ಹೆನ್ರಿ ಬೆಸ್ಸೆಮರ್

ಸರ್ ಹೆನ್ರಿ ಬೆಸ್ಸೆಮರ್ (ಜನವರಿ ೧೯, ೧೮೧೩ - ಮಾರ್ಚ್ ೧೫, ೧೮೯೮) ಒಬ್ಬ ಇಂಗ್ಲಿಷ್ ಇಂಜಿನಿಯರ್, ಸಂಶೋಧಕ, ಮತ್ತು ಉದ್ಯಮಿ. ಉಕ್ಕು ತಯಾರಿಕೆಯಲ್ಲಿ ಬಳಸುವ ಬೆಸ್ಸೆಮರ್ ವಿಧಾನದ ಜೊತೆ ಈತನ ಹೆಸರು ತಳುಕು ಹಾಕಿಕೊಂಡಿದೆ. ತನ್ನ ೨೬ನೆಯ ವಯಸ್ಸನಲ್ಲೆ ಈತ ಫ್ರೆಂಚ್ ವಿಜ್ಞಾನ ಅಕಾಡೆಮಿಯ ಸದಸ್ಯನಾಗಿದ್ದ[].

ಹೆನ್ರಿ ಬೆಸ್ಸೆಮರ್
ಹೆನ್ರಿ ಬೆಸ್ಸೆಮರ್
ಜನನಜನವರಿ ೧೯, ೧೮೧೩
ಚಾರ್ಲ್‍ಟನ್, ಹರ್ಟ್‍ಫೋರ್ಡ್‍ಶಯರ್, ಇಂಗ್ಲಂಡ್
ಮರಣಮಾರ್ಚ್ ೧೫, ೧೮೯೮
ಲಂಡನ್
ರಾಷ್ಟ್ರೀಯತೆಇಂಗ್ಲಿಶ್
ಕಾರ್ಯಕ್ಷೇತ್ರಗಳುಭೌತಶಾಸ್ತ್ರ
ಪ್ರಸಿದ್ಧಿಗೆ ಕಾರಣಬೆಸ್ಸೆಮರ್ ವಿಧಾನ

ಬೆಸ್ಸೆಮರ್ ಉಕ್ಕು ತಯಾರಿಯಲ್ಲಿ ಸುಧಾರಣೆಗಳನ್ನು ಮಾಡಲು ಶ್ರಮಿಸುತ್ತಿದ್ದನು. ಸರಕಾರದ ಶಸ್ತ್ರಾಸ್ತ್ರ ತಯಾರಿಯಲ್ಲಿ ಸುಧಾರಣೆ ತರುವುದು ಆತನ ಉದ್ದೇಶವಾಗಿತ್ತು. ಪೆಡಸು ಕಬ್ಬಿಣದ ಮೂಲಕ ಆಮ್ಲಜನಕವನ್ನು ಹಾಯಿಸುವ ಮೂಲಕ ಕಲ್ಮಶಗಳನ್ನು ತೆಗೆಯುವ ವಿಧಾನವನ್ನು ಈತ ಸಂಶೋಧಿಸಿದನು. ಈ ವಿಧಾನವನ್ನು ಬಳಸುವ ಮೂಲಕ ಉಕ್ಕು ತಯಾರಿಯಲ್ಲಿ ಕ್ರಾಂತಿಯಾಯಿತು. ಉಕ್ಕು ತಯಾರಿ ಸರಳ ಮತ್ತು ವೇಗವಾಯಿತು. ಬೆಸ್ಸೆಮರ್ ಇನ್ನೂ ನೂರಾರು ಸಂಶೋಧನೆಗಳನ್ನು ಮಾಡಿದ್ದನು. ಅವುಗಳು ಕಬ್ಬಿಣ, ಉಕ್ಕು ಮತ್ತು ಗಾಜು ಕ್ಷೇತ್ರಗಳಲ್ಲಿದ್ದವು.

ಪ್ರಾರಂಭದ ಸಂಶೋಧನೆಗಳು

ಬದಲಾಯಿಸಿ

ಪ್ರಾರಂಭದಲ್ಲಿ ಬೆಸ್ಸೆಮರ್ ಕಂಚಿನ ಪುಡಿಗಳನ್ನು ಹಬೆಯ ಯಂತ್ರಗಳನ್ನು ಬಳಸುವ ಮೂಲಕ ತಯಾರಿಸಿ ಅವನ್ನು ಚಿನ್ನದ ಬಣ್ಣ ತಯಾರಿಯಲ್ಲಿ ಬಳಸಿದನು[]. ಈ ಸಂಶೋಧನೆಯನ್ನು ಆತ ಗೌಪ್ಯವಾಗಿಟ್ಟಿದ್ದನು. ಈ ಬಣ್ಣವನ್ನು ಮಾರುವ ಮೂಲಕ ಸಂಪಾದಿಸಿದ ಹಣ ಆತನ ಇತರೆ ಸಂಶೋಧನೆಗಳಿಗೆ ಉಪಯೋಗಿಯಾಯಿತು.

ಬೆಸ್ಸೆಮರ್ ವಿಧಾನ

ಬದಲಾಯಿಸಿ
 
ಬೆಸ್ಸೆಮರ್ ಪರಿವರ್ತಕ

೧೮೫೦ರಿಂದ ೧೮೫೫ರ ತನಕ ಹೆನ್ರಿ ಬೆಸ್ಸೆಮರ್ ಅಗ್ಗದಲ್ಲಿ ಉಕ್ಕು ತಯಾರಿಯ ಬಗ್ಗೆ ಸರಕಾರದ ಶಸ್ತ್ರಾಸ್ತ್ರ ತಯಾರಿಯವ ವಿಭಾಗಕ್ಕಾಗಿ ಸೊಂಶೋಧನೆ ಮಾಡುತ್ತಿದ್ದನು. ಈ ಸಮಯದಲ್ಲಿ ಆತ ಬೆಸ್ಸೆಮರ್ ವಿಧಾನವನ್ನು ಕಂಡುಹಿಡಿದು ಅದನ್ನು ಪೇಟೆಂಟ್ ಮಾಡಿದನು[]. ೧೮೫೬ರ ಆಗಸ್ಟ್ ೨೪ರಂದು ಹೆನ್ರಿ ಬೆಸ್ಸೆಮರ್ ತನ್ನ ಬೆಸ್ಸೆಮರ್ ವಿಧಾನವನ್ನು ಒಂದು ಸಭೆಯಲ್ಲಿ ವಿವರಿಸಿದನು. ಆತನ ಸಂಶೋಧನೆ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಯಿತು. ಬೆಸ್ಸೆಮರ್ ವಿಧಾನದಲ್ಲಿ ಕರಗಿದ ಪೆಡಸು ಕಬ್ಬಿಣದ ಮೂಲಕ ಆಮ್ಲಜನಕವನ್ನು ಹಾಯಿಸಿ ಕಶ್ಮಲವನ್ನಿ ನಿವಾರಿಸಿ ಉಕ್ಕನ್ನು ತಯಾರಿಸಲಾಗುತ್ತದೆ. ಈಗ ಈ ವಿಧಾನವನ್ನು ಯಾರೂ ಬಳಸುತ್ತಿಲ್ಲವಾದರೂ ಆ ಕಾಲದಲ್ಲಿ ಅದು ಉಕ್ಕಿನ ತಯಅರಿಕೆಯ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಿತ್ತು.

ಇತರೆ ಸಂಶೋಧನೆಗಳು

ಬದಲಾಯಿಸಿ

ಹೆನ್ರಿ ಬೆಸ್ಸೆಮರ್ ಒಬ್ಬ ದಣಿವಿಲ್ಲದ ಸಂಶೋಧಕನಾಗಿದ್ದ. ೧೮೩೮ರಿಂದ ೧೮೮೩ರ ತನಕದ ಅವಧಿಯಲ್ಲಿ ಆತ ನೂರಾರು ಸಂಶೋಧನೆಗಳನ್ನು ಮಾಡಿ ೧೨೯ ಪೇಟೆಂಟುಗಳನ್ನು ಪಡೆದುಕೊಂಡಿದ್ದ. ಈ ಸಂಶೋಧನೆಗಳು ಕಬ್ಬಿಣ, ಉಕ್ಕು ಮತ್ತು ಗಾಜುಗಳಿಗೆ ಸಂಬಂದಿಸಿದವಾಗಿದ್ದವು. ಅವುಗಳಲ್ಲಿ ಪ್ರಮುಖವಾದವೆಂದರೆ ಅಂಚೆ ಸ್ಟಾಂಪುಗಳ ತಯಾರಿಗೆ ಎರಕದ ಅಚ್ಚು, ಕಬ್ಬಿನಿಂದ ಸಕ್ಕರೆಯ ತಯಾರಿಯ ಒಂದು ವಿಧಾನ, ಹಾಗೂ ಶಸ್ತ್ರಾಸ್ತ್ರ ತಯಾರಿಯ ಕೆಲವು ಸಂಶೋಧನೆಗಳಾಗಿದ್ದವು.

ಪ್ರಶಸ್ತಿ ಮತ್ತು ಗೌರವಗಳು

ಬದಲಾಯಿಸಿ
  1. ಬ್ರಿಟಿಷ್ ರಾಣಿಯಿಂದ ಸರ್ ಪದವಿ (ಜೂನ್ ೨೬, ೧೮೭೯)
  2. ರಾಯಲ್ ಸೊಸೈಟಿಯ ಫೆಲೊ
  3. ಸ್ಕಾಟ್‍ಲ್ಯಾಂಡಿನ ಇಂಜಿನಿಯರುಗಳ ಮತ್ತು ಹಡಗು ಕಟ್ಟುವವರ ಸಂಸ್ಥೆಯಿಂದ ಗೌರವ ಸದಸ್ಯತ್ವ[]
  4. ಅಮೆರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಆಂಡ್ ಸಯನ್ಸಸ್‍ನ ಗೌರವ ಸದಸ್ಯತ್ವ[]

ಉಲ್ಲೇಖ

ಬದಲಾಯಿಸಿ
  1. ವಿಲಿಯಂ ಟಿ. ಜೀನ್ಸ್, ದಿ ಕ್ರಿಯೇಟರ್ಸ್ ಆಪ್ ದಿ ಏಜ್ ಸ್ಟೀಲ್, ಚಾಪ್‍ಮನ್ ಆಂಡ್ ಹಾಲ್, ೧೮೮೪, ಪು.೧೨-೧೩
  2. ಬೆಸ್ಸೆಮರ್‍ನ ಆತ್ಮಚರಿತ್ರೆ www.history.rochester.edu/ehp-book/shb/start.htm
  3. Boylston, Herbert Melville (1936). An introduction to the metallurgy of iron and steel. J. Wiley & sons, inc. p. 218.
  4. http://www.iesis.org/honorary-fellows.html
  5. http://www.amacad.org/publications/BookofMembers/ChapterB.pdf