ತಿರುಪು
ತಿರುಪು (ಮರಸುತ್ತು, ಸ್ಕ್ರೂ) ಒಂದು ಬಗೆಯ ಬಂಧನಿ, ಮತ್ತು ಕೆಲವು ರೀತಿಗಳಲ್ಲಿ ಬೋಲ್ಟ್‌ನ್ನು ಹೋಲುತ್ತದೆ. ಇದನ್ನು ಸಾಮಾನ್ಯವಾಗಿ ಲೋಹದಿಂದ ತಯಾರಿಸಲಾಗಿರುತ್ತದೆ, ಮತ್ತು ಸುರುಳಿಯಾಕಾರದ ಏಣುಗೆರೆಯನ್ನು ಲಕ್ಷಣವಾಗಿ ಹೊಂದಿರುತ್ತದೆ. ಇದನ್ನು ಗಂಡು ಏಣು (ಬಾಹ್ಯ ಏಣು) ಎಂದು ಕರೆಯಲಾಗುತ್ತದೆ. ತಿರುಗಿಸಿದಾಗ ವಸ್ತುವಿನೊಳಗೆ ತೋಡಿದಂತೆ ಹೋಗಿ ಅಥವಾ ನೂಕಿಕೊಂಡು ಹೋಗಿ ವಸ್ತುಗಳನ್ನು ಭದ್ರಪಡಿಸಲು ತಿರುಪುಗಳನ್ನು ಬಳಸಲಾಗುತ್ತದೆ. ತಿರುಪಿನ ಏಣು ಬಂಧಿಸಿದ ವಸ್ತುವಿನಲ್ಲಿ ತೋಡುಗಳನ್ನು ಕತ್ತರಿಸುತ್ತದೆ, ಮತ್ತು ಇದು ಭದ್ರಪಡಿಸಿದ ವಸ್ತುಗಳನ್ನು ಒಟ್ಟಾಗಿ ತುಯ್ದು ಹೊರ ಎಳೆತವನ್ನು ತಡೆಯುವಲ್ಲಿ ನೆರವಾಗುತ್ತದೆ. ನಾನಾವಿಧದ ವಸ್ತುಗಳಿಗೆ ಅನೇಕ ತಿರುಪುಗಳಿವೆ; ಸಾಮಾನ್ಯವಾಗಿ ತಿರುಪುಗಳಿಂದ ಭದ್ರಪಡಿಸಿದ ವಸ್ತುಗಳಲ್ಲಿ ಕಟ್ಟಿಗೆ, ತಗಡು, ಮತ್ತು ಪ್ಲಾಸ್ಟಿಕ್ ಸೇರಿವೆ.
ವಿವರಣೆ
ಬದಲಾಯಿಸಿತಿರುಪು ಸರಳ ಯಂತ್ರಗಳ ಸಂಯೋಜನೆಯಾಗಿದೆ—ಮೂಲಭೂತವಾಗಿ ಇದು ಕೇಂದ್ರ ಭಾಗದ ಸುತ್ತ ಸುತ್ತಲಾದ ಆನತ ತಲವಾಗಿದೆ, ಆದರೆ ಆನತ ತಲವು (ಏಣು) ಹೊರಭಾಗದ ಸುತ್ತ ಒಂದು ಚೂಪಾದ ಅಂಚನ್ನು ತಲುಪುತ್ತದೆ. ಇದು ಭದ್ರಪಡಿಸಿದ ವಸ್ತುವಿನೊಳಗೆ ನೂಕಿ ಒಳತೂರಿದಾಗ ಬೆಣೆಯಾಗಿ ಕಾರ್ಯನಿರ್ವಹಿಸುತ್ತದೆ, ಮತ್ತು ನಡುಭಾಗ ಹಾಗೂ ಸುರುಳಿಗಳು ಬಿಂದುವಿನ ರೂಪದಲ್ಲಿ ಬೆಣೆಯನ್ನು ಕೂಡ ರೂಪಿಸುತ್ತವೆ.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- How the World Got Screwed
- NASA-RP-1228 Fastener Design Manual
- Imperial/Metric fastening sizes comparison
- "Hold Everything", February 1946, Popular Science" article section on screws and screw fastener technology developed during World War Two
- How to feed screws and dowels