ಸ್ವಾಮಿ ವಿಷ್ಣು ತೀರ್ಥ

ಸ್ವಾಮಿ ವಿಷ್ಣು ತೀರ್ಥ (೧೮೮೮-೧೯೬೯), ಮುನಿಲಾಲ್ ಎ೦ದೂ ಕರೆಯಲ್ಪಡುವ ಇವರು ಸನ್ಯಾಸಿ, ಲೇಖಕ, ಮತ್ತು ಶಕ್ತಿಪತ್ ಸಂಪ್ರದಾಯದ ಸಿದ್ದಯೋಗದ ಗುರುವಾಗಿ ಪ್ರಮುಖ ಪಾತ್ರ ವಹಿಸಿದ್ದಾರೆ . ಅವರು ೧೫ ಅಕ್ಟೋಬರ್ ೧೮೮೮ ರಂದು ಭಾರತದ ಹರಿಯಾಣದ ಜಜ್ಜಾರ್‌ನಲ್ಲಿ ಜನಿಸಿದರು. ಅವರು ಸ್ನಾತಕೋತ್ತರ ಪದವಿಯನ್ನು ಪಡೆಯುವಾಗ ಚಿಕ್ಕಪ್ಪನ ಜೊತೆ ಉಳಿದರು, ನಂತರ ವಿವಾಹವಾದರು ಮತ್ತು ಅಲಿಘಡ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಮತ್ತು ಕಾನೂನಿನಲ್ಲಿ ಸ್ನಾತಕ ಪದವಿ ಪಡೆದ ನ೦ತರಛತ್ತೀಸ್‌ಗಡ ದ ಬಿಲಾಸ್‌ಪುರದಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದರು. ತದನಂತರ ಅವರು ಮೀರತ್‌ನ ಗಾಜಿಯಾಬಾದ್ ಜಿಲ್ಲೆಯಲ್ಲಿ ವಕೀಲರಾಗಿ ಅಭ್ಯಾಸ ಮಾಡಿದರು, ಅಲ್ಲಿ ಅವರ ಸಹಾಯಕರಾಗಿ ಭಾರತದ ಮಾಜಿ ಪ್ರಧಾನಿ ದಿವಂಗತ ಚೌಧರಿ ಚರಣ್ ಸಿಂಗ್ ಅವರು ಇದ್ದರು.

ಮುನಿಲಾಲ್ ದ೦ಪತಿಗಳಿಗೆ ಇಬ್ಬರು ಮಕ್ಕಳು ಒಬ್ಬ ಮಗ ಮತ್ತು ಒಬ್ಬ ಮಗಳು . ಮುನಿಲಾಲ್ ಬಾಲ್ಯದಿಂದಲೂ ವಿವಿಧ ಸುಧಾರಿತ ಕ್ರಿಯೆಗಳನ್ನು ಅನುಭವಿಸಿದರೂ, ದೆಹಲಿಯ ಪ್ರಸಿದ್ಧ ಕಲ್ಕಾಜಿ ದೇವಸ್ಥಾನದಲ್ಲಿ ವಾಸಿಸುತ್ತಿದ್ದ ಬಂಗಾಳಿ ಸಂತರಿಂದ ಸೂಕ್ಷ್ಮವಾದ ಸಾಧನಾಗಳಿಗೆ ಮಾರ್ಗದರ್ಶನ ಪಡೆದರು. ಮಹಾನ್ ಯೋಗ ದಾರ್ಶನಿಕ ಬಾಬಾ ಸೀತಾರಾಂ ದಾಸ್ ಓಂಕಾರನಾಥ್ ಅವರು ಅಯೋಧ್ಯೆಯಲ್ಲಿ ಮುನಿಲಾಲ್ ಅವರಿಗೆ ಜೀವನದ ಧ್ಯೇಯವನ್ನು ಪೂರೈಸಲು ಸಂಸ್ಕೃತದಲ್ಲಿ ಅಧ್ಯಯನ ಮಾಡಲು ಹೇಳಿದರು. ಉಚ್ಚ ನ್ಯಾಯಲಯ ದ ನ್ಯಾಯಾಧೀಶರೊಬ್ಬರು ಮುನಿಲಾಲ್ ಅವರನ್ನು ಸ್ವಾಮಿ ಯೋಗಾನಂದರಿಗೆ ಪರಿಚಯಿಸಿದರು ಮತ್ತು ಹಲವಾರು ಪತ್ರವ್ಯವಹಾರದ ನಂತರ ಹೃಷಿಕೇಶದಲ್ಲಿ ಅವರನ್ನು ಸಂಪರ್ಕಿಸಲು ಸಾಧ್ಯವಾಯಿತು. ಹೃಷಿಕೇಶದ ಸ್ವರ್ಗ ಆಶ್ರಮದಲ್ಲಿ ಅವರು ೧೯೩೩ ರಲ್ಲಿ ಯೋಗಾನಂದ ಮಹಾರಾಜರಿಂದ ಶಕ್ತಿಪತ್ ದೀಕ್ಷೆಯನ್ನು ಪಡೆದರು. ಬದರಿನಾಥ ಮತ್ತು ಕೇದಾರನಾಥದ ಸುತ್ತಲೂ ಅನೇಕ ಪವಿತ್ರ ಸ್ಥಳಗಳಿಗೆ ಪ್ರಯಾಣಿಸಿದ ನಂತರ, ೧೯೩೯ ರಲ್ಲಿ ಮುನಿಲಾಲ್ ಅವರು ಸನ್ಯಾಸತ್ತ್ವ ದೀಕ್ಷೆಯನ್ನು ಪಡೆಯುವ ಇಚ್ಛೆ ವ್ಯಕ್ತಪಡಿಸಿದರು. ಯೋಗಾನಂದರು ಅವನನ್ನು ಬನಾರಸ್‌ನಲ್ಲಿರುವ ಸ್ವಾಮಿ ಶಂಕರ್ ಪುರುಷೋತ್ತಮ ತೀರ್ಥರಿಗೆ ನಿರ್ದೇಶಿಸಿದರು, ಅವರು ಗಂಗಾನದಿಯ ಬಳಿಯ ಹರಿದ್ವಾರದ ಮೋಹನ್ ಆಶ್ರಮದಲ್ಲಿ ದೀಕ್ಷೆಯನ್ನುಪ್ರಾರಂಭಿಸಿದರು. ನಂತರ ಅವರ ಹೆಸರು ಸ್ವಾಮಿ ವಿಷ್ಣು ತೀರ್ಥ ಎ೦ದು ಬದಲಾಯಿತು. ಯೋಗಾನಂದನ ನಿರ್ದೇಶನದಂತೆ, ಅವರು ಇಂದೋರ್ ಕಡೆಗೆ ಹೋದರು ಮತ್ತು ಅಂತಿಮವಾಗಿ ದೇವಾಸ್‌ನಲ್ಲಿ ನೆಲೆಸಿದರು, ಅಲ್ಲಿ ಅವರು ನಾರಾಯಣ ಕುಟಿ ಸನ್ಯಾಸಿಗಳ ಆಶ್ರಮಕ್ಕೆ ಅಡಿಪಾಯ ಹಾಕಿದರು.

ಸ್ವಾಮಿ ವಿಷ್ಣು ತೀರ್ಥರು ಭಾರತದ ಸಿದ್ಧ ಯೋಗ ಸಂಪ್ರದಾಯಗಳಲ್ಲಿ ಪ್ರವೀಣರು ಹಾಗು ಶ್ರೇಷ್ಠ ವ್ಯಕ್ತಿತ್ವ ದವ ರಾಗಿಧ್ಹರು . ಅವರು ಅನೇಕ ಆಧ್ಯಾತ್ಮಿಕ ಆಕಾಂಕ್ಷಿಗಳಿಗೆ ದೀಕ್ಷೆಯನ್ನು ನೀಡಿ ಶಕ್ತಿಪತ್( ಶಕ್ತಿ ಮೂಲ ) ವ್ಯವಸ್ಥೆ ಗೆ ಸೇರಿಸಿದ್ಹಾರೆ ಮತ್ತು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಆದಿ ಶಂಕರಾಚಾರ್ಯರ "ಸೌಂದರ್ಯ ಲಹರಿ" ಯ ಕುರಿತಾದ ಅವರ ವ್ಯಾಖ್ಯಾನವು ವಿಶಿಷ್ಟವಾಗಿದೆ ಮತ್ತು ಮಹಾಮಹೋಪಾಧ್ಯಾಯ ಗೋಪಿನಾಥ ಕವಿರಾಜ್ ಅವರಂತಹ ಮಹಾನ್ ಪ್ರತಿಪಾದಕರಿಂದ ಪ್ರಶಂಸಿಸಲ್ಪಟ್ಟಿತು. ಅವರ ಅತ್ಯಂತ ಸ್ಮರಣೀಯ ಆಂಗ್ಲ  ಭಾಷೆ ಯ ಕೃತಿ ದೇವಾತ್ಮ ಶಕ್ತಿ, ದೈವಿಕ ಶಕ್ತಿ ( ಕುಂಡಲಿನಿ ಶಕ್ತಿ ) ಮತ್ತು ಶಕ್ತಿಪತ್ ವಿಜ್ಞಾನದ ಅಧ್ಯಯನ. ಇದು ಪುರಾತನ ಗ್ರಂಥಗಳಲ್ಲಿ ದಾಖಲಾಗಿರುವ ಸಂಪ್ರದಾಯಗಳನ್ನು ಮತ್ತು   ಸ್ವಂತ ಅನುಭವಗಳನ್ನು ಆಧರಿಸಿದೆ. ದೇವಾತ್ಮ ಶಕ್ತಿ (ಕುಂಡಲಿನಿ), ಪುಸ್ತಕದಲ್ಲಿ, ವಿಷ್ಣು ತೀರ್ಥರು ಗಮನಿಸಿದ ಹಾಗೆ : "ಒಬ್ಬ ಆಕಾಂಕ್ಷಿಯು ತನ್ನ ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸದ ಹೊರತು ಆಧ್ಯಾತ್ಮಿಕತೆಯಲ್ಲಿ ನಿಜವಾದ ಪ್ರಗತಿಯು ಸಾಧ್ಯವಿಲ್ಲ ಎಂದು ನಾವು ಪದೇ ಪದೇ ಗಮನಸೆಳೆದಿದ್ದೇವೆ ಮತ್ತು ಜಾಗೃತಿಯ ಸುಲಭವಾದ ಮಾರ್ಗವೆಂದು ಕೂಡ ಸೂಚಿಸಲಾಗಿದೆ. ಆ ಶಕ್ತಿಯು ಆಧ್ಯಾತ್ಮಿಕ ಗುರುಗಳಿಂದ ಶಕ್ತಿಪತ್‌ನಿಂದ ಆರಂಭವಾಗಿದೆ. " []

ವಿಷ್ಣು ತೀರ್ಥರು ಗಂಗಾ ನದಿಯ ಬಗ್ಗೆ ಅಪಾರವಾದ ಪ್ರೀತಿ ಹೊಂದಿದ್ದರು ಮತ್ತು ಹೃಷಿಕೇಶದ ಯೋಗ ಶ್ರೀ ಪೀಠದ ಆಶ್ರಮದಲ್ಲಿ ಪ್ರತಿ ವರ್ಷ  ಕೆಲವು ತಿಂಗಳುಗಳನ್ನು ಕಳೆಯುತ್ತಿದ್ದರು. ಆಶ್ರಮಕ್ಕಾಗಿ ಭೂಮಿಯನ್ನು ಅವರ ಗುರು ಸ್ವಾಮಿ ಯೋಗಾನಂದರು ಉಡುಗೊರೆಯಾಗಿ ನೀಡಿದ್ದಾರೆ. ಅವರ ಶಿಷ್ಯ ಸ್ವಾಮಿ ಶಿವಂ ತೀರ್ಥ ಮತ್ತು ಇತರರು ೧೯೬೫ ರಲ್ಲಿ ಕೇಂದ್ರದ ನಿರ್ಮಾಣವನ್ನು ನಡೆಸಿದರು. ಅವರು ೧೯೬೯ ರಲ್ಲಿ ತಮ್ಮ ದೇಹವನ್ನು ತೊರೆದರು.

ವಿಷ್ಣು ತೀರ್ಥರ ಮೇರು ವ್ಯಕ್ತಿತ್ವವನ್ನು ಚುರ್ನಿಂಗ್ ಆಫ ದಿ ಹಾರ್ಟ್(ಭಾಗಗಳು I, II, III) ಮತ್ತು ಅವನ ಶಿಷ್ಯ ಸ್ವಾಮಿ ಶಿವ ಓಂ ತೀರ್ಥರು ಬರೆದ "ಸಾಧನ್ ಶಿಖರ್" ನಿಂದ ಅರ್ಥಮಾಡಿಕೊಳ್ಳಬಹುದು. ಇಲ್ಲಿ ಒಬ್ಬ ಗುರು ಒಬ್ಬ ಮನುಷ್ಯನಿಂದ ಶಿಷ್ಯನನ್ನು ರೂಪಿಸುತ್ತಿದ್ದಾನೆ . ಅವರ ಗುರು ಬಂಧುಗಳಲ್ಲಿ ಒಬ್ಬರು (ಅದೇ ಗುರುವಿನ ಶಿಷ್ಯ) ದೇವೇಂದ್ರಜಿ ವಿಜ್ಞಾನಿ ಮಹಾರಾಜ್ ಅವರನ್ನು ಯಾವುದೇ ಪಾಪದ ಸುಳಿವು ಇಲ್ಲದ ವ್ಯಕ್ತಿ ಎಂದು ವಿವರಿಸಿದ್ದಾರೆ.

  • ದೇವಾತ್ಮ ಶಕ್ತಿ (ಕುಂಡಲಿನಿ) ದೈವಿಕ ಶಕ್ತಿ - (ಇಂಗ್ಲಿಷ್ ನಲ್ಲಿ) ಡಿಸೆಂಬರ್ 1948, ಯೋಗ ಶ್ರೀ ಪೀಠ ಟ್ರಸ್ಟ್, ಭಾರತ.
  • ಅಧ್ಯಾತ್ಮ ವಿಕಾಸ್
  • ಆತ್ಮ ಪ್ರಬೋಧ್
  • ಗೀತಾತತ್ವಮೃತ್
  • ಪ್ರಾಣ ತತ್ವ
  • ಪ್ರಿತ್ಯಾಭಿಗಹೃದ್ಯಂ (ವ್ಯಾಖ್ಯಾನ)
  • ಸಾಧನಾ ಸಂಕೇತ್
  • ಸೌಂಡ್ಯ ಲಾಹಿರಿ (ವ್ಯಾಖ್ಯಾನ)
  • ಶಕ್ತಿಪತ್
  • ಶಿವ ಸೂತ್ರ ಪ್ರಬೋಧಿನಿ
  • ಉಪನಿಷದ್ವಾನಿ
  • ಸಿದ್ಧಯೋಗ

ಬಾಹ್ಯ ಸಂಪರ್ಕ

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ
  1. Swami Vishnu Tirtha, Devatma Shakti (Kundalini) Divine Power, Chapter "Secret of Upasana (Worship)" (Delhi, India, Swami Shivom Tirtha, 1993), p. 129.