ಪದಕ
ಪದಕವು ಸಾಮಾನ್ಯವಾಗಿ ಲೋಹದಿಂದ ತಯಾರಿಸಿದ, ಸಾಮಾನ್ಯವಾಗಿ ಎರಡೂ ಬದಿಗಳಲ್ಲಿ ವಿನ್ಯಾಸವನ್ನು ಹೊಂದಿರುವ ಚಿಕ್ಕದಾದ ಸಾಗಿಸಬಲ್ಲ ಕಲಾತ್ಮಕ ವಸ್ತುವಾಗಿರುತ್ತದೆ, ತೆಳುವಾದ ಬಿಲ್ಲೆಯಾಗಿರುತ್ತದೆ. ಇವು ಸಾಮಾನ್ಯವಾಗಿ ಯಾವುದೋ ಬಗೆಯ ಸ್ಮರಣಾರ್ಥ ಉದ್ದೇಶವನ್ನು ಹೊಂದಿರುತ್ತವೆ, ಮತ್ತು ಅನೇಕ ಪದಕಗಳನ್ನು ಪ್ರಶಸ್ತಿಗಳಾಗಿ ನೀಡಲಾಗುತ್ತದೆ. ಅವುಗಳನ್ನು ಯಾವುದೋ ರೀತಿಯಲ್ಲಿ ಧರಿಸುವ, ಬಟ್ಟೆ ಅಥವಾ ಆಭರಣಗಳಿಂದ ನೇತುಹಾಕಲು ಉದ್ದೇಶಿಸಲಾಗಿರುತ್ತದೆ. ಇವುಗಳನ್ನು ಛಾಪುಗಳ ಮೂಲಕ ನಾಣ್ಯದಂತೆ ತಯಾರಿಸಲಾಗಬಹುದು ಅಥವಾ ಅಚ್ಚಿನಲ್ಲಿ ಎರಕಹೊಯ್ಯಲಾಗಬಹುದು.
ಪದಕವನ್ನು ವ್ಯಕ್ತಿ ಅಥವಾ ಸಂಸ್ಥೆಗೆ ಕ್ರೀಡಾ, ಸೇನಾ, ಸಾಂಸ್ಕೃತಿಕ, ಶೈಕ್ಷಣಿಕ, ಅಥವಾ ವಿವಿಧ ಇತರ ಸಾಧನೆಗಳಿಗೆ ಮನ್ನಣೆಯ ರೂಪವಾಗಿ ನೀಡಲಾಗಬಹುದು. ನಿರ್ದಿಷ್ಟ ವ್ಯಕ್ತಿಗಳು ಅಥವಾ ಘಟನೆಗಳನ್ನು ಸ್ಮರಿಸಿಕೊಳ್ಳಲು ಮಾರಾಟಕ್ಕಾಗಿ, ಅಥವಾ ಸ್ವಂತ ಸಾಮರ್ಥ್ಯದಿಂದ ಕಲಾಭಿವ್ಯಕ್ತಿಯ ಕೃತಿಗಳಾಗಿ ಕೂಡ ಪದಕಗಳನ್ನು ಸೃಷ್ಟಿಸಬಹುದು. ಹಿಂದೆ, ಸಾಮಾನ್ಯವಾಗಿ ಒಬ್ಬ ವ್ಯಕ್ತಿಗಾಗಿ ಅವರ ಚಿತ್ರವಿರುವ, ಉತ್ಪಾದಿಸಲಾದ ಪದಕಗಳನ್ನು ಹಲವುವೇಳೆ ರಾಜತಾಂತ್ರಿಕ ಅಥವಾ ವೈಯಕ್ತಿಕ ಉಡುಗೊರೆಯ ರೂಪವಾಗಿ ಬಳಸಲಾಗುತ್ತಿತ್ತು.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- European sculpture and metalwork, a collection catalog from The Metropolitan Museum of Art Libraries (fully available online as PDF), which contains material on medals (see index)
- Medals and the Royal Mint Archived 2018-07-05 ವೇಬ್ಯಾಕ್ ಮೆಷಿನ್ ನಲ್ಲಿ.
- "American World's Fair and Expo Medals". ExpositionMedals.com.
- "Historical and Commemorative Medals". Benjamin Weiss.
- "Medals of the World". Megan C. Robertson.
- "The home of British and Allied militaria". Julie McCullum's Militarium. Archived from the original on 2008-08-11.
- "The Nobel Prize Medals and the Medal for the Prize in Economics". The Nobel Foundation. Archived from the original on 2005-04-10.