ವೃತ್ತ (ವರ್ತುಲ) ಒಂದು ಸರಳ ಸಂವೃತ ಆಕಾರ. ಇದು ಒಂದು ಸಮತಲದಲ್ಲಿ, ಕೇಂದ್ರ ಎಂದು ಕರೆಯಲ್ಪಡುವ ಒಂದು ನಿರ್ದಿಷ್ಟ ಬಿಂದುವಿನಿಂದ ನಿರ್ದಿಷ್ಟ ದೂರದಲ್ಲಿರುವ ಎಲ್ಲ ಬಿಂದುಗಳ ಸಮೂಹ; ಸಮಾನ ರೀತಿಯಲ್ಲಿ, ಒಂದು ನಿರ್ದಿಷ್ಟ ಬಿಂದುವಿನಿಂದ ಒಂದು ಸಮತಲದಲ್ಲಿ ಚಲಿಸುವ ಇನ್ನೊಂದು ಬಿಂದುವಿನ ದೂರ ನಿಯತವಾಗಿದ್ದು, ಅದರಿಂದ ಬರೆಯಲ್ಪಟ್ಟ ವಕ್ರರೇಖೆಯಾಗಿದೆ. ಯಾವುದೇ ಬಿಂದುಗಳು ಮತ್ತು ಕೇಂದ್ರದ ನಡುವಿನ ದೂರವನ್ನು ತ್ರಿಜ್ಯ ಎಂದು ಕರೆಯಲಾಗುತ್ತದೆ.

Circle-withsegments.svg

ವೃತ್ತವು ಒಂದು ಸರಳ ಸಂವೃತ ಬಾಗು ಆಗಿದ್ದು ಸಮತಲವನ್ನು ಎರಡು ಪ್ರದೇಶಗಳಾಗಿ ವಿಭಜಿಸುತ್ತದೆ: ಆಂತರಿಕ ಮತ್ತು ಬಾಹ್ಯ ಪ್ರದೇಶಗಳು. ದೈನಂದಿನ ಬಳಕೆಯಲ್ಲಿ, "ವೃತ್ತ" ಪದವನ್ನು ಆಕೃತಿಯ ಗಡಿರೇಖೆಯನ್ನು ಅಥವಾ ಒಳಭಾಗ ಸೇರಿದಂತೆ ಇಡೀ ಆಕೃತಿಯನ್ನು ಸೂಚಿಸಲು ಅದಲುಬದಲಾಗಿ ಬಳಸಿರಬಹುದು; ಕಟ್ಟುನಿಟ್ಟಿನ ತಾಂತ್ರಿಕ ಬಳಕೆಯಲ್ಲಿ, ವೃತ್ತವು ಕೇವಲ ಗಡಿರೇಖೆಯಾಗಿದೆ ಮತ್ತು ಇಡೀ ಆಕೃತಿಯನ್ನು ಬಿಲ್ಲೆ ಎಂದು ಕರೆಯಲಾಗುತ್ತದೆ.

ಬಾಹ್ಯ ಸಂಪರ್ಕಗಳುಸಂಪಾದಿಸಿ

"https://kn.wikipedia.org/w/index.php?title=ವೃತ್ತ&oldid=913363" ಇಂದ ಪಡೆಯಲ್ಪಟ್ಟಿದೆ