ಹೈದರ್ ಅಲಿ

ಸಯ್ಯದ್ ವಲ್ ಶರೀಫ್ ಹೈದರ್ ಅಲಿ ಖಾನ್ ಅಥವಾ ಹೈದರ್ ಅಲಿ (ಕ್ರಿ. ಶ. ೧೭೨೨ - ೭ಡಿಸೆಂಬರ್೧೭೮೨) ದಕ್ಷಿಣ ಭಾರತದ ಮೈಸೂರು ರಾಜ್ಯವನ್ನಾಳುತ್ತಿದ್ದ ಸುಲ್ತಾನ. ಇವನು ಟಿಪ್ಪು ಸುಲ್ತಾನನ ತಂದೆ. ಶ್ರೀರಂಗಪಟ್ಟಣವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದನು. ಮೊದಲು ಈತ ಮೈಸೂರು ರಾಜರಿಗೆ ಸಾಮಂತ ರಾಜನಾಗಿದ್ದ. ಚಿತ್ರದುರ್ಗದ ಕೋಟೆಯನ್ನು ವಶಪಡಿಸಿಕೊಳ್ಳಲು ಬಹಳ ಪ್ರಯತ್ನ್ಪಪಟ್ಟನು. ಈತನು ೧೭೨೧ ರಲ್ಲಿ ಕೋಲಾರದ ಬೂದಿಕೋಟೆಯಲ್ಲಿ ಜನಿಸಿದನು. ೭ಡಿಸೆಂಬರ್೧೭೮೨ರಲ್ಲಿ ಬೆನ್ನಲ್ಲಿ ಹುಣ್ಣಾಗಿ ಅನಾರೋಗ್ಯದಿಂದಾಗಿ ಮ್ರತಪಟ್ಟನು.

"https://kn.wikipedia.org/w/index.php?title=ಹೈದರಾಲಿ&oldid=989850" ಇಂದ ಪಡೆಯಲ್ಪಟ್ಟಿದೆ