ದಿ ಗಾರ್ಡಿಯನ್
ದಿ ಗಾರ್ಡಿಯನ್ ಲಂಡನ್ ಮತ್ತು ಮ್ಯಾಂಚೆಸ್ಟರ್‍ನಿಂದ ಪ್ರಕಟವಾಗುತ್ತಿರುವ ರಾಷ್ಟ್ರೀಯ ದಿನ ಪತ್ರಿಕೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಕೆಲವೇ ಪತ್ರಿಕೆಗಳಲ್ಲಿ ಒಂದು.
ಚಿತ್ರ:The Guardian 6. 6. 14.jpg | |
ವಿಧ | Daily newspaper |
ಸ್ವರೂಪ | Berliner |
ಯಜಮಾನ | Guardian Media Group |
ಪ್ರಕಾಶಕ | Guardian News and Media |
ಸಂಪಾದಕ | Alan Rusbridger |
ಅಭಿಪ್ರಾಯ ಸಂಪಾದಕ | Mark Henry |
ಸ್ಥಾಪನೆ | 1821 by John Edward Taylor as The Manchester Guardian |
Political alignment | Centre-left, social liberal |
ಭಾಷೆ | English |
ಪ್ರಧಾನ ಕಚೇರಿ | Kings Place, 90 York Way, London N1 9GU |
Circulation | 185,429 Daily[೧] |
ಸೋದರಿ ಪತ್ರಿಕೆಗಳು | The Observer The Guardian Weekly |
ISSN | 0261-3077 |
OCLC number | 60623878 |
ಅಧಿಕೃತ ಜಾಲತಾಣ | theguardian |
ಪತ್ರಿಕೆಯ ಆರಂಭ ಮತ್ತು ಬೆಳವಣಿಗೆ
ಬದಲಾಯಿಸಿಪ್ರಾರಂಭದಲ್ಲಿ ಇದು ಮ್ಯಾಂಚೆಸ್ಟರ್ ಗಾರ್ಡಿಯನ್ ಎಂಬ ಹೆಸರಿನಿಂದ ಸಾಪ್ತಾಹಿಕವಾಗಿ ಪ್ರಕಟವಾಗುತ್ತಿತ್ತು. ಸಂಸದೀಯ ಸುಧಾರಣೆ ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸುವ ಉದ್ದೇಶದಿಂದ ಕೆಲವು ಪ್ರಗತಿಶೀಲರು 1821ರಲ್ಲಿ ಈ ಪತ್ರಿಕೆಯನ್ನು ಪ್ರಾರಂಭಿಸಿದರು. ಇದಕ್ಕಾಗಿ ಅವರು ಹೂಡಿದ ಬಂಡವಾಳ ಕೇವಲ 400 ಪೌಂಡ್. 1855ರಿಂದ ದಿನಪತ್ರಿಕೆಯಾಯಿತು. ಪತ್ರಿಕೆ ರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ಅಂತಾರಾಷ್ಟ್ರೀಯ ಖ್ಯಾತಿ ಪಡೆದಾಗ ಪತ್ರಿಕೆಯ ಹೆಸರನ್ನು ಗಾರ್ಡಿಯನ್ ದಿ ಎಂದಷ್ಟಕ್ಕೆ ಮೊಟಕುಗೊಳಿಸಲಾಯಿತು. 1971ರ ಮೇ 5ರಂದು ಪತ್ರಿಕೆಯ 150ನೆಯ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಗಾರ್ಡಿಯನ್ ನ್ಯೂಸ್ ಪೇಪರ್ಸ್ ಲಿಮಿಟೆಡ್ ಸಂಸ್ಥೆ ಈ ಪತ್ರಿಕೆಯನ್ನು ಪ್ರಕಟಿಸುತ್ತಿದೆ. ಈ ಸಂಸ್ಥೆಯ ಮಾತೃಸಂಸ್ಥೆ ಮ್ಯಾಂಚೆಸ್ಟರ್ ಗಾರ್ಡಿಯನ್ ಅಂಡ್ ಈವ್ನಿಂಗ್ ನ್ಯೂಸ್ ಲಿಮಿಟೆಡ್. ಸಿ.ಪಿ ಸ್ಕಾಟ್ 25ನೆಯ ವಯಸ್ಸಿನಲ್ಲಿ ಪತ್ರಿಕೆಯ ಸಂಪಾದಕರಾಗಿ ನೇಮಕಗೊಂಡರು. 82ನೆಯ ವಯಸ್ಸಿನವರೆಗೂ ಸಂಪಾದಕರಾಗಿದ್ದರು.
ಪತ್ರಿಕೆಯ ನೀತಿ ಮತ್ತು ನಿಲುವು
ಬದಲಾಯಿಸಿಈ ಪತ್ರಿಕೆ ಪ್ರಾರಂಭವಾದಂದಿನಿಂದಲೂ ನಿರ್ಭಯ ವಿಚಾರಧಾರೆಗೆ ಹೆಸರುವಾಸಿಯಾಗಿದೆ. 1936ರಲ್ಲಿ ಪತ್ರಿಕೆಯ ಪ್ರಭಾವಿ ಸಂಪಾದಕರಲ್ಲಿ ಒಬ್ಬರಾದ ಸಿ.ಪಿ. ಸ್ಕಾಟ್ ವಿಶ್ವಸ್ಥ ಮಂಡಲಿಯನ್ನು ರಚಿಸಿದ. ಪತ್ರಿಕೆಯ ಸ್ವಾಮ್ಯ ಆ ಮಂಡಲಿಗೆ ಸೇರಿದೆ. ಅದು ಸಂಪಾದಕ ವರ್ಗಕ್ಕೆ ಸಂಪುರ್ಣ ಸ್ವಾತಂತ್ರ್ಯ ಕೊಟ್ಟಿರುವರಲ್ಲದೆ ಈ ಸತ್ಸಂಪ್ರದಾಯವನ್ನು ಸತತವಾಗಿ ಉಳಿಸಿಕೊಂಡು ಬಂದಿದ್ದಾರೆ. ಪತ್ರಿಕೆಯ ಸಂಪಾದಕೀಯಗಳು ಇದಕ್ಕೆ ಸಾಕ್ಷಿ.
ಗೌರವ ಮತ್ತು ಪುರಸ್ಕಾರಗಳು
ಬದಲಾಯಿಸಿಈಚಿನ ವರ್ಷಗಳಲ್ಲಿ ದಿ ಗಾರ್ಡಿಯನ್ ಅನೇಕ ಪ್ರಶಸ್ತಿಗಳನ್ನು ಗಳಿಸಿದೆ. 1970ರಲ್ಲಿ ಇದು ವರ್ಷದ ಪತ್ರಿಕೆಯಾಗಿ ಆಯ್ಕೆಯಾಗಿತ್ತು. ಸಂಪಾದಕರಾದ ಆಲಸ್ಟೇರ್ ಹೆದರಿಂಗ್ಟನ್ 1971ರಲ್ಲಿ ವರ್ಷದ ಅತ್ಯುತ್ತಮ ಪತ್ರಕರ್ತರಾಗಿ ಆಯ್ಕೆಗೊಂಡಿದ್ದರು.
ಉಲ್ಲೇಖಗಳು
ಬದಲಾಯಿಸಿ