ಅಂಕಿತಾ ಭಕತ್ (ಜನನ ೧೭ ಜೂನ್ ೧೯೯೮) ಇವರು ಪಶ್ಚಿಮ ಬಂಗಾಳದ ಭಾರತೀಯ ರಿಕರ್ವ್ ಬಿಲ್ಲುಗಾರ್ತಿ, ಪ್ರಸ್ತುತ ವಿಶ್ವ ಬಿಲ್ಲುಗಾರಿಕೆ ಫೆಡರೇಶನ್‌ನಿಂದ ವಿಶ್ವದ ೨೦ ನೇ ಶ್ರೇಯಾಂಕದಲ್ಲಿದ್ದಾರೆ.[] ಅವರು ಭಾರತೀಯ ರಾಷ್ಟ್ರೀಯ ರಿಕರ್ವ್ ತಂಡದ ಸದಸ್ಯರಾಗಿದ್ದಾರೆ ಮತ್ತು ಮಹಿಳಾ ವೈಯಕ್ತಿಕ, ಮಹಿಳಾ ತಂಡ ಮತ್ತು ಮಿಶ್ರ ತಂಡ ರಿಕರ್ವ್ ವಿಭಾಗಗಳಲ್ಲಿ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಸ್ಪರ್ಧಿಸುತ್ತಾರೆ. ಅವರು ಅರ್ಜೆಂಟೀನಾದ ರೊಸಾರಿಯೊದಲ್ಲಿ ನಡೆದ ೨೦೧೭ ರ ವಿಶ್ವ ಬಿಲ್ಲುಗಾರಿಕೆ ಯೂತ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದರು ಮತ್ತು ಪಾಲುದಾರ ಜೆಮ್ಸನ್ ಸಿಂಗ್ ನಿಂಗ್ತೌಜಮ್ ಅವರೊಂದಿಗೆ ರಿಕರ್ವ್ ಜೂನಿಯರ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು.

ಅಂಕಿತಾ ಭಕತ್
೨೦೨೧ ರಲ್ಲಿ, ಅಂಕಿತಾ ಭಕತ್.
ವೈಯುಕ್ತಿಕ ಮಾಹಿತಿ
ಜನನ (1998-06-17) ೧೭ ಜೂನ್ ೧೯೯೮ (ವಯಸ್ಸು ೨೬)
ಕೋಲ್ಕತ್ತಾ, ಪಶ್ಚಿಮ ಬಂಗಾಳ, ಭಾರತ
Sport
ಕ್ರೀಡೆಬಿಲ್ಲುಗಾರಿಕೆ
ಸದ್ಯದ ವಿಶ್ವ ಶ್ರೇಯಾಂಕ೫೧ (ಸೆಪ್ಟೆಂಬರ್ ೨೦೧೮ ರಂತೆ)

ಆರಂಭಿಕ ಜೀವನ

ಬದಲಾಯಿಸಿ

ಅಂಕಿತಾರವರು ೧೭ ಜೂನ್ ೧೯೯೮ ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಹಾಲು ಮಾರುವ ಶಂತನು ಭಕತ್ ಮತ್ತು ಶಿಲಾ ಭಕತ್ ದಂಪತಿಗೆ ಮಗಳಾಗಿ ಜನಿಸಿದರು.[][]

ಅವರು ಹತ್ತು ವರ್ಷದವರಿದ್ದಾಗ ಬಿಲ್ಲುಗಾರಿಕೆಯನ್ನು ಕೈಗೆತ್ತಿಕೊಂಡರು ಮತ್ತು ಆರಂಭಿಕ ತರಬೇತಿಗಾಗಿ ಕಲ್ಕತ್ತಾದ ಬಿಲ್ಲುಗಾರಿಕಾ ಕ್ಲಬ್‌ಗೆ ಸೇರಿದರು.[] ಅವರು ೨೦೧೪ ರಲ್ಲಿ, ಜೆಮ್ಷೆಡ್‌ಪುರದ ಟಾಟಾ ಆರ್ಚರಿ ಅಕಾಡೆಮಿಗೆ ಸೇರಿದರು. ಅಲ್ಲಿ ಅವರು ಧರ್ಮೇಂದ್ರ ತಿವಾರಿ, ಪೂರ್ಣಿಮಾ ಮಹತೋ ಮತ್ತು ರಾಮ್ ಅವದೇಶ್ ಅವರ ಅಡಿಯಲ್ಲಿ ತರಬೇತಿ ಪಡೆದರು.

ವೃತ್ತಿಜೀವನ

ಬದಲಾಯಿಸಿ

ಆರ್ಚರಿ ಅಸೋಸಿಯೇಷನ್ ಆಫ್ ಇಂಡಿಯಾ (ಎಎಐ) ನಡೆಸಿದ ಪ್ರಯೋಗದಲ್ಲಿ ಅವರ ಪ್ರದರ್ಶನದ ಆಧಾರದ ಮೇಲೆ, ಭಕತ್‌ರವರು ೨೦೧೫ ರಲ್ಲಿ, ಯಂಕ್ಟನ್‌ನಲ್ಲಿ ನಡೆದ ವಿಶ್ವ ಬಿಲ್ಲುಗಾರಿಕೆ ಯೂತ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ರಾಷ್ಟ್ರೀಯ ತಂಡದ ಭಾಗವಾಗಿ ಸ್ಪರ್ಧಿಸಲು ಆಯ್ಕೆಯಾದರು.[] ಆದಾಗ್ಯೂ, ಕಾರ್ಯಕ್ರಮದ ಒಂದು ವಾರ ಮೊದಲು, ಭಾರತದ ಯೋಜಿತ ೩೫ ಜನರ ನಿಯೋಗದ ೧೮ ಕ್ರೀಡಾಪಟುಗಳು ಮತ್ತು ತರಬೇತುದಾರರಿಗೆ ಯುಎಸ್‌ಗೆ ಪ್ರವೇಶಿಸಲು ವೀಸಾ ನಿರಾಕರಿಸಲಾಯಿತು.[]

ಸಿಯೋಲ್‌ನಲ್ಲಿ ಸೆಪ್ಟೆಂಬರ್ ೩ ರಿಂದ ೯ ರವರೆಗೆ ನಡೆದ ೨೦೧೫ ರ ಸಿಯೋಲ್ ಇಂಟರ್ನ್ಯಾಷನಲ್ ಯೂತ್ ಆರ್ಚರಿ ಫೆಸ್ಟಾದಲ್ಲಿ, ಭಕತ್‌ರವರು ಎರಡು ಪದಕಗಳನ್ನು ಗೆದ್ದ ತಂಡದ ಭಾಗವಾಗಿದ್ದರು.[] ಬಾಲಕಿಯರ ವೈಯಕ್ತಿಕ ರಿಕರ್ವ್ ಸ್ಪರ್ಧೆಯಲ್ಲಿ ಕಂಚು ಮತ್ತು ಬಾಲಕಿಯರ ರಿಕರ್ವ್ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಪದಕಗಳನ್ನು ಗೆದ್ದರು. ಬ್ಯಾಂಕಾಕ್‌ನಲ್ಲಿ ೧೦ ರಿಂದ ೧೧ ಡಿಸೆಂಬರ್ ೨೦೧೬ ರವರೆಗೆ ನಡೆದ ಒಳಾಂಗಣ ಬಿಲ್ಲುಗಾರಿಕೆ ವಿಶ್ವಕಪ್‌ನಲ್ಲಿ (ಹಂತ ೨) ಭಕತ್ ಮಹಿಳೆಯರ ವೈಯಕ್ತಿಕ ರಿಕರ್ವ್ ಸ್ಪರ್ಧೆಯಲ್ಲಿ ಸ್ಪರ್ಧಿಸಿದರು. ಅಲ್ಲಿ ಅವರು ಅಖಿಲ ಭಾರತ ಮೊದಲ ಸುತ್ತಿನ ಪಂದ್ಯದಲ್ಲಿ ಪ್ರಾಚಿ ಸಿಂಗ್ ಅವರನ್ನು ೬–೨ ರಿಂದ ಸೋಲಿಸಿದರು. ಆದರೆ, ಪ್ರಿ-ಕ್ವಾರ್ಟರ್ ಫೈನಲ್‍ನಲ್ಲಿ ಜಿಯಾನ್ ಹುನ್ಯೋಂಗ್ ವಿರುದ್ಧ ೦–೬ ರಿಂದ ಸೋತರು.[]

ಭಕತ್‌ರವರು ಬ್ಯಾಂಕಾಕ್‌ನಲ್ಲಿ ನಡೆದ ೨೦೧೭ ರ ಏಷ್ಯಾ ಕಪ್‌ನಲ್ಲಿ (ಹಂತ ೨) ಮಹಿಳಾ ವೈಯಕ್ತಿಕ ಮತ್ತು ಮಹಿಳಾ ರಿಕರ್ವ್ ತಂಡ ಸ್ಪರ್ಧೆಗಳಲ್ಲಿ ಸ್ಪರ್ಧಿಸಿದರು. ಮೊದಲನೆಯದರಲ್ಲಿ, ಅವರು ಸಹವರ್ತಿ ದೀಪಿಕಾ ಕುಮಾರಿ[] ವಿರುದ್ಧ ೨–೬ ಸೆಟ್‌ಗಳಿಂದ ಸೋತು ಕ್ವಾರ್ಟರ್-ಅಂತಿಮ ಸ್ಪರ್ಧೆಗೆ ತಲುಪಿದರು. ಆದರೆ, ಎರಡನೆಯದರಲ್ಲಿ, ಅವರು ತಮ್ಮ ತಂಡದ ಸಹ ಆಟಗಾರರಾದ ಪ್ರೊಮಿಯಾ ಡೈಮರಿ ಮತ್ತು ಸಾಕ್ಷಿ ರಾಜೇಂದ್ರ ಶಿಟೋಲೆ ಅವರೊಂದಿಗೆ ಬೆಳ್ಳಿ ಪದಕವನ್ನು ಗೆದ್ದರು. ಅಂತಿಮ ಸ್ಪರ್ಧೆಯಲ್ಲಿ ಚೈನೀಸ್ ತೈಪೆ[೧೦] ವಿರುದ್ಧ ೦–೬ ರಿಂದ ಸೋತರು. ಅದೇ ತಿಂಗಳು, ಫರಿದಾಬಾದ್‌ನಲ್ಲಿ ನಡೆದ ಭಾರತೀಯ ಹಿರಿಯ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ೩೭ ನೇ ಆವೃತ್ತಿಯಲ್ಲಿ ಮಹಿಳಾ ರಿಕರ್ವ್ ಸ್ಪರ್ಧೆಯಲ್ಲಿ ಭಾಗವಹಿಸಿದರು. ಅವರು ದೀಪಿಕಾ ಕುಮಾರಿ ವಿರುದ್ಧ ೬–೨ ಸೆಟ್‌ಗಳಿಂದ ಸೋತು ಅಂತಿಮ ಸ್ಪರ್ಧೆಗೆ ಪ್ರವೇಶಿಸಿದರು.[೧೧]

೨೦೧೭ ರ ಜುಲೈ ೪ ರಿಂದ ೯ ರವರೆಗೆ ಚೈನೀಸ್ ತೈಪೆಯಲ್ಲಿ ನಡೆದ ೨೦೧೭ ರ ಏಷ್ಯಾ ಕಪ್ (ಹಂತ ೩) ವಿಶ್ವ ಶ್ರೇಯಾಂಕ ಪಂದ್ಯಾವಳಿಯಲ್ಲಿ ಭಕತ್‌ರವರು ಮಹಿಳೆಯರ ವೈಯಕ್ತಿಕ, ಮಹಿಳಾ ತಂಡ ಮತ್ತು ಮಿಶ್ರ ತಂಡ ಎಂಬ ಮೂರು ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ್ದರು. ಅವರು ತಮ್ಮ ಪಾಲುದಾರರಾದ ಮುಖೇಶ್ ಬೊರೊ ಅವರೊಂದಿಗೆ ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು.[೧೨] ಅದೇ ವರ್ಷ, ಹರಿಯಾಣದ ಸೋನಿಪತ್‌ನಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಅರ್ಜೆಂಟೀನಾದ ರೊಸಾರಿಯೊದಲ್ಲಿ ನಡೆದ ೨೦೧೭ ರ ವಿಶ್ವ ಬಿಲ್ಲುಗಾರಿಕೆ ಯುವ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ರಾಷ್ಟ್ರೀಯ ತಂಡಕ್ಕೆ ಸ್ಪರ್ಧಿಸಲು ಆಯ್ಕೆಯಾದ ೨೪ ಸದಸ್ಯರಲ್ಲಿ ಅವರು ಒಬ್ಬರಾಗಿದ್ದರು.[೧೩]

ವಿಶ್ವ ಯುವ ಬಿಲ್ಲುಗಾರಿಕೆ ಚಾಂಪಿಯನ್‌ಶಿಪ್‌‌ನಲ್ಲಿ, ಭಕತ್‌ರವರು ತಮ್ಮ ಪಾಲುದಾರರಾದ ಜೆಮ್ಸನ್ ಸಿಂಗ್ ನಿಂಗ್ತೌಜಮ್ ಅವರೊಂದಿಗೆ ರಿಕರ್ವ್ ಜೂನಿಯರ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ಪರ್ಧಿಸಿದರು ಮತ್ತು ಒಟ್ಟಿಗೆ ಅವರು ಒಂಬತ್ತನೇ ಶ್ರೇಯಾಂಕ ಪಡೆದರು.[೧೪][೧೫] ಅಂತಿಮ ಸ್ಪರ್ಧೆಯಲ್ಲಿ ರಷ್ಯಾದ ತಂಡವನ್ನು ೬–೨ ಗೋಲುಗಳಿಂದ ಸೋಲಿಸಿದ ನಂತರ, ಈ ಜೋಡಿಯು ಚಿನ್ನದ ಪದಕವನ್ನು ಗೆದ್ದುಕೊಂಡಿತು. ಇದರಿಂದಾಗಿ, ಭಾರತಕ್ಕೆ ಒಟ್ಟಾರೆ ನಾಲ್ಕನೇ ವಿಶ್ವ ಯುವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ನೀಡಿತು. ೨೦೦೯ ಮತ್ತು ೨೦೧೧ ರಲ್ಲಿ, ದೀಪಿಕಾ ಕುಮಾರಿ ಅದನ್ನು ಗೆದ್ದ ನಂತರ ಇದು ಮೊದಲನೆಯ ಸ್ಪರ್ಧೆಯಾಗಿದೆ. ಅವರು ಕ್ವಾರ್ಟರ್ ಅಂತಿಮ ಸ್ಪರ್ಧೆಯಲ್ಲಿ ಅಗ್ರ ಶ್ರೇಯಾಂಕಿತ ಕೊರಿಯನ್ ತಂಡವನ್ನು ೫–೪ ಗೋಲುಗಳಿಂದ ಮತ್ತು ಸೆಮಿಫೈನಲ್‌ನಲ್ಲಿ ಉಕ್ರೇನಿಯನ್ ತಂಡವನ್ನು ೬–೦ ಗೋಲುಗಳಿಂದ ಸೋಲಿಸಿ ಅಂತಿಮ ಸ್ಪರ್ಧೆಗೆ ಪ್ರವೇಶಿಸಿದ್ದರು.[೧೬]

ಏಪ್ರಿಲ್ ೨೦೧೮ ರಲ್ಲಿ, ಭಕತ್‌ರವರು ಚೀನಾದ ಶಾಂಘೈನಲ್ಲಿ ಏಪ್ರಿಲ್ ೨೩ ರಿಂದ ೨೯ ರವರೆಗೆ ನಡೆದ ೨೦೧೮ ರ ಬಿಲ್ಲುಗಾರಿಕೆ ವಿಶ್ವಕಪ್‌ನಲ್ಲಿ ಮಹಿಳಾ ವೈಯಕ್ತಿಕ, ಮಹಿಳಾ ತಂಡ ಮತ್ತು ಮಿಶ್ರ ತಂಡ ರಿಕರ್ವ್ ಸ್ಪರ್ಧೆಗಳಲ್ಲಿ ಸ್ಪರ್ಧಿಸಿದರು.[೧೭] ವೈಯಕ್ತಿಕ ರಿಕರ್ವ್ ಸ್ಪರ್ಧೆಯಲ್ಲಿ, ಅರ್ಹತಾ ಸುತ್ತಿನಲ್ಲಿ ೭೨೦ ಅಂಕಗಳಲ್ಲಿ ೬೬೫ ಅಂಕಗಳನ್ನು ಗಳಿಸಿದ ನಂತರ ಅವರು ಎಂಟನೇ ಶ್ರೇಯಾಂಕ ಪಡೆದರು.[೧೮] ಅವರು ಮೂರನೇ ಸುತ್ತಿನಲ್ಲಿ ಸಹವರ್ತಿ ಬೊಂಬೈಲಾ ದೇವಿ ಲೈಶ್ರಾಮ್ ಅವರನ್ನು ೬–೪ ರಿಂದ ಸೋಲಿಸಿದರು. ಆದರೆ, ನಾಲ್ಕನೇ ಸುತ್ತಿನಲ್ಲಿ ಚೀನಾದ ಆನ್ ಕಿಕ್ಸುವಾನ್ ವಿರುದ್ಧ ೪–೬ ರಿಂದ ಸೋತರು. ಅವರು ಮಹಿಳಾ ತಂಡ ಸ್ಪರ್ಧೆಯಲ್ಲಿ ಪ್ರಮೀಳಾ ಡೈಮರಿ, ದೀಪಿಕಾ ಕುಮಾರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಅತನು ದಾಸ್ ಅವರೊಂದಿಗೆ ಸೇರಿಕೊಂಡರು. ಎರಡೂ ಸ್ಪರ್ಧೆಗಳ ಕ್ವಾರ್ಟರ್-ಅಂತಿಮ ಸ್ಪರ್ಧೆಗೆ ತಲುಪಿದರು. ನಂತರ, ಕ್ರಮವಾಗಿ ಚೀನೀ ಮತ್ತು ಯುನೈಟೆಡ್ ಸ್ಟೇಟ್ಸ್ ತಂಡಗಳ ವಿರುದ್ಧ ೧–೫ ಮತ್ತು ೪–೫ ಸೆಟ್‌ಗಳಿಂದ ಸೋತರು.[೧೯][೨೦]

ತರುವಾಯ, ಮೇ ೨೦೧೮ ರಲ್ಲಿ, ಭಕತ್‌ರವರು ಟರ್ಕಿಯ ಅಂಟಲ್ಯದಲ್ಲಿ ನಡೆದ ೨೦೧೮ ಆರ್ಚರಿ ವಿಶ್ವಕಪ್ - ಹಂತ ೨ ರಲ್ಲಿ ಮಹಿಳಾ ವೈಯಕ್ತಿಕ ಮತ್ತು ಮಹಿಳಾ ರಿಕರ್ವ್ ತಂಡ ಸ್ಪರ್ಧೆಗಳಲ್ಲಿ ಸ್ಪರ್ಧಿಸಿದರು.[೨೧] ನಂತರದ ಸ್ಪರ್ಧೆಯಲ್ಲಿ, ಅವರು ಪ್ರೊಮೀಳಾ ಡೈಮರಿ ಮತ್ತು ದೀಪಿಕಾ ಕುಮಾರಿ ಅವರೊಂದಿಗೆ ಸೇರಿಕೊಂಡರು ಮತ್ತು ಅಂತಿಮವಾಗಿ ಎರಡನೇ ಸುತ್ತು ಮತ್ತು ಕ್ವಾರ್ಟರ್-ಅಂತಿಮ ಸ್ಪರ್ಧೆಗಳಲ್ಲಿ ಕ್ರಮವಾಗಿ ಫ್ರೆಂಚ್ ಮತ್ತು ರಷ್ಯಾದ ತಂಡಗಳನ್ನು ೫–೩ ಮತ್ತು ೫–೧ ಸೆಟ್‌ಗಳಿಂದ ಸೋಲಿಸುವ ಮೂಲಕ ಸೆಮಿಫೈನಲ್ ತಲುಪಿದರು.[೨೨] ಆದಾಗ್ಯೂ, ಸೆಮಿ-ಫೈನಲ್‌ನಲ್ಲಿ, ಭಾರತ ತಂಡವು ದಕ್ಷಿಣ ಕೊರಿಯಾದ ತಂಡದ ವಿರುದ್ಧ ೨–೬ ಗೋಲುಗಳಿಂದ ಸೋತಿತು. ತರುವಾಯ, ಕಂಚಿನ ಪದಕದ ಪಂದ್ಯದಲ್ಲಿ ಅವರು ಚೈನೀಸ್ ತೈಪೆಯನ್ನು ಎದುರಿಸಿ, ೨–೬ ಗೋಲುಗಳಿಂದ ಸೋತರು.[೨೩]

೨೦೧೪ ಬೇಸಿಗೆ ಒಲಿಂಪಿಕ್ಸ್

ಬದಲಾಯಿಸಿ

ಪ್ಯಾರಿಸ್‌ನಲ್ಲಿ ನಡೆದ ೨೦೨೪ ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಕತ್‌ರವರು ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಂಡರು. ಆದಾಗ್ಯೂ, ಮಹಿಳೆಯರ ವೈಯಕ್ತಿಕ ೧/೩೨ ಎಲಿಮಿನೇಷನ್ ಸುತ್ತಿನಲ್ಲಿ ಅವರು ಪೋಲೆಂಡ್‌ನ ವಿಯೋಲೆಟಾ ಮಿಸ್ಜೋರ್ ವಿರುದ್ಧ ೪-೬ ರಿಂದ ಸೋತರು. ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರೊಂದಿಗೆ ಭಕತ್‌ರವರು ಮಹಿಳಾ ತಂಡದಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದರು. ಆದಾಗ್ಯೂ, ತಂಡವು ನೆದರ್ಲ್ಯಾಂಡ್ಸ್ ತಂಡದ ವಿರುದ್ಧ ೦-೬ ಗೋಲುಗಳಿಂದ ಸೋತಿತು. ಮಿಶ್ರ ತಂಡ ಕಂಚಿನ ಪದಕ ಪಂದ್ಯದಲ್ಲಿ ಬಿಲ್ಲುಗಾರಿಕೆಯಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ ಪದಕದಲ್ಲಿ ಸ್ಪರ್ಧಿಸುವ ಮೂಲಕ ಭಕತ್‌ರವರು ಧೀರಜ್ ಬೊಮ್ಮದೇವರ ಅವರೊಂದಿಗೆ ಇತಿಹಾಸ ನಿರ್ಮಿಸಿದರು. ಆದರೆ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕ ತಂಡದ ವಿರುದ್ಧ ೨-೬ ರಿಂದ ಸೋತರು.[೨೪][೨೫]

ಉಲ್ಲೇಖಗಳು

ಬದಲಾಯಿಸಿ
  1. "ANKITA BHAKAT". World Archery Federation. Retrieved 17 September 2018.
  2. "Ankita Bhakat". The Times of India. 18 January 2018. Retrieved 17 September 2018.
  3. Sengupta, Abhishek (6 April 2017). "Olympic dreams, but no bow for archer Ankita Bhakat". The Times of India. Retrieved 17 September 2018.
  4. "कभी उधार के तीर-धनुष से लेती थी ट्रेनिंग". Dainik Jagran (in Hindi). 12 January 2018. Retrieved 17 September 2018.{{cite news}}: CS1 maint: unrecognized language (link)
  5. Thaker, Jayesh (14 April 2015). "It's bullseye US for budding Kolhan archers". The Telegraph. Kolkata. Archived from the original on 12 July 2015. Retrieved 17 September 2018.
  6. "Statement: India's withdrawal from Youth Championships" (Press release). World Archery Federation. 8 June 2015. Retrieved 17 September 2018.
  7. "Archery Association of India; Report of the Secretary-General" (PDF). www.indianarchery.info. Retrieved 19 September 2018.
  8. Banerjee, Sudeshna (12 December 2016). "Indoor Archery World Cup: Atanu Das finishes fourth, Atul Verma upsets Olympic champion". Sportskeeda. Retrieved 20 September 2018.
  9. Banerjee, Sudeshna (3 December 2017). "Indoor Archery World Cup: Deepika Kumari clinches bronze medal". Sportskeeda. Retrieved 21 September 2018.
  10. Banerjee, Sudeshna (26 March 2017). "Asia Cup Stage 2: Indian men's compound archers win team gold". Sportskeeda. Retrieved 20 September 2018.
  11. Ganapathy, Selva (1 April 2017). "Olympians Das, Kumari take Indian National titles". World Archery Federation. Retrieved 20 September 2018.
  12. "2017 Asia Cup World Ranking Tournament Stage 3". World Archery Federation. Retrieved 21 September 2018.
  13. "Argentina calling – Four state archers in National Team". The Telegraph. Kolkata. 30 September 2017. Retrieved 22 September 2018.
  14. Wells, Chris (8 October 2017). "Indian pair win junior recurve world title". World Archery Federation. Retrieved 22 September 2018.
  15. "Indian pair win gold at World Archery Youth Championship". The Indian Express. Press Trust of India. 9 October 2017. Retrieved 23 September 2018.
  16. "Rosario 2017 World Archery Youth Championships". World Archery Federation. Retrieved 22 September 2018.
  17. "Ankita Bhakat at the Shanghai 2018 Hyundai Archery World Cup". World Archery Federation. Retrieved 23 September 2018.
  18. "Ankita is best Indian in recurve qualifications of Archery World Cup". Sportstar. Press Trust of India. 25 April 2018. Retrieved 23 September 2018.
  19. "India Recurve Women Team". World Archery Federation. Retrieved 23 September 2018.
  20. "India Recurve Mixed Team". World Archery Federation. Retrieved 23 September 2018.
  21. "Antalya 2018 Hyundai Archery World Cup – India". World Archery Federation. Retrieved 6 November 2018.
  22. "India Recurve Women Team". World Archery Federation. Retrieved 6 November 2018.
  23. "Indian trio falters in women's recurve bronze play-off at Archery World Cup". Hindustan Times. Press Trust of India. 26 May 2018. Retrieved 6 November 2018.
  24. "Ankita Bhakat and Dhiraj Bommadevara miss medal by a whisker but script history for Indian archery in Paris Olympics". www.hindustantimes.com. Hindustan Times. Retrieved 2 August 2024.
  25. "BHAKAT Ankita". olympics.com. olympics.com. Retrieved 2 August 2024.