ಕಾರ್ಲ್ ಡಿ.ಆಂಡರ್ಸನ್
ಕಾರ್ಲ್ ಡಿ.ಆಂಡರ್ಸನ್ (೩ ಸೆಪ್ಟೆಂಬರ್ ೧೯೦೫ – ೧೧ ಜನವರಿ ೧೯೯೧) ಅಮೆರಿಕದ ಭೌತವಿಜ್ಞಾನಿ.ಇವರು ಪಾಸಿಟ್ರಾನ್‌ನನ್ನು ಕಂಡು ಹಿಡಿದು ಪ್ರಸಿದ್ಧರಾದರು. ಇವರಿಗೆ ಇದೇ ವಿಷಯಕ್ಕೆ ೧೯೩೬ರಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು.
'ಕಾರ್ಲ್ ಡಿ.ಆಂಡರ್ಸನ್' | |
---|---|
![]() ಕಾರ್ಲ್ ಡಿ.ಆಂಡರ್ಸನ್ | |
ಜನನ | ಸೆಪ್ಟೆಂಬರ್, ೩, ೧೯೦೫ ನ್ಯೂಯಾರ್ಕ್, ಅಮೆರಿಕ |
ಮರಣ | ಜನವರಿ ೧೧, ೧೯೯೧ ಕ್ಯಾಲಿಫೋರ್ನಿಯಾ,ಅಮೆರಿಕ |
ರಾಷ್ಟ್ರೀಯತೆ | ಅಮೆರಿಕ |
ಕಾರ್ಯಕ್ಷೇತ್ರಗಳು | ಭೌತಶಾಸ್ತ್ರ |
ಸಂಸ್ಥೆಗಳು | ಕ್ಯಾಲಿಫೋರ್ನಿಯಾ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ |
ಅಭ್ಯಸಿಸಿದ ಸಂಸ್ಥೆ | ಕ್ಯಾಲಿಫೋರ್ನಿಯಾ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ |
ಪ್ರಸಿದ್ಧಿಗೆ ಕಾರಣ | ಪಾಸಿಟ್ರಾನ್ |
ಗಮನಾರ್ಹ ಪ್ರಶಸ್ತಿಗಳು | ನೋಬೆಲ್ ಪ್ರಶಸ್ತಿ-೧೯೩೬ |
ಬಾಲ್ಯ ಮತ್ತು ಶಿಕ್ಷಣಸಂಪಾದಿಸಿ
ನ್ಯೂಯಾರ್ಕ್‍ನಲ್ಲಿ ಜನಿಸಿದ. ಕ್ಯಾಲಿಫೋರ್ನಿಯಾದ ಔದ್ಯೋಗಿಕರಣ ಸಂಸ್ಥೆಯಲ್ಲಿ (ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ವಿದ್ಯಾಭ್ಯಾಸ ಮಾಡಿ 1930ರಲ್ಲಿ ಪದವೀಧರನಾದ. ಕೆಲವು ಕಾಲದ ಮೇಲೆ ಅದೇ ವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದ.
ಸಂಶೋಧನೆಸಂಪಾದಿಸಿ
ವಿಶ್ವಕಿರಣಗಳ (ಕಾಸ್ಮಿಕ್ ರೇಸ್) ಸಂಶೋಧನೆಯಲ್ಲಿ ನಿರತನಾದ ಇವನು 1932ರಲ್ಲಿ ಪಾಸಿಟ್ರಾನ್ ಎಂಬ ಸೂಕ್ಷ್ಮ ಧನ ವಿದ್ಯುತ್ಕಣವನ್ನು ಕಂಡುಹಿಡಿದ. ಇದು ಎಲೆಕ್ಟ್ರಾನ್ ಎಂಬ ಋಣ ವಿದ್ಯುತ್ಕಣದ ಪ್ರತಿಯೋಗಿ. ಡಿರಾಕ್ ಆ ಮೊದಲೇ ವಿವರಿಸಿದ ತತ್ತ್ವದ ಪ್ರಕಾರ ಇಂಥ ಕಣ ಇರಬೇಕಿತ್ತು. ಅದನ್ನು ಪ್ರಾಯೋಗಿಕವಾಗಿ ಸಾಧಿಸಿದ ಹಿರಿಮೆ ಅವನದು. ಈ ಶೋಧನೆಗಾಗಿ 1936ರ ಭೌತಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ಯನ್ನು ಈತನಿಗೂ ವಿಕ್ಟರ್‍ಹೆಸ್ ಎಂಬಾತನಿಗೂ ಹಂಚಲಾಯಿತು[೧].. ಮೆಸಾನ್ ಕಣದ (ಎಲೆಕ್ಟ್ರಾನ್ ಮತ್ತು ಪ್ರೋಟಾನ್‍ಗಳ ಮಧ್ಯಸ್ಥವಾದ ಭಾರವನ್ನು ಹೊಂದಿದ) ಶೋಧನೆಯಲ್ಲಿಯೂ ಈತನ ಪಾತ್ರ ಮುಖ್ಯವಾದುದೇ. ನೆಡರ್ ಮೇಯರ್ ಎಂಬಾತ ಇವನ ಸಂಶೋಧನೆಗಳಲ್ಲಿ ಸಹಕಾರಿಯಾಗಿದ್ದ.
ಉಲ್ಲೇಖಗಳುಸಂಪಾದಿಸಿ
ಬಾಹ್ಯಸಂಪರ್ಕಸಂಪಾದಿಸಿ
- Annotated bibliography for Carl David Anderson from the Alsos Digital Library for Nuclear Issues Archived 2017-05-04 ವೇಬ್ಯಾಕ್ ಮೆಷಿನ್ ನಲ್ಲಿ.
- American National Biography, vol. 1, pp. 445–446.
- Carl Anderson and the Discovery of the Positron
- National Academy of Sciences Biographical Memoir
- Oral History interview transcript with Carl D. Anderson 30 June 1966, American Institute of Physics, Niels Bohr Library and Archives Archived 22 May 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ಟೆಂಪ್ಲೇಟು:ScienceWorldBiography