RX ಸೂರಿ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

RX ಸೂರಿ 2015 ರ ಕನ್ನಡ ರೋಮ್ಯಾಂಟಿಕ್ ಕ್ರೈಮ್ ಡ್ರಾಮಾ ಚಲನಚಿತ್ರವಾಗಿದ್ದು, ಶ್ರೀಜಯ್ ಬರೆದು ನಿರ್ದೇಶಿಸಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನವಾಗಿದೆ. ಇದರಲ್ಲಿ ದುನಿಯಾ ವಿಜಯ್, ಆಕಾಂಕ್ಷಾ ಮತ್ತು ಪಿ. ರವಿಶಂಕರ್ ನಟಿಸಿದ್ದಾರೆ . ಈ ಚಿತ್ರವನ್ನು ಗೋವಿಂದಾಯ ನಮಃ ಖ್ಯಾತಿಯ ಸುರೇಶ್ ನಿರ್ಮಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರವು ನಾಯಕಿ ನಟಿ ಆಕಾಂಕ್ಷಾಗೆ ಮೊದಲ ಚಿತ್ರವಾಗಿದೆ.[] ಚಿತ್ರದ ಪ್ರಧಾನ ಛಾಯಾಗ್ರಹಣವು ಆಗಸ್ಟ್ 2014 ರಂದು ಪ್ರಾರಂಭವಾಯಿತು,[] ಮತ್ತು ಚಲನಚಿತ್ರವು 4 ಸೆಪ್ಟೆಂಬರ್ 2015 ರಂದು ಬಿಡುಗಡೆಯಾಯಿತು.

ಮಾಧ್ಯಮ ವರದಿಗಳ ಪ್ರಕಾರ, ಈ ಚಿತ್ರವು ಬೆಂಗಳೂರಿನ, ಆವಲಹಳ್ಳಿಯ ಗ್ಯಾಂಗ್ ಸ್ಟರ್ ಎಸ್ಟಿಡಿ ಕುಮಾರನ ಜೀವನ ಕಥೆಯನ್ನು ಆಧರಿಸಿದೆ.[]

ಪಾತ್ರವರ್ಗ

ಬದಲಾಯಿಸಿ

ಚಿತ್ರಸಂಗೀತ

ಬದಲಾಯಿಸಿ

ಸೌಂಡ್‌ಟ್ರ್ಯಾಕ್ ಅನ್ನು ಅರ್ಜುನ್ ಜನ್ಯ ಸಂಯೋಜಿಸಿದ್ದಾರೆ. ಸಂಗೀತಗಾರ ವಿ.ಹರಿಕೃಷ್ಣ ಒಡೆತನದ ಡಿ-ಬೀಟ್ಸ್ ಸಂಸ್ಥೆಯು ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿದೆ. ಜನಪ್ರಿಯ ಗಾಯಕ ಕೆಜೆ ಯೇಸುದಾಸ್ ಅವರು ಚಿತ್ರಕ್ಕಾಗಿ ಹಾಡನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ಇದು ಈ ಸಂಯೋಜಕರೊಂದಿಗೆ ಅವರ ಮೊದಲ ಹಾಡು ಆಗಿದೆ .[]

ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಡವ್ ಹೊಡಿಬ್ಯಾಡ"ಶ್ರೀಜಯ್, ಸುದರ್ಶನ್ವಿಜಯ್ ಪ್ರಕಾಶ್ , ಅನುಪಮಾ, ನವೀನ್ ಸಜ್ಜು 
2."ಸೂರಿ ಸೂರಿ"ಕೆ. ಕಲ್ಯಾಣ್ಹರ್ಷ ಸದಾನಂದ, ಶ್ರೇಯಾ ಘೋಷಾಲ್ 
3."ಬುಟ್ಟೆ ಬುಟ್ಟೆ"ವಿ. ನಾಗೇಂದ್ರ ಪ್ರಸಾದ್ನವೀನ್ ಸಜ್ಜು, ಇಂದು ನಾಗರಾಜ 
4."ಹುಟ್ಟೋದು ನಾವೆಲ್ಲೋ"ಶ್ರೀಜಯ್ಕೆ.ಜೆ.ಜೇಸುದಾಸ್ 

[]

ಉಲ್ಲೇಖಗಳು

ಬದಲಾಯಿಸಿ
  1. "Akanksha plays the lead in Rx Soori". The New Indian Express. 4 August 2014. Archived from the original on 14 ಜುಲೈ 2015. Retrieved 20 ಜನವರಿ 2022.
  2. "Duniya Vijay's RX Soori to be launched soon". Sify. 25 July 2014. Archived from the original on 24 September 2015.
  3. "RX Soori Ready to hit Screens Soon". Ytalkies. 20 June 2015.
  4. "Rx Soori audio hits". Indiaglitz. 4 May 2015.
  5. "RX Soori 2015 Kannada songs". Southsongs4u. 2015. Archived from the original on 2015-07-10. Retrieved 2022-01-20.


ಬಾಹ್ಯ ಕೊಂಡಿಗಳು

ಬದಲಾಯಿಸಿ