ. (ಎಚ್ಚರದ ಕಾವಲಿನಲ್ಲಿ ಸೂಪರ್‌ಮಾರ್ಕೆಟ್‌ಗೆ ನಷ್ಟವನ್ನುಂಟುಮಾಡುವ ಕಾರ್ಯವು ಲಾಭವನ್ನು ಮೀರಿಸುತ್ತದೆ). ಪ್ರಯೋಜನ ತತ್ತ್ವ ಮತ್ತು ಸಾಂಪ್ರದಾಯಿಕ ಉದಾರಶೀಲತೆಯ ಗುರಿಗಳನ್ನು, ಹೆಚ್ಚು ಆಧುನಿಕ ಸೂಚನೆಗಳನ್ನು ಪ್ರಾಯೋಗಿಕವಾಗಿ ಅನ್ವಯಿಸುವಷ್ಟು ತಗ್ಗಿಸಬೇಕು ಮತ್ತು ಕಡಿಮೆ ಮಾಡಬೇಕು. ನಿಯೊಲಿಬರಲಿಸಮ್ ಒಂದಿಗೆ ಸಂಬಂಧಿಸಿದ ಅಂತಹ ತರ್ಕಬದ್ಧ ಆಯ್ಕೆಯ ಸಿದ್ಧಾಂತಗಳು ಪರಿಸರ ವಿನ್ಯಾಸದ ಮೂಲಕ ಅಪರಾಧವನ್ನು ತಡೆಗಟ್ಟುವ ಮೂಲವನ್ನು ಹೊಂದಿರುತ್ತವೆ ಹಾಗೂ ಮೈಕ್ ಸುಟ್ಟನ್ (ಅಪರಾಧ ಶಾಸ್ತ್ರಜ್ಞ)ನಿಂದ ಮಾರ್ಕೆಟ್ ರಿಡಕ್ಷನ್ ಅಪ್ರೋಚ್ ಕಳ್ಳತನವಾಗಲು ಆಧಾರವಾಗುತ್ತವೆ.[೩೦] ಇದು ಸರಕುಗಳನ್ನು[೩೧] ಕಳ್ಳತನ ಮಾಡಲು ಮಾರುಕಟ್ಟೆಗಳನ್ನು ಸಜ್ಜುಗೊಳಿಸುವ ಮೂಲಕ ಅಪರಾಧಕ್ಕೆ ಅನುಕೂಲ ಒದಗಿಸುವವರ ಮೇಲೆ ಗಮನ ಕೇಂದ್ರೀಕರಿಸಲು ಪ್ರಯತ್ನಿಸುವವರಿಗಿರುವ ಒಂದು ಸುವ್ಯವಸ್ಥಿತ ಸಾಧನವಾಗಿದೆ. ಇದು ಕಳ್ಳರಿಗೆ ಕಳ್ಳತನ ಮಾಡಲು ಉತ್ತೇಜನ ಒದಗಿಸುತ್ತದೆ.[೩೨]
ನಿಯತಕ್ರಮದ ಕ್ರಿಯಾಶೀಲ ಸಿದ್ಧಾಂತ
ಬದಲಾಯಿಸಿಮಾರ್ಕಸ್ ಫೆಲ್ಸನ್ ಮತ್ತು ಲಾರೆನ್ಸ್ ಕೊಹೆನ್ ಅಭಿವೃದ್ಧಿಪಡಿಸಿದ ನಿಯತಕ್ರಮದ ಕ್ರಿಯಾಶೀಲ ಸಿದ್ಧಾಂತವು ನಿಯಂತ್ರಣ ಅಧ್ಯಯನಗಳನ್ನು ಆಧರಿಸಿದೆ ಮತ್ತು ಅಪರಾಧವನ್ನು ದಿನನಿತ್ಯದ ಜೀವನದಲ್ಲಿ ಕಂಡುಬರುವ ಅಪರಾಧದ ಅವಕಾಶಗಳ ಪರಿಭಾಷೆಯಲ್ಲಿ ವಿವರಿಸುತ್ತದೆ.[೩೩] ಅಪರಾಧ ಅವಕಾಶಕ್ಕೆ ಮೂಲಾಂಶಗಳು ಸಮಯ ಮತ್ತು ಸ್ಥಳದಲ್ಲಿ ಒಮ್ಮುಖವಾಗುವುದು ಅಗತ್ಯವಾಗಿರುತ್ತದೆ, (1) ಪ್ರಚೋದನೆಗೊಳಗಾದ ಅಪರಾಧಿ (2) ಸೂಕ್ತ ಗುರಿ ಅಥವಾ ಅಪರಾಧಕ್ಕೆ ಬಲಿಯಾಗುವವನು (3) ಸಮರ್ಥ ರಕ್ಷಕನ ಕೊರತೆ.[೩೪] ಒಬ್ಬ ರಕ್ಷಕನು ಸ್ಥಳವೊಂದರಲ್ಲಿ, ಉದಾಹರಣೆಗಾಗಿ ರಸ್ತೆಯಲ್ಲಿ, ಭದ್ರತಾಪಾಲಕರನ್ನು ಅಥವಾ ಸಾಮಾನ್ಯ ಪಾದಚಾರಿಗಳನ್ನು ಒಳಗೊಳ್ಳಬಹುದು. ಅವರು ಅಪರಾಧದ ಬಗ್ಗೆ ಸಾಕ್ಷಿ ಹೇಳಬಹುದು ಮತ್ತು ಅದರ ಬಗ್ಗೆ ಪೋಲೀಸ್‌ಗೆ ವರದಿ ಮಾಡಬಹುದು ಅಥವಾ ಮಧ್ಯೆ ಪ್ರವೇಶಿಸಬಹುದು.[೩೪] ನಿಯತಕ್ರಮದ ಕ್ರಿಯಾಶೀಲ ಸಿದ್ಧಾಂತವನ್ನು ಜಾನ್ ಎಕ್ ವಿಸ್ತರಿಸಿದರು. ಆತನು ತೊಂದರೆಯನ್ನುಂಟುಮಾಡುವ ಅಂಶವನ್ನು ಹೋಗಲಾಡಿಸುವ ಬಾಡಿಗೆ ಆಸ್ತಿಯ ನಿರ್ವಾಹಕರಂತಹ 'ಸ್ಥಳ ನಿರ್ವಾಹಕ'ನ ನಾಲ್ಕನೇ ಅಂಶವನ್ನು ಸೇರಿಸಿದರು.[೩೫]
ಆಧುನಿಕ ಸಾಂಸ್ಕೃತಿಕ ಮತ್ತು ವಿಮರ್ಶಾತ್ಮಕ ಅಪರಾಧ-ಶಾಸ್ತ್ರ
ಬದಲಾಯಿಸಿಇಂದಿನ ಸಾಂಸ್ಕೃತಿಕ ಮತ್ತು ವಿಮರ್ಶಾತ್ಮಕ ಅಪರಾಧ ಶಾಸ್ತ್ರಜ್ಞರು[೩೬] ತರ್ಕಬದ್ಧ ಆಯ್ಕೆಯಿಂದ-ಪ್ರೇರೇಪಿಸಲ್ಪಟ್ಟ ಸಿದ್ಧಾಂತಗಳನ್ನು ವಿರೋಧಿಸುವ ಮೂಲಕ ಅವನ್ನು ವಿವರಿಸುತ್ತಾರೆ. ಈ ಸಿದ್ಧಾಂತಗಳು, ವರ್ತನೆಯನ್ನು ಹಾನಿ, ಪ್ರಯೋಜನ, ಅವಕಾಶಗಳು ಮತ್ತು ನಿಯಂತ್ರಿಸುವ ತಂತ್ರಗಳಂತಹ ಹೊಂದಿಕೆಗಳಿಂದ ನಿಯಂತ್ರಿಸಬಹುದಾದ ಭೋಗವಾದದ ಅವಕಾಶವಾದಿಗಳೆಂಬ ಮಾನವರ ಮೂಲತತ್ತ್ವಶಾಸ್ತ್ರದ ಪ್ರಕಾರದ ಸರಳ ಕಲ್ಪನೆಯನ್ನು ಆಧರಿಸಿದೆಯೆಂದು ಅವರು ತಿಳಿಯುತ್ತಾರೆ. ಅಪರಾಧ/ದುಷ್ಕಾರ್ಯದ ಆರಂಭಿಕ ರೋಮಾಂಚಕಾರಿ ಘಟನೆಗಳು[೩೭] ಅಥವಾ ಅಸಾಮರ್ಥ್ಯತೆಗೆ ಮೂಲ-ರಾಜಕೀಯ ವಿರೋಧ ಮತ್ತು ಉದ್ಯೋಗಸ್ಥ ಜೀವನದ ಹುರುಪಿಲ್ಲದ ಏಕತಾನತೆ[೩೮] ಮೊದಲಾದವು ಈಗ ಆಧುನಿಕ ಮಿಶ್ರ ಸಿದ್ಧಾಂತಗಳಿಂದ ಆಕ್ಷೇಪಿಸಲ್ಪಟ್ಟಿವೆ. ಈ ಸಿದ್ಧಾಂತಗಳು ಅಪರಾಧಿಗಳು ಗಿರಾಕಿ ಹಿತರಕ್ಷಣೆಯ ಮೌಲ್ಯ-ವ್ಯವಸ್ಥೆ ಮತ್ತು ಕಲ್ಪನಾಶಕ್ತಿಗಳಲ್ಲಿ ಒಂದುಗೂಡುವ ಮಾರ್ಗಗಳನ್ನು ಪರಿಶೋಧಿಸುತ್ತವೆಂದು ರಾಬರ್ಟ್ ರೈನರ್ ಆತನ ಪುಸ್ತಕ ಲಾ ಆಂಡ್ ಆರ್ಡರ್ ನಲ್ಲಿ[೩೯] ವಾದಿಸಿದ್ದಾರೆ. ಜೊತೆಗೆ ಅವರ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಬಹಿಷ್ಕರಿಸಲ್ಪಡುತ್ತಾರೆ. ಸ್ಟ್ರೈನ್ ಸಿದ್ಧಾಂತದ ಅಂಶಗಳನ್ನು ಸಾಂಸ್ಕೃತಿಕ ಸಿದ್ಧಾಂತ ಮತ್ತು ಸಾಂಕೇತಿಕ ಪರಸ್ಪರ ಕ್ರಿಯೆಯೊಂದಿಗೆ ಒಂದುಗೂಡಿಸಿ ಜಾಕ್ ಯಂಗ್ ದಿ ಎಕ್ಸ್‌ಕ್ಲ್ಯೂಸಿವ್ ಸೊಸೈಟಿ ಯಲ್ಲಿ[೪೦] ಒಳಗೂಡಿಸುವಿಕೆ ಮತ್ತು ಹೊರದೂಡುವಿಕೆಯ ನಡುವಿನ ವಿರೋಧವನ್ನು ನಿರೂಪಿಸಲು ಹಂಬಲ ದ ರೂಪಕೋಕ್ತಿಯನ್ನು ಬಳಸುತ್ತಾರೆ. ಸೈಮನ್ ಹಾಲ್ಸ್‌ವರ್ತ್ ಮತ್ತು ಕೈತ್ ಹೇವರ್ಡ್ ಅವರ ಅನುಕ್ರಮ ಲೇಖನಗಳಾದ ಸ್ಟ್ರೀಟ್ ಕ್ರೈಮ್ [೪೧] ಮತ್ತು ಸಿಟಿ ಲಿಮಿಟ್ಸ್ ನಲ್ಲಿ[೪೨] ಹಾಗೂ ಮುಂದಿನ ಇನ್ನಷ್ಟು ಬರಹಗಳಲ್ಲಿ[೪೩] ಇಂತಹುದೇ ಮಾರ್ಗವನ್ನು ಬಳಸಿಕೊಂಡಿದ್ದಾರೆ. ಅಪರಾಧದ ಹಿಂದಿರುವ ಅಸ್ಥಿರ ಆದರೂ ಆಕ್ರಮಣಶೀಲ, ಸಂಗ್ರಹಶೀಲ ಭಾವನೆಗಳು ಮತ್ತು ಪ್ರೇರಣೆಗಳನ್ನು ವಿವರಿಸಲು ಹೇವರ್ಡ್ ಫ್ರೂಡಿಯನ್ ಪದ 'ನಾರ್ಸಿಸಿಸಮ್'ಅನ್ನು ಮತ್ತೆ ಬಳಕೆಗೆ ತಂದನು. ಕ್ರಿಮಿನಲ್ ಐಡೆಂಟಿಟೀಸ್ ಆಂಡ್ ಕನ್ಸ್ಯೂಮರ್ ಕಲ್ಚರ್ ನಲ್ಲಿ[೪೪] ಸ್ಟೀವ್ ಹಾಲ್, ಸೈಮನ್ ವಿನ್ಲೊ ಮತ್ತು ಕ್ರೈಗ್ ಆಂಕ್ರಮ್, ಆಧುನಿಕ ಮಿಶ್ರ ಸಿದ್ಧಾಂತಗಳನ್ನು ಕೃತಕಗೊಳಿಸುವಿಕೆಯ ಹೊಸ ಮಟ್ಟಕ್ಕೆ ಕೊಂಡೊಯ್ಯಲು ಕಾಂಟಿನೆಂಟಲ್ ತತ್ತ್ವಶಾಸ್ತ್ರ ಮತ್ತು ಲಕೇನಿಯನ್ ಮನೋವಿಶ್ಲೇಷಣೆಯನ್ನು ಆಧಾರವಾಗಿ ಅವಲಂಬಿಸಿದ್ದಾರೆ. ಅವು ಒಳಗೂಡಿಸುವಿಕೆ ಮತ್ತು ಹೊರದೂಡುವಿಕೆಯ ನಡುವಿನ ಕ್ರಿಯಾಶೀಲ ಒತ್ತಡವು ಹೇಗೆ ಆತ್ಮಶ್ಲಾಘನೆಯನ್ನು ಗಳಿಕೆ ಮತ್ತು ಗ್ರಾಹಕ ಸಂಸ್ಕೃತಿಯ ಸ್ಥಾನಮಾನ ಸಂಕೇತಗಳಿಂದ ಸೂಚಿಸುವ ಸಾಮಾಜಿಕ ಭೇದದ ಗುರುತಿಗಾಗಿ ನಡೆಸುವ ಆಕ್ರಮಣಶೀಲ ಹೋರಾಟದಲ್ಲಿ ಜೀವನಾದ್ಯಂತ ಮುಂದುವರಿಸುತ್ತದೆ ಎಂಬುದನ್ನು ವಿವರಿಸುತ್ತವೆ.
ಕಾರಣಗಳು
ಬದಲಾಯಿಸಿಅಪರಾಧಿಗಳ ಬುದ್ಧಿಯ ಮಟ್ಟವನ್ನು ಕುರಿತು ಅತ್ಯಂತ ವಿಸ್ತøತವಾದ ಸಮೀಕ್ಷಣೆಯನ್ನು ಕಾರಲ್ ಮರ್‍ಚೆಸನ್ ಎಂಬ ಮತ್ತೊಬ್ಬ ಅಮೆರಿಕದ ಮನಶ್ಶಾಸ್ತ್ರಜ್ಞ ನಡೆಸಿ ತನ್ನ ಕ್ರಿಮಿನಲ್ ಇನ್‍ಟೆಲಿಜೆನ್ಸ್ (ಕೇಡಿಗಬುದ್ಧಿ) ಎಂಬ ಗ್ರಂಥವನ್ನು ರಚಿಸಿದ. ರಾಜ್ಯದ ಅನೇಕ ಸೆರೆಮನೆಗಳು ಮತ್ತು ಸುಧಾರಣಾಗೃಹಗಳಲ್ಲಿನ ಜನರನ್ನು ಸಂಯುಕ್ತ ಸಂಸ್ಥಾನ ಸೈನ್ಯದ ಆಲ್ಫ್ ಪರೀಕ್ಷೆಗೆ ಒಳಪಡಿಸಿದಾಗ ಆ ದೇಶದ ಸಹಾಯಕ ಸೇನಾದಳದ ಜನರಿಗಿಂತಲೂ ಈ ಸೆರೆಯಾಳುಗಳ ಬುದ್ಧಿ ಸರಾಸರಿ ಲೆಕ್ಕದಲ್ಲಿ ಹೆಚ್ಚಿನ ಮಟ್ಟದಲ್ಲಿದ್ದು ಬುದ್ಧಿಯ ದರ್ಜೆವಾರು ವಿಂಗಡಣೆಯಲ್ಲಿ ಅವರ ಸಂಖ್ಯೆ ಏರುಮಟ್ಟದಲ್ಲಿತ್ತೆಂಬುದನ್ನು ಕಂಡುಕೊಂಡ. ಇನ್ನೂ ಮುಂದೆ ನಡೆಸಿದ ಸಮೀಕ್ಷೆಗಳಿಂದ ಮಂದಬುದ್ಧಿಗೂ ದುರ್ವರ್ತನೆಗೂ ಕಾರ್ಯಕಾರಣಸಂಬಂಧವೇನಾದರೂ ಇದ್ದರೆ ಅದು ಅತ್ಯಲ್ಪಪ್ರಯಾಣದ್ದೆಂಬ ಅಂಶ ಹೊರಪಟ್ಟಿತು. ದಂಡನಗೃಹದಲ್ಲಿರುವ ಅಪರಾಧಿಯೊಬ್ಬ ಮಂದಬುದ್ಧಿಯವನೆಂದು ಕಾಣಬಂದರೆ ಆ ಮಂದಪ್ರಜ್ಞೆಯ ಮನಸ್ಥಿತಿಯೇ ಅಪರಾಧಕ್ಕೆ ಕಾರಣವಾಯಿತೆಂಬ ಭಾವನೆ ನಿರಾಧಾರವಾದದ್ದು. ಒಂದು ವೇಳೆ ಇಂಥ ಸಂಬಂಧವೊಂದು ಇದ್ದರೆ ಅದು ಆತನ ನಡವಳಿಕೆಯ ದಾಖಲೆಗಳಿಂದ ಸಿದ್ಧವಾಗಬೇಕು. ಇಲ್ಲದಿದ್ದರೆ. ಮಾನಸಿಕವಲ್ಲದ ಇತರ ಕಾರಣUಳೂ ಈ ಅಪರಾಧಪ್ರಚೋದನೆಯಲ್ಲಿ ಸೇರಿಕೊಂಡಿವೆಯೆಂದು ಭಾವಿಸುವುದು ನ್ಯಾಯವಾಗುತ್ತದೆ.
ರೋಗಗಳು
ಬದಲಾಯಿಸಿಬುದ್ಧಿಮಾಂದ್ಯ ಅಥವಾ ಮನೋದೌರ್ಬಲ್ಯ ಸ್ವಭಾವತಃ ದುರ್ವರ್ತನೆಗೆ ದಾರಿಮಾಡಿಕೊಡಬೇಕೆಂಬ ಯಾವ ರೀತಿಯ ನಿರ್ಬಂಧವೂ ಕಂಡುಬರುವುದಿಲ್ಲ. ವಸ್ತುತಃ ಮಂದಬುದ್ಧಿಯ ಬಹುಜನಗಳು ಪ್ರಾಯಶಃ ನ್ಯಾಯದ ಕೋಟಲೆಗೆ ಸಿಕ್ಕಿಹಾಕಿಕೊಳ್ಳದಿರುವುದನ್ನು ನೋಡಿದರೆ, ಈ ವಾದಕ್ಕೆ ಯಾವ ಪುಷ್ಟಿಯೂ ದೊರೆಯದು.ಇದೇ ಪ್ರಕಾರವಾಗಿ, ಪ್ರಬಲಮನೋರೋಗ (ಸೈಕೋಸಿಸ್), ನರವ್ಯಾಧಿ (ನ್ಯೂರೋಸಿಸ್) ಮುಂತಾದ ವಿಕಾರಗಳು ದುರ್ನಡತೆಗೆ ಕಾರಣಗಳೆಂಬ ಬಹುಜನರ ನಂಬಿಕೆಗೆ ಯಾವ ಆಧಾರವೂ ಇಲ್ಲ. ನಾಡೊಟ್ಟಿನ ಜನತೆ ಬೆಚ್ಚಿ ಬೀಳುವಷ್ಟು ಹೆಚ್ಚಿನ ಪ್ರಮಾಣದಲ್ಲಿ ಅಪರಾಧಿಗಳು ಇಂಥ ಪ್ರಬಲ ರೋಗಗಳಿಂದ ಪೀಡಿತರಾಗಿದ್ದಾರೆಂಬುದನ್ನು ತೋರಿಸುವುದಕ್ಕಾಗುವುದಿಲ್ಲ. ಮನೋರೋಗ ಚಿಕಿತ್ಸೆ ಅಥವಾ ಮನೋಮಾನಕ ರೂಪದ ಪರೀಕ್ಷೆಗಳನ್ನು ನ್ಯೂಯಾರ್ಕ್ ನಗರದ ಜನರಲ್ ಸೆಷನ್ಸ್ ಕೋರ್ಟಿನ ಸಾವಿರಾರು ಪಾತಕಿಗಳ ವಿಚಾರದಲ್ಲಿ ಹಲವು ವರ್ಷಗಳ ಕಾಲ ನಡೆಸಿ ನೋಡುವಲ್ಲಿ, ಆ ಪೈಕಿ ಎಲ್ಲೋ ಸ್ವಲ್ಪಜನ ಮಾತ್ರ ಪ್ರಬಲಮನೋರೋಗಾದಿ ವ್ಯಾಧಿಗಳಿಂದ ಪೀಡಿತರು ಅಥವಾ ದುರ್ಬಲವಾದ ಮನಸ್ಸುಳ್ಳವರು ಎಂಬುದು ವ್ಯಕ್ತವಾಯಿತು. ಸರಾಸರಿ ಲೆಕ್ಕದಲ್ಲಿ ಈ ವ್ಯಾಧಿ ಮತ್ತು ದೌರ್ಬಲ್ಯಗಳು ಸಾಮಾನ್ಯಜನರಲ್ಲಿ ಕಂಡು ಬರುವ ಪ್ರಮಾಣಕ್ಕಿಂತ ಹೆಚ್ಚಿನ ಅಳತೆಯಲ್ಲಿ ಈ ಪಾತಕಿಗಳಲ್ಲಿ ಕಂಡು ಬರಲಿಲ್ಲ. ಎಚ್.ಡಬ್ಲ್ಯು. ಡನ್‍ಹಾಂ ಎಂಬ ಅಮೆರಿಕದ ಸಮಾಜವಿಜ್ಞಾನಿ ಇಲ್ಲಿನಾಯ್ ಎಂಬಲ್ಲಿನ ಅಪರಾಧಿಗಳನ್ನು ಪರೀಕ್ಷಿಸಿ ಇದೇ ಸಿದ್ಧಾಂತಕ್ಕೆ ಬಂದ. ಇಲ್ಲಿನಾಯ್‍ನ ಅಪರಾಧೀಮತಿವಿಕಲರಿಗಾಗಿ ಏರ್ಪಟ್ಟಿರುವ ಸೆಕ್ಯೂರಿಟಿ ಆಸ್ಪತ್ರೆಯಲ್ಲಿನ ಹುಚ್ಚರ ಪೈಕಿ 1.7% ಭಾಗದಷ್ಟು ಜನ ಮಾತ್ರ ಮಹಾಪರಾಧಗಳನ್ನು ಮಾಡಿದವರಾಗಿದ್ದರು ಮತ್ತು ಇಲ್ಲಿನಾಯ್‍ನ ದಂಡನಾಗಾರಕ್ಕೆ ಕಳಿಸಿದ ಅಪರಾಧಿಗಳ ಪೈಕಿ 1.3% ಭಾಗ ಮಾತ್ರ ಹುಚ್ಚರಾಗಿದ್ದರು. ಅಂದರೆ ಹುಚ್ಚರೆಂದು ಪರಿಗಣಿಸಲ್ಪಟ್ಟವರಲ್ಲಿ ಅಪರಾಧಿಗಳು ತೀರ ಕಡಿಮೆ; ಅಪರಾಧಿಗಳ ಪೈಕಿ ಹುಚ್ಚರೂ ಕಡಿಮೆ.
ಕೇಡಿಗತನ ಅಥವಾ ದುಷ್ಟಪ್ರವೃತ್ತಿ ಆನುವಂಶಿಕವಾದುದೆಂಬುದು ಜನರಲ್ಲಿ ಹರಡಿರುವ ಮತ್ತೊಂದು ನಂಬಿಕೆ. ಅಮೆರಿಕದ ಮನಶ್ಶಾಸ್ತ್ರಜ್ಞ ಆರ್.ಎಲ್. ಡಗ್‍ಡೇಲ್ ಮತ್ತು ಹಿಂದೆ ಪ್ರಸ್ತಾಪಿಸಿರುವ ಹೆನ್ರಿ ಎಚ್. ಗೊಡ್ಡಾರ್ಡ್ ಎಂಬ ವಿದ್ವಾಂಸರು ಈ ನಂಬಿಕೆಯನ್ನು ನಿಜವೆನಿಸುವುದಕ್ಕೆ ಎರಡು ಪ್ರಖ್ಯಾತ ಸಮೀಕ್ಷಣೆಗಳನ್ನು ನಡೆಸಿದರು. ದಿ ಜೂಕ್ಸ್ ಎಂಬ ತನ್ನ ಸಮೀಕ್ಷಣೆಯಲ್ಲಿ ಡಗ್‍ಡೇಲ್ ಕುಖ್ಯಾತ ದುಷ್ಕುಲಗಳ ಸಂತತಿಯವರನ್ನು ಪರೀಕ್ಷಿಸಿದನಲ್ಲದೆ ಬಹಳ ಹಿಂದಿನ ತಲೆಯವರ ತನಕ ಹೋಗಿ ಅವರು ಉದ್ದಕ್ಕೂ ತೀವ್ರವಾದ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ತಂದೊಡ್ಡಿರುವುದನ್ನು ಕಂಡುಕೊಂಡ; ಅಪರಾಧ. ದುರ್ನಡತೆ, ವ್ಯಭಿಚಾರ ಮುಂತಾದುವನ್ನು ಒಳಗೊಂಡಿರುವ ಈ ದುಷ್ಟಚಾಳಿಗಳು ವಂಶಪಾರಂಪರ್ಯವಾಗಿ ಇಳಿದು ಬಂದಿವೆ ಎಂಬ ಸಿದ್ಧಾಂತಕ್ಕೆ ಬಂದ. ದಿ ಕಲ್ಲಿಕಕ್ ಫ್ಯಾಮಿಲಿ ಎಂಬ ತನ್ನ ನಿಬಂಧದಲ್ಲಿ ಗೊಡ್ಡಾರ್ಡ್ ಇದೇ ನಮೂನೆಯನ್ನು ಅನುಸರಿಸಿದ. ಅನೇಕ ವಿಧದ ತಕರಾರುಗಳಿಂದ ಕೂಡಿದ ಈ ಕುಟುಂಬವನ್ನು ಬಹಳ ಹಿಂದಿನ ತಲೆಮಾರುಗಳವರೆಗೂ ಶೋಧಿಸಿ ನೋಡಿ ದುರ್ಬಲಮನಸ್ಸಿನ ಮೂಲ ಪುರುಷನೊಬ್ಬನಿಂದ ವಂಶಪಾರಂಪರ್ಯವಾಗಿ ಹರಿದುಬಂದ ಕೆಲವು ನ್ಯೂನತೆಗಳ ಎಳೆಗಳು, ಅದರಲ್ಲೂ ಮುಖ್ಯವಾಗಿ ದುರ್ಬಲಮನಸ್ಸು ಇದಕ್ಕೆ ಕಾರಣವೆಂಬುದನ್ನು ಕಂಡುಹಿಡಿದ.
ಅಪರಾಧದ ಪ್ರಕಾರಗಳು ಮತ್ತು ನಿರೂಪಣೆಗಳು
ಬದಲಾಯಿಸಿಪ್ರತ್ಯಕ್ಷೈಕ ಪ್ರಮಾಣವಾದಿ ಮತ್ತು ಕ್ಲಾಸಿಕಲ್ ಕೇಂದ್ರಗಳು ಅಪರಾಧದ ಬಗ್ಗೆ ಒಮ್ಮತದ ಅಭಿಪ್ರಾಯವನ್ನು ಹೊಂದಿವೆ - ಅಪರಾಧವು ಸಮಾಜದ ಮೂಲಭೂತ ಮೌಲ್ಯಗಳು ಮತ್ತು ನಂಬಿಕೆಗಳನ್ನು ಉಲ್ಲಂಘಿಸುವ ಚಟುವಟಿಕೆಯಾಗಿದೆ. ಆ ಮೌಲ್ಯಗಳು ಮತ್ತು ನಂಬಿಕೆಗಳನ್ನು ಸಮಾಜವು ಅಂಗೀಕರಿಸುವ ಕಾನೂನುಗಳಾಗಿ ಪ್ರಕಟಪಡಿಸಲಾಗಿದೆ. ಆದರೂ ಎರಡು ರೀತಿಯ ಕಾನೂನುಗಳಿವೆ:
- ಸ್ವಾಭಾವಿಕ ಕಾನೂನುಗಳು ಅನೇಕ ಸಂಸ್ಕೃತಿಗಳು ಹಂಚುವ ಮೂಲಭೂತ ಮೌಲ್ಯಗಳನ್ನು ಆಧರಿಸಿವೆ. ಸ್ವಾಭಾವಿಕ ಕಾನೂನುಗಳು ಜನರಿಗೆ (ಉದಾ. ಕೊಲೆ, ಅತ್ಯಾಚಾರ, ದಾಳಿ) ಮತ್ತು ಆಸ್ತಿಗೆ (ದರೋಡೆ, ಅಪಹರಣ, ಕಳ್ಳತನ) ಉಂಟಾಗಬಹುದಾದ ಹಾನಿಯ ವಿರುದ್ಧ ರಕ್ಷಣೆಯನ್ನು ಒದಗಿಸುತ್ತವೆ ಹಾಗೂ ಸಾಮಾನ್ಯ ಕಾನೂನು ವ್ಯವಸ್ಥೆಯ ಮೂಲವಾಗಿ ರೂಪುಗೊಳ್ಳುತ್ತವೆ.
- ಶಾಸನಗಳನ್ನು ಶಾಸಕಾಂಗದಿಂದ ಕಾನೂನಾಗಿಸಲಾಗುತ್ತದೆ ಮತ್ತು ಇವು ಪ್ರಸ್ತುತದ ಸಾಂಸ್ಕೃತಿಕ ಶಿಷ್ಟಾಚಾರವನ್ನು ಪ್ರತಿಬಿಂಬಿಸುತ್ತವೆ, ಆದರೂ ಕೆಲವು ಕಾನೂನುಗಳು ವಿವಾದಾತ್ಮಕವಾಗಿರಬಹುದು, ಉದಾ. ಗಾಂಜಾ ಬಳಕೆಯನ್ನು ಮತ್ತು ಜೂಜಾಡುವುದನ್ನು ನಿಷೇಧಿಸುವ ಕಾನೂನುಗಳು. ಮಾರ್ಕ್ಸ್‌ವಾದಿ ಅಪರಾಧ-ಶಾಸ್ತ್ರ, ಸಂಘರ್ಷ ಅಪರಾಧ-ಶಾಸ್ತ್ರ ಮತ್ತು ವಿಮರ್ಶಾತ್ಮಕ ಅಪರಾಧ-ಶಾಸ್ತ್ರವು ರಾಜ್ಯ ಮತ್ತು ನಾಗರಿಕರ ನಡುವಿನ ಹೆಚ್ಚಿನ ಸಂಬಂಧಗಳು ಒಪ್ಪಿಗೆಯಿಲ್ಲದವಾಗಿವೆ ಎಂದು ಸೂಚಿಸುತ್ತವೆ ಹಾಗೂ ಕ್ರಿಮಿನಲ್ ಕಾನೂನು ಸಾರ್ವಜನಿಕ ನಂಬಿಕೆಗಳು ಮತ್ತು ಆಶಯಗಳ ಅಗತ್ಯ ಪ್ರತೀಕವಲ್ಲ: ಇದನ್ನು ಆಳುವ ಅಥವಾ ಪ್ರಬಲ ವರ್ಗದ ಆಸಕ್ತಿಗಳಿಂದ ಬಳಸಲಾಗುತ್ತದೆ. ಬಲ ಪಕ್ಷದ ಅಪರಾಧಿಗಳು ರಾಜ್ಯ ಮತ್ತು ನಾಗರಿಕರ ಮಧ್ಯೆ ಒಂದು ಒಪ್ಪಿಗೆಯ ಸಾಮಾಜಿಕ ಒಪ್ಪಂದವಿದೆಯೆಂದು ಸೂಚಿಸುತ್ತಾರೆ.
ಆದ್ದರಿಂದ ಅಪರಾಧದ ನಿರೂಪಣೆಗಳು ಸ್ಥಳದಿಂದ ಸ್ಥಳಕ್ಕೆ ಸಾಂಸ್ಕೃತಿಕ ರೂಢಿಗಳು ಮತ್ತು ಶಿಷ್ಟಾಚಾರಗಳಿಗೆ ಅನುಗುಣವಾಗಿ ವ್ಯತ್ಯಾಸಗೊಳ್ಳುತ್ತವೆ. ಅದನ್ನು ವ್ಯಾಪಕವಾಗಿ ಹೀಗೆಂದು ವರ್ಗೀಕರಿಸಲಾಗಿದೆ - ಬ್ಲ್ಯೂ-ಕಾಲರ್ ಅಪರಾಧ, ಸಂಘಟಿತ ಅಪರಾಧ, ವ್ಯವಸ್ಥೆಗೊಳಿಸಿದ ಅಪರಾಧ, ರಾಜಕೀಯ ಅಪರಾಧ, ಸಾರ್ವಜನಿಕ ಕ್ರಮದ ಅಪರಾಧ, ರಾಜ್ಯ ಅಪರಾಧ, ರಾಜ್ಯ-ಸಂಘಟಿತ ಅಪರಾಧ ಮತ್ತು ವೈಟ್-ಕಾಲರ್ ಅಪರಾಧ.
ಪಾರಿಯಮ
ಬದಲಾಯಿಸಿಇತ್ತೀಚಿನ ವರ್ಷಗಳಲ್ಲಿ ಶಾರೀರಿಕ ಅಥವಾ ಮಾನಸಿಕ ನ್ಯೂನತೆಗಳಿಗಿಂತ ಹೆಚ್ಚಾಗಿ ಸಾಮಾಜಿಕ ಪರಿಸರ ದುಷ್ಟವರ್ತನೆಯನ್ನು ಪ್ರಚೋದಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆಯೆಂದು ಅಪರಾಧಶಾಸ್ತ್ರಜ್ಞರು, ಅದರಲ್ಲೂ ಅಮೆರಿಕದವರು ಅಭಿಪ್ರಾಯಪಡುತ್ತಾರೆ. ಇವರು ಸಾಮಾಜಿಕ ಸಿದ್ಧಾಂತದ ಪಂಥಕ್ಕೆ ಸೇರಿದವರು; ಈ ಸಿದ್ಧಾಂತದ ಮುಖ್ಯಪ್ರವರ್ತಕರಲ್ಲಿ ಅಮೆರಿಕದ ಎಡ್ವಿನ್ ಎಚ್. ಸದರ್‍ಲಂಡ್ ಎಂಬಾತನೊಬ್ಬ. ಸದರ್ ಲಂಡನ ಸಿದ್ಧಾಂತಕ್ಕೆ ಆಂಶಿಕಸಾಂಗತ್ಯಸಿದ್ಧಾಂತ (ಥಿಯರಿ ಆಫ್ ಡಿಫರೆನ್ಷಿಯಲ್ ಅಸೋಸಿಯೇಷನ್) ಎಂದು ಹೆಸರು. ಈ ಸಿದ್ಧಾಂತವನ್ನು ದುರ್ವರ್ತನೆಗೆ ಅತ್ಯಂತ ಸಮರ್ಪಕವಾದ ವಿವರಣೆಗಳ ಪೈಕಿ ಒಂದೆಂದು ಅನೇಕರು ಒಪ್ಪುತ್ತಾರೆ. ಈ ಸಿದ್ಧಾಂತದ ಪ್ರಕಾರ ದುರ್ವರ್ತನೆಯನ್ನು ಯಾರಾದರೂ ಕಲಿಯಬಹುದು. ಒಬ್ಬಾತ ಅಪರಾಧಿಯಾಗುವುದೂ ಬಿಡುವುದೂ ಆತನ ಹತ್ತಿರದ ಪರಿಸರದಲ್ಲಿ ನೀತಿಯ ಅನುಸರಣೆ ಅಥವಾ ನೀತಿ ವಿರುದ್ಧವರ್ತನೆಗಳಲ್ಲಿ ಯಾವುದು ಹೆಚ್ಚಾಗಿದೆ ಎಂಬುದನ್ನು ಅವಲಂಬಿಸಿದೆ. ಅಪರಾಧೀವರ್ತನೆಯನ್ನು ವೈಜ್ಞಾನಿಕವಾಗಿ ಪರಿಶೋಧಿಸಲು ನಡೆಸಿದ ಪ್ರಯತ್ನದ ಫಲವಾಗಿ, ಅದರಲ್ಲೂ ಕಳೆದ ಐವತ್ತು ವರ್ಷಗಳಲ್ಲಿ, ಅಪರಾಧಸಮಸ್ಯೆಯ ಸ್ವಭಾವ ಮತ್ತು ವ್ಯಾಪ್ತಿಗಳ ಪ್ರಮಾಣವನ್ನು ಹಿಂದಿಗಿಂತಲೂ ಇಂದು ಹೆಚ್ಚು ನಿಷ್ಕøಷ್ಟವಾಗಿ ಅಳೆಯಲು ವಿಧಾನಗಳೂ ಸಾಧನೋಪಕರಣಗಳೂ ಲಭ್ಯವಾಗಿವೆ. ಅಪರಾಧಿತನ ಮತ್ತು ಮಕ್ಕಳ ದುರ್ನಡತೆಯ ವಿಚಾರವಾಗಿ ವ್ಯಾಸಂಗಗಳನ್ನು ನಡೆಸಲು ವಿಶ್ವಸಂಸ್ಥೆ ಆಸಕ್ತಿಹೊಂದಿದೆ; ಅದರ ಸಾಮಾಜಿಕ ವ್ಯವಹಾರಶಾಖೆ ಅಪರಾಧಿತನದ ವಿಷಯದಲ್ಲಿ ರಾಷ್ಟ್ರಗಳ ನೀತಿಯೇನೆಂಬುದನ್ನು ತನ್ನ ಅಂತರರಾಷ್ಟ್ರೀಯ ಪುನರವಲೋಕನದಲ್ಲಿ ಪ್ರಕಟಿಸುತ್ತ ಅದರಲ್ಲಿ ಪ್ರಪಂಚದ ಎಲ್ಲ ಭಾಗಗಳಲ್ಲೂ ಪ್ರಕಟವಾಗಿರುವ ಅಪರಾಧಿತನಕ್ಕೆ ಸಂಬಂಧಿಸಿದ ಗ್ರಂಥಗಳ ಪಟ್ಟಿಯನ್ನು ಕೊಡುತ್ತದೆ. ಇದರಿಂದ ಅಪರಾಧಗಳ ವಿಷಯದಲ್ಲಿ ಸರ್ಕಾರಗಳೆಲ್ಲ ಎಷ್ಟು ಆಸಕ್ತಿಯನ್ನು ತಾಳಿವೆ ಎಂಬುದು ಗೊತ್ತಾಗುತ್ತದೆ. ಈ ತೆರದ ವಿಚಾರಸಂಗ್ರಹದಿಂದ ಅಪರಾಧಶಾಸ್ತ್ರಜ್ಞರೆಲ್ಲರೂ-ಅವರು ಯಾವುದೇ ರಾಜ್ಯದಲ್ಲಿರಲಿ-ಈ ವ್ಯಾಸಂಗದಲ್ಲಿ ಪರಸ್ಪರ ಸಹಕರಿಸಲು ಅನುಕೂಲವಾಗಿದೆ; ಅದರ ಪರಿಣಾಮವಾಗಿ ಅಪರಾಧಶಾಸ್ತ್ರ ಕ್ಷೇತ್ರದಲ್ಲಿ ಕಂಡುಹಿಡಿಯಲಾದ ಮುಖ್ಯವಿಷಯಗಳೆಲ್ಲ ವಿದ್ವಾಂಸರ ತಿಳಿವಳಿಕೆಗೆ ಬರುವಂತಾಗಿದೆ, ಇಂಥದೇ ಸೇವೆಯನ್ನು ಹಾಲೆಂಡಿನಲ್ಲಿ ಪ್ರಕಟವಾಗುವ ಎಕ್ಸಪ್ರ್ಟಿಕಾ ಕ್ರಿಮಿನೋಲಾಜಿಕ (ಅಪರಾಧಶಾಸ್ತ್ರ ವ್ಯಾಸಂಗದಲ್ಲಿನ ಉದ್ಧøತ ವಿಷಯಗಳು) ಎಂಬುದು ನೆರವೇರಿಸುತ್ತಿದೆ. ಇದು ಗ್ರಂಥಗಳ ಪಟ್ಟಿಯನ್ನು ಕೊಡುವುದಲ್ಲದೆ ಅಪರಾಧಶಾಸ್ತ್ರ ವ್ಯಾಸಂಗದಲ್ಲಿ ಕಂಡುಹಿಡಿಯಲಾದ ಪ್ರಧಾನಾಂಶಗಳ ಸಾರಾಂಶವನ್ನೂ ಎತ್ತಿಕೊಡುತ್ತದೆ.
ಅನೀತಿವರ್ತನೆಯ ಮೂಲಕಾರಣ ಅಥವಾ ಕಾರಣಗಳನ್ನು ನಿಷ್ಕøಷ್ಟವಾಗಿ ಇನ್ನೂ ಕಂಡುಹಿಡಿದಿಲ್ಲವಾದರೂ ಇತ್ತೀಚಿನ ವರ್ಷಗಳಲ್ಲಿ ಅಪರಾಧಶಾಸ್ತ್ರಜ್ಞರು ಗಮನಾರ್ಹವಾದ ಸಮೀಕ್ಷಣೆಗಳನ್ನು ನಡೆಸಿದ್ದಾರೆ; ಅಪರಾಧ ಮತ್ತು ಅಪರಾಧಿತನಗಳ ವಿಷಯದಲ್ಲಿ ವಿಪುಲವಾದ ಜ್ಞಾನರಾಶಿಯನ್ನು ಸಂಗ್ರಹಿಸಿದ್ದಾರೆ. ಈ ತಿಳಿವಳಿಕೆಯನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದೇ ಆದರೆ, ಈಗ ಪ್ರಪಂಚದಲ್ಲೆಲ್ಲ ಹಬ್ಬುತ್ತಿರುವ ಮತ್ತು ಪ್ರತಿಯೊಂದು ಆಧುನಿಕ ಸಮಾಜದ ತೀವ್ರಗಮನವನ್ನು ತನ್ನೆಡೆಗೆ ಸೆಳೆಯುತ್ತಿರುವ ಅಪರಾಧಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಅನುಕೂಲವಾಗುತ್ತದೆ.
ಉಪ-ವಿಷಯಗಳು
ಬದಲಾಯಿಸಿಅಪರಾಧ-ಶಾಸ್ತ್ರದ ಅಧ್ಯಯನದ ವಲಯಗಳೆಂದರೆ:
- ಬಾಲಾಪರಾಧ
- ಅಪರಾಧದ ಕಾರಣಗಳು ಮತ್ತು ಸಂಬಂಧಗಳು
- ಅಪರಾಧ ತಡೆಗಟ್ಟುವಿಕೆ
- ಅಪರಾಧ ಅಂಕಿಅಂಶಗಳು
- ಅಪರಾಧ ವರ್ತನೆ
- ಅಪರಾಧ ವೃತ್ತಿ ಮತ್ತು ಬಿಟ್ಟುಬಿಡುವುದು
- ದೇಶೀಯ ಹಿಂಸಾಚಾರ
- ವಕ್ರ ನಡವಳಿಕೆ
- ಅಪರಾಧಕ್ಕೆ ನ್ಯಾಯ ಒದಗಿಸುವ ಏಜೆನ್ಸಿಗಳ ಅರ್ಹತೆ ನಿರ್ಧರಿಸುವುದು
- ಅಪರಾಧಕ್ಕೆ ಭಯ
- ದಂಡನಶಾಸ್ತ್ರ
- ಕಾನೂನಿನ ಸಮಾಜಶಾಸ್ತ್ರ
- ವಿಕ್ಟಿಮಾಲಜಿ
- ಅಪರಾಧಕ್ಕೆ ಬಲಿಯಾದವರ ಅಂತಾರಾಷ್ಟ್ರೀಯ ಸಮೀಕ್ಷೆ
ತುಲನಾತ್ಮಕ ಅಪರಾಧ-ಶಾಸ್ತ್ರವೆಂದರೆ ಅಪರಾಧದಲ್ಲಿ ವ್ಯತ್ಯಾಸ ಮತ್ತು ಹೋಲಿಕೆಗಳನ್ನು ಗುರುತಿಸಲು ಸಂಸ್ಕೃತಿಗಳಲ್ಲಿ ಅಪರಾಧದ ಸಾಮಾಜಿಕ ವಿದ್ಯಮಾನವನ್ನು ಅಧ್ಯಯನ ಮಾಡುವುದಾಗಿದೆ.[೪೫]
ಇವನ್ನೂ ಗಮನಿಸಿ
ಬದಲಾಯಿಸಿ- ಮಾನವಶಾಸ್ತ್ರದ ಅಪರಾಧ-ಶಾಸ್ತ್ರ
- ನಿಷೇಧ
- ಅಪರಾಧ
- ಅಪರಾಧ ವಿಜ್ಞಾನ
- ಅಪರಾಧ ಕಾನೂನು
- ವಾದಶೀಲ ವಿಜ್ಞಾನ
- ಮಾರ್ಕೆಟ್ ರಿಡಕ್ಷನ್ ಅಪ್ರೋಚ್
- ಸಾಮಾಜಿಕ ಒಗ್ಗಟ್ಟು
- ನಡವಳಿಕೆ ವಕ್ರತೆಯ ಸಾಮಾಜಿಕಾಧ್ಯಯನ
- ದಿ ಮಾಸ್ಕ್ ಆಫ್ ಸ್ಯಾನಿಟಿ
ಉಲ್ಲೇಖಗಳು
ಬದಲಾಯಿಸಿಟಿಪ್ಪಣಿಗಳು
ಬದಲಾಯಿಸಿ- ↑ Deflem, Mathieu (2006). Sociological Theory and Criminological Research: Views from Europe and the United States. Elsevier. p. 279. ISBN 0762313226.
- ↑ Beccaria, Cesare (1764). Richard Davies, translator (ed.). On Crimes and Punishments, and Other Writings. Cambridge University Press. p. 64. ISBN 0521402034.
{{cite book}}
:|editor=
has generic name (help) - ↑ Siegel, Larry J. (2003). Criminology, 8th edition. Thomson-Wadsworth. p. 7.
- ↑ McLennan, Gregor, Jennie Pawson, Mike Fitzgerald (1980). Crime and Society: Readings in History and Theory. Routledge. p. 311. ISBN 0415027551.
{{cite book}}
: CS1 maint: multiple names: authors list (link) - ↑ Siegel, Larry J. (2003). Criminology, 8th edition. Thomson-Wadsworth. p. 139.
- ↑ ೬.೦ ೬.೧ ೬.೨ ರೆನೆವಿಲ್ಲೆ, ಮಾರ್ಕ್. ಲಾ ಕ್ರಿಮಿನಾಲಜಿ ಪರ್ಡ್ಯೂ ಡಿ ಅಲೆಕ್ಸಾಂಡ್ರಿ ಲಕಾಸ್ಸಾಗ್ನೆ (1843-1924) Archived 2010-04-26 ವೇಬ್ಯಾಕ್ ಮೆಷಿನ್ ನಲ್ಲಿ., ಕ್ರಿಮಿನೊಕಾರ್ಪಸ್ , ಸೆಂಟರ್ ಅಲೆಕ್ಸಾಂಡ್ರಿ ಕೋಯ್ರೆ-CRHST, UMR n°8560 ಆಫ್ ದಿ CNRS, 2005 (French)
- ↑ Beirne, Piers (March 1987). "Adolphe Quetelet and the Origins of Positivist Criminology". American Journal of Sociology. 92 (5): pp. 1140–1169. doi:10.1086/228630.
{{cite journal}}
:|pages=
has extra text (help) - ↑ Hayward, Keith J. (2004). City Limits: Crime, Consumerism and the Urban Experience. Routledge. p. 89. ISBN 1904385036.
- ↑ Garland, David (2002). "Of Crimes and Criminals". In Maguire, Mike, Rod Morgan, Robert Reiner (ed.). The Oxford Handbook of Criminology, 3rd edition. Oxford University Press. p. 21.
{{cite book}}
: CS1 maint: multiple names: editors list (link) - ↑ "Henry Mayhew: London Labour and the London Poor". Center for Spatially Integrated Social Science.
- ↑ ಹೆಸ್ಟರ್, S., ಇಗ್ಲಿನ್, P. 1992, ಎ ಸೋಷಿಯೋಲಜಿ ಆಫ್ ಕ್ರೈಮ್ , ಲಂಡನ್, ರೌಟ್ಲೆಡ್ಜ್.
- ↑ Shaw, Clifford R. and McKay, Henry D. (1942). Juvenile Delinquency and Urban Areas. The University of Chicago Press. ISBN 0226751252.
{{cite book}}
: CS1 maint: multiple names: authors list (link) - ↑ ೧೩.೦ ೧೩.೧ ೧೩.೨ Bursik Jr., Robert J. (1988). "Social Disorganization and Theories of Crime and Delinquency: Problems and Prospects". Criminology. 26: p. 519–539. doi:10.1111/j.1745-9125.1988.tb00854.x.
{{cite journal}}
:|pages=
has extra text (help) - ↑ Morenoff, Jeffrey, Robert Sampson, Stephen Raudenbush (2001). "Neighborhood Inequality, Collective Efficacy and the Spatial Dynamics of Urban Violence". Criminology. 39: p. 517–60. doi:10.1111/j.1745-9125.2001.tb00932.x.
{{cite journal}}
:|pages=
has extra text (help)CS1 maint: multiple names: authors list (link) - ↑ Merton, Robert (1957). Social Theory and Social Structure. Free Press. ISBN 0029211301.
- ↑ Cohen, Albert (1955). Delinquent Boys. Free Press. ISBN 0029057701.
- ↑ Kornhauser, R. (1978). Social Sources of Delinquency. University of Chicago Press. ISBN 0226451135.
- ↑ ೧೮.೦ ೧೮.೧ Cloward, Richard, Lloyd Ohlin (1960). Delinquency and Opportunity. Free Press. ISBN 0029055903.
{{cite book}}
: CS1 maint: multiple names: authors list (link) - ↑ ರೇಮಂಡ್ D. ಗ್ಯಾಸ್ಟಿಲ್ , "ಹೋಮೊಸೈಡ್ ಆಂಡ್ ಎ ರೀಜನಲ್ ಕಲ್ಚರ್ ಆಫ್ ವೈಯಲೆನ್ಸ್" ಅಮೆರಿಕನ್ ಸೋಷಿಯೊಲಾಜಿಕಲ್ ರಿವ್ಯೂ 36 (1971): 412-427.
- ↑ Rhodes, Richard (2000). Why They Kill: The Discoveries of a Maverick Criminologist. Vintage. ISBN 0375402497.
- ↑ Hirschi, Travis (1969). Causes of Delinquency. Transaction Publishers. ISBN 0765809001.
- ↑ Gottfredson, M., T. Hirschi (1990). A General Theory of Crime. Stanford University Press.
{{cite book}}
: CS1 maint: multiple names: authors list (link) - ↑ Wilson, Harriet (1980). "Parental Supervision: A Neglected Aspect of Delinquency". British Journal of Criminology. 20.
- ↑ Mead, George Herbert (1934). Mind Self and Society. University of Chicago Press.
- ↑ Becker, Howard (1963). Outsiders. Free Press. ISBN 0684836351.
- ↑ ಗ್ಯಾರಿ ಬೆಕರ್, "ಕ್ರೈಮ್ ಆಂಡ್ ಪನಿಶ್ಮೆಂಟ್" - ಜರ್ನಲ್ ಆಫ್ ಪೊಲಿಟಿಕಲ್ ಎಕಾನಮಿ , ಸಂಪುಟ 76 (2), ಮಾರ್ಚ್-ಎಪ್ರಿಲ್ 1968, ಪುಟ 196-217
- ↑ ಜಾರ್ಜ್ ಸ್ಟಿಗ್ಲರ್, "ದಿ ಆಪ್ಟಿಮಮ್ ಎನ್ಫೋರ್ಸ್ಮೆಂಟ್ ಆಫ್ ಲಾಸ್" - ಜರ್ನಲ್ ಆಫ್ ಪೊಲಿಟಿಕಲ್ ಎಕಾನಮಿ , ಸಂಪುಟ 78 (3), ಮೇ-ಜೂನ್ 1970, ಪುಟ 526-536
- ↑ ೨೮.೦ ೨೮.೧ Cornish, Derek, and Ronald V. Clarke (1986). The Reasoning Criminal. Springer-Verlag. ISBN 0387962727.
{{cite book}}
: CS1 maint: multiple names: authors list (link) - ↑ ೨೯.೦ ೨೯.೧ Clarke, Ronald V. (1992). Situational Crime Prevention. Harrow and Heston. ISBN 1881798682.
- ↑ ಸುಟ್ಟನ್, M. ಸ್ಕ್ನೈಡರ್, J. ಮತ್ತು ಹೆದರಿಂಗ್ಟನ್, S. (2001) ಟ್ಯಾಕ್ಲಿಂಗ್ ತೆಫ್ಟ್ ವಿದ್ ದಿ ಮಾರ್ಕೆಟ್ ರಿಡಕ್ಷನ್ ಅಪ್ರೋಚ್. ಕ್ರೈಮ್ ರಿಡಕ್ಷನ್ ರಿಸರ್ಚ್ ಸೀರೀಸ್ ಪೇಪರ್ 8. ಹೋಮ್ ಆಫೀಸ್. ಲಂಡನ್. http://rds.homeoffice.gov.uk/rds/prgpdfs/crrs08.pdf Archived 2010-12-08 at the UK Government Web Archive
- ↑ ಸುಟ್ಟನ್, M. (2010) ಸ್ಟೋಲನ್ ಗೂಡ್ಸ್ ಮಾರ್ಕೆಟ್ಸ್. U.S. ಡಿಪಾರ್ಟ್‌ಮೆಂಟ್ ಆಫ್ ಜಸ್ಟೀಸ್. ಸೆಂಟರ್ ಫಾರ್ ಪ್ರಾಬ್ಲೆಮ್ ಓರಿಯೆಂಟೆಡ್ , COPS ಆಫೀಸ್. ಗೈಡ್ ನಂ 57. http://www.popcenter.org/problems/stolen_goods/
- ↑ ಹೋಮ್ ಆಫೀಸ್ ಕ್ರೈಮ್ ರಿಡಕ್ಷನ್ ವೆಬ್‌ಸೈಟ್. ಟ್ಯಾಕ್ಲಿಂಗ್ ಬರ್ಗ್ಲರಿ: ಮಾರ್ಕೆಟ್ ರಿಡಕ್ಷನ್ ಅಪ್ರೋಚ್. http://webarchive.nationalarchives.gov.uk/20080728114609/http://www.crimereduction.homeoffice.gov.uk/burglary/burglaryminisite07.htm
- ↑ Felson, Marcus (1994). Crime and Everyday Life. Pine Forge. ISBN 0803990294.
- ↑ ೩೪.೦ ೩೪.೧ Cohen, Lawrence, and Marcus Felson (1979). "Social Change and Crime Rate Trends". American Sociological Review. American Sociological Association. 44 (4): 588. doi:10.2307/2094589.
{{cite journal}}
: CS1 maint: multiple names: authors list (link) - ↑ Eck, John, and Julie Wartell (1997). Reducing Crime and Drug Dealing by Improving Place Management: A Randomized Experiment. National Institute of Justice.
{{cite book}}
: CS1 maint: multiple names: authors list (link) - ↑ ಫೆರೆಸ್, J., ಹೇವರ್ಡ್, K., ಮೋರಿಸನ್, W. ಮತ್ತು ಪ್ರೆಸ್ಡೀ, M. (2004) ಕಲ್ಚರಲ್ ಕ್ರಿಮಿನಾಲಜಿ ಅನ್‌ಲೀಶ್ಡ್ , ಲಂಡನ್: ಗ್ಲಾಸ್‌ಹೌಸ್ ಪ್ರೆಸ್
- ↑ ಕ್ಯಾಟ್ಜ್, J. (1988), ದಿ ಸೆಡಕ್ಷನ್ಸ್ ಆಫ್ ಕ್ರೈಮ್ , ನ್ಯೂಯಾರ್ಕ್: ಬೇಸಿಕ್ ಬುಕ್ಸ್
- ↑ ಪ್ರೆಸ್ಡೀ, M. (2000), ಕಲ್ಚರಲ್ ಕ್ರಿಮಿನಾಲಜಿ ಆಂಡ್ ದಿ ಕಾರ್ನಿವಾಲ್ ಆಫ್ ಕ್ರೈಮ್ , ಲಂಡನ್: ರೌಟ್ಲೆಡ್ಜ್
- ↑ ರೈನರ್, R. (2007) ಲಾ ಆಂಡ್ ಆರ್ಡರ್ , ಕೈಂಬ್ರಿಡ್ಜ್: ಪಾಲಿಟಿ
- ↑ ಯಂಗ್, J. (1999), ದಿ ಎಕ್ಸ್‌ಕ್ಲೂಸಿವ್ ಸೊಸೈಟಿ , ಲಂಡನ್: ಸೇಜ್
- ↑ ಹಾಲ್ಸ್‌ವರ್ತ್, S. (2005), ಸ್ಟ್ರೀಟ್ ಕ್ರೈಮ್ , ಕುಲ್ಲಂಪ್ಟನ್: ವಿಲ್ಲನ್
- ↑ ಹೇವರ್ಡ್, K. (2004), ಸಿಟಿ ಲಿಮಿಟ್ಸ್ , ಲಂಡನ್: ಗ್ಲಾಸ್‌ಹೌಸ್
- ↑ ಹೇವರ್ಡ್, K. ಮತ್ತು ಯಾರ್, M. (2006), ‘ದಿ ‘ಚಾವ್’ ಫೆನಾಮೆನನ್: ಕನ್ಸಂಪ್ಷನ್, ಮೀಡಿಯ ಆಂಡ್ ದಿ ಕಂಸ್ಟ್ರಕ್ಷನ್ ಆಫ್ ಎ ನ್ಯೂ ಅಂಡರ್‌ಕ್ಲಾಸ್’ - ಕ್ರೈಮ್, ಮೀಡಿಯ, ಕಲ್ಚರ್ , ಸಂಪುಟ 2, 1: 9-28
- ↑ ಹಾಲ್, S., ವಿನ್ಲೊ, S. ಮತ್ತು ಆಂಕ್ರಮ್, C. (2008) ಕ್ರಿಮಿನಲ್ ಐಡೆಂಟಿಟೀಸ್ ಆಂಡ್ ಕನ್ಸ್ಯೂಮರ್ ಕಲ್ಚರ್ , ಕುಲ್ಲಂಪ್ಟನ್: ವಿಲ್ಲನ್
- ↑ Barak-Glantz, I.L., E.H. Johnson (1983). Comparative criminology. Sage.
{{cite book}}
: CS1 maint: multiple names: authors list (link)
ಗ್ರಂಥಸೂಚಿ
ಬದಲಾಯಿಸಿ- ವಿಕಿಬುಕ್ಸ್: ಇಂಟ್ರೊಡಕ್ಷನ್ ಟು ಸೋಷಿಯಾಲಜಿ
- ಕೇಸರೆ ಬೆಕ್ಕಾರಿಯಾ, ದೈ ಡೆಲಿಟ್ಟಿ ಇ ಡೆಲ್ಲೆ ಪೆನೆ (1763–1764)
- ಬರಾಕ್, ಗ್ರೆಗ್ (ಆವೃತ್ತಿ). (1998). ಇಂಟೆಗ್ರೇಟಿವ್ ಕ್ರಿಮಿನಾಲಜಿ (ಇಂಟರ್‌ನ್ಯಾಷನಲ್ ಲೈಬ್ರರಿ ಆಫ್ ಕ್ರಿಮಿನಾಲಜಿ, ಕ್ರಿಮಿನಲ್ ಜಸ್ಟಿಸ್ ಆಂಡ್ ಪೀನಾಲಜಿ). ಆಲ್ಡರ್ಶಾಟ್: ಆಶ್ಗೇಟ್/ಡಾರ್ಟ್‌ಮೌತ್. ISBN 1-84014-008-9
- ಪೆಟಿಟ್, ಫಿಲಿಪ್ ಮತ್ತು ಬ್ರೈತ್‌ವೈಟ್, ಜಾನ್. ನಾಟ್ ಜಸ್ಟ್ ಡೆಸರ್ಟ್ಸ್. ಎ ರಿಪಬ್ಲಿಶಿಯನ್ ಥಿಯರಿ ಆಫ್ ಕ್ರಿಮಿನಲ್ ಜಸ್ಟಿಸ್ ISBN 978-0-19-824056-3 (ಗಮನಿಸಿ- ರಿಪಬ್ಲಿಶಿಯನ್ ಕ್ರಿಮಿನಾಲಜಿ ಆಂಡ್ ವಿಕ್ಟಿಮ್ ಅಡ್ವೋಕಸಿ: ಕಮೆಂಟ್ ಲಾ ಆಂಡ್ ಸೊಸೈಟಿ ರಿವ್ಯೂ ಪುಸ್ತಕಕ್ಕೆ ಸಂಬಂಧಿಸಿದ ಲೇಖನಕ್ಕಾಗಿ, ಸಂಪುಟ 28, ಸಂ. 4 (1995), ಪುಟಗಳು 765–776)
ಬಾಹ್ಯ ಕೊಂಡಿಗಳು
ಬದಲಾಯಿಸಿ- ನ್ಯಾಷನಲ್ ಕ್ರಿಮಿನಲ್ ಜಸ್ಟಿಸ್ ರೆಫರೆನ್ಸ್ ಸರ್ವಿಸ್ (NCJRS)
- ಅಮೆರಿಕನ್ ಸೊಸೈಟಿ ಆಫ್ ಕ್ರಿಮಿನಾಲಜಿ
- ಆಸ್ಟ್ರೇಲಿಯನ್ ಇನ್ಸ್ಟಿಟ್ಯೂಟ್ ಆಫ್ ಕ್ರಿಮಿನಾಲಜಿ (AIC)
- ಬ್ರಿಟಿಷ್ ಸೊಸೈಟಿ ಆಫ್ ಕ್ರಿಮಿನಾಲಜಿ
- ಕ್ರಿಮ್ಲಿಂಕ್ಸ್ - ಕೊಂಡಿ ಮತ್ತು ಸುದ್ಧಿಗಳನ್ನು ಹೊಂದಿರುವ UK ಆಧಾರಿತ ಸೈಟ್
- ಇಂಟರ್ನೆಟ್ ಜರ್ನಲ್ ಆಫ್ ಕ್ರಿಮಿನಾಲಜಿ
- ಇಂಟರ್‌ನ್ಯಾಷನಲ್ ಕ್ರಿಮಿನಾಲಜಿಸ್ಟ್ಸ್ಅಸೋಸಿಯೇಶನ್ (I.C.A.) Archived 2013-08-06 ವೇಬ್ಯಾಕ್ ಮೆಷಿನ್ ನಲ್ಲಿ. ಅಪರಾಧ-ಶಾಸ್ತ್ರದಲ್ಲಿ ಪರಿಣಿತರಾದ ವೃತ್ತಿನಿರತರ ಅಂತಾರಾಷ್ಟ್ರೀಯ ಒಕ್ಕೂಟ
- ಕ್ರಿಮಿನಾಲಜಿ ಮೆಗಾ-ಸೈಟ್ Archived 2009-08-13 ವೇಬ್ಯಾಕ್ ಮೆಷಿನ್ ನಲ್ಲಿ. — ಡಾ. ಟಾಮ್ ಒ'ಕಾನ್ನರ್ (ಅಸೋಸಿಯೇಟ್ ಪ್ರೊಫೆಸರ್ ಆಫ್ ಕ್ರಿಮಿನಲ್ ಜಸ್ಟಿಸ್, ಆಸ್ಟಿನ್ ಪಿಯೆ ಸ್ಟೇಟ್ ಯೂನಿವರ್ಸಿಟಿ)
- ಕಂಪೇರೆಟಿವ್ ಕ್ರಿಮಿನಾಲಜಿ Archived 2009-06-30 ವೇಬ್ಯಾಕ್ ಮೆಷಿನ್ ನಲ್ಲಿ.
- ಸ್ಕಾಟಿಶ್ ಸೆಂಟರ್ ಫಾರ್ ಕ್ರೈಮ್ ಆಂಡ್ ಜಸ್ಟಿಸ್ ರಿಸರ್ಚ್ - ಅಪರಾಧ ಮತ್ತು ನ್ಯಾಯ ಸಮಸ್ಯೆಗಳನ್ನು ಕೇಂದ್ರೀಕರಿಸಿದ ಉತ್ತಮ ಹೆಸರು ಪಡೆದ ಶೈಕ್ಷಣಿಕ ಸಂಶೋಧನಾ ಕೇಂದ್ರ