ಸಂಜೀವ್ ಕುಮಾರ್

ಸಂಜೀವ್ ಕುಮಾರ್ (ಜುಲೈ ೯, ೧೯೩೮ - ನವೆಂಬರ್ ೬, ೧೯೮೫) ಭಾರತೀಯ ಚಲನಚಿತ್ರರಂಗ ಕಂಡ ಮಹಾನ್ ನಟರಲ್ಲೊಬ್ಬರು.

ಸಂಜೀವ್ ಕುಮಾರ್
Born
ಹರಿಬಾಯ್ ಜರಿವಾಲಾ

ಜುಲೈ ೯, ೧೯೩೮
ಗುಜರಾತಿನ ಸೂರತ್
Diedನವೆಂಬರ್ ೬, ೧೯೮೫
ಮುಂಬಯಿ
Occupationಚಲನಚಿತ್ರ ನಟ
Years active೧೯೬೦ - ೧೯೮೫
Spouse(s)None

ಜೀವನಸಂಪಾದಿಸಿ

ಭಾರತೀಯ ಚಿತ್ರರಂಗದಲ್ಲಿ ಒಬ್ಬ ಶ್ರೇಷ್ಠನಟರಾಗಿ ಕಂಗೊಳಿಸುವ ಸಂಜೀವ್ ಕುಮಾರ್ ಜುಲೈ 9, 1938ರಂದು ಗುಜರಾತಿನ ಸೂರತ್ನಲ್ಲಿ ಜನಿಸಿದರು. ಅಂದಿನ ಅವರ ಹೆಸರು ಹರಿಬಾಯ್ ಜರಿವಾಲಾ.

ಚಲನಚಿತ್ರ ರಂಗದಲ್ಲಿಸಂಪಾದಿಸಿ

೧೯೬೦ರಲ್ಲಿ ಹಮ್ ಹಿಂದೂಸ್ಥಾನಿ ಚಿತ್ರದ ಮೂಲಕ್ ನಟರಾದ ಸಂಜೀವ್ ಕುಮಾರ್ 1965ರಲ್ಲಿ ನಿಶಾನ್ ಚಿತ್ರದ ಮೂಲಕ ನಾಯಕ ನಟರಾದರು. ಒಮ್ಮೆ ಆತ ಸಂದರ್ಶನದಲ್ಲಿ ಹೇಳಿದ್ದರು. ಇವರು ಚಲನಚಿತ್ರಕ್ಕೆ ನಾಯಕರಾಗಿದ್ದ ಸಂದರ್ಭದಲ್ಲಿ ಕೂಡಾ ಸಿಟಿ ಬಸ್ಸಿನಲ್ಲಿ ಓಡಾಡುತ್ತಿದ್ದರಂತೆ. ಒಂದು ದಿನ ಸ್ಟುಡಿಯೋ ಮುಂದೆ ಈತ ಬಸ್ಸಿನಿಂದ ಇಳಿಯುತ್ತಿದ್ದುದನ್ನು ಆ ಚಿತ್ರದ ನಾಯಕಿ ನಟಿ ನೋಡಿಬಿಟ್ಟಳು. ಅದನ್ನು ನೋಡಿ ಕುಪಿತಗೊಂಡ ಆಕೆ ನಿರ್ಮಾಪಕ-ನಿರ್ದೇಶಕರ ಬಳಿ ಹೋಗಿ ಇಂತಹ ವ್ಯಕ್ತಿಯ ಜೊತೆ ನಾನು ನಟಿಸುವುದಿಲ್ಲ ಎಂದು ಜಗಳವಾಡಿದಳಂತೆ.

೧೯೬೮ರ ವರ್ಷದಲ್ಲಿ ಇವರು ದಿಲೀಪ್ ಕುಮಾರ್ ಅವರೊಡನೆ ಸಂಘರ್ಷ್ ಎಂಬ ಚಿತ್ರದಲ್ಲಿ ನಟಿಸಿದರು. ೧೯೭೦ರಲ್ಲಿ ಮೂಡಿ ಬಂದ ‘ಕಿಲೋನಾ’ ಅವರನ್ನು ತಾರೆಯಾಗಿಸಿತು. ಸೀತಾ ಔರ್ ಗೀತಾ ಮತ್ತು ಮಂಚಲಿ ಮತ್ತೆರಡು ಯಶಸ್ವೀ ಚಿತ್ರಗಳಾದವು. ಪ್ರಸಿದ್ಧ ನಿರ್ದೇಶಕ ಗುಲ್ಜಾರ್ ಅವರಿಗೆ ಪ್ರಿಯನಟನಾಗಿದ್ದ ಸಂಜೀವ್ ಕುಮಾರ್ ಕೋಶಿಶ್, ಆಂಧಿ, ಮೌಸಂ, ಅಂಗೂರ್, ನಮ್ಕೀನ್ ಒಳಗೊಂಡಂತೆ ಅವರ ಒಂಭತ್ತು ಪ್ರಸಿದ್ಧ ಚಿತ್ರಗಳಲ್ಲಿ ಅಭಿನಯಿಸಿದರು. ಕೋಶಿಶ್ ಚಿತ್ರದಲ್ಲಿ ಕಿವುಡ ಮತ್ತು ಮೂಕನಾಗಿ ಅವರು ಜಯಾಬಾಧುರಿಯೊಂದಿಗೆ ನಟಿಸಿದ ರೀತಿ ಅಂದಿನ ದಿನಗಳಲ್ಲಿ ಮನೆಮಾತಾಗಿತ್ತು. ಶೋಲೆ ಚಿತ್ರದ ಥಾಕೂರ್ ಪಾತ್ರ ಆ ಚಿತ್ರಕ್ಕೊಂದು ಕಳೆಯಂತಿತ್ತು. ನಯಾದಿನ್ ನಯಾ ರಾತ್ ಚಿತ್ರದಲ್ಲಿ ಒಂಭತ್ತು ವಿಭಿನ್ನ ಪಾತ್ರಗಳಲ್ಲಿದ್ದರು. ಅವರ ಪ್ರತಿಭೆ ಸತ್ಯಜಿತ್ ರೇ ಅಂತಹವರನ್ನೂ ಆಕರ್ಷಿಸಿ ‘ಶತರಂಜ್ ಕೆ ಖಿಲಾಡಿ’ಯಲ್ಲಿ ಮಹತ್ವಪೂರ್ಣ ಪಾತ್ರ ನಿರ್ವಹಿಸಿದ್ದರು.

ಪ್ರಶಸ್ತಿ ಗೌರವಗಳುಸಂಪಾದಿಸಿ

ಹಲವಾರು ಬಾರಿ ರಾಷ್ಟ್ರಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿಗಳನ್ನು ಪಡೆದ ಸಂಜೀವ್ ಕುಮಾರ್ ಅಭಿನಯಿಸಿದ ಒಂದೊಂದು ಪಾತ್ರವೂ ಸ್ಮರಣೀಯ. ದಸ್ತಕ್, ಕೋಶಿಶ್ ಅವರಿಗೆ ರಾಷ್ಟ್ರಪ್ರಶಸ್ತಿ ತಂದವು. ಆಂಧಿ, ಅರ್ಜುನ್ ಪಂಡಿತ್, ಶಿಕಾರ್ ಅಭಿನಯ ಫಿಲಂ ಫೇರ್ ಪ್ರಶಸ್ತಿ ತಂದವು. ಕಿಲೋನಾ, ಕೋಶಿಶ್, ಶೋಲೆ, ಮೌಸಂ, ಯೇ ಹೈ ಜಿಂದಗಿ, ದೇವತಾ, ಪತಿ ಪತ್ನಿ ಔರ್ ವ್ಹೋ, ಅಂಗೂರ್, ಅನಾಮಿಕಾ ಮುಂತಾದ ಚಿತ್ರಗಳಿಗಾಗಿ ಹದಿನಾಲ್ಕು ಬಾರಿ ಅವರು ಆ ಪ್ರಶಸ್ತಿಗಳಿಗೆ ಸಮೀಪರಾಗಿದ್ದರು. ಆತನಷ್ಟು ಲೀಲಾಜಾಲವಾಗಿ ಸಹಜವಾಗಿ ನಟಿಸುತ್ತಿದ್ದ ಕಲಾವಿದರು ಚಿತ್ರರಂಗದಲ್ಲಿ ಅಪರೂಪವೆಂದರೂ ಸರಿಯೇ.

ಅಭಿನಯದಲ್ಲೇ ಪೂರ್ಣತ್ವಸಂಪಾದಿಸಿ

ಪ್ರಾರಂಭದ ದಿನಗಳಲ್ಲಿ ಅತ್ಯಂತ ಸುಂದರವಾಗಿ ಕಾಣುತ್ತಿದ್ದ ಆತ ಸೌಂಧರ್ಯಕ್ಕಿಂತ ಹೆಚ್ಚು ಸತ್ವಯುತ ಪಾತ್ರಗಳಲ್ಲೇ ಕಂಡರು. ಎಂತಹಾ ಪಾತ್ರಗಳಲ್ಲೂ ಸಹಜತೆಯನ್ನು ಲೀಲಾಜಾಲವಾಗಿ ತರುತ್ತಿದ್ದ ಅವರ ಕೌಶಲ್ಯ ಅಸಾಧಾರಣವಾದದ್ದು. ಆದರೆ ಇಂತಹ ಅಸಾಧಾರಣ ಪ್ರತಿಭೆ ತನ್ನ ಸ್ವಯಂ ಜೀವನದಲ್ಲಿ ಶಿಸ್ತನ್ನು ಕಾಪಾಡಿಕೊಳ್ಳದೆ ಅಪಾರ ಕುಡಿತದ ಚಟದಲ್ಲಿ ತಮ್ಮನ್ನು ಕಳೆದುಕೊಂಡರು. ಹಲವು ಸಹ ನಟಿಯರನ್ನು ವಿವಾಹವಾಗ ಬಯಸಿ ಯಾವೊಂದೂ ಪ್ರೇಮವೂ ದಕ್ಕದ ಆತ ಕೇವಲ ತಮ್ಮ ೪೭ನೆಯ ವಯಸ್ಸಿನಲ್ಲೇ ನವೆಂಬರ್ ೬, ೧೯೮೫ರಂದು ಈ ಲೋಕವನ್ನು ಅಗಲಿಬಿಟ್ಟರು. ವೃದ್ಧಾಪ್ಯವನ್ನು ತನ್ನ ನಿಜ ಜೀವನದಲ್ಲಿ ಮುಟ್ಟದ ಈತ ವೃದ್ಧರಾಗಿ ಅಭಿನಯಿಸಿದ ಕೆಲವೊಂದು ಪಾತ್ರಗಳು ಅವಿಸ್ಮರಣೀಯ. ಈ ರೀತಿಯಲ್ಲಿ ತನ್ನ ಅಭಿನಯದಲ್ಲೇ ಪೂರ್ಣತ್ವ ಕಂಡುಕೊಂಡ ಒಬ್ಬ ಅಪೂರ್ವ ಜೀವಿ.