ಹಳದಿ ಮಲ್ಲಿಗೆ
Jasminum humile | |
---|---|
Scientific classification | |
ಸಾಮ್ರಾಜ್ಯ: | Plantae |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | Eudicots |
ಏಕಮೂಲ ವರ್ಗ: | ಆಸ್ಟರಿಡ್ಸ್ |
ಗಣ: | ಲ್ಯಾಮಿಯೇಲ್ಸ್ |
ಕುಟುಂಬ: | ಓಲಿಯೇಸೀ |
ಕುಲ: | ಜಾಸ್ಮಿನಮ್ |
ಪ್ರಜಾತಿ: | J. humile
|
Binomial name | |
Jasminum humile |
ಹಳದಿ ಮಲ್ಲಿಗೆ (ಯೆಲ್ಲೋ ಜಾಸ್ಮಿನ್, ಇಟಾಲಿಯನ್ ಜಾಸ್ಮಿನ್,[೧] ನೇಪಾಳ ಜಾಸ್ಮಿನ್, ಜಾಸ್ಮಿನಮ್ ಹ್ಯೂಮೈಲ್) ಕಾಶ್ಮೀರದಿಂದ ನೇಪಾಳದವರೆಗೆ 3000 ಮೀ ಎತ್ತರದ ಹಿಮಾಲಯ ಪರ್ವತಶ್ರೇಣೆಯಲ್ಲೆಲ್ಲ ಕಾಣದೊರೆಯುತ್ತದೆ. ರಾಜಸ್ಥಾನದ ಆಬು ಬೆಟ್ಟ ಹಾಗೂ ದಕ್ಷಿಣ ಭಾರತದ ಬೆಟ್ಟಸೀಮೆಗಳಲ್ಲೂ ಉಂಟು. ಈ ಪ್ರಭೇದವನ್ನು ವ್ಯಾಪಕವಾಗಿ ಕೃಷಿಮಾಡಲಾಗುತ್ತದೆ ಮತ್ತು ಗ್ರೀಸ್, ಸಿಸಿಲಿ ಮತ್ತು ಹಿಂದಿನ ಯೂಗೊಸ್ಲಾವಿಯಾದಲ್ಲಿ ದೇಶೀಕರಿಸಲಾಗಿದೆ ಎಂದು ವರದಿಯಾಗಿದೆ.[೨][೩]
ವಿವರಣೆ
ಬದಲಾಯಿಸಿಮೇಲ್ಮುಖವಾಗಿ ಹಬ್ಬಿ ಬೆಳೆಯುವ ಪೊದೆ ಜಾತಿ ಇದು. ಹೂಗಳು ಹಳದಿ ಬಣ್ಣದವು; ರೆಂಬೆಗಳು ತುದಿಯಲ್ಲಿ ಸ್ಥಿರವಾಗಿರುವ ಸೀಮಾಕ್ಷಿ ಮಂಜರಿಗಳಲ್ಲಿ ಅರಳುವುವು. ಡಾರ್ಜಿಲಿಂಗ್ ಸುತ್ತಣ ಪ್ರದೇಶಗಳಲ್ಲಿ ಈ ಜಾತಿಯದು ಹೆಚ್ಚು ಹುಲುಸಾಗಿ ಬೆಳೆಯುತ್ತಿದ್ದು ದೀರ್ಘಕಾಲ ಹೂ ಬಿಡುವುದಲ್ಲದೆ ಬೀಜಗಳನ್ನೂ ಉತ್ಪಾದಿಸುತ್ತದೆ.
ಕೃಷಿ
ಬದಲಾಯಿಸಿಇದನ್ನು ಬೀಜ ಇಲ್ಲವೆ ಕಡ್ಡಿಗಳ ಮೂಲಕ ವೃದ್ಧಿಸಲಾಗುತ್ತದೆ.
ಉಪಯೋಗಗಳು
ಬದಲಾಯಿಸಿಇದರ ಬೇರಿನಿಂದ ಹಳದಿ ರಂಗನ್ನು ತಯಾರಿಸುವುದಿದೆ. ಬೇರು ಗಜಕರ್ಣದ ಚಿಕಿತ್ಸೆಗೆ ಒಳ್ಳೆಯದೆನ್ನಲಾಗಿದೆ. ತೊಗಟೆಯ ರಸ ಮೊಳೆರೋಗದ ನಿವಾರಣೆಗೆ ಬಳಕೆಯಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ ಟೆಂಪ್ಲೇಟು:BSBI 2007
- ↑ RHS A-Z encyclopedia of garden plants. United Kingdom: Dorling Kindersley. 2008. p. 1136. ISBN 978-1405332965.
- ↑ Kew World Checklist of Selected Plant Families, Jasminum humile