ಅಂತರರಾಷ್ಟ್ರೀಯ ಕಾಫಿ ದಿನವು ಕಾಫಿಯನ್ನು ಒಂದು ಪಾನೀಯವಾಗಿ ಪ್ರಚಾರ ಮಾಡಲು ಮತ್ತು ಆಚರಿಸಲು ಬಳಸಲಾಗುವ ಒಂದು ಸಂದರ್ಭವಾಗಿದೆ, ಜಗತ್ತಿನಾದ್ಯಂತ ಹಲವು ಸ್ಥಳಗಳಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ. ಇಂಟರ್ನ್ಯಾಷನಲ್ ಕಾಫಿ ಆರ್ಗನೈಸೇಶನ್ ಅಂಗೀಕರಿಸಿದ ಮೊದಲ ಅಧಿಕೃತ ದಿನಾಂಕ 1 ಅಕ್ಟೋಬರ್ 2015, ಮಿಲನ್ನಲ್ಲಿ ಪ್ರಾರಂಭವಾಯಿತು. ನ್ಯಾಯೋಚಿತ ವ್ಯಾಪಾರ ಕಾಫಿಯನ್ನು ಉತ್ತೇಜಿಸಲು ಮತ್ತು ಕಾಫಿ ಬೆಳೆಗಾರರ ಅವಸ್ಥೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನ, ಅನೇಕ ಕಂಪನಿಗಳು ಉಚಿತ ಅಥವಾ ರಿಯಾಯಿತಿಯಲ್ಲಿ ಕಾಫಿಯನ್ನು ನೀಡುತ್ತವೆ. ಕೆಲವು ಕಂಪನಿಗಳು ಕೂಪನ್ಗಳು ನೀಡುವುದರ ಜೊತೆಗೆ, ಸಾಮಾಜಿಕ ನೆಟ್ವರ್ಕಿಂಗ್ ಮೂಲಕ ಅವರ ನಿಷ್ಠಾವಂತ ಅನುಯಾಯಿಗಳೊಂದಿಗೆ ಡೀಲ್ಗಳನ್ನು ಮಾಡುತ್ತವೆ. ಕೆಲವು ಕಂಪನಿಗಳು ನ್ಯಾಷನಲ್ ಕಾಫಿ ಡೇ ಶುಭಾಶಯ ಪತ್ರಗಳು ಮತ್ತು ಉಚಿತ ಇ-ಕಾರ್ಡುಗಳನ್ನು ಮಾರಾಟ ಮಾಡುತ್ತವೆ.

ಇತಿಹಾಸಸಂಪಾದಿಸಿ

ಮಾರ್ಚ್ 3, 2014 ರಂದು ನಡೆದ ಒಂದು ಸಭೆಯಲ್ಲಿ, ಎಕ್ಸ್ಪೋ 2015 ರ ಭಾಗವಾಗಿ ಇಂಟರ್ನ್ಯಾಷನಲ್ ಕಾಫಿ ಆರ್ಗನೈಸೇಶನ್ ಮಿಲನ್ನಲ್ಲಿ ಮೊದಲ ಅಧಿಕೃತ ಅಂತರಾಷ್ಟ್ರೀಯ ಕಾಫಿ ದಿನವನ್ನು ಪ್ರಾರಂಭಿಸಲು ತೀರ್ಮಾನಿಸಿತು.[೧] ಅಂತರರಾಷ್ಟ್ರೀಯ ಕಾಫಿ ದಿನದ ನಿಖರವಾದ ಮೂಲವು ತಿಳಿದಿಲ್ಲ. 1983 ರಲ್ಲಿ “ದಿ ಆಲ್ ಜಪಾನ್ ಕಾಫಿ ಅಸೋಸಿಯೇಷನ್” ಈ ಕಾರ್ಯಕ್ರಮವನ್ನು ಜಪಾನ್ನಲ್ಲಿ ಪ್ರಚಾರ ಮಾಡಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ "ನ್ಯಾಷನಲ್ ಕಾಫಿ ಡೇ" 2005 ರ ಆರಂಭದಲ್ಲಿ ಸಾರ್ವಜನಿಕವಾಗಿ ಪ್ರಸ್ತಾಪಿಸಲಾಗಿದೆ. "ಇಂಟರ್ನ್ಯಾಷನಲ್ ಕಾಫಿ ಡೇ" ಎಂಬ ಹೆಸರನ್ನು ಮೊದಲ ಬಾರಿಗೆ ದಕ್ಷಿಣ ಆಹಾರ ಮತ್ತು ಪಾನೀಯ ಸಂಗ್ರಹಾಲಯವು ಬಳಸಿಕೊಂಡಿತು, ಇದನ್ನು ಆಚರಿಸಲು ಮತ್ತು ಮೊದಲ ನ್ಯೂ ಆರ್ಲಿಯನ್ಸ್ ಕಾಫಿ ಉತ್ಸವವನ್ನು ಘೋಷಿಸಲು ಅಕ್ಟೋಬರ್ 3, 2009 ರಂದು ಪತ್ರಿಕಾಗೋಷ್ಠಿಯಲ್ಲಿ ಕರೆದರು. ಇದನ್ನು ಚೀನಾದಲ್ಲಿ ಇಂಟರ್ನ್ಯಾಷನಲ್ ಕಾಫಿ ಆರ್ಗನೈಸೇಷನ್ನಿಂದ ಪ್ರಚಾರ ಮಾಡಲಾಯಿತು, ಇದು ಮೊದಲು 1997 ರಲ್ಲಿ ಆಚರಿಸಲ್ಪಟ್ಟಿತು, ಮತ್ತು ಏಪ್ರಿಲ್ 2001 ರ ಆರಂಭದಲ್ಲಿ ವಾರ್ಷಿಕ ಆಚರಣೆಯನ್ನು ಮಾಡಿತು. ತೈವಾನ್ ಮೊದಲ ಬಾರಿಗೆ ಅಂತರರಾಷ್ಟ್ರೀಯ ಕಾಫಿ ದಿನವನ್ನು 2009 ರಲ್ಲಿ ಆಚರಿಸಿತು. ನವೆಂಬರ್ 17, 2005 ರಂದು ನೇಪಾಳವು ರಾಷ್ಟ್ರೀಯ ಕಾಫಿ ದಿನವನ್ನು ಆಚರಿಸಿತು. ಇಂಡೋನೇಷ್ಯಾವು ಸ್ವಾತಂತ್ರ್ಯ ದಿನವನ್ನು ಆಗಸ್ಟ್ 17, 2006 ರಂದು ಆಚರಿಸುತ್ತದೆ, ಅದೇ ದಿನವನ್ನು ರಾಷ್ಟ್ರೀಯ ಕಾಫಿ ದಿನವನ್ನಾಗಿ ಆಚರಿಸುತ್ತದೆ.[೨]

ರಾಷ್ಟ್ರೀಯ ಕಾಫಿ ದಿನಗಳುಸಂಪಾದಿಸಿ

ದಿನಾಂಕ ದೇಶಗಳು
ಆರಂಭಿಕ ಏಪ್ರಿಲ್ ಚೀನಾ
ಏಪ್ರಿಲ್ ೧೪ ಪೋರ್ಚುಗಲ್
ಮೇ ೬ ಡೆನ್ಮಾರ್ಕ್
ಮೇ ೨೪ ಬ್ರೆಜಿಲ್
ಜೂನ್ ೨೭ ಕೊಲಂಬಿಯಾ
ಆಗಸ್ಟ್ ೨೨ ಪೆರು
ಸೆಪ್ಟೆಂಬರ್ ಮೊದಲ ಶನಿವಾರ ಜರ್ಮನಿ
ಸೆಪ್ಟೆಂಬರ್ ಎರಡನೆ ಶುಕ್ರವಾರ ಕೋಸ್ಟರಿಕಾ
ಸೆಪ್ಟೆಂಬರ್ ೧೯ ಐರ್ಲೆಂಡ್
ಸೆಪ್ಟೆಂಬರ್ ೨೦ ಮಂಗೋಲಿಯ
ಸೆಪ್ಟೆಂಬರ್ ೨೮ ಸ್ವಿಟ್ಜರ್ಲ್ಯಾಂಡ್
ಸೆಪ್ಟೆಂಬರ್ ೨೯
ಅಕ್ಟೊಬರ್ ೧
  • ಜಪಾನ್
  • ಶ್ರೀಲಂಕಾ

ಉಲ್ಲೇಖಗಳುಸಂಪಾದಿಸಿ

  1. https://icocoffeeorg.tumblr.com/post/128101688395/how-are-you-celebrating-international-coffee-day
  2. http://ilovebuttercoffee.com/national-coffee-day-history/#history-2