ದ ನ್ಯೂ ಯಾರ್ಕ್ ಟೈಮ್ಸ್
ದ ನ್ಯೂ ಯಾರ್ಕ್ ಟೈಮ್ಸ್ ನ್ಯೂ ಯಾರ್ಕ್ ನಗರದಲ್ಲಿ ಸ್ಥಿತವಾಗಿರುವ ಅಮೇರಿಕನ್ ವೃತ್ತಪತ್ರಿಕೆಯಾಗಿದೆ. ಇದು ವಿಶ್ವಾದ್ಯಂತ ಪ್ರಭಾವ ಮತ್ತು ಓದುಗರನ್ನು ಹೊಂದಿದೆ.[೧][೨][೩] ೧೮೫೧ರಲ್ಲಿ ಸ್ಥಾಪಿತವಾದ ಈ ಸುದ್ದಿಪತ್ರಿಕೆಯು ೧೨೭ ಪುಲಿಟ್ಝರ್ ಪ್ರಶಸ್ತಿಗಳನ್ನು ಗೆದ್ದಿದೆ, ಮತ್ತು ಇದು ಬೇರೆ ಯಾವುದೇ ಸುದ್ದಿಪತ್ರಿಕೆಗಿಂತ ಹೆಚ್ಚಾಗಿದೆ.[೪][೫] ನ್ಯೂ ಯಾರ್ಕ್ ಟೈಮ್ಸ್ ಪ್ರಸಾರದಲ್ಲಿ ವಿಶ್ವದಲ್ಲಿ ೧೮ನೇ ಸ್ಥಾನ ಮತ್ತು ಅಮೇರಿಕದಲ್ಲಿ ೩ನೇ ಸ್ಥಾನ ಪಡೆದಿದೆ.[೬] "ದ ಗ್ರೇ ಲೇಡಿ" ಎಂಬ ಅಡ್ಡಹೆಸರನ್ನು ಹೊಂದಿರುವ ನ್ಯೂ ಯಾರ್ಕ್ ಟೈಮ್ಸ್ ಪತ್ರಿಕೋದ್ಯಮದಲ್ಲಿ ದೀರ್ಘಕಾಲದಿಂದ ರಾಷ್ಟ್ರೀಯ ದಾಖಲೆಯ ಸುದ್ದಿಪತ್ರಿಕೆ ಎಂದು ಪರಿಗಣಿತವಾಗಿದೆ.[೭] "ಆಲ್ ದ ನ್ಯೂಸ್ ದ್ಯಾಟ್ಸ್ ಫ಼ಿಟ್ ಟು ಪ್ರಿಂಟ್" ಎಂಬುದು ಈ ಪತ್ರಿಕೆಯ ಧ್ಯೇಯಸೂತ್ರವಾಗಿದೆ.
ಉಲ್ಲೇಖಗಳು
ಬದಲಾಯಿಸಿ- ↑ "The New York Times". Encyclopædia Britannica. Retrieved September 27, 2011.
- ↑ "Is The Washington Post closing in on the Times?". POLITICO Media. Retrieved November 5, 2017.
- ↑ "News of the world". The Economist. March 17, 2012. ISSN 0013-0613. Retrieved November 5, 2017.
- ↑ "Pulitzer Prizes". The New York Times Company. Retrieved November 5, 2017.
- ↑ Victor, Daniel (April 16, 2018). "The Times Just Won 3 Pulitzers. Read the Winning Work". The New York Times. Retrieved July 16, 2018.
- ↑ "Top 10 U.S. Daily Newspapers". Cision. Archived from the original on July 22, 2019. Retrieved 2019-07-13.
- ↑ "The New York Times". Encyclopædia Britannica. Retrieved September 27, 2011.