"ಹೊಗೆ ಮಂಜು " ಎಂಬುದು ಒಂದು ರೀತಿಯ ವಾಯು ಮಾಲಿನ್ಯವಾಗಿದೆ; "ಹೊಗೆ ಮಂಜು" ಎಂಬ ಪದಗುಚ್ಛವು ಹೊಗೆ ಮತ್ತು ಮಂಜು ಎಂಬ ಪದಗಳ ಮಿಶ್ರಪದವಾಗಿದೆ. ಆಧುನಿಕ ಹೊಗೆ ಮಂಜು ಎಂಬುದು ಒಂದು ವಿಧದ ವಾಯು ಮಾಲಿನ್ಯವಾಗಿದ್ದು, ಆಂತರಿಕ ದಹನಕ್ರಿಯೆಯ ಎಂಜಿನ್‌ಗಳಿಂದ ಹೊರಬರುವ ವಾಹನಗಳ ಉತ್ಸರ್ಜನದಿಂದಾಗಿ ಮತ್ತು ಕೈಗಾರಿಕೆಗಳು ಹೊರಹಾಕುವ ಹೊಗೆಯಿಂದ ಉಂಟಾಗುತ್ತದೆ. ಈ ಹೊಗೆಗಳು ಸೂರ್ಯನ ಬೆಳಕಿನೊಂದಿಗೆ ವಾಯುಮಂಡಲದಲ್ಲಿ ಪ್ರತಿಕ್ರಿಯಿಸಿ, ದ್ವಿತೀಯ ಮಲಿನಕಾರಿಗಳನ್ನು ಉಂಟುಮಾಡುತ್ತದೆ. ಅಲ್ಲದೇ ಇವು ಪ್ರಾಥಮಿಕ ಉತ್ಸರ್ಜನಗಳೊಂದಿಗೆ ಸೇರಿಕೊಂಡು ದ್ಯುತಿರಾಸಾಯನಿಕ ಹೊಗೆ ಮಂಜನ್ನು ಉಂಟುಮಾಡುತ್ತದೆ. ಹೊಗೆ ಮಂಜು, ಬೃಹತ್ ಪ್ರಮಾಣದಲ್ಲಿ ಕಲ್ಲಿದ್ದಲನ್ನು ಸುಡುವುದರಿಂದಲೂ ಉಂಟಾಗುತ್ತದೆ. ಕಲ್ಲಿದ್ದಲಿನ ಹೊಗೆ ಮತ್ತು ಗಂಧಕದ ಡೈಆಕ್ಸೈಡ್ ನ ಮಿಶ್ರಣದಿಂದಲೂ ಕೂಡ ಉಂಟಾಗುತ್ತದೆ.

1988 ರಲ್ಲಿ ವಿಶ್ವವಾಣಿಜ್ಯ ಸಂಸ್ಥೆಯಿಂದ ಕಾಣಿಸುತ್ತಿರುವ ನ್ಯೂಯಾರ್ಕ್ ನಗರದಲ್ಲಿ ಹರಡಿದ ಹೊಗೆ ಮಂಜಿನ ಒಂದು ದೃಶ್ಯ .
ಜರ್ಮನ್ ನ ರಸ್ತೆ ಸಂಕೇತ, ವರ್ಕರ್ಸವರ್ಬಾಟ್ ಬೈ ಹೊಗೆ ಮಂಜು ( ಹೊಗೆ ಮಂಜಿನ ಪರಿಸ್ಥಿತಿಯಲ್ಲಿ ಯಾವುದೇ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ)

ಪದದ ನಿಷ್ಪತ್ತಿ

ಬದಲಾಯಿಸಿ

"ಸ್ಮಾಗ್" (ಹೊಗೆ ಮಂಜು)ಪದದ ನಿಷ್ಪತ್ತಿಗೆ , Dr. ಹೆನ್ರಿ ಆಂಟೈನ್ ಡೇಸ್ ವೊಎಕ್ಸ್ ರವರು ಕಾರಣರಾಗಿದ್ದಾರೆ. ಇವರು 1905 ರಲ್ಲಿ ಪಬ್ಲಿಕ್ ಹೆಲ್ತ್ ಕಾಂಗ್ರೆಸ್ ಸಭೆಯಲ್ಲಿ "ಸ್ಮಾಗ್ ಎಂಡ್ ಸ್ಮೋಕ್" ಎಂಬ ಪ್ರಬಂಧವನ್ನು ಮಂಡಿಸಿದರು. ಡ್ಯೇಲಿ ಗ್ರಾಫಿಕ್ ಎಂಬ ಲಂಡನ್ ವೃತ್ತಪತ್ರಿಕೆಯ 1905 ರ ಜುಲೈ 26 ರ ಆವೃತ್ತಿ, ಡೆಸ್ ವೊಎಕ್ಸ್ ನ ಹೇಳಿಕೆಯನ್ನು ಉಲ್ಲೇಖಿಸಿದೆ. ಈ ಹೇಳಿಕೆಯಲ್ಲಿ "ಅವರು ಗ್ರಾಮಗಳಲ್ಲಿ ಕಂಡು ಬರದೇ ಕೇವಲ ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರ ಕಂಡುಬರುತ್ತಿರುವುದನ್ನು ನೋಡಲು ಯಾವ ವಿಜ್ಞಾನವು ಬೇಕಿಲ್ಲ. ಅದು ಹೊಗೆ ಮಂಜಾಗಿದೆ, ಅಥವಾ 'ಸ್ಮಾಗ್' ಎಂದು ಪರಿಚಿತವಾಗಿದೆ ಎಂದು ಹೇಳಿದ್ದಾರೆ"[][] ಅದರ ಮಾರನೆಯ ದಿನವೇ ವೃತ್ತ ಪತ್ರಿಕೆ "Dr. ಡೇಸ್ ವೊಎಕ್ಸ್ ಲಂಡನ್ ದಟ್ಟ ಮಂಜನ್ನು ಸೂಚಿಸಲು ಹೊಸ ಪದವನ್ನು ರಚಿಸುವ ಮೂಲಕ ಸಾರ್ವಜನಿಕ ಸೇವೆಗೈದಿದ್ದಾರೆ" ಎಂದು ತಿಳಿಸಿತು. "ಹೊಗೆ ಮಂಜು" ಶಬ್ದ, 1893 ರ ಜನವರಿ 19 ರ ಲಾಸ್ ಏಜಂಲೀಸ್ ಟೈಮ್ಸ್ ನ ಲೇಖನದಲ್ಲಿಯೂ ಕಾಣಿಸಿಕೊಂಡಿತು. ಆ ಮೂಲಕ ಅದಕ್ಕೆ ಜನ್ಮ ನೀಡಿದ "ಬುದ್ಧಿವಂತ ಇಂಗ್ಲೀಷ್ ಬರಹಗಾರ"ನಿಗೆ ಅಕ್ಷರನಮನ ಸಲ್ಲಿಸಿತು.

ದ್ಯುತಿರಾಸಾಯನಿಕ ಹೊಗೆ ಮಂಜು

ಬದಲಾಯಿಸಿ
 
ಅಲೆಪ್ಪೊ ಎಂಬ ಸಿರಿಯನ್ ನಗರದಲ್ಲಿ 2006 ರ ಬೇಸಿಗೆಯಲ್ಲಿ ಕಾಣಿಸಿಕೊಂಡ ಹೊಗೆ ಮಂಜು ,

1950 ರಲ್ಲಿ ದ್ಯುತಿರಾಸಾಯನಿಕ ಹೊಗೆ ಮಂಜು ಎಂದು ಕರೆಯಲಾಗುವ ಹೊಸ ರೀತಿಯ ಹೊಗೆ ಮಂಜನ್ನು ಮೊದಲ ಬಾರಿಗೆ ವಿವರಿಸಲಾಯಿತು.
ಸೂರ್ಯನ ಬೆಳಕು , ಗಾಳಿಯಲ್ಲಿ ಅನೇಕ ಮಲಿನಕಾರಿಗಳ ಮೇಲೆ ಬಿದ್ದಾಗ ಇದು ಉಂಟಾಗುತ್ತದೆ. ಅಷ್ಟೇ ಅಲ್ಲದೇ ಅತ್ಯಂತ ಅಪಾಯಕಾರಿಯಾಗಬಹುದಾದ ಪ್ರತಿಕೂಲ ರಾಸಾಯನಿಗಳನ್ನು ಕೂಡ ಉಂಟುಮಾಡುತ್ತದೆ. ದ್ಯುತಿರಾಸಾಯನಿಕ ಹೊಗೆ ಮಂಜು ಎಂಬುದು ವಾಯುಮಂಡಲದಲ್ಲಿ ನಡೆಯುವ ಸೂರ್ಯನ ಬೆಳಕಿನ ನೈಟ್ರೊಜನ್ ಆಕ್ಸೈಡ್ಸ್ (NOx) ನ ಮತ್ತು ಆವಿಯಾಗುವ ಕಾರ್ಬನಿಕ ಸಂಯುಕ್ತಗಳ (VOCs) ರಾಸಾಯನಿಕ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯು ಗಾಳಿಯ ಮೂಲಕ ಹರಡುವ ಕಣಗಳನ್ನು ( ಪೃಥಕಣಗಳ ವಸ್ತುವೆಂದು ಕರೆಯಲಾಗುತ್ತದೆ) ಮತ್ತು ನೆಲಮಟ್ಟದ ಓಝೋನ್ ಅನ್ನು ಬಿಡುತ್ತದೆ.[]

ಸಾರಜನಕ ಮತ್ತು ಆಮ್ಲಜನಕ ಅಧಿಕ ತಾಪಮಾನದಲ್ಲಿ ಪರಸ್ಪರ ಪ್ರತಿಕ್ರಿಯಿಸುವಾಗ ನೈಟ್ರೊಜನ್ ಆಕ್ಸೈಡ್ಸ್ ಅನ್ನು ಬಿಡುಗಡೆಮಾಡುತ್ತವೆ. ಉದಾಹರಣೆಗೆ, ಕಾರುಗಳಲ್ಲಿ, ಲಾರಿಗಳಲ್ಲಿ, ಕಲ್ಲಿದ್ದಲು ವಿದ್ಯುತ್ ಕೇಂದ್ರಗಳಲ್ಲಿ, ಮತ್ತು ಕೈಗಾರಿಕಾ ಉತ್ಪಾದನೆಯ ಕಾರ್ಖಾನೆಗಳಲ್ಲಿ ಪಳೆಯುಳಿಕೆಯ ಇಂಧನವನ್ನು ಉರಿಸುವ ಇಂಜಿನ್ ಗಳಿಂದ ಹೊರಬರುವ ನಿಷ್ಕಾಸ. VOCs , ಗ್ಯಾಸೊಲೀನ್ (ಪೆಟ್ರೋಲ್), ಬಣ್ಣಗಳು, ದ್ರಾವಕಗಳು, ಕೀಟನಾಶಕಗಳಂತಹ ಮಾನವ ನಿರ್ಮಿತ ಮೂಲಗಳಿಂದ ಹಾಗು ಪೈನ್ ಮರ ಮತ್ತು ನಿಂಬೆ ಗಿಡದ ಉತ್ಸರ್ಜನದಂತಹ ಜೀವಿಜನ್ಯ ಮೂಲಗಳಿಂದ ಬಿಡುಗಡೆಯಾಗುತ್ತದೆ.

ವಾಯು ಮಲಿನಕಾರಿಗಳ ಈ ಹಾನಿಕರ ಮಿಶ್ರಣವು ಕೆಳಕಂಡವುಗಳನ್ನು ಒಳಗೊಂಡಿವೆ:

  • ಆಲ್ಡಿಹೈಡ್ಸ್ (RCHO)
  • ನೈಟ್ರೊಜನ್ ಆಕ್ಸೈಡ್ಸ್, ಉದಾಹರಣೆಗೆ , ಸಾರಜನಕದ ಡೈಆಕ್ಸೈಡ್
  • ಪೆರಾಕ್ಸಿಅಸಿಲ್ ನೈಟ್ರೇಟ್ಸ್ (PAN)
  • ಹವಾಗೋಳೀಯ ಓಝೋನ್
  • ಆವಿಯಾಗುವ ಕಾರ್ಬನಿಕ ಸಂಯುಕ್ತಗಳು (VOCs)

ಈ ಎಲ್ಲಾ ರಾಸಾಯನಿಕಗಳು ಸಾಮಾನ್ಯವಾಗಿ ಅತ್ಯಂತ ಹೆಚ್ಚು ಪ್ರತಿಕ್ರಿಯಾತ್ಮಕವಾಗಿವೆ ಮತ್ತು ಆಕ್ಸಿಡೀಕರಿಸಬಲ್ಲವು. ಆದ್ದರಿಂದ ದ್ಯುತಿರಾಸಾಯನಿಕ ಹೊಗೆ ಮಂಜನ್ನು , ಆಧುನಿಕ ಕೈಗಾರೀಕರಣದ ಸಮಸ್ಯೆಯೆಂದು ಪರಿಗಣಿಸಲಾಗುತ್ತದೆ. ಇದು ಎಲ್ಲಾ ಆಧುನಿಕ ನಗರಗಳಲ್ಲೂ ಕಂಡು ಬರುತ್ತದೆ, ಆದರೆ ಇದು ಅತ್ಯಂತ ಬಿಸಿಲಿರುವ, ಬೆಚ್ಚನೆಯ, ಒಣ ಹವಾಮಾನವನ್ನು ಹೊಂದಿರುವ ಹಾಗು ಅಧಿಕ ಸಂಖ್ಯೆಯ ಮೋಟಾರು ವಾಹನಗಳಿರುವ ನಗರಗಳಲ್ಲಿ ಅತ್ಯಂತ ಸಾಮಾನ್ಯವಾಗಿದೆ.[] ಇದು ಗಾಳಿಯೊಂದಿಗೆ ಸಾಗುವುದರಿಂದ, ವಿರಳವಾದ ಜನಸಂಖ್ಯೆ ಹೊಂದಿರುವ ಪ್ರದೇಶದಲ್ಲಿ ಪರಿಣಾಮ ಬೀರಬಹುದು.

 
ಕ್ಯಾಲಿಫೋರ್ನಿಯಾ ಗೋಲ್ಡನ್ ಗೇಟ್ ಸೇತುವೆಯ ಹಿಂದೆ , ನಸುಹಳದಿ ಕಂದುಬಣ್ಣದ ಮೋಡದ ಪದರಲ್ಲಿ ಹೊಗೆ ಮಂಜಿನ ವಿಶಿಷ್ಟ ಬಣ್ಣ. ದ್ಯುತಿರಾಸಾಯನಿಕ ಹೊಗೆ ಮಂಜಿನಲ್ಲಿರುವ NOx ನ ಕಾರಣ ಕಂದು ಬಣ್ಣಕ್ಕೆ ತಿರುಗಿದೆ.

ಆರೋಗ್ಯದ ಮೇಲಾಗುವ ಪರಿಣಾಮ

ಬದಲಾಯಿಸಿ
 
ಲಾಸ್ ಏಂಜಲಿಸ್ ನ ಸರ್ಕಾದಲ್ಲಿ 1954 ರಲ್ಲಿ, ಭೋಜನ ಕೂಟದಲ್ಲಿ ಹೊಗೆ ಮಂಜು ಅನಿಲದ ಮುಖವಾಡವನ್ನು ಧರಿಸಿ ಕುಳಿತಿರುವ ಹೈಲ್ಯಾಂಡ್ ಪಾರ್ಕ್ ಆಪ್ಟಿಮಿಸ್ಟ್ ಕ್ಲಬ್ ಸದಸ್ಯರು

ಹೊಗೆ ಮಂಜು , ಅನೇಕ ನಗರಗಳಲ್ಲಿ ಗಂಭೀರವಾದ ಸಮಸ್ಯೆಯಾಗಿದ್ದು, ಮಾನವರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದನ್ನು ಮುಂದುವರೆಸಿದೆ.[] ನೆಲಮಟ್ಟದ ಓಝೋನ್, ಗಂಧಕದ ಡೈಆಕ್ಸೈಡ್ , ಸಾರಜನಕ ಡೈ ಆಕ್ಸೈಡ್ ಮತ್ತು ಕಾರ್ಬನ್ ಮಾನಾಕ್ಸೈಡ್ ಗಳು, ವಿಶೇಷವಾಗಿ ಹಿರಿಯ ನಾಗರಿಕರಿಗೆ ಮಕ್ಕಳಿಗೆ, ಹಾಗು ವಾತಶೋಥ (ಶ್ವಾಸಕೋಶದಲ್ಲಿನ ವಾಯುಕೋಶಗಳು ಉಬ್ಬಿರುವುದು), ಬ್ರಾಂಕೈಟಿಸ್, ಮತ್ತು ಉಬ್ಬಸ ದಂತಹ ಶ್ವಾಸಕೋಶದ ಮತ್ತು ಹೃದಯದ ಸಮಸ್ಯೆ ಇರುವವರಿಗೆ ಹಾನಿಕಾರಕವಾಗಿವೆ.[] ಇದು ಶ್ವಾಸಕೋಶದ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಕಡಿಮೆ ಮಾಡಿ ಊಸಿರಾಟದ ನಾಳಗಳ ಉರಿಯೂತ ಉಂಟುಮಾಡಬಹುದು. ಸರಿಯಾಗಿ ಉಸಿರನ್ನು ತೆಗೆದುಕೊಳ್ಳಲಾಗದಂತೆ, ಮತ್ತು ಉಸಿರನ್ನು ಆಳವಾಗಿ ಎಳೆದುಕೊಂಡಾಗ ನೋವಾಗುವಂತೆ , ಉಬ್ಬಸಪಡುವಂತೆ, ಕೆಮ್ಮುವಂತೆ ಮಾಡುತ್ತದೆ. ಇಷ್ಟೇ ಅಲ್ಲದೇ ಇದು ಕಣ್ಣಿನ ಮತ್ತು ಮೂಗಿನ ಉಪದ್ರವಗಳನ್ನು ಉಂಟುಮಾಡಬಹುದು ಹಾಗು ಮೂಗಿನ ಮತ್ತು ಗಂಟಲಿನ ರಕ್ಷಣಾತ್ಮಕ ಒಳಪೊರೆಯನ್ನು ಒಣಗಿಸುತ್ತದೆ ಮತ್ತು ಸೋಂಕಿನ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯಕ್ಕೆ ಅಡ್ಡಿಪಡಿಸಿ ರೋಗಕ್ಕೆ ಒಡ್ಡುವಿಕೆಯನ್ನು ಹೆಚ್ಚಿಸುತ್ತದೆ. ಓಝೋನ್ ನ ಮಟ್ಟವು ಹೆಚ್ಚಿದ ಸಂದರ್ಭಗಳಲ್ಲಿ ಆಸ್ಪತ್ರೆಗೆ ಸೇರುವವರ ಸಂಖ್ಯೆ ಮತ್ತು ಉಸಿರಾಟದ ತೊಂದರೆ ಯಿಂದ ಉಂಟಾಗುವ ಸಾವಿನ ಸಂಖ್ಯೆ ಹೆಚ್ಚುತ್ತದೆ.[]

U.S. EPA , ಸಾಮಾನ್ಯ ಸಾರ್ವಜನಿಕರಿಗೆ ವಾಯುಮಾಲಿನ್ಯದ ಮಟ್ಟವನ್ನು ವಿವರಿಸಲು ಏರ್ ಕ್ವಾಲಿಟಿ ಇನ್ ಡೆಕ್ಸ್(ವಾಯು ಗುಣಮಟ್ಟ ಸೂಚಿ) ಯನ್ನು ಕಂಡುಹಿಡಿಯಿತು. 85 ರಿಂದ 104 ppbv ವರೆಗೆ ಸರಿಸುಮಾರು 8 ಗಂಟೆಗಳ ಕಾಲದ ಓಝೋನ್ ಸಾಂದ್ರೀಕರಣವನ್ನು "ಸೂಕ್ಷ್ಮ ಸಂವೇದನೆಯ ಜನರ ಗುಂಪಿಗೆ ಆರೋಗ್ಯಕರವಲ್ಲ", 105 ppbv ರಿಂದ 124 ppbv ವರೆಗೆ "ಆರೋಗ್ಯಕರವಲ್ಲ" ಮತ್ತು 125 ppb ರಿಂದ 404 ppb ವರೆಗೆ "ಅತ್ಯಂತ ಹೆಚ್ಚು ಅಪಾಯಕರ" ಎಂದು ವಿವರಿಸಿತು.[] ಇತರ ಮಲಿನಕಾರಿಗಳಿಗು ಕೂಡ "ಅತ್ಯಂತ ಅಪಾಯಕರ" ಮಟ್ಟವೆಂದರೆ ಹೀಗಿದೆ: PM10 ಗೆ 355 μg m−3 - 424 μg m−3 ; CO ಗೆ 15.5 ppm - 30.4ppm ಮತ್ತು NO2 ಗೆ 0.65 ppm - 1.24 ppm .[]

ಆನ್ಟರಿಯ ವೈದ್ಯಕೀಯ ಸಂಸ್ಥೆ, ಪ್ರದೇಶಗಳಲ್ಲಿ ಅಂದಾಜುಮಾಡಲಾದ ಪ್ರತಿವರ್ಷದ 9,500 ಅಕಾಲಿಕ ಮರಣಕ್ಕೆ ಹೊಗೆ ಮಂಜು ಕಾರಣವಾಗಿದೆ ಎಂಬುದನ್ನು ಪ್ರಕಟಿಸಿತು.[]

ಅಮೇರಿಕನ್ ಕ್ಯಾನ್ಸರ್ ಸೊಸೈಟಿ ಯ 20-ವರ್ಷಗಳ ಅಧ್ಯಯನ , ಹೊಗೆ ಮಂಜಿನ ಒಡ್ಡುವಿಕೆಯಿಂದ ಉಸಿರಾಟದ ಕಾಯಿಲೆಗಳು ಉಂಟಾಗಿ ಅಕಾಲಿಕ ಮರಣದ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ಕಂಡುಕೊಂಡಿತು ಮತ್ತು 8 ಗಂಟೆಗಳ ಪ್ರಮಾಣಕ ಬಹುಶಃ ಸಾಕಾಗುವುದಿಲ್ಲ ಎಂಬುದನ್ನು ಸೂಚಿಸಿತು.[೧೦]

ಪರಿಣಾಮಕ್ಕೊಳಗಾದ ಪ್ರದೇಶಗಳು

ಬದಲಾಯಿಸಿ
 
ಮಳೆಬಿದ್ದ(ಎಡಬದಿ) ಮತ್ತು ಹೊಗೆ ಮಂಜು ಬಿದ್ದ(ಬಲಬದಿ) ದಿನದ ನಂತರದ ದಿನದಲ್ಲಿ ಇದ್ದಂತಹ ಬೀಜಿಂಗ್ ನ ಗಾಳಿ

ಹೊಗೆ ಮಂಜು, ಬಹುಪಾಲು ಯಾವುದೇ ಹವಾಮಾನದಲ್ಲಾದರೂ ಉಂಟಾಗುತ್ತದೆ. ಹೊಗೆ ಅಥವಾ ಅನಿಲಗಳಂತಹ ವಾಯುಮಾಲಿನ್ಯವನ್ನು ಬಿಡುಗಡೆಮಾಡುವ ಕೈಗಾರಿಕೆಗಳು ಇರುವಲ್ಲಿ ಅಥವಾ ನಗರಗಳಲ್ಲಿ ಹೊಗೆ ಮಂಜು ಉಂಟಾಗುತ್ತದೆ. ಆದರೂ, ಇದು ಉಷ್ಣ, ಬಿಸಿಲು ಹವಾಮಾನದ ಕಾಲದಲ್ಲಿ ಅತ್ಯಂತ ಕೆಟ್ಟದ್ದಾಗಿರುತ್ತದೆ. ಶೃಂಗೀಯ ಪರಿಭ್ರಮಣೆಯನ್ನು ತಡೆಯುವಷ್ಟು ಮೇಲ್ಮೈ ಗಾಳಿಯು ಬಿಸಿಯಾಗಿದ್ದರೆ ಇದು ಕೆಟ್ಟದಾಗಿರುತ್ತದೆ . ಇದು ವಿಶೇಷವಾಗಿ ಬೆಟ್ಟಗಳು ಮತ್ತು ಪರ್ವತಗಳಿಂದ ಆವೃತವಾದ ಭೂವೈಜ್ಞಾನಿಕ ಜಲಾನಯನ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದು ಹೆಚ್ಚಾಗಿ, ಲಂಡನ್, ಅಟ್ಲಾಂಟ, ಹೌಸ್ ಟನ್, ಫೊನಿಕ್ಸ್, ಲಾಸ್ ವೆಗಾಸ್, ನವ ದೆಹಲಿ, ನ್ಯೂಯಾರ್ಕ್, ಕೈರೋ, ಲಾಸ್ ಏಂಜಲಿಸ್, ಸ್ಕಾರ್ಮೆಂಟೊ, ಸಾವೋ ಪಾಲೊ, ಮೆಕ್ಸಿಕೋ ನಗರ, ಚಿಲಿಯ ಸ್ಯಾನ್ಟಿಗೊ, ಟೊರಾಂಟೊ, ಅಥೆನ್ಸ್, ಬೀಜಿಂಗ್, ಶಾಂಘೈ, ಮ್ಯಾನಿಲಾ, ಹಾಂಗ್ ಕಾಂಗ್, ಸೌಲ್‌‌, ರಾಂಡ್ ಸ್ಟ್ಯಾಡ್ ಅಥವಾ ರುಹ್ರು ಪ್ರದೇಶ ದಂತಹ ದಟ್ಟಜನಸಂಖ್ಯೆಯ ನಗರಗಳಲ್ಲಿ ಮತ್ತು ಪಟ್ಟಣ ಪ್ರದೇಶಗಳಲ್ಲಿವಿಸ್ತರಿತ ಕಾಲಾವಧಿವರೆಗೆ ಇರುತ್ತದೆ. ಅಲ್ಲದೇ ಅಪಾಯಕರ ಮಟ್ಟವನ್ನು ತಲುಪಬಹುದು.

 
ವಿಕ್ಟೋರಿಯನ್ ಲಂಡನ್ ಅದರ ದಟ್ಟವಾದ ಹೊಗೆ ಮಂಜುಗಳಿಗಾಗಿ ಅಥವಾ "ಪಿ-ಸೋಪರ್ಸ್‌ಗಾಗಿ ಕುಖ್ಯಾತಿ ಪಡೆದಿದೆ,", ಇದನ್ನು ವೇಷಭೂಷಣದ ನಾಟಕಗಳಲ್ಲಿ ನಿಗೂಢತೆಯ ಲಕ್ಷಣವಾಗಿ ಬಳಸಲಾಗಿದೆ.

1306 ರಲ್ಲಿ ಲಂಡನ್ ನಲ್ಲಿ , ವಾಯು ಮಾಲಿನ್ಯ ಕುರಿತ ಕಳವಳದಿಂದಾಗಿ ಕಲ್ಲಿದ್ದಲು ಉರಿಸುವುದನ್ನು ಎಡ್ವರ್ಡ್ I (ಸಂಕ್ಷಿಪ್ತವಾಗಿ) ನಿಷೇಧಿಸಲು ಕಾರಣವಾಯಿತು.[೧೧] 1661 ರಲ್ಲಿ , ಜಾನ್ ಎವ್ಲಿನ್ ನ ಫುಮಿಫುಜಿಯಮ್ , ಖನಿಜಯುಕ್ತ ಕಲ್ಲಿದ್ದಲಿನ ಬದಲಿಗೆ ಪರಿಮಳವುಳ್ಳ ಮರವನ್ನು ಸುಡಬೇಕು ಎಂಬುದನ್ನು ಸೂಚಿಸಿತು. ಆತ ಇದರಿಂದ ಕೆಮ್ಮುಂಟಾಗುವುದು ಕಡಿಮೆಯಾಗುತ್ತದೆ ಎಂದು ನಂಬಿದ್ದ. ಅದೇ ವರ್ಷ ಗ್ರೆಶಮ್‌‌ ಕಾಲೇಜಿನ ಲಾವಣಿ ಯು ಹೇಗೆ ಹೊಗೆ "ನಮ್ಮ ಶ್ವಾಸಕೋಶಗಳು ಮತ್ತು ಉಸಿರನ್ನು ಕಟ್ಟಿಕೊಳ್ಳುವಂತೆ ಮಾಡುತ್ತದೆ ಮತ್ತು ನಮ್ಮ ಕಬ್ಬಿಣವನ್ನು ತುಕ್ಕುಹಿಡಿಯುವಂತೆ ಮಾಡುತ್ತದೆ" ಎಂಬುದನ್ನು ವಿವರಿಸಿತು.

19ನೇ ಮತ್ತು 20 ನೇ ಶತಮಾನಗಳಲ್ಲಿ ಹೊಗೆ ಮಂಜಿನ ಭಾರಿ ವಿದ್ಯಮಾನಗಳು ಮುಂದುವರೆದವು. ಅಲ್ಲದೇ ಇವುಗಳಿಗೆ "ಪಿ-ಸೋಪರ್ಸ್" ಎಂಬ ಅಡ್ಡ ಹೆಸರನ್ನು ಇಡಲಾಯಿತು. 1952 ರಲ್ಲಿ ಸಂಭವಿಸಿದ ಮಹಾ ಹೊಗೆ ಮಂಜು ಲಂಡನ್‌ ನ ಬೀದಿಗಳನ್ನು ಕಪ್ಪಾಗಿಸಿತು. ಅಲ್ಲದೇ 4 ದಿನಗಳ ಅಲ್ಪಕಾಲಾವಧಿಯಲ್ಲಿ ಸರಿಸುಮಾರು 4,000 ದಷ್ಟು ಜನರನ್ನು ಬಲಿ ತೆಗೆದುಕೊಂಡಿತು (ಮುಂದೆ ನಂತರದ ವಾರಗಳಲ್ಲಿ ಮತ್ತು ತಿಂಗಳುಗಳಲ್ಲಿ ಅದರ ಪ್ರಭಾವದಿಂದಾಗಿ 8,000[೧೨] ದಷ್ಟು ಜನರು ಮೃತಪಟ್ಟರು). ಆರಂಭದಲ್ಲಿ ಸಾವಿಗೆ ಫ್ಲೂ ಸಾಂಕ್ರಾಮಿಕ ಕಾರಣವೆಂದು ಹೇಳಲಾಗಿತ್ತು. 1956 ರಲ್ಲಿ, ಹೊರಬಂದ ಕ್ಲೀನ್ ಏರ್ ಆಕ್ಟ್ , ರಾಜಧಾನಿಯಲ್ಲಿ ಹೊಗೆರಹಿತ ವಲಯಗಳನ್ನು ಪರಿಚಯಿಸಿತು. ಇದರ ಪರಿಣಾಮವಾಗಿ , ಗಂಧಕದ ಡೈಆಕ್ಸೈಡ್ ಮಟ್ಟವನ್ನು ಕಡಿಮೆ ಮಾಡಲಾಯಿತು. ತೀವ್ರ ಮತ್ತು ಸತತ ನಿರ್ಧಾರದಿಂದ ಲಂಡನ್ ನ ಹೊಗೆ ಮಂಜು ಕಳೆದುಹೋದ ಹಿಂದಿನ ವಿದ್ಯಮಾನವಾಯಿತು. ಇದಾದ ನಂತರ ಲಂಡನ್ ಅನ್ನು ಸ್ವಚ್ಚಗೊಳಿಸುವ ಕಾರ್ಯ ಪ್ರಾರಂಭವಾಯಿತು. ಕಟ್ಟಡಗಳು ಹಿಂದೆಯಿದ್ದ ಕಲ್ಲಿನ ಹೊರನೋಟಕ್ಕೆ ಚೇತರಿಸಿಕೊಂಡವು. ಇವು ಎರಡು ಶತಮಾನಗಳ ವರೆಗೆ ಕ್ರಮೇಣ ಕಪ್ಪುಬಣ್ಣಕ್ಕೆ ತಿರುಗಿದ್ದವು. ಸಂಚಾರ ಮಾಲಿನ್ಯದಿಂದ ಹೊಗೆಮಂಜು ಈಗಲೂ ಆಧುನಿಕ ಲಂಡನ್‌ನಲ್ಲಿ ಉಂಟಾಗುತ್ತಿದೆ.

ಮೆಕ್ಸಿಕೋ ನಗರ

ಬದಲಾಯಿಸಿ

ಎತ್ತರದ ನಾಡಿನ ಬೋಗುಣಿಪ್ರದೇಶದಿಂದಾಗಿ ತಣ್ಣನೆಯ ಗಾಳಿ ಮೆಕ್ಸಿಕೊ ನಗರದ ಪಟ್ಟಣ ಪ್ರದೇಶಕ್ಕೆ ಇಳಿಯುತ್ತದೆ. ಇದು ಕೆಳಭಾಗದಲ್ಲಿ ಕೈಗಾರಿಕೆ ಮತ್ತು ವಾಹನ ದಿಂದಾಗುವ ಮಾಲಿನ್ಯವನ್ನು ತಡೆದು, ಅದನ್ನು ಲ್ಯಾಟಿನ್ ಅಮೇರಿಕಾದ ಹೊಗೆ ಮಂಜು ಪೀಡಿತ ನಗರವಾಗಿ ಬದಲಾಯಿಸುತ್ತದೆ. ಪ್ರಪಂಚದಲ್ಲೆ ಅತ್ಯಂತ ಸ್ವಚ್ಛವಾದ ಗಾಳಿಯನ್ನು ಹೊಂದಿರುವ ನಗರವೆಂಬ ಹೆಸರನ್ನು ಪಡೆದಿದ್ದ ಈ ನಗರ ಕೇವಲ ಒಂದು ಯುಗದೊಳಗೆ, ಅಂತರರಾಷ್ಟ್ರೀಯ ಪ್ರಮಾಣಕ್ಕಿಂತ ಎರಡು ಪಟ್ಟು ಅಥವಾ ಮೂರು ಪಟ್ಟು ಹೆಚ್ಚು ಸಾರಜನಕದ ಡೈ ಆಕ್ಸೈಡ್ ನಂತಹ ಮಲಿನಕಾರಿಗಳನ್ನು ಹೊಂದುವುದರೊಂದಿಗೆ ಅತ್ಯಂತ ಹೆಚ್ಚು ಮಲಿನಗೊಂಡಿರುವ ನಗರವಾಗಿ ಬದಲಾಯಿತು.[೧೩]

ತೆಹ್ರಾನ್

ಬದಲಾಯಿಸಿ

ತೆಹ್ರಾನ್ ಮತ್ತು ಇರಾನ್ ನಲ್ಲಿ 2005ರ ಡಿಸೆಂಬರ್ ತಿಂಗಳಿನಲ್ಲಿ ಶಾಲೆಗಳು ಮತ್ತು ಸಾರ್ವಜನಿಕ ಕಛೇರಿಗಳನ್ನು ಮುಚ್ಚಬೇಕಾಯಿತು. ಅಲ್ಲದೇ 1600 ಜನರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಇದು ಕಾರಿನಿಂದ ಹೊರಬರುವ ಶೋಧಿಸದ ಹೊಗೆಯಿಂದ ಉಂಟಾದ ಹೊಗೆ ಮಂಜು ಈ ಪರಿಸ್ಥಿತಿಗೆ ಕಾರಣವಾಗಿತ್ತು.[೧೪]

ಅಮೆರಿಕ ಸಂಯುಕ್ತ ಸಂಸ್ಥಾನಗಳು

ಬದಲಾಯಿಸಿ
 
NASA ಗಗನಯಾತ್ರಿ ತೆಗೆದಿರುವ ಮಧ್ಯ ನ್ಯೂಯಾರ್ಕ್ ನಗರದ ಮೇಲೆ ಆವರಿಸಿದ್ದ ಹೊಗೆ ಮಂಜಿನ ಪದರದ ಚಿತ್ರ.
 
2007 ರ ಜೂನ್ ತಿಂಗಳಿನ ಹೊತ್ತಿಗೆ ಒಂದು ಅಥವಾ ಎರಡು ನ್ಯಾಷನಲ್ ಅಂಬಿಯಂಟ್ ಏರ್ ಕ್ವಾಲಿಟಿ ಸ್ಟ್ಯಾಂಡರ್ಡ್ ಪೂರೈಕೆಯಾಗದ ಅಮೇರಿಕಾ ಸಂಯುಕ್ತ ಸಂಸ್ಥಾನದ ಕೌಂಟಿಗಳು.

ಅಮೇರಿಕ ಸಂಯುಕ್ತ ಸಂಸ್ಥಾನದ ಪರಿಸರ ಸಂರಕ್ಷಣಾ ಸಂಸ್ಥೆ , ಸುಮಾರು 300 U.S. ಕೌಂಟಿಗಳು, ನ್ಯಾಷನಲ್ ಅಂಬಿಯಂಟ್ ಏರ್ ಕ್ವಾಲಿಟಿ ಸ್ಟ್ಯಾಂಡರ್ಡ್ ಗುರುತಿಸಿರುವ ಪ್ರಕಾರ ಒಂದಕ್ಕಿಂತ ಹೆಚ್ಚು ಮಲಿನಕಾರಿಗಳನ್ನು ಹೊಂದಿದಂತಹ ಪ್ರದೇಶಗಳಾಗಿದ್ದು, ವಾಯುವಿನ ಗುಣಮಟ್ಟ ಕಡಿಮೆಯಿದೆ ಎಂದು ಗೊತ್ತುಪಡಿಸಿತು.[೧೫] ದೊಡ್ಡದಾದ, ಹೊಂದಿಕೊಂಡಿರುವ ವಾಯುವಿನ ಗುಣಮಟ್ಟ ಕಡಿಮೆಯಿರುವ ವಲಯಗಳಾದ ಕ್ಯಾಲಿಫೋರ್ನಿಯಾ ಮತ್ತು ಈಶಾನ್ಯ ಪ್ರದೇಶಗಳ ಜತೆ ಈ ಪ್ರದೇಶಗಳು ದೊಡ್ಡ ದೊಡ್ಡ ಮಹಾನಗರಗಳಿಂದ ಸುತ್ತುವರೆದಿದೆ. ಅನೇಕ U.S. ಮತ್ತು ಕೆನಡಾ ಸರ್ಕಾರದ ಏಜೆನ್ಸಿಗಳು, ನೈಜಕಾಲದ ವಾಯು ಗುಣಮಟ್ಟದ ನಕ್ಷೆ ಮತ್ತು ಮುನ್ಸೂಚನೆಯನ್ನು ತಯಾರಿಸಲು ಸಹಯೋಗ ಹೊಂದಿವೆ.[೧೬]

ಲಾಸ್ ಏಂಜಲಿಸ್ ಮತ್ತು ಸ್ಯಾನ್ ಜಾಕ್ವೀನ್ ವ್ಯಾಲಿ

ಬದಲಾಯಿಸಿ

ಇವು ತಗ್ಗು ಜಲಾಯನ ಪ್ರದೇಶಗಳಲ್ಲಿ ಇರುವುದರೊಂದಿಗೆ ಪರ್ವತಗಳಿಂದ ಆವೃತವಾಗಿರುವುದಿಂದ ಇವುಗಳ ಕಣಿವೆಗಳು ಅವುಗಳ ಹೊಗೆ ಮಂಜಿಗಾಗಿ ಕುಖ್ಯಾತಿಯನ್ನು ಪಡೆದಿವೆ. ಈ ಜಲಾನಯನ ಪ್ರದೇಶಗಳಲ್ಲಿ ಮಿಲಿಯನ್ ಗಟ್ಟಲೆ ವಾಹನಗಳು , ಜೊತೆಯಲ್ಲಿ ಸ್ಯಾನ್ ಫ್ರಾನ್ಸಿಸ್ಕೊ ಕೊಲ್ಲಿ ಮತ್ತು ಲಾಸ್ ಏಂಜಲಿಸ್/ಲಾಂಗ್ ಬೀಚ್ ನ ಬಂದರು ಸಂಕೀರ್ಣಗಳ ಪರಿಣಾಮಗಳು ಸೇರಿಕೊಂಡು ಇನ್ನಷ್ಟು ವಾಯು ಮಾಲಿನ್ಯಕ್ಕೆ ಕೊಡುಗೆ ನೀಡಿವೆ. ಈ ಸಮಸ್ಯೆಯ ಮೇಲ್ವಿಚಾರಣೆ ವಹಿಸಿದ ಕ್ಯಾಲಿಫೋರ್ನಿಯಾ ಸರ್ಕಾರದ ಬಹು ಏಜೆನ್ಸಿಗಳು ವಿಧಿಸಿದಂತಹ ನಿಯಂತ್ರಣಗಳಿಂದಾಗಿ ಹೊಗೆ ಮಂಜು ಎಚ್ಚರಿಕೆಗಳ ಹಂತ 1ನ್ನು ವಾರ್ಷಿಕವಾಗಿ ಅನೇಕ ನೂರಾರು ಸಂಖ್ಯೆಯಿಂದ ಕೇವಲ ಕೆಲವು ಸಂಖ್ಯೆಗೆ ಇಳಿಯುವಂತೆ ಕಡಿಮೆಮಾಡಿತು. ಭೂವೈಜ್ಞಾನಿಕವಾಗಿ ಹೊಗೆ ಮಂಜಿನಲ್ಲಿ ಸಿಕ್ಕಿಕೊಂಡ ಈ ವಲಯಗಳು , ಕಾರುಗಳಿಂದ, ಲಾರಿಗಳಿಂದ ಮತ್ತು ನಿರ್ದಿಷ್ಟ ಮೂಲಗಳಿಂದ ವಾಯು ಮಾಲಿನ್ಯವನ್ನು ಅನುಭವಿಸುತ್ತಿವೆ. ಇದು ಈಗಲು ಆರೋಗ್ಯ ಪ್ರಮಾಣಕವನ್ನು ಮೀರುತ್ತಿದೆ. ಅಲ್ಲದೇ ಇದು ಅಲ್ಲಿ ವಾಸಿಸುತ್ತಿರುವ 25 ದಶಲಕ್ಷಕ್ಕಿಂತ ಹೆಚ್ಚು ಜನರಿಗೆ ಜ್ವಲಂತ ಸಮಸ್ಯೆಯಾಗಿ ಪರಿಣಮಿಸಿದೆ.

US ನಲ್ಲಿ ನಡೆದ ಪ್ರಮುಖ ಘಟನೆಗಳು

ಬದಲಾಯಿಸಿ
  • 1948 ರ ಅಕ್ಟೋಬರ್ 30–31, ಡೊನೊರಾ, PA: 20 ಜನ ಮರಣಹೊಂದಿದರು, 600 ಜನರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಸಾವಿರಕ್ಕಿಂತ ಹೆಚ್ಚು ಜನರು ಇದರಿಂದ ಜರ್ಜರಿತರಾದರು. 1951ರ ವರೆಗೆ ಮೊಕದ್ದಮೆ ಇತ್ಯರ್ಥವಾಗಲಿಲ್ಲ.[೧೭]
  • 1953 ರ ನವೆಂಬರ್ ನಲ್ಲಿ , ನ್ಯೂಯಾರ್ಕ್: ಹೊಗೆ ಮಂಜು, ಸುಮಾರು 170 ರಿಂದ 260 ಜನರನ್ನು ಬಲಿತೆಗೆದುಕೊಂಡಿತು.[೧೭]
  • 1954 ರ ಅಕ್ಟೋಬರ್ ನಲ್ಲಿ ಲಾಸ್ ಏಂಜಲಿಸ್: ದಟ್ಟವಾದ ಹೊಗೆ ಮಂಜು, ಸುಮಾರು ಒಂದು ತಿಂಗಳವರೆಗೆ ಶಾಲೆಗಳು ಮತ್ತು ಕೈಗಾರಿಕಾ ಸಂಸ್ಥೆಗಳನ್ನು ಮುಚ್ಚುವಂತೆ ಮಾಡಿತು.[೧೭]
  • 1963 ರಲ್ಲಿ ನ್ಯೂಯಾರ್ಕ್: 200 ಜನರ ಸಾವಿಗೆ ಕಾರಣವಾಯಿತು [೧೮]
  • 1966 ರಲ್ಲಿ ನ್ಯೂಯಾರ್ಕ್: ಹೊಗೆಮಂಜಿನಿಂದ 169 ಸಾವಿಗೆ ಕಾರಣವಾಯಿತು[೧೮]

ಆಗ್ನೇಯ ಏಷ್ಯಾ

ಬದಲಾಯಿಸಿ
 
2006 ರ ಅಕ್ಟೋಬರ್ 7 ರಂದು ತೆಗೆಯಲಾದ ಸಿಂಗಾಪುರ್ ನ ಡೌನ್ ಟೌನ್ ಕೋರ್ ನ ಚಿತ್ರ. ಈ ಚಿತ್ರವನ್ನು ಸುಮಾತ್ರ, ಇಂಡೋನೇಶಿಯಾ ದ ಕಾಡ್ಗಿಚ್ಚುಗಳಿಂದ ಇಲ್ಲಿ ಉಂಟಾಗಿದ್ದ ಹೊಗೆ ಮಂಜಿನ ಸಂದರ್ಭದಲ್ಲಿ ತೆಗೆಯಲಾಯಿತು.

ಹೊಗೆ ಮಂಜು, ಆಗ್ನೇಯ ಏಷ್ಯಾದಲ್ಲಿನ ದಿನನಿತ್ಯದ ಸಮಸ್ಯೆಯಾಗಿದೆ. ಇದು ಇಂಡೋನೇಶಿಯಾ ದಲ್ಲಿ ಅದರಲ್ಲೂ ವಿಶೇಷವಾಗಿ ಸುಮಾತ್ರ ಮತ್ತು ಕಾಲಿಮಂತನ್ ನಲ್ಲಿ ಕಾಡ್ಗಿಚ್ಚಿನಿಂದ ಉಂಟಾಗುತ್ತದೆ. ಆದರೂ ಈ ಸಮಸ್ಯೆಯನ್ನು ವಿವರಿಸಲು ಅಷ್ಟೇನು ರಾಜಕೀಯವಾಗಿಲ್ಲದ ಹೇಜ್(ಮುಸುಕು) ಎಂಬ ಪದವನ್ನು ಬಳಸಲಾಯಿತು. ರೈತರು ಮತ್ತು ಭೂ ಮಾಲೀಕರು ಸಾಮಾನ್ಯವಾಗಿ ಬೆಂಕಿಗೆ ಕಾರಣಕರ್ತರಾಗಿರುತ್ತಾರೆ. ಏಕೆಂದರೆ ಅವರು ಮುಂದಿನ ಬೇಸಾಯಕ್ಕಾಗಿ ಭೂಮಿಯನ್ನು ಸ್ವಚ್ಛಗೊಳಿಸಲೆಂದು ಬೆಂಕಿ ಹಾಕುತ್ತಾರೆ. ಈ ಬೆಂಕಿಗಳು ಪ್ರಧಾನವಾಗಿ , ಬ್ರುನೆ, ಇಂಡೋನೇಶಿಯಾ, ಫಿಲಿಪಿನ್ಸ್, ಮಲೇಶಿಯ, ಸಿಂಗಾಪುರ್ ಮತ್ತು ಥೈಲ್ಯಾಂಡ್, ಮತ್ತು ಕೆಲವೊಮ್ಮೆ ಗೌಮ್ ಮತ್ತು ಸೈಪ್ಯಾನ್ ಗಳ ಮೇಲೆ ಪರಿಣಾಮ ಬೀರುತ್ತವೆ.[೧೯][೨೦] 1997ರಲ್ಲಿ ಉಂಟಾದ ಕಾಡ್ಗಿಚ್ಚಿನಿಂದ ಸುಮಾರು US$9 ಬಿಲಿಯನ್ ಗಿಂತ ಹೆಚ್ಚು ಆರ್ಥಿಕ ನಷ್ಟವಾಗಿದೆ ಎಂದು ಅಂದಾಜುಮಾಡಲಾಗಿದೆ.[೨೧] ಇದು ಕೃಷಿ ಉತ್ಪಾದನೆಯಲ್ಲಾದ ನಷ್ಟ, ಕಾಡಿನ ಪ್ರದೇಶಗಳ ನಾಶ, ಆರೋಗ್ಯ, ಸಾರಿಗೆ, ಪ್ರವಾಸ, ಮತ್ತು ಇತರ ಆರ್ಥಿಕ ಉದ್ಯಮಗಳಿಗೆ ಆದ ನಷ್ಟವನ್ನು ಒಳಗೊಂಡಿದೆ. ಇದು ಸಾಮಾಜಿಕ, ಪರಿಸರೀಯ , ಮಾನಸಿಕ ಮತ್ತು ಆರೋಗ್ಯದ ಮೇಲಾದ ದೀರ್ಘಕಾಲದ ಪರಿಣಾಮಗಳನ್ನು ಒಳಗೊಂಡಿಲ್ಲ. ಮಲೇಶಿಯಸಿಂಗಾಪುರ್ ಮತ್ತು ಮ್ಯಾಲ್ಕ್ಕಾ ಜಲಸಂಧಿಗಳಲ್ಲಿ ಇತ್ತೀಚೆಗಷ್ಟೇ 2006 ರ ಅಕ್ಟೋಬರ್ ನಲ್ಲಿ ಹೊಗೆಮುಸುಕು ಉಂಟಾಯಿತು. ಇಂಡೋನೇಶಿಯಾ ದ ಕಾಡ್ಗಿಚ್ಚಿನಿಂದ ಹೊರಬಂದ ಹೊಗೆಯು ನೈಋತ್ಯ ಮಾರುತಗಳು ಬೀಸಿದ್ದರಿಂದ ಮಲಾಕ್ಕಾ ಜಲಸಂಧಿಗಳಲ್ಲಿ ಮುಸುಕು ಉಂಟಾಗಲು ಕಾರಣವಾಗಿದೆ.

ಅಸೋಸಿಯೇಷನ್ ಆಫ್ ಸೌತ್ ಈಸ್ಟ್ ಏಷ್ಯನ್ ನೇಷನ್ಸ್ (ASEAN) ಇದಕ್ಕೆ ಪ್ರತಿಕ್ರಿಯಿಸಿತು ಮತ್ತು ಅಂತರಗಡಿ ಹೊಗೆ ಮುಸುಕು ಮಾಲಿನ್ಯದ ಒಪ್ಪಂದಕ್ಕೆ ಸಹಿಹಾಕಿತು. ಅಲ್ಲದೇ ರೀಜನಲ್ ಹೇಸ್ ಆಕ್ಷನ್ ಪ್ಲ್ಯಾನ್ (RHAP) ಅನ್ನು ನಿರ್ಮಿಸಿತು ಹಾಗೂ ಕೊ- ಆರ್ಡಿನೇಷನ್ ಅಂಡ್ ಸಪೋರ್ಟ್ ಯುನಿಟ್ (CSU) ಅನ್ನು ಸ್ಥಾಪಿಸಿತು.[೨೨] ಕೆನಡಾದ ಸಹಾಯದೊಂದಿಗೆ RHAP, ಕಾಡು/ಸಸ್ಯವರ್ಗದಿಂದ ಉಂಟಾಗುವ ಕಾಡ್ಗಿಚ್ಚಿನ ಬಗ್ಗೆ, ನಿಗಾವಹಿಸುವ ಮತ್ತು ಎಚ್ಚರಿಕೆಯ ವ್ಯವಸ್ಥೆಯನ್ನು ಸ್ಥಾಪಿಸಿತು. ಅಲ್ಲದೇ ಫೈರ್ ಡೇಂಜರ್ ರೇಟಿಂಗ್ ಸಿಸ್ಟಮ್ (FDRS) ಅನ್ನು ಅನುಷ್ಠಾನಕ್ಕೆ ತಂದಿತು. ಮಲೇಶಿಯ ಮೆಟಿಯೊರಾ ಲಾಜಿಕಲ್ ಸರ್ವೀಸ್ (MMS)[೨೩] , 2003 ರ ಸೆಪ್ಟೆಂಬರ್ ನಿಂದ ಪ್ರತಿದಿನ ರೇಟಿಂಗ್(ಬೆಲೆಕಟ್ಟಲು) ನೀಡಲು ಪ್ರಾರಂಭಿಸಿತು. ಇಂಡೋನೇಶಿಯನ್ನರು ತಪ್ಪು ಮಾಡಿದ ರೈತರ ಮೇಲೆ ಪರಿಣಾಮಕಾರಿಯಾಗಿ ಕಾನೂನು ನೀತಿಗಳನ್ನು ಜಾರಿಮಾಡಲು ವಿಫಲರಾದರು.

ನೈಸರ್ಗಿಕ ಕಾರಣಗಳು

ಬದಲಾಯಿಸಿ

ಜ್ವಾಲಾಮುಖಿ ಉಗುಳುವಾಗ ಬೃಹತ್ ಮಟ್ಟದ ಗಂಧಕದ ಡೈ ಆಕ್ಸೈಡ್ ಅನ್ನು ಹೊರಹಾಕುವ ಮೂಲಕ ಜ್ವಾಲಾಮುಖಿಯ ಹೊಗೆ ಮಂಜನ್ನು ಅಥವಾ ವೊಗ್ಅನ್ನು ಸೃಷ್ಟಿಸಬಲ್ಲದು.

ಮಾಲಿನ್ಯದ ಸೂಚಿ

ಬದಲಾಯಿಸಿ
 
ಸಾ ಪೌಲೊ ನಲ್ಲಿ ಹೊಗೆ ಮಂಜು

ಹೊಗೆ ಮಂಜಿನ ತೀವ್ರತೆಯನ್ನು ಹೆಚ್ಚಾಗಿ ಅಭ್ರಮಾಪಕಗಳಂತಹ ಸ್ವಯಂಚಾಲಿತ ದೃಷ್ಟಿ ಉಪಕರಣಗಳ ಮೂಲಕ ಅಳೆಯಲಾಗುತ್ತದೆ. ಮುಸುಕು ದೃಗ್ಗೋಚರತ್ವ ಮತ್ತು ಬಂದರುಗಳಲ್ಲಿನ ಸಂಚಾರ ನಿಯಂತ್ರಣದೊಂದಿಗೆ ಸಂಬಂಧಿಸಿರುತ್ತದೆ. ಅದೇನೇ ಆದರೂ ಮುಸುಕು, ಕಳಪೆ ಗುಣಮಟ್ಟದ ಗಾಳಿಯ ಸೂಚಕವು ಆಗಿದೆ. ಆದರೆ ಇದನ್ನು ಹೆಚ್ಚಾಗಿ, ಅಮೇರಿಕಾದ ಏರ್ ಕ್ವಾಲಿಟಿ ಇನ್ ಡೆಕ್ಸ್ , ಮಲೇಶಿಯಾದ API(ಏರ್ ಪೊಲ್ಯುಷನ್ ಇನ್ ಡೆಕ್ಸ್) (ವಾಯು ಮಾಲಿನ್ಯ ಸೂಚಿ) ಮತ್ತು ಸಿಂಗಾಪುರ್‌ನ ಪೊಲ್ಯುಟೆಂಟ್ ಸ್ಟಾಂಡರ್ಡ್ ಇನ್ ಡೆಕ್ಸ್ ನಂತಹ ಖಚಿತವಾದ ಮತ್ತು ಈ ಉದ್ದೇಶಕ್ಕಾಗಿಯೇ ನಿರ್ಮಿಸಲಾದ ವಾಯು ಸೂಚಿಯಿಂದ ಅತ್ಯುತ್ತಮವಾಗಿ ಬಿಂಬಿಸಬಹುದಾಗಿದೆ.

ಅಸ್ಪಷ್ಟವಾದ ಪರಿಸ್ಥಿತಿಯಲ್ಲಿ ಸೂಚಿ, ಗಾಳಿಯಲ್ಲಿ ತೇಲುತ್ತಿರುವ ಪೃಥಕ್ಕಣ ವಸ್ತುಗಳ ಮಟ್ಟವನ್ನು ವರದಿ ಮಾಡುತ್ತದೆ.ಕೆಲವು ಅಧಿಕಾರ ವ್ಯಾಪ್ತಿಗಳಲ್ಲಿ ಕಾರಣವಾಗುವ ಕೆಲವು ಮಲಿನಕಾರಿಗಳನ್ನು ಬಹಿರಂಗ ಮಾಡುವುದು ಕಡ್ಡಾಯವಾಗಿದೆ.

ಅಮೇರಿಕನ್ AQI ಅನ್ನು ಆರು ಬಣ್ಣಗಳನ್ನು ಸಂಕೇತಿಸುವ ವರ್ಗಗಳಾಗಿ ವಿಂಗಡಿಸಲಾಗಿದೆ. ತಾಂತ್ರಿಕವಾಗಿ AQI ಕೇವಲ 0 ಯಿಂದ 500 ವರೆಗೆ ಮಾತ್ರ ಓಡುತ್ತದೆ. 301 ರಿಂದ 500 ರವರೆಗಿನ ಮಟ್ಟವನ್ನು ಅಪಾಯಕರ ವೆಂದು ವರ್ಗೀಕರಿಸಲಾಗಿದೆ ಹಾಗೂ ಇದನ್ನು ಸೂಚಿಸಲು ಕಡುಗೆಂಪು ಬಣ್ಣವನ್ನು ನೀಡಲಾಗಿದೆ.[೨೪]

ಮಲೇಶಿಯಾದ API ಸೀಮಿತ ಮೌಲ್ಯವನ್ನು ಹೊಂದಿಲ್ಲ; ಇದರ ಅತ್ಯಂತ ಅಪಾಯಕರ ರೀಡಿಂಗ್ 500 ಕ್ಕಿಂತ ಮೇಲೆ ಹೋಗಬಹುದು. 500ಕ್ಕಿಂತ ಹೆಚ್ಚಿದ್ದರೆ, ಹೊಗೆ ಮಂಜು ಬಂದ ಪ್ರದೇಶದಲ್ಲಿ ತುರ್ತು ಸ್ಥಿತಿಯನ್ನು ಘೋಷಿಸಲಾಗುತ್ತದೆ. ಸಾಮಾನ್ಯವಾಗಿ , ಅಗತ್ಯವಲ್ಲದ ಸರ್ಕಾರಿ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಮತ್ತು ಸಮಸ್ಯೆ ಉಂಟಾಗಿರುವ ಪ್ರದೇಶದಲ್ಲಿ ಎಲ್ಲಾ ಬಂದರುಗಳನ್ನು ಮುಚ್ಚಲಾಗುತ್ತದೆ ಎಂಬುದು ತುರ್ತುಸ್ಥಿತಿ ಘೋಷಿಸುವುದರ ಅರ್ಥವಾಗಿದೆ. ಇಷ್ಟೇ ಅಲ್ಲದೇ ಪೀಡಿತ ಪ್ರದೇಶದಲ್ಲಿ ಆಹಾರ ಕ್ಷೇತ್ರವನ್ನು ಹೊರತುಪಡಿಸಿ, ಖಾಸಗಿ ಕ್ಷೇತ್ರದ ವಾಣಿಜ್ಯ ಮತ್ತು ಕೈಗಾರಿಕಾ ಚಟುವಟಿಕೆಗಳ ಮೇಲೆ ನಿಷೇಧಗಳನ್ನು ಹೇರಲಾಗುತ್ತದೆ. 2005 ರ ಮಲೇಶಿಯನ್ ಮುಸುಕು(ಹೇಜ್) ಮತ್ತು 1997 ರ ಆಗ್ನೇಯ ಏಷ್ಯನ್ ಮುಸುಕು ಸಂದರ್ಭದಲ್ಲಿ ಇಲ್ಲಿಯವರೆಗೆ, ಕ್ಲಾಂಗ್ , ಕುಲಾ, ಸೆಲನ್ಗಾರ್ ಬಂದರನ್ನು ಹೊಂದಿರುವ ಮಲೇಶಿಯಾದ ಪಟ್ಟಣಗಳಲ್ಲಿ ಮತ್ತು ಸಾರಾವಾಕ್ ರಾಜ್ಯದಲ್ಲಿ ಅಪಾಯಕರ API ಮಟ್ಟಗಳಿಂದಾಗಿ ತುರ್ತು ಸ್ಥಿತಿಯನ್ನು ಜಾರಿಗೊಳಿಲಾಗಿತ್ತು.

ಸಾಂಸ್ಕೃತಿಕ ಉಲ್ಲೇಖಗಳು

ಬದಲಾಯಿಸಿ
 
ಕ್ಲೌಡೆ ಮೊನೆಟ್ , ಇವರು 1899 ರಿಂದ 1901ರ ನಡುವೆ ಲಂಡನ್ ಗೆ ಅನೇಕ ಪ್ರವಾಸವನ್ನು ಕೈಗೊಂಡರು. ಈ ಸಂದರ್ಭದಲ್ಲಿ ಅವರು ಲಂಡನ್ ನ ಹೊಗೆ ಮಂಜಿನ ವಾತಾವರಣದಲ್ಲಿ ಸೂರ್ಯ ತನ್ನ ಕಿರಣಗಳನ್ನು ಚಾಚಲು ಯತ್ನಿಸುತ್ತಿರುವ ಥೇಮ್ಸ್ ಮತ್ತು ಹೌಸ್ ಆಫ್ ಪಾರ್ಲಿಮೆಂಟ್ ನ ದೃಶ್ಯಗಳನ್ನು ಚಿತ್ರಿಸಿದ್ದಾರೆ.
  • ಲಂಡನ್ ನ "ಪಿ-ಸೋಪರ್ಸ್", "ದಿ ಸ್ಮೋಕ್" ಎಂಬ ಅಡ್ಡ ಹೆಸರಿನ ಶೀರ್ಷಿಕೆಯನ್ನು ಗಳಿಸಿತು. ಇದೇ ರೀತಿಯಾಗಿ, ಎಡಿನ್ ಬರ್ಗ್ ಅನ್ನು "ಆಲ್ಡ್ ರಿಕೀ" ಎಂದು ಕರೆಯಲಾಯಿತು. ಹೊಗೆ ಮಂಜುಗಳನ್ನು ಅನೇಕ ಲಂಡನ್ ಕಾದಂಬರಿಗಳಲ್ಲಿ ಗುಪ್ತವಾದ ಅಪಾಯ ಅಥವಾ ಅಪಾಯವನ್ನು ಸೂಚಿಸುವ ವಿಶಿಷ್ಟ ಲಕ್ಷಣದಂತೆ ಚಿತ್ರಿಸಲಾಗಿದೆ. ಅತ್ಯಂತ ಬಹಿರಂಗವಾಗಿ ಮರ್ಗೆರಿ ಅಲಿನ್ ಹ್ಯಾಮ್ ನ ದಿ ಟೈಗರ್ ಇನ್ ದಿ ಸ್ಮೋಕ್ (1952) ಕಾದಂಬರಿಯಲ್ಲಿ, ಮತ್ತು ಡಿಕೆನ್ಸ್ ನ ಬ್ಲೀಕ್ ಹೌಸ್ (1852) ನಲ್ಲಿಯೂ ಕೂಡ ಚಿತ್ರಿಸಲಾಗಿದೆ:

[A]s he handed me into a fly after superintending the removal of my boxes, I asked him whether there was a great fire anywhere? For the streets were so full of dense brown smoke that scarcely anything was to be seen.
"Oh, dear no, miss," he said. "This is a London particular."
I had never heard of such a thing.
"A fog, miss," said the young gentleman.

  • 1970 ರ TV ಚಲನಚಿತ್ರಕ್ಕಾಗಿ ತಯಾರಿಸಲಾದ ಎ ಕ್ಲಿಯರ್ ಅಂಡ್ ಪ್ರೆಸೆಂಟ್ ಡೇಂಜರ್ ಎಂಬ ಚಲನಚಿತ್ರವು ಹಾಲ್ ಹಾಲ್ಬ್ರೂಕ್ ,E.G. ಮಾರ್ಷಲ್, ಜೋಸೆಫ್ ಕ್ಯಾಂಪನೆಲ್, ಜ್ಯಾಕ್ ಆಲ್ಬರ್ಟ್ ಸನ್ ಮತ್ತು ಪ್ಯಾಟ್ ಹಿಂಗಲ್ ನನ್ನು ಒಳಗೊಂಡಿತ್ತು . ಇದು ಹೊಗೆ ಮಂಜು ಮತ್ತು ವಾಯು ಮಾಲಿನ್ಯ ಸಮಸ್ಯೆಯ ಬಗ್ಗೆ ಎಚ್ಚರ ನೀಡುವ ಕಾರ್ಯಕ್ರಮಗಳಲ್ಲಿ ಅಮೇರಿಕ ದೂರದರ್ಶನ ಜಾಲ ಪ್ರಸಾರ ಮಾಡಿದ ಮೊಟ್ಟ ಮೊದಲನೆಯ ಮನರಂಜನೆ ಕಾರ್ಯಕ್ರಮವಾಗಿದೆ.[೨೫] (ಈ ಸಿನೇಮವನ್ನು ಇದೇ ಹೆಸರಿನ 1994 ರ ಸಿನೆಮಾದೊಂದಿಗೆ ಗೊಂದಲಕ್ಕೀಡಾಗಬಾರದು .)
  • 'ಹೊಗೆ ಮಂಜು' ಅಥವಾ 'ಹೊಗೆ ಮಂಜು ಕವಿದ' ಪದವನ್ನು ಟಿಸೈಡ್ ನಿವಾಸಿಯನ್ನು (ಈಶಾನ್ಯ ಇಂಗ್ಲೆಂಡ್ ನಲ್ಲಿ) ಅಥವಾ ಮಿಡಲ್ಸ್ ಬರೊ ಫುಟ್ ಬಾಲ್ ಕ್ಲಬ್ ನ ಬೆಂಬಲಿಗನನ್ನು ವಿವರಿಸಲು ಬಳಸಲಾಯಿತು. ಏಕೆಂದರೆ ಟಿಸೈಡ್ ಪ್ರದೇಶದಲ್ಲಿ ಅತ್ಯಂತ ಹೆಚ್ಚು ರಾಸಾಯನಿಕ ಸಾಂದ್ರತೆ ಮತ್ತು ಭಾರೀ ಕೈಗಾರಿಕೆಗಳಿಂದಾಗಿ ಅಲ್ಲಿರುವವರನ್ನು ಸೂಚಿಸಲು ಈ ಪದವನ್ನು ಬಳಸಲಾಯಿತು. ಆದರೂ ಈಗ ಟಿಸೈಡ್ ನ ವಾಯು ಲಂಡನ್, ನ್ಯೂಕ್ಯಾಸ್ಟಲ್, ಸಂಡರ್ ಲ್ಯಾಂಡ್ ಮತ್ತು ಇತರ ಬ್ರಿಟಿಷ್ ನಗರಗಳಿಗಿಂತ ಸ್ವಚ್ಛವಾಗಿದೆ ಎಂದು ಸಾಬೀತುಪಡಿಸಲಾಗಿದೆ. ಬಹುಪಾಲು ಪಟ್ಟಣ ಪ್ರದೇಶಗಳಂತೆ ವಾಹನಗಳು ಹೊರಹಾಕುವ ಹೊಗೆಯೇ ಈಗ ವಾಯುಮಾಲಿನ್ಯದ ಪ್ರಮುಖ ಮೂಲವಾಗಿದೆ.[ಸೂಕ್ತ ಉಲ್ಲೇಖನ ಬೇಕು]
  • ಉಲ್ರಿಚ್ ಬೆಕ್, ಉಲ್ರಿಚ್ ಪ್ರಾಚೀನ ಉಲ್ಲೇಖ; ‘ಬಡತನ ಶ್ರೇಣಿವ್ಯವಸ್ಥೆಯಾಗಿದ್ದರೆ, ಹೊಗೆ ಮಂಜು ಪ್ರಜಾ ಪ್ರಭುತ್ವವಾಗಿದೆ’.[೨೬]'
  • ಹೆಡೊರ್ ಎನ್ನುವುದು ಗಾಡ್ಜಿಲ vs. ಹೆಡೊರ್ ಎಂಬ ಗಾಡ್ಜಿಲ ಚಲನಚಿತ್ರದಲ್ಲಿರುವ ದೈತ್ಯ ಸ್ವರೂಪದ ಪ್ರಾಣಿಯಾಗಿದೆ. ಇದು ಮಾಲಿನ್ಯದಿಂದ ಪೋಷಿತವಾಗಿದೆ. ಅಲ್ಲದೇ ಇದನ್ನು "ದಿ ಸ್ಮಾಗ್ ಮಾನ್ ಸ್ಟರ್" ಎಂದು ಸೂಚಿಸಲಾಗಿದೆ.
  • ಸೌತ್ ಪಾರ್ಕ್, ಸೌತ್ ಪಾರ್ಕ್ ನ ನಗರವು ಸ್ಮಾಗ್ ಅಲರ್ಟ್! ಎಂಬ ಎಪಿಸೋಡ್ ನಲ್ಲಿ, ಹೊಗೆ ಮಂಜಿನಿಂದ ಆವೃತವಾಗಿದೆ. ಇದು ಹೊಗೆ ಮಂಜು ಮತ್ತು ಪರಿಸರ ಮಾಲಿನ್ಯವನ್ನು ತಡೆಗಟ್ಟಬೇಕೆಂದು ಆಶಿಸುವ ಪ್ರಸಿದ್ಧ ವ್ಯಕ್ತಿಗಳ ವಿಡಂಬನಾತ್ಮಕ ಉಲ್ಲೇಖವಾಗಿದೆ.
  • LAಯಲ್ಲಿ ಹೊಗೆ ಮಂಜಿನ ಇತಿಹಾಸವನ್ನು , ಚಿಪ್ ಜ್ಯಾಕೋಬ್ಸ್ ಮತ್ತು ವಿಲಿಯಂ J. ಕೆಲ್ಲಿಯ (ಓವರ್ ಲುಕ್ ಪ್ರೆಸ್) ಸ್ಮಾಗ್ ಟೌನ್ ನಲ್ಲಿ ವಿವರಿಸಲಾಗಿದೆ.[೨೭]

ಇವನ್ನೂ ಗಮನಿಸಿ

ಬದಲಾಯಿಸಿ
  • 1997 ಆಗ್ನೇಯ ಏಷ್ಯಾದ ಮುಸುಕು
  • 2005 ಮಲೇಷಿಯನ್ ಮುಸುಕು
  • 2006 ಆಗ್ನೇಯ ಏಷ್ಯಾದ ಮುಸುಕು
  • ಘನೀಕೃತ ಜಾಡು
  • ವಾಯು ಮಲಿನಕಾರಿಗಳ ಮಾನದಂಡ
  • ಉತ್ಸರ್ಜನ ಪ್ರಮಾಣಕ
  • ವಿಪರ್ಯಾಯ ಪ್ರಭಾವ
  • ನೈಟ್ರಿಕ್ ಆಕ್ಸೈಡ್
  • ಓಝೋನ್
  • ಯುಂವೆಲ್ಟ್ ಝೋನ್

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ಗೈ ಪೈಸ್ಸೆಸಿ 2006
  2. "ಹೊಗೆ ಮಂಜು ಎಂದರೇನು?", ಕೆನಡಿಯನ್ ಕೌನ್ಸಿಲ್ ಆಫ್ ಮಿನಿಸ್ಟರ್ಸ್ ಆಫ್ ದಿ ಎನ್ವಿರಾನ್ಮೆಂಟ್, CCME.ca Archived 2011-09-28 ವೇಬ್ಯಾಕ್ ಮೆಷಿನ್ ನಲ್ಲಿ.
  3. Miller, Jr., George Tyler (2002). Living in the Environment: Principles, Connections, and Solutions (12th Edition). Belmont: The Thomson Corporation. p. 423. ISBN 0-534-37697-5.
  4. USA ಟುಡೇ
  5. Airnow.gov, " ಓಝೋನ್ ನಿಂದ ಅತ್ಯಂತ ಅಪಾಯದ ಅಂಚಿನಲ್ಲಿರುವವರು ಯಾರು?"
  6. CWAC.net Archived 2012-11-30 ವೇಬ್ಯಾಕ್ ಮೆಷಿನ್ ನಲ್ಲಿ., ವಿಸ್ಕಾನ್ಸಿನ್ ನಲ್ಲಿ ಓಝೋನ್
  7. Airnow.gov
  8. EPA.gov
  9. Wheels.ca Archived 2010-08-18 ವೇಬ್ಯಾಕ್ ಮೆಷಿನ್ ನಲ್ಲಿ., $3.83 ಟು ಪವರ್ ಹೈಬ್ರಿಡ್ ಪ್ಲಗ್ ಇನ್ ಫಾರ್ 6 ಡೇಸ್
  10. NPR.org, ಹೊಗೆ ಮಂಜಿನಿಂದ ಆವರಿಸಿರುವ ಆಕಾಶವು ಉಸಿರಾಟದ ತೊಂದರೆಯಿಂದ ಆಗಬಹುದಾದ ಸಾವನ್ನು ಉಂಟುಮಾಡಬಹುದು
  11. Environmentalgraffiti.com, 1306 ರಲ್ಲಿ ಎನ್ವಿರಾನ್ಮೆಂಟಲಿಸಮ್
  12. "A Retrospective Assessment of Mortality from the London Smog Episode of 1959: The Role of Influenza and Pollution". Environ Health Perspect. 112 (1): 6–8. 2004. doi:10.1289/ehp.6539. Archived from the original on 2008-10-14. Retrieved 2010-10-25. {{cite journal}}: Unknown parameter |coauthors= ignored (|author= suggested) (help); Unknown parameter |month= ignored (help)
  13. SBC.ac.at Archived 2010-12-05 ವೇಬ್ಯಾಕ್ ಮೆಷಿನ್ ನಲ್ಲಿ., ಮೆಕ್ಸಿಕೊ ನಗರದಲ್ಲಿ ವಾಯು ಮಾಲಿನ್ಯ , ಸಾಲ್ಸ್ ಬರ್ಗ್ ವಿಶ್ವವಿದ್ಯಾನಿಲಯ
  14. "Hundreds treated over Tehran smog". BBC News. 2005-12-10. Retrieved 2006-08-03.
  15. EPA.gov Archived 2015-06-19 ವೇಬ್ಯಾಕ್ ಮೆಷಿನ್ ನಲ್ಲಿ., ದಿ ಗ್ರೀನ್ ಬುಕ್ ನಾನ್ ಅಟ್ಯೇನ್ ಮೆಂಟ್ ಏರಿಯಾಸ್
  16. Airnow.gov
  17. ೧೭.೦ ೧೭.೧ ೧೭.೨ Radford.edu Archived 2011-02-05 ವೇಬ್ಯಾಕ್ ಮೆಷಿನ್ ನಲ್ಲಿ., ಎನ್ವಿರಾನ್ಮೆಂಟಲ್ ಹಿಸ್ಟ್ರಿ ಟೈಮ್ ಲೈನ್: 1940-1960
  18. ೧೮.೦ ೧೮.೧ "Washingtonpost.com". Archived from the original on 2011-02-05. Retrieved 2010-10-25.
  19. "SaigpanTribune.com". Archived from the original on 2007-02-18. Retrieved 2021-08-09. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  20. "Sun2Surf.com". Archived from the original on 2009-01-10. Retrieved 2010-10-25.
  21. Asean.org Archived 2013-03-08 ವೇಬ್ಯಾಕ್ ಮೆಷಿನ್ ನಲ್ಲಿ., ASEAN ಸೀಕ್ರೆಟ್ರೈಟ್ ಆನ್ ಸ್ಮಾಗ್ ಕಾಸ್ಟ್
  22. "Asean.org". Archived from the original on 2010-02-11. Retrieved 2010-10-25.
  23. "KJC.gov.my". Archived from the original on 2010-03-05. Retrieved 2010-10-25. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  24. EPA.gov
  25. IMDb.com, ಅ ಕ್ಲಿಯರ್ ಅಂಡ್ ಪ್ರೆಸೆಂಟ್ ಡೇಂಜರ್ (1970) (TV)
  26. ರಿಸ್ಕ್ ಸೊಸೈಟಿ: ಟುವರ್ಡ್ಸ್ ಅ ನ್ಯೂ ಮಾಡ್ರನಿಟಿ (ಸೇಜ್, 1992)
  27. Overlookpress.com Archived 2009-01-11 ವೇಬ್ಯಾಕ್ ಮೆಷಿನ್ ನಲ್ಲಿ., ಸ್ಮಾಗ್ ಟೌನ್,ದಿ ಲಂಗ್ ಬರ್ನಿನಿಂಗ್ ಹಿಸ್ಟ್ರಿ ಆಫ್ ಪೊಲ್ಯೂಷನ್ ಇನ್ ಲಾಸ್ ಏಂಜಲಿಸ್ ಬೈ ಚಿಪ್ ಜಾಕೋಬ್ಸ್ ಅಂಡ್ ವಿಲಿಯಂ J. ಕೆಲ್ಲಿ


ಬಾಹ್ಯ ಕೊಂಡಿಗಳು

ಬದಲಾಯಿಸಿ
  • Smog ಅ ಸಿಟಿಜನ್ಡಿಯಂ ಲೇಖನ
  • Eoearth.org, ಲಂಡನ್ ಸ್ಮಾಗ್ ಡಿಸಾಸ್ಟರ್, ಎನ್ ಸೈಕ್ಲಪೀಡಿಯ ಆಫ್ ಅರ್ಥ್
  • NPI.gov.au, ನ್ಯಾಷನಲ್ ಪೊಲ್ಯುಟೆಂಟ್ ಇನ್ ವೆಂಟರಿ -ಪರ್ಟಿಕ್ಯುಲೇಟ್ ಮ್ಯಾಟರ್ ಫ್ಯಾಕ್ಟ್ ಶೀಟ್
  • Contrails.nl, ಪಿಕ್ಚರ್ಸ್ ಆಫ್ ಕಾನ್ಟ್ರೈಲ್ಸ್ ಅಂಡ್ ಅವಿಯೇಷನ್ ಸೈರಸ್ (- ಸ್ಮಾಗ್), 1995 ರಿಂದ ಇಲ್ಲಿಯವರೆಗು .
  • Ausetute.com.au, ದ್ಯುತಿರಾಸಾಯನಿಕ ಹೊಗೆ ಮಂಜು
  • Iras.uu.nl Archived 2007-09-26 ವೇಬ್ಯಾಕ್ ಮೆಷಿನ್ ನಲ್ಲಿ., ಏರ್ ನೆಟ್ ವರ್ಕ್ ಗ್ರೂಪ್ ಟಾಕ್ಸಿಕಾಲಜಿ ರಿಪೋರ್ಟ್
ಸುದ್ದಿ ಸಮಾಚಾರಗಳು
  • BBC.co.uk, "ಹೊಗೆ ಮಂಜು ಪದೇ ಪದೇ ಉಂಟಾಗುತ್ತಿದ್ದಾಗ, WW2 ಪೀಪಲ್ಸ್ ವಾರ್ , BBC 2005-08-10. 2006-08-03 ರಂದು ಪ್ರವೇಶಿಸಲಾಯಿತು.