ಹೀರೋ (ಕ್ರಿ.ಶ. 1ನೆಯ ಶತಮಾನ) ಅಲೆಕ್ಸಾಂಡ್ರಿಯದ ಯಂತ್ರಶಿಲ್ಪಿ ಮತ್ತು ಗಣಿತವಿದ. ಈತನ ಯಂತ್ರ ನಿರ್ಮಿತಿಗಳು ಇಂದಿಗೂ ಬೆರಗು ತರಿಸುವಂತಿವೆ. ನ್ಯೂಮ್ಯಾಟಿಕ್ಸ್ ಎಂಬ ಗ್ರಂಥದಲ್ಲಿ ಇಂದಿನ ಆವಿ ತಿರುಬಾನಿಯ ಪೂರ್ವಜ ಎನ್ನಬಹುದಾದ ಒಂದು ಯಂತ್ರವನ್ನು ವಿವರಿಸಿದ್ದಾನೆ.[೧] ಮೆಕ್ಯಾನಿಕ್ಸ್ ಎಂಬ ಇನ್ನೊಂದು ಗ್ರಂಥದಲ್ಲಿ ಸನ್ನೆ, ಬೆಣೆ, ತಿರುಪು, ರಾಟೆ, ಕಪ್ಪಿ- ಈ ಸರಳ ಯಂತ್ರಗಳ ಉಪಯೋಗವನ್ನು ತಿಳಿಸಿದ್ದಾನೆ. ಜ್ಯಾಮಿತಿ ಕುರಿತು ಈತ ರಚಿಸಿದ ನಾಲ್ಕು ಗ್ರಂಥಗಳು ಉಳಿದಿವೆ. 1896ರಲ್ಲಿ ಕಾನ್‌ಸ್ಟಾಂಟಿನೋಪಲ್‌ನಲ್ಲಿ ಪತ್ತೆಯಾದ ಮೆಟ್ರಿಸಿಯ ಎಂಬ ಗ್ರಂಥದಲ್ಲಿ ತ್ರಿಕೋಣ, ವೃತ್ತ ಮತ್ತು ವೃತ್ತಖಂಡ, ಅಂಡಾಕೃತಿ, ಪರವಲಯ, ಸಿಲಿಂಡರ್, ಶಂಕು, ಗೋಪುರ-ಈ ಆಕೃತಿಗಳ ಲಕ್ಷಣಗಳನ್ನು ವಿವರಿಸಿದ್ದಾನೆ. ಯಾವುದೇ ತ್ರಿಭುಜದ ಸುತ್ತಳತೆ ಕೊಟ್ಟರೆ ಅದರ ವಿಸ್ತೀರ್ಣ ತಿಳಿಸುವ ಸೂತ್ರಕ್ಕೆ ಜ್ಯಾಮಿತೀಯ ಪ್ರಮಾಣ ಒದಗಿಸಿದ್ದಾನೆ.[೨] ದೃಗ್ವಿಜ್ಞಾನದಲ್ಲಿ ಪ್ರತಿಫಲಿಸುವ ಮೇಲ್ಮೈಗಳ ವಿಚಾರವಾಗಿಯೂ ಬರೆದಿದ್ದಾನೆ.

ಹೀರೋನ ೧೭ನೇ ಶತಮಾನದ ಜರ್ಮನ್ ಚಿತ್ರಣ

ಉಲ್ಲೇಖಗಳು

ಬದಲಾಯಿಸಿ
  1. McKinnon, Jamies W. (2001). "Hero of Alexandria and Hydraulis". In Sadie, Stanley; Tyrrell, John (eds.). The New Grove Dictionary of Music and Musicians (2nd ed.). London: Macmillan Publishers. ISBN 978-1-56159-239-5.
  2. Kendig, Keith (2000). "Is a 2000-year-old formula still keeping some secrets?". The American Mathematical Monthly. 107 (5): 402–415. doi:10.1080/00029890.2000.12005213. JSTOR 2695295. MR 1763392. S2CID 1214184.

ಹೊರಗಿನ ಕೊಂಡಿಗಳು

ಬದಲಾಯಿಸಿ


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಹೀರೋ&oldid=1227544" ಇಂದ ಪಡೆಯಲ್ಪಟ್ಟಿದೆ