ಪೀಡನ-ವಿಕೃತಿ ನಕ್ಷೆ

ಬಲವನ್ನು ಪ್ರಯೋಗಿಸಿದಾಗ ಆಗುವ ವಿರೂಪತೆಯನ್ನು ತೋರಿಸುವ ನಕ್ಷೆ

ಇಂಜಿನಿಯರಿಂಗ್ ಮತ್ತು ಮೆಟೀರಿಯಲ್ ಸೈನ್ಸ್‌ನಲ್ಲಿ, ವಸ್ತುವಿನ ಪೀಡನ-ವಿಕೃತಿ ನಕ್ಷೆ ಪೀಡನ ಮತ್ತು ವಿಕೃತಿ ನಡುವಿನ ಸಂಬಂಧವನ್ನು ನೀಡುತ್ತದೆ. ಇವುಗಳ ನಡುವಿನ ಸಂಬಂಧವನ್ನು ಒಂದು ಪರೀಕ್ಷಾರ್ಥವಾಗಿರುವ ವಸ್ತುವಿಗೆ ಹೊರೆ(ಬಲ)ಯನ್ನು ಕ್ರಮೇಣ ಹೆಚ್ಚಿಸುತ್ತಾ ಮತ್ತು ವಿರೂಪವನ್ನು ಅಳೆಯುವ ಮೂಲಕ ಇದನ್ನು ಪ್ರಯೋಗಾಲಯದಲ್ಲಿ ಕಂಡುಹಿಡಿಯಬಹುದು. ಇದರಿಂದ ಪೀಡನ ಮತ್ತು ವಿಕೃತಿಯನ್ನು ನಿರ್ಧರಿಸಬಹುದು.ಈ ನಕ್ಷೆಯು ಯಂಗ್ ಮಾಪಾಂಕ(ಯಂಗ್ಸ್ ಮಾಡ್ಯುಲಸ್), ಮಣಿಯುವ ಸಾಮರ್ಥ್ಯ(ಯೀಲ್ಡ್ ಪಾಯಿಂಟ್) ಮತ್ತು ಅಂತಿಮ ಕರ್ಷಕ ಸಾಮರ್ಥ್ಯ(ಅಲ್ಟಿಮೇಟ್ ಟೆನ್ಸೈಲ್ ಸ್ಟ್ರೆಂತ್) ಮುಂತಾದ ವಸ್ತುವಿನ ಅನೇಕ ಗುಣಲಕ್ಷಣಗಳನ್ನು ಬಹಿರಂಗಪಡಿಸುತ್ತವೆ.

ಕಡಿಮೆ ಇಂಗಾಲ ಇರುವ ಉಕ್ಕಿ(ಲೊ ಕಾರ್ಬನ್ ಸ್ಟೀಲ್)ನ ಮಾದರಿ ಪೀಡನ-ವಿಕೃತಿ ನಕ್ಷೆ

ನಿರೂಪಣೆ

ಬದಲಾಯಿಸಿ

ಸಾಮಾನ್ಯವಾಗಿ ಹೇಳುವುದಾದರೆ, ಯಾವುದೇ ರೀತಿಯ ವಿರೂಪದಲ್ಲಿ ಪೀಡನ ಮತ್ತು ವಿಕೃತಿಯ ನಡುವಿನ ಸಂಬಂಧವನ್ನು ಪ್ರತಿನಿಧಿಸುವ ನಕ್ಷೆಗಳನ್ನು ಪೀಡನ ಮತ್ತು ವಿಕೃತಿ ನಕ್ಷೆಗಳು ಎಂದು ಪರಿಗಣಿಸಬಹುದು. ಪೀಡನ ಮತ್ತು ವಿಕೃತಿಯು ಲಂಬಿಕ, ವಪನ ಅಥವಾ ಮಿಶ್ರಣವಾಗಿರಬಹುದು, ಏಕಾಕ್ಷೀಯ, ದ್ವಿಅಕ್ಷೀಯ(ಬಯಾಕ್ಸಿಯಲ್) ಅಥವಾ ಬಹುಅಕ್ಷೀಯ(ಬೈಆಕ್ಸಿಯಾಲ್) ಆಗಿರಬಹುದು, ಸಮಯದೊಂದಿಗೆ ಬದಲಾಗಬಹುದು. ವಿರೂಪತೆಯ ರೂಪವು ಸಂಕೋಚನ, ಹಿಗ್ಗಿಸುವಿಕೆ, ತಿರುಚುವಿಕೆ, ತಿರುಗುವಿಕೆ, ಇತ್ಯಾದಿ ಅಗಿರಬಹುದು. ಎನನ್ನೂ ಉಲ್ಲೇಖಿಸದಿದ್ದರೆ, ಪೀಡನ ಮತ್ತು ವಿಕೃತಿ ನಕ್ಷೆಗಳು ಎಂದರೆ, ಎಳೆತದ ಪರೀಕ್ಷೆ(tension test)ಯಲ್ಲಿ ಅಳೆಯಲಾದ ವಸ್ತುಗಳ ಅಕ್ಷೀಯ ಲಂಬಿಕ ಪೀಡನ ಮತ್ತು ಅಕ್ಷೀಯ ಲಂಬಿಕ ವಿಕೃತಿಯ ನಡುವಿನ ಸಂಬಂಧವನ್ನು ಸೂಚಿಸುತ್ತದೆ.

ಇಂಜಿನಿಯರಿಂಗ್ ಪೀಡನ-ವಿಕೃತಿ

ಬದಲಾಯಿಸಿ

ಕೊನೆಯಲ್ಲಿ ಸಮ ಮತ್ತು ವಿರುದ್ಧ ದಿಕ್ಕಿಗೆ ಎಳೆತದ   ಬಲಗಳಿಗೆ ಒಳಪಟ್ಟು ಎಳೆತದಲ್ಲಿರುವ , ಮೂಲ ಅಡ್ಡ ವಿಭಾಗ ಕ್ಷೇತ್ರಫಲ   ‍ ಇರುವ ಒಂದು ಸರಳನ್ನು ಗಮನಿಸಿದಾಗ,

 
 

ಸಬ್‌ಸ್ಕ್ರಿಪ್ಟ್ 0 ಮಾದರಿಯ ಮೂಲ ಆಯಾಮಗಳನ್ನು ಸೂಚಿಸುತ್ತದೆ.ಎಸ್.ಐ.ಯುನಿಟ್‍ನ ಪ್ರಕಾರ 'ಪೀಡನ'ವನ್ನು 'ಪ್ಯಾಸ್ಕಲ್( pascal)' ಎಂಬ ಏಕಮಾನದಲ್ಲಿ ಅಳೆಯುವರು. ಅಂದರೆ, (1 ಪ್ಯಾಸ್ಕಲ್ = 1 Pa = 1 N/m2) ಮತ್ತು 'ವಿಕೃತಿ' ಗೆ ಯಾವುದೇ ಏಕಮಾನ ಇರುವುದಿಲ್ಲ.

ಇವುಗಳನ್ನೂ ಓದಿ

ಬದಲಾಯಿಸಿ

ವಿಕಿಪೀಡಿಯ ಕನ್ನಡ ಲೇಖನಗಳು

ಬದಲಾಯಿಸಿ

*ಪೀಡನ(ಸ್ಟ್ರೆಸ್)

*ವಿರೂಪತೆ(ಡೀಫರ್ಮೇಶನ್)

*ವಿಕೃತ(ಸ್ಟ್ರೈನ್)

*ಹುಕ್‌ನ ನಿಯಮ(ಹುಕ್ಸ್ ಲಾ)

*ಯಂಗ್ ಮಾಪಾಂಕ(ಯಂಗ್ಸ್ ಮಾಡ್ಯುಲಸ್)

ಹೊರಗಿನ ಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ