ಹಳದಿ ಕಣಗಿಲೆ
ಹಳದಿಕಣಗಿಲೆ
ಬದಲಾಯಿಸಿಇದು ನಿತ್ಯಹರಿದ್ವರ್ಣ ಉಷ್ಣವಲಯದ ಪೊದೆ ಸಸ್ಯ ಅಥವಾ ಸಣ್ಣ ಮರವಾಗಿದೆ. ಇದರ ಎಲೆಗಳು ಹಸಿರು ಬಣ್ಣದಲ್ಲಿರುತ್ತದೆ. ಇದು ಚೀನಿ ಅದೃಷ್ಟಅಡಿಕೆಗೆ ಹೋಲುತ್ತದೆ. ಇದರ ವೈಜ್ಞಾನಿಕ ಹೆಸರು ಕ್ಯಾಸ್ಸೆಬೇಲಾ ಥೆವೆಟಿಯಾ.[೧]
ಇತರೆ ಹೆಸರುಗಳು
ಬದಲಾಯಿಸಿವಿವರಣೆ
ಬದಲಾಯಿಸಿಈ ಸಸ್ಯವು ಬಿಹಾರ, ದೆಹಲಿ, ಗುಜರಾತ್,ಪಂಜಾಬ್,ಚೀನಾ, ಬಲೂಚಿಸ್ತಾನ್, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು ಮತ್ತು ಉತ್ತರ ಪ್ರದೇಶಗಳಲ್ಲಿ ಪ್ರಚಲಿತದಲ್ಲಿದೆ. ಮೆಕ್ಸಿಕೋ ಮತ್ತು ಮಧ್ಯ ಅಮೇರಿಕಾದಾದ್ಯಂತ ಇದು ಒಂದು ಸ್ಥಳೀಯ ವಿಷಕಾರಿ ಸಸ್ಯವಾಗಿದೆ. ಈ ಸಸ್ಯವನ್ನು ಅಲಂಕಾರಿಕ ವ್ಯಾಪರಕ್ಕಾಗಿ ಬಳಸಲಾಗುತ್ತದೆ. ಇದನ್ನು ವೆಸ್ಟ್ ಇಂಡೀಸ್ನ ಅದೃಷ್ಟ ಅಡಿಕೆ ಎಂದೂ ಸಹ ಕರೆಯಲಾಗುತ್ತದೆ.[೩]
ದೈಹಿಕರಚನೆ
ಬದಲಾಯಿಸಿಇದರ ಕಾಂಡವು ಬೂದು ಬಣ್ಣವನ್ನು ಹೊಂದಿರುತ್ತದೆ. ಹೂವುಗಳು ಬೇಸಿಗೆಯ ಕಾಲದಲ್ಲಿ ಅರಳುತ್ತವೆ. ಸುಧೀರ್ಘ ಕೊಳವೆಯ ಆಕಾರದ ಹಾಗೂ ಕೆಲವೊಮ್ಮೆ ಪರಿಮಳಯುಕ್ತ ಹಳದಿ ಹೂವುಗಳನ್ನು ಹೊಂದಿದೆ. ಇದರ ಫಲವು ಆಳವಾದ ಕೆಂಪು-ಕಂದು ಬಣ್ಣದಲ್ಲಿದ್ದು, ದೊಡ್ಡ ಬೀಜದಿಂದ ಸುತ್ತುವರೆಯುತ್ತದೆ.[೪]
ಧಾರ್ಮಿಕ ಪ್ರಾಮುಖ್ಯತೆ
ಬದಲಾಯಿಸಿಇದರ ಪ್ರಕಾಶಮಾನವಾದ ಹಳದಿ ಬಣ್ಣದ ಹೂವುಗಳನ್ನು ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಅದರಲ್ಲೂ ಹಿಂದೂಧರ್ಮದ ಶಿವನನ್ನು ಪೂಜಿಸುವುದಕ್ಕೆ ಬಳಸಲಾಗುತ್ತದೆ.
ಉಪಯೋಗಗಳು
ಬದಲಾಯಿಸಿ- ಚರ್ಮದ ಕಾಯಿಲೆಗಳ ಸಂದರ್ಭದಲ್ಲಿ ಗಾಯಗಳಿಗೆ ಬಳಸಲಾಗುತ್ತದೆ.
- ಇದನ್ನು ಅಲಂಕಾರಿಕ ಸಸ್ಯ ಎಂದು ಬೆಳೆಸಲಾಗುತ್ತದೆ.
- ಈ ಸಸ್ಯವನ್ನು ಉದ್ಯಾನವನಗಳಲ್ಲಿ ನೆಡಲಾಗುತ್ತದೆ.
- ಹಿಮ ಪೀಡಿತ ಪ್ರದೇಶಗಳಲ್ಲಿ ಇದು ಕಂಟೇನೆರ್ ಸಸ್ಯವಾಗಿದೆ.
- ಇದು ಹೆಚ್ಚಿನ ಮಣ್ಣುಗಳನ್ನು ಸಹಿಸಿಕೊಳ್ಳುತ್ತದೆ ಮತ್ತು ಬರಸಹಿಷ್ಣುವಾಗಿರುತ್ತದೆ.\
ಉಲ್ಲೇಖಗಳು
ಬದಲಾಯಿಸಿ- ↑ http://florakarnataka.ces.iisc.ac.in/hjcb2/herbsheet.php?id=371&cat=1
- ↑ https://easyayurveda.com/2013/10/14/nerium-indicum-karavira-benefits-usage-side-effects-ayurveda-details/
- ↑ http://www.planetayurveda.com/library/karavira-nerium-indicum
- ↑ https://keyserver.lucidcentral.org/weeds/data/media/Html/cascabela_thevetia.htm