ರಾಟೆ ಬಿಗಿಯಾದ ಹಗ್ಗದ ಚಲನೆ ಮತ್ತು ದಿಕ್ಕು ಬದಲಾವಣೆಯನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾದ ಅಚ್ಚು ಅಥವಾ ಅಕ್ಷದಂಡದ ಮೇಲಿನ ಒಂದು ಚಕ್ರ. ಆಧಾರವಾಗಿರುವ ಚೌಕಟ್ಟುಗಳನ್ನು ರಾಟೆವ್ಯೂಹಗಳೆಂದು ಕರೆಯಲಾಗುತ್ತದೆ.

ಹಡಗಿನ ರಾಟೆ

ರಾಟೆಯನ್ನು ಗಡೆ ಅಥವಾ ಡ್ರಮ್ಮು ಎಂದೂ ಕರೆಯಬಹುದು ಮತ್ತು ಅದರ ಪರಿಧಿಯ ಸುತ್ತಲಿನ ಎರಡು ಚಾಚುಪಟ್ಟಿಗಳ ನಡುವೆ ತೋಡು ಅಥವಾ ತೋಡುಗಳನ್ನು ಹೊಂದಿರಬಹುದು. ಹಗ್ಗ, ಕೇಬಲ್, ಬೆಲ್ಟ್, ಅಥವಾ ಸರಪಳಿ ರಾಟೆ ವ್ಯವಸ್ಥೆಯ ಚಾಲಕ ಘಟಕವಾಗಿರಬಹುದು ಮತ್ತು ಇದು ರಾಟೆಯ ಮೇಲೆ ತೋಡು ಅಥವಾ ತೋಡುಗಳೊಳಗೆ ಹಾದು ಹೋಗುತ್ತದೆ.

ಭಾರಿ ಬಲಗಳನ್ನು ಪ್ರಯೋಗಿಸುವುದಕ್ಕಾಗಿ ಯಾಂತ್ರಿಕ ಪ್ರಯೋಜನ ಒದಗಿಸಲು ರಾಟೆಗಳನ್ನು ಜೋಡಿಸಿ ರಾಟೆ ವ್ಯವಸ್ಥೆಯನ್ನು ರೂಪಿಸಲಾಗುತ್ತದೆ. ಒಂದು ತಿರುಗುವ ಅಕ್ಷದಂಡದಿಂದ ಮತ್ತೊಂದಕ್ಕೆ ಶಕ್ತಿ ವರ್ಗಾಯಿಸಲು ಬೆಲ್ಟ್ ಮತ್ತು ಸರಪಣಿ ಚಾಲನೆಯ ಭಾಗವಾಗಿಯೂ ರಾಟೆಗಳನ್ನು ಜೋಡಿಸಲಾಗುತ್ತದೆ.[]

ರಾಟೆ ವ್ಯವಸ್ಥೆಯೆಂದರೆ ಜೋಡಿಸಲಾದ ರಾಟೆಗಳ ಸಮೂಹ, ಇದರಿಂದ ಅವು ಒಂದೇ ಅಚ್ಚಿನ ಮೇಲೆ ಸ್ವತಂತ್ರವಾಗಿ ತಿರುಗುತ್ತವೆ. ಒಂದಕ್ಕೆ ಹಗ್ಗ ಜೋಡಿಸಲಾಗಿರುವ ಮತ್ತು ರಾಟೆಗಳ ಎರಡು ಸಮೂಹಗಳ ಮೂಲಕ ಪೋಣಿಸಲಾದ ಎರಡು ರಾಟೆಗಳು ರಾಟೆ ವ್ಯವಸ್ಥೆಯನ್ನು ರೂಪಿಸುತ್ತವೆ.

ರಾಟೆ ವ್ಯವಸ್ಥೆಯನ್ನು ಹೇಗೆ ಜೋಡಿಸಲಾಗುತ್ತದೆ ಎಂದರೆ ಒಂದು ರಾಟೆಯನ್ನು ಸ್ಥಿರ ಕೂರು ಸ್ಥಳಕ್ಕೆ ಜೋಡಿಸಲಾದರೆ ಮತ್ತೊಂದನ್ನು ಚಲಿಸುತ್ತಿರುವ ಭಾರಕ್ಕೆ ಜೋಡಿಸಲಾಗುತ್ತದೆ. ರಾಟೆ ವ್ಯವಸ್ಥೆಯ ಪರಿಪೂರ್ಣ ಯಾಂತ್ರಿಕ ಪ್ರಯೋಜನ ಚಲಿಸುತ್ತಿರುವ ಭಾರವನ್ನು ಆಧರಿಸುವ ಹಗ್ಗದ ಭಾಗಗಳ ಸಂಖ್ಯೆಗೆ ಸಮಾನವಾಗಿರುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Uicker, John; Pennock, Gordon; Shigley, Joseph (2010). Theory of Machines and Mechanisms (4th ed.). Oxford University Press, USA. ISBN 978-0-19-537123-9.


"https://kn.wikipedia.org/w/index.php?title=ರಾಟೆ&oldid=799412" ಇಂದ ಪಡೆಯಲ್ಪಟ್ಟಿದೆ