ಭೌತಶಾಸ್ತ್ರದಲ್ಲಿ, ಹುಕ್‌ನ ನಿಯಮವು ಪ್ರಾಯೋಗಿಕ ನಿಯಮವಾಗಿದೆ. ಇದರ ಪ್ರಕಾರ, ಒಂದು ಸ್ಪ್ರಿಂಗ್ ಅನ್ನು ರೇಖೀಯವಾಗಿ ಕೆಲವು (x) ಮಾಪಕಗಳಷ್ಟು ದೂರದವರೆಗೆ ಹಿಗ್ಗಿಸಲು ಅಥವಾ ಸಂಕುಚಿತಗೊಳಿಸಲು ಅಗತ್ಯವಿರುವ ಬಲವು (F) Fs = kx, ಎಂದು ಹೇಳುತ್ತದೆ. ಇಲ್ಲಿ,k ಎನ್ನುವುದು ಸ್ಪ್ರಿಂಗ್‍ನ ಗುಣ ಹೇಳುವ ಒಂದು ಸ್ಥಿರಾಂಕ ವಾಗಿರುತ್ತದೆ ಮತ್ತು ಇಲ್ಲಿ x ಎನ್ನುವುದು ಒಟ್ಟು ಸಂಭವನೀಯ ವಿರೂಪಕ್ಕೆ ಹೋಲಿಸಿದರೆ ಬಹಳ ಚಿಕ್ಕದಾಗಿದೆ. ಈ ನಿಯಮಕ್ಕೆ 17ನೇ ಶತಮಾನದ ಬ್ರಿಟಿಷ್ ಭೌತಶಾಸ್ತ್ರಜ್ಞ ರಾಬರ್ಟ್ ಹುಕ್ ಅವರ ಹೆಸರಿಡಲಾಗಿದೆ. ಅವರು ಇದಕ್ಕೆ ಮೊದಲು 1676 ರಲ್ಲಿ ಈ ನಿಯಮವನ್ನು ಲ್ಯಾಟಿನ್ ಅಕ್ಷರಪಲ್ಲಟ(ಅನಗ್ರಾಮ್‌)ದಂತೆ ಹೇಳಿದ್ದಾರೆ.[೧][೨] ಅವನು ತನ್ನ ಅನಗ್ರಾಮ್‌ನ ಪರಿಹಾರವನ್ನು 1678ರಲ್ಲಿ("ಹಿಗ್ಗಿದಂತೆ ಬಲ" ಅಥವಾ "ಹಿಗ್ಗುವಕೆಯು ಬಲಕ್ಕೆ ಅನುಪಾತದಲ್ಲಿರುತ್ತದೆ"). 1660 ರಿಂದ ಈ ನಿಯಮದ ಬಗ್ಗೆ ತನಗೆ ಅರಿವಿತ್ತು ಎಂದು 1678 ರ ಕೃತಿಯಲ್ಲಿ ಹುಕ್ ಹೇಳುತ್ತಾರೆ.

ಹುಕ್‌ನ ನಿಯಮ: ಬಲವು ಹಿಗ್ಗುವಿಕೆಗೆ ಪ್ರಮಾಣಾನುಗುಣವಾಗಿ ಇರುವುದು
ಬೌರ್ಡನ್ ಟ್ಯೂಬ್‌ಗಳು ಹುಕ್‌ನ ನಿಯಮವನ್ನು ಆಧರಿಸಿವೆ. ಅನಿಲ ಒತ್ತಡದಿಂದ ಉಂಟಾಗುವ ಬಲವು, ಸುರುಳಿಯಾಕಾರದ ಲೋಹದ ಕೊಳವೆಯೊಳಗಿನ ಒತ್ತಡಕ್ಕೆ ಅನುಗುಣವಾಗಿ ಅದನ್ನು ಬಿಚ್ಚುಕೊಳ್ಳುವಂತೆ ಮಾಡುತ್ತದೆ.
The balance wheel at the core of many mechanical clocks and watches depends on Hooke's law. Since the torque generated by the coiled spring is proportional to the angle turned by the wheel, its oscillations have a nearly constant period.

ಸ್ವಲ್ಪ ಮಟ್ಟಿಗೆ, ಎತ್ತರದ ಕಟ್ಟಡದ ಮೇಲೆ ಗಾಳಿ ಬೀಸುವುದು ಮತ್ತು ಸಂಗೀತಗಾರ ಗಿಟಾರ್‌ನ ಸ್ಟ್ರಿಂಗ್ ಅನ್ನು ಎಳೆಯುವುದು ಮುಂತಾದ ಸ್ಥಿತಿಸ್ಥಾಪಕ ವಸ್ತುವು ವಿರೂಪಗೊಂಡ ಅನೇಕ ಇತರ ಸಂದರ್ಭಗಳಲ್ಲಿ ಹುಕ್‌ನ ಸಮೀಕರಣವು ಹೊಂದಿಕೊಳ್ಳುವುದು. ಈ ಸಮೀಕರಣವನ್ನು, ಊಹಿಸಬಹುದಾದ ಸ್ಥಿತಿಸ್ಥಾಪಕ ವಸ್ತು ಅಥವಾ ವಸ್ತುವನ್ನು ರೇಖೀಯ-ಸ್ಥಿತಿಸ್ಥಾಪಕ ಅಥವಾ ಹುಕಿಯನ್ ಎಂದು ಹೇಳಲಾಗುತ್ತದೆ.

ಹುಕ್‌ನ ನಿಯಮವು ಬಲವನ್ನು ಹಾಕಿದಾಗ, ಸ್ಪ್ರಿಂಗ್‌ಗಳು ಮತ್ತು ಇತರ ಸ್ಥಿತಿಸ್ಥಾಪಕ ಕಾಯಗಳ ನೈಜ ಪ್ರತಿಕ್ರಿಯೆಗೆ ಮೊದಲ-ವರ್ಗದ ರೇಖೀಯ ಅಂದಾಜು ಮಾತ್ರ.

ಇವುಗಳನ್ನೂ ಓದಿ

ಬದಲಾಯಿಸಿ

*ಪೀಡನ(ಸ್ಟ್ರೆಸ್)

*ವಿರೂಪತೆ(ಡೀಫರ್ಮೇಶನ್)

*ವಿಕೃತ(ಸ್ಟ್ರೈನ್)

*ಯಂಗ್ ಮಾಪಾಂಕ(ಯಂಗ್ಸ್ ಮಾಡ್ಯುಲಸ್)

*ಪೀಡನ-ವಿಕೃತಿ ನಕ್ಷೆ(ಸ್ತ್ರೆಸ್-ಸ್ಟೈನ್ ಡಯಾಗ್ರಂ)

ಹೊರಗಿನ ಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. The anagram was given in alphabetical order, ceiiinosssttuu, representing Ut tensio, sic vis – "As the extension, so the force": Petroski, Henry (1996). Invention by Design: How Engineers Get from Thought to Thing. Cambridge, MA: Harvard University Press. p. 11. ISBN 978-0674463684.
  2. See http://civil.lindahall.org/design.shtml Archived 2016-03-08 ವೇಬ್ಯಾಕ್ ಮೆಷಿನ್ ನಲ್ಲಿ., where one can find also an anagram for catenary.