ಅನಿಮಲ್ ಫಾರ್ಮ್ - ಇದು ಜಾರ್ಜ್ ಆರ್ವೆಲ್ ಬರೆದಿರುವ ನೈತಿಕ ಸಂದೇಶ ಸಾರುವ ಕಾದಂಬರಿ(ನವೆಲ್ಲಾ). ಈ ಕಾದಂಬರಿಯಲ್ಲಿ ಹೇಗೆ ಎಲ್ಲಾ ಆದರ್ಶಗಳನ್ನು ಕಳೆದುಕೊಂಡ ರಾಷ್ಟ್ರದ (ಡಿಸ್ಟೊಪಿಯನ್ :ಸಮಾಜದ ಎಲ್ಲಾ ಅಂಶಗಳು ಕೆಟ್ಟದು ಎನ್ನುವಂತಹ ಸಂದರ್ಭ ಆಥವಾ ಪ್ರದೇಶ; ರಾಮರಾಜ್ಯಕ್ಕೆ ವಿರುದ್ದವಾದ) ಸ್ಥಿತಿಗತಿಯನ್ನು ಸಂಕೇತಗಳ ಮೂಲಕ (ಆಲಿಗಾರಿಕಲ್: ಆರ್ಥಾಂತರೋಕ್ತಿ/ ಅನ್ಯೋಕ್ತಿ - ಒಂದು ಕಥೆ,ನಾಟಕ ಅಥವಾ ಪದ್ಯದಲ್ಲಿ ಘಟನೆ ಮತ್ತು ಪಾತ್ರಗಳನ್ನು ಸಾಂಕೇತಿಕವಾಗಿ ಬಳಸಿ ನೈತಿಕ,ಧಾರ್ಮಿಕ ಅಥವಾ ರಾಜಕೀಯ ಉದ್ದೇಶವನ್ನು ಸ್ಪಷ್ಟಪಡಿಸುವುದು) ಇಲ್ಲಿ ಆಭಿವ್ಯಕ್ತಿಸಲಾಗಿದೆ . ಇಂಗ್ಲೆಂಡಿನಲ್ಲಿ 17 ಆಗಸ್ಟ್ 1945 ರಲ್ಲಿ ಪ್ರಕಟವಾದ ಈ ಪುಸ್ತಕ, ಎರಡನೇ ಮಹಾಯುದ್ಧಕ್ಕೂ ಮುಂಚಿನ ಸ್ಟಾಲಿನ್ ಯುಗದ ಪ್ರಾರಂಭಕ್ಕೆ ಕಾರಣವಾದ ಘಟನೆಗಳ ಬಗ್ಗೆ ಹಾಗು ಸ್ಟಾಲಿನ್ ಯುಗದಲ್ಲಿ ನಡೆದ ಘಟನೆಗಳ ಕುರಿತಂತೆ ಇದೆ. ಡೆಮೊಕ್ರಾಟಿಕ್ ಸೋಷಲಿಸ್ಟ್ (ಪ್ರಜಾಸತ್ತೆಯಲ್ಲಿ ನಂಬಿಕೆಯಿಟ್ಟ ಸಮಾಜವಾದಿ) ಆಗಿದ್ದ ಆರ್ವೆಲ್,[] ಬಹಳ ವರ್ಷಗಳ ಕಾಲ ಇಂಡಿಪೆಂಡೆಂಟ್ ಲೇಬರ್ ಪಾರ್ಟಿಯ ಸದಸ್ಯರಾಗಿದ್ದರು. ಇವರು ಜೋಸೆಫ್ ಸ್ಟಾಲಿನ್ ರ ಕಟು ವಿರೋಧಿಯಾಗಿದ್ದರು. ಜೊತೆಗೆ, ಸ್ಪೇನಿನ ಅಂತರ್ ಕಲಹದ (ಸ್ಪಾನಿಷ್ ಸಿವಿಲ್ ವಾರ್) ಸಮಯದಲ್ಲಿ NKVD ಯೊಂದಿಗೆ ಅವರಿಗಾದ ಅನುಭವವಗಳ ಆಧಾರದ ಮೇರೆಗೆ ಅವರು ಮಾಸ್ಕೋದಿಂದ ಸೂಚಿತವಾದ ಸ್ಟಾಲಿನಿಸಂ ಅನ್ನು ಅವರು ಬಹಳ ಸಂಶಯದಿಂದ ನೋಡುತ್ತಿದ್ದರು. ಯವೊನೆ ಡಾವೆಟ್ ಎನ್ನುವವರಿಗೆ ಬರೆದಿರುವ ಪತ್ರದಲ್ಲಿ ಆರ್ವೆಲ್ ತನ್ನ ಪುಸ್ತಕ ಆನಿಮಲ್ ಫಾರ್ಮ್ ಅನ್ನು "ಕಾಂಟ್ರೆ ಸ್ಟಾಲಿನ್" (ಸ್ಟಾಲಿನಿಸಂ ವಿರುದ್ಧದ ಒಂದು ವಾದ) ಎಂದು ಬಣ್ಣಿಸಿದ್ದಾರೆ.[] ಈ ಪುಸ್ತಕಕ್ಕೆ ಮೊದಲು ಅನಿಮಲ್ ಸ್ಟೋರಿ: ಎ ಫೇರಿ ಸ್ಟೋರಿ ಎಂದು ಹೆಸರಿಸಲಾಗಿತ್ತು, ಆದರೆ 1946 ರ ಆವತ್ತಿಯಲ್ಲಿ US ಪ್ರಕಾಶಕರು ಆ ಹೆಸರಿನಿಂದ ಎ ಫೇರಿ ಸ್ಟೋರಿ ಎನ್ನುವದನ್ನು ಕೈಬಿಟ್ಟರು. ಆರ್ವೆಲ್ ರ ಜೀವಿತಾವಧಿಯಲಾದ ಎಲ್ಲಾ ಭಾಷಾಂತರಗಳ ಪೈಕಿ ತೆಲಗು ಭಾಷೆಯ ಅವತರಿಣಿಕೆ ಮಾತ್ರವೇ ಆರ್ವೆಲ್ ರ ಮೂಲ ಶೀರ್ಷಿಕೆಯನ್ನು ಉಳಿಸಿಕೊಂಡಿತು. ಇದಲ್ಲದೆ ಈ ಕೃತಿಗೆ ಎ ಸ್ಯಾಟೈಯರ್ ಮತ್ತು ಎ ಕಂಟೆಂಪರರಿ ಸ್ಯಾಟೈಯರ್ ಎನ್ನುವುದನ್ನು ಒಳಗೊಂಡಂತೆ ಭಿನ್ನವಾದ ಅನೇಕ ಶೀರ್ಷಿಕೆಗಳಿವೆ.[] ಆರ್ವೆಲ್, ಈ ಕೃತಿಯ ಫ್ರೆಂಚ್ ಭಾಷಾಂತರಕ್ಕೆ Union des républiques socialistes animales (ಯುನಿಯನ್ ಡೆಸ್ ರಿಪಬ್ಲಿಕಿಸ್ ಸೊಷಿಯಲಿಸ್ಟೆಸ್ ಅನಿಮಾಲೆಸ್) ಎನ್ನುವ ಶೀರ್ಷಿಕೆಯನ್ನು ಸೂಚಿಸಿದರು. ಇದು ಸೋವಿಯಟ್ ಯೂನಿಯನಿನ ಫ್ರೆಂಚ್ ಹೆಸರನ್ನು Union des républiques socialistes soviétiques ನೆನೆಪಿಸುತ್ತಿತ್ತು; ಇದನ್ನು ಹ್ರಸ್ವವಾಗಿ URSA ಎನ್ನಬಹುದು, ಲ್ಯಾಟಿನ್ ಭಾಷೆಯಲ್ಲಿ ಇದರರ್ಥ "ಕರಡಿ" (ರಷ್ಯಾದ ಸಂಕೇತ)ಎಂದು.[] ಟೈಮ್ ಪತ್ರಿಕೆ (ಟೈಮ್ ಮ್ಯಾಗಜೀನ್) ಈ ಪುಸ್ತಕವನ್ನು ಇಂಗ್ಲೀಷ್ ಭಾಷೆಯ ನೂರು ಒಳ್ಳೆಯ ಕಾದಂಬರಿಗಳಲ್ಲಿ (1923 ರಿಂದ 2005ರವೆರೆಗಿನ) ಇದೂ ಒಂದು ಎಂದು ಆಯ್ಕೆ ಮಾಡಿದೆ;[] ಜೊತೆಗೆ ಗ್ರಂಥಾಲಯಗಳ 20ನೇ ಶತಮಾನದ ಆತ್ಯುತ್ತಮ ಕಾದಂಬರಿಗಳ ನೂತನ ಪಟ್ಟಿಯಲ್ಲಿ ಈ ಪುಸ್ತಕವನ್ನು 31ನೆ ಸ್ಥಾನದಲ್ಲಿಡಲಾಗಿದೆ. ಈ ಪುಸ್ತಕ 1996ರಲ್ಲಿ ರೆಟ್ರೊಸ್ಪೆಕ್ಟಿವ್ ಹ್ಯೂಗೊ ಆವಾರ್ಡ್ ಅನ್ನು ಪಡೆಯಿತು. ಗ್ರೇಟ್ ಬುಕ್ಸ್ ಆಫ್ ದಿ ವೆಸ್ಟರ್ನ್ ವರ್ಲ್ಡ್(ಪಾಶ್ಚಿಮಾತ್ಯ ದೇಶಗಳ ಉತ್ತಮ ಪುಸ್ತಕಗಳ)ಪಟ್ಟಿಯಲ್ಲಿ ಈ ಪುಸ್ತಕವೂ ಇದೆ. ಈ ಕೃತಿ ಕ್ರಾಂತಿಯನ್ನು ಅಪವಿತ್ರ ಮಾಡುವ ನಾಯಕರುಗಳು, ಹೇಗೆ ಅವರ ಕ್ರೂರತನ,ಉದಾಸೀನತೆ, ಆಜ್ಞಾನ, ಆಸೆಬುರುಕತನ ಹಾಗು ದೂರದೃಷ್ಟಿಯ ಕೊರತೆಯಿಂದ ರಾಮರಾಜ್ಯ (ಯುತೋಪಿಯ)ನಿಮಾರ್ಣವಾಗುವ ಅವಕಾಶವನ್ನು ನಾಶಮಾಡುತ್ತಾರೆ ಎಂದು ವಿವರಿಸುತ್ತದೆ. ಈ ಕೃತಿ ಭ್ರಷ್ಟ ನಾಯಕತ್ವವನ್ನು ಬಿಂಬಿಸಿ, ಕ್ರಾಂತಿ ವೈಫಲ್ಯವಾಗುವುದಕ್ಕೆ ಅವರುಗಳೇ ಕಾರಣವೆಂದು ದೂಷಿಸುತ್ತದೆ. (ಕ್ರಾಂತಿ ಅನ್ನು ಅಲ್ಲ). ಇದಲ್ಲದೆ ಈ ಕೃತಿ ಜನರ ಸಮಸ್ಯೆಗಳ ಬಗೆಗಿನ ಆಜ್ಞಾನ ಮತ್ತು ಔದಾಸೀನತೆಯು ಎಂತಹ ಕ್ರೂರ ಘಟನೆಗಳಿಗೆ ಕಾರಣವಾಗುತ್ತದೆ ಎಂದು ತೋರಿಸುತ್ತದೆ. ಜನರಿಂದ ಆಯ್ಕೆಯಾದ ಸರಕಾರ ಸ್ಥಾಪನೆ ಮಾಡುವ ಗುರಿಯನ್ನು ಕ್ರಾಂತಿಯು ಈಡೇರಿಸಿದಿದ್ದರೆ ಆಗಬಹುದಾದ ಅನಾಹುತಗಳನ್ನು ಈ ಕೃತಿಯು ಎತ್ತಿತೋರಿಸುತ್ತದೆ.

ಅನಿಮಲ್ ಫಾರ್ಮ್
First edition cover
ಲೇಖಕರುGeorge Orwell
ಮೂಲ ಹೆಸರುAnimal Farm: A Fairy Story
ದೇಶUnited Kingdom
ಭಾಷೆEnglish
ಪ್ರಕಾರClassics, Satire, educational animation
ಪ್ರಕಾಶಕರುSecker and Warburg (London)
ಪ್ರಕಟವಾದ ದಿನಾಂಕ
17 August 1945
ಮಾಧ್ಯಮ ಪ್ರಕಾರPrint (Hardcover & Paperback)
ಪುಟಗಳು112 pp (UK paperback edition)
ಐಎಸ್‍ಬಿಎನ್0-452-28424-4 (present) ISBN 978-0-452-28424-1
OCLC53163540
823/.912 20
LC ClassPR6029.R8 A63 2003b
ಮುಂಚಿನThe Lion And The Unicorn
ನಂತರದNineteen Eighty-Four

ಕಥಾ ಸಾರಾಂಶ

ಬದಲಾಯಿಸಿ

ಮ್ಯಾನರ್ ಫಾರ್ಮ್ ನ (ಮ್ಯಾನರ್: ಜಹಗೀರು, ಫಾರ್ಮ್: ಪಶುಪಾಲನ ಕೇಂದ್ರ) ಹಿರಿಯ ಕರಡಿ ಓಲ್ಡ್ ಮೇಜರ್,ಫಾರ್ಮಿನ ಎಲ್ಲಾ ಪ್ರಾಣಿಗಳ ಸಭೆಯನ್ನು ಕರೆಯುತ್ತದೆ. ಈ ಸಭೆಯಲ್ಲಿ ಅದು ಎಲ್ಲಾ ಮನುಷ್ಯರನ್ನು ಪರಾವಲಂಬಿಗಳಿ ಗೆ (ಪರಾಶ್ರಿತ/ಪರೋಪಜೀವಿ) ಹೋಲಿಸುತ್ತದೆ. ಅದಲ್ಲದೆ, ಎಲ್ಲಾ ಪ್ರಾಣಿಗಳಿಗೆ "ಬೀಸ್ಟ್ಸ್ ಆಫ್ ಇಂಗ್ಲೆಂಡ್" ಎನ್ನುವ ಕ್ರಾಂತಿಕಾರಕ ಗೀತೆಯನ್ನು ಹೇಳಿಕೊಡುತ್ತದೆ. ಇದಾದ ಮೂರು ದಿನಗಳ ಬಳಿಕ ಮೇಜರ್ ಸಾಯುತ್ತಾನೆ, ಆಗ ಸ್ನೋಬಾಲ್ ಮತ್ತು ನೆಪೊಲಿಯನ್ ಎಂಬ ಎರಡು ಕಿರಿಯ ಹಂದಿಗಳು, ಆಧಿಕಾರವಹಿಸಿಕೊಂಡು ಅವನ ಕನಸನ್ನು ಜೀವನ ಕ್ರಮವಾಗಿ ಅಳವಡಿಸತೊಡಗುತ್ತಾರೆ. ಆ ಫಾರ್ಮಿನ ಒಡೆಯನಾದ ಕುಡಕ ಮತ್ತು ಬೇಜವಾಬ್ದಾರಿ ಮಿಸ್ಟರ್.ಜೋನ್ಸ್ ವಿರುದ್ಧ ಪ್ರಾಣಿಗಳು ದಂಗೆ ಎದ್ದು, ಫಾರ್ಮಿನ ಹೆಸರನ್ನು "ಅನಿಮಲ್ ಫಾರ್ಮ್" ಎಂದು ಬದಲಾಯಿಸುವ ಹಾಗೆ ಮಾಡುತ್ತವೆ. ಅನಿಮಲಿಸಂನ ಏಳು ಅನುಶಾಸನಗಳನ್ನು ಕೊಟ್ಟಿಗೆಯ(ಫಾರ್ಮಿನ) ಗೋಡೆಗಳ ಮೇಲೆ ಬರೆಯಲಾಗುತ್ತದೆ. ಅವುಗಳಲ್ಲಿ ಬಹಳ ಪ್ರಮುಖವಾದದ್ದು ಏಳನೆಯದಾದ "ಎಲ್ಲಾ ಪ್ರಾಣಿಗಳು ಸಮ" ಎನ್ನುವುದು. ಎಲ್ಲಾ ಪ್ರಾಣಿಗಳು ದುಡಿಯುತ್ತಿದ್ದವು, ಆದರೆ ಬಾಕ್ಸರ್ ಎನ್ನುವ ವರ್ಕ್ ಹಾರ್ಸ್ (ಚಾಕರಿ ಕುದುರೆ: ಗಾಣದೆತ್ತಿನ ಹಾಗೆ ಕೆಲಸಮಾಡುವವ), ಇತರೆ ಎಲ್ಲಾ ಪ್ರಾಣಿಗಳಿಗಿಂತ ಹೆಚ್ಚು ದುಡಿದು, "ನಾನು ಇನ್ನೂ ಹೆಚ್ಚು ದುಡಿಯುತ್ತೇನೆ" ಎನ್ನುವ ನೀತಿಯನ್ನು ಆಳವಡಿಸಿಕೊಳ್ಳುತ್ತಾನೆ. ಸ್ನೋಬಾಲ್ ಪ್ರಾಣಿಗಳಿಗೆ ಓದುವುದು ಮತ್ತು ಬರೆಯುವುದನ್ನು ಹೇಳಿಕೊಡಲು ಪ್ರಯತ್ನ ಮಾಡುತ್ತದೆ; ಆಹಾರ ಹೇರಳವಾಗಿದೆ; ಹೀಗಾಗಿ ಫಾರ್ಮ್ ಸಲೀಸಾಗಿ ನಡೆಯುತ್ತದೆ. ಹಂದಿಗಳು ತಮ್ಮನ್ನು ತಾವೇ ನಾಯಕತ್ವದ ಸ್ಥಾನಕ್ಕೆ ಏರಿಸಿಕೊಂಡು,ಅವುಗಳ ವ್ಯಯಕ್ತಿಕ ಆರೋಗ್ಯದ ನೆಪದಲ್ಲಿ, ವಿಶೇಷವಾದ ತಿನಿಸುಗಳನ್ನು ಅವುಗಳಿಗೆ ಎಂದು ಮೀಸಲಿಡತೊಡಗುತ್ತವೆ. ನಪೊಲಿಯನ್ ಫಾರ್ಮಿನ ನಾಯಿ ಮರಿಗಳನ್ನು ತೆಗೆದುಕೊಂಡು ಹೋಗಿ ಅವುಗಳಿಗೆ ತನ್ನ ಸ್ವಂತ ಖರ್ಚಿನಲ್ಲಿ ವಿಶೇಷವಾದ ತರಬೇತಿಯನ್ನು ಕೊಡಿಸುತ್ತಾನೆ. ಮಿಸ್ಟರ್.ಜೋನ್ಸ್ ಫಾರ್ಮನ್ನು ಹಿಂದಕ್ಕೆ ಪಡೆಯಲು ಪ್ರಯತ್ನಿಸಿದಾಗ, ಪ್ರಾಣಿಗಳು ಅವನನ್ನು "ಬ್ಯಾಟಲ್ ಆಫ್ ಕೌಶೆಡ್ " (ಕೊಟ್ಟಿಗೆಗಾಗಿ ಕದನ) ಎಂದು ಅವುಗಳಿಂದ ಕರೆಯಲ್ಪಡುವ ಯುದ್ಧದಲ್ಲಿ ಅವನನ್ನು ಸೋಲಿಸುತ್ತವೆ. ನಪೊಲಿಯನ್ ಮತ್ತು ಸ್ನೋಬಾಲ್ ಇಬ್ಬರು ನಾಯಕತ್ವಕ್ಕೆ ಹೊಡೆದಾಡುತ್ತಾರೆ. ಸ್ನೋಬಾಲ್ ವಿಂಡ್ಮಿಲ್ (ಗಾಳಿ ಗಿರಗಟ್ಟಲೆ) ಬಗ್ಗೆ ತನ್ನ ಯೋಚನೆಯನ್ನು ಮಂಡಿಸಿದಾಗ, ನಪೊಲಿಯನ್ ಅದನ್ನು ವಿರೋಧಿಸುತ್ತಾನೆ. ಸ್ನೋಬಾಲ್ ವಿಂಡ್ಮಿಲ್ ಪರವಾಗಿ ಭಾಷಣ ಮಾಡಿದಾಗ, ನಪೊಲಿಯನ್ ತನ್ನ ನಾಯಿಗಳ ಸಹಾಯದಿಂದ ಸ್ನೋಬಾಲ್ ಅನ್ನು ಓಡಿಸುತ್ತಾನೆ. ಸ್ನೋಬಾಲ್ ಗೈರುಹಾಜರಿಯಲ್ಲಿ ನಪೊಲಿಯನ್ ತನ್ನನು ತಾನೆ ನಾಯಕನೆಂದು ಘೋಷಿಸಿಕೊಂಡು ಆಡಳಿತದಲ್ಲಿ ಬದಲಾವಣೆ ಮಾಡತೊಡಗುತ್ತಾನೆ. ಅದರಂತೆ, ಇನ್ನು ಮುಂದೆ ಸಭೆಗಳು ನಡೆಯುವುದಿಲ್ಲ ಅವುಗಳ ಬದಲು ಹಂದಿಗಳ ಒಂದು ಸಮಿತಿ ರಚಿಸಿ ಅದರ ಮೂಲಕ ಫಾರ್ಮಿನ ಆಡಳಿತ ನಡೆಸಲಾಗುತ್ತದೆ. ಸ್ಕ್ವೀಲರ್ ಎಂಬ ಇನ್ನೊಂದು ಕಿರಿಯ ಹಂದಿಯನ್ನು ನಪೊಲಿಯನ್ ತನ್ನ ಮುಖವಾಹಿನಿಯಂತೆ ಬಳಸುತ್ತಾನೆ. ಇದರ ಸಹಾಯದಿಂದ ನಪೊಲಿಯನ್, ವಿಂಡ್ಮಿಲ್ ಎಂಬ ತನ್ನ ಅದ್ಬುತ ಯೋಚನೆಯನ್ನು ಸ್ನೋಬಾಲ್ ಕದ್ದಿತ್ತು ಎಂದು ಸಾರಿಹೇಳಿಸುತ್ತಾನೆ. ವಿಂಡ್ಮಿಲ್ ಬಂದಮೇಲೆ ಜೀವನಶೈಲಿ ಸರಾಗವಾಗಬಹುದೆಂಬ ಭರವಸೆಯಿಂದ ಎಲ್ಲಾ ಪ್ರಾಣಿಗಳು ಇನ್ನೂ ಹೆಚ್ಚು ಶ್ರಮಪಟ್ಟು ಕೆಲಸ ಮಾಡುತ್ತವೆ. ಆದರೆ, ಪ್ರಚಂಡ ಚಂಡಮಾರುತದಲ್ಲಿ ವಿಂಡ್ಮಿಲ್ ಸರ್ವನಾಶವಾಗುವುದನ್ನು ಪ್ರಾಣಿಗಳು ಕಾಣುತ್ತವೆ. ನಪೊಲಿಯನ್ ಮತ್ತು ಸ್ಕ್ವಿಲರ್, ವಿಂಡ್ಮಿಲ್ ಅನ್ನು ನಾಶಮಾಡಿದ್ದು ಸ್ನೋಬಾಲ್ ಎಂದು ಎಲ್ಲಾ ಪ್ರಾಣಿಗಳಿಗೆ ಮನವರಿಕೆ ಮಾಡುತ್ತಾರೆ. ಆದರೆ ಪಕ್ಕದ ಫಾರ್ಮಿನ ರೈತರು ವಿಂಡ್ಮಿಲ್ಗಳ ಗೋಡೆಗಳು ಬಹಳ ದುರ್ಬಲವಾಗಿದ್ದವು ಎಂದು ಗೊಣಗಾಡುತ್ತಾರೆ. ಒಮ್ಮೆ ಸ್ನೋಬಾಲ್ ಬಲಿಪಶುವನ್ನಾಗಿ ಮಾಡಿದ ಮೇಲೆ, ನಪೊಲಿಯನ್, ಸ್ನೋಬಾಲ್ ನ ಜೊತೆ ಸೇರಿದ್ದಾರೆ ಎಂದು ಆರೋಪಿಸಿ ಇತರೆ ಪ್ರಾಣಿಗಳನ್ನು ಕೊಲ್ಲತೊಡಗುತ್ತಾನೆ(ಪರ್ಜಿಂಗ್). ಏತನ್ಮಧ್ಯೆ, ಬಾಕ್ಸರ್ "ನಪೊಲಿಯನ್ ಯಾವಾಗಲು ಸರಿ " ಎನ್ನುವ ತನ್ನ ಎರಡನೇ ಸೂಕ್ತಿಯನ್ನು ಅಳವಡಿಸಕೊಳ್ಳುತ್ತದೆ. ನಪೊಲಿಯನ್ ತನ್ನ ಆಧಿಕಾರವನ್ನು ದುರಪಯೋಗಪಡಿಸುತ್ತಾನೆ, ಪ್ರಾಣಿಗಳ ಜೀವನವನ್ನು ಇನ್ನೂ ದುಸ್ತರವಾಗಿಸುತ್ತಾನೆ; ಹಂದಿಗಳು ಇನ್ನೂ ಹೆಚ್ಚಿನ ನಿರ್ಬಂಧವನ್ನು ಹೇರಿದರೂ, ತಮಗೆಂದು ವಿಶೇಷ ಕೆಲವು ಸವಲತ್ತುಗಳನ್ನು ಉಳಿಸಿಕೊಳ್ಳುತ್ತವೆ. ಹಂದಿಗಳು ಸ್ನೋಬಾಲನ್ನು ಧೂರ್ತನ್ನಾಗಿ ಮಾಡಿ, ನಪೊಲಿಯನ್ ಅನ್ನು ಹೊಗಳಿ ಇತಿಹಾಸವನ್ನು ಹೊಸದಾಗಿ ಬರೆಯುತ್ತಾರೆ. ಸ್ಕ್ವೀಲರ್ ನಪೊಲಿಯನ್ ಮಾಡುವ ಪ್ರತಿಯೊಂದು ಕೆಲಸವಷ್ಟೆ ಅಲ್ಲದೆ ಹಂದಿಗಳು ಅನಿಮಲಿಸಂನ ಏಳು ನಿಯಮಗಳಿಗೆ ಮಾಡುವ ಪರಿಷ್ಕರಣೆಗಳನ್ನು ಕೂಡ ಸಮರ್ಥಿಸಿಕೊಳ್ಳುತ್ತಾನೆ. ಹಂದಿಗಳು ಫಾರ್ಮರ್ ವಿಸ್ಕಿ ಬಗ್ಗೆ ಕಂಡುಕೊಂಡ ಮೇಲೆ "ಯಾವುದೇ ಪ್ರಾಣಿಯು ಕುಡಿಯುವುದಿಲ್ಲ" ಎನ್ನುವುದನ್ನು "ಯಾವುದೇ ಪ್ರಾಣಿಯು ಹೆಚ್ಚು ಕುಡಿಯುವುದಿಲ್ಲ " ಎಂದು ಬದಲಾಯಿಸಲಾಯಿತು. ನಪೊಲಿಯನ್ ಪ್ರಕಾರ ಅನಿಮಲ್ ಫಾರ್ಮ್ ನ ಕನಸ್ಸು ಸಾಕಾರಗೊಂಡಿರುವ ಕಾರಣ "ಬೀಸ್ಟ್ಸ್ ಆಫ್ ಇಂಗ್ಲೆಂಡ್" ಈಗ ತಕ್ಕುದಾದಲ್ಲ ಎಂದು ನಿಷೇಧಿಸಲಾಗುತ್ತಿದೆ. ಇದರ ಜಾಗದಲ್ಲಿ, ಮನುಷ್ಯರ ಜೀವನಶೈಲಿ ಹೊಂದಿಕೊಳ್ಳುತ್ತಿರುವ ಹಾಗೆ ಕಾಣುವ ನಪೊಲಿಯನ್ ಅನ್ನು ಸ್ತುತಿಸುವ ಗೀತೆಯನ್ನು ಅಳವಡಿಸಿಕೊಳ್ಳಲಾಗುತ್ತದೆ. ಪ್ರಾಣಿಗಳು, ಚಳಿಯಲ್ಲಿದ್ದರೂ, ಹಸಿವು ಹಾಗು ಹೆಚ್ಚು ಕೆಲಸದ ನಡುವೆಯು ತಮ್ಮ, ಮಾನಸಿಕ ಸಮತೋಲನದ ಸ್ಥಿತಿಯಿಂದಾಗಿ ಮಿಸ್ಟರ್. ಜೋನ್ಸ್ ಆಳ್ವಿಕೆಗಿಂತ ಈಗ ಅವುಗಳ ಸ್ಥಿತಿ ಉತ್ತಮವಾಗಿದೆ ಎಂದೇ ನಂಬುತ್ತವೆ. ಸ್ಕ್ವೀಲರ್ ಪ್ರಾಣಿಗಳ ಕೆಟ್ಟ ಜ್ಞಾಪಕಶಕ್ತಿಯನ್ನು ದುರಪಯೋಗಿಸಿಕೊಂಡು ಅವುಗಳ ಪರಿಸ್ಥಿತಿ ಸುಧಾರಿಸಿದೆ ಎಂದು ತೋರಿಸಲು ಸಂಖ್ಯೆಗಳನ್ನು ಬಳಸುತ್ತಾನೆ. ನೆರೆಯ ರೈತ ಮಿಸ್ಟರ್.ಫ್ರೆಡಿರಿಕ್, ಹಳೆಯ ಮರವನ್ನು ಖೋಟಾ ನೋಟುಗಳಿಂದ ಖರೀದಿಸಿ ನಪೊಲಿಯನ್ ಗೆ ಮೋಸಮಾಡುತ್ತಾನೆ. ಇದಾದನಂತರ, ಆತ ಫಾರ್ಮ್ ಮೇಲೆ ಆಕ್ರಮಣ ಮಾಡಿ, ದುರಸ್ತಿಯಾಗಿ ಪುನಃ ಕೆಲಸ ಮಾಡುತ್ತಿದ ವಿಂಡ್ಮಿಲ್ ಅನ್ನು ಸಿಡಿಮದ್ದಿನಿಂದ (ಬ್ಲಾಸ್ಟಿಂಗ್ ಪೌಡರ್) ಸಿಡಿಸಿಸುತ್ತಾನೆ. ನಡೆದ ಯುದ್ಧದಲ್ಲಿ ಪ್ರಾಣಿಗಳು ದೊಡ್ಡ ಬೆಲೆ ತೆತ್ತು ಗೆಲ್ಲುತ್ತವೆಯಾದರೂ, ಬಾಕ್ಸರ್ ಒಳಗೊಂಡಂತೆ ಆನೇಕರಿಗೆ ಗಾಯಗಳಾಗುತ್ತದೆ. ಬಾಕ್ಸರ್ ಶ್ರಮಪಟ್ಟು ಕೆಲಸ ಮಾಡಲು ಮುಂದುವರೆಸುತ್ತಾನೆ. ಹೀಗೆ ವಿಂಡ್ಮಿಲ್ ನಲ್ಲಿ ಕೆಲಸ ಮಾಡುತ್ತಿರುವಾಗ ಕುಸಿದು ಬೀಳುತ್ತಾನೆ. ನಪೊಲಿಯನ್ ಪಶುವೈದ್ಯರ ಬಳಿ ಬಾಕ್ಸರ್ ಗೆ ಹೆಚ್ಚಿನ ಆರೈಕೆ ಸಿಗುತ್ತದೆ ಎಂದು ವಿವರಿಸಿ, ಅವರ ಬಳಿ ಕರೆದೊಯ್ಯಲು ವ್ಯಾನ್ ಅನ್ನು ಕಳುಹಿಸುತ್ತಾನೆ. ಬೆಂಜಾಮಿನ್ ಎಂಬ ಕತ್ತೆ "ಎಲ್ಲಾ ಹಂದಿಗಳಷ್ಟೆ ಚೆನ್ನಾಗಿ ಓದಬಲ್ಲದು".[] ಇದು, ಆ ವ್ಯಾನ್ "ಆಲ್ಪರ್ಡ್ ಸಿಮ್ಮಂಡ್ಸ್ ಹಾರ್ಸ್ ಸ್ಲಾಟರ್ ಅಂಡ್ ಗ್ಲು ಬಾಯಿಲರ್" ಎನ್ನುವ ಕಸಾಯಿಖಾನೆಗೆ ಸೇರಿದ್ದು ಎಂದು ಗುರುತಿಸಿ, ಕಾಪಾಡಲು ಪ್ರಯತ್ನ ಪಡುತ್ತದೆ; ಆದರೆ ಪ್ರಾಣಿಗಳ ಪ್ರಯತ್ನವು ವಿಫಲವಾಗುತ್ತದೆ. ಸ್ಕ್ವೀಲರ್ ಆಸ್ಪತ್ರೆಯು ಈ ವ್ಯಾನ್ ಅನ್ನು ಇತ್ತೀಚೆಗೆ ಖರೀದಿಸಿದ್ದಾರೆ. ವ್ಯಾನಿನ ಹಳೆಯ ಮಾಲಿಕರು ಬರೆಸಿದ್ದ ಬರವಣಿಗೆ ಅಳಿಸುವ ಹಾಗೆ ಅದಕ್ಕೆ ಹೊಸದಾಗಿ ಬಣ್ಣಹೊಡೆಸಿಲ್ಲ ಎಂದು ವರದಿ ಮಾಡಿದನು. ಈತ ಉತ್ತಮ ವೈದ್ಯಕೀಯ ಸೇವೆಯ ನಡುವೆಯೂ, ಬಾಕ್ಸರ್ ಹೇಗೆ ಸತ್ತ ಎಂದು ವರ್ಣಿಸುತ್ತಾನೆ. ಬಾಕ್ಸರ್ ಸಾವಿನ ಸ್ವಲ್ಪ ಸಮಯದ ಬಳಿಕ, ಹಂದಿಗಳು ಇನ್ನು ಹೆಚ್ಚಿನ ಪ್ರಮಾಣದ ವಿಸ್ಕಿ ಖರೀದಿಸಿದವು ಎಂದು ಗೊತ್ತಾಗುತ್ತದೆ. ಕಾಲ ಉರಳುತ್ತದೆ, ಹಂದಿಗಳು ನೇರವಾಗಿ ನಡೆಯಲು, ಕೋಲು ಹಿಡಿಯಲು, ಹಾಗು ಉಡುಪು ಹಾಕಿಕೊಳ್ಳಲು ಕಲಿಯುತ್ತವೆ. ಏಳು ಅನುಶಾಸನಗಳನ್ನು ಒಂದು ಸೂಕ್ತಿಗೆ: "ಎಲ್ಲಾ ಪ್ರಾಣಿಗಳು ಸಮ, ಆದರೆ ಕೆಲವು ಪ್ರಾಣಿಗಳು ಇತರೆ ಪ್ರಾಣಿಗಳಿಗಿಂತ ಹೆಚ್ಚು ಸಮ" ಮಿತಿಗೊಳಿಸಲಾಗುತ್ತದೆ. ನಪೊಲಿಯನ್ ಅಲ್ಲಿಯ ಸ್ಥಳೀಯ ಮನುಷ್ಯರಿಗೆ ಮತ್ತು ಹಂದಿಗಳಿಗೆ ಔತಣಕೂಟವನ್ನು ಏರ್ಪಡಿಸುತ್ತಾನೆ. ದೇಶದಲ್ಲಿ ಅತೀ ಕಡಿಮೆ ಆಹಾರ ಸೇವಿಸಿ ಅತ್ಯಂತ ಹೆಚ್ಚು ಕೆಲಸ ಮಾಡುವ ಪ್ರಾಣಿಗಳನ್ನು ಹೊಂದಿರುವುದಕ್ಕೆ ಎಲ್ಲರು ನಪೊಲಿಯನ್ ನನ್ನು ಅಭಿನಂದಿಸುತ್ತಾರೆ. ನಪೊಲಿಯನ್ ಮನುಷ್ಯರೊಂದಿಗೆ ಕೂಡಿ ಎರಡು "ಲೋಕಗಳ" ನೌಕರರ ವಿರುದ್ಧದ ಕೂಟವೊಂದನ್ನು ಘೋಷಿಸುತ್ತಾನೆ. ಈತ ಕ್ರಾಂತಿಗೆ ಸಂಬಂಧಿಸಿದ ರೀತಿ,ಸಂಪ್ರದಾಯಗಳನ್ನು ನಿಷೇಧಿಸಿ, ಫಾರ್ಮಿನ ಹೆಸರನ್ನು ಮೊದಲಿನ "ಮ್ಯಾನರ್ ಫಾರ್ಮ್" ಗೆ ಬದಲಾಯಿಸುತ್ತಾನೆ. ಈ ಸಂಭಾಷಣೆಯನ್ನು ಕೇಳಿಸಿಕೊಂಡ ಪ್ರಾಣಿಗಳು, ಹಂದಿಗಳ ಬದಲಾಗುತ್ತಿರುವ ಸ್ವರೂಪವನ್ನು ಗಮನಿಸುತ್ತವೆ. ಒಮ್ಮೆ ಪೋಕರ್(ಇಸ್ಪೀಟು) ಪಂದ್ಯವೊಂದರಲ್ಲಿ, ನಪೊಲಿಯನ್ ಮತ್ತು ಮಿಸ್ಟರ್. ಪಿಲ್ಕಿಂಗ್ಟನ್,ಏಸ್ ಆಫ್ ಸ್ಪೇಡ್ಸ್ ಆಡುವಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಈ ಚಕಮಕಿಯ ಸಮಯದಲ್ಲಿ ಪ್ರಾಣಿಗಳು ಹಂದಿಗಳ ಮತ್ತು ಮನುಷ್ಯರ ಮುಖಗಳು ಎರಡೂ ಹೋಲುವುದನ್ನು ಗಮನಿಸುತ್ತವೆ. ಪ್ರಾಣಿಗಳಿಗೆ ಅವುಗಳ ನಡುವೆ ಯಾವುದೆ ವ್ಯತ್ಯಾಸವನ್ನು ಕಂಡುಹಿಡಿಯಲಾಗುವುದಿಲ್ಲ.

ಅನಿಮಿಲಿಸಂ

ಬದಲಾಯಿಸಿ

ಅನಿಮಿಲಿಸಂ, ನಿರ್ದಿಷ್ಟವಾಗಿ 1910 ರಿಂದ 1940ನೆ ದಶಕದ ನಡುವಿನ ಸೋವಿಯತ್ ಒಕ್ಕೂಟದ (ಸೋವಿಯತ್ ಯೂನಿಯನ್) ಸಂಕೇತವಾಗಿದೆ (ಅಲೆಗಾರಿಕಲ್). ಇದರ ಜೊತೆಗೆ ರಷ್ಯಾದ ಕ್ರಾಂತಿಯಕಾರಿಗಳ ಬೆಳವಣಿಗೆ, ಮತ್ತು ಸರಕಾರ ಹೇಗೆ ಕ್ರಾಂತಿಯ ಉದ್ದೇಶವನ್ನು ಆಚರಣೆಗೆ ತರಬೇಕು ಎನ್ನುವುದರ ಸಂಕೇತವೂ ಆಗಿದೆ. ಇದನ್ನು ಬಹಳ ಗೌರವಾನ್ವಿತ ಹಂದಿ ಓಲ್ಡ್ ಮೇಜರ್ ಸೃಷ್ಟಿಸುತ್ತಾನೆ. ಸ್ನೋಬಾಲ್, ನಪೊಲಿಯನ್, ಮತ್ತು ಸ್ಕ್ವೀಲರ್ ಎಂಬ ಹಂದಿಗಳು, ಓಲ್ಡ್ ಮೇಜರ್ ನ ಆಲೋಚನೆಗಳನ್ನು ಜೀವನ ಕ್ರಮವಾಗಿಸುತ್ತವೆ, ಇಂತಹ ಜೀವನಕ್ರಮಕ್ಕೆ ಅವರು ವಿಧಿವಿಹಿತವಾಗಿ ಅನಿಮಲಿಸಂ ಎಂದು ಹೆಸರಿಡುತ್ತಾರೆ. ಇದಾದ ಬಳಿಕ, ನಪೊಲಿಯನ್ ಮತ್ತು ಸ್ಕ್ವೀಲರ್ ಮನುಷ್ಯರ ದುರಾಚಾರಗಳನ್ನು (ಕುಡಿಯುವುದು, ಹಾಸಿಗೆಯ ಮೇಲೆ ಸೋಮಾರಿಗಳಂತೆ ಮಲಗುವುದು, ವ್ಯಾಪಾರ) ಮಾಡತೊಡಗುತ್ತಾರೆ. ಸ್ಕ್ವೀಲರ್, ಆತ ಮನುಷ್ಯನಾಗಿದ್ದಾನೆ ಎಂದು ತೋರಿಸುವ ಸಲುವಾಗಿ ಏಳು ಅನುಶಾಸನಗಳನ್ನು ಮಾರ್ಪಡಿಸಬೇಕಾಗುತ್ತದೆ. ಈ ಕ್ರಿಯೆ, ಬಂಡವಾಳಶಾಹಿ ತತ್ವಕ್ಕೆ ಬದಲಾಗಿ ಮಂಡಿಸಿದ್ದ ಕಮುನಿಸ್ಟ್ ತತ್ವವನ್ನು, ಹೇಗೆ ವಾಸ್ತವದಲ್ಲಿ ಸೋವಿಯತ್ ಸರಕಾರ ಸೂಕ್ಷ್ಮವಾಗಿ ತಿದ್ದಿ, ಅದನ್ನು ಬಂಡವಾಳಶಾಹಿತನದ (ಕಾಪಿಟಲಿಸಂ) ಇನ್ನೊಂದು ರೂಪವಾಗಿ ಮಾರ್ಪಡಿಸಿತು, ಎಂದು ಸೂಚಿಸುತ್ತದೆ. ಏಳು ಅನುಶಾಸನಗಳು ಅನಿಮಲ್ ಫಾರ್ಮ್ ನಲ್ಲಿ ಮೂಲಭೂತವಾದ ಅನಿಮಲಿಸಂ ಅನ್ನು ಕಾಯ್ದುಕೊಳ್ಳಲು ಬೇಕಾದ ಕಾನೂನುಗಳ ಹಾಗೆ ಕೆಲಸ ಮಾಡುತ್ತದೆ. ಈ ಏಳು ಅನುಶಾಸನಗಳನ್ನು, ಮನುಷ್ಯರ ವಿರುದ್ಧ ಪ್ರಾಣಿಗಳನ್ನು ಒಗ್ಗೂಡಿಸಿಲು; ಪ್ರಾಣಿಗಳು ಮನುಷ್ಯರ ದುರ್ನಡೆಗಳನ್ನು ಆಳವಡಿಸಿಕೊಳ್ಳುವುದನ್ನು ತಡೆಯುವ ಉದ್ದೇಶದಿಂದ ರಚಿಸಲಾಗಿತ್ತು. ಆದರೆ, ಪ್ರಾಣಿಗಳಿಗೆ ಈ ಎಲ್ಲವನ್ನು ನೆನಪಿನಲ್ಲಿಡುವುದು ಕಷ್ಟವಾಗುತ್ತಿದ್ದ ಕಾರಣ,ಈ ಎಲ್ಲಾ ಅನುಶಾಸನಗಳನ್ನು ಸಂಕ್ಷೇಪಿಸಿ ಒಂದು ಮೂಲ ಉಕ್ತಿ: "ನಾಲ್ಕು ಕಾಲುಗಳು ಒಳ್ಳೆಯದು, ಎರಡು ಕಾಲು ಕೆಟ್ಟದ್ದು!" , (ಈ ಉದ್ದೇಶಕ್ಕಾಗಿ ರೆಕ್ಕೆಗಳನ್ನು ಕಾಲುಗಳೆಂದು ಪರಿಗಣಿಸಲಾಯಿತು; ರೆಕ್ಕೆಗಳು ತಳ್ಳುವ ಶಕ್ತಿ ಹೊಂದಿದೆ ಹೊರತು ಕುತಂತ್ರ ಮಾಡುವುದಿಲ್ಲ ಹೀಗಾಗಿ ರೆಕ್ಕೆಗಳನ್ನು ಕಾಲುಗಳ ಹಾಗೆ ಪರಿಗಣಿಸಬೇಕು ಎಂದು ಸ್ನೋಬಾಲ್ ವಾದಿಸಿದನು), ಇದನ್ನು ಕುರಿಗಳು ಮತ್ತೆಮತ್ತೆ ಹೇಳಿ ಗುಂಪಿನ ಗಮನವನ್ನು, ಹಂದಿಗಳ ಸುಳ್ಳಿನ ಸರಮಾಲೆಗಳಿಂದ ದೂರವಿಡುತ್ತಿದ್ದವು. ಮೊದಲಿನ(ಮೂಲದ) ಏಳು ಅನುಶಾಸನಗಳು:

  1. ಎರಡು ಕಾಲುಗಳಲ್ಲಿ ನಡೆಯುವ ಯಾವುದೇ ಆಗಲಿ ಅದು ಶತ್ರು
  2. ನಾಲ್ಕು ಕಾಲುಗಳಲ್ಲಿ ಚಲಿಸುವ ಅಥವಾ ರೆಕ್ಕೆಯಿರುವ ಯಾವುದೆ ಆಗಲಿ ಅದು ಮಿತ್ರ.
  3. ಯಾವುದೇ ಪ್ರಾಣಿ ಉಡುಪನ್ನು ಹಾಕಿಕೊಳ್ಳುವ ಹಾಗಿಲ್ಲ.
  4. ಯಾವುದೇ ಪ್ರಾಣಿ ಹಾಸಿಗೆಯ ಮೇಲೆ ಮಲಗುವ ಹಾಗಿಲ್ಲ.
  5. ಯಾವುದೇ ಪ್ರಾಣಿ ಮದ್ಯಸಾರ ಕುಡಿಯಕೂಡದು.
  6. ಯಾವದೇ ಪ್ರಾಣಿ ಮತ್ತೊಂದು ಪ್ರಾಣಿಯನ್ನು ಕೊಲ್ಲುವ ಹಾಗಿಲ್ಲ.
  7. ಎಲ್ಲಾ ಪ್ರಾಣಿಗಳೂ ಸಮ.

ಸ್ವಲ್ಪ ಕಾಲದ ಬಳಿಕ, ನಪೊಲಿಯನ್ ಮತ್ತು ಅವನ ಜೊತೆಯಿದ್ದ ಹಂದಿಗಳು, ಫಾರ್ಮ್ ನ ಮೇಲೆ ಅವರಿಗಿದ್ದ ಪರಿಪೂರ್ಣ ಆಧಿಕಾರದಿಂದಾಗಿ ಭ್ರಷ್ಟರಾಗ ತೊಡಗುತ್ತಾರೆ. ಬೇರೆ ಪ್ರಾಣಿಗಳ ಬಳಿ ಅವರಿಗಿದ್ದ ಜನಪ್ರಿಯತೆಯನ್ನು ಉಳಿಸಿಕೊಳ್ಳುವ ಸಲುವಾಗಿ, ಹಂದಿಗಳು ಕಾನೂನು ಮುರಿದರೂ ಕೂಡ ಯಾವುದೇ ಅಪಾದನೆ ಬರದ ಹಾಗೆ ಈ ಅನುಶಾಸನಗಳಿಗೆ, ಸ್ಕ್ವೀಲರ್ ಕೆಲವು ಮಾರ್ಪಾಡುಗಳನ್ನು ರಹಸ್ಯವಾಗಿ ಮಾಡುತ್ತಾನೆ. (ಉದಾಹರಣೆಗೆ: "ಯಾವುದೆ ಪ್ರಾಣಿ ಮದ್ಯಸಾರ ಕುಡಿಯಕೂಡದು" ಎನ್ನುವುದಕ್ಕೆ "ಜಾಸ್ತಿ" ಎಂದು ಸೇರಿಸುತ್ತಾನೆ, ಹಾಗು "ಯಾವುದೇ ಪ್ರಾಣಿ ಹಾಸಿಗೆಯ ಮೇಲೆ ಮಲಗುವ ಹಾಗಿಲ್ಲ" ಎನ್ನುವುದಕ್ಕೆ "ಹೊದ್ದಿಕೆಯಿರುವ" ಎಂದು ಸೇರಿಸುತ್ತಾನೆ). ಕೊನೆಗೆ, ಹಳೆ ಕಾನೂನುಗಳ ಜಾಗದಲ್ಲಿ ಬೇರೆಯ "ಎಲ್ಲಾ ಪ್ರಾಣಿಗಳು ಸಮ, ಆದರೆ ಕೆಲವು ಇತರರಿಗಿಂತ ಸ್ವಲ್ಪ ಹೆಚ್ಚು ಸಮ " ಮತ್ತು "ನಾಲ್ಕು ಕಾಲುಗಳು ಉತ್ತಮ, ಎರಡು ಕಾಲುಗಳು ಇನ್ನೂ ಉತ್ತಮ !" ಎಂಬಂತಹ ಕಾನೂನುಗಳನ್ನು ತರಲಾಯಿತು. ಹಂದಿಗಳು ಮನುಷ್ಯರ ಹಾಗೆಯೆ ಆಗತೊಡಗಿದವು.

ಪಾತ್ರಗಳು

ಬದಲಾಯಿಸಿ

ಅನಿಮಲ್ ಫಾರ್ಮ್ ನ ಘಟನೆ ಮತ್ತು ಪಾತ್ರಗಳು, ಕಮ್ಯೂನಿಸಂ ("ಅನಿಮಲಿಸಂ"), ಸರ್ವಾಧಿಕಾರದ ಸರಕಾರ, ಹಾಗು ಮನುಷ್ಯರ ಹೆಡ್ಡುತನವನ್ನು ವಿಡಂಬನೆ ಮಾಡುತ್ತದೆ. ಸ್ನೋಬಾಲ್, ಲಿಯೋನ್ ಟ್ರಾಟ್ಸ್ಕಿ ಯ ಸಂಕೇತವಾದರೆ, ಹಂದಿಗಳ ನಾಯಕನಾದ ನಪೊಲಿಯನ್ ಸ್ಟಾಲಿನ್ ಸಂಕೇತ.

ಹಂದಿಗಳು

ಬದಲಾಯಿಸಿ
ಓಲ್ಡ್ ಮೇಜರ್
ಇದು ಬಹಳ ಬೆಲೆಬಾಳುವ ಮಿಡಲ್ ವೈಟ್ ಹಂದಿಯ ಪ್ರಭೇದಕ್ಕೆ ಸೇರಿದ ಹಂದಿ. ಇದು ಕೃತಿಯಲ್ಲಿ ಆಗುವ ಕ್ರಾಂತಿಗೆ ಸ್ಫೂರ್ತಿ ನೀಡಿ ಕ್ರಾಂತಿ ಉಂಟಾಗುವ ಹಾಗೆ ಮಾಡುತ್ತದೆ. ಇದಕ್ಕೆ 12ವರ್ಷ ವಯಸ್ಸು.

ಒಂದು ಆರ್ಥವಿವರಣೆಯ ಪ್ರಕಾರ ಈತ ಕಮ್ಯೂನಿಸಂನ ಆಧಾರವಾದ ಮಾರ್ಕ್ಸಿಸಂ ನ ಪ್ರತಿಪಾದಕನಾದ ಕಾರ್ಲ್ ಮಾರ್ಕ್ಸ್(ಮನುಷ್ಯರನ್ನು ಪದಚ್ಯುತಿ ಮಾಡಿ, ಪ್ರಾಣಿಗಳು ಹೇಗೆ ಆದರ್ಶ ಸಮಾಜವನ್ನು ನಿರ್ಮಿಸಬಹದು ಎಂದು ವಿವರಿಸುತ್ತಾನೆ.) ಹಾಗು ವ್ಲಾಡಿಮಿರ್ ಲೆನಿನ್ (ಲೆನಿನಿನ ರಕ್ಷಸಿ ಇಟ್ಟಿದ ಶವದ ಹಾಗೆ, ಈತನ ತಲೆಬುರುಡೆಯನ್ನು ಸರ್ವಾಜನಿಕ ವೀಕ್ಷಣೆಗೆ ಇಡಲಾಗುತ್ತದೆ.) ಇಬ್ಬರ ಸಂಕೇತವಿರಬಹುದು. ಆದರೆ, ಕ್ರಿಸ್ಟೊಫರ್ ಹಿಚನ್ಸ್ ರ ಪ್ರಕಾರ: ಲೆನಿನ್ ಮತ್ತು ಟ್ರಾಟ್ಸ್ಕಿ ಇಬ್ಬರನ್ನೂ ಒಬ್ಬರೆ ಎನ್ನುವ ಹಾಗೆ ಒಂದುಗೂಡಿಸಲಾಗಿದೆ, [ಅಂದರೆ ಸ್ನೋಬಾಲ್). ಆಥವಾ, ಇದು ಪ್ರಾಯಶಃ [...], ಲೆನಿನ್ ಇಲ್ಲವೆ ಇಲ್ಲ ಎಂದು ಹೇಳಲೂ ಕೂಡ ಇರಬಹುದು".[]

ನಪೊಲಿಯನ್
"ಇದು ದೊಡ್ಡದಾದ, ನೋಡಿದರೆ ಭಯವಾಗುವ ಬೆರ್ಕ್ ಷೈರ್ ಹಂದಿಯಾಗಿತ್ತು. ಫಾರ್ಮಿನಲ್ಲಿ ಇದೊಂದೆ ಬೆರ್ಕ್ ಷೈರ್ ಪ್ರಭೇದಕ್ಕೆ ಸೇರಿತ್ತು. ಇದು ಹೆಚ್ಚಾಗಿ ಮಾತನಾಡುತ್ತಿರಲ್ಲಿಲ್ಲ, ಆದರೂ ಇದಕ್ಕೆ ತನಗೆ ಬೇಕಾದನ್ನು ಸಾಧಿಸಿಕೊಳ್ಳುವ ಶಕ್ತಿಯಿದೆ ಎಂಬ ಖ್ಯಾತಿಯನ್ನು ಗಳಿಸಿತ್ತು".[] ಅನಿಮಲ್ ಫಾರ್ಮ್ ನ ಪ್ರಮುಖ ಕ್ರೂರ ಹಾಗು ದುರುಳ-ನಪೊಲಿಯನ್; ಇವನು ಜೋಸೆಫ್ ಸ್ಟಾಲಿನಿನ ಸಂಕೇತ. ನಪೊಲಿಯನ್ ಜೆಸ್ಸಿ ಮತ್ತು ಬ್ಲೂಬೆಲ್ ಎಂಬ ನಾಯಿಗಳಿಂದ ಪಡೆದ ನಾಯಿಮರಿಗಳನ್ನು, ಕ್ರೂರವಾದ ರಹಸ್ಯ ಪೋಲಿಸಿನ ಹಾಗೆ ಬೆಳಸುತ್ತಾನೆ. ಈ ನಾಯಿಗಳ ಸಹಾಯದಿಂದಾಗಿ ಈತ ತನ್ನ ಶಕ್ತಿಯನ್ನು ಕ್ರಮೇಣವಾಗಿ ಹೆಚ್ಚಿಸಿಕೊಳ್ಳುತ್ತಾನೆ. ಸ್ನೋಬಾಲ್ ಅನ್ನು ಫಾರ್ಮಿನಿಂದ ಓಡಿಸಿದ ತರುವಾಯ, ನಪೊಲಿಯನ್ ಪೂರ್ಣ ಆಧಿಕಾರ ಗಳಿಸುತ್ತಾನೆ. ಇದಕ್ಕೆ, ಸ್ಕ್ವೀಲರ್ ಮಾಡುವ ಸುಳ್ಳು ಪ್ರಚಾರ ಸಹಾಯ ಮಾಡುತ್ತದೆ. ಇತರ ಪ್ರಾಣಿಗಳನ್ನು ನಾಯಿಗಳಿಂದ ಬೆದರಿಸಿ ಮತ್ತು ಹೆದರಿಸಿ ನಿಯಂತ್ರಣದಲ್ಲಿಡುತ್ತಾನೆ. ಇವೆಲ್ಲದರೆ ಜೊತೆಗೆ, ಇವನು ಮೂಲದ ಏಳು ಅನುಶಾಸನಗಳನ್ನು ತನ್ನ ಅನುಕೂಲಕ್ಕೆ ಸರಿಹೊಂದುವ ಹಾಗೆ ಬದಲಾಯಿಸಿಕೊಳ್ಳುತಾನೆ. ಕೃತಿಯ ಕೊನೆಯಲ್ಲಿ, ನಪೊಲಿಯನ್ ಮತ್ತು ಆತನ ಸಂಗಡಿಗರು, ನೇರವಾಗಿ ನಡೆಯಲು ಕಲಿತಿರುತ್ತಾರೆ. ಯಾವ ಮನುಷ್ಯರ ವಿರುದ್ಧ ಮೊದಲು ಪ್ರತಿಭಟಿಸಿದ್ದರು, ಅವರ ಹಾಗೆಯೆ ಅವರುಗಳು ವರ್ತಿಸ ತೊಡಗುತ್ತಾರೆ.
ಅನಿಮಲ್ ಫಾರ್ಮ್ ನ ಫ್ರೆಂಚ್ ಭಾಷೆಯ ಮೊದಲ ಅವತರಿಣಿಕೆಯಲ್ಲಿ ನಪೊಲಿಯನ್ ಅನ್ನು César ಎಂದು ಕರೆಯಲಾಗಿತ್ತು, ಫ್ರೆಂಚಿನಲ್ಲಿ ಸೀಸರ್ ಅನ್ನು ಹಾಗೆ ಬರೆಯುತ್ತಾರೆ.[] ಆದರೆ, ಇನ್ನೊಂದು ಭಾಷಾಂತರ ಇವನನ್ನು Napoléon ಎಂದೆ ಕರೆಯುತ್ತದೆ.[]
ಸ್ನೋಬಾಲ್
ಇವನು ನಪೊಲಿಯನ್ನನ ವೈರಿ ಮತ್ತು ಜೋನ್ಸ್ ನ ಪದಚ್ಯುತಿಯ ನಂತರ ಫಾರ್ಮ್ ನ ಮೊದಲ ನಾಯಕ. ಇವನು ಪ್ರಾಯಶಃ ಲಿಯಾನ್ ಟ್ರಾಟ್ಸ್ಕಿ ಯ ಸಂಕೇತ. ಆದರೆ, ಆರ್ವೆಲ್ ರ ಟ್ರಾಟ್ಸ್ಕಿ ಬಗೆಗಿನ ಅಭಿಪ್ರಾಯಗಳ್ನ್ನು ಗಮನಿಸಿದರೆ, ಇದು ಮೆನ್ಷೆವಿಕ್ ನ ಸಂಕೇತ ಎಂದು ಕೂಡ ಅರ್ಥೈಸಬಹುದು. ಈತನ ನಾಯಕತ್ವದ ಮೊದಲ ಸುಗ್ಗಿಯು ಯಶಸ್ವಿಯಾಗುತ್ತದೆ, ಇದರಿಂದ ಈತ ಬಹಳಷ್ಟು ಪ್ರಾಣಿಗಳ ವಿಶ್ಚಾಸವನ್ನು ಗಳಿಸುತ್ತಾನೆ. ಆದರೆ, ನಪೊಲಿಯನ್ ಇವನನ್ನು ಫಾರ್ಮಿನಿಂದ ದೂರ ಓಡಿಸುತ್ತಾನೆ. ಸ್ನೋಬಾಲ್ ಫಾರ್ಮಿನ ಪ್ರಾಣಿಗಳ ಒಳಿತಿಗಾಗಿ, ಪ್ರಮಾಣಿಕವಾಗಿ ದುಡಿಯುತ್ತಾನೆ. ಎಲ್ಲರು ಸಮನಾವಾಗಿರುವಂತಹ (ಇಗ್ಯಾಲಿಟೇರಿಯನ್) ಒಂದು ಆದರ್ಶ ಸಮಾಜವನ್ನು ನಿರ್ಮಿಸುವ ಸಲುವಾಗಿ ಪ್ರಾಣಿಗಳಿಗೆ ಸರಿಯಾದ ಅಲೋಚನೆಗಳನ್ನು ಕೊಡುತ್ತಾನೆ. ಆದರೆ, ನಪೊಲಿಯನ್ ಮತ್ತು ಅವನ ನಾಯಿಗಳು ಆತನನ್ನು ಫಾರ್ಮಿನಿಂದ ಓಡಿಸುತ್ತಾರೆ. ನಪೊಲಿಯನ್ ಈತನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡಿ ಈತ ಬಹಳ ಭ್ರಷ್ಟ ಮತ್ತು ದುಷ್ಟ ಎನ್ನುವ ಹಾಗೆ ಚಿತ್ರಿಸುತ್ತಾನೆ. ಅದೂ ಅಲ್ಲದೆ ನಪೊಲಿಯನ್, ಫಾರ್ಮಿನ ವ್ಯವ್ಯಸ್ಥೆಯನ್ನು ಉತ್ತಮಪಡಿಸುವ ಸಲುವಾಗಿ ಪ್ರಾಣಿಗಳು ಮಾಡುತ್ತಿದ್ದ ಪ್ರಯತ್ನಗಳನ್ನು ಸ್ನೋಬಾಲ್ ರಹಸ್ಯವಾಗಿ ಹಾಳುಮಾಡುತ್ತಿದ ಎಂದೆಲ್ಲಾ ವದ್ದಂತಿ ಹಬ್ಬಿಸುತ್ತಾನೆ.
ಸ್ಕ್ವೀಲರ್
ಇದು ಚಿಕ್ಕ,ಬಿಳಿ,ದಪ್ಪಗೆ ಕೊಬ್ಬಿದ್ದ ಹಂದಿ. ಇದು ನಪೊಲಿಯನ್ನನ ಬಲಗೈಬಂಟ ಹಾಗು ಅವನ ತತ್ವಗಳನ್ನು ಪ್ರಚಾರ ಮಾಡುವ ಪ್ರಚಾರ ಮಂತ್ರಿ. ಸ್ಕ್ವೀಲರ್ ಒಬ್ಬ ಮಾತಿನ ಮಲ್ಲ. ಈತ ತನ್ನ ಮಾತುಗಳಿಂದ್ದಲೆ ನಪೊಲಿಯನ್ನನ ಎಲ್ಲಾ ಕೆಲಸಗಳನ್ನು ಸರಿಯೆಂದು ಸರ್ಮಥಿಸಿ, ಹೊಗಳುತ್ತಿದ್ದ. ಸ್ಕ್ವೀಲರ್ ವಾದವನ್ನು ಜಟಿಲ ಮಾಡಿ ಸೀಮಿತಮಾಡುತ್ತಾನೆ. ಆತ ಎದುರಾಳಿಗಳಿಗೆ ಗೊಂದಲಮಾಡಿ, ಹಾದಿ ತಪ್ಪಿಸುತ್ತಾನೆ. ಉದಾಹರಣೆಗೆ : ಹಂದಿಗಳು ಸರಿಯಾಗಿ ಕೆಲಸ ನಿರ್ವಹಿಸಲು ಅವುಗಳಿಗೆ ಸ್ವಲ್ಪ ಹೆಚ್ಚಿನ ಸವಲತ್ತಿನ ಅವಶ್ಯಕತೆಯಿದೆ ಎಂದು ಪ್ರತಿಪಾದಿಸುತ್ತಾನೆ. ಆದರೆ, ಆತನ ಮಾತನ್ನು ಯಾರಾದರೂ ಸಂದೇಹಿಸಿದಾಗ, ಆತ ಫಾರ್ಮಿನ ಮಾಲಿಕನಾದ ಮಿಸ್ಟರ್.ಜೋನ್ಸ್ ಬಂದುಬಿಡುತ್ತಾನೆ ಎಂದು ಹೆದರಿಸಿ, ಹಂದಿಗಳ ವಿಶೇಷ ಸವಲತ್ತುಗಳನ್ನು ಸಮರ್ಥಿಸಿಕೊಳ್ಳುತ್ತಾನೆ. ಸ್ಕ್ವೀಲರ್ ಪ್ರಾಣಿಗಳಿಗೆ ಅವುಗಳ ಬದುಕು ಉತ್ತಮವಾಗುತ್ತಿದೆ ಎಂದು ಮನವರಿಕೆ ಮಾಡಲು ಆಂಕಿಅಂಶಗಳ ಸಹಾಯಪಡೆಯುತ್ತಾನೆ. ಬಹಳಷ್ಟು ಪ್ರಾಣಿಗಳಿಗೆ ಕ್ರಾಂತಿಗೆ ಮೊದಲಿನ ಬದುಕಿನ ನೆನಪುಗಳು ಮಾಸಿಹೋಗಿದೆ; ಹೀಗಾಗಿ, ಅವುಗಳಿಗೆ ಮನವರಿಕೆಯಾಗುತ್ತದೆ. ಕೊನೆಯಲ್ಲಿ, ಈತ ಎರಡು ಕಾಲುಗಳ (ಹಿಂದಿನ ಕಾಲುಗಳ) ಮೇಲೆ ನಡೆಯುವ ಮೊದಲ ಹಂದಿಯಾಗುತ್ತಾನೆ.
ಮಿನಿಮಸ್
ಇದು ಅನಿಮಲ್ ಫಾರ್ಮ್ ನ ಕವಿ; ಬೀಸ್ಟ್ಸ್ ಆಫ್ ಇಂಗ್ಲೆಂಡ್ ಹಾಡುವುದನ್ನು ನಿಷೇಧಿಸದ ಮೇಲೆ ಇದು ಎರಡು ಮತ್ತು ಮೂರನೆ ರಾಷ್ಟ್ರ ಗೀತೆಗಳನ್ನು ಇದು ಬರೆಯುತ್ತದೆ.
ಹಂದಿ ಮರಿಗಳು(ದಿ ಪಿಗ್ಲೆಟ್ಸ್)
ಇವುಗಳನ್ನು ನಪೊಲಿಯನ್ನನ ಮಕ್ಕಳೆಂದು ಸೂಚಿಸಲಾಗಿದೆ(ಆದರೂ ಕೃತಿಯಲ್ಲಿ ಇದನ್ನು ಸ್ಪಷ್ಟವಾಗಿ ಚಿತ್ರಿಸಿಲ್ಲ). ಇವುಗಳು, ನಪೊಲಿಯನ್ ಅಸಮಾನತೆಯ ತತ್ವದ ಅನ್ವಯ, ದಾಸ್ಯಕ್ಕೆ ಇಡಾಗುವ ಮೊದಲ ಪ್ರಾಣಿ ಸಂತತಿ.
ಕಿರಿಯ ಹಂದಿಗಳು (ದಿ ಯಂಗ್ ಪಿಗ್ಸ್)
ನಾಲ್ಕು ಕಿರಿಯ(ಚಿಕ್ಕ) ಹಂದಿಗಳು ಫಾರ್ಮ್ ಆಡಳಿತವನ್ನು ನಪೊಲಿಯನ್ ಕೈಗೆ ತೆಗೆದುಕೊಳ್ಳುವುದನ್ನು ವಿರೋಧಿಸುತ್ತವೆ, ಆದರೆ ಇವಗಳನ್ನು ಬಹಳ ಬೇಗ ಸುಮ್ಮನಿರಸಲಾಗಿಸಿ ನಂತರ ಸಾಯಿಸಲಾಗುತ್ತದೆ.
ಪಿಂಕ್ ಐ
ಇದು ಒಂದು ಆಪ್ರಾಪ್ತವಯಸ್ಸಿನ (ಮೈನರ್) ಹಂದಿ, ಇದರ ಪ್ರಸ್ತಾಪವು ಒಂದೆ ಒಂದು ಬಾರಿ ಬರುತ್ತದೆ; ನಪೊಲಿಯನ್ ಅನ್ನು ಕೊಲ್ಲುವ ಪ್ರಯತ್ನಗಳು ನಡೆಯುತ್ತಿದೆ ಎನ್ನುವ ವದಂತಿಗಳ ಹಿನ್ನಲೆಯಲ್ಲಿ, ನಪೊಲಿಯನ್ನನ ಆಹಾರ ವಿಷಪೂರಿತವಾಗಿಲ್ಲವೆಂದು ದೃಢಿಕರಿಸಲು ಇದು ಮೊದಲು ರುಚಿ ನೊಡುತ್ತದೆ.

ಮನುಷ್ಯರು

ಬದಲಾಯಿಸಿ
ಮಿಸ್ಟರ್. ಜೋನ್ಸ್
ಫಾರ್ಮಿನ ಮೊದಲಿನ ಮಾಲೀಕ ಜೋನ್ಸ್. ಆತನು ಮಹಾಕುಡುಕನಾಗಿರುತ್ತಾನೆ. ಅವನು ಎಷ್ಟು ಕುಡಿಯುತ್ತಾನೆಂದರೆ ಪ್ರಾಣಿಗಳಿಗೆ ಸರಿಯಾಗಿ ಉಣಿಸುವುದಿಲ್ಲ ಹಾಗು ಸರಿಯಾಗಿ ಆರೈಕೆ ಮಾಡುವುದಿಲ್ಲ, ಹೀಗಾದಗ ಪ್ರಾಣಿಗಳು ಇವನ ವಿರುದ್ಧ ದಂಗೆಏಳುತ್ತವೆ. ಜೋನ್ಸ್ ಮತ್ತು ಅವನ ಫಾರ್ಮಿನಲ್ಲಿ ಕೆಲಸ ಮಾಡುವ ಕೆಲಸದವರ ಸಹಾಯದಿಂದ, ಫಾರ್ಮನ್ನು ಹಿಂದಕ್ಕೆ ಪಡೆಯುವ ಅವನ ಪ್ರಯತ್ನ, ಬ್ಯಾಟಲ್ ಆಫ್ ಕೌಶೆಡ್ ನಲ್ಲಿ (ಕೊಟ್ಟಿಗೆಗಾಗಿ ಕದನ) ವಿಫಲವಾಗುತ್ತದೆ.
ಫ್ರೆಡಿರಿಕ್
ಈತ, ಪಿಂಚ್ ಫೀಲ್ಡ್ ಎನ್ನುವ ಚೆನ್ನಾಗಿ-ಇಡಲಾಗಿರುವ ಪಕ್ಕದ ಫಾರ್ಮ್ ನ ಮಾಲೀಕ. ಈತ ಖೋಟಾ ನೋಟು ಕೊಟ್ಟು ಪ್ರಾಣಿಗಳಿಂದ ಮರವನ್ನು ಖರೀದಿಸುತ್ತಾನೆ. ಇದಾದ ನಂತರ, ಆತ ಪ್ರಾಣಿಗಳ ಮೇಲೆ ಆಕ್ರಮಣ ಮಾಡಿ, ವಿಂಡ್ಮಿಲ್ ಅನ್ನು ನಾಶ ಮಾಡುತ್ತಾನೆ. ಆದರೆ, ಕೊನೆಗೆ ಈತನನ್ನು ಬ್ಯಾಟಲ್ ಆಫ್ ವಿಂಡ್ಮಿಲ್ (ಗಾಳಿ ಗಿರಗಟ್ಟಲೆಗಾಗಿ ಕದನ) ಸೋಲಿಸಲಾಗುತ್ತದೆ. ನಾಯಿಗಳನ್ನು ಬಿಸಿ ಒಲೆಗೆ ಎಸೆಯುವುದನ್ನೊಳಗೊಂಡಂತೆ, ಆತ ತನ್ನ ಪ್ರಾಣಿಗಳ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಾನೆ ಎಂದು ಬಹಳಷ್ಟು ಕಥೆಗಳಿದ್ದವು. ಪಿಲ್ಕಿಂಗ್ಟನಿನ ಫಾಕ್ಸ್ ವುಡ್ ಫಾರ್ಮ್ ಗಿಂತ

ಪಿಂಚ್ ಫೀಲ್ಡ್ ಚಿಕ್ಕದಾಗಿದ್ದರು, ಅದಕ್ಕಿಂತ ಸಮರ್ಥವಾಗಿ ನಡೆಯುತ್ತಿದೆ ಎನ್ನುವ ಹೆಗ್ಗೆಳಿಕೆಯಿತ್ತು. ಫ್ರೆಡಿರಿಕ್, ನಪೊಲಿಯನ್ ನೊಂದಿಗೆ, ಮರವನ್ನು ಪಡೆಯುವುದಾಗಿ ಹೇಳಿ, ಅಲ್ಪಾವಧಿಯ "ಮೈತ್ರಿ" ಮಾಡಿಕೊಳ್ಳುತ್ತಾನೆ. ಆದರೆ, ನಂಬಿಕೆದ್ರೊಹ ಮಾಡಿ, ಅನಿಮಲ್ ಫಾರ್ಮಿನ ಮೇಲೆ ದಾಳಿಮಾಡುತ್ತಾನೆ.

ಮಿಸ್ಟರ್. ಪಿಲ್ಕಿಂಗ್ಟನ್
ಈತ, ಫಾಕ್ಸ್ ವುಡ್ ಎಂಬ ಪಕ್ಕದ ಫಾರ್ಮಿನ ಆತಿ ಕಟುನಿಟ್ಟಾಗಿರದ ಆದರೆ ಕಪಟತನದಿಂದ ಕೂಡಿದ ಮಾಲೀಕ. ಕೃತಿಯ ಪ್ರಕಾರ, ಈ ಫಾರ್ಮ್ ಕಳೆಗಳಿಂದ ತುಂಬಿದೆ. ನಪೊಲಿಯನ್ ಮತ್ತು ಪಿಲ್ಕಿಂಗ್ಟನ್ ಇಬ್ಬರು ಏಸ್ ಆಫ್ ಸ್ಪೇಡ್ಸ್ (ಒಂದು ರೀತಿಯ ಆಟ)ಎಂಬ ಆಟವಾಡುತ್ತಾರೆ. ಪಂದ್ಯದ ಕೊನೆಯಲ್ಲಿ, ಪಂದ್ಯವನ್ನು ಡ್ರಾ(ಸಮ) ಮಾಡಿಕೊಳ್ಳುತ್ತಾರೆ. ಇದಾದನಂತರ ಜೋರಾಗಿ ಜಗಳವಾಡತೊಡಗುತ್ತಾರೆ. ಫಾಕ್ಸ್ ವುಡ್, ಪಿಂಚ್ ಫೀಲ್ಡ್ ಗಿಂತ ದೊಡ್ದಾದಾಗಿದೆ, ಆದರೆ ಆಷ್ಟು ಸಮರ್ಥವಾಗಿ ನಡೆಸಲಾಗುತ್ತಿಲ್ಲ ಎಂದು ವರ್ಣಿಸಲಾಗಿದೆ.
ಮಿಸ್ಟರ್. ವೈಂಪರ್
ಈತ, ಅನಿಮಲ್ ಫಾರ್ಮ್ ಗೂ ಮನುಷ್ಯ ಸಮಾಜಕ್ಕೂ ಸೌಹಾರ್ಧ ಕಲ್ಪಿಸುವ ಕೆಲಸಕ್ಕೆ ನಪೊಲಿಯನ್ನನಿಂದ ನೇಮಕವಾಗಿರುವವನು. ಪ್ರಾಣಿಗಳಿಂದ ತಯಾರಿಸಲು ಸಾಧ್ಯವಿಲ್ಲದ ವಸ್ತುಗಳನ್ನು ಮನುಷ್ಯರಿಂದ ಖರೀದಿಸುವ ಸಲುವಾಗಿ ವೈಂಪರ್ ಅನ್ನು ಬಳಸಲಾಗುತಿತ್ತು. ಮೊದಮೊದಲು ಇದು ನ್ಯಾಯಯುತವಾದ ಕೆಲಸವೆ ಆಗಿತ್ತು, ಏಕೆಂದರೆ ಪ್ರಾಣಿಗಳಿಗೆ ವಿಂಡ್ಮಿಲ್ ಗೆ ಬೇಕಾದ ಅವಯವಗಳನ್ನು ತಯಾರಿಸಲು ಪ್ರಾಣಿಗಳಿಂದ ಸಾಧ್ಯವಿರಲಿಲ್ಲ. ಆದರೆ, ಕಾಲಕ್ರಮೇಣ, ಹಂದಿಗಳಿಗೆ ಮಧ್ಯಸಾರದಂತಹ, ಭೋಗದ ವಸ್ತುಗಳನ್ನು ಖರೀದಸಲು ವೈಂಪರ್ ಅನ್ನು ಬಳಸಲಾಯಿತು.

ಕುದುರೆಗಳು(ಈಕ್ವೈನ್ಸ್)

ಬದಲಾಯಿಸಿ
ಬಾಕ್ಸರ್
ಬಾಕ್ಸರ್ ಎನ್ನುವುದು ನಿಷ್ಠ, ಕರುಣಾಮಯಿ ಮತ್ತು ಗೌರವಾನ್ವಿತವಾದ ಕುದುರೆಯ ಹೆಸರು. ಈತನು ಫಾರ್ಮಿನಲ್ಲಿದ ಪ್ರಾಣಿಗಳಲ್ಲಿ ಆತ್ಯಂತ ಬಲಶಾಲಿಯಾಗಿದ್ದನು. ಹೀಗಿದ್ದರೂ, ಅವನು ಬಹಳ ಮುಗ್ಧನಾಗಿದ್ದ ಮತ್ತು ನಿಧಾನವಾಗಿದ್ದ ಕಾರಣ ಈತ ಯಾವಾಗಲೂ "ನಾನು ಇನ್ನೂ ಹೆಚ್ಚು ಶ್ರಮಪಟ್ಟು ದುಡಿಯುತ್ತೇನೆ" ಹಾಗು ಭ್ರಷ್ಟತನದ ಹೊರತಾಗಿಯು " ನಪೊಲಿಯನ್ ಯಾವಾಗಲೂ ಸರಿ" ಎಂದು ಹೇಳುತ್ತಿದ್ದ.
ಕ್ಲೊವರ್
ಕ್ಲೋವರ್ ಎನ್ನುವುದು ಹೆಣ್ಣು ಕುದುರೆ, ಇದು ಬಾಕ್ಸರ್ ನ ಸಂಗಾತಿ; ಈಕೆ ಬಾಕ್ಸರ್ ನ ಬಗ್ಗೆ ಸದಾ ಗಮನಕೊಡುತ್ತಾಳೆ; ಆಕೆ ಇತರೆ ಕುದುರೆಗಳ, ಮತ್ತು ಸಾಮಾನ್ಯವಾಗಿ ಇತರ ಪ್ರಾಣಿಗಳ ಒಡತಿಯ ಹಾಗೆ ವರ್ತಿಸುತಿತ್ತು. (ಮರಿಬಾತುಗಳಂತಹ(ಡಕ್ಲಿಂಗ್) ಪ್ರಾಣಿಗಳಿಗೆ, ಆಕೆ ಓಲ್ಡ್ ಮೇಜರ್ ಭಾಷಣದ ಸಂದರ್ಭದಲ್ಲಿ ತನ್ನ ಮುಂಗಾಲು ಮತ್ತು ಗೊರಸುಗಳಿಂದ ಇವುಗಳಿಗೆ ಆಶ್ರಯ ನೀಡುತ್ತಾಳೆ).
ಮೊಲಿ
ಮೊಲಿ ಯಾವಾಗಲೂ ತನ್ನ ಹಿತದ ಮತ್ತು ಆಸಕ್ತಿಯ ಬಗ್ಗೆ ಮಾತ್ರವೇ ಚಿಂತಿಸುವ ಒಂದು ಚಿಕ್ಕ ಬಿಳಿಯ ವೇನ್ ಪ್ರಭೇದಕ್ಕೆ ಸೇರಿದ್ದ ಹೆಣ್ಣು ಕುದುರೆ. ಇದಕ್ಕೆ ಅದರ ಕೂದಲಿಗೆ ರಿಬ್ಬನ್ ಹಾಕಿಕೊಳ್ಳುವುದು, ಸಕ್ಕರೆ ಮಿಠಾಯಿಗಳನ್ನು ತಿನ್ನುವುದು, ಮತ್ತು ಮನುಷ್ಯರಿಂದ ಮುದ್ದು ಮತ್ತು ಪಾಲನೆ ಮಾಡಿಸಿಕೊಳ್ಳುವುದೆ ಇದಕ್ಕೆ ಸಂತೋಷಕೊಡುವ ವಿಷಯಗಳಾಗಿದ್ದವು. ಈಕೆ ಬಹಳ ಬೇಗನೆ ಮತ್ತೊಂದು ಫಾರ್ಮ್ ಗೆ ಹೋಗುತ್ತಾಳೆ. ಇದಾದ ನಂತರ ಈಕೆಯ ಪ್ರಾಸ್ತಪ ಒಂದೆಒಂದು ಬಾರಿ ಆಗುತ್ತದೆ.
ಬೆಂಜಾಮಿನ್
ಬೆಂಜಾಮಿನ್, ಎನ್ನುವುದು ಒಂದು ಕತ್ತೆ. ಅತಿ-ದೀರ್ಘ ಕಾಲ ಬದುಕಿದ ಪ್ರಾಣಿಗಳಲ್ಲಿ ಇದೂ ಒಂದು. ಇದಕ್ಕೆ ಸಿಡುಕಿನ ಸ್ವಭಾವವಿತ್ತು. ಇದಲ್ಲದೆ ಓದುಬಲ್ಲ ಕೆಲವೇಕೆಲವು ಪ್ರಾಣಿಗಳಲ್ಲಿ ಇದು ಕೂಡ ಒಂದಾಗಿತ್ತು.[] ಬೆಂಜಾಮಿನ್ ಬಾಕ್ಸರ್ ನ ಆಪ್ತಗೆಳೆಯ. ಬೆಂಜಾಮಿನಿನ ಮನಸ್ಸಿಗೆ ಹಂದಿಗಳ ಭ್ರಷ್ಟಚಾರವು ಹೆಚ್ಚಾಗುತ್ತಿದೆ ಎಂದು ಅನ್ನಿಸಿದರೂ ಕೂಡ,ಇದು ಬೇರೆಯ ಪ್ರಾಣಿಗಳಿಗೆ ಅದರ ಬಗ್ಗೆ ಯಾವುದೇ ಮುನ್ನೆಚೆರಿಕೆ ಕೊಡುವುದಿಲ್ಲ. ನೀನು ಕ್ರಾಂತಿಯ ಮುಂಚೆ ಸುಖವಾಗಿದ್ದೆಯೊ ಅಥವಾ ನಂತರವೊ ಎಂದು ಬೆಂಜಾಮಿನಿನನ್ನು ಪ್ರಶ್ನಸಿದಾಗ, ಬೆಂಜಾಮಿನ್ "ಕತ್ತೆಗಳು ಬಹಳ ಕಾಲ ಬದಕುತ್ತವೆ, ನೀವು ಯಾರೊಬ್ಬರೂ ಕತ್ತೆ ಸಾಯುವುದನ್ನು ನೋಡಿಲ್ಲ" ಎಂದು ಹೇಳುತ್ತದೆ. ಇದು ಎಲ್ಲವನ್ನು ಸದಾ ಸಂದೇಹಿಸುವ ಸ್ವಭಾವ ಹೊಂದಿರುತ್ತದೆ ಜೊತೆಗೆ ಇದು ಬಹಳ ನಿರಾಶವಾದಿಯಾಗಿರುತ್ತದೆ. ಇದು "ಜೀವನ ಯಾವಾಗಲೂ ನಡೆಯುತ್ತಿರುವ ಹಾಗೆ ಕೆಟ್ಟದಾಗಿ ನಡೆಯುತ್ತದೆ" ಎಂದು ಸದಾ ಹೇಳುತಿರುತ್ತದೆ. ಇಷ್ಟೆಲ್ಲಾ ಆದರೂ, ಇದು ಫಾರ್ಮಿನಲ್ಲಿರುವ ಬುದ್ದಿವಂತ ಪ್ರಾಣಿಗಳಲ್ಲಿ ಇದೂ ಒಂದು, ಇದಕ್ಕೆ "ಎಲ್ಲಾ ಹಂದಿಗಳ ಹಾಗೆಯೆ ಓದಲು ಬರುತ್ತದೆ".[]

ಇತರ ಪ್ರಾಣಿಗಳು

ಬದಲಾಯಿಸಿ
ಮುರಿಯಲ್
ಇದೊಂದು ವಯಸ್ಸಾದ ಬುದ್ದಿವಂತ ಮೇಕೆ. ಇದಕ್ಕೆ ಫಾರ್ಮಿನಲ್ಲಿನ ಎಲ್ಲಾ ಪ್ರಾಣಿಗಳ ಜೊತೆ ಸ್ನೇಹವಿತ್ತು. ಈಕೆ, ಬೆಂಜಾಮಿನ್ ಮತ್ತು ಸ್ನೋಬಾಲ್ ಗಳ ಹಾಗೆ ಫಾರ್ಮಿನಲ್ಲಿ ಓದಬಲ್ಲ ಕೆಲವು ಪ್ರಾಣಿಗಳಲ್ಲಿ ಒಬ್ಬಳು (ಈಕೆ ಎಲ್ಲಾ ಆಕ್ಷರಗಳನ್ನು ಬಿಡಿಯಾಗಿ ಮೊದಲು ಓದಬೇಕಿತ್ತು, ಹೀಗಾಗಿ ಅದು ಸ್ವಲ್ಪ ಕಷ್ಟವಾಗಿತ್ತು). ಈಕೆ, ಏಳು ಅನುಶಾಸನಗಳು ನಿರಂತರವಾಗಿ ಬದಲಾಗುತ್ತಿದೆ ಎಂದು ಕ್ಲೋವರ್ ಗೆ ಪತ್ತೆಮಾಡಲು ಸಹಾಯ ಮಾಡುತ್ತಾಳೆ.
ನಾಯಿಮರಿಗಳು (ದಿ ಪಪಿಸ್)
ಜೆಸ್ಸಿ ಮತ್ತು ಬ್ಲೂಬೆಲ್ ನ ಮರಿಗಳಾದ ಇವುಗಳನ್ನು, ನಪೊಲಿಯನ್ ಹುಟ್ಟಿದ ಕೂಡಲೆ ತೆಗೆದುಕೊಂಡು ಹೋಗುತ್ತಾನೆ. ಈ ಮರಿಗಳನ್ನು ನಪೊಲಿಯನ್ ಪಾಲನೆ ಮಾಡಿ, ತನ್ನ ರಕ್ಷಣೆ ಪಡೆಯನ್ನಾಗಿ ಮಾಡಿಕೊಳ್ಳುತ್ತಾನೆ. ಈ ನಾಯಿಗಳನ್ನು ಬೇಟೆ ಪ್ರಾಣಿಗಳಿಗಿರುವ ದಾರ್ಷ್ಟ್ಯ ತುಂಬಿ ಬೆಳೆಸಲಾಗುತ್ತದೆ. ಇವುಗಳನ್ನು ಬಳಸಿ ನಾಲ್ಕು ಕಿರಿಯ ಹಂದಿ, ಒಂದು ಕುರಿ ಹಾಗು ಆನೇಕ ಕೋಳಿಗಳನ್ನು ಸಾಯಿಸಲಾಗುತ್ತದೆ. ಬಾಕ್ಸರ್ ನೊಂದಿಗೆ ಈ ನಾಯಿಗಳು ಇದೇ ರೀತಿ ಮಾಡಲು ನೋಡುತ್ತವೆ. ಬಾಕ್ಸರ್ ತನ್ನ ಗೊರಸಿನ ಸಹಾಯದಿಂದ ಒಂದು ನಾಯಿಮರಿಯನ್ನು ಹಿಡಿಯುತ್ತಾನೆ. ನಾಯಿ ಮರಿ ದಯೆತೋರಿಸಲು ಬೇಡಿಕೊಳ್ಳುತ್ತದೆ. ಆಗ, ನಪೊಲಿಯನ್ನನ ಆಜ್ಞೆಯ ಮೇರೆಗೆ ಬಾಕ್ಸರ್ ನಾಯಿ ಮರಿಯನ್ನು ಬಿಡುಗಡೆ ಮಾಡುತ್ತಾನೆ.
ಮೋಸಸ್ - ಕಾಗೆ (ರೇವನ್)
ಫಾರ್ಮಿಗೆ ಯಾವಾಗಲಾದರೊಮ್ಮೆ ಈ ಮುದಿ ಕಾಗೆ ಭೇಟಿ ನೀಡುತ್ತದೆ. ಇದು ಫಾರ್ಮ್ ಸದಸ್ಯರಿಗೆ ಮೋಡಗಳ ಆಚೆಗಿನ ಶುಗರ್ ಕ್ಯಾಂಡಿ ಪರ್ವತ ಎಂಬ ಅದ್ಬುತ ಜಾಗದ ಕುರಿತು ಆನೇಕ ಮನರಂಜನೀಯ ಕಥೆಗಳನ್ನು ಹೇಳಿ ಉಲ್ಲಾಸಪಡಿಸುತ್ತದೆ. ಶ್ರಮಪಟ್ಟು ದುಡಿಯುವ ಪ್ರಾಣಿಗಳು ಮಾತ್ರ ಸತ್ತ ಮೇಲೆ ಈ ಪರ್ವತಕ್ಕೆ ಹೋಗುತ್ತಾರೆ, ಎಂದು ದೃಢವಾಗಿ ಹೇಳುತ್ತದೆ. ಈ ಪಾತ್ರವನ್ನು ರಷ್ಯಾದ ಚರ್ಚಿನ ಸಂಕೇತವೆಂದು ಆರ್ಥೈಸಲಾಗಿದೆ. ಶುಗರ್ ಕ್ಯಾಂಡಿ ಪರ್ವತ, ಸ್ವರ್ಗದ ಸಂಕೇತ ಎಂದು ಹೇಳಲಾಗುತ್ತದೆ.[] ಈತ ಪ್ರಾಣಿಗಳ ಯೋಚನೆಯನ್ನು ಶುಗರ್ ಕ್ಯಾಂಡಿ (ಅವುಗಳ ಕೆಲಸದ ಬದಲು)ಕಡೆ ಹರಿಸುತ್ತಾನೆ. ಅದೂ ಅಲ್ಲದೆ ಈತ ಮಾತ್ರ ಯಾವುದೇ ಕೆಲಸ ಮಾಡುವುದಿಲ್ಲ. ಈತ ಬೇರೆ ಪ್ರಾಣಿಗಳಿಗೆ ಹೋಲಿಸಿದಾಗ ತಾನು ಅವುಗಳ ಸಮನಲ್ಲ ಎಂದುಕೊಳ್ಳುತ್ತಾನೆ. ಹೀಗಾಗಿಯೆ, ಕ್ರಾಂತಿಯ ನಂತರ ಎಲ್ಲಾ ಪ್ರಾಣಿಗಳು ಸಮ ಎಂದಾದ ಮೇಲೆ ಇವನು ಫಾರ್ಮಿನಿಂದ ಹೊರ ಹೋಗುತ್ತಾನೆ. ಆದರೆ ಕಥೆಯಲ್ಲಿ ಸ್ವಲ್ಪ ಸಮಯದ ನಂತರ, ಈತ ಫಾರ್ಮಿಗೆ ಹಿಂದಿರುಗಿ ಶುಗರ್ ಕ್ಯಾಂಡಿ ಪರ್ವತವಿರುವುದರ ಬಗ್ಗೆ ಹೇಳುವುದನ್ನು ಮುಂದುವರೆಸುತ್ತಾನೆ. ಮೋಸಸ್ ಬಗ್ಗೆ ಹಂದಿಗಳ ನಿಲುವು ಕುರಿತು ಇತರೆ ಪ್ರಾಣಿಗಳಿಗೆ ಗೊಂದಲವಾಗುತ್ತದೆ; ಹಂದಿಗಳು ಮೋಸಸ್ ನ ಮಾತುಗಳು ಆರ್ಥರಹಿತವೆಂದು ಜರಿದರೂ ಕೂಡ, ಫಾರ್ಮಿನಲ್ಲಿ ಆತನನ್ನು ಉಳಿಯಲು ಬಿಡುತ್ತಾರೆ. ಹಂದಿಗಳ ಮೇಲೆ ಸಂದೇಹಪಡುತ್ತಿದ್ದ ಪ್ರಾಣಿಗಳು ಯಾವುದೆ ರೀತಿಯ ದಂಗೆಯ ಬಗ್ಗೆ ಯೋಚನೆ ಮಾಡದೆ, ಸತ್ತ ಮೇಲೆ ಶುಗರ್ ಕ್ಯಾಂಡಿ ಪರ್ವತದಲ್ಲಿ ಸುಖದೊರಕುತ್ತದೆ ಎನ್ನುವುದರ ಕಡೆಗೆ, ಆ ಪ್ರಾಣಿಗಳ ಯೋಚನೆಗಳನ್ನು ಸೆಳೆಯುತ್ತಿದ್ದ ಕಾರಣ ಹಂದಿಗಳು ಅವನನ್ನು ಫಾರ್ಮಿನಲ್ಲಿ ಉಳಿಯಲು ಬಿಟ್ಟಿದ್ದವು. ಕೊನೆಯಲ್ಲಿ, ಕ್ಲೊವರ್, ಬೆಂಜಾಮಿನ್ ಮತ್ತು ಹಂದಿಗಳ ಜೊತೆಗೆ ಕ್ರಾಂತಿಯನ್ನು ನೆನಪಿನಲ್ಲಿಟ್ಟುಕೊಂಡಿರುವ ಕೆಲವೇ ಕೆಲವು ಪ್ರಾಣಿಗಳಲ್ಲಿ ಮೋಸಸ್ ಕೂಡ ಒಂದು.
ಕುರಿಗಳು (ದಿ ಶೀಪ್)
ಅವುಗಳು ಪರಿಸ್ಥಿತಿಯನ್ನು ಆರ್ಥಮಾಡಿಕೊಳ್ಳದಿದ್ದದೂ ಕೂಡ ನಪೊಲಿಯನ್ನನ ಸಿದ್ಧಾಂತಗಳನ್ನು ವಿವೇಚನೆಯಿಲ್ಲದೆ(ಕುರುಡುತನದಿಂದ) ಸಮರ್ಥಿಸುತ್ತಾರೆ. ಆವುಗಳು "ನಾಲ್ಕು ಕಾಲುಗಳು ಒಳ್ಳೆಯದು, ಎರಡು ಕಾಲು ಕೆಟ್ಟದ್ದು" ಎನ್ನುವ ನುಡಿಗಳನ್ನು ಆವಾಗಾವಾಗ ಹೇಳುತ್ತಿರುವುದಾಗಿ ಚಿತ್ರಿಸಲಾಗಿದೆ. ಕೃತಿಯ ಕೊನೆಯಲ್ಲಿ,ಹಂದಿಗಳು ಎರಡು ಕಾಲಿನಲ್ಲಿ ಓಡುವುದನ್ನು ಕಲಿತ ಮೇಲೆ ಏಳು ಅನುಶಾಸನಗಳಲ್ಲಿ ಒಂದು ಬದಲಾಗುತ್ತದೆ. ಇದಾದ ಬಳಿಕ ಅವುಗಳು "ನಾಲ್ಕು ಕಾಲುಗಳು ಒಳ್ಳೆಯದು, ಎರಡು ಕಾಲುಗಳು ಉತ್ತಮ" ಎಂದು ಕೂಗತೊಡಗುತ್ತವೆ. ಇತರೆ ಪ್ರಾಣಿಗಳ ಅಸಮ್ಮತಿಯನ್ನು ಕೇಳದ ಹಾಗೆ ಇವುಗಳು ಮಾಡುತ್ತಿದ್ದ ಕಾರಣ ಇವುಗಳನ್ನು ಹಂದಿಗಳು ನಂಬಬಹುದಿತ್ತು.
ಕೋಳಿಗಳು (ದಿ ಹೆನ್ಸ್)
ಇವುಗಳು ತಮ್ಮ ಮೊಟ್ಟೆಗಳನ್ನು, ಮನುಷ್ಯರಿಗೆ ಮಾರಲು ಬಯಸಿದ್ದ, ಮೇಲಾಧಿಕರಿಗಳಿಗೆ (ಹಂದಿಗಳು) ಒಪ್ಪಿಸುವ ಬದಲು ನಾಶ ಮಾಡುತ್ತಿದ್ದವು. ಹೀಗಾದಾಗ, ಹಂದಿಗಳಿಗೆ ಬೇಕಾದದ್ದು ಸಿಗುವವರೆಗೂ ನಪೊಲಿಯನ್ ಕೋಳಿಗಳಿಗೆ ಆಹಾರ ಕೊಡುವುದಿಲ್ಲ, ಎಂದು ಹೆದರಿಸುತ್ತಾನೆ.
ಹಸುಗಳು (ದಿ ಕೌವ್ಸ್)
ಹಸುಗಳ ಹಾಲು ಕರೆಯುವುದನ್ನು ಕಲಿತುಕೊಂಡ ಹಂದಿಗಳು, ಅವುಗಳ ಹಾಲನ್ನು ಕದಿಯುತ್ತವೆ. ಈ ಹಾಲಿನಿಂದ ಹಂದಿಗಳು ತಮಗೆಂದು ಒಂದು ರೀತಿಯ ಮಾಲ್ಟನ್ನು(ಪಿಗ್ ಮಾಶ್) ತಯಾರಿಸುತ್ತವೆ. ಆದರೆ, ಇತರ ಪ್ರಾಣಿಗಳಿಗೆ ಇಂತಹ ಯಾವುದೇ ಸೌಲಭ್ಯವಿರುವುದಿಲ್ಲ.
ಬೆಕ್ಕು (ದಿ ಕ್ಯಾಟ್)
ಇದು ಯಾವುದೇ ಕೆಲಸ ಮಾಡುವುದಿಲ್ಲ. ಇದು ಬಹಳಷ್ಟು ಸಮಯ ಗೈರುಹಾಜರಾಗಿರುತ್ತದೆ, ಆದರೂ ಅದು ಕೊಡುವ ಕಾರಣಗಳು ಎಷ್ಟೊಂದು ನಂಬುವ ಹಾಗಿರುತ್ತವೆ, ಎಂದರೆ ಅದಕ್ಕೆ ಯಾವುದೆ ಶಿಕ್ಷೆಯಾಗುವುದಿಲ್ಲ. ಅದೂ ಅಲ್ಲದೆ, "ಅದೂ ಎಷ್ಟು ಮಧುರವಾಗಿ ಮಾತಾನಾಡುತ್ತದೆ ಅಂದರೆ ಅದರ ಮಾತನ್ನು ನಂಬದೆ ಇರಲು ಸಾಧ್ಯ ಇರಲಿಲ್ಲ". [ಸೂಕ್ತ ಉಲ್ಲೇಖನ ಬೇಕು] ಈಕೆಗೆ ಫಾರ್ಮಿನ ರಾಜಕೀಯದಲ್ಲಿ ಯಾವುದೇ ರೀತಿಯ ಆಸಕ್ತಿಯಿರುವುದಿಲ್ಲ. ಈಕೆ ಭಾಗವಹಿಸಿದ ಒಂದೇ ಒಂದು ಚುನಾವಣೆಯಲ್ಲಿ ಎರಡು ಪಕ್ಷಗಳಿಗೂ ಮತ ಚಲಾಯಿಸಿರುತ್ತಾಳೆ.[ಸೂಕ್ತ ಉಲ್ಲೇಖನ ಬೇಕು]

ಕೃತಿಯ ಹಿನ್ನಲೆ

ಬದಲಾಯಿಸಿ

ಸ್ಪೇನಿನ ಅಂತರ್ಕಲಹದ ಸಂದರ್ಭದಲ್ಲಿ ಜಾರ್ಜ್ ಆರ್ವೆಲ್ ಗಾದ ಅನುಭವಗಳಿಂದ ಪ್ರೇರಿಪಿತನಾಗಿ ಈ ಕೃತಿಯನ್ನು 1943 ಮತ್ತು 1944ರಲ್ಲಿ ಬರೆದನು. ಇದಕ್ಕೂ ಹಿಂದೆ 1938ರಲ್ಲಿ ಪ್ರಕಟವಾದ ಹೋಮೆಜ್ ಟು ಕ್ಯಾಟೊಲೊನಿಯ ಎನ್ನುವ ಕೃತಿಯಲ್ಲಿ ಜಾರ್ಜ್ ಆರ್ವೆಲ್ ಸ್ಪೇನಿನ ಅಂತರ್ಕಲಹದಲ್ಲಿ ಅವನಿಗಾದ ಅನುಭವಗಳನ್ನು ವಿವರಿಸಿದ್ದಾನೆ. ಅನಿಮಲ್ ಫಾರ್ಮ್ ನ ಯುಕರೇನಿನ 1947ರ ಆವೃತ್ತಿಯ ಮುನ್ನುಡಿಯಲ್ಲಿ ಈತ ಸ್ಪೇನಿನಲ್ಲಿ ಕಮುನಿಸ್ಟ್ ಆನಾಚಾರದಿಂದ ತಪ್ಪಿಸಿಕೊಳ್ಳುವಾಗ "ಸರ್ವಾಧಿಕಾರದ ಪ್ರಭುತ್ವಗಳು ಹೇಗೆ ತಮ್ಮ ಬಗ್ಗೆ ಒಳ್ಳೆಯ ಆಭಿಪ್ರಾಯಗಳನ್ನು ಮೂಡಿಸುವ ಹಾಗೆ ಮಾಡುವ ವ್ಯಾಪಕ ಪ್ರಚಾರ, ಪ್ರಜಾಪ್ರಭುತ್ವವಿರುವ ರಾಷ್ಟ್ರಗಳಲ್ಲಿನ ವಿವೇಚನೆಯುಳ್ಳ ಮನುಷ್ಯರ ಅಭಿಪ್ರಾಯಗಳ ಮೇಲೆ ಕೂಡ ಹೇಗೆ ಪ್ರಭಾವ ಬೀರುತ್ತವೆ" ಎಂದು ಕಂಡುಕೊಂಡೆ ಎಂದು ವಿವರಿಸುತ್ತಾನೆ. ಮೂಲತ: ಸೋಷಿಯಲಿಸ್ಟ್ (ಸಮಾಜವಾದಿ) ಸಿದ್ಧಾಂತಗಳನ್ನು ಸ್ಟಾಲಿನ್ ಆಪವಿತ್ರ ಮಾಡುತ್ತಿದ್ದಾನೆ ಎಂದು ಎಣಿಸಿದ ಆರ್ವೆಲ್ ಗೆ ಇದನ್ನು ಖಂಡಿಸಿ, ಹೊರ ಜಗತ್ತಿಗೆ ಸಾರಬೇಕೆಂದು ಇದು ಪ್ರೇರೆಪಿಸಿತು.[೧೦] ಅದೆ ಮುನ್ನುಡಿಯಲ್ಲಿ ಆರ್ವೆಲ್ ಈ ಕಥೆಯನ್ನು ಫಾರ್ಮ್ ನಲ್ಲಿ ನಡೆಯುವ ಹಾಗೆ ಏಕೆ ಚಿತ್ರಿಸಲಾಗಿದೆ ಎಂದು ಕೂಡ ವಿವರಿಸುತ್ತಾನೆ.[೧೦]

...I saw a little boy, perhaps ten years old, driving a huge carthorse along a narrow path, whipping it whenever it tried to turn. It struck me that if only such animals became aware of their strength we should have no power over them, and that men exploit animals in much the same way as the rich exploit the proletariat.

ಆರ್ವೆಲ್ ಈ ಕೃತಿಯನ್ನು ಪ್ರಕಟಿಸಲು ಬಹಳ ತೊಂದರೆಗಳನ್ನು ಎದುರಿಸಬೇಕಾಯಿತು.[why?] ನಾಲ್ಕು ಪ್ರಕಾಶಕರು ಒಲ್ಲೆ ಎಂದರು; ಇದನ್ನು ಪ್ರಕಟಿಸಲು ಒಬ್ಬ ಮೊದಲು ಒಪ್ಪಿಕೊಂಡಿದ್ದರೂ ಸಹ ಇನ್ಪರ್ಮೇಷನ್ ಮಂತ್ರಾಲಯದೊಂದಿಗೆ ಸಮಾಲೋಚಿಸದ ನಂತರ ನಿರಾಕರಿಸಿದನು.[೧೧][೧೨] ಕೊನೆಗೆ, ಸೆಕೆರ್ ಅಂಡ್ ವಾರ್ಬರ್ಗ್ 1945ರಲ್ಲಿ ಇದರ ಮೊದಲ ಆವೃತ್ತಿಯನ್ನು ಪ್ರಕಟಮಾಡಿದರು.

 
ಈ ಪುಸ್ತಕದಲ್ಲಿ ವಿವರಿಸಲಾಗಿರುವ ಕೊಂಬು(ಹಾರ್ನ್) ಮತ್ತು ಗೊರಸಿನ (ಹೂಫ್) ಬಾವುಟವು, ಸುತ್ತಿಗೆ(ಹಾಮರ್) ಮತ್ತು ಕುಡುಗೋಲಿನ(ಸಿಕಲ್)ಮೇಲೆ ಅಧರಿಸಿದೆ ಎಂದು ಆರ್ಥೈಸಲಾಗಿದೆ.

ಈಸ್ಟರ್ನ್ ಬ್ಲಾಕ್ ನಲ್ಲಿ ಅನಿಮಲ್ ಫಾರ್ಮ್ ಮತ್ತು ನೈನ್ಟೀನ್ ಏಟಿ ಫೋರ್ ಎರಡು ಪುಸ್ತಕಗಳು 1989ರ ಡೆ ವೆಂಡೆ ರವರೆಗೂ ನಿಷೇಧಿಸಲ್ಪಟ್ಟ ಪುಸ್ತಕಗಳ ಪಟ್ಟಿಯಲ್ಲಿದ್ದವು. ಈ ಪ್ರದೇಶದಲ್ಲಿ, ಈ ಎರಡು ಪುಸ್ತಕಗಳು ಕಾನೂನುಬಾಹಿರವಾದ ಸಾಮಿಸಡಾಟ್ ಜಾಲದ ಮೂಲಕ ರಹಸ್ಯವಾಗಿ ಸಿಗುತ್ತಿದ್ದವು.[೧೩] (ಈಸ್ಟರ್ನ್ ಬ್ಲಾಕ್: ಮುಂಚಿನ, ಪೂರ್ವ ಯೊರೋಪಿನ ಕಮುನಿಸ್ಟ್‌ ರಾಷ್ಟ್ರಗಳು; ಡೆ ವೆಂಡೆ: ಜರ್ಮನ್ ಭಾಷೆಯ ಪದ, ಇದರ ಅರ್ಥ ಬದಲಾವಣೆ ಅಥವಾ ಸಂಕ್ರಮಣ ಕಾಲ) ಈ ಕೃತಿಯಲ್ಲಿ ಬರುವ ಬ್ಯಾಟಲ್ ಆಫ್ ವಿಂಡ್ಮಿಲ್ (ಗಾಳಿ ಗಿರಿಗಟ್ಟಲೆಗಾಗಿ ಕದನ) ಘಟನೆಯನ್ನು ಸಂತ್ ಸಿಂಗ್ ಬಾಲ್ "ಕಥಾಹಂದರವನ್ನು ವಿವರಿಸುವ ಬಹಳ ಮುಖ್ಯ ಪ್ರಕರಣ" ಎಂದು ಬಣ್ಣಿಸುತ್ತಾನೆ.[೧೪] ಹಾರ್ಲಡ್ ಬ್ಲೂಮ್ ಪ್ರಕಾರ ಬ್ಯಾಟಲ್ ಆಫ್ ವಿಂಡ್ಮಿಲ್ (ಗಾಳಿ ಗಿರಿಗಟ್ಟಲೆಗಾಗಿ ಕದನ): ವಾಲ್ಮಿಯ ವಿಂಡ್ಮಿಲ್ ಅನ್ನು ಪ್ರಸಿದ್ಧಿಗೆ ತಂದ 1792ರಲ್ಲಿ ಪ್ರಷ್ಯಯನ್ ರಾಜ್ಯದ ಆಕ್ರಮಣವನ್ನು ಬ್ರನ್ಸ್ ವಿಕ್ ನ ಡ್ಯೂಕ್ ಹಿಮ್ಮೆಟ್ಟಿಸಿದ ಘಟನೆ ನೆನಪಿಸುತ್ತದೆ ಎಂದು ಬರೆಯುತ್ತಾನೆ.[೧೫] ಇದಕ್ಕೆ ವ್ಯತಿರಿಕ್ತವಾಗಿ, ಪೀಟರ್ ಎಡಗರ್ಲಿ ಫಿರ್ಚೊವ್ ಮತ್ತು ಪೀಟರ್ ಹಾಬಲಿ ಡೇವಿಸನ್ ಅನಿಮಲ್ ಫಾರ್ಮ್ ಎಲ್ಲಾ ಘಟನೆಗಳು ಸೋವಿಯತ್ ಒಕ್ಕೂಟ ಗೆ ಸಂಬಂಧಿಸಿದ ಹಾಗೆ ಸಂಕೇತವಾಗಿರುವುದನ್ನು ಗಮನದಲ್ಲಿಟ್ಟುಕೊಂಡು, ಕೃತಿಯಲ್ಲಿ ಪ್ರಸ್ತಾಪವಾಗಿರುವ ಈ ಕಾಲ್ಪನಿಕ ಯುದ್ದಗಳು ಗ್ರೇಟ್ ಪಾಟ್ರಿಯಾಟಿಕ್ ವಾರ್(ಎರಡನೇ ಮಹಾಯುದ್ಧ),[೧೬] ಅದರಲ್ಲೂ ವಿಶೇಷವಾಗಿ ಬ್ಯಾಟಲ್ ಆಫ್ ಸ್ಟಾಲಿನ್ ಗ್ರಾಡ್ (ಸ್ಟಾಲಿನ್‌ಗ್ರಾಡ್ ಸಮರ) ಮತ್ತು ಬ್ಯಾಟಲ್ ಆಫ್ ಮಾಸ್ಕೋ (ಮಾಸ್ಕೋ ಸಮರ) ವನ್ನು ಸಂಕೇತಿಸುತ್ತದೆ ಎಂದು ವಿಶ್ಲೇಷಿಸುತ್ತಾರೆ.[೧೭] ಪ್ರೆಸ್ಟವಿಕ್ ಹೌಸ್ ಅನಿಮಲ್ ಫಾರ್ಮ್ ಗೆಂದು ಇರುವ ಆಕ್ಟಿವಿಟಿ ಪ್ಯಾಕ್ ನಲ್ಲಿ (ಚಟುವಟಿಕೆ ಆಧರಿಸಿದ ಕಲಿಸುವ ಸಾಮಗ್ರಿ)ಕೂಡ "ಬ್ಯಾಟಲ್ ಆಫ್ ವಿಂಡ್ಮಿಲ್ (ಗಾಳಿ ಗಿರಿಗಿಟ್ಟಲೆಗಾಗಿ ಕದನ)ಕ್ಕೆ ಪ್ರೇರಣೆ ಏನು ಎನ್ನುವುದು ಅಸ್ಪಷ್ಟವಾಗಿದೆ" ಎಂದು ಹೇಳಿದರೂ ಕೂಡ, ಇದನ್ನು ಎರಡನೇ ಮಹಾಯುದ್ಧದ ಸಂಕೇತವೆಂದು ಸೂಚಿಸಲಾಗಿದೆ.[೧೮] ಈ ಯುದ್ದದ ಸಂದರ್ಭದಲ್ಲಿ, ಫ್ರೆಡಿರಿಕ್ ರಂಧ್ರವನ್ನು ಕೊರೆದು, ಸಿಡ್ಡಿಮದ್ದುಗಳನ್ನು ಹಾಕುತ್ತಾನೆ. ಜರ್ಮನ್ ಆಕ್ರಮಣದ ನಡುವೆಯು ಜೋಸೆಫ್ ಸ್ಟಾಲಿನ್ ಮಾಸ್ಕೊದಲ್ಲಿ ಉಳಿದುಕೊಂಡಿದ್ದನ್ನು ಗುರುತಿಸಿ, ಆರ್ವೆಲ್ ಮೊದಲಿನ "ನಪೊಲಿಯನ್ನೊಳಗೊಂಡಂತೆ ಎಲ್ಲಾ ಪ್ರಾಣಿಗಳು ರಕ್ಷಣೆ ಪಡೆದವು" ಎನ್ನುವ ಚಿತ್ರಣವನ್ನು, ಪ್ರಕಾಶಕರೊಂದಿಗೆ ಮಾತನಾಡಿ "ನಪೊಲಿಯನ್ ಹೊರತುಪಡಿಸಿ, ಎಲ್ಲಾ ಪ್ರಾಣಿಗಳು ರಕ್ಷಣೆ ಪಡೆದವು" ಎಂದು ಬದಲಾಯಿಸುತ್ತಾನೆ.[೧೯] ಬ್ಯಾಟಲ್ ಆಫ್ ಕೌಶೆಡ್ (ಕೊಟ್ಟಿಗೆಗಾಗಿ ಕದನ) , ಸೋವಿಯತ್ ರಷ್ಯಾ ದ ಮೇಲಿನ 1918ರ ಆಕ್ರಮಣ,[೧೭] ಹಾಗು ರಷ್ಯಾದ ಅಂತರ್ಕಲಹದಲ್ಲಿ ವೈಟ್ ರಷ್ಯನ್ ರ ಸೋಲನ್ನು ಸಂಕೇತಿಸುತ್ತದೆ.[೧೬]

ಪ್ರಕಾಶಕರನ್ನು ಹುಡುಕಲು ನಡೆಸಿದ ಪ್ರಯತ್ನ

ಬದಲಾಯಿಸಿ

ಎರಡನೇ ಮಹಾಯುದ್ದದ ಸಂದರ್ಭದಲ್ಲಿ ಆರ್ವೆಲ್ ರ ಸೋವಿಯತ್ ವಿರೋಧಿ ಸಾಹಿತ್ಯವನ್ನು ಅವನ ಮಾಮೂಲಿನ ಪ್ರಕಾಶಕರಾದ ಗೊಲ್ಲಾಂಸ್ ಒಳಗೊಂಡಂತೆ, ಬಹಳಷ್ಟು ಪ್ರಮುಖ ಪ್ರಕಾಶಕರು ಪ್ರಕಟಿಸಲು ಒಪ್ಪುವುದಿಲ್ಲ ಎನ್ನುವುದು ಸ್ಪಷ್ಟವಾಯಿತು. ಆರ್ವೆಲ್ ತನ್ನ ಕೃತಿಯ ಹಸ್ತಪ್ರತಿಯನ್ನು ಫೇಬರ್ ಅಂಡ್ ಫೇಬರ್ ಗೆ ಒಪ್ಪಿಸಿದನು, ಇಲ್ಲಿ ಕವಿ ಟಿ.ಎಸ್. ಎಲಿಯಟ್ (ಇವರು ಈ ಸಂಸ್ಥೆಯ ನಿರ್ದೇಶಕರಾಗಿದ್ದರು.) ಕೂಡ ತಿರಸ್ಕರಿಸಿದರು. ಎಲಿಯಟ್ ಆರ್ವೆಲ್ "ಒಳ್ಳೆಯ ಬರವಣಿಗೆ" ಮತ್ತು "ಮೂಲಭೂತ ಪ್ರಾಮಾಣಿಕತೆ" ಯನ್ನು ಹೊಗಳಿ ಪತ್ರಬರೆಯುತ್ತಾರೆ. ಆದರೆ ಆರ್ವೆಲ್ ರ ಅಭಿಪ್ರಾಯದಲ್ಲಿ, "ಇದು ನನ್ನ ಪ್ರಕಾರ ಟ್ರೊಟ್ಸ್ಕಿಯ ಬೆಂಬಲದಂತೆ (ಟ್ರಾಟ್ಸ್ಕಿಐಟ್) ಕಾಣಿಸುತ್ತದೆ", ಈ ಬಗ್ಗೆ ಸ್ವಲ್ಪವಾದರೂ ಸಹಮತಿಯಿದ್ದರೆ ಇದನ್ನು ಪ್ರಕಟಿಸಬಹುದಿತ್ತು, ಎಂದು ಹೇಳುತ್ತಾರೆ. ಎಲಿಯಟ್ ತಮ್ಮ "ಈ ನಿಲುವು ಸಮಂಜಸವಾಗಿಲ್ಲ" ಎಂದು ಹೇಳುತ್ತಾರೆ. ಫಾರ್ಮಿನ ಆಡಳಿತ ನಡೆಸಲು ಹಂದಿಗಳು ಸಮರ್ಥ ಎಂದು ಚಿತ್ರಿಸಲಾಗಿದೆ; ಎಲಿಯಟ್ "ಈಗ ಅವಶ್ಯಕತೆಯಿರುವುದು..... ಹೆಚ್ಚಿನ ಸಮಾಜವಾದ ಸಿದ್ಧಾಂತ(ಕಮ್ಯೂನಿಸಂ) ಅಲ್ಲ; ಬದಲು ಸಾರ್ವಜನಿಕ ಒಳಿತನ್ನು ಬಯಸುವ ಹಂದಿಗಳು" ಎಂದು ಯಾರಾದರೂ ವಾದ ಮಂಡಿಸಬಹುದು, ಎಂದು ಹೇಳಿದನು.[೨೦][೨೧] ಯುದ್ಧದ ಸಂದರ್ಭದಲ್ಲಿ ಇವನು ಸಂಪರ್ಕಿಸಿದ ಒಬ್ಬ ಪ್ರಕಾಶಕ ಅನಿಮಲ್ ಫಾರ್ಮ್ ಅನ್ನು ಪ್ರಕಟಿಸಲು ಮೊದಲು ಒಪ್ಪಿಕೊಳ್ಳುತ್ತಾನೆ, ಆದರೆ ಬ್ರಿಟಿಷ್ ಇನ್ಪರ್ಮೇಷನ್ ಮಂತ್ರಾಲಯ ಕೊಟ್ಟ ಆಧಿಕೃತ ಎಚ್ಚರಿಕೆಯ ನಂತರ ಹಿಂದಕ್ಕೆ ಸರಿಯುತ್ತಾನೆ.[೨೨] ಆದರೆ, ಈ ಆದೇಶವನ್ನು ಕೊಟ್ಟ ಸರಕಾರಿ ನೌಕರನನ್ನು ಸೋವಿಯತ್ ದೇಶದ ಒಬ್ಬ ಗೂಢಾಚಾರನೆಂದು ಪತ್ತೆ ಹಚ್ಚಲಾಗುತ್ತದೆ.[೨೩] ಇದಾದ ಬಳಿಕ, ಪ್ರಕಾಶಕ ಆರ್ವೆಲ್ ಗೆ ಹೀಗೆ ಬರೆಯುತ್ತಾನೆ:[೨೨]

If the fable were addressed generally to dictators and dictatorships at large then publication would be all right, but the fable does follow, as I see now, so completely the progress of the Russian Soviets and their two dictators [Lenin and Stalin], that it can apply only to Russia, to the exclusion of the other dictatorships. Another thing: it would be less offensive if the predominant caste in the fable were not pigs. I think the choice of pigs as the ruling caste will no doubt give offense to many people, and particularly to anyone who is a bit touchy, as undoubtedly the Russians are.

"ದಿ ಫ್ರೀಡಮ್ ಆಫ್ ದಿ ಪ್ರೆಸ್" (ಪತ್ರಿಕಾ ಸ್ವಾತಂತ್ರ್ಯ)

ಬದಲಾಯಿಸಿ

ಅರ್ವೆಲ್ ಮೊದಲು ಬರೆದಿದ್ದ ಮುನ್ನುಡಿಯಲ್ಲಿ ಬ್ರಿಟಿಷ್ ತನ್ನ ಮೇಲೆ ತಾನೆ ಹೇರಿಕೊಂಡಿದ್ದ ಸ್ವಯಂ-ವಿಮರ್ಶೆ ಬಗ್ಗೆ ಆಕ್ಷೇಪಿಸಿದನು. ಎರಡನೇ ಮಹಾಯುದ್ಧದಲ್ಲಿ ಬ್ರಿಟಿಷಿನ ಸ್ನೇಹಿತನಾಗಿದ್ದ USSR ಮೇಲಿನ ಟೀಕೆಗಳನ್ನು ಬ್ರಿಟಿಷರು ಮುಚ್ಚಿಹಾಕಿದರು, ಎಂದು ವಿವರಿಸುತ್ತದೆ. "ಇಂಗ್ಲೆಂಡಿನಲ್ಲಿ ಸಾಹಿತ್ಯದ ಮೇಲೆ ಆಗುತ್ತಿದ್ದ ಸ್ವಯಂ-ವಿಮರ್ಶೆ (ಕತ್ತರಿ ಪ್ರಯೋಗ) ದುರಂತವೆಂದರೆ ಅದು ಬಹುಮಟ್ಟಿಗೆ ಸ್ವಯಂ-ಪ್ರೇರಿತ.... ಇಂತಹ ಘಟನೆಗಳನ್ನು ಬ್ರಿಟಿಷ್ ಮಾಧ್ಯಮದಿಂದ(ಪತ್ರಿಕೆ) ಹೊರಗಿಡಲಾಗುತ್ತದೆ, ಸರಕಾರ ಹಸ್ತಕ್ಷೇಪ ಮಾಡುತ್ತದೆ; ಎನ್ನುವ ಕಾರಣವಲ್ಲ. ಆದರೂ, ಇದೊಂದು ರೀತಿಯ ಒಳಒಪ್ಪಂದಂತೆ ನಡೆಯುತ್ತದೆ, ಈ ಸಂಗತಿಯನ್ನು ತಡೆಯಲು ಮಾಡಲಾಗಿದೆ ಎಂದು ಗೋಚರಿಸುವುದಿಲ್ಲ." ಮೊದಲಿನ ಆವೃತ್ತಿಯಲ್ಲಿ ಮುನ್ನುಡಿಯನ್ನು ಮುದ್ರಿಸಲು ಜಾಗವಿತ್ತಾದರೂ ಅದನ್ನು ಸೇರಿಸಲಿಲ್ಲ.[೧೧] ಜೂನ್ 2009ರವರೆಗೆ ಪ್ರಕಟವಾಗಿರುವ ಬಹುತೇಕ ಆವೃತ್ತಿಗಳಲ್ಲಿ ಮುನ್ನುಡಿಯನ್ನು ಪ್ರಕಟಿಸಿಲ್ಲ.[೨೪] ಅನಿಮಲ್ ಫಾರ್ಮ್ ನ ಪ್ರಥಮ ಆವೃತ್ತಿಯನ್ನು ಯಾವುದೆ ಪೀಠಿಕೆಯಿಲ್ಲದೆ 1945ರಲ್ಲಿ ಸೆಕರ್ ಮತ್ತು ವಾರ್ಬರ್ಗ್ ಪ್ರಕಟಿಸಿದರು. ಆದರೆ, ಪ್ರಕಾಶಕರು ಹಸ್ತಪ್ರತಿಯಿಂದ ತಯಾರಿಸದ ಲೇಖಕರಿಗೆ ಒದಗಿಸಿದ್ದ ಕರಡಚ್ಚು ಪ್ರತಿಯಲ್ಲಿ ಮುನ್ನುಡಿಗೆ ಜಾಗಬಿಡಲಾಗಿತ್ತು. ಆದರೆ, ಗೊತ್ತಿರದ ಕಾರಣಗಳಿಂದಾಗಿ, ಯಾವುದೇ ಮುನ್ನುಡಿಯನ್ನು ಒದಗಿಸಲಾಗಲಿಲ್ಲ; ಹೀಗಾಗಿ ಪುಟ ಸಂಖ್ಯೆಗಳನ್ನು ಕೊನೆ ಘಳಿಗೆಯಲ್ಲಿ ಪುನಃಬದಲಿಸಿ ಮುದ್ರಿಸಬೇಕಾಯಿತು.[೨೫][೨೬] ಹಲವಾರು ವರ್ಷಗಳ ಬಳಿಕ, 1972ರಲ್ಲಿ ಇಯಾನ್ ಅಂಗಸ್ ಎನ್ನುವವನಿಗೆ "ದಿ ಫ್ರಿಡಮ್ ಆಫ್ ದಿ ಪ್ರೆಸ್" ಎಂಬ ಶೀರ್ಷಿಕೆಯುಳ್ಳ ಮೂಲ ಬೆರಳಚ್ಚು ಪ್ರತಿ ಸಿಕ್ಕಿತು. ಇದನ್ನು ಬರ್ನಾರ್ಡ್ ಕ್ರಿಕ್ "ಈ ಲೇಖನ ಬರೆಯಲು ಕಾರಣಗಳೇನು" ಎನ್ನುವ ಅವರ ಪೀಠಿಕೆಯೊಂದಿಗೆ 15 ಸೆಪ್ಟೆಂಬರ್ 1972[೨೫] ರಲ್ಲಿ ದಿ ಟೈಮ್ಸ್ ಲಿಟರರಿ ಸಪ್ಲಿಮೆಂಟ್ ನಲ್ಲಿ ಪ್ರಕಟಿಸಿದರು.[೨೬] ಆರ್ವೆಲ್ ರವರ ಲೇಖನ ಬ್ರಿಟಿಷ್ ಮಾಧ್ಯಮದ(ಪತ್ರಿಕೆ) ಸ್ವಯಂ ನಿಯಂತ್ರಣವನ್ನು ಟೀಕಿಸಿತು. ಅದರಲ್ಲೂ ವಿಶಿಷ್ಟವಾಗಿ ಸ್ಟಾಲಿನ್ ಮತ್ತು ಸೋವಿಯತ್ ಸರಕಾರದ ಬಗ್ಗೆ ಮೆಚ್ಚುಗೆಯಿಲ್ಲದ ವಿವರಣೆಗಳನ್ನು ತಡೆಯಿಡಿಯುವುದನ್ನು ವಿರೋಧಿಸಿದನು.[೨೬] ಇದೇ ಲೇಖನ 1976ರ ಇಟಲಿ ಭಾಷೆಯ ಅನಿಮಲ್ ಫಾರ್ಮ್ ಆವೃತ್ತಿಯಲ್ಲಿ ಕ್ರಿಕ್ ರ ಬೇರೊಂದು ಮುನ್ನುಡಿ ಬರೆದಿದ್ದರು. ಇದರಲ್ಲಿ ಮೂಲ ಪೀಠಿಕೆಯೊಂದಿಗೆ ಪ್ರಕಟವಾದ ಮೊದಲ ಆವೃತ್ತಿಯೆಂದು ಎಂದು ಪ್ರತಿಪಾದಿಸಲಾಗಿತ್ತು.[೨೫] ಇತರೆ ಪ್ರಕಾಶಕರು ಇದನ್ನು ಪ್ರಕಟಿಸಲು ಇನ್ನೂ ನಿರಾಕರಿಸುತ್ತಿದ್ದರು.[clarification needed]

ಸಾಂಸ್ಕೃತಿಕ ಉಲ್ಲೇಖಗಳು

ಬದಲಾಯಿಸಿ

ಜನಪ್ರಿಯ ಸಂಸ್ಕೃತಿಯ ಇತರೆ ಮಾಧ್ಯಮಗಳಲ್ಲಿ ಅದರಲ್ಲೂ ಮುಖ್ಯವಾಗಿ, ಜನಪ್ರಿಯ ಸಂಗೀತ ಮತ್ತು ದೂರದರ್ಶನದ(ಟೆಲಿವಿಷನ್) ಸರಣಿಗಳಲ್ಲಿ ಈ ಕೃತಿಯ ಬಗ್ಗೆ ಅನೇಕ ಉಲ್ಲೇಖಗಳಿದೆ.

ರೂಪಾಂತರಗಳು(ಅಳವಡಿಕೆಗಳು)

ಬದಲಾಯಿಸಿ

ಅನಿಮಲ್ ಫಾರ್ಮ್ ಅನ್ನು ಚಲನಚಿತ್ರಗಳಲ್ಲಿ ಎರಡು ಬಾರಿ ಆಳವಡಿಸಿಕೊಳ್ಳಲಾಗಿದೆ. 1954 ಅನಿಮಲ್ ಫಾರ್ಮ್ ಚಿತ್ರವು ಅನಿಮೇಟೆಡ್ ಚಿತ್ರವಾಗಿತ್ತು. 1999ರ ಅನಿಮಲ್ ಫಾರ್ಮ್ ಚಿತ್ರವು ದೂರದರ್ಶನಕ್ಕೆಂದು ತಯಾರಿಸಿದ (ಟಿವಿ. ಲೈವ್ ಆಕ್ಷನ್) ಅವತರಣಿಕೆಯಾಗಿತ್ತು. ಎರಡೂ ಅವತರಣಿಕೆಗಳು ಕೃತಿಯಿಂದ ವ್ಯತ್ಯಾಸವಾಗಿದ್ದವು. 1954ರ ಅವತರಿಣಿಕೆಯಲ್ಲಿ ನಪೊಲಿಯನ್ ಅನ್ನು ಎರಡನೆಯ ಕ್ರಾಂತಿಯ ಬಳಿಕ ಪದಚ್ಯುತಿ ಮಾಡಲಾಗುತ್ತದೆ; ಎಂದು ತೋರಿಸಿದರೆ, 1999ರ ಚಿತ್ರದಲ್ಲಿ, ನಪೊಲಿಯನ್ ಆಳ್ವಿಕೆ ತನ್ನಿಂದತಾನೇ ಬೀಳುವ ಹಾಗೆ, ಅಂದರೆ ಸೋವಿಯತ್ ಒಕ್ಕೂಟ (ಸೋವಿಯತ್ ಯೂನಿಯನ್) ಬಿದ್ದ ಹಾಗೆ ಚಿತ್ರಿಸಲಾಗಿದೆ.

ಆವೃತ್ತಿಗಳು

ಬದಲಾಯಿಸಿ

ಜುಲೈ 17, 2009ರಂದು Amazon.com ತನ್ನ ಅಮೇಜಾನ್ ಕಿಂಡಲ್ ಪುಸ್ತಕಗಳ ಪಟ್ಟಿಯಿಂದ ಜಾರ್ಜ್ ಆರ್ವೆಲ್ ಬರೆದಿರುವ ಅನಿಮಲ್ ಫಾರ್ಮ್ ಮತ್ತು ನೈನಟೀನ್ ಏಟಿ ಫೋರ್ ಒಳಗೊಂಡಂತೆ ಕೆಲವು ಪುಸ್ತಕಗಳ ಪ್ರಕಟಣೆ ಮಾಡಿದ್ದ ಪ್ರಕಾಶಕರ ಬಳಿ ಇದಕ್ಕೆ ಬೇಕಾದ ಹಕ್ಕು ಇರಲಿಲ್ಲವೆಂದು ಗೊತ್ತಾದ ಮೇಲೆ, ಆ ಪುಸ್ತಕಗಳನ್ನು ತನ್ನ ಪಟ್ಟಿಯಿಂದ ತೆಗೆದುಹಾಕಿತು.[೨೭] ಈ ಪುಸ್ತಕ ಖರೀದಿಸಿದ್ದ ಗ್ರಾಹಕರಿಕೆ ಹಣ ಹಿಂದಿರುಗಿಸಿತು, ಅವರ ಸಾಧನಗಳಿಂದ (ಡಿವೈಸ್) ಪುಸ್ತಕವನ್ನು ಆಳಿಸಿಹಾಕಿತು. (ಅಮೇಜಾನ್ ಕಿಂಡಲ್ ಎನ್ನುವುದು ಈ-ಪುಸ್ತಕ ಮತ್ತು ಇತರೆ ಡಿಜಿಟಲ್ ಮಾಧ್ಯಮಗಳನ್ನು ಪ್ರದರ್ಶಿಸುವ ಸಲುವಾಗಿ Amazon.com ನಿಂದ ಅಭಿವೃದ್ಧಿ ಮಾಡಲಾಗಿರುವ ಒಂದು ತಂತ್ರಾಂಶ ಮತ್ತು ಯಂತ್ರಾಂಶಗಳ ವೇದಿಕೆ) ಗ್ರಾಹಕರು ಅವರ ಸಾಧನಗಳಲ್ಲಿ, ಆ ಪುಸ್ತಕಗಳ ಮೇಲೆ ಮಾಡಿದ್ದ ಟಿಪ್ಪಣಿ ಹಾಗು ವ್ಯಾಖ್ಯಾನಗಳನ್ನು ಕೂಡ ಆಳಿಸಿತು.[೨೮] ಈ ನಿರ್ಣಯವು ವ್ಯಾಪಕವಾದ ಸಾರ್ವಜನಿಕ ಪ್ರತಿಭಟನೆಯನ್ನು ಎದುರಿಸಬೇಕಾಗಿ, ಎಲ್ಲರೂ ಇದನ್ನು ನೈನಟೀನ್ ಏಟಿ ಫೋರ್ ಗೆ ಹೋಲಿಸತೊಡಗಿದರು. ಇದಾದ ನಂತರ ಅಮೇಜಾನಿನ ವಕ್ತಾರ ಡ್ರಿವ್ ಹೆರ್ಡನರ್, ".. ನಾವು ನಮ್ಮ ನೀತಿಯನ್ನು ಬದಲಿಸುತ್ತಿದ್ದೆವೆ, ಈ ರೀತಿಯ ಸಂದರ್ಬದಲ್ಲಿ ಇನ್ನು ಮುಂದೆ ನಾವುಗಳು ಗ್ರಾಹಕರ ಉಪಕರಣಗಳಿಂದ ಪುಸ್ತಕಗಳನ್ನು ತೆಗೆಯುವುದಿಲ್ಲ"[೨೯] ಎಂದು ಹೇಳಿಕೆ ಕೊಟ್ಟನು.

ಇವನ್ನೂ ಗಮನಿಸಿ

ಬದಲಾಯಿಸಿ

ಪುಸ್ತಕಗಳು

ಟಿಪ್ಪಣಿಗಳು

ಬದಲಾಯಿಸಿ
  1. "ವೈ ಐ ವ್ರೈಟ್ " (1936) (ದಿ ಕಲಕ್ಟೆಡ್ ಎಸ್ಸೆಯ್ಸ್, ಜರ್ನಲಿಸಂ ಅಂಡ್ ಲೆಟ್ಟರ್ಸ್ ಆಫ್ ಜೆರ್ಜಾ ಆರವೆಲ್ ವಾಲ್ಯೂಮ್ 1 - ಆನ್ ಏಜ್ ಲೈಕ್ ದಿಸ್ 1945-50 p.23 (ಪೆಂಗ್ವಿನ್))
  2. ೨.೦ ೨.೧ ೨.೨ ೨.೩ ಡೇವಿಸನ್ 2000
  3. ಗ್ರಾಸ್ಮನ್ 2005
  4. ಜಾರ್ಜ್ ಆರ್ವೆಲ್ (1946) ಬರೆದ ಅನಿಮಲ್ ಫಾರ್ಮ್ ಲಂಡನಿನ ಪೆಂಗ್ವಿನ್ ಗುಂಪಿನ ಪ್ರಕಾಶನ ಸಂಸ್ಥೆ ಪ್ರಕಟಿಸಿದ ಪುಸ್ತಕದ p. 21.
  5. Hitchens, Christopher (17 September 2002), Why Orwell Matters, Basic Books, pp. 186–187, ISBN 978-0465030491
  6. ಆರ್ವೆಲ್, 1979, ಎರಡನೇ ಆಧ್ಯಾಯ, p.15
  7. Jean Quéval (1981). La ferme des animaux. Edition Gallimard. ISBN 978-2-07-037516-5. {{cite book}}: Unknown parameter |collection= ignored (help)
  8. ೮.೦ ೮.೧ Orwell, George (1946). Animal Farm. New York: The New American Library. p. 40.
  9. http://www.sparknotes.com/lit/animalfarm
  10. ೧೦.೦ ೧೦.೧ ಆರ್ವೆಲ್ 1947
  11. ೧೧.೦ ೧೧.೧ ಡಾಗ್ 2004
  12. ಆರ್ವೆಲ್ 1976 ಪುಟ 25 La libertà di stampa
  13. ಜರ್ಮನ್ ವಿಕಿಪೀಡಿಯಾದ ಸಂಪಾದಕರು
  14. ಸಂತ್ ಸಿಂಗ್ ಬಾಲ್, ಜಾರ್ಜ್ ಆರ್ವೆಲ್ (1981), 124.
  15. ಹರಾಲ್ಡ್ ಬ್ಲೂಮ್, ಜಾರ್ಜ್ ಆರ್ವೆಲ್ (2007), 148.
  16. ೧೬.೦ ೧೬.೧ ಪೀಟರ್ ಎಡಗರ್ಲಿ ಫಿರ್ಚೊವ್, ಮಾಡರ್ನ್ ಯುಟೋಪಿಯನ್ ಫಿಕ್ಷನ್ಸ್ ಫ್ರಮ್ ಹೆಚ್.ಜಿ. ವೆಲ್ಸ್ ಟು ಐರಿಸ್ ಮುರ್ಡೊಕ್ (2008), 102.
  17. ೧೭.೦ ೧೭.೧ ಪೀಟರ್ ಹಾಬಲಿ ಡೇವಿಸನ್, ಜಾರ್ಜ್ ಆರ್ವೆಲ್ (1996), 161.
  18. ಜಾರ್ಜೆ ಆರ್ವೆಲ್, ಅನಿಮಲ್ ಫಾರ್ಮ್ - ಆಕ್ಟಿವಿಟಿ ಪ್ಯಾಕ್ (Prestwick House, Inc., 2004), T-3, T-23, S-23.
  19. ಜೋಸೆಫ್ ಕಾರ್ನಾಡ್ ಮತ್ತು ಪಾಲ್ ಕ್ರಿಸ್ಚನರ್ , ಅಂಡರ್ ವೆಸ್ಟರ್ನ್ ಐಸ್ (1996), 286.
  20. ರಿಚರ್ಡ್ ಬ್ರುಕ್ಸ್, "ಟಿಎಸ್. ಎಲಿಯಟ್ಸ್ ಸ್ನಾರ್ಟ್ ಆರ್ಫ ರಿಜೆಕ್ಷನ್ ಫಾರ್ ಅನಿಮಲ್ ಫಾರ್ಮ್ Archived 2011-08-09 ವೇಬ್ಯಾಕ್ ಮೆಷಿನ್ ನಲ್ಲಿ.", ಸಂಡೇ ಟೈಮ್ಸ್ , 29 ಮಾರ್ಚಿ 2009.
  21. Eliot, Valery (6 January 1969). "T.S. Eliot and Animal Farm: Reasons for Rejection". Full text of the T.S. Eliot rejection letter. London: The Times. Archived from the original on 2009-10-15. Retrieved 2009-04-08.
  22. ೨೨.೦ ೨೨.೧ "The whitewashing of Stalin". BBC News. 2008-11-11. {{cite news}}: Italic or bold markup not allowed in: |publisher= (help)
  23. ಟೇಲರ್ ಪುಟ 337; ಕ್ರಿಸ್ಟಿ ಅಂಡ್ ಮೂರ್ ಎನ್ನುವ ಸಾಹಿತ್ಯಿಕ ಸಂಘಟನೆಯ ಪಾಲುದಾರನಾಗಿದ್ದ ಲಿಯಾನಾರ್ಡ್ ಮೂರ್ ಎನ್ನುವವರಿಗೆ ಬರೆಯುತ್ತಾ ಪ್ರಕಾಶಕ "ಜೊನಾಥನ್ ಕೇಪ್, ಈ ನಿರ್ಣಯವನ್ನು ಇನ್ಫೆರ್ಮೇಷನ್ ಮಂತ್ರಲಾಯದ ಹಿರಿಯ ಆಧಿಕಾರಿಗಳ ಸಲಹೆಯ ಮೇರೆಗೆ ತೆಗೆದುಕೊಳ್ಳಲಾಯಿತು. ಇಂತಹ ಕಣ್ಣಿಗೆ ಕಾಣುವ ಹಾಗೆ ಸೋವಿಯತ್ ವಿರೋಧಿ ಪಕ್ಷಪಾತವು ಒಪ್ಪಿಕೊಳ್ಳಲಾಗುವುದಿಲ್ಲ. ಇದಲ್ಲದೆ, ವಿಶೇಷವಾಗಿ ಹಂದಿಗಳನ್ನು ಪ್ರಬಲ ವರ್ಗವನ್ನು ಸಂಕೇತಿಸಲು ಹಂದಿಗಳನ್ನು ಬಳಸಿದ್ದು ಅವಮಾನಿಕಾರಿಯೆಂದು ಪರಿಗಣಿಸಲಾಯಿತು. ಈ 'ಪ್ರಮುಖ ಆಧಿಕಾರಿ' ಯ ಹೆಸರು ಪೀಟರ್ ಸ್ಮೊಲೆಟ್ ಎಂದು ನಂಬಲು ಸಾಕಷ್ಟ ಆಧಾರಗಳಿವೆ. ಇವನೊಬ್ಬ ಸೋವಿಯತ್ ದೇಶದ ಗೂಢಾಚಾರನೆಂದು ನಂತರ ಗೊತ್ತಾಯಿತು.
  24. ಬೇಲಿ83221 (ಬೇಲಿ83221 ಇನ್ಕ್ಲೂಡ್ಸ್ ಎ ಪ್ರಿಫೇಸ್ ಅಂಡ್ ಟೂ ಸಿಟಿಸ್: 1995-08-26 ದಿ ಗಾರ್ಡಿಅನ್ ಪುಟ 28; 1995-08-26 ನ್ಯೂ ಸ್ಟೇಟ್ಸ್ ಮನ್ ಅಂಡ್ ಸಸೈಅಟಿ 8 (366): 11. ISSN: 0954-2361)
  25. ೨೫.೦ ೨೫.೧ ೨೫.೨ ಆರ್ವೆಲ್ ಪುಟ 15. ಬೆರ್ನಾಡ್ ಕ್ರಿಕ್ ರ ಪೀಠಿಕೆ
  26. ೨೬.೦ ೨೬.೧ ೨೬.೨ ಜಾರ್ಜ್ ಆರ್ವೆಲ್: ದಿ ಫ್ರಿಡಮ್ ಆಫ್ ದಿ ಪ್ರೆಸ್ - 'ಅನಿಮಲ್ ಫಾರ್ಮ್' ಗೆ ಪ್ರಸ್ತಾಪಿಸಲಾಗಿದ್ದ ಆರ್ವೆಲ್ ರ ಮುನ್ನುಡಿ. 1945
  27. ಸಮ್ ಈ-ಬುಕ್ಸ್ ಆರ್ ಮೋರ್ ಈಕ್ವಲ್ ಥಾನ್ ಆದರ್ಸ್
  28. Stone, Brad (18 July 2009). "Amazon Erases Orwell Books From Kindle". ದ ನ್ಯೂ ಯಾರ್ಕ್ ಟೈಮ್ಸ್. pp. B1.
  29. ಅಮೇಜಾನ್ ಸೇಸ್ ಇಟ್ ವೋಂಟ್‌ ರೀಪೀಟ್ ಕಿಂಡಲ್ ಬುಕ್ ರೀಕಾಲ್ - CNet ನ್ಯೂಸ್

ಆಕರಗಳು

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ

[[ವರ್ಗ:ಮಾನವೀಕೃತ ಪಾತ್ರಗಳನ್ನು ಹೊಂದಿರುವ ಸಾಹಿತ್ಯ (ಮನುಷ್ಯರ ಗುಣಗಳನ್ನು ಹೊಂದಿರುವ ಪ್ರಾಣಿ, ವಸ್ತು, ಅಥವಾ ದೇವರ ಪಾತ್ರಗಳನ್ನು ಹೊಂದಿರುವ ಸಾಹಿತ್ಯ)]]