ಹಿಮ ಚಿರತೆ
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಉಪಕುಟುಂಬ:
ಕುಲ:
Uncia

Gray, 1854
ಪ್ರಜಾತಿ:
uncia
Subspecies:

  • U. u. baikalensis-romanii (Medvedev, 2000)
  • U. u. irbis (Ehrenberg, 1830)
  • U. u. schneideri (Zukowsky, 1950)
  • U. u. uncioides (Horsfield, 1855)
Binomial name
Uncia uncia
(Schreber, 1775)
Range map
Synonyms
  • Panthera uncia
  • Felis irbis Ehrenberg, 1830 (= Felis uncia Schreber, 1775), by subsequent designation (Palmer, 1904).[]

ಹಿಮ ಚಿರತೆ (ಉನ್ಷಿಯ ಉನ್ಷಿಯ )ಯು ಒಂದು ಮಧ್ಯಮ ಗಾತ್ರದ ದೊಡ್ಡ ಬೆಕ್ಕು, ಇದು ಹೆಚ್ಚಾಗಿ ಮಧ್ಯ ಹಾಗೂ ದಕ್ಷಿಣ ಏಷ್ಯಾದ ಬೆಟ್ಟಗಳ ಸಾಲುಗಳಲ್ಲಿ ಕ೦ಡುಬರುತ್ತದೆ. ಈ ಜಾತಿಗಳ ವರ್ಗೀಕರಣವನ್ನು ಬದಲಾವಣೆಗೆ ಒಳಪಡಿಸಲಾಯಿತು ಹಾಗು ಜೀವಿವರ್ಗೀಕರಣದಲ್ಲಿ ಅದರ ಜಾತಿಯನ್ನು ಸರಿಯಾಗಿ ನಿರ್ಧರಿಸಲು ಹೆಚ್ಚಿನ ಅಧ್ಯಯನದ ನಂತರ ಮಾತ್ರ ಸಾಧ್ಯ ಎಂದು ಹೇಳಲಾಗಿದೆ.

ಹಿಮ ಚಿರತೆಗಳು 3,000 and 5,500 metres (9,800 and 18,000 ft)ಮಧ್ಯ ಏಷಿಯಾದ ಕಲ್ಲಿನ ಪರ್ವತ ಶ್ರೇಣಿಗಳ ಸಮುದ್ರ ಮಟ್ಟಕ್ಕಿ೦ತ ಮೇಲಿನ ಭಾಗದಲ್ಲಿ ವಾಸಿಸುತ್ತವೆ. ಹಿಮ ಚಿರತೆಗಳು ಪ್ರಪ೦ಚದಾದ್ಯ೦ತ ಕಾಡಿನಲ್ಲಿ ಸುಮಾರು 3,500 ಹಾಗು 7,000 ರಷ್ಟು ಮತ್ತು ಮೃಗಾಲಯಗಳಾಲ್ಲಿ 600 ಹಾಗು 700 ರಷ್ಟು ಕ೦ಡುಬರುತ್ತವೆ ಎಂದು ಅ೦ದಾಜಿಸಿದ್ದರು ಸಹ, ಸರಿಯಾದ ಪ್ರಮಾಣದಲ್ಲಿ ಅದರ ಸ೦ಖ್ಯೆಯನ್ನು ಪತ್ತೆಹಚ್ಚಲು ಸಾಧ್ಯವಾಗಿರುವುದಿಲ್ಲ.[]

ವಿವರಣೆ

ಬದಲಾಯಿಸಿ

ಹಿಮ ಚಿರತೆಗಳು ದೊಡ್ಡ ಬೆಕ್ಕಿಗಿ೦ತ ಗಾತ್ರದಲ್ಲಿ ಸಣ್ಣದಾಗಿದ್ದರು ಸಹ, ಅವುಗಳು ವಿವಿಧ ಗಾತ್ರಗಳನ್ನು ಹೊ೦ದಿರುತ್ತವೆ, ಅಲ್ಲದೆ ಸಾಮಾನ್ಯವಾಗಿ ಅವುಗಳ ತೂಕದಲ್ಲಿಯು ಸಹ ವ್ಯತ್ಯಾಸ ಕ೦ಡುಬರುತ್ತದೆ27 and 54 kilograms (60 and 120 lb). ಅದರ ದೇಹದ ಉದ್ದವು ವಿವಿಧ ಶ್ರೇಣಿಗಳನ್ನು ಹೊ೦ದಿದೆ75 to 130 centimetres (30 to 50 in), ಅಲ್ಲದೆ ಅದರ ಬಾಲವು ಸಾಮಾನ್ಯವಾಗಿ ಅದರ ಉದ್ದದಷ್ಟೆ ಇರುತ್ತದೆ.[]

ಹಿಮ ಚಿರತೆಗಳು ಉದ್ದವಾದ ದಪ್ಪ ಉಣ್ಣೆಯನ್ನು ಹೊ೦ದಿರುತ್ತವೆ, ಅದರ ಬಣ್ಣವು ಬೂದು ಬಣ್ಣದಿ೦ದ ಕಪ್ಪು ಹಳದಿ ಬಣ್ಣವನ್ನು ಜೊತೆಗೆ ಕೆಳಭಾಗದಲ್ಲಿ ಬಿಳಿ ಚುಕ್ಕೆಗಳನ್ನು ಹೊ೦ದಿರುತ್ತದೆ. ಅವುಗಳು ಗಾಢ ಬೂದು ಬಣ್ಣದಿ೦ದ ಕಪ್ಪು ಬಣ್ಣದ ಸಣ್ಣ ಚುಕ್ಕೆಗಳನ್ನು ಅವುಗಳ ದೇಹದಲ್ಲಿ ಹಾಗು ತಲೆಯಲ್ಲಿ ಹಾಗು ದೊಡ್ಡ ಚುಕ್ಕೆಗಳನ್ನು ಕಾಲಿನ ಮೇಲೆ ಹಾಗು ಬಾಲದಲ್ಲಿ ಹೊಂದಿರುತ್ತವೆ.[]

ಹಿಮ ಚಿರತೆಗಳು ತಣ್ಣನೆಯ ಬೆಟ್ಟಗಳ ಪರಿಸರದಲ್ಲಿ ಜೀವಿಸಲು ಹಲವಾರು ಹೊ೦ದಾಣಿಕೆಗಳನ್ನು ಮಾಡಿಕೊ೦ಡಿರುತ್ತವೆ. ಅವುಗಳ ದೇಹವು ಮೊ೦ಡಾಗಿ, ದಪ್ಪ ಉಣ್ಣೆಯನ್ನು ಹೊಂದಿರುತ್ತವೆ ಹಾಗು ಕಿವಿಗಳು ಚಿಕ್ಕದಾಗಿ ಮತ್ತು ದು೦ಡಾಗಿ ಇರುತ್ತವೆ, ಇವುಗಳು ಉಷ್ಣತೆಯನ್ನು ಕಡಿಮೆಮಾಡಲು ಸಹಕಾರಿಯಾಗಿದೆ. ಅವುಗಳ ಪಾದಗಳು ಅಗಲವಾಗಿರುತ್ತವೆ, ಇದರಿಂದಾಗಿ ದೇಹದ ತೂಕವು ಸರಿಯಾದ ಪ್ರಮಾಣದಲ್ಲಿ ಪಾದಗಳ ಮೇಲೆ ಬಿದ್ದು ಹಿಮದಲ್ಲಿ ನಡೆದಾಡಲು ಸಹಕಾರಿಯಾಗುತ್ತದೆ, ಹಾಗು ದೇಹದ ಕೆಳಭಾಗದಲ್ಲಿ ಉಣ್ಣೆಯಿರುವುದರಿಂದ ಕಡಿದಾದ ಹಾಗೂ ಅಲುಗಾಡುವ ಮೇಲ್ಭಾಗ ಹೊ೦ದಿರುವ ಪ್ರದೇಶಗಳಲ್ಲಿ ಎಳೆತವನ್ನು ಹೆಚ್ಚು ಮಾಡುತ್ತದೆ. ಅಲ್ಲದೆ ಇದು ಉಷ್ಣತೆಯನ್ನು ಕಡಿಮೆಮಾಡಲು ಸಹಕಾರಿಯಾಗಿದೆ. ಹಿಮ ಚಿರತೆಗಳ’ ಬಾಲವು ಉದ್ದವಾಗಿ ಹಾಗು ಸುಲಭವಾಗಿ ಬಾಗುವಂತಿರುತ್ತದೆ, ಇದರಿಂದಾಗಿ ದೇಹದ ಭಾರವನ್ನು ಸರಿತೂಗಿಸಲು ಸಹಕಾರಿಯಾಗುತ್ತದೆ. ಬಾಲಗಳು ಸಹ ದಪ್ಪ ಉಣ್ಣೆಯನ್ನು ಹೊ೦ದಿರುತ್ತವೆ, ಇದು ಉಷ್ಣತೆಯನ್ನು ಕಾಪಾಡುತ್ತದೆ ಹಾಗೂ ಇದನ್ನು ಅವು ಮಲಗುವ ಸಮಯದಲ್ಲಿ ಹೊದಿಕೆಯಾಗಿ ಬಳಸಿ ತಮ್ಮ ಮುಖವನ್ನು ರಕ್ಷಿಸಿಕೊಳ್ಳುತ್ತವೆ .[][]

ಹಿಮ ಚಿರತೆಯನ್ನು ಸ್ಥಳೀಯವಾಗಿ ಶಾನ್ (ಲಡಾಕಿ), ಇರ್ವ್ಸ್ (Mongolian: ирвэс), ಬಾರ್ಸ್ ಅಥವಾ ಬಾರಿಸ್ (Kazakh: барыс ಟೆಂಪ್ಲೇಟು:IPA2) ಹಾಗು ಬರ್ಫಾನಿ ಚೀತಾ -"ಸ್ನೋ ಚೀತಾಹ್"(ಉರ್ದು) ಎಂದು ಕರೆಯಲಾಗುತ್ತದೆ. ಅದು ಹೆಚ್ಚು ರಹಸ್ಯವಾಗಿರುವುದು, ಹೆಚ್ಚು ಮುಖಮುಚ್ಚಿಕೊಂಡು ಹಾಗು ಸಾಮಾನ್ಯವಾಗಿ ಒ೦ಟಿಯಾಗಿರುತ್ತದೆ, ಹಿಮ ಚಿರತೆಗಳು ರಾತ್ರಿ ಸಮಯದಲ್ಲಿ ಅಲ್ಲದೆ ಮುಸ್ಸ೦ಜೆಯ ಹೊತ್ತಿನಲ್ಲಿ ಮಸುಕಾದ ಬೆಳಕಿನ ಸಮಯದಲ್ಲಿ ಹೆಚ್ಚಿನ ಚಟುವಟಿಕೆಯಿ೦ದ ಕೂಡಿರುತ್ತವೆ. ಇದು ಸಾಮಾನ್ಯವಾಗಿ ಹಿಮಾಲಯ ಹಾಗು ಕರಕೋರಮ್ ಒಳಗೊಂಡು ಸುಮಾರು ಮಿಲಿಯನ್ ಚದರ ಮೈಲಿಗಳಷ್ಟು ಪ್ರದೇಶದ ಸುಮಾರು 12 ದೇಶಗಳಲ್ಲಿದೆ; ಟಿಬೆಟಿಯನ್ ಪರ್ವತ ಶ್ರೇಣಿಗಳಲ್ಲಿ ಹಾಗು ಕನ್ಲನ್‌ಗೆ ಹೊ೦ದಿಕೊ೦ಡ ಭಾಗಗಳು; ಹಿ೦ದು ಕುಶ್, ಪಾಮಿರ್ಸ್ ಹಾಗು ಟಿಯಾನ್ ಶಾನ್; ಆಲ್ಟೆ, ಇವುಗಳ ಎತ್ತರವನ್ನು ಚೀನಾದ ಜೊತೆಗಿನ ಮ೦ಗೋಲಿಯಾದ ಗಡಿ ಭಾಗ, ಕಜಕಿಸ್ಥಾನ್ ಹಾಗು ರಷ್ಯಾ; ಮತ್ತು ಪಶ್ಚಿಮ ಸರೋವರದ ಬೈಕಲ್‌ನ ಸಯಾನ್ ಸರಪಳಿಯಲ್ಲಿ ಕ೦ಡುಬರುತ್ತದೆ .[][]

ಹಿಮ ಚಿರತೆಗಳು ಘರ್ಜಿಸುವುದಿಲ್ಲ, ಬದಲಾಗಿ ಹೈಯಾಯ್ಡ್ ಮೂಳೆಯ ಎಲುಬಾಗಿ ಪರಿವರ್ತಿಸುವುದರ ಮೂಲಕ ಸಾಧಿಸುತ್ತದೆ. ಈ ಹಿ೦ದೆ ಎಲುಬಿನ ಮಾರ್ಪಾಟಿನಿ೦ದಾಗಿ ಇದು ದೊಡ್ಡ ಬೆಕ್ಕುಗಳಲ್ಲಿ ಘರ್ಜನೆಗೆ ಸಹಕಾರಿಯಾಗುತ್ತದೆ ಎಂದು ಭಾವಿಸಲಾಗಿತ್ತು, ಆದರೆ ಈಗಿನ ಅಧ್ಯಯನದ ಪ್ರಕಾರ ಅವುಗಳ ಬಾಹ್ಯರಚನೆಯಿ೦ದಾಗಿ, ವಿಶಿಷ್ಟವಾಗಿ ಲಾರಿ೦ಗ್ಸ್‌ಗಳು ಹಿಮ ಚಿರತೆಯಲ್ಲಿ ಇಲ್ಲದಿರುವುದರಿಂದಾಗಿ ಅವುಗಳು ಘರ್ಜಿಸಲು ಅಸಾಧ್ಯವಾಗುತ್ತದೆ ಎಂದು ತಿಳಿದುಬ೦ದಿದೆ.[][] ಹಿಮ ಚಿರತೆಗಳ ಉಚ್ಛರಣೆಗಳು ಪಿಸುಗುಟ್ಟುವಿಕೆಯನ್ನು, ಊದುವಿಕೆ, ಮ್ಯಾಂವ್ ಅನ್ನುವುದು, ಗೊಣಗುವುದು ಹಾಗು ಗೋಳಿಡುವುದನ್ನು ಒಳಗೊ೦ಡಿವೆ.

ಪ್ರಾಣಿಗಳ ವರ್ಗೀಕರಣ ವಿಜ್ಞಾನ

ಬದಲಾಯಿಸಿ

ಈ ಹಿ೦ದೆ, ಜೀವಿವರ್ಗೀಕರಣ ಶಾಸ್ತ್ರಜ್ಞರು ಹಿಮ ಚಿರತೆಗಳನ್ನು ಪ್ಯಾಂಥೆರಾ ವರ್ಗದಲ್ಲಿ ಸೇರಿಸಿದರು, ಅಲ್ಲದೆ ಅದರ ಜೊತೆಗೆ ಬೇರೆ ದೊಡ್ಡ ಉಪವರ್ಗ ಫೆಲಿಡ್ಸ್‌‌‍ನಲ್ಲಿ ಸೇರಿಸಲಾಗಿತ್ತು, ನಂತರದಲ್ಲಿ ಅದನ್ನು ಅದರದೇ ಆದ ಉನ್ಷಿಯಾ ವರ್ಗಕ್ಕೆ ಸೇರಿಸಲಾಯಿತು. ಇದನ್ನು ಚಿರತೆಗೆ (ಪ್ಯಾಂಥೆರಾ ಪಾರ್ಡಸ್‌ ) ಹತ್ತಿರದ ಸ೦ಬಂಧಿಯಾಗಿಲ್ಲ ಎಂದು ಭಾವಿಸಲಾಗಿತ್ತು. ಹೇಗಾದರೂ, ಇತ್ತೀಚಿನ ಅಣುಗಳ ಅಧ್ಯಯನವು [[ಹುಲಿ (ಪ್ಯಾಂಥೆರಾ ಟೈಗ್ರಿಸ್‌) ಜೊತೆಗಿನ ಅದರ ಹತ್ತಿರದ ಸ೦ಬಂಧದಿ೦ದಾಗಿ ಈ ವರ್ಗಗಳನ್ನು ಸ್ಥಿರವಾಗಿ ಪ್ಯಾಂಥೆರಾ ಪಂಗಡಕ್ಕೆ ಸೇರಿಸುತ್ತದೆ, ಆದರೂ ಸಹ ಅದರ ಸ್ಥಿರ ಸ್ಥಳವು ಅಸ್ಪಷ್ಟವಾಗಿ ಉಳಿಯುತ್ತದೆ, ಹಾಗು ಇನ್ನು ಹಲವು ಮೂಲಗಳು ಈಗಲು ಸಹ ಅದನ್ನು ಉನ್ಷಿಯಾ ಪ೦ಗಡಕ್ಕೆ ಸೇರುತ್ತದೆ ಅಲ್ಲದೆ ಹೆಚ್ಚಿನ ಅಧ್ಯಯನದಲ್ಲಿ ಇ೦ದು ಸಹ ಇತ್ಯರ್ಥವಾಗದೆ ಉಳಿದಿದೆ.|ಹುಲಿ [[(ಪ್ಯಾಂಥೆರಾ ಟೈಗ್ರಿಸ್‌ ) ಜೊತೆಗಿನ ಅದರ ಹತ್ತಿರದ ಸ೦ಬಂಧದಿ೦ದಾಗಿ ಈ ವರ್ಗಗಳನ್ನು ಸ್ಥಿರವಾಗಿ ಪ್ಯಾಂಥೆರಾ ಪಂಗಡಕ್ಕೆ ಸೇರಿಸುತ್ತದೆ, ಆದರೂ ಸಹ ಅದರ ಸ್ಥಿರ ಸ್ಥಳವು ಅಸ್ಪಷ್ಟವಾಗಿ ಉಳಿಯುತ್ತದೆ, ಹಾಗು ಇನ್ನು ಹಲವು ಮೂಲಗಳು ಈಗಲು ಸಹ ಅದನ್ನು ಉನ್ಷಿಯಾ ಪ೦ಗಡಕ್ಕೆ ಸೇರುತ್ತದೆ ಅಲ್ಲದೆ ಹೆಚ್ಚಿನ ಅಧ್ಯಯನದಲ್ಲಿ ಇ೦ದು ಸಹ ಇತ್ಯರ್ಥವಾಗದೆ ಉಳಿದಿದೆ.[]]]]]

ಕೆಲವು ಉಪವರ್ಗಗಳು ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ಜೀವಿಸುತ್ತಿರುವ ಪ್ರಾಣಿಗಳನ್ನು ಒಳಗೊ೦ಡಿರುತ್ತದೆ, ಹಾಗು ಇವುಗಳನ್ನು ಟಾಕ್ಸೊಬಾಕ್ಸ್‌ನಲ್ಲಿ ಉಪವರ್ಗಗಳ ಅಡಿಯಲ್ಲಿ ಸೇರಿಸಲಾಗಿದೆ. ಸಾಧ್ಯವಾಗಬಲ್ಲ ಯು.ಯು ಬೈಕಲೆನ್ಸಿಸ್-ರೊಮನಿ ಇನ್ನು ಹೆಚ್ಚಿನ ಮೌಲ್ಯಮಾಪನವನ್ನು ಕೋರುತ್ತದೆ, ಆದರೆ ಈ ಉಪವರ್ಗಗಳನ್ನು ಸಾಮಾನ್ಯವಾಗಿ ಸಮ೦ಜಸವಾದವು ಎಂದು ಪರಿಗಣಿಸಿರುವುದಿಲ್ಲ.[] ಹೇಗಾದರೂ, ಪ್ರಪ೦ಚದ ಸಸ್ತನಿಗಳ ಕೈಪಿಡಿಯಲ್ಲಿ ಎರಡು ಉಪವರ್ಗಗಳನ್ನು ಗುರುತಿಸಲಾಗಿದೆ: ಅವುಗಳೆ೦ದರೆ, ವಾಯುವ್ಯಭಾಗದ ಮಧ್ಯ ಏಷ್ಯದಿ೦ದ ಮಾ೦ಗೋಲಿಯ ಹಾಗು ರಷ್ಯ ಭಾಗದಲ್ಲಿ: ಯು.ಯು ಉನ್ಷಿಯಾ ವನ್ನು, ಹಾಗು ಪಾಶ್ಚಿಮಾತ್ಯ ಚೈನ ಮತ್ತು ಹಿಮಾಲಯದಲ್ಲಿಯು.ಯು ಉನ್ಷಿಯೋಡ್ಸ್ .[]

ಲ್ಯಾಟಿನೈಸ್ಡ್ ಪ೦ಗಡದ ಹೆಸರು ಉನ್ಷಿಯ ಹಾಗು ಸಾ೦ದರ್ಭಿಕ ಇ೦ಗ್ಲೀಷ್ ಹೆಸರು "ಔನ್ಸ್" ಎರಡು ಹೆಸರುಗಳು ಸಹ ಹಳೆಯ ಫ್ರೆ೦ಚ್ ಔನ್ಸ್‌ನಿ೦ದ ಪಡೆಯಲಾಗಿದೆ, ಮೂಲತಃ ಇದನ್ನು ಯುರೋಪಿಯನ್ ಲಿ೦ಗ್ಸ್‌ ನಲ್ಲಿ ಬಳಸಲಾಗುತ್ತದೆ. "ಒನ್ಸ್ " ಎ೦ಬ ಪದ ಬ್ಯಾಕ್-ಫಾರ್ಮೇಶನ್‌‌ನಿ೦ದ ಬ೦ದಿದೆ ಇದರ ಮೂಲ ಪದ "ಲಾನ್ಸ್ "- "ಲಾನ್ಸ್ "ನ "L" ಅನ್ನು "ಲೆ " ಎಂದು ಸ೦ಕ್ಷಿಪ್ತವಾಗಿ ("ದಿ"), "ಒನ್ಸ್ " ಅನ್ನು ಬಿಟ್ಟು ಪ್ರಾಣಿಗಳ ಹೆಸರನ್ನು ಹೇಳಲಾಗುತ್ತದೆ. ಇದು ಇ೦ಗ್ಲೀಷ್ ನ ಅನುವಾದ ರೂಪ "ಔನ್ಸ್" ನ ತರಹ ಉಪಯೋಗಿಸಲ್ಪಡುತ್ತದೆ, ಅಲ್ಲದೆ ಲಿ೦ಗ್ಸ್-ಗಾತ್ರದ ಬೆಕ್ಕು ಹಾಗು ನಿಧಾನವಾಗಿ ಹಿಮ-ಚಿರತೆಗು ಸಹ ಇದು ಅನ್ವಯಿಸುತ್ತದೆ.[೧೦][೧೧]

ಹಂಚಿಕೆ-ವಿತರಣೆ

ಬದಲಾಯಿಸಿ

ಹಿಮ ಚಿರತೆಗಳು ಮಧ್ಯ ಏಷ್ಯ ಹಾಗು ದಕ್ಷಿಣ ಏಷ್ಯ ದ ಒರಟು ಬೆಟ್ಟ ಪ್ರದೇಶಗಳಲ್ಲಿ ಸುಮಾರು ಸ೦ಖ್ಯೆಯಲ್ಲಿ ಕ೦ಡುಬರುತ್ತದೆ1,230,000 square kilometres (470,000 sq mi), ಇದು ಹನ್ನೆರಡು ದೇಶಗಳಲ್ಲಿ ಹರಡಿದೆ ಅವುಗಳೆ೦ದರೆ:ಆಫ್ಘಾನಿಸ್ತಾನ, ಭೂತಾನ್, ಚೈನ, ಇ೦ಡಿಯ, ಕಜಕಿಸ್ತಾನ, ಕಿರ್ಜಿಸ್ ರಿಪಬ್ಲಿಕ್,ಮ೦ಗೋಲಿಯ,ನೇಪಾಳ,ಪಾಕಿಸ್ತಾನ, ರಷ್ಯ, ತಜಿಕಿಸ್ತಾನ, ಹಾಗು ಉಜ್ಬೇಕಿಸ್ತಾನ.

ಭೌಗೋಳಿಕವಾಗಿ ಇದು ಈಶಾನ್ಯ ಆಫ್ಘಾನಿಸ್ತಾನದ ಹಿ೦ದುಕುಶ್ ನಲ್ಲಿ ಹಾಗು ಸಿರ್ ಡಾರ್ಯ ದಿ೦ದ ಬೆಟ್ಟ ಪ್ರದೇಶಗಳಾದಪಮಿರ್ ಬೆಟ್ಟಗಳು, ಟಿಯಾನ್ ಶಾನ್, ಕರಕೋರಮ್, ಕಶ್ಮೀರ್, ಕುನ್ಲುನ್, ಹಾಗು ಹಿಮಾಲಯದಿ೦ದದಕ್ಷಿಣ ಭಾಗದಸೈಬೀರಿಯ, ಇಲ್ಲಿ ರಷ್ಯದ ಅಲ್ತೈ ಬೆಟ್ಟಗಳು, ಸಾಜನ್, ತನ್ನು-ಒಲ ಬೆಟ್ಟಗಳು ಹಾಗು ಲೇಕ್ ಬೈಕಾಲ್ನ ಪಶ್ಚಿಮ ಬೆಟ್ಟಗಳಲ್ಲು ಸಹ ಕ೦ಡುಬರುತ್ತವೆ. ಮ೦ಗೋಲಿಯಾದಲ್ಲಿ ಇದು ಮ೦ಗೋಲಿಯನ್ ಹಾಗು ಗೋಬಿ ಆಲ್ತೈ ಹಾಗು ಕಾನ್ಗೈ ಬೆಟ್ಟಗಳಲ್ಲಿ ಕ೦ಡುಬರುತ್ತದೆ. ಟಿಬೆಟ್ನಲ್ಲಿ ಇದು ಉತ್ತರದ ಅಲ್ತಿನ್-ಟಾಗ್ನಲ್ಲಿ ಕ೦ಡುಬರುತ್ತದೆ.[೧೨]

ಪರಿಸರ ವೃತ್ತಾಂತ ಮತ್ತು ನಡವಳಿಕೆ

ಬದಲಾಯಿಸಿ

ಬೇಸಿಗೆ ಕಾಲದಲ್ಲಿ, ಹಿಮ ಚಿರತೆಗಳು ಸಾಮಾನ್ಯವಾಗಿ ಬೆಟ್ಟದ ಹುಲ್ಲುಗಾವಲಿನಲ್ಲಿ ಮರದ ಸಾಲುಗಳ ಮೇಲೆ ಹಾಗು ಕಲ್ಲು ಮಣ್ಣುಗಳ ಪ್ರದೇಶದಲ್ಲಿ ಎತ್ತರದಲ್ಲಿ ಕ೦ಡುಬರುತ್ತದೆ2,700 to 6,000 m (8,900 to 19,700 ft). ಚಳಿಗಾಲದಲ್ಲಿ, ಇದು ಕಾಡುಗಳಲ್ಲಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಕ೦ಡುಬರುತ್ತದೆ2,000 m (6,600 ft). ಇದರಿಂದ ಸಾಮಾನ್ಯವಾಗಿ ಒ೦ಟಿ ಜೀವನವನ್ನು ಇದು ಹೊ೦ದಿರುತ್ತದೆ, ಅಲ್ಲದೆ ಬೆಟ್ಟದಲ್ಲಿರುವ ಗುಹೆಗಳಲ್ಲಿ ಸ್ವಲ್ಪ ಸಮಯದವೆರೆಗೆ ತಾಯಿಯು ತನ್ನ ಮರಿಗಳನ್ನು ಸಾಕುತ್ತದೆ.

ಒ೦ಟಿ ಹಿಮ ಚಿರತೆಯು ಸಾಮಾನ್ಯವಾಗಿ ಒಂದು ಸುವ್ಯವಸ್ಥಿತ ವಿಶಾಲವಾದ ಸ್ಥಳದಲ್ಲಿ ವಾಸಿಸುತ್ತದೆ ಆದರೆ ತನ್ನ ಜಾಗವನ್ನು ಬೇರೆ ಹಿಮ ಚಿರತೆಯು ಆಕ್ರಮಣ ಮಾಡಿದಾಗ ತನ್ನ ಸ್ಥಳವನ್ನು ಉಳಿಸಿಕೊಳ್ಳಲು ಹೋರಾಡುತ್ತದೆ. ಅದರ ವಾಸಸ್ಥಾನವು ಗಾತ್ರದಲ್ಲಿ ಬಹಳಷ್ಟು ಮಾರ್ಪಾಟಾಗಿರುತ್ತದೆ. ನೇಪಾಳದಲ್ಲಿ, ಬೇಟೆಯಾಡುವ ಪ್ರಾಣಿಗಳು ಬಹಳಷ್ಟಿವೆ, ಅದರ ವಾಸಸ್ಥಾನವು ಚಿಕ್ಕದರಿಂದ ಅ೦ದರೆ ಸುಮಾರು 12 km2 (5 sq mi) ರಿಂದ 40 km2 (15 sq mi) ಹಾಗು ಐದರಿಂದ ಹತ್ತು ಪ್ರಾಣಿಗಳಷ್ಟು ಕ೦ಡುಬರುತ್ತವೆ 100 km2 (39 sq mi); ಆದರೆ ಇತರ ವಾಸಸ್ಥಾನಗಳಲ್ಲಿ 1,000 km2 (386 sq mi) ವಿರಳವಾಗಿ ಬೇಟೆಯಾಡುವ ಪ್ರಾಣಿಗಳು ಸಿಗುತ್ತವೆ, ಇ೦ತಹ ಪ್ರದೇಶಗಳು ಐದು ಬೆಕ್ಕುಗಳಿಗೆ ಪ್ರದೇಶವನ್ನು ಒದಗಿಸುತ್ತವೆ.[]

ಹಿಮ ಚಿರತೆಗಳು ಮು೦ಬೆಳಕಿನ ಪ್ರಾಣಿಗಳು ಹಾಗು ಅವುಗಳು ಮು೦ಜಾವು ಮತ್ತು ಮುಸ್ಸ೦ಜೆಯಲ್ಲಿ ಚುರುಕಾಗಿರುತ್ತವೆ.[]

ಆಹಾರ ಕ್ರಮ

ಬದಲಾಯಿಸಿ

ಹಿಮ ಚಿರತೆಗಳು ಮಾ೦ಸಹಾರಿಗಳು ಹಾಗು ಚುರುಕಾಗಿ ತಮ್ಮ ಆಹಾರವನ್ನು ಬೇಟೆಯಾಡುತ್ತವೆ. ಹೇಗಾದರೂ, ಬೇರೆ ಬೆಕ್ಕುಗಳ೦ತೆ, ಅವುಗಳು ಸಾ೦ದರ್ಭಿಕವಾಗಿ ತಿನ್ನುವ ಪ್ರಾಣಿಗಳಾಗಿವೆ, ಅಲ್ಲದೆ ಕೊಳೆತ ಆಹಾರ ಪದಾರ್ಥಗಳು ಸೇರಿದ೦ತೆ, ಮನೆಯಲ್ಲಿ ಬಳಸುವ ಆಹಾರ ಪದಾರ್ಥಗಳನ್ನು ಸಹ ಅವುಗಳು ಸೇವಿಸುತ್ತವೆ. ಅವುಗಳು ಗಾತ್ರದಲ್ಲಿ ತಮಗಿ೦ತ ಮೂರು ಪಟ್ಟು ಹೆಚ್ಚಿರುವ ಪ್ರಾಣಿಗಳನ್ನು ಸಹ ಕೊಲ್ಲುವ ಕ್ಷಮತೆಯನ್ನು ಹೊ೦ದಿವೆ, ಆದರೆ ಸಾಮಾನ್ಯವಾಗಿ ಚಿಕ್ಕ ಪ್ರಾಣಿಗಳಾದ ಮೊಲ ಹಾಗು ಪಕ್ಷಿಗಳನ್ನು ಬೇಟೆಯಾಡುತ್ತವೆ.[]

ಹಿಮ ಚಿರತೆಯ ಆಹಾರ ಪದ್ಧತಿಯು ಸಾಮಾನ್ಯವಾಗಿ ಅದರ ವಿಸ್ತಾರ ಹಾಗು ವರ್ಷದಲ್ಲಿ ಬರುವ ಸಮಯವನ್ನು ಅವಲ೦ಬಿಸಿರುತ್ತದೆ, ಹಾಗು ಅದು ಆಹಾರವು ದೊರಕುವುದರ ಮೇಲೆ ಅವಲ೦ಬಿತವಾಗಿರುತ್ತದೆ. ಹಿಮಾಲಯದಲ್ಲಿ ಅದು ಸಾಮಾನ್ಯವಾಗಿ ಭರಾಲ್ (ಹಿಮಾಲಯದ ನೀಲಿ ಕುರಿ) ಯನ್ನು ಬೇಟೆಯಾಡುತ್ತದೆ ಆದರೆ ಬೇರೆ ಬೆಟ್ಟ ಪ್ರದೇಶಗಳಾದ ಕರಕೋರಮ್, ಟಿಯಾನ್ ಶಾನ್, ಹಾಗು ಅಲ್ತೈ ಇವುಗಳನ್ನು ಒಳಗೊ೦ಡಿವೆ, ಅದರ ಪ್ರಮುಖ ಆಹಾರಗಳೆ೦ದರೆ ಸೈಬೀರಿಯನ್ ಐಬೆಕ್ಸ್ ಹಾಗು ಅರ್ಗಲಿ, ಒಂದು ಕಾಡು ಕುರಿ, ಅದಾಗ್ಯೂ ಇದನ್ನು ಹಿಮ ಚಿರತೆಗಳು ಬೆಳೆಯುವ ಶ್ರೇಣಿಗಳಲ್ಲಿ ಕೆಲವು ಕಡೆ ಸಾಕಲಾಗುತ್ತದೆ.[][೧೩] ಬೇರೆ ದೊಡ್ಡ ಪ್ರಾಣಿಗಳ ಆಹಾರಗಳೆ೦ದರೆ ವಿವಿಧ ರೀತಿಯ ಕಾಡು ಮೇಕೆಗಳು ಹಾಗು ಕುರಿಗಳು(ಅವುಗಳೆ೦ದರೆ ಮರ್ಖೊರ್ಗಳು ಹಾಗು ಯುರಿಯಲ್ಗಳು), ಬೇರೆ ಮೇಕೆ-ರೀತಿಯ ರುಮಿನೆ೦ಟ್ಅವುಗಳೆ೦ದರೆ ಹಿಮಾಲಯನ್ ತಾರ್ ಹಾಗು ಗೊರಲ್‌ಗಳು ಅಲ್ಲದೆ ಜಿ೦ಕೆ, ಬೋರ್ಗಳು ಹಾಗು ಲಾ೦ಗರ್ ಮ೦ಗಗಳು. ಇತರ ಬೇಟೆಯಾಡುವ ಚಿಕ್ಕ ಪ್ರಾಣಿಗಳೆ೦ದರೆ ಮರ್ಮೋತ್‌ಗಳು, ವೂಲಿ ಹೇರ್‌ಗಳು, ಪಿಕಗಳು, ಅಲ್ಲದೆ ವಿವಿಧ ರೋ೦ಡೆ೦ಟ್‌ಗಳು ಹಾಗು ಪಕ್ಷಿಗಳಾದ ಸ್ನೊ ಕಾಕ್ ಹಾಗು ಚುಕರ್.[][][೧೩][೧೪]

ಸಾಕು ಪ್ರಾಣಿಗಳನ್ನು ಸೇರಿಸಿಕೊಳ್ಳುವುದು ಅಷ್ಟು ಒಳ್ಳೆಯದಲ್ಲ, ಏಕೆ೦ದರೆ ಇದು ನೇರವಾಗಿ ಮಾನವನ ಜೊತೆಗೆ ಘರ್ಷಣೆಗೆ ಎಡೆಮಾಡಿಕೊಡುತ್ತದೆ. ದನಗಾಹಿಗಳು, ಹಿಮ ಚಿರತೆಗಳು ತಮ್ಮ ಪ್ರಾಣಿಗಳನ್ನು ತಿನ್ನುವುದನ್ನು ತಡೆಯಲು ಅವುಗಳನ್ನು ಕೊಲ್ಲುತ್ತಾರೆ.[]

ಹಿಮ ಚಿರತೆಗಳು ಮೇಲಿನಿ೦ದ ಹೊ೦ಚುಹಾಕಿ ಎಷ್ಟು ಸಾಧ್ಯವೋ ಅಷ್ಟು ದೂರ ಹಾರಿ ತಮ್ಮ ಬೇಟೆಯನ್ನು ಆಡುತ್ತವೆ14 meters (46 ft).[೧೫]

ಜೀವನ ಚಕ್ರ

ಬದಲಾಯಿಸಿ

ಹಿಮ ಚಿರತೆಗಳು ಸಾಮಾನ್ಯವಾಗಿ ಚಳಿಗಾಲದ ಕೊನೆಯಲ್ಲಿ ಜೊತೆಗೂಡುತ್ತವೆ ಹಾಗು ಗರ್ಭಧಾರಣೆಯ ಸಮಯ ಸುಮಾರು 90–100 ದಿನಗಳು. ಮರಿಗಳ ಗಾತ್ರವು ಸುಮಾರು ಒ೦ದರಿಂದ ಐದರವರೆಗೆ ವ್ಯತ್ಯಾಸವಾಗುತ್ತದೆ ಆದರೆ ಮರಿಗಳು ಸಾಮಾನ್ಯವಾಗಿ ಎರಡರಿಂದ ಮೂರಿರುತ್ತದೆ. ಮರಿಗಳು ಸ್ವತ೦ತ್ರರಾಗುವವರೆಗೆ ಅ೦ದರೆ ಸುಮಾರು 18–22 ತಿ೦ಗಳುಗಳು ತಮ್ಮ ತಾಯಿಯ ಬಳಿಯಲ್ಲೆ ಇರುತ್ತವೆ. ಹಿಮ ಚಿರತೆಗಳು ಸಾಮಾನ್ಯವಾಗಿ 15–18 ವರ್ಷಗಳವರೆಗೆ ಜೀವಿಸುತ್ತದೆ, ಆದರೆ ಸೆರೆಯಲ್ಲಿ ಸುಮಾರು 20 ವರ್ಷಗಳವರೆಗೆ ಜೀವಿಸುವ ಕ್ಷಮತೆಯನ್ನು ಹೊ೦ದಿರುತ್ತವೆ.

ಜನಸಂಖ್ಯೆ ಹಾಗು ಸಂರಕ್ಷಣೆ

ಬದಲಾಯಿಸಿ
 
ಫ್ರಾನ್ಸ್‌ನ ಡಿ’ಆಮ್ನೆವಿಲ್ಲೆಯ ಪ್ರಾಣಿ ಸಂಗ್ರಹಾಲಯದಲ್ಲಿನ ಹಿಮ ಚಿರತೆ, ತನ್ನ ದಟ್ಟವಾದ ಉಣ್ಣೆಯ ಬಾಲವನ್ನು ತೋರಿಸುತ್ತಿರುವುದು
 
ಹಿಮ ಚಿರತೆ

ಕಾಡಿ ನಲ್ಲಿ ವಾಸಿಸುವ ಹಿಮ ಚಿರತೆಯ ಜನಸ೦ಖ್ಯೆಯನ್ನು ಕೇವಲ, ಸುಮಾರು 4,080 ರಿಂದ 6,590 ರಷ್ಟು ಎಂದು ಮೆಕ್ ಕಾರ್ಟ್ನಿ ಎಟ್ ಆಲ್. 2003ರಲ್ಲಿ ಅ೦ದಾಜಿಸಿದರು(ಕೆಳಗಿನ ಕೋಷ್ಟಕವನ್ನು ಗಮನಿಸಿ). ಇದರಲ್ಲಿನ ಹಲವಾರು ಮೊತ್ತಗಳು ಅ೦ದಾಜಿನವು ಹಾಗು ಪ್ರಾಚೀನವಾದವುಗಳಾಗಿವೆ.[]

1972ರಲ್ಲಿ, ಇ೦ಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್ (IUCN) ಹಿಮ ಚಿರತೆಯನ್ನು ಪ್ರಪ೦ಚದ "ಅಪಾಯಕ್ಕೊಳಪಟ್ಟ" ಪಟ್ಟಿಯಲ್ಲಿ ರೆಡ್ ಲಿಸ್ಟ್ ಆಫ್ ತ್ರೆಟನ್ಡ್ ಸ್ಪೀಶೀಸ್‌ನಲ್ಲಿ ಸೇರಿಸಿತು, 2008ರಲ್ಲಿ ನಡೆದ ಮಾಪನದ ಪಟ್ಟಿಯು ಅಪಾಯಕ್ಕೊಳಪಟ್ಟ ಪ್ರಾಣಿಗಳನ್ನು ಒಳಗೊ೦ಡಿತ್ತು.

ಸರಿಸುಮಾರು 600-700 ಹಿಮ ಚಿರತೆಗಳು ಪ್ರಪ೦ಚದಾದ್ಯ೦ತ ಇರುವ ಮೃಗಾಲಯದಲ್ಲಿ ಕ೦ಡುಬರುತ್ತವೆ.[೧೬]

ದೇಶಗಳು ವಾಸವಿರುವ ಪ್ರದೇಶದ ವಿಸ್ತೀರ್ಣ
(ಕಿಮೀ2.)
ಅಂದಾಜು
ಜನಸಂಖ್ಯೆ(2009)
ಅಫ್ಘಾನಿಸ್ತಾನ್‌ 50,000 100-200?
ಭೂತಾನ್‌ 15,000 100-200?
ಚೀನಾ 1,100,000 2,000-2,500
ಭಾರತ 75,000 200-600
ಕಜಾಕ್ ಸ್ತಾನ್ 50,000 180-200
ಕಿರ್ಗಿಝ್ ರಿಪಬ್ಲಿಕ್ 105,000 150-500
ಮಂಗೋಲಿಯಾ 101,000 500-1000
ನೇಪಾಳ 30,000 300-500
ಪಾಕಿಸ್ತಾನ 80,000 200-420
ತಜಿಕಿಸ್ತಾನ್ 100,000 180-220
ಉಜ್ಬೆಕಿಸ್ತಾನ 10,000 20-50
 
ಸ್ಯಾನ್ ಡಿಯೆಗೊ ಮೃಗಾಲಯದ ಹಿಮ ಚಿರತೆ.

ಸಂರಕ್ಷಿತ ಪ್ರದೇಶಗಳು

ಹಿಮ ಚಿರತೆಗಳನ್ನು ಕಾಪಾಡಲು ಹಲವಾರು ರಕ್ಷಣಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ, ಜೊತೆಗೆ ಹಿಮ ಚಿರತೆಗಳನ್ನು ಹಿಡಿದು ಯಶಸ್ವಿಯಾಗಿ ಸಾಕಲಾಗುತ್ತಿದೆ. ಪ್ರಾಣಿಗಳು ಸಾಮಾನ್ಯವಾಗಿ ಎರಡರಿಂದ ಮೂರು ಮರಿಗಳಿಗೆ ಜನ್ಮ ನೀಡುತ್ತವೆ, ಆದರೆ ಕೆಲವು ಸಮಯದಲ್ಲಿ ಇದು ಏಳರವರೆಗೆ ಸಹ ವಿಸ್ತರಿಸುತ್ತದೆ.

ಸ೦ರಕ್ಷಣಾ ಶ್ರಮಗಳು

ಬದಲಾಯಿಸಿ

ಹಲವಾರು ಸಂಸ್ಥೆಗಳು ಹಿಮ ಚಿರತೆಗಳನ್ನು ಹಾಗು ಅಪಾಯದ೦ಚಿನಲ್ಲಿರುವ ಅದರ ಬೆಟ್ಟದ ಪರಿಸರ ವ್ಯವಸ್ಥೆಯನ್ನು ಸ೦ರಕ್ಷಿಸಲು ಕಾರ್ಯಾಚರಣೆಗಳನ್ನು ನಡೆಸುತ್ತಿವೆ. ಅವುಗಳೆ೦ದರೆ ಹಿಮ ಚಿರತೆಗಳ ಟ್ರಸ್ಟ್, ಹಿಮ ಚಿರತೆಗಳ ಸ೦ರಕ್ಷಣಾ ಸಂಸ್ಥೆ ಹಾಗು ಹಿಮ ಚಿರತೆಗಳ ಜಾಲ. ಹಿಮ ಚಿರತೆಯ ಶ್ರೇಣಿಗಳ, ಈ ಸಮೂಹಗಳು ಹಾಗು ಹಲವಾರು ರಾಷ್ಟ್ರೀಯ ಆಡಳಿತಗಳು,ಪ್ರಪ೦ಚದಾದ್ಯ೦ತ ಲಾಭವಿಲ್ಲದೆ ಕೆಲಸ ಮಾಡುತ್ತಿರುವ ಸಂಸ್ಥೆಗಳು ಹಾಗು ದಾನಿಗಳು ಬೀಜಿ೦ಗ್ ನಲ್ಲಿ ನಡೆದ 10ನೇ ಅ೦ತರಾಷ್ಟ್ರೀಯ ಹಿಮ ಚಿರತೆಯ ಸಮ್ಮೇಳನದಲ್ಲಿ ಒಟ್ಟಾಗಿ ಕೆಲಸವನ್ನು ನಿರ್ವಹಿಸಿದರು. ಅವರು ಪೂರ್ತಿಯಾಗಿ ಹಿಮ ಚಿರತೆಯ ಸ್ಥಳಗಳ ಸ೦ಶೋಧನೆಯ ಮೇಲೆ,ಸಹಭಾಗಿತ್ವದ ಕಾರ್ಯಕ್ರಮಗಳ ಕಡೆಗೆ ಹಾಗು ಶೈಕ್ಷಣಿಕ ಕಾರ್ಯಕ್ರಮದ ಕಡೆಗೆ ತಮ್ಮ ಗಮನವನ್ನು ಕೇ೦ದ್ರೀಕರಿಸಿದರು, ಅಲ್ಲದೆ ಬೆಕ್ಕಿನ ಹಾಗು ಹಳ್ಳಿಗರ ಅಗತ್ಯದ ಕಡೆಗೆ ಮತ್ತು ದನಗಾಹಿಗಳ ಸಹಭಾಗಿತ್ವದಲ್ಲಿ ಹಿಮ ಚಿರತೆಗಳ ಜೀವನದ ಬಗೆಗೆ ಮತ್ತು ಅದರ ವಾಸಸ್ಥಾನದ ಮೇಲಾಗುವ ಹೊಡೆತದ ಬಗೆಗೆ ಅರಿಯುವಲ್ಲಿ ತಮ್ಮ ಗಮನವನ್ನು ಕೇ೦ದ್ರೀಕರಿಸಿದರು.[೨೧][೨೨]

ವಂಶಲಾಂಛನ ವಿದ್ಯೆಯಲ್ಲಿ ಹಿಮ ಚಿರತೆ

ಬದಲಾಯಿಸಿ

ಮಧ್ಯ ಏಷ್ಯದ ಟರ್ಕಿ ಜನಾ೦ಗದಲ್ಲಿ ಹಿಮ ಚಿರತೆಗೆ ಒಂದು ಸಾಂಕೇತಿಕವಾದ ಹೆಸರಿದೆ, ಅಲ್ಲಿ ಪ್ರಾಣಿಗಳನ್ನು ಇರ್ಬಿಸ್ ಅಥವಾ ಬಾರ್ಸ್ ಎಂದು ಕರೆಯಲಾಗುತ್ತದೆ, ಹಾಗಾಗಿ ಇದನ್ನು ಹೆಚ್ಚಾಗಿ ವ೦ಶಲಾ೦ಛನದಲ್ಲಿ ಚಿಹ್ನೆಯಾಗಿ ಬಳಸಲಾಗುತ್ತದೆ.

ಹಿಮ ಚಿರತೆಯನ್ನು ( ವ೦ಶಲಾ೦ಛನದಲ್ಲಿ ಔನ್ಸ್ ಎಂದು ಕರೆಯಲಾಗುತ್ತದೆ) (ಅಕ್ ಬಾರ್ಸ್ ಇದು ತತಾರ್ಸ್ ಹಾಗು ಕಜಕ್ಸ್‌ನ ಒಂದು ರಾಷ್ಟ್ರೀಯ ಚಿಹ್ನೆ: ಹಿಮ ಚಿರತೆಯು ಅಲ್ಮತಿನಗರದ ಸರ್ಕಾರಿ ಮುದ್ರೆಯಲ್ಲಿ ಕ೦ಡುಬರುತ್ತದೆ, ಹಾಗು ರೆಕ್ಕೆಯನ್ನು ಹೊ೦ದಿರುವ ಹಿಮ ಚಿರತೆಯು, ತತಾರ್ಸ್ತಾನ್ಕೋಟ್ ಆಫ್ ಆರ್ಮ್ಸ್ನಲ್ಲಿ ಕ೦ಡುಬರುತ್ತದೆ. ಅದೇ ರೀತಿಯ ಹಿಮ ಚಿರತೆಯು ಕೋಟ್ ಆಫ್ ಆರ್ಮ್ಸ್ ಆಫ್ ನಾರ್ತ್ ಒಸ್ಸೆಶಿಯ-ಅಲನಿಯದಲ್ಲು ಸಹ ಕ೦ಡುಬರುತ್ತದೆ. ಹಿಮ ಚಿರತೆಯ ಪ್ರಶಸ್ತಿಯನ್ನು ಸುಮಾರು 7000ಮೀ ನಷ್ಟು ಎತ್ತರವುಳ್ಳ ಐದು ಸೋವಿಯತ್ ಯೂನಿಯನ್ ಅನ್ನು ಏರಿದ ಸೋವಿಯತ್ ಪರ್ವತಾರೋಹಿಗಳಿಗೆ ನೀಡಲಾಯಿತು.

ಅಲ್ಲದೆ, ಹಿಮ ಚಿರತೆಯು ಗರ್ಲ್ ಸ್ಕೌಟ್ ಅಸೋಸಿಯೇಷನ್ ಆಫ್ ಕಿರ್ಗಿಸ್ತಾನ್‌ನ ಚಿಹ್ನೆ ಸಹ ಆಗಿದೆ.

ಆಕರಗಳು

ಬದಲಾಯಿಸಿ
  1. ೧.೦ ೧.೧ Jackson, R., Mallon, D., McCarthy, T., Chundaway, R.A. & Habib, B. (2008). Panthera uncia. In: IUCN 2008. IUCN Red List of Threatened Species. Retrieved 9 October 2008.
  2. ೨.೦ ೨.೧ Wozencraft, W. C. (2005). "Order Carnivora". In Wilson, D. E.; Reeder, D. M (eds.). Mammal Species of the World (3rd ed.). Johns Hopkins University Press. p. 548. ISBN 978-0-8018-8221-0. OCLC 62265494. {{cite book}}: Invalid |ref=harv (help); no-break space character in |first= at position 3 (help)
  3. "Snow Leopard Trust information page". Archived from the original on 2011-07-28. Retrieved 2010-04-19.
  4. ೪.೦ ೪.೧ ೪.೨ ೪.೩ ೪.೪ ೪.೫ ೪.೬ "Snow Leopard Fact Sheet" (PDF). Snow Leopard Trust. 2008. Archived from the original (PDF) on 2011-08-18. Retrieved 2008-10-23. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  5. ೫.೦ ೫.೧ ೫.೨ ೫.೩ ೫.೪ "Snow Leopard profile". National Geographic. 2008. Retrieved 2008-10-23.
  6. ೬.೦ ೬.೧ Nowak, Ronald M. (1999). Walker's Mammals of the World. Johns Hopkins University Press. ISBN 0-8018-5789-9.
  7. Weissengruber, GE (2002). "Hyoid apparatus and pharynx in the lion (Panthera leo), jaguar (Panthera onca), tiger (Panthera tigris), cheetah (Acinonyx jubatus) and domestic cat (Felis silvestris f. catus)". Journal of Anatomy. Anatomical Society of Great Britain and Ireland. pp. 195–209. doi:10.1046/j.1469-7580.2002.00088.x. Archived from the original on 2013-08-01. Retrieved 2007-05-20. {{cite web}}: Unknown parameter |coauthors= ignored (|author= suggested) (help); Unknown parameter |month= ignored (help)
  8. Johnson, W.E. (6 January 2006). "The Late Miocene radiation of modern Felidae: A genetic assessment". Science. 311 (5757): pp73–77. doi:10.1126/science.1122277. Retrieved 2008-10-24. {{cite journal}}: |pages= has extra text (help); Unknown parameter |coauthors= ignored (|author= suggested) (help); Unknown parameter |doi_brokendate= ignored (help)
  9. ವಿಲ್ಸನ್ DE, ಮಿಟ್ಟೆರ್ಮಿಯರ್ RA (eds) (2009) Handbook of the Mammals of the World. ಸಂಪುಟ. 1. Carnivores. Lynx Edicions, ಬಾರ್ಸಿಲೋನಾ
  10. Allen, Edward A (1908). "English Doublets". Publications of the Modern Language Association of America. 23 (new series 16: 214.
  11. Oxford English Dictionary , Oxford University Press. 1933: Ounce
  12. Mammals of the Soviet Union. ಸಂಪುಟ III: Carnivores (Feloidea).
  13. ೧೩.೦ ೧೩.೧ Jackson, Rodney (1996). "Snow Leopard Survey and Conservation Handbook Part III" (PDF). Snow Leopard Survey and Conservation Handbook. Seattle, Washington, & Fort Collins Science Center, Colorado, US: International Snow Leopard Trust & U.S. Geological Survey. p. 66. Archived from the original (pdf) on 2008-07-03. Retrieved 2009-03-14. {{cite web}}: Unknown parameter |coauthors= ignored (|author= suggested) (help)
  14. unknown (2004). "Conservation of the Snow Leopard in Nepal" (PDF). Seattle, US: The Snow Leopard Network. p. 2. Archived from the original (pdf) on 2011-07-28. Retrieved 2009-03-14. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  15. "Animal Bytes: snow leopard". San Diego Zoo. 2007. Retrieved 2007-05-05.
  16. "Population and Protections". Snow Leopard Trust. 2008. Archived from the original on 2008-05-14. Retrieved 2008-07-03. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  17. UNESCO ವರ್ಲ್ಡ್ ಹೆರಿಟೇಜ್ ಸೆಂಟರ್ Nanda Devi and Valley of Flowers National Parks. ಸಂಕ್ಷಿಪ್ತ ವಿವರಣೆ. 27 ನವೆಂಬರ್ 2006ರಂದು ಮರುಸಂಪಾದಿಸಲಾಯಿತು.
  18. ಸ್ನೋ ಲೆಪರ್ಡ್ ಕನ್ಸರ್ವೆನ್ಸಿ. 2006. Training park managers in the conservation of snow leopards Archived 2010-04-20 ವೇಬ್ಯಾಕ್ ಮೆಷಿನ್ ನಲ್ಲಿ.. 27 ನವೆಂಬರ್ 2006ರಂದು ಮರುಸಂಪಾದಿಸಲಾಯಿತು.
  19. UNESCO ವರ್ಲ್ಡ್ ಹೆರಿಟೇಜ್ ಸೆಂಟರ್. Sagarmatha National Park: Brief Description. 27 ನವೆಂಬರ್ 2006ರಂದು ಮರುಸಂಪಾದಿಸಲಾಯಿತು.
  20. ಸ್ನೋ ಲೆಪರ್ಡ್ ನೆಟ್‌ವರ್ಕ್. 2005. Camera Trapping of Snow Leopards in the Muzat Valley Archived 2009-01-03 ವೇಬ್ಯಾಕ್ ಮೆಷಿನ್ ನಲ್ಲಿ.. 27 ನವೆಂಬರ್ 2006ರಂದು ಮರುಸಂಪಾದಿಸಲಾಯಿತು.
  21. ಥೆಯಿಲೆ, ಸ್ಟೆಫಾನೀ “Fading footprints; the killing and trade of snow leopards” TRAFFIC International, 2003
  22. ವಿದೇಶೀ ಬಾತ್ಮೀದಾರ, "Cats in the Clouds", ಆಸ್ಟ್ರೇಲಿಯನ್ ಬ್ರಾಡ್‌ಕ್ಯಾಸ್ಟಿಂಗ್ ಕಾರ್ಪೊರೇಷನ್, 2009. 2009 ಜೂನ್ 29ರಂದು ಮರು ಸಂಪಾದಿಸಲಾಯಿತು.

ಬಾಹ್ಯ ಕೊಂಡಿಗಳು

ಬದಲಾಯಿಸಿ
  • Snow leopard photo gallery at National Geographic *ARKive - images and movies of the Snow leopard (Uncia uncia) Archived 2006-12-16 ವೇಬ್ಯಾಕ್ ಮೆಷಿನ್ ನಲ್ಲಿ. *PBS Nature: Silent Roar: Searching for the Snow Leopard Archived 2006-04-24 ವೇಬ್ಯಾಕ್ ಮೆಷಿನ್ ನಲ್ಲಿ. *Snow Leopard Network *Snow Leopard Trust *Snow Leopard Conservancy (detailed range map Archived 2010-03-04 ವೇಬ್ಯಾಕ್ ಮೆಷಿನ್ ನಲ್ಲಿ.) *Wildlife Conservation Network (WCN) Archived 2008-05-16 ವೇಬ್ಯಾಕ್ ಮೆಷಿನ್ ನಲ್ಲಿ. *Video footage from the BBC including a Snow Leopard hunt *WWF snow leopard species profile