ಹೃಷಿಕೇಶ್ ಮುಖರ್ಜಿ

(ಹೃಷಿಕೇಶ ಮುಖರ್ಜಿ ಇಂದ ಪುನರ್ನಿರ್ದೇಶಿತ)

ಹೃಷಿಕೇಶ್ ಮುಖರ್ಜಿ - ಹಿಂದಿ ಚಿತ್ರರಂಗದ ಪ್ರಮುಖ ನಿರ್ದೇಶಕರಲ್ಲೊಬ್ಬರು.

ಹೃಷಿಕೇಶ್ ಮುಖರ್ಜಿ

ಹೃಷಿಕೇ‍ಶ್ ಮುಖರ್ಜಿ ಯವರು, ಹಿಂದಿ ಚಿತ್ರರಂಗದಲ್ಲಿ ೪೬ ಕ್ಕೂ ಹೆಚ್ಚು ಅಶ್ಲೀಲದ ಲೇಪವೂ ಇಲ್ಲದ, ಕ್ರೌರ್ಯ, ಗಲಭೆಗಳಿಲ್ಲದ ನವಿರಾದ ಹಾಸ್ಯಪ್ರಧಾನವಾದ ಮತ್ತು ಅದರಲ್ಲಿಯೇ ಮಾನವೀಯತೆಯನ್ನು ಸಾರುವ ಚಿತ್ರಗಳನ್ನು ನಿರ್ಮಿಸಿದರು. ಅವರು ತಮ್ಮ ಅನಾರೋಗ್ಯದಿಂದಾಗಿ ಕೆಲವು ವರ್ಷಗಳಿಂದ ಕೆಲಸ ನಿಲ್ಲಿಸಿದ್ದು ಮತ್ತೆ ಇತ್ತೀಚೆಗೆ 'ಝೂಟ್ ಬೋಲೆ ಕವ್ವಾಕಾಟೆ' ಎಂಬ ಚಿತ್ರ ತಯಾರಿಸಿದರು. ಅವರಂತೆಯೇ ಶ್ರೀ. ಸತ್ಯಜಿತ್ ರೆ, ಬಿಮಾಲ್ ರಾಯ್ ತರಹ, ಬಂಗಾಲಿ ಕಲಾವಿದರುಗಳು ಅವರ ಕಲಾತ್ಮಕತೆ, ಸೂಕ್ಷ್ಮಸಂವೇದನೆ, ಸಂಗೀತ, ತೀವ್ರತೆಗಳಿಂದ ಹಲವಾರು ಚಿತ್ರಗಳನ್ನು ತಯಾರಿಸಿದ್ದಾರೆ.ಮುಖರ್ಜಿಯವರು 'ತಲಾಶ್' ಎಂಬ ಟಿ.ವಿ.ಸೀರಿಯಲ್ ಮಾಡಿದ್ದರು. ಅವರ ಇನ್ನೊಂದು ಪಾರಿವಾರಿಕ ಅವಿಭಕ್ತ ಕುಟುಂಬ ವನ್ನು ಕುರಿತು ತಯಾರಿಸಿದ 'ಬಾವರ್ಚಿ' ಚಿತ್ರ ! ಸಾಮರಸ್ಯತೆಯಿಲ್ಲದ ಸಂಸಾರವನ್ನು ಕುರಿತದ್ದು ! ಅವಿಭಕ್ತ ಕುಟುಂಬದ ನೋವು ನಲಿವುಗಳು, ಹೊಂದಾಣಿಕೆ ಕಾಣದೆ ಒಳಗೊಳಗೆ ನಡೆಯುವ ಶೀತಲ ಸಮರದ ನೈಜ ಚಿತ್ರಣ. ಹಿಂದಿ ಚಿತ್ರದ ಅನುಪಮ ನಿರ್ದೇಶಕ, ಹೃಷಿದಾ , ರವಿವಾರ, ೨೭ನೆ ಆಗಸ್ಟ್, ೨೦೦೬ ರ ಮಧ್ಯಾನ್ಹ ೪-೩೦ ಕ್ಕೆ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ನಿಧನರಾದರು.

ಹೃಷಿದಾ ನಿರ್ದೇಶಿಸಿದ ಹಲವು ಚಿತ್ರಗಳಲ್ಲಿ, ಜನರ ಮನ್ನಣೆ ಗಳಿಸಿದ ಚಿತ್ರಗಳು

ಬದಲಾಯಿಸಿ

ರಾಜೇಶ್ ಖನ್ನ ಮತ್ತು ಅಮಿತಾಭ್ ಬಚ್ಚನ್ ನಟಿಸಿದ್ದ ' ಆನಂದ್', ಅಮಿತಾಬ್, ಸಂಜೀವ್ ಕುಮಾರ್ ಮತ್ತು ಜಯಾ ಭಾದುರಿ ನಟಿಸಿದ 'ಅಭಿಮಾನ್' , ಅಮಿತಾಭ್, ಜಯಾ ಭಾದುರಿ ಮತ್ತು ಧರ್ಮೇಂದ್ರ ನಟಿಸಿದ `ಚುಪ್ಕೆ ಚುಪ್ಕೆ' ಹಾಗೂ ರೇಖಾ ನಟಿಸಿದ್ದ ಖೂಬ್ ಸೂರತ್ ಸೇರಿದಂತೆ ಅನೇಕ ಯಶಸ್ವಿ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಹೃಷಿದಾ ಎಂದೇ ಚಿತ್ರರಂಗದಲ್ಲಿ ಖ್ಯಾತರಾಗಿದ್ದ ಹೃಷಿಕೇಶ್ ಮುಖರ್ಜಿ ಹುಟ್ಟಿದ್ದು ೧೯೨೨ಸೆಪ್ಟೆಂಬರ್ ೩೦ರಂದು, ಕಲ್ಕತ್ತಾದಲ್ಲಿ. ತಮ್ಮ ಗುರು ಬಿಮಲ್ ರಾಯ್ ಅವರ ಸಹಾಯಕರಾಗುವ ಮೂಲಕ ೧೯೫೧ರಲ್ಲಿ ಚಿತ್ರಲೋಕಕ್ಕೆ ಅಡಿಯಿರಿಸಿದರು. ೧೯೫೭ರಲ್ಲಿ ನಿರ್ದೇಶಿಸಿದ ಮುಸಾಫಿರ್' ಹೃಷಿಕೇಶ್ ಅವರ ಮೊದಲ ಚಿತ್ರ.

೧೯೬೦ರಲ್ಲಿ ನಿರ್ಮಾಣಗೊಂಡ 'ಅನುರಾಧ' ಚಿತ್ರದೊಂದಿಗೆ ಮುಖರ್ಜಿ ಯಶಸ್ಸಿನ ದಾರಿ ಹಿಡಿದರು. ಕರ್ತವ್ಯವನ್ನೇ ದೇವರು ಎಂದು ಭಾವಿಸುವ ವೈದ್ಯನೊಬ್ಬ ತನ್ನ ಕುಟುಂಬವನ್ನೇ ಕಡೆಗಣಿಸುವ ಕತೆ 'ಅನುರಾಧ'ದಲ್ಲಿತ್ತು. ಈ ಚಿತ್ರಕ್ಕೆ ರಾಷ್ಟ್ರಪತಿಗಳ ಚಿನ್ನದ ಪದಕವೂ ಲಭಿಸಿತು. ಈ ಚಿತ್ರಕ್ಕೆ ಜಗದ್ವಿಖ್ಯಾತ ಸಿತಾರ್ ವಾದಕ ಪಂಡಿತ್ ರವಿ ಶಂಕರ್ ಅವರು ಸಂಗೀತ ಸಂಯೋಜಿಸಿದ್ದರು.

ಆನಂತರ ಮುಖರ್ಜಿ 'ಅನುಪಮ' 'ಆಶೀರ್ವಾದ್' ಹಾಗೂ 'ಸತ್ಯಕಾಮ್' ಮುಂತಾದ ಹಲವಾರು ಉತ್ತಮ ಚಿತ್ರಗಳನ್ನು ನಿರ್ದೇಶಿಸಿದರು. ಆಕ್ಷನ್ ಹೀರೋ ಆಗಿದ್ದ ಧರ್ಮೇಂದ್ರರಿಗೆ ಸಂಪೂರ್ಣ ವಿಭಿನ್ನ ಪಾತ್ರಗಳು ಸಿಕ್ಕಿದ್ದು ಮುಖರ್ಜಿ ಅವರ ಚಿತ್ರಗಳಿಂದಲೇ. ಇವತ್ತು ಮಿಂಚುತ್ತಿರುವ ಅಮಿತಾಭ್ ಬಚ್ಚನ್ ಪ್ರಸಿದ್ಧಿ ಪಡೆದಿದ್ದು ಹೃಷಿಕೇಶ್ ಅವರ 'ಆನಂದ್' ಚಿತ್ರದ ಮೂಲಕ. ಜಯಾ ಬಚ್ಚನ್ ಬೆಳಕಿಗೆ ಬಂದದ್ದು 'ಗುಡ್ಡಿ' ಚಿತ್ರದ ಮೂಲಕ. ಚುಪ್ಕೆ ಚುಪ್ಕೆ, ಬಾವರ್ಚಿ, ಗುಡ್ಡಿ ಹಾಗೂ ರಜನಿಗಂಧ್ ಮೊದಲಾದ ಚಿತ್ರಗಳು ಭಾರತೀಯ ಚಿತ್ರರಂಗದ ಮೈಲಿಗಲ್ಲುಗಳೆಂದು ಕರೆಸಿಕೊಳ್ಳಲ್ಪಡುತ್ತವೆ. ’ಝೂಟ್ ಬೋಲೆ ಕವ್ವಾ ಕಾಟ” - ಇವರು ನಿರ್ದೇಶಿಸಿದ ಕೊನೆಯ ಚಲನಚಿತ್ರ. ಬಿಮಲ್ ರಾಯ್ ಗರಡಿಯಲ್ಲಿ ಪಳಗಿದ ಇನ್ನೊಬ್ಬ ಪ್ರತಿಭಾನ್ವಿತ ಕವಿ,ನಿರ್ದೇಶಕ ಗುಲ್ಜಾರ್ ಕೂಡ ಒಬ್ಬರು.

ಕನ್ನಡಭಾಷೆಯಲ್ಲಿ ರೀ-ಮೇಕ್ ಆದ ಇವರ ಚಲನಚಿತ್ರಗಳು,

ಬದಲಾಯಿಸಿ

ಹೃಷಿದಾರವರ ಕಲಾವಂತಿಕೆ, ಹಾಗೂ ಸಾಮಾಜಿಕ ಪ್ರಜ್ಞೆಗೆ ಕನ್ನಡಿಹಿಡಿದ ಪ್ರಭಾವಿ ದೃಷ್ಯಮಾಧ್ಯಮ-ಬಾವರ್ಚಿ ಚಿತ್ರ

ಬದಲಾಯಿಸಿ

ಚಿತ್ರದ ಮೊದಲು, ಪರಿಚಯವನ್ನು ಅಮಿತಾಬ್ ಬಚ್ಚನ್ ಮಾಡುತ್ತಾರೆ. ಕೊನೆಗೆ ಚಿತ್ರದ ಅಂತ್ಯವೂ ಅಮಿತಾಬ್ ರವರ ಧ್ವನಿ 'ಐಸ ರಹ ರಘು ನಂದನ್ ಕೀ ಯಾತ್ರ, ಎಕ್ ಸೆ ಅನೇಕ್ ನಜಾನೆ ಔರ್ ಕಿತನೆ ಲೋಗೋಂ ಕೊ ಇನ್ ಕ ಜರುರತ ಹೊ' ! ಈ ಚಿತ್ರದಲ್ಲಿ ಬರುವ ಹಾಡುಗಳು : 'ಭೊರ್ ಆಯಿಗಯ ಅಂಧಿಯಾರ', (ಮನ್ನಾಡೆ, ಕಿಶೊರ್ ಕುಮಾರ್, ಲಕ್ಷ್ಮೀ ಶಂಕರ್ ), 'ಕಾಹೆ ಕಾನ್ಹ ಕರತ್ ' (ಲಕ್ಷ್ಮಿಶಂಕರ್), 'ಮೊರೆ ನೈನ ಬಹಾಯೆ ನೀರ್' ( ಲತಾ), 'ತುಮ್ ಬಿನ್ ಜೀವನ್ ಕೈಸಾ' ( ಮನ್ನಾಡೆ)

ಬಾವರ್ಚಿ ಚಿತ್ರ, ಸಾಮಾನ್ಯಜನರ ಮನಮುಟ್ಟಲು ಸಾಧ್ಯವಾಗಿದೆ.

ಚಿತ್ರದ ಬಗ್ಗೆ ಹೇಳಲೇಬೇಕಾದ ಹಲವಾರು ವಿಷಯಗಳಿವೆ. ಮನಮುಟ್ಟುವ ಸಂಭಾಷಣೆ, ಪೂರಕವಾದ ಸಂಗೀತ, ಎಲ್ಲಾ, ಇನ್ನೂ ಹೆಸರು ಗಳಿಸದ ಉದ್ಯೋನ್ಮುಖ ಕಲಾವಿದರು. ರಾಜೇಶ್ ಖನ್ನ, ಮತ್ತು ಜಯ ಬಾಧುರಿ ಜನಪ್ರಿಯತೆಯ ಶಿಖರಕ್ಕೆ ತಲುಪಿದ್ದೂ ಇಲ್ಲಿಂದಲೆ. ಸಿಕ್ಕ ಚಿಕ್ಕ ಪುಟ್ಟ ಸಂದರ್ಭಗಳನ್ನು ಸೊಗಸಾಗಿ ಉಪಯೋಗಿಸಿರುವ ತಂತ್ರ, ಕಲಾತ್ಮಕತೆ ! ಉದಾ: ಪಾತ್ರೆತೊಳೆಯುವ ಕಲ್ಲಿನ, ಅಥವ ಬಟ್ಟೆಒಗೆಯುವ ಕಲ್ಲಿನ ಬಳಿ ಮನೆಮಂದಿಯೆಲ್ಲಾ ಆನಂದದಿಂದ ಹಾಡಿ ಮಾಡಿದ ನೃತ್ಯಕ್ಕೆ ಸರಿಸಾಟಿಯಾದ ಸಾಮ್ಯತೆ ಚಿತ್ರ ಜಗತ್ತಿನಲ್ಲಿ ಕೇವಲ ಹೃಷಿದಾ ಮಾತ್ರ ಮಾಡಬಲ್ಲರು ! " ಓ ರಾಹಿ ಗಯ ಅಂಧಿಯಾರಾ....ಹಾಡಿನ ಕೊನೆಗೆ ಹರೀಂದ್ರನಾಥ ಚಟ್ಟೋಪಾಧ್ಯಾಯ ಅಲ್ಲಿಗೆ ಬರುತ್ತಾರೆ. ಅವರು ತಮ್ಮದೇ ಆದ ಶೈಲಿಯಲ್ಲಿ ದೇತಾ ಹೈ ಕಿತನಾ ....ಉತನಾ ಫಲ್ ಪಾತಾ ಹೈ....ನಂತರ ಅಸ್ರಾನಿ, ಗಿಟಾರ್ ಬಾರಿಸುತ್ತಾ, ಗುಡ್ ಮಾರ್ನಿಂಗ್, ಗುಡ್ ಮಾರ್ನಿಂಗ್ ದಾದಾಜಿ...ಹ್ಯಾಪಿ ಡೇಸ್ ಆರ್ ಕಾಮಿಂಗ್....ಇತ್ಯಾದಿ. ಹಿರಿಯ ಸೊಸೆಯರು ಒಬ್ಬರನ್ನೊಬ್ಬರು ಮುಖ ಕೊಟ್ಟು ಮಾತನಾಡದ ಮನೆಯಲ್ಲಿ ಅವರು ನೃತ್ಯ ಮಾಡುತ್ತಾರೆ. ರಾಜೇಶ್ ಖನ್ನಾ ಅವರ ಹೆಜ್ಜೆಗಳನ್ನು ನಿಯಂತ್ರಿಸುತ್ತಾರೆ. ಒಂದು ಕ್ಷಣದಲ್ಲಿ ಮನೆ ಸ್ವರ್ಗವಾಗುತ್ತದೆ !

ಚಿತ್ರಕೊಡುವ ಸಂದೇಶ, ಬಹಳ ಹೃದಯಂಗಮವಾಗಿದೆ.

ಒಂದು ಅಂಶ ಹೇಳಬೇಕೆಂದರೆ, ಚಿತ್ರ ನೋಡಿ ಹಲವು ದಿನಗಳ ನಂತರವೂ ನಮ್ಮಮೇಲೆ ಬೀರಿದ ಅದರ ಛಾಪು ! "ಸಬ್ ಲೊಗ್ ಅಪ್ನ ಕಾಮ್ ಕರ್ತೆಹೈ ; ಲೆಕಿನ್, ದೂಸ್ರೋಂಕ ಕಾಮ್ ಕರ್ನೆಮೆ ಕಿತನ ಮಜಾ ಹೈ, ವಹ್ ಔರ್ ಭಿ ದುಗನಾ ಹೈ " ಇಂತಹ ಅನೇಕ ನೀತಿಯುತ ವಾಕ್ಯಗಳು ಯಾರಿಗೂ ಬೇಸರ ತರದೆ, ಮನರಂಜನೆಯ ಪ್ರಮುಖ ವಾಹಿನಿಯಲ್ಲಿ ಸೇರಿ ಹೋಗುತ್ತವೆ ! ಪ್ರಖ್ಯಾತ ನಿರ್ದೇಶಕ ಬಿಮಾಲ್ ದ ಬಳಿ ಸಹಾಯಕರಾಗಿ ಕಲ್ಕತ್ತಾ ದಲ್ಲಿ ಕೆಲಸಮಾಡಿ ನುರಿತು, ಅವರು ಮಾಡಿದ ಮೊದಲ ಚಿತ್ರ 'ಮುಸಾಫಿರ್' ಇದು ಅಷ್ಟೊಂದು ಜನಪ್ರಿಯತೆಗಳಿಸಲಿಲ್ಲ.ರಾಜ್ ಕಪೂರ್ ಅವರಿಗೆ ತಮ್ಮ 'ಅನಾಡಿ' ಚಿತ್ರದ ನಿರ್ದೇಶನವನ್ನು ವಹಿಸಿದರು.(೧೯೫೯) ಅನುರಾಧ (೧೯೬೦) ಅವರ ಚಿತ್ರಗಳಾದ ಆನಂದ್(೧೯೭೦), ಅಭಿಮಾನ್(೧೯೭೩), ಬಾವರ್ಚಿ(೧೯೭೨), ಸತ್ಯಕಾಂ(೧೯೬೯), ನಮಕ್ ಹರಾಮ್(೧೯೭೩), ಚುಪ್ ಕೆ ಚುಪ್ ಕೆ(೧೯೭೫), ಬೇಮಿಸಾಲ್, ಗೋಲ್ ಮಾಲ್ (೧೯೭೯) ಅಪಾರ ಜನಪ್ರಿಯ ತೆಯನ್ನು ಗಳಿಸಿದವು. ಸುಮಾರಾಗಿ ಅವರ ಕೆಲವು ಚಿತ್ರಗಳಿಗೆ ಎಸ್. ಡಿ. ಬರ್ಮನ್ ರ ಸುಶ್ರಾವ್ಯ ಸಂಗೀತ. ೧೯೪೭ ರಿಂದ ಅವರು ಅತ್ಯಂತ ಪ್ರತಿಭಾನ್ವಿತ ವ್ಯಕ್ತಿಗಳ ಸಂಪರ್ಕದಲ್ಲಿದ್ದು ಅನೇಕ ಚಿತ್ರಗಳಲ್ಲಿ ನವ ಕಲ್ಪನೆ,ವಿಚಾರಧಾರೆಗಳಿಂದ ವಿಶಿಷ್ಟ ಕಲೋಪಾಸಕರಾಗಿ ಗುರುತಿಸಲ್ಪಟ್ಟಿದ್ದಾರೆ. ಇಂತಹ ಪಾತ್ರಗಳು ಅವರ ಯಶಸ್ಸನ್ನು ಹೆಚ್ಚಿಸಿದವು. ಫಿಲ್ಮ್ಸ್ ಸೆನ್ಸಾರ್ ಬೋರ್ಡಿನ ಛೇರ್ಮನ್ ಆಗಿಯೂ, ಎನ್.ಎಫ್,ಡಿ.ಸಿ.ಛೇರ್ಮನ್ ಆಗಿಯೂ ಕೆಲಸ ಮಾಡಿದ್ದಾರೆ.

ಸ್ವಲ್ಪ ಸಮಯ ಅವರು ತಮ್ಮ ಕೆಲಸ ನಿಲ್ಲಿಸಿದ್ದು ಮತ್ತೆ 'ಝೂಟ್ ಬೋಲೆ ಕವ್ವಾ ಕಾಟೆ' ಎಂಬ ಚಿತ್ರ ತಯಾರಿಸಿದರು. ಅಮೊಲ್ ಪಲೇಕರ್ ಅದರಲ್ಲಿ ಕೆಲಸ ಮಾಡಬೇಕಾಗಿತ್ತು. ಆದರೆ ಅವರಿಗೆ ಸ್ವಲ್ಪ ವಯಸ್ಸಾದಂತೆ ತೋರಿ, ಆ ಪಾತ್ರಕ್ಕೆ ಅನಿಲ್ ಕಪೂರ್ ನನ್ನು ತೆಗೆದುಕೊಂಡರು. ಮುಖರ್ಜಿಯವರು 'ತಲಾಶ್' ಎಂಬ ಟಿ.ವಿ.ಸೀರಿಯಲ್ ಮಾಡಿದ್ದರು. ನೇಮಿಸಲ್ಪಟ್ಟಿದ್ದರು.ಮೌಲ್ಯಗಳನ್ನು ಪ್ರತಿಪಾದಿಸುವ ಚಿತ್ರಗಳನ್ನು ನಿರ್ಮಿಸಿ ಅಪಾರ ಜನಪ್ರಿಯತೆಯನ್ನು ಗಳಿಸಿದ್ದಾರೆ.ನಕ್ಕು ನಲಿಸುವ ಚಿತ್ರಗಳಾದ, ಚುಪ್ ಕೆ ಚುಪ್ ಕೆ,ಯಲ್ಲಿ ನಟ ಓಂಪ್ರಕಾಶ್ ನ ಕೇಂದ್ರವಾಗಿ ದ್ದರೆ ಖುಬ್ ಸೂರತ್ ನಲ್ಲಿ (೧೯೮೦) ನಟಿ ದೀನಾಪಾಠಕ್, ಗೋಲ್ ಮಾಲ್ ನಲ್ಲಿ ನಟ ಉತ್ಪಲ್ ದತ್ 'ಪಾತ್ರ' ಗಳು ಅದ್ಭುತವಾಗಿವೆ.

ಇನ್ನೊಂದು ವಿಶೇಷವೆಂದರೆ ಅವರ ಎಲ್ಲಾ ಚಿತ್ರಗಳಲ್ಲೂ, ಮನಮೋಹಕ ಮಧುರ ಸಂಗೀತದ ಹೊನಲನ್ನು ಕಾಣಬಹುದು. ಬೊಂಬಾಯಿಗೆ ಬರುವ ಮೊದಲು ಅವರು ಕಲ್ಕತ್ತಾ ಆಕಾಶವಾಣಿ ಕೇಂದ್ರದಲ್ಲಿ ಸಿತಾರ್ ವಾದಕ ರಾಗಿದ್ದರು. ಸಂಗೀತದ ಈ ಪರಿಶ್ರಮವೇ ಅವರ ಚಿತ್ರದಲ್ಲಿನ ಹಾಡುಗಳಲ್ಲಿ ಅವರು ತುಂಬಿದ ಮಧುರ ರಸವನ್ನು ನಾವು ಕಾಣಬಹುದು !

ಹೄಷಿದಾ ಚಿತ್ರಗಳಲ್ಲಿ ಜಾಡುಕಂಡ ಕೆಲವೇ, ಅತಿ ಜನಪ್ರಿಯ ಗೀತೆಗಳು :

ಬದಲಾಯಿಸಿ

೧. ಅನಾಡಿ : ಕಿಸಿಕಿ ಮುಸ್ಕುರಾಹಟೊ ಪೆ ಸಿಸಾರ್.............ಜೀನಾ ಇಸೀಕ ನಾಮ್ ಹೈ- (ಮುಕೇಶ್)

೨. ಸಬ್ ಕುಛ್ ಸಿಖಾ ಹಮ್ ನೆ,......... (ಮುಖೇಶ್).

೩. ಆಶೀರ್ವಾದ್: ರೇಲ್ ಗಾಡಿ..ಛುಕ್, ಛುಕ್...(ಅಶೋಕ್ ಕುಮಾರ್)

೪. ಆನಂದ್ : ಜಿಂದಗೀ ಕೈಸಿ ಏ ಪಹೇಲಿ ......(ಮನ್ನಾಡೆ)

೫. ಗುಡ್ಡಿ : ಹಮ್ ಕೊ ಮನ್ ಕಿ ಶಕ್ತಿ ದೇನ ......(ವಾಣಿ ಜೈರಾಮ್)

೬. ನಮಕ್ ಹರಾಮ್ : ದಿಯೆ ಜಲ್ತೆ ಹೈ.........(ಕಿಶೋರ್)

೭. ಗೊಲ್ ಮಾಲ್ : ಆನೆವಾಲ ಪಲ್........ (ಕಿಶೋರ್)

೮. ಖೂಬ್ ಸೂರತ್ : ಸುನ್ ಸುನ್ ಸುನ್ ದೀದಿ....(ಆಶಾ ಭೋಸ್ಲೆ)

೯. ಅಸ್ಲಿ ನಕ್ಲಿ : ತುಝೇ ಜೀವನ್ ಕಿ ಡೋರ್ ಸೆ ಬಾಂಧ್ ಲಿಯಾ ಹೈ.....(ಮೊಹಮ್ಮದ್ ರಫಿ, ಲತಾ ಮಂಗೇಶ್ಕರ್)

ಮುಂತಾದವುಗಳು.

ಹೄಷಿದಾ ರವರ ಅಂತಿಮ ದಿನಗಳು, ಅವರಿಗೆ ನೆಮ್ಮದಿ ನೀಡಲಿಲ್ಲ

ಬದಲಾಯಿಸಿ

ಹೃಷಿಕೇಶ್ ಮುಖರ್ಜಿಯವರು ಮುಂಬೈನ ಲೀಲಾವತಿ ಆಸ್ಪತ್ರೆಗೆ ಆಗಸ್ಟ್ ೬ನೆ ತಾರೀಖು ಸೇರಿಸಲ್ಪಟ್ಟಿದ್ದು ಅಲ್ಲಿನ ಐ.ಸಿ.ಯು. ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುಣಮುಖರಾದರು. ಮತ್ತೆ ಅವರು 'ಲೀಲಾವತಿ ಆಸ್ಪತ್ರೆಗೆ' ಭರ್ತಿಯಾದರು. ಈ ಬಾರಿ 'ನ್ಯುಮೋನಿಯ ಜ್ವರ' ಅವರನ್ನು ಆವರಿಸಿತ್ತು. 'ಡಯಾಲಿಸಿಸ್' ಗೋಸ್ಕರ ಸದಾ ಅವರು ಅಲ್ಲಿಗೆ ಹೋಗುತ್ತಲೇ ಇದ್ದರು. ಹೀಗೆ ನರಳುತ್ತಿದ್ದ ಹೃಷಿದಾ ಅವರು ೨೭ ನೆಯ ತಾರೀಖು ಕೊನೆಯುಸಿರೆಳೆದರು ! ಇಹ ಲೋಕದ ದುಃಖವನ್ನು ಸಾಕಷ್ಟು ಅನುಭವಿಸಿ ಸೋತಿದ್ದರು. ಮೃತರಿಗೆ ೮೪ ವರ್ಷ ವಯಸ್ಸಾಗಿತ್ತು. ವೃದ್ಧಾಪ್ಯದಲ್ಲಿ ಅವರ ಬಳಿ ಯಾರೂ ಇರಲಿಲ್ಲ. ಅವರ ಕಿರಿಯ ಮಗ 'ಟೂಟು' ನ ಅಕಾಲಿಕ ಸಾವಿನಿಂದ ನೊಂದಿದ್ದರು. ಹೆಂಡತಿ ಮೊದಲೇ ಗತಿಸಿದ್ದರು. ಅವರಿಗೆ ಜೊತೆಯೆಂದರೆ ೪-೫ ಸಾಕು ನಾಯಿಗಳು, ಹಳೆಯ ನಂಬಿಕಸ್ತ ಕಾರ್ ಡ್ರೈವರ್, ವಾಚ್ ಮನ್ ! 'ಚಾರ್ಲಿ ಚಾಪ್ಲೈನ್ ಡಿವಿಡಿ' ಗಳೇ ಅವರಿಗೆ ದಿನಪುರ್ತಿ ಒದಗಿಸುತ್ತಿದ್ದ ಮನರಂಜನೆಯ ಸಾಮಗ್ರಿಗಳು. ಒಂಟಿತನ ಅವರ ತಲೆಗೆ ಚಿಟ್ಟು ಹಿಡಿಸಿತ್ತು.

ವಿಪರ್ಯಾಸವೆಂದರೆ, ಇಂತಹ ಮಹಾನ್ ಕಲಾವಿದನಿಗೆ 'ಬಾಲಿವುಡ್' ನಲ್ಲಿ ಸರಿಯಾದ ಸನ್ಮಾನ ದೊರೆಯಲಿಲ್ಲ. ಮರಣದ ಸಮಯದಲ್ಲಿ ಅವರ ಮಗ ಪ್ರದೀಪ್ ಅಮೆರಿಕೆಯಲ್ಲಿದ್ದರು. ಅವರು ಬರುವ ವರೆಗೆ ಅಂತ್ಯ ಕ್ರಿಯೆಗಳನ್ನು ಮಾಡಲಾಗಲಿಲ್ಲ. ೨ ಹೆಣ್ಣು ಮಕ್ಕಳು ಮುಂಬೈನಲ್ಲಿದ್ದಾರೆ. ಒಬ್ಬ ಮಗಳು ಕೊಲ್ಕತ್ತಾ ದಲ್ಲಿದ್ದಾಳೆ. ಚಿಕ್ಕ ಮಗ ಸಂದೀಪ್ (ಟೂಟು) ಅಕಾಲಮರಣಕ್ಕೆ ತುತ್ತಾದನು. ಮೊಮ್ಮಗಳ ಹೆಸರು ಪ್ರೀತ. ಅವನು ಅಸ್ಥಮಾ ದಿಂದ ನರಳುತ್ತಿದ್ದ. ದೆಹಲಿಯಲ್ಲಿದ್ದಾಗ ಅಲ್ಲಿ ಮರಣ ಹೊಂದಿದನು. ಅವರ ತಮ್ಮ ಕಾಳಿಕಾಪ್ರಸಾದ ಮುಖರ್ಜೀ. (ನೆನೋ) ಅಣ್ಣ ದ್ವಾರಕಾ ಪ್ರಸಾದ್ ಮುಖರ್ಜಿ ತೀರಿಹೋದರು. ಒಬ್ಬ ಅಡುಗೆಯವರು ಕಾರ್ತಿಕ್, ಸುಮಾರು ೪೫ ವರ್ಷಗಳಿಂದ ಅವರ ಬಳಿ ಸೇವೆ ಸಲ್ಲಿಸುತ್ತಿದ್ದಾರೆ. ಸದಾ ಅವರ ಹಾಸಿಗೆಯ ಬಳಿ ೪-೫ ಸಾಕು ನಾಯಿಗಳು ; ಇವೇ ಅವರ ಆಪ್ತ ಬಂಧುಗಳು ! ದಿನವೆಲ್ಲಾ ಚಾರ್ಲಿ ಚಾಪ್ಲಿನ್ ರ ಡಿವಿಡಿಗಳನ್ನು ನೋಡಿಕೊಂಡು ಅಥವಾ 'ಕ್ರಾಸ್ ವರ್ಡ್ಸ್' ಮಾಡಿಕೊಂಡೋ ದಿನ ನೂಕುತ್ತಿದ್ದರಂತೆ. ಇಲ್ಲವಾದರೆ ದೂರ ದಿಗಂತದಲ್ಲಿ, ಕಡಲಿನಾಚೆಯ ಲೋಕದಲ್ಲಿ ಮೈ ಮರೆಯುತ್ತಿದ್ದರಂತೆ ! ಹೀಗೆಯೇ ಹಾಸಿಗೆಯಮೇಲೆ ಮಲಗಿಕೊಂಡೊ, ಅಥವಾ ಗಾಲಿಚಕ್ರದ ಮೇಲೆ ಕುಳಿತುಕೊಂಡೊ ತಮ್ಮ ಕೊನೆಗಾಲದ ಹಲವು 'ವಸಂತ' ಗಳನ್ನು ಕಳೆದ 'ಹೃಷಿದ' ಒಬ್ಬ ಅಪರೂಪದ ವ್ಯಕ್ತಿ ! 'ಬಾಬು ಮೊಷಾಯ್' ಇನ್ನಿಲ್ಲವಾದರು ! ರಾಜ್ ಕಪೂರ್ ಅವರನ್ನು ಯಾವಾಗಲೂ ಹೀಗೆಯೇ ಸಂಬೊಧಿಸುತ್ತಿದ್ದದ್ದು ! ಅದರ ಅರ್ಥ- ಸಂಭಾವಿತ, ಮೃದು ಮಧುರ ಭಾಷಿ, ಗೌರವಾನ್ವಿತ, ಒಳ್ಳೆ ಮನೆತನದವ ಇತ್ಯಾದಿ ; ಅದೇ ಪದವನ್ನು ಅವರು ತಮ್ಮ 'ಆನಂದ್' ಚಿತ್ರದಲ್ಲಿ ಬಳಸಿಕೊಂಡರು !

ಪ್ರಶಸ್ತಿಗಳು

ಬದಲಾಯಿಸಿ

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಹೃಷಿಕೇಶ ಮುಖರ್ಜಿಯವರು ಆಗಸ್ಟ್ ೨೭, ೨೦೦೬ಭಾನುವಾರ ಮುಂಬಯಿಯಲ್ಲಿ ನಿಧನರಾದರು. ಮಂಗಳವಾರ ೨೯ ನೆಯ ತಾರೀಖು ಮಧ್ಯಾನ್ಹ ೨ ಘಂಟೆಗೆ, ಮುಂಬೈನ ಶಿವಾಜಿ ಪಾರ್ಕಿನ 'ಶವಾಗಾರ'ದಲ್ಲಿ ದಹನಕ್ರಿಯೆಯನ್ನು ಮಾಡಲಾಯಿತು.

ಹೃಷಿಕೇಶ್ ಮುಖರ್ಜಿ ನಿರ್ದೇಶನದ ಚಿತ್ರಗಳು

ಬದಲಾಯಿಸಿ
  1. ಝೂಟ್ ಬೋಲೆ ಕೌವಾ ಕಾಟೆ (೧೯೯೮)
  2. ತಲಾಶ್ (೧೯೯೨)
  3. ನಮಕಿನ್ (೧೯೮೮)
  4. ಲಾಠಿ (೧೯೮೮)
  5. ಹಮ್ ಹಿಂದೂಸ್ತಾನಿ (೧೯೮೬)
  6. ಝೂಟಿ (೧೯೮೫)
  7. ಅಚ್ಚಾ ಬುರಾ (೧೯೮೩)
  8. ರಂಗ್ ಬಿರಂಗಿ (೧೯೮೩)
  9. ಕಿಸೀ ಸೆ ನ ಕೆಹನಾ (೧೯೮೩)
  10. ಸದ್ಮಾ (೧೯೮೩)
  11. ಬೇಮಿಸಾಲ್ (೧೯೮೨)
  12. ನರಂ ಗರಂ (೧೯೮೧)
  13. ಖೂಬ್ ಸೂರತ್ (೧೯೮೦)
  14. ಜುರ್ಮಾನ (೧೯೭೯)
  15. ಗೋಲ್‍ಮಾಲ್ (೧೯೭೯)
  1. ನೌಕ್ರಿ (೧೯೭೮)
  2. ಕೊತ್ವಾಲ್ ಸಾಬ್ (೧೯೭೭)
  3. ಆಲಾಪ್ (೧೯೭೭)
  4. ಅರ್ಜುನ್ ಪಂಡಿತ್ (೧೯೭೬)
  5. ಚೈತಾಲಿ (೧೯೭೫)
  6. ಚುಪ್ಕೆ ಚುಪ್ಕೆ (೧೯೭೫)
  7. ಮಿಲಿ (೧೯೭೫)
  8. ಫಿರ್ ಕಬ್ ಮಿಲೋಗಿ (೧೯೭೪)
  9. ನಮಕ್ ಹರಾಮ್ (೧೯೭೩)
  10. ಅಭಿಮಾನ್ (೧೯೭೩)
  11. ಬಾವರ್ಚಿ (೧೯೭೨)
  12. ಸಬ್‍ಸೆ ಬಡಾ ಸುಖ್ (೧೯೭೨)
  13. ಗುಡ್ಡೀ (೧೯೭೧)
  14. ಆನಂದ್ (೧೯೭೦)
  15. ಪ್ಯಾರ್ ಕಾ ಸಪ್ನಾ (೧೯೬೯)
  1. ಸತ್ಯಕಾಮ್ (೧೯೬೯)
  2. ಆಶೀರ್ವಾದ್ (೧೯೬೮)
  3. ಮಂಜಿಲ್ ದೀದಿ (೧೯೬೭)
  4. ಅನುಪಮ್ (೧೯೬೬)
  5. ಬೀವ್ ಔರ್ ಮಕಾನ್ (೧೯೬೬)
  6. ಗಬನ್ (೧೯೬೬)
  7. ದೋ ದಿಲ್ (೧೯೬೫)
  8. ಸಾಂಜ್ ಔರ್ ಸವೇರಾ (೧೯೬೪)
  9. ಆಶಿಕ್ (೧೯೬೨)
  10. ಅಸ್ಲಿ-ನಕ್ಲಿ (೧೯೬೨)
  11. ಛಾಯಾ (೧೯೬೧)
  12. ಮೆಹಂದಿ (೧೯೬೧)
  13. ಅನುರಾಧ (೧೯೬೦)
  14. ಅನಾರಿ (೧೯೫೯)
  15. ಮುಸಾಫಿರ್ (೧೯೫೭)