ವಿರೂಪತೆ

ಇಂಜಿನಿಯರಿಂಗ್‍ನಲ್ಲಿ, ಒಂದು ವಸ್ತುವಿನ ಆಕಾರ ಮತ್ತು ಗಾತ್ರದಲ್ಲಿ ಆಗುವ ಬದಲಾವಣೆಗಳು

ಎಂಜಿನಿಯರಿಂಗ್‌ನಲ್ಲಿ,'ವಿರೂಪತೆ(ಡಿಫರ್ಮೇಶನ್)'ಯು ವಸ್ತುವಿನ ಗಾತ್ರ ಅಥವಾ ಆಕಾರದಲ್ಲಿನ ಬದಲಾವಣೆಯನ್ನು ಸೂಚಿಸುತ್ತದೆ. ಸ್ಥಾನಪಲ್ಲಟಗಳು ವಸ್ತುವಿನ ಮೇಲಿನ ಬಿಂದುವಿನ ಸ್ಥಾನದಲ್ಲಿನ ಸಂಪೂರ್ಣ ಬದಲಾವಣೆಯಾಗಿದೆ. ವಿಚಲನವು ವಸ್ತುವಿನ ಮೇಲಿನ ಬಾಹ್ಯ ಸ್ಥಳಾಂತರಗಳಲ್ಲಿನ ಸಾಪೇಕ್ಷ ಬದಲಾವಣೆಯಾಗಿದೆ. 'ವಿಕೃತ(ಸ್ಟ್ರೈನ್)' ಎನ್ನುವುದು ವಸ್ತುವಿನ ಅಪರಿಮಿತವಾದ ಸಣ್ಣ ಘನದ ಆಕಾರದಲ್ಲಿ ಸಾಪೇಕ್ಷ ಆಂತರಿಕ ಬದಲಾವಣೆಯಾಗಿದೆ ಮತ್ತು ಘನದ ಉದ್ದ ಅಥವಾ ವಿರೂಪತೆಯ ಕೋನದಲ್ಲಿ ಆಯಾಮದ ಬದಲಾವಣೆಯಾಗಿ ವ್ಯಕ್ತಪಡಿಸಬಹುದು. ಪೀಡನ(ಸ್ಟ್ರೆಸ್)- ವಿಕೃತ(ಸ್ಟ್ರೈನ್) ಚಿತ್ರದಿಂದ, 'ವಿಕೃತ(ಸ್ಟ್ರೈನ್)'ಯು ಒತ್ತಡ ಎಂದು ಕರೆಯಲ್ಪಡುವ ಘನದ ಮೇಲೆ ಕಾರ್ಯನಿರ್ವಹಿಸುವ ಶಕ್ತಿಗಳಿಗೆ ಸಂಬಂಧಿಸಿವೆ. ಪೀಡನ ಮತ್ತು ವಿಕೃತ(ಸ್ಟ್ರೈನ್) ನಡುವಿನ ಸಂಬಂಧವು ಸಾಮಾನ್ಯವಾಗಿ ರೇಖೀಯವಾಗಿರುತ್ತದೆ ಮತ್ತು ಮಣಿಯುವ ಬಿಂದು(ಯೀಲ್ಡ್ ಪಾಯಿಂಟ್)ನವರೆಗೆ ವಿರೂಪತೆಯು ಪೂರ್ವಸ್ಥಿತಿಗೆ ತರಬಲ್ಲದ್ದು ಆಗಿದೆ ಮತ್ತು 'ವಿರೂಪತೆ(ಡಿಫರ್ಮೇಶನ್)'ಯು ಸ್ಥಿತಿಸ್ಥಾಪಕವಾಗಿರುವುದು. ವಸ್ತುವಿನ ರೇಖೀಯ ಸಂಬಂಧವನ್ನು 'ಯಂಗ್ಸ್ ಮಾಡ್ಯುಲಸ್' ಎಂದು ಕರೆಯಲಾಗುತ್ತದೆ. ಇಳುವರಿ ಬಿಂದುವಿನ ನಂತರ, ಸ್ವಲ್ಪ ಮಟ್ಟಿಗೆ ಶಾಶ್ವತ ವಿರೂಪತೆವು ಉಳಿಯುವುದು ಮತ್ತು ಇದನ್ನು 'ಪ್ಲಾಸ್ಟಿಕ್ ವಿರೂಪತೆ' ಎಂದು ಕರೆಯಲಾಗುತ್ತದೆ. ಒಂದು ಘನ ವಸ್ತುವಿನ 'ಪೀಡನ' ಮತ್ತು 'ವಿಕೃತ'ವನ್ನು 'ಸ್ಟ್ರೆಂತ್ ಆಪ್ ಮೆಟೀರಿಯಲ್ಸ್' ಎಂಬ ಕ್ಷೇತ್ರದ ಅಧ್ಯಯನದಿಂದ ಮತ್ತು ನಿರ್ಮಿತಿಗಳ ಬಗ್ಗೆ 'ಸ್ಟ್ರಕ್ಚರಲ್ ಅನಾಲಿಸಿಸ್' ಎಂಬ ಎಂಬ ಕ್ಷೇತ್ರದ ಅಧ್ಯಯನದಿಂದ ತಿಳಿಯಬಹುದು.

ಸಂಕೋಚನ ಪೀಡನದ ಫಲಿತಾಂಶವು ವಿರೂಪತೆಯು ಆಗಿರುವುದಲ್ಲದೆ, ವಸ್ತುವನ್ನು ಕುಗ್ಗಿಸುವುದರ ಜತೆಗೆ, ಬಾಹ್ಯವಾಗಿ ದಪ್ಪಗಾಗಿಸುವುದು.

ಇಂಜಿನಿಯರಿಂಗ್ ಪೀಡನ(ಸ್ಟ್ರೆಸ್) ಮತ್ತು ಇಂಜಿನಿಯರಿಂಗ್ ವಿಕೃತ(ಸ್ಟ್ರೈನ್) ಎನ್ನುವುದು ಗಾತ್ರದಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳಿಲ್ಲದಿರುವಾಗ, ಒಂದು ವಸ್ತುವಿನ ಬಾಹ್ಯ ಶಕ್ತಿಗಳು ಮತ್ತು ವಿರೂಪತೆಗಳಿಂದ ನಿರ್ಧರಿಸಬಹುದಾದ ಆಂತರಿಕ ಸ್ಥಿತಿಗೆ ಅಂದಾಜುಗಳು. ಆದರೆ, ಗಾತ್ರದಲ್ಲಿ ಗಮನಾರ್ಹ ಬದಲಾವಣೆಯಾದಾಗ, ವಸ್ತುವಿನ ತತ್ಕ್ಷಣದ ಗಾತ್ರದಿಂದ ನಿಜವಾದ ಪೀಡನ(ಸ್ಟ್ರೆಸ್) ಮತ್ತು ನಿಜವಾದ ವಿಕೃತ(ಸ್ಟ್ರೈನ್) ಪಡೆಯಬಹುದು.

ಸಂಕೋಚನ ಬಾರವು (ಕಂಪ್ರೆಸಿವ್ ಲೋಡಿಂಗ್) (ಬಾಣದಿಂದ ಸೂಚಿಸಲಾಗಿದೆ) ಸಿಲಿಂಡರ್‌ನ ಮೂಲ ಆಕಾರವು (ಡ್ಯಾಶ್ ಮಾಡಿದ ರೇಖೆಗಳು) ಉಬ್ಬುವ ಬದಿಗಳೊಂದಿಗೆ ಬದಲಾಗಿ, ಹೇಗೆ ವಿರೂಪವನ್ನು ಉಂಟುಮಾಡಿದೆ ಎಂದು ಚಿತ್ರದಲ್ಲಿ ನೋಡಬಹುದು. ವಸ್ತುವು ಬಿರುಕುಗೊಳ್ಳದ ಅಥವಾ ವಿಫಲಗೊಳ್ಳುವಷ್ಟು ಪ್ರಬಲವಾಗಿದ್ದರೂ, ವಿರೂಪಗೊಳ್ಳದೆ, ಬಲವನ್ನು ಬೆಂಬಲಿಸುವಷ್ಟು ಬಲವಾಗಿರುವುದಿಲ್ಲವಾದ್ದರಿಂದ ಬದಿಗಳು ಉಬ್ಬುತ್ತವೆ.

ವಿವಿಧ ರೀತಿಯ ವಿರೂಪತೆಗಳು ಬದಲಾಯಿಸಿ

ಶಾಶ್ವತ ವಿರೂಪತೆಯು ಬದಲಾಯಿಸಲಾಗದು; ಅನ್ವಯಿಕ ಬಲಗಳನ್ನು ತೆಗೆದುಹಾಕಿದ ನಂತರವೂ ವಿರೂಪವು ಉಳಿಯುತ್ತದೆ, ಆದರೆ ತಾತ್ಕಾಲಿಕ ವಿರೂಪತೆಯು ಅನ್ವಯಿಕ ಬಲಗಳನ್ನು ತೆಗೆದುಹಾಕಿದ ನಂತರ ಕಣ್ಮರೆಯಾಗುತ್ತದೆ. ತಾತ್ಕಾಲಿಕ ವಿರೂಪವನ್ನು ಸ್ಥಿತಿಸ್ಥಾಪಕ ವಿರೂಪ ಎಂದೂ ಕರೆಯಲಾಗುತ್ತದೆ, ಆದರೆ ಶಾಶ್ವತ ವಿರೂಪವನ್ನು ಪ್ಲಾಸ್ಟಿಕ್ ವಿರೂಪ ಎಂದು ಕರೆಯಲಾಗುತ್ತದೆ.

1% ಕ್ಕಿಂತ ಹೆಚ್ಚಿಗೆ ಇರುವ ಎಂಜಿನಿಯರಿಂಗ್ ವಿರೂಪಗಳಿರುವ ಕೆಲವು ವಸ್ತುಗಳಿಗೆ, ಉದಾ. ಎಲಾಸ್ಟೊಮರ್‌ಗಳು ಮತ್ತು ಪಾಲಿಮರ್‌ಗಳು, ದೊಡ್ಡ ವಿರೂಪಗಳಿಗೆ ಒಳಗಾಗುತ್ತವೆ. ಇವುಗಳಿಗೆ ಎಂಜಿನಿಯರಿಂಗ್ ವ್ಯಾಖ್ಯಾನವು ಅನ್ವಯಿಸುವುದಿಲ್ಲ.[೧]

 
ತನ್ಯತೆ ವಸ್ತುಗಳ ಪೀಡನ-ವಿಕೃತ ಚಿತ್ರ

ಇವುಗಳನ್ನೂ ಓದಿ ಬದಲಾಯಿಸಿ

*ಪೀಡನ(ಸ್ಟ್ರೆಸ್)

*ವಿಕೃತ(ಸ್ಟ್ರೈನ್)

*ಹುಕ್‌ನ ನಿಯಮ(ಹುಕ್ಸ್ ಲಾ)

*ಯಂಗ್ ಮಾಪಾಂಕ(ಯಂಗ್ಸ್ ಮಾಡ್ಯುಲಸ್)

*ಪೀಡನ-ವಿಕೃತಿ ನಕ್ಷೆ(ಸ್ತ್ರೆಸ್-ಸ್ಟೈನ್ ಡಯಾಗ್ರಮ)

ಹೊರಗಿನ ಕೊಂಡಿಗಳು ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. Rees, David (2006). Basic Engineering Plasticity: An Introduction with Engineering and Manufacturing Applications. Butterworth-Heinemann. p. 41. ISBN 0-7506-8025-3. Archived from the original on 2017-12-22.
"https://kn.wikipedia.org/w/index.php?title=ವಿರೂಪತೆ&oldid=1148873" ಇಂದ ಪಡೆಯಲ್ಪಟ್ಟಿದೆ