ಅಂತರರಾಷ್ಟ್ರೀಯ ಕ್ರಿಕೆಟ್
ಇಪ್ಪತ್ತೊಂದನೆಯ ಶತಮಾನದ ಆರಂಭಕಾಲದ ವರೆಗೂ ಕ್ರಿಕೆಟ್‌ನ ಅಂತರರಾಷ್ಟ್ರೀಯ ರಚನೆ ಗೆ ಯಾವುದೇ ವಿಧ್ಯುಕ್ತ ರೂಪವಿರಲಿಲ್ಲ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಯಾವುದೇ ಮಧ್ಯಪ್ರವೇಶವಿಲ್ಲದೆ, ಹಲವು ದೇಶಗಳು ತಮ್ಮ-ತಮ್ಮ ನಡುವೆ ಹಲವು ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುತ್ತಿದ್ದದ್ದುಂಟು. ಆನಂತರ, ಐಸಿಸಿ ಮಧ್ಯ ಪ್ರವೇಶಿಸಿ, ಟೆಸ್ಟ್ ಕ್ರಿಕೆಟ್ ಆಡುವ ಎಲ್ಲಾ ರಾಷ್ಟ್ರಗಳು ಹತ್ತು ವರ್ಷಗಳ ಕಾಲಾವಧಿಯಲ್ಲಿ ಪರಸ್ಪರ ಪಂದ್ಯಗಳನ್ನಾಡುವಂತಹ ಯೋಜನೆ ತಂದಿತು. ಈ ವ್ಯವಸ್ಥೆಯು, ಬಹಳಷ್ಟು ಯಶಸ್ವಿ ಟೆಸ್ಟ್ ರಾಷ್ಟ್ರ ತಂಡಗಳು ದುರ್ಬಲ ಟೆಸ್ಟ್ ರಾಷ್ಟ್ರ ತಂಡಗಳ ವಿರುದ್ಧ ಆಗಾಗ್ಗೆ ಪಂದ್ಯಗಳನ್ನಾಡುವಂತೆ ಪ್ರೋತ್ಸಾಹಿಸುತ್ತದೆ.
ಸಾಮಾನ್ಯ ರಚನೆ
ಬದಲಾಯಿಸಿಬಹಳಷ್ಟು ಟೆಸ್ಟ್ ಪಂದ್ಯಗಳು ಹಾಗೂ ಏಕದಿನ ಸರಣಿಗಳು 'ಪ್ರವಾಸ' ರೀತ್ಯಾ ಆಯೋಜಿತವಾಗುತ್ತವೆ. ಪ್ರವಾಸವೊಂದರಲ್ಲಿ, ಒಂದು ದೇಶದ ಕ್ರಿಕೆಟ್ ತಂಡವು ಇನ್ನೊಂದು ದೇಶದ ಪ್ರವಾಸ ಹೋಗಿ, ಅಲ್ಲಿ ಕೌಂಟಿ ಅಥವಾ ರಾಜ್ಯ ಕ್ರಿಕೆಟ್ ತಂಡಗಳಂತಹ ಸ್ಥಳೀಯ ಪಂದ್ಯಗಳ ವಿರುದ್ಧ ಪೂರ್ವಸಿದ್ಧತಾ ಹಾಗೂ ಪ್ರಥಮ ದರ್ಜೆಯ ಪಂದ್ಯಗಳನ್ನಾಡುತ್ತದೆ. ನಂತರ ಅತಿಥೇಯ ತಂಡದ ವಿರುದ್ಧ ಟೆಸ್ಟ್ ಸರಣಿ ಆಡುತ್ತದೆ. ನಂತರ, ದ್ವಿಪಕ್ಷೀಯ ಏಕದಿನ ಸರಣಿ ಅಥವಾ ಮೂರನೆಯ ತಂಡವನ್ನು ಒಳಗೊಂಡ ತ್ರಿಕೋನೀಯ ಏಕದಿನ ಸರಣಿ ಆಯೋಜಿತವಾಗುತ್ತದೆ. ಒಂದು ಪ್ರವಾಸವು ಸಮಾಪ್ತಿಯಾಗಿ ಇನ್ನೊಂದು ಆರಂಭಗೊಳ್ಳುವಂತಹ ರಚನೆಯಿದ್ದಲ್ಲಿ, 'ತ್ರಿಕೋನೀಯ ಪಂದ್ಯಾವಳಿ' ನಡೆಸಲಾಗುತ್ತದೆ. ಕೆಲವೊಮ್ಮೆ ಕೇವಲ ಈ ಪಂದ್ಯಾವಳಿಗಾಗಿಯೇ ಮೂರನೆಯ ತಂಡವನ್ನು ಒಳಗೊಳ್ಳಲಾಗುವುದು. ತ್ರಿಕೋನೀಯ ಪಂದ್ಯಾವಳಿಯಲ್ಲಿ ಮೂರೂ ತಂಡಗಳು ಪರಸ್ಪರ ಎರಡು ಅಥವಾ ಮೂರು ಬಾರಿ ಸ್ಪರ್ಧಿಸುತ್ತವೆ. ಅತಿಹೆಚ್ಚು ಅಂಕ ಗಳಿಸಿದ ಎರಡು ತಂಡಗಳು (ಸಾಮಾನ್ಯವಾಗಿ ಗೆಲುವಿಗೆ ಎರಡು ಅಂಕಗಳು, ಪರಿಣಾಮವಿಲ್ಲದ ಸ್ಥಿತಿ ಅಥವಾ ಸಮಸ್ಥಿತಿ ಅಂತ್ಯಕ್ಕಾಗಿ ಒಂದು ಅಂಕ, ಸೋಲಿಗೆ ಯಾವುದೇ ಅಂಕವಿಲ್ಲ) ಒಂದು ಪಂದ್ಯವುಳ್ಳ ಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಪ್ರೋತ್ಸಾಹಿ ಅಂಕ (ಬೊನಸ್ ಅಂಕ) ವ್ಯವಸ್ಥೆಯನ್ನು ತ್ರಿಕೋನೀಯ ಪಂದ್ಯಾವಳಿಯಲ್ಲಿ ಬಳಸಲಾಗಿದೆ. ತಂಡವೊಂದರ ರನ್ ದರವು ಎದುರಾಳಿ ತಂಡಕ್ಕಿಂತ ಹೆಚ್ಚಾಗಿದ್ದಲ್ಲಿ (ಸಾಮಾನ್ಯವಾಗಿ ೩೩%), ವಿಜೇತ ತಂಡಕ್ಕೆ ಹೆಚ್ಚುವರಿ ಬೊನಸ್ ಅಂಕ ನೀಡಲಾಗುವುದು. ಆಸ್ಟ್ರೇಲಿಯಾದಲ್ಲಿ ನಡೆಯುವ ವಿಬಿ ಸೀರೀಸ್ ಹಾಗೂ ಇಂಗ್ಲೆಂಡ್‌ನಲ್ಲಿ ನಡೆಯುವ ನ್ಯಾಟ್ವೆಸ್ಟ್ ಸೀರೀಸ್ ಪಂದ್ಯಾವಳಿಗಳಲ್ಲಿ ಇಂತಹ ಬೊನಸ್ ಅಂಕ ವ್ಯವಸ್ಥೆ ಬಳಸಲಾಗಿದೆ.
ಟೆಸ್ಟ್ ಸರಣಿಗಳು ಎರಡು ಪಂದ್ಯಗಳಿಂದ ಆರು ಪಂದ್ಯಗಳನ್ನೊಳಗೊಂಡಿರುತ್ತವೆ. ೧೯೮೦ರ ಕಾಲಾವಧಿಯಲ್ಲಿ ಆರು ಪಂದ್ಯಗಳುಳ್ಳ ಟೆಸ್ಟ್ ಸರಣಿಗಳು ಸರ್ವೇಸಾಮಾನ್ಯವಾಗಿದ್ದವು. ೧೯೮೧ರಿಂದ ೧೯೯೭ರ ತನಕ ಇಂಗ್ಲೆಂಡ್‌ನಲ್ಲಿ ನಡೆದ ಆಷಸ್ ಸರಣಿಗಳು ಆರು ಟೆಸ್ಟ್‌ಗಳನ್ನು ಒಳಗೊಂಡದ್ದವು. ಆದರೆ ಇದೇ ಕಾಲಾವಧಿಯಲ್ಲಿ, ಆಸ್ಟ್ರೇಲಿಯಾದಲ್ಲಿ ನಡೆದ ಆಷಸ್ ಸರಣಿಗಳಲ್ಲಿ ಐದು ಪಂದ್ಯಗಳನ್ನಾಡುತ್ತಿದ್ದವು. ಕೊನೆಯ ಆರು ಪಂದ್ಯಗಳುಳ್ಳ ಸರಣಿಯು ೧೯೯೭-೯೮ ಋತುವಿನಲ್ಲಿ, ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆಯಿತು. ಬಹಳ ಪ್ರಮುಖ ಎನ್ನಲಾಗುವ ಸರಣಿಗಳಲ್ಲಿ ಐದು ಟೆಸ್ಟ್‌ಗಳಿರುತ್ತವೆ, ಅಷ್ಟೇನೂ ಪ್ರಮುಖವಲ್ಲದ ಸರಣಿಗಳಲ್ಲಿ ಎರಡರಿಂದ ನಾಲ್ಕು ಟೆಸ್ಟ್ ಪಂದ್ಯಗಳಿರುತ್ತವೆ. ಸರಣಿಯ ಅವಧಿಯು, ಏಕದಿನ ಪಂದ್ಯಗಳತ್ತ ಅತಿಥೇಯ ತಂಡದ ಮಂಡಳಿಯ ಧೋರಣೆಯನ್ನು ಅವಲಂಬಿಸುತ್ತದೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದಂತಹ ಸಾಂಪ್ರದಾಯಿಕ ಟೆಸ್ಟ್ ರಾಷ್ಟ್ರಗಳಲ್ಲಿ, ಐದು ಟೆಸ್ಟ್‌ಗಳ ಸರಣಿ ಆಯೋಜಿತವಾಗುತ್ತವೆ, ಏಕದಿನ ಪಂದ್ಯಗಳು ಅಪಾರ ಜನಪ್ರಿಯತೆ ಗಳಿಸಿರುವ ಭಾರತ ಹಾಗೂ ಪಾಕಿಸ್ತಾನದಂತಹ ದೇಶಗಳಲ್ಲಿ ಮೂರು-ಪಂದ್ಯಗಳ ಟೆಸ್ಟ್ ಸರಣಿಗಳು ಆಯೋಜಿತವಾಗುತ್ತವೆ. ಸರಣಿ ವಿಜೇತ ತಂಡಕ್ಕೆ ಸಾರ್ವಕಾಲಿಕ ಟ್ರೊಫಿಯೊಂದನ್ನು ನೀಡಲಾಗುವುದು. ಒಂದು ವೇಳೆ ಈ ಸರಣಿಯು ಸಮಸ್ಥಿತಿಯಲ್ಲಿ ಅಂತ್ಯಗೊಂಡಲ್ಲಿ, ಹಿಂದಿನ ಸರಣಿಯ ವಿಜೇತ ತಂಡಕ್ಕೆ ಟ್ರೊಫಿ ನೀಡಲಾಗುವುದು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆಯುವ ಆಷಸ್ ಸರಣಿಯು ಅತಿ ಪರಿಚಿತ ಸಾರ್ವಕಾಲಿಕ ಟ್ರೊಫಿಯಾಗಿದೆ. ಇತರೆ ಸಾರ್ವಕಾಲಿಕ ಟ್ರೊಫಿಗಳಲ್ಲಿ ಕೆಳಕಂಡವು ಸೇರಿವೆ:
- ಫ್ರಾಂಕ್ ವೊರೆಲ್ ಟ್ರೊಫಿ (ಆಸ್ಟ್ರೇಲಿಯಾ - ವೆಸ್ಟ್ ಇಂಡೀಸ್)
- ಟ್ರಾನ್ಸ್ ಟ್ಯಾಸ್ಮಾನ್ ಟ್ರೊಫಿ (ಆಸ್ಟ್ರೇಲಿಯಾ - ನ್ಯೂಜೀಲೆಂಡ್)
- (ಇವೆರಡೂ ರಾಷ್ಟ್ರಗಳ ನಡುವಿನ ಏಕದಿನ ಸರಣಿ ವಿಜೇತರಿಗೆ ಚ್ಯಾಪೆಲ್-ಹ್ಯಾಡ್ಲಿ ಟ್ರೊಫಿ ನೀಡಲಾಗುವುದು)
- ಬಾರ್ಡರ್-ಗಾವಸ್ಕರ್ ಟ್ರೊಫಿ (ಆಸ್ಟ್ರೇಲಿಯಾ - ಭಾರತ)
- ವಿಸ್ಡೆನ್ ಟ್ರೊಫಿ (ಇಂಗ್ಲೆಂಡ್ - ವೆಸ್ಟ್ ಇಂಡೀಸ್)
- ವಾರ್ನ್-ಮುರಳಿಧರನ್ ಟ್ರೊಫಿ (ಆಸ್ಟ್ರೇಲಿಯಾ - ಶ್ರೀಲಂಕಾ)
ಏಕದಿನ ಸರಣಿಗಳು ಸಾಮಾನ್ಯವಾಗಿ ಮೂರರಿಂದ ಏಳು ಪಂದ್ಯಗಳನ್ನು ಒಳಗೊಂಡಿರುತ್ತವೆ. ಸಾಮಾನ್ಯವಾಗಿ, ಅಲ್ಪಾವಧಿಯ ಏಕದಿನ ಸರಣಿಗಳನ್ನು ದೀರ್ಘಾವಧಿಯ ಟೆಸ್ಟ್ ಸರಣಿಯ ಅವಧಿಯಲ್ಲೇ ಆಡಲಾಗುತ್ತದೆ. ಆದರೂ ಏಕದಿನ ಪಂದ್ಯಗಳು ಮತ್ತು ಟೆಸ್ಟ್ ಪಂದ್ಯಗಳನ್ನು ಸಾಮಾನ್ಯವಾಗಿ ಗುಂಪುಗಳಲ್ಲಿ ಆಡಲಾಗುತ್ತದೆ. ಈ ದಿನಗಳಲ್ಲಿ, ಟೆಸ್ಟ್ ಸರಣಿಗಳ ನಡುವೆ ಏಕದಿನ ಸರಣಿಗಳನ್ನು ಆಯೋಜಿಸುವುದು ಬಹಳ ಅಪರೂಪ. ಪ್ರವಾಸಗಳ ಜೊತೆಗೆ, ಕೆಲವು ರಾಷ್ಟ್ರಗಳು ತಟಸ್ಥ ಸ್ಥಳಗಳಲ್ಲಿ ಏಕದಿನ ಸರಣಿಗಳನ್ನು ಆಯೋಜಿಸುತ್ತವೆ. ಕೆನಡಾ ದೇಶದ ಟೊರೊಂಟೊದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಸಹಾರಾ ಕಪ್ ಏಕದಿನ ಪಂದ್ಯ ಸರಣಿಯನ್ನು ವಾರ್ಷಿಕವಾಗಿ ಆಯೋಜಿಸಲಾಗುತ್ತಿತ್ತು. ೧೯೯೯ರಲ್ಲಿ ಭಾರತ ಸರ್ಕಾರವು ಪಾಕಿಸ್ತಾನದೊಂದಿಗೆ ಎಲ್ಲಾ ರೀತಿಯ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳನ್ನು ಸ್ಥಗಿತಗೊಳಿಸಬೇಕೆಂದು ಆದೇಶ ಹೊರಡಿಸಿತ್ತು. ೨೦೦೪ರಲ್ಲಿ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳು ಪುನಃ ಆರಂಭಗೊಂಡವು. ಇದೇ ರೀತಿ, ಸಂಯುಕ್ತ ಅರಬ್ ಎಮಿರೇಟ್ಸ್ ದೇಶದ ಷಾರ್ಜಾದಲ್ಲಿ ವರ್ಷಕ್ಕೆ ಎರಡು ಬಾರಿ ತ್ರಿಕೋನೀಯ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿತ್ತು. ಈ ಪಂದ್ಯಾವಳಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳನ್ನು ಒಳಗೊಳ್ಳುತ್ತಿತ್ತು. ಆದರೂ, ಅದೇ ಕ್ರಿಕೆಟ್ ಪಿಚ್ ಮೇಲೆಯೇ ಹಲವಾರು ಪಂದ್ಯಗಳನ್ನು ಆಡಿದ ಪರಿಣಾಮವಾಗಿ ಪಂದ್ಯಾವಳಿ ತನ್ನ ಥಳುಕು ಕಳೆದುಕೊಂಡಿತು. ಏಕದಿನ ಪಂದ್ಯಗಳಿಗೆ ವಿರುದ್ಧವಾಗಿ, ಟೆಸ್ಟ್ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಡಿಯೇ ಇಲ್ಲ. ೧೯೧೨ಲ್ಲಿ ತ್ರಿಕೋನೀಯ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್‌ನಲ್ಲಿ ಆಯೋಜಿಸಲಾಯಿತು. ಇದರಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಮ್ಯಾಂಚೆಸ್ಟರ್, ಲಂಡನ್ ಮತ್ತು ನಾಟಿಂಗ್ಹ್ಯಾಮ್‌ನಲ್ಲಿ ಕ್ರಿಕೆಟ್ ಟೆಸ್ಟ್ ಪಂದ್ಯಗಳು ಆಯೋಜಿತವಾಗಿತ್ತು. ಇತ್ತೀಚೆಗೆ, ಪಾಕಿಸ್ತಾನ ತಂಡವು ಷಾರ್ಜಾದಲ್ಲಿ ಕೆಲವು ಟೆಸ್ಟ್ ಪಂದ್ಯಗಳನ್ನು ಆಡಿತ್ತು. ನ್ಯೂಜೀಲೆಂಡ್ ತಂಡವು ಪಾಕಿಸ್ತಾನ ಪ್ರವಾಸದಲ್ಲಿದ್ದಾಗ ಸಂಭವಿಸಿದ ಬಾಂಬ್ ಸ್ಫೋಟಗಳು ಸೇರಿದಂತೆ, ಇತರೆ ರೀತಿಯ ಹಿಂಸಾಚಾರಗಳ ಕಾರಣ, ಇತರೆ ದೇಶಗಳ ಕ್ರಿಕೆಟ್ ತಂಡಗಳು ಪಾಕಿಸ್ತಾನ ಪ್ರವಾಸವನ್ನು ಬಹಿಷ್ಕರಿಸಿದವು.
ಭದ್ರತಾ ವ್ಯವಸ್ಥೆ ಸಂಬಂಧಿತ ವಿಚಾರಗಳಿಂದಾಗಿ ಶ್ರೀಲಂಕಾ ದೇಶದ ಪ್ರವಾಸಗಳಿಗೆ ಒಂದಲ್ಲ ಒಂದು ತೊಡಕುಂಟಾಗಿದ್ದುಂಟು. ಜಿಂಬಾಬ್ವೆಯಲ್ಲಿನ ಪ್ರಕ್ಷುಬ್ಧ ರಾಜಕೀಯ ಸ್ಥಿತಿಯಿಂದಾಗಿ ಆ ದೇಶದ ಪ್ರವಾಸಗಳ ವಿರುದ್ಧ ಆಕ್ಷೇಪವೆತ್ತಲಾಗಿದೆ. ಭದ್ರತಾ ವಿಚಾರಗಳನ್ನು ಕಾರಣವಾಗಿ ಒಡ್ಡಿ, ೨೦೦೩ರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ, ನ್ಯೂಜೀಲೆಂಡ್ ತಂಡವು ಕೀನ್ಯಾ ವಿರುದ್ಧದ ಪಂದ್ಯವನ್ನು ಬಿಟ್ಟುಕೊಟ್ಟಿತ್ತು.
ರಾಷ್ಟ್ರಗಳೇ ಆಯೋಜಿಸುವ ಏಕದಿನ ಸರಣಿಗಳು ಮತ್ತು ಪಂದ್ಯಾವಳಿಗಳ ಜೊತೆಗೆ, ಐಸಿಸಿ ಎರಡು ಪಂದ್ಯಾವಳಿಗಳನ್ನು ಆಯೋಜಿಸುತ್ತದೆ. ಐಸಿಸಿ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯನ್ನು ನಾಲ್ಕು ವರ್ಷಗಳಲ್ಲೊಮ್ಮೆ ಆಯೋಜಿಸಲಾಗುತ್ತದೆ. ಎಲ್ಲಾ ಟೆಸ್ಟ್ ಕ್ರಿಕೆಟ್ ಆಡುವ ರಾಷ್ಟ್ರೀಯ ತಂಡಗಳು ಹಾಗೂ ಈ ಪಂದ್ಯಾವಳಿಗೆ ಮುಂಚಿನ ಐಸಿಸಿ ವಿಶ್ವಕಪ್ ಅರ್ಹತಾ ಪಂದ್ಯಾವಳಿಯಲ್ಲಿ ಅಗ್ರಸ್ಥಾನ ಪಡೆದ ತಂಡಗಳು ಮುಖ್ಯಪಂದ್ಯಾವಳಿಯಲ್ಲಿ ಸ್ಪರ್ಧಿಸುತ್ತವೆ. ಎರಡು ವಿಶ್ವಕಪ್ ಪಂದ್ಯಾವಳಿಗಳ ನಡುವೆ, ಮುಂಚೆ ಐಸಿಸಿ ನಾಕೌಟ್ ಕಪ್ ಎನ್ನಲಾಗಿದ್ದ ಐಸಿಸಿ ಚಾಂಪಿಯನ್ಸ್ ಟ್ರೊಫಿ ಎರಡು ವರ್ಷಗಳಲ್ಲೊಮ್ಮೆ ಆಯೋಜಿಸಲಾಗುತ್ತದೆ. ಚ್ಯಾಂಪಿಯನ್ಸ್ ಟ್ರೊಫಿ ಪಂದ್ಯಾವಳಿಯಲ್ಲಿ ತಂಡವು ಒಂದು ಪಂದ್ಯದಲ್ಲಿ ಸೋತರೂ ಪಂದ್ಯಾವಳಿಯಿಂದ ನಿರ್ಗಮಿಸುವ ಸ್ಥಿತಿ ಎದುರಿಸಬೇಕಾದೀತು.
ಐಸಿಸಿಯ ದಶವಾರ್ಷಿಕ ಯೋಜನೆ
ಬದಲಾಯಿಸಿಹತ್ತು ವರ್ಷಗಳ ಅವಧಿಯಲ್ಲಿ ಎಲ್ಲಾ ದೇಶಗಳ ಟೆಸ್ಟ್ ತಂಡಗಳು ಪರಸ್ಪರ ಟೆಸ್ಟ್ ಪಂದ್ಯಗಳಲ್ಲಿ ಸ್ಪರ್ಧಿಸುವಂತೆ ಮಾಡುವ ದಶವಾರ್ಷಿಕ ಯೋಜನೆಯನ್ನು ಐಸಿಸಿ ಸದಸ್ಯ ರಾಷ್ಟ್ರಗಳು ೨೦೧೧ರ ಫೆಬ್ರವರಿ ತಿಂಗಳಲ್ಲಿ ಅಂಗೀಕರಿಸಿದವು. ೨೦೦೨ರಿಂದ ಆರಂಭಗೊಂಡು, ೨೦೧೧ರ ತನಕ ನಡೆಯುವ ಈ ಅವಧಿಯಲ್ಲಿ, ಪ್ರತಿಯೊಂದು ಟೆಸ್ಟ್ ತಂಡವು ಹತ್ತು ವರ್ಷಗಳ ಅವಧಿಯಲ್ಲಿ ಇತರೆ ಒಂಬತ್ತು ತಂಡಗಳ ವಿರುದ್ಧ ಸ್ವದೇಶ ಮತ್ತು ವಿದೇಶದಲ್ಲಿ ಆಡುವವು. ಜೊತೆಗೆ ಆಯಾ ಕ್ರಿಕೆಟ್ ಆಡಳಿತ ಮಂಡಳಿಗಳು ಆಯೋಜಿಸುವ ತಮ್ಮದೇ ಆದ ಪಂದ್ಯಾವಳಿಗಳಲ್ಲಿಯೂ ಆಡುವುದು. ಇದರಂತೆ, ಭಾರತ ಮತ್ತು ಪಾಕಿಸ್ತಾನ ತಂಡಗಳು ೨೦೦೪ರಿಂದ ಏಪ್ರಿಲ್ ೨೦೦೫ರ ತನಕ, ೧೨ ಏಕದಿನ ಪಂದ್ಯಗಳು ಹಾಗೂ ಆರು ಟೆಸ್ಟ್ ಪಂದ್ಯಗಳನ್ನು ಆಯಾ ದೇಶಗಳಲ್ಲಿ ಆಡಿ ಸ್ಪರ್ಧಿಸಿದವು. (೨೦೦೪ರ ಏಷ್ಯಾ ಕಪ್ ಪಂದ್ಯಾವಳಿ ಸೇರಿದಂತೆ, ತಟಸ್ಥ ಸ್ಥಳಗಳಲ್ಲಿ ಆಯೋಜಿತವಾದ ಪಂದ್ಯಗಳನ್ನು ಈ ಯೋಜನೆಯಲ್ಲಿ ಲೆಕ್ಕಕ್ಕೆ ಬರದು.) ೨೦೦೬ರ ಆರಂಭದಲ್ಲಿ ಪುನಃ ಮೂರು ಟೆಸ್ಟ್ ಹಾಗೂ ಐದು ಏಕದಿನ ಪಂದ್ಯಗಳನ್ನಾಡಿದವು. ಆದರೂ, ದಶವಾರ್ಷಿಕ ಯೋಜನೆಯ ಕಟ್ಟುನಿಟ್ಟಾದ ವೇಳಾಪಟ್ಟಿಯಿಂದಾಗಿ, ಇತರೆ ಸರಣಿಗಳನ್ನು ಆಯೋಜಿಸಲಯ ಸಮಯವೇ ಇಲ್ಲದಂತಾಗಿದೆ. ಈಗಾಗಲೆ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಪ್ರಮಾಣಗಳ ಬಗ್ಗೆ ಬಹಳಷ್ಟು ಅಪಸ್ವರಗಳು ಕೇಳಿಬರುತ್ತಿವೆ.[೧] ಐಸಿಸಿ ಈ ನೀತಿಯನ್ನು ಸಮರ್ಥಿಸಿಕೊಂಡಿದೆ. ಹಲವು ಅಂತರರಾಷ್ಟ್ರೀಯ ಆಟಗಾರರು ಇಂಗ್ಲಿಷ್ ಕೌಂಟಿ ಕ್ರಿಕೆಟ್‌ನಲ್ಲಿ ಆಡುವುದು ಕ್ರಿಕೆಟ್ ಮಿತಿಮೀರಿಲ್ಲ ಎಂಬುದಕ್ಕೆ ಸೂಕ್ತ ಸಾಕ್ಷ್ಯ ಎಂದು ಹೇಳಿದೆ.[೨]
ಟೆಸ್ಟ್ ಪಂದ್ಯಾವಳಿ
ಬದಲಾಯಿಸಿಕ್ರಿಕೆಟ್ ಅಭಿಮಾನಿಗಳು ಎಲ್ಲಾ ಟೆಸ್ಟ್ ತಂಡಗಳನ್ನು ಪರಸ್ಪರ ಹೋಲಿಸಲು ಅನುಕೂಲವಾಗಲೆಂದು ಐಸಿಸಿ ಟೆಸ್ಟ್ ಪಂದ್ಯಾವಳಿಯನ್ನು ಅನುಷ್ಠಾನಗೊಳಿಸಿತು. ಈ ತಂಡವು ಸರ್ವಕಾಲಿಕವಾಗಿದ್ದು, ನಿರ್ದಿಷ್ಟ ಅವಧಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡವು ಈ ಟೆಸ್ಟ್ ಟ್ರೊಫಿ ತನ್ನದಾಗಿಸಿಕೊಳ್ಳುತ್ತದೆ. (ಈ ಪಟ್ಟಿಯು, ನಿರ್ದಿಷ್ಟ ಅವಧಿಯ ಅಂತ್ಯದಲ್ಲಿ ಅಗ್ರಸ್ಥಾನಕ್ಕೇರುವ ತಂಡ ಚಾಂಪಿಯನ್ ಎನಿಸುವ ಲೀಗ್ ಸ್ಥಾನಗಳ ಪಟ್ಟಿಗಿಂತಲೂ ಬಹಳ ಭಿನ್ನವಾಗಿದೆ)
ಏಕದಿನ ಅಂತರರಾಷ್ಟ್ರೀಯ ಪಂದ್ಯಾವಳಿ
ಬದಲಾಯಿಸಿಟೆಸ್ಟ್ ಪಂದ್ಯಾವಳಿಗೆ ಆಧಾರವಾದ ಕಾರಣಗಳಂತೆಯೇ ಏಕದಿನ ಅಂತರರಾಷ್ಟ್ರೀಯ ಪಂದ್ಯಾವಳಿಯನ್ನು ಅನುಷ್ಠಾನಗೊಳಿಸಲಾಯಿತು. ಇದರದೂ ಅದೇ ರೀತಿಯ ರಚನೆಯಿದೆ. ಈ ಪಂದ್ಯಾವಳಿಯು ವಿಶ್ವಕಪ್ ಪಂದ್ಯಾವಳಿಯ ಸ್ಥಾನವನ್ನು ಕಸಿದುಕೊಳ್ಳುತ್ತದೆ ಎಂದು ಭಾವಿಸುವಂತಿಲ್ಲ. ವಿಶ್ವಕಪ್ ಕ್ರಿಕೆಟ್ ಬಹಳಷ್ಟು ಕ್ರಿಕೆಟ್ ಅಭಿಮಾನಿಗಳ ಆಸಕ್ತಿ ಕಾಯ್ದುಕೊಂಡಿದೆ.
ಇವನ್ನೂ ಗಮನಿಸಿ
ಬದಲಾಯಿಸಿ- ೨೦೦೪ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್
- ೨೦೦೪-೦೫ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್
- ೨೦೦೫ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್
- ೨೦೦೫-೦೬ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್
- ೨೦೦೬ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್
- ೨೦೦೬-೦೭ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್
- ೨೦೦೭ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್
- ೨೦೦೭-೦೮ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್
- ೨೦೦೮ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್
- ೨೦೦೮-೦೯ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್
- ೨೦೦೯ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್
- ೨೦೦೯-೧೦ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್
- ಕ್ರಿಕೆಟ್ ಅಧಿಕಾರಿಗಳ ಸಂಘ
ಉಲ್ಲೇಖಗಳು
ಬದಲಾಯಿಸಿ- ↑ "Too much cricket hurting the game: Kapil Dev" rediff.com ಅಂತರಜಾಲತಾಣದಿಂದ, ೨೦ ಮಾರ್ಚ್ ೨೦೦೨ (ಮರುಸಂಪಾದನೆ: ೨೨ ಸೆಪ್ಟೆಂಬರ್ ೨೦೦೫)
- ↑ "Mani dismisses suggestions there is too much cricket ಪಾಕಿಸ್ತಾನದ ಡೈಲಿ ಟೈಮ್ಸ್ ಪತ್ರಿಕೆಯಿಂದ, ೯ ಜುಲೈ ೨೦೦೪ (ಮರುಸಂಪಾದನೆ: ೨೨ ಸೆಪ್ಟೆಂಬರ್ ೨೦೦೫)
- HindustanTimes.com - ಐಸಿಸಿ ದಶವಾರ್ಷಿಕ ಯೋಜನೆ Archived 2007-12-23 ವೇಬ್ಯಾಕ್ ಮೆಷಿನ್ ನಲ್ಲಿ.
ಬಾಹ್ಯ ಕೊಂಡಿಗಳು
ಬದಲಾಯಿಸಿ- ಕ್ರಿಕಿನ್ಫೊ - ಅಂತರರಾಷ್ಟ್ರೀಯ ಕ್ರಿಕೆಟ್ ದಿನಚರಿ
- "ಸಿಲ್ಲಿ ಪಾಯಿಂಟ್" |||. Archived 2013-10-27 ವೇಬ್ಯಾಕ್ ಮೆಷಿನ್ ನಲ್ಲಿ.ಅಂತರರಾಷ್ಟ್ರೀಯ ಪಂದ್ಯ-ವೇಳಾಪಟ್ಟಿಗಳು Archived 2013-10-27 ವೇಬ್ಯಾಕ್ ಮೆಷಿನ್ ನಲ್ಲಿ.