ಹಿಡೆಕಿ ಯುಕಾವಾ ForMemRS [] FRSE (湯川 秀樹) ಅವರು ೨೩, ಜನವರಿ ೧೯೦೭ ರಲ್ಲಿ ಜನಿಸಿದ ಜಪಾನ್‍ನ ಸೈದ್ಧಾಂತಿಕ ಭೌತಶಾಸ್ತ್ರಜ್ಞರು. ನೊಬೆಲ್ ಬಹುಮಾನ ಪಡೆದ ಮೊದಲ ಜಪಾನಿ ವಿಜ್ಞಾನಿ. ಇವರು ಪರಮಾಣು ಬೀಜದಲ್ಲಿ ಅಲ್ಪಾಯು ಮೂಲಕಣಗಳಾದ ಮೀಸಾನುಗಳು ಇರುವುದನ್ನು ಮುನ್ಸೂಚಿಸಿ ಸಂಶೋಧನೆಗಳಿಂದ ಅವುಗಳ ಅಸ್ತಿತ್ವವನ್ನು ಪತ್ತೆ ಹಚ್ಚಿದರು.[]

ಹಿಡೆಕಿ ಯುಕಾವಾ
೧೯೫೧ರಲ್ಲಿ ಯುಕಾವ
ಹುಟ್ಟು ಹೆಸರು湯川 秀樹
ಜನನ(೧೯೦೭-೦೧-೨೩)೨೩ ಜನವರಿ ೧೯೦೭
ಟೋಕ್ಯೊ, ಜಪಾನ್
ಮರಣError: Need valid death date (first date): year, month, day
ಕ್ಯೋಟೋ , ಜಪಾನ್
ರಾಷ್ಟ್ರೀಯತೆ ಜಪಾನ್ese
ಕಾರ್ಯಕ್ಷೇತ್ರಗಳುಭೌತಶಾಸ್ತ್ರ [ಸೈದ್ಧಾಂತಿಕ ಭೌತಶಾಸ್ತ್ರ|Theoretical physics]
ಸಂಸ್ಥೆಗಳುOsaka Imperial University
Kyoto Imperial University
Imperial University of Tokyo
Institute for Advanced Study
Columbia University
ಅಭ್ಯಸಿಸಿದ ಸಂಸ್ಥೆ[ಕ್ಯೋಟೋ ಇಂಪೀರಿಯಲ್ ವಿಶ್ವವಿದ್ಯಾಲಯ|Kyoto Imperial University], [ಒಸಾಕ ಇಂಪೀರಿಯಲ್ ವಿಶ್ವವಿದ್ಯಾಲಯ|Osaka Imperial University]
Academic advisorsಕಜುರೋ ತಮಕಿ(Kajuro Tamaki)
ಡಾಕ್ಟರೆಟ್ ವಿದ್ಯಾರ್ಥಿಗಳುMendel Sachs
InfluencesEnrico Fermi
ಗಮನಾರ್ಹ ಪ್ರಶಸ್ತಿಗಳು
ಜೀವನ ಸಂಗಾತಿಸುಮಿ ಯುಕಾವಾ
ಮಕ್ಕಳು
ಹಸ್ತಾಕ್ಷರ

ಜೀವನಚರಿತ್ರೆ

ಬದಲಾಯಿಸಿ

ಅವರು ಟೋಕಿಯೊದಲ್ಲಿನ ಹಿಡೆಕಿ ಒಗಾವಾ ಎಂಬ ಹೆಸರಿನಿಂದ ಜನಿಸಿದರು ಮತ್ತು ಕ್ಯೋಟೋದಲ್ಲಿ ಇಬ್ಬರು ಅಣ್ಣಂದಿರು, ಇಬ್ಬರು ಅಕ್ಕ ಮತ್ತು ಇಬ್ಬರು ಕಿರಿಯ ಸಹೋದರರೊಂದಿಗೆ ಬೆಳೆದರು.[] ಅವರು ಕನ್ಫ್ಯೂಷಿಯನ್ ಡಾಕ್ಟ್ರಿನ್ ಆಫ್ ದ ಮೀನ್, ಮತ್ತು ಲಾವೊ-ತ್ಸು ಹಾಗೂ ಚುವಾಂಗ್-ತ್ಸು ( Lao-Tzu and Chuang-Tzu) ವನ್ನು ಓದಿದರು. ಅವರ ತಂದೆ, ಒಂದು ಕಾಲಕ್ಕೆ, ಅವರನ್ನು ವಿಶ್ವವಿದ್ಯಾನಿಲಯಕ್ಕಿಂತ ತಾಂತ್ರಿಕ ಕಾಲೇಜಿಗೆ ಕಳುಹಿಸುವುದನ್ನು ಪರಿಗಣಿಸಿದ್ದರು, ಏಕೆಂದರೆ ಅವರು "ತಮ್ಮ ಹಿರಿಯ ಸಹೋದರರಂತೆ ಅತ್ಯುತ್ತಮ ವಿದ್ಯಾರ್ಥಿಯಾಗಿರಲಿಲ್ಲ". ಅವರ ತಂದೆ, ಟಕುಚಿ ಓಗಾವ, ತಮ್ಮ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲರೊಂದಿಗೆ ಈ ವಿಚಾರವನ್ನು ತಿಳಿಸಿದಾಗ, ಪ್ರಾಂಶುಪಾಲರು ಗಣಿತಶಾಸ್ತ್ರದಲ್ಲಿ ಅವರ ಹೆಚ್ಚಿನ ಸಾಮರ್ಥ್ಯವನ್ನು"ಶ್ಲಾಘಿಸಿದರು ಮತ್ತು ಒಗಾವಾ ಅವರನ್ನು ವಿದ್ವತ್ಪೂರ್ಣ ವೃತ್ತಿಜೀವನದಲ್ಲಿರಿಸಿಕೊಳ್ಳಲು ಸ್ವತಃ ದತ್ತು ತೆಗೆದುಕೊಳ್ಳಲು ಮುಂದಾದರು. ಅದಕ್ಕೆ, ಅವರ ತಂದೆ ಪಟ್ಟು ಸಡಿಲಿಸಿದರು.[]

ಪ್ರೌಢಶಾಲೆಯಲ್ಲಿದ್ದಾಗ ಒಗಾವಾ ಗಣಿತಜ್ಞನಾಗುವುದರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು; ಒಗಾವಾ ಪ್ರಮೇಯವನ್ನು ಸಾಬೀತುಪಡಿಸಿದಾಗ ಶಿಕ್ಷಕರು ನಿರೀಕ್ಷಿಸಿದಕ್ಕಿಂತ ವಿಭಿನ್ನ ರೀತಿಯಲ್ಲಿ ಸಾಬೀತುಪಡಿಸಿರುವುದರಿಂದ ಅವರ ಶಿಕ್ಷಕರು ಅವರ ಪರೀಕ್ಷೆಯ ಉತ್ತರವನ್ನು ತಪ್ಪೆಂದು ಗುರುತಿಸಿದರು.[] ರೋಹಿತದರ್ಶನದಲ್ಲಿನ ಪ್ರಯೋಗಗಳ ಅವಶ್ಯಕತೆಯಾದ ಗಾಜೂದುವುದರಲ್ಲಿ ವಿಕಾರತೆಯನ್ನು ಪ್ರದರ್ಶಿಸಿದಾಗ ಅವರು ಕಾಲೇಜಿನಲ್ಲಿ ಪ್ರಾಯೋಗಿಕ ಭೌತಶಾಸ್ತ್ರದಲ್ಲಿ ವೃತ್ತಿಜೀವನ ಬೇಡವೆಂದು ನಿರ್ಧರಿಸಿದರು.

೧೯೨೯ ರಲ್ಲಿ, ಕ್ಯೋಟೋ ಇಂಪೀರಿಯಲ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ ನಂತರ, ಅವರು ನಾಲ್ಕು ವರ್ಷಗಳ ಕಾಲ ಉಪನ್ಯಾಸಕರಾಗಿ ಉಳಿದುಕೊಂಡರು. ಪದವಿಯ ನಂತರ, ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ, ವಿಶೇಷವಾಗಿ ಪ್ರಾಥಮಿಕ ಕಣಗಳ ಸಿದ್ಧಾಂತದಲ್ಲಿ ಅವರು ಆಸಕ್ತಿ ಹೊಂದಿದ್ದರು. ೧೯೩೨ ರಲ್ಲಿ, ಅವರು ಸುಮಿ ಯುಕಾವಾ ಅವರನ್ನು ವಿವಾಹವಾದರು. ಆ ಕಾಲದ ಜಪಾನಿನ ಪದ್ಧತಿಗಳಿಗೆ ಅನುಗುಣವಾಗಿ, ಅವರು ಅನೇಕ ಗಂಡುಮಕ್ಕಳನ್ನು ಹೊಂದಿರುವ ಕುಟುಂಬದಿಂದ ಬಂದಿದ್ದರು ಆದರೆ ಅವರ ಮಾವ ಜೆನ್ಯೊಗೆ ಯಾರೂ ಇರಲಿಲ್ಲವಾದ್ದರಿಂದ, ಅವರನ್ನು ಜೆನ್ಯೊ ದತ್ತು ಪಡೆದರು ಮತ್ತು ಅವರ ಕುಟುಂಬದ ಹೆಸರನ್ನು ಒಗಾವಾದಿಂದ ಯುಕಾವಾ ಎಂದು ಬದಲಾಯಿಸಿಕೊಂಡರು.[] ದಂಪತಿಗೆ ಹರೂಮಿ ಮತ್ತು ತಕಾಕಿ ಎಂಬ ಇಬ್ಬರು ಗಂಡು ಮಕ್ಕಳಿದ್ದರು. ೧೯೩೩ ರಲ್ಲಿ ಅವರು ೨೬ ವರ್ಷ ವಯಸ್ಸಿನಲ್ಲಿ ಒಸಾಕಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾದರು.

ಯೂಕಾವಾಗೆ ಆಸಕ್ತಿ ಇದ್ದದ್ದು ಮೂಲಭೂತಕಣಗಳ ಅಧ್ಯಯನದಲ್ಲಿ. ಆ ನಿಟ್ಟಿನಲ್ಲಿ ಯೋಚನೆ ಮಾಡುತ್ತಿದ್ದ ಇವನಿಗೆ ನ್ಯೂಕ್ಲಿಯಸ್‍ಗಳ ಸ್ಥಿರತೆಯ ಪ್ರಶ್ನೆ ಎದುರಾಯಿತು. ನ್ಯೂಕ್ಲಿಯಗಳಲ್ಲಿ ನ್ಯೂಕ್ಲಿಯಾನುಗಳನ್ನು (ನ್ಯೂಟ್ರಾನು ಮತ್ತು ಪ್ರೋಟಾನುಗಳು) ಒಟ್ಟಿಗೆ ಹಿಡಿದಿಟ್ಟಿರುವ  ಬಂಧನದ  ಬಗ್ಗೆ ಆಗ ಒಂದು ಸುಸಂಗತ ಚಿತ್ರ ಇರಲಿಲ್ಲ. ಡ್ಯೂಟೆರಾನಿನಿಂದ ಆಲ್ಫಕಣವನ್ನು ತಲುಪುವಲ್ಲಿ ಕ್ಷಿಪ್ರವಾಗಿ ಅಧಿಕಗೊಳ್ಳುವ ಬಂಧನಶಕ್ತಿಯನ್ನು ಅರ್ಥಮಾಡಿಕೊಳ್ಳಲು ನ್ಯೂಕ್ಲಿಯ ಬಲಗಳ ವ್ಯಾಪ್ತಿ 10-13 ಸೆಂ.ಮೀ ಇರಬೇಕೆಂದು ಹಂಗರಿ ಸಂಜಾತ ಅಮೇರಿಕನ್ ಭೌತವಿಜ್ಞಾನಿ ಯೂಜಿನ್ ಪಾಲ್ ವಿಗ್ನರ್ ತಿಳಿಸಿದ್ದ. ನ್ಯೂಕ್ಲಿಯಾನುಗಳ ನಡುವೆ ವಿದ್ಯುದಾವೇಶ (ಉದಾಹರಣೆಗೆ ಎಲೆಕ್ಟ್ರಾನ್) ವಿನಿಮಯ ಆಗಬೇಕೆಂದು ಜರ್ಮನಿಯ ಭೌತವಿಜ್ಞಾನಿ ವರ್ನರ್ ಕಾರ್ಲ್ ಹೈಸನ್‌ಬರ್ಗ್ (1901-76) ಸೂಚಿಸಿದ್ದ. ಹೈಡ್ರೋಜನ್ ಅಣು ಮತ್ತು ಪ್ರೋಟಾನುಗಳ ನಡುವೆ ಎಲೆಕ್ಟ್ರಾನಿನ ವಿನಿಮಯ ಆಗುವುದರಿಂದ ರಾಸಾಯನಿಕಬಂಧ ಏರ್ಪಡುವ ವಿಚಾರ ತಿಳಿದಿತ್ತು. ನ್ಯೂಕ್ಲಿಯಾ ಬಲಗಳೂ ಇದೇ ತೆರನ  ಬಲಗಳಾಗಿರಬೇಕೆಂದು ಯೂಕಾವಾ ಆಲೋಚಿಸಿದ. ನ್ಯೂಕ್ಲಿಯಗಳ ಒಟ್ಟು ಬಂಧನಶಕ್ತಿ ಅವುಗಳಲ್ಲಿರುವ ನ್ಯೂಕ್ಲಿಯಾನುಗಳ ಸಂಖ್ಯೆಗೆ ಅನುಪಾತದಲ್ಲಿರುತ್ತದೆ ಎಂಬುದನ್ನೂ ಯೂಕಾವಾ ಗಮನಿಸಿದ. ಅಂದರೆ ನ್ಯೂಕ್ಲಿಯಬಲಗಳು ಸಂತೃಪ್ತತೆಯನ್ನು ಹೊಂದಿವೆ ಎಂದ ಹಾಗಾಯಿತು. ಹಾಗಿಲ್ಲದಿದ್ದರೆ ನ್ಯೂಕ್ಲಿಯಗಳ ಒಟ್ಟುಬಂಧನ ಶಕ್ತಿ ಅವುಗಳಲ್ಲಿರುವ ನ್ಯೂಕ್ಲಿಯಾನುಗಳ ಸಂಖ್ಯೆಯ ವರ್ಗಕ್ಕೆ ಅನುಪಾತದಲ್ಲಿರುತ್ತಿತ್ತು. ಹ್ರಸ್ವವ್ಯಾಪ್ತಿ ಮತ್ತು ಸಂತೃಪ್ತತೆಯನ್ನು ಹೊಂದಿರುವ ಬಲಗಳಿಗೆ ಕಾರಣವಾದ ಕ್ಷೇತ್ರಕ್ವಾಂಟಗಳು ನಿಶ್ಚಲರಾಶಿಯನ್ನು (ಮಾಸ್) ಹೊಂದಿರುವ ಅಗತ್ಯವನ್ನು  ಯೂಕಾವಾ ಮನಗಂಡ. ನ್ಯೂಕ್ಲಿಯಾನುಗಳಲ್ಲಿ ನಿವ್ವಳ ವಿದ್ಯುದಾವೇಶ ಇಲ್ಲದೆ ನ್ಯೂಟ್ರಾನುಗಳ ಇರುವುದರಿಂದ ನ್ಯೂಕ್ಲಿಯ ಕ್ಷೇತ್ರಕ್ವಾಂಟಗಳು ಎಲೆಕ್ಟ್ರಾನುಗಳಿಲ್ಲವೆಂದು ಈತ ತೀರ್ಮಾನಕ್ಕೆ ಬರುವಂತಾಯಿತು.

೧೯೩೫ ರಲ್ಲಿ ಅವರು ನ್ಯೂಕ್ಲಿಯ ಕ್ಷೇತ್ರಕ್ವಾಂಟಗಳಿಗೆ ಯುಕ್ತ ನಿಶ್ಚಲರಾಶಿಯನ್ನು ಒದಗಿಸಬಲ್ಲ ತಮ್ಮ ಮೀಸಾನ್ ಸಿದ್ಧಾಂತವನ್ನು ಪ್ರಕಟಿಸಿದರು. ಆಗ ಇವನಿಗೆ ಕೇವಲ 27 ವರ್ಷಗಳಾಗಿತ್ತು. ಇದು ಪ್ರೋಟಾನ್‌ಗಳು ಮತ್ತು ನ್ಯೂಟ್ರಾನ್‌ಗಳ ನಡುವಿನ ಪರಸ್ಪರ ಕ್ರಿಯೆಯನ್ನು ವಿವರಿಸುತ್ತದೆ ಮತ್ತು ಮೂಲಕಣಗಳ ಸಂಶೋಧನೆಯ ಮೇಲೆ ಪ್ರಮುಖ ಪ್ರಭಾವ ಬೀರಿತು.[]

ಮೆಸಾನ್ ಸಿದ್ಧಾಂತ: ಮೆಸಾನ್ ಸಿದ್ಧಾಂತದ ಮೊದಲಿನ ಅಭಿಗ್ರಹಿಕೆಗಳು ಇವು:

1. ನ್ಯೂಕ್ಲಿಯ ಬಲಗಳನ್ನು ವಿವರಿಸುವ ಆದಿಶಕ್ಷೇತ್ರ Φ ನಿರ್ದ್ರವ್ಯಪ್ರದೇಶದಲ್ಲಿ ಸಮೀಕರಣ (1) ನ್ನು ಪಾಲಿಸಬೇಕು.

  ....(1)

μ =ವಿಪರ್ಯಯ ಉದ್ದದ ಆಯಾಮವನ್ನು ಹೊಂದಿರುವ ಸ್ಥಿರಾಂಕ. ಇದು ಸೊನ್ನೆಯಾದರೆ ಸಮೀಕರಣ (1) ವಿದ್ಯುತ್ಕಾಂತಕ್ಷೇತ್ರದ ಕ್ವಾಂಟವನ್ನು ವಿವರಿಸುತ್ತದೆ ಎಂಬುದು ಗಮನಾರ್ಹ   ಆದರೆ ಸಮೀಕರಣ (1)ರ ಪರಿಹಾರ

  ....(2)

ಇದು ಒಂದರಿಂದ ಇನ್ನೊಂದು r ದೂರದಲ್ಲಿರುವ ಎರಡು ನ್ಯೂಕ್ಲಿಯಾನುಗಳ ನಡುವಿನ ಸ್ಥಾಯಿವಿಭವ g = ಸಂಯೋಜಕ ಸ್ಥಿರಾಂಕ.

2. ಕ್ವಾಂಟಮ್ ಸಿದ್ಧಾಂತದ ನಿಯಮಗಳ ಪ್ರಕಾರ ಕ್ಷೇತ್ರ φಅನ್ನು ರಾಶಿಯುಕ್ತ ಕಣಗಳು ಅಥವಾ ಕ್ವಾಂಟಮ್‌ಗಳು ಸಹಚರಿಸಬೇಕು. ಅವುಗಳ ಗಿರಕಿ (ಸ್ಪಿನ್) ಸೊನ್ನೆಯಾಗಿರಬೇಕು. μ=5X1012 ಸೆಂಮೀ ಎಂದಿಟ್ಟುಕೊಂಡರೆ ಕಣಗಳ ರಾಶಿಯನ್ನು ಗಣಿಸಬಹುದು. ಇದು ಸರಿಸುಮಾರು 200me ಎನ್ನಲಾಗಿದೆ. ಇಲ್ಲಿ me = ಎಲೆಕ್ಟ್ರಾನಿನ ನಿಶ್ಚಲರಾಶಿ. ಈ ಕಣಗಳಿಗೆ ಮೆಸಾನುಗಳು ಎಂದು ಹೆಸರು. ಈ ಹೆಸರನ್ನು ಸೂಚಿಸಿದವರು ಭಾರತದ ಭೌತವಿಜ್ಞಾನಿ ಹೋಮಿ ಜಹಾಂಗೀರ್ ಭಾಭಾ (1909-66).

3. ವಿನಿಮಯಗಳನ್ನು ಪಡೆಯಲು ಮೆಸಾನುಗಳಿಗೆ +e ಮತ್ತು -e ವಿದ್ಯುದಾವೇಶವನ್ನು ಆರೋಪಿಸಬೇಕು. ಹೀಗೆ ಮಾಡಿದರೆ ಎರಡು ವಿದ್ಯುದಾವಿಷ್ಟ ಕಣಗಳು ಪ್ರೋಟಾನುಗಳನ್ನು ವಿನಿಮಯ ಮಾಡಿಕೊಳ್ಳುವುದರಿಂದ, ಪರಸ್ಪರ ಕ್ರಿಯೆ ಎಸಗುವಂತೆ ನ್ಯೂಟ್ರಾನುಗಳನ್ನು ವಿನಿಮಯ ಮಾಡಿಕೊಳ್ಳುವುದರಿಂದ, ಪರಸ್ಪರ ಕ್ರಿಯೆ ಎಸಗುವಂತೆ ನ್ಯೂಟ್ರಾನುಗಳು ಮೇಸಾನುಗಳನ್ನು ವಿನಿಮಯ ಮಾಡಿಕೊಂಡು ಪರಸ್ಪರ ಕ್ರಿಯೆ ಎಸಗುತ್ತವೆ.  ವಸ್ತುತಃ ನ್ಯೂಕ್ಲಿಯಾನು ಮತ್ತು ಮೆಸಾನುಕ್ಷೇತ್ರಗಳ ನಡುವಿನ ಸಂಯೋಜಕ ಸ್ಥಿರಾಂಕ g ಯು e ಗಿಂತ ಸ್ಪಲ್ಪ ಹೆಚ್ಚು ಇರುವಂತೆ ಆರಿಸಿಕೊಂಡರೆ ಹೈಸನ್‌ಬರ್ಗ್ ಮಾದರಿಯ ಬಲವನ್ನು ಪಡೆಯುವುದು ಸಾಧ್ಯ.

4. ಈ ಸಾಮಾನ್ಯ ಸಿದ್ಧಾಂತ ಅನೇಕ ಮಿತಿಗಳನ್ನು ಹೊಂದಿದೆ. ಅವನ್ನು ನಿವಾರಿಸಲು ವಿದ್ಯುದಾವಿಷ್ಟ ಮೆಸಾನುಗಳ ಜೊತೆಗೆ ಅವುಗಳಷ್ಟೇ ರಾಶಿಯುಳ್ಳ ತಟಸ್ಥ ಮೆಸಾನುಗಳ ಅಸ್ತಿತ್ವವನ್ನೂ ಊಹಿಸಿಕೊಳ್ಳಬೇಕು. ಈ ಬೆಳವಣಿಗೆಗೆ ಕಾರಣರಾದವರ ಪೈಕಿ ಕೆಮ್ಮರ್ ಕೂಡ ಒಬ್ಬ.

5. ಮೆಸಾನುಗಳು ನ್ಯೂಕ್ಲಿಯಾನುಗಳ ಜೊತೆ ಪರಸ್ಪರ ಕ್ರಿಯೆ ಎಸಗುವಂತೆ ಹಗುರ ಕಣಗಳೊಂದಿಗೂ ಅಂದರೆ ಎಲೆಕ್ಟ್ರಾನು ಮತ್ತು ನ್ಯೂಟ್ರಿನೊಗಳೊಂದಿಗೂ ಪರಸ್ಪರ ಕ್ರಿಯೆ ಎಸಗುತ್ತವೆ. ಆದರೆ ಈ ಕ್ರಿಯೆಗೆ ಸಂಬಂಧಿಸಿದ ಸಂಯೋಜಕ ಸ್ಥಿರಾಂಕ g ಗಿಂತ ಬಲು ಕಡಿಮೆ.

ಅಮೆರಿಕದ ಭೌತವಿಜ್ಞಾನಿಗಳಾದ ಕಾರ್ಲ್ ಡೇವಿಡ್ ಆಂಡರ್‌ಸನ್ ಮತ್ತು ನೆಡ್ಡರಾಮೆಯರ್ ಎಂಬವರು ವಿಶ್ವಕಿರಣಗಳಲ್ಲಿ 200me ರಾಶಿಯುಳ್ಳ ಕಣಗಳನ್ನು ಪತ್ತೆಹಚ್ಚಿದರು (1937). ಇದಕ್ಕೆ u - ಮೆಸಾನುಗಳೆಂದು ಹೆಸರು. ಹೀಗಾಗಿ ಯುಕಾವಾ ಸಿದ್ಧಾಂತಕ್ಕೆ ತಾತ್‌ಕ್ಷಣಿಕ ಬೆಂಬಲ ದೊರೆತಂತಾಯಿತು. ಆದರೆ ಅದರಲ್ಲಿ ತೊಡಕು ಮಾತ್ರ ಇರದೆ ಇರಲಿಲ್ಲ. u - ಮೆಸಾನುಗಳ ಜೀವಿತಾವಧಿ 2x10-6 ಸೆ. ಯೂಕಾವಾ ಮೆಸಾನುಗಳ ಜೀವಿತಾವಧಿ 10-8 ಸೆ. ಆದ್ದರಿಂದ u - ಮೆಸಾನುಗಳು ನ್ಯೂಕ್ಲಿಯಬಲಕ್ಷೇತ್ರದ ಕ್ವಾಂಟಮ್‌ಗಳಲ್ಲವೆಂಬ ಅನುಮಾನ ಬಂತು. ಟಾಮಿಕಾನ ಮತ್ತು ಸಕಟ ಎಂಬ ಭೌತವಿಜ್ಞಾನಿಗಳು u - ಮೆಸಾನುಗಳಾದರೂ ಯೂಕಾವಾ ಮೆಸಾನುಗಳು ಶಿಥಿಲಗೊಂಡು ಹುಟ್ಟಿದ ಅನುಷಂಗಿಕ ಕಣಗಳಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದರು (1942). ಬ್ರಿಟಿಷ್ ಭೌತವಿಜ್ಞಾನಿ ಸಿಸಿಲ್ ಫ್ರಾಂಕ್ ಪೊವೆಲ್ ಸಂಗಡಿಗರು ವಿಶ್ವಕಿರಣಗಳಲ್ಲಿ 270me ರಾಶಿಯುಳ್ಳ ಕಣಗಳನ್ನು ಪತ್ತೆಹಚ್ಚಿದಾಗ (1947) ಈ ಅನುಮಾನಕ್ಕೆ ಉತ್ತರ ಲಭಿಸಿತು. ಈಗ ಈ ಮೆಸಾನುಗಳಿಗೆ n - ಮೆಸಾನುಗಳೆಂದು ಹೆಸರಿಡಲಾಗಿದೆ. ಇವುಗಳ ಜೀವಿತಾವಧಿ 10-8 ಸೆ. ಇವು ನ್ಯೂಕ್ಲಿಯ ಕ್ಷೇತ್ರದ ಕ್ವಾಂಟಮ್‌ಗಳು.

ಯೂಕಾವಾ ಸಿದ್ಧಾಂತದ ಬೆಳವಣಿಗೆ 15 ವರ್ಷಗಳ ತನಕ ನಡೆದುಬಂತು.

೧೯೪೦ ರಲ್ಲಿ ಅವರು ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು. ೧೯೪೦ ರಲ್ಲಿ ಅವರು ಜಪಾನ್ ಅಕಾಡೆಮಿಯ ಇಂಪೀರಿಯಲ್ ಪ್ರಶಸ್ತಿಯನ್ನು ಗೆದ್ದರು ಹಾಗೂ ೧೯೪೩ ರಲ್ಲಿ ಜಪಾನಿನ ಸರ್ಕಾರದಿಂದ ಸಾಂಸ್ಕೃತಿಕ ಅರ್ಹತೆಯ ವ್ಯಕ್ತಿಯೆಂಬ ಗೌರವ ಸ್ವೀಕರಿಸಿದರು. ಅಮೆರಿಕದ ಭೌತವಿಜ್ಞಾನಿ ರಾಬರ್ಟ್ ಓಪನ್‍ಹೈಮರ್‌ನ ಆಹ್ವಾನವನ್ನು ಯೂಕಾವಾ ಒಪ್ಪಿಕೊಂಡು ಪ್ರಿನ್ಸ್‌ಟನ್ನಿನ ಉನ್ನತ ಅಧ್ಯಯನ ಸಂಸ್ಥೆಗೆ ಭೇಟಿಕೊಟ್ಟ (1948). ೧೯೪೯ ರಲ್ಲಿ ಅವರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು. ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸಗಳನ್ನು ನೀಡಿದ. ಯುಕಾವಾ ಭವಿಷ್ಯ ನುಡಿದಂತೆ ೧೯೪೭ ರಲ್ಲಿ ಸೀಸರ್ ಲ್ಯಾಟೆಸ್ ಪೈ ಮೀಸಾನ್‌ನ್ನು ಕಂಡುಹಿಡಿದ ನಂತರ ೧೯೪೯ರಲ್ಲಿ ಅವರು ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಪಡೆದರು. ಯುಕಾವಾ ಕೆ-ಕ್ಯಾಪ್ಚರ್ ಸಿದ್ಧಾಂತದ ಮೇಲೆ ಸಹ ಕೆಲಸ ಮಾಡಿದರು, ಇದನ್ನು ಜಿ.ಸಿ. ವಿಕ್ ಆರಂಭದಲ್ಲಿ ಮುನ್ನುಡಿದಿದ್ದರು. ಇದರಲ್ಲಿ ಕಡಿಮೆ ಶಕ್ತಿಯ ಎಲೆಕ್ಟ್ರಾನ್ ಪರಮಾಣು ಕೇಂದ್ರದಿಂದ ಹೀರಲ್ಪಡುತ್ತದೆ.

ಯುಕಾವಾ ೧೯೫೩ ರಲ್ಲಿ ಯುಕಾವಾ ಇನ್ಸ್ಟಿಟ್ಯೂಟ್ ಫಾರ್ ಥಿಯರಿಟಿಕಲ್ ಫಿಸಿಕ್ಸ್‌ನ ಮೊದಲ ಅಧ್ಯಕ್ಷರಾದರು. ಅವರು ಪ್ಯಾರಿಸ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ನಂತರ ರಾಯಲ್ ಸೊಸೈಟಿಯಲ್ಲಿ, ರಾಯಲ್ ಸೊಸೈಟಿ ಆಫ್ ಎಡಿನ್ಬರ್ಗ್, ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್, ಇಂಟರ್ನ್ಯಾಷನಲ್ ಅಕಾಡೆಮಿ ಆಫ್ ಫಿಲಾಸಫಿ ಅಂಡ್ ಸೈನ್ಸಸ್, ಮತ್ತು ಪಾಂಟಿಫಿಯಾ ಅಕಾಡೆಮಿ ಸೈಂಟಿಯಾರಮ್‍ನಲ್ಲಿ ಗೌರವ ಸದಸ್ಯತ್ವವನ್ನು ಪಡೆದರು.

ಅವರು ಸೈದ್ಧಾಂತಿಕ ಭೌತಶಾಸ್ತ್ರದ ಪ್ರಗತಿ ಯ ಸಂಪಾದಕರಾಗಿದ್ದರು,[] ಮತ್ತು ಇಂಟ್ರೊಡಕ್ಷನ್ ಟು ಕ್ವಾಂಟಮ್ ಮೆಕ್ಯಾನಿಕ್ಸ್ (೧೯೪೬) ಮತ್ತು ಇಂಟ್ರೊಡಕ್ಷನ್ ಟು ದಿ ಥಿಯರಿ ಆಫ್ ಎಲಿಮೆಂಟರಿ ಪಾರ್ಟಿಕಲ್ಸ್ (೧೯೪೮) ಪುಸ್ತಕಗಳನ್ನು ಪ್ರಕಟಿಸಿದರು.

1955 ರಲ್ಲಿ, ಅವರು ರಸೆಲ್-ಐನ್‌ಸ್ಟೈನ್ ಪ್ರಣಾಳಿಕೆಗೆ ಸಹಿ ಹಾಕಲು ಇತರ ಹತ್ತು ಪ್ರಮುಖ ವಿಜ್ಞಾನಿಗಳು ಮತ್ತು ಬುದ್ಧಿಜೀವಿಗಳನ್ನು ಸೇರಿಕೊಂಡ ಇವರು ಪರಮಾಣು ನಿಶ್ಶಸ್ತ್ರೀಕರಣಕ್ಕೆ ಕರೆ ನೀಡಿದರು.

ಯುಕಾವಾ ೧೯೭೦ ರಲ್ಲಿ ಕ್ಯೋಟೋ ವಿಶ್ವವಿದ್ಯಾಲಯದಿಂದ ಪ್ರೊಫೆಸರ್ ಎಮೆರಿಟಸ್ ಆಗಿ ನಿವೃತ್ತರಾದರು. ಹೆಚ್ಚುತ್ತಿರುವ ದುರ್ಬಲತೆಯಿಂದಾಗಿ, ಅವರ ಅಂತಿಮ ವರ್ಷಗಳಲ್ಲಿ ಅವರು ಗಾಲಿಕುರ್ಚಿಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಅವರು ಸೆಪ್ಟೆಂಬರ್ ೮, 1೧೯೮೧ 81 ರಂದು ಕ್ಯೋಟೋದ ಸಕ್ಯೊ-ಕುದಲ್ಲಿರುವ ತಮ್ಮ ಮನೆಯಲ್ಲಿ ನ್ಯುಮೋನಿಯಾ ಮತ್ತು ಹೃದಯ ವೈಫಲ್ಯದಿಂದ ವಿಧಿವಶರಾದರು. ಅವರ ಸಮಾಧಿ ಕ್ಯೋಟೋದ ಹಿಗಶಿಯಾಮಾ-ಕು ನಲ್ಲಿದೆ.

ಏಕವ್ಯಕ್ತಿ ಪಿಟೀಲು ವಾದಕ ಡಯಾನಾ ಯುಕಾವಾ (ダ イ ア ナ 湯 川) ಹಿಡೆಕಿ ಯುಕಾವಾ ಅವರ ಸಂಬಂಧಿಯಾಗಿದ್ದಾರೆ.

ಗೌರವ-ಮನ್ನಣೆಗಳು

ಬದಲಾಯಿಸಿ
 
೧೯೪೯ ರಲ್ಲಿ ಕುಟುಂಬದೊಂದಿಗೆ ಯುಕಾವಾ
  • ೧೯೪೦- ಜಪಾನ್ ಅಕಾಡೆಮಿಯ ಇಂಪೀರಿಯಲ್ ಪ್ರಶಸ್ತಿ
  • ೧೯೪೧- ಅಕಾಡೆಮಿಕ್ ನೋಮಾ ಪ್ರಶಸ್ತಿ
  • ೧೯೪೩- ಆರ್ಡರ್ ಆಫ್ ಕಲ್ಚರ್
  • ೧೯೪೯- ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ
  • ೧೯೬೩- ವಿದೇಶಿ ಸದಸ್ಯ ರಾಯಲ್ ಸೊಸೈಟಿ (ಫಾರ್‌ಮೆಮ್ಆರ್‌ಎಸ್) ಆಗಿ
  • ೧೯೬೪- ಲೋಮೊನೊಸೊವ್ ಚಿನ್ನದ ಪದಕ
  • ೧೯೬೭- ಪೌರ್ ಲೆ ಮೆರೈಟ್
  • ೧೯೬೭- ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪದಕ
  • ೧೯೭೭- ಗ್ರ್ಯಾಂಡ್ ಕಾರ್ಡನ್ ಆಫ್ ದಿ ಆರ್ಡರ್ ಆಫ್ ದಿ ರೈಸಿಂಗ್ ಸನ್
  • ೧೯೮೧- ಜೂನಿಯರ್ ಸೆಕೆಂಡ್ ರ್‍ಯಾಂಕ್ (ಸೆಪ್ಟೆಂಬರ್ ೮; ಮರಣೋತ್ತರ)

ಗ್ರಂಥಸೂಚಿ

ಬದಲಾಯಿಸಿ
  • ಜಪಾನೀಸ್ ವಿಜ್ಞಾನ ಮತ್ತು ವಿಜ್ಞಾನಿಗಳ ಪ್ರೊಫೈಲ್ಗಳು, ೧೯೭೦- ಮೇಲ್ವಿಚಾರಣಾ ಸಂಪಾದಕ: ಹಿಡೆಕಿ ಯುಕಾವಾ (೧೯೭೦)
  • ಸೃಜನಶೀಲತೆ ಮತ್ತು ಅಂತಃಪ್ರಜ್ಞೆ: ಭೌತವಿಜ್ಞಾನಿ ಪೂರ್ವ ಮತ್ತು ಪಶ್ಚಿಮವನ್ನು ಹಿಡೆಕಿ ಯುಕಾವಾ ಅವರಿಂದ ನೋಡುತ್ತಾನೆ; ಜಾನ್ ಬೆಸ್ಟರ್ ಅನುವಾದಿಸಿದ್ದಾರೆ (೧೯೭೩)
  • ವೈಜ್ಞಾನಿಕ ಕೃತಿಗಳು (೧೯೭೯)
  • ತಬಿಬಿಟೊ (旅人) - ಹಿಡೆಕಿ ಯುಕಾವಾ ಅವರಿಂದ ಪ್ರಯಾಣಿಕ; ಎಲ್. ಬ್ರೌನ್ ಮತ್ತು ಆರ್. ಯೋಶಿಡಾ ಅನುವಾದಿಸಿದ್ದಾರೆ (೧೯೮೨), 

ಬಾಹ್ಯ ಲಿಂಕ್‌ಗಳು

ಬದಲಾಯಿಸಿ
  • ಹಿಡೆಕಿ ಯುಕಾವಾ on Nobelprize.org  
  • "Research Profile – Hideki Yukawa". Lindau Nobel Mediatheque. 23 January 1907. Retrieved 17 March 2022.
  • Paper: On the Interaction of Elementary Particles. I – paper for which Yukawa received the Nobel Prize
  • About Hideki Yukawa
  • ಟೆಂಪ್ಲೇಟು:Internet Archive short film
  • Works by or about ಹಿಡೆಕಿ ಯುಕಾವಾ at Internet Archive

ಉಲ್ಲೇಖಗಳು

ಬದಲಾಯಿಸಿ
  1. ಉಲ್ಲೇಖ ದೋಷ: Invalid <ref> tag; no text was provided for refs named frs
  2. https://royalsocietypublishing.org/doi/10.1098/rsbm.1983.0023
  3. ನೋಬೆಲ್ ಪುರಸ್ಕೃತರು (ಸಮಗ್ರ ಮಾಹಿತಿ ಕೋಶ:೧೯೦೧-೨೦೧೭), ಸಿ. ಆರ್. ಕೃಷ್ಣ ರಾವ್, ನವಕರ್ನಾಟಕ ಪ್ರಕಾಶನ, ವಿಸ್ತೃತ ಮೂರನೇ ಮುದ್ರಣ ೨೦೧೮, ಪುಟ ೫೨
  4. ೪.೦ ೪.೧ ೪.೨ Yukawa, Hideki (1982). Tabibito (旅人) = The Traveler. World Scientific. pp. 46–47 & 118, 121–123, 10, Foreword, 141 & 163. doi:10.1142/0014. ISBN 9971950103. ಉಲ್ಲೇಖ ದೋಷ: Invalid <ref> tag; name "Tabibito" defined multiple times with different content
  5. https://www.worldscientific.com/worldscibooks/10.1142/0014
  6. Yukawa, H. (1935). "On the Interaction of Elementary Particles" (PDF). Proc. Phys.-Math. Soc. Jpn. 17 (48).
  7. Yukawa Institute for Theoretical Physics; Gakkai, Nihon Butsuri (1946). Progress of Theoretical Physics. Kyoto: Yukawa Institute for Theoretical Physics and Physical Society of Japan. OCLC 44519062. Archived from the original on 2002-02-03. Retrieved 2008-03-03.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: