ರಾಮ್‌ದೇವ್
ಬಾಬಾ ರಾಮ್‌ದೇವ್ ಎಂದೂ ಪರಿಚಿತರಾಗಿರುವ ಸ್ವಾಮಿ ರಾಮ್‌ದೇವ್ ಹಿಂದಿ:स्वामी रामदेव ಭಾರತದ ಒಬ್ಬ ಹಿಂದೂ ಸ್ವಾಮಿ. ಅವರು ವಿಶೇಷವಾಗಿ ಪತಂಜಲಿಯ ಯೋಗಸೂತ್ರಗಳಲ್ಲಿ ಪ್ರತಿಪಾದಿಸಲಾದ ಯೋಗವನ್ನು ಜನಪ್ರಿಯಗೊಳಿಸುವ ತಮ್ಮ ಪ್ರಯತ್ನಗಳಿಗಾಗಿ ಪ್ರಸಿದ್ಧರಾಗಿದ್ದಾರೆ. ಅವರು ಯೋಗವನ್ನು ಜನಪ್ರಿಯಗೊಳಿಸಲು ಉದ್ದೇಶಿಸುವ ಮತ್ತು ಆಯುರ್ವೇದ ಚಿಕಿತ್ಸೆಗಳನ್ನು ನೀಡುವ ದಿವ್ಯ ಯೋಗ ಮಂದಿರ ಟ್ರಸ್ಟ್‌ನ ಸ್ಥಾಪಕರ ಪೈಕಿ ಕೂಡ ಒಬ್ಬರು. ಅವರ ಶಿಬಿರಗಳಲ್ಲಿ ಜನರು ದೊಡ್ಡ ಪ್ರಮಾಣದಲ್ಲಿ ಭಾಗವಹಿಸುತ್ತಾರೆ. ಸುಮಾರು ೮೫ ಮಿಲಿಯನ್ ಜನರು[೧], ಟಿವಿ ವಾಹಿನಿಗಳು ಮತ್ತು ವಿಡಿಯೂಗಳ ಮೂಲಕ ಅವರ ಯೋಗ ಶಿಬಿರಗಳನ್ನು ವೀಕ್ಷಿಸಿ ಪಾಲಿಸುತ್ತಿದ್ದಾರೆ. ಅವರ ಯೋಗ ಶಿಕ್ಷಣ ತರಗತಿಗಳು ಸಾಮಾನ್ಯ ಜನರಿಗಾಗಿರುತ್ತವೆ ಮತ್ತು ಎಲ್ಲರಿಗೂ ಉಚಿತವಾಗಿರುತ್ತವೆ. ಜೀವನದಲ್ಲಿ ಎಲ್ಲರಿಗೂ ನೆರವಾಗಬೇಕೆಂಬುದು ಇವರ ತತ್ವವಾಗಿದೆ.
ಬಾಬಾ ರಾಮ್‌ದೇವ್ | |
---|---|
ಜನನ | Ramkishan Yadav ಹರಿಯಾಣ, India |
ರಾಷ್ಟ್ರೀಯತೆ | Indian |
ವೃತ್ತಿ | Yogi |
ಗಮನಾರ್ಹ ಕೆಲಸಗಳು | Efforts in proliferation of Pranayama, Yoga and Ayurveda. Leading the Bharat Swabhiman Andolan (Mission) to eradicate corruption from India and restore prosperity in the country. |
ಹಿನ್ನೆಲೆ
ಬದಲಾಯಿಸಿಇವರು ಹರಿಯಾಣಾದ[ಸೂಕ್ತ ಉಲ್ಲೇಖನ ಬೇಕು] ಮಹೇಂದ್ರಗಢ್ ಜಿಲ್ಲೆಯ ಸೈದ್‌ಅಲಿಪುರ್‌ನಲ್ಲಿ ಗುನ್ನು ರಾಮ್‌ಕಿಶನ್ ಯಾದವ್ ಎಂಬ ಹೆಸರಿನಲ್ಲಿ ಜನಿಸಿದರು.[ಸೂಕ್ತ ಉಲ್ಲೇಖನ ಬೇಕು]ಬಾಲ್ಯದಲ್ಲಿ ಅವರು ಪಾರ್ಶ್ವವಾಯುವಿನಿಂದ ನರಳುತ್ತಿದ್ದರು. ಯೋಗದ ಮೂಲಕ ಮತ್ತೆ ತಮ್ಮ ಶರೀರದ ಪೂರ್ಣ ಕಾರ್ಯಾತ್ಮಕತೆಯನ್ನು ಹೊಂದಲು ತಮಗೆ ಸಾಧ್ಯವಾಯಿತೆಂದು ಬಾನುಲಿ[ಸೂಕ್ತ ಉಲ್ಲೇಖನ ಬೇಕು] ಪ್ರಸಾರದಲ್ಲಿ ಅವರು ಹೇಳಿದ್ದಾರೆ. ಇವರು ಶಹಬಾಜ್‌ಪುರದ ಶಾಲೆಯಲ್ಲಿ ಎಂಟನೇ ತರಗತಿಯವರೆಗೂ ಕಲಿತರು. ನಂತರ ಸಂಸ್ಕೃತ ಮತ್ತು ಯೋಗವನ್ನು ಅಧ್ಯಯನಮಾಡಲು ಖಾನ್‌ಪುರ್ ಗ್ರಾಮದಲ್ಲಿ ಅವರು ಆರ್ಷ ಗುರುಕುಲವನ್ನು ಸೇರಿದರು. ಕಾಲಕ್ರಮೇಣ, ಅವರು ಸನ್ಯಾಸತ್ವ ವನ್ನು ಸ್ವೀಕರಿಸಿ(ಅಥವಾ ಏಕಾಂತ ಜೀವನಕ್ಕೆ ಜಾರಿದರು) ನಂತರ ಬಾಬಾ ರಾಮ್‌ದೇವ್ ಎಂಬ ಈಗಿನ ಹೆಸರನ್ನು ಪಡೆದರು. ಆಮೇಲೆ ಇವರು ಜಿಂದ್ ಜಿಲ್ಲೆಯ ಕಡೆ ಹೊರಟು ಕಲ್ಬಾದ ಆರ್ಷ ಗುರುಕುಲಕ್ಕೆ ಸೇರಿದರು ಮತ್ತು ಹರಿಯಾಣಾದ್ಯಂತ ಹಳ್ಳಿಗಳಿಗರಿಗೆ ಉಚಿತ ಯೋಗ ತರಬೇತಿಯನ್ನು ಪ್ರಾರಂಭಿಸದಪ್ಪಗಿನ ಅಚ್ಚು
ಕಾರ್ಯಗಳು
ಬದಲಾಯಿಸಿಸ್ವಾಮಿ ರಾಮ್‌ದೇವ್ ಅವರು ೧೯೯೫ರಲ್ಲಿ ಆಚಾರ್ಯ ಕರ್ಮವೀರ್ ಮತ್ತು ಆಚಾರ್ಯ ಬಾಲಕೃಷ್ಣ ಜತೆಗೂಡಿ ದಿವ್ಯ ಯೋಗ ಮಂದಿರವನ್ನು ಸ್ಥಾಪಿಸಿದರು. ಆಚಾರ್ಯ ಕರ್ಮವೀರ್ ಅವರು ಯೋಗ ಮತ್ತು ವೇದಗಳಲ್ಲಿ ಒಳ್ಳೆಯ ಪಾಂಡಿತ್ಯವನ್ನು ಹೊಂದಿರುವರು, ಹಾಗೆಯೇ ಬಾಲಕೃಷ್ಣರವರು ದೈಹಿಕತಜ್ಞರು ಜೊತೆಗೆ ಆಯುರ್ವೇದಪದವೀಧರರಾಗಿದ್ದಾರೆ[೨]. (ಆದರೆ, ಕಾರಣಾಂತರಗಳಿಂದ ಆಚಾರ್ಯ ಕರ್ಮವೀರ್ ದಿವ್ಯ ಯೋಗ ಮಂದಿರವನ್ನು ತೊರೆದು, ಈಗ ಮುಂಬೈನಲ್ಲಿ ತಮ್ಮ ಧರ್ಮ ಪ್ರಚಾರಕರೊಂದಿಗೆ ವೈಯುಕ್ತಿವಾಗಿ ಮತ್ತು ಪ್ರತ್ಯೇಕವಾಗಿಯೂ ಅಭ್ಯಸಿಸುತ್ತಿದ್ದಾರೆ). ಸ್ವಾಮಿ ರಾಮ್‌ದೇವ್‌ರ ಟಿವಿ ಕಾರ್ಯಕ್ರಮಗಳು ಮತ್ತು ಯೋಗ ಶಿಬಿರಗಳು ಅಪಾರ ಜನಪ್ರಿಯತೆಯನ್ನು ಗಳಿಸಿವೆ. ಅವರ ಯೋಗ ಶಿಬಿರಗಳಲ್ಲಿ ಸುಮಾರು ೨೦,೦೦೦ ಜನರು ಹಾಜರಾಗುತ್ತಾರೆ.[೩] ಈ ನಡುವೆ ಸ್ವಾಮಿಜೀಯವರನ್ನು ಹಲವು ಪ್ರದೇಶಗಳಿಗೆ ಯೋಗ ಶಿಬಿರವನ್ನು ನಡೆಸಲು ಆಹ್ವಾನಿಸಲಾಗಿತ್ತು. ಇದರಂತೆ ಸ್ವಾಮಿಜೀ ತಮ್ಮ ಯೋಗ ಶಿಬಿರವನ್ನು ಭಾರತದ ರಾಷ್ಟ್ರಪತಿಯವರ ಮನೆಯಾದ ರಾಷ್ಟ್ರಪತಿ ಭವನದಲ್ಲಿಯೂ ಆಯೋಜಿಸಿದ್ದರು.[೩] ಇವರ ಟಿವಿ ಕಾರ್ಯಕ್ರಮವನ್ನು ಜಗತ್ತಿನ ಹಲವು ಖಂಡಗಳಲ್ಲಿ ಪ್ರಸಾರ ಮಾಡಲಾಗಿದೆ, ಅವುಗಳಲ್ಲಿ ಆಫ್ರಿಕಾ, ಆಸ್ಟ್ರೇಲಿಯಾ, ಏಷ್ಯಾ, ಯೂರೋಪ್ ಮತ್ತು ಅಮೇರಿಕಾ ಖಂಡಗಳು ಒಳಗೊಂಡಿವೆ. ಸ್ವಾಮಿಜೀಯವರ ಕಾರ್ಯಕ್ರಮದ ವರದಿಗೆ ಅಪಾರ ಬೇಡಿಕೆಯಿದ್ದು, ಟಿವಿ ವಾಹಿನಿಗಳ ಕಾರ್ಯನಿರ್ವಾಹಕರು ಸ್ವಾಮಿಜೀಯವರ ಕಾರ್ಯಕ್ರಮವನ್ನು ಬೇಡಿಕೆಯಿಂದ ದೃಶ್ಯೀಕರಿಸಿ ಒಯ್ಯುತ್ತಾರೆ[೩]. ಈ ಕಾರ್ಯಕ್ರಮವನ್ನು ಸುಮಾರು ೨೦ ಮಿಲಿಯನ್ ನಿಯತವಾಗಿ ನೋಡುವಂತಹ ವೀಕ್ಷಕರಾಗಿದ್ದಾರೆ.[೩] ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವುಗಳ ಲಾಭವನ್ನು ಪಡೆಯುತ್ತಿರುವವರು, ಯೋಗವು ತಮ್ಮ ದೇಹದ ರಕ್ತದ ಒತ್ತಡ, ಹೆಚ್ಚಿರುವ ರಕ್ತದ ಮಧುಮೇಹ, ಬೆನ್ನೆಲುಬಿನ ಬೇನೆ, ಯಕೃತ್ತಿನ ಉರಿಯೂತ ಮತ್ತು ಸ್ಥೂಲಕಾಯತೆ ಮುಂತಾದ ವಿವಿಧ ಕಾಯಿಲೆಗಳನ್ನು ಶಮನಗೊಳಿಸಿದೆ ಎಂದು ಹೇಳಿಕೊಂಡಿದ್ದಾರೆ.[೩] ಸ್ವಾಮಿ ರಾಮ್‌ದೇವ್ ಅವರ ಇತರ ಯೋಗ ಶಿಕ್ಷಕರಿಗಿಂತ ಹೇಗೆ ಭಿನ್ನವಾಗಿದ್ದಾರೆ ಎಂದರೆ, ಅವರು ಪ್ರಾಣಾಯಾಮಕ್ಕೆ ಹೆಚ್ಚಿನ ಮಹತ್ವ ಕೊಟ್ಟು ಅವುಗಳನ್ನು ಸಾಮಾನ್ಯ ಜನರಿಗಾಗಿ ಬೋಧಿಸುವುದರ ಜೊತೆಗೆ ಅದನ್ನು ಅಭ್ಯಾಸಮಾಡುವುದಕ್ಕೆ ಅನುಕೂಲತೆಗಳನ್ನು ಮಾಡಿಕೊಟ್ಟಿರುವುದು.[೩] ಆದರೆ ಇತರ ಯೋಗ ಶಿಕ್ಷಕರು ಆಸನಗಳ (ಯೋಗ ದೇಹಭಂಗಿಗಳು) ಮೇಲೆ ಹೆಚ್ಚಿನ ಮಹತ್ವವನ್ನು ನೀಡಿ ಬೋಧಿಸುತ್ತಾರೆ.[೩] ಇಲ್ಲಿ ವಿಸ್ತಾರವಾದ ಪ್ರಾಣಯಾಮ ಪ್ರದರ್ಶನದ ಚಿತ್ರೀಕರಣ Archived 2009-02-01 ವೇಬ್ಯಾಕ್ ಮೆಷಿನ್ ನಲ್ಲಿ.: ಬಾಬಾ ರಾಮ್‌ದೇವ್ ಪ್ರದರ್ಶಿಸುವ ಉತ್ತಮ ಆರೋಗ್ಯಕ್ಕಾಗಿನ ’ಪ್ರಾಣಾಯಾಮ’ ಮತ್ತು ’ಪ್ರತ್ಯಾಹಾರ’(ನಿಶ್ಚಿತ ಆಹಾರ)ದ ಅಭ್ಯಾಸವು ಭಾರತೀಯ ಸಂಸ್ಕೃತಿಯ ಭಾಗವಾಗಿಹೋಗಿದೆ.[೪] ವಿಶ್ವವಿಖ್ಯಾತ ಅಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಅವರು ಸ್ವಾಮಿ ರಾಮ್‌ದೇವ್ ಕುರಿತು ಹೀಗೆ ಹೇಳಿದ್ದಾರೆ," ಈ ದೇಶದಲ್ಲಿ (ಭಾರತ) ಯೋಗವನ್ನು ಪುನರುಜ್ಜೀವನಗೊಳಿಸಿರುವ ಒಬ್ಬ ವ್ಯಕ್ತಿಯನ್ನು ಹೆಸರಿಸುವುದಾದರೆ ಅದು ಸ್ವಾಮಿ ರಾಮ್‌ದೇವ್ ಮಾತ್ರ. ಯೋಗ ಮಾರಕ ರೋಗಗಳನ್ನು ಸಹ ಶಮನಗೊಳಿಸುತ್ತದೆ ಮತ್ತು ಖಂಡಿತವಾಗಿಯೂ ಸ್ವಾಮಿ ರಾಮ್‌ದೇವ್ ಅವರು ಅದನ್ನು ಅನೇಕ ಬಾರಿ ಸಾಧಿಸಿ ತೋರಿಸಿದ್ದಾರೆ ಮತ್ತು ಅದನ್ನು ಮುಂದುವರೆಸುತ್ತಿದ್ದಾರೆ ಕೂಡ. ಸ್ವಾಮಿ ರಾಮ್‌ದೇವ್ ಯೋಗವನ್ನು ಎಷ್ಟು ವಿಸ್ತರಿಸಿದ್ದಾರೆಂದರೆ, ಅದನ್ನು ಶೀಘ್ರದಲ್ಲಿ ಅಥವಾ ಮುಂದೆ ಪ್ರತಿಯೊಬ್ಬರೂ ಅದನ್ನು ಅಳವಡಿಸಿಕೊಳ್ಳಬೇಕಾಗುತ್ತದೆ."[೩]
ಪತಂಜಲಿ ಯೋಗ ಪೀಠ
ಬದಲಾಯಿಸಿಆಗಸ್ಟ್ ೬, ೨೦೦೬ ರಲ್ಲಿ ಸ್ವಾಮಿ ರಾಮ್‌ದೇವ್ ಅವರ ಅತ್ಯಂತ ಪ್ರಮುಖ ಯೋಜನೆಯಾದ ಪತಂಜಲಿ ಯೋಗಪೀಠ (ಪಿವೈಪಿ)ಟ್ರಸ್ಟ್ ಉದ್ಘಾಟನೆಯಾಯಿತು. ಇದರ ಗುರಿ ಏನೆಂದರೆ ಚಿಕಿತ್ಸೆ, ಸಂಶೋಧನೆ ಮತ್ತು ಶಿಕ್ಷಣ(ಬೋಧನೆ) ಒಳಗೊಂಡಂತೆ ಜಗತ್ತಿನ ಅತ್ಯಂತ ಬೃಹತ್ ಆಯುರ್ವೇದ ಮತ್ತು ಯೋಗ ವಿಶ್ವವಿದ್ಯಾಲಯವನ್ನು ಕಟ್ಟುವುದು[೩][೫]. ಈ ಒಂದು ಟ್ರಸ್ಟ್ ತುಂಬಾ ವಿಶೇಷವಾಗಿ ಬಡವರಿಗೆ ಮತ್ತು ಕೈಲಾಗದವರಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದೆ. ಇಲ್ಲಿ ಬೇರೆ ಎಲ್ಲಾ ಆಸ್ಪತ್ರೆಗಳಿಗಿಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಒಳ್ಳೆಯ ನೀಡಲಾಗುತ್ತಿದೆ. ಸ್ವಾಮಿ ರಾಮ್‌ದೇವ್ ಪಿವೈಪಿ ಮೂಲಕ ಹಲವು ಸಂಸ್ಥೆಗಳು ಮತ್ತು ವೈದ್ಯಕೀಯ ಸಂಘಗಳ ಜೊತೆಗೆ ತಮ್ಮ ಕೆಲಸವನ್ನು ಮುಂದುವರೆಸುತ್ತಾ, ಶಿಕ್ಷಣ ಮತ್ತು ಯೋಗವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಹಾಗೆಯೇ ರೋಗಗಳಾದ ಮಧುಮೇಹ, ಅಧಿಕ ಒತ್ತಡ,ಸ್ಥೂಲಕಾಯತೆ ಇವುಗಳ ಮೇಲೆ ಯೋಗವು ಪ್ರಭಾವಶಾಲಿಯಾಗಿರುತ್ತದೆ ಎನ್ನುವ ವಿಚಾರದ ಕುರಿತು ಅವರು ಕೆಲಸ ಮಾಡುತ್ತಿದ್ದಾರೆ.
ರಾಷ್ಟ್ರೀಯ ವಿಷಯಗಳ ಕುರಿತು ಚರ್ಚೆ
ಬದಲಾಯಿಸಿಸ್ವಾಮಿ ರಾಮ್‌ದೇವ್‌ರವರು ತಮ್ಮ ಯೋಗ ಶಿಬಿರಗಳ ಮೂಲಕ ರಾಷ್ಟ್ರಮಟ್ಟದ ಅನೇಕ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಅವರು ಈಗಾಗಲೇ ಹಲವಾರು ವಿಷಯಗಳ ಕುರಿತಾಗಿ ಚರ್ಚಿಸಿ ಗಮನ ಸೆಳೆದಿದ್ದಾರೆ, ಅವುಗಳಲ್ಲಿ ಭಾರತದ ಆಡಳಿತ ನೀತಿಗಳು ಮತ್ತು ಜನ ಸಾಮಾನ್ಯರ ಜೀವನ ಶೈಲಿ ಬದಲಾಗಬೇಕೆಂಬುದು ಸ್ವಾಮಿ ರಾಮ್‌ದೇವ್‌ರವರ ಚರ್ಚೆಗಳಲ್ಲಿನ ಪ್ರಮುಖ ಬೇಡಿಕೆಯಾಗಿದೆ. ಕೆಲವು ಹೆಚ್ಚಿನ ಒತ್ತುನೀಡಿ ಚರ್ಚಿಸಿದ ವಿಷಯಗಳೆಂದರೆ:
ಕೃಷಿ ಕಾರ್ಯಕ್ಷೇತ್ರದಲ್ಲಿನ ದುರಾಚಾರಗಳು.
ಬದಲಾಯಿಸಿಸ್ವಾಮಿರಾಮ್ದೇವ್ರವರು ಹೇಳುವಂತೆ, ರೈತರು ತಮ್ಮ ಕೆಲಸದಲ್ಲಿ ಉತ್ತಮ ಫಸಲು ಮತ್ತು ಲಾಭವನ್ನು ಹೆಚ್ಚಿಸಿಕೊಳ್ಳಲು, ಅಧಿಕವಾದ ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಬಳಸುತ್ತಿದ್ದಾರೆ. ಇದರಿಂದಾಗಿ, ಇತ್ತೀಚೆಗೆ ಹೆಚ್ಚು-ಹೆಚ್ಚು ರೋಗ ತರುವ ರಾಸಾಯನಿಕ ಮಿಶ್ರಣವಿರುವ ಹಣ್ಣು ಮತ್ತು ತರಕಾರಿಗಳು ಬರುತ್ತಿವೆ. ಇದು ಸಾಮಾನ್ಯ ಜನರ ಆರೋಗ್ಯದ ಮೇಲೆ ಅಪಾಯಕರವಾದ ಪರಿಣಾಮ ಬೀರುತ್ತಿದೆ.
(ಸೌಮ್ಯ) ಅಮಾದಕ ಪಾನೀಯಗಳ ಮತ್ತು ಸಿದ್ದ ಆಹಾರ ಸೇವನೆ
ಬದಲಾಯಿಸಿಜನ ಸಾಮಾನ್ಯರು ಹೆಚ್ಚು-ಹೆಚ್ಚು ಅಮಾದಕ ಪಾನೀಯಗಳು, ಸಿದ್ಧ ಆಹಾರ ಮತ್ತು ಪೊಟ್ಟಣ ಆಹಾರವನ್ನು ಸೇವಿಸುತ್ತಿದ್ದಾರೆ ಎನ್ನುವ ವಿಷಯವೇ ಸ್ವಾಮಿ ರಾಮ್‌ದೇವ್‌ರವರ ಯೋಗ ಶಿಬಿರಗಳಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ವಿಷಯವಾಗಿದೆ. ಅವರು ಹೇಳುವಂತೆ, ಈ ಆಹಾರ ಉತ್ಪನ್ನಗಳು ರೋಗ ತರುವಂತಹ ಮತ್ತು ಕಡಿಮೆ ಪೌಷ್ಠಿಕಾಂಶವುಳ್ಳ ಆಹಾರ ಪದಾರ್ಥಗಳಾಗಿವೆ. ಆದ್ದರಿಂದ ಇವುಗಳನ್ನು ಸೇವಿಸದಿರುವುದು ಉತ್ತಮ. (ಸೌಮ್ಯ)ಅಮಾದಕ ಪಾನೀಯಗಳಾದ ಕೋಕ್ ಮತ್ತು ಪೆಪ್ಸಿ ಪಾನೀಯಗಳು, ಕ್ರಿಮಿನಾಶಕ ಅಥವಾ ಶೌಚಾಲಯ ಶುದ್ಧೀಕರಣ ದ್ರವಕ್ಕಿಂತ ಉತ್ತಮವಾದವುಗಳೇನು ಅಲ್ಲ. ಇವುಗಳಿಂದ ಮಾನವನ ದೇಹದ ಮೇಲೆ ಆಗುವ ಪರಿಣಾಮದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಎಂದು ಅವರು ಹೇಳುತ್ತಾರೆ.
ರೈತರ ಶೋಷಣೆ
ಬದಲಾಯಿಸಿಭ್ರಷ್ಟ ರಾಜಕೀಯ ಪಕ್ಷಗಳು ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಮತ್ತು ಸಮಾಜದ ಹಿಂದುಳಿದ ಜನರ ಬಗ್ಗೆ ಗಮನ ನೀಡುತ್ತಿಲ್ಲವೆಂದು ಬಾಬಾ ರಾಮ್‌ದೇವ್‌ರವರು ದೂಷಿಸಿದ್ದಾರೆ. ಕೃಷಿ ಭಾರತದ ಆದಾಯಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ, ಆದರೆ ಇಂದು ರೈತರೇ ಬಡತನ ವರ್ಗಕ್ಕೆ ಸೇರಿದ ಜನರಾಗಿದ್ದಾರೆ ಎಂಬುದು ದುಖಃಕರ ಸಂಗತಿ. ಅದು ದೇಶದ ಆರ್ಥಿಕ ಸಮೃದ್ಧಿಯ ವಿಷಯವಾಗಿರುವ ಕಾರಣ ಅತ್ಯಂತ ಪ್ರಮುಖವಾಗಿ ರೈತರ ಕ್ಷೇಮಾಭಿವೃದ್ಧಿಯನ್ನು ಕೈಗೊಳ್ಳಬೇಕು, ಎಂದು ಅವರು ಹೇಳಿದ್ದಾರೆ.
ಸ್ವದೇಶಿ ಕೈಗಾರಿಕೆಗಳ ದುಸ್ಥಿತಿ
ಬದಲಾಯಿಸಿಬಾಬಾ ರಾಮ್‌ದೇವ್ ಅವರು, ಸರ್ಕಾರದ ನಿಯಮಗಳು ಇಲ್ಲಿಯ ಕೈಗಾರಿಕೆಗಳ ಹಿಂದುಳಿಯುವಿಕೆಗೆ ಕಾರಣವಾಗಿದೆ. ಆ ಕಾರಣದಿಂದಲೇ ಅಂತರಾಷ್ಟ್ರೀಯ ಕಂಪನಿಗಳು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವುದು, ಹೊರದೇಶದಲ್ಲಿ ತಯಾರಾದ ವಿವಿಧ ಬ್ರಾಂಡ್‌ಗಳ ವಸ್ತುಗಳು ಭಾರತೀಯ ಮಾರುಕಟ್ಟೆಯಲ್ಲಿ ಕಂಡುಬರುತ್ತಿವೆ, ಎಂದು ಸರ್ಕಾರದ ಕ್ರಮಗಳನ್ನು ಟೀಕಿಸಿದ್ದಾರೆ. ಹಾಗೆಯೇ ದೇಶೀಯ ಕೈಗಾರಿಕೆಗಳಿಗೆ ಆಸರೆ ಮತ್ತು ಉತ್ತೇಜನವನ್ನು ನೀಡಿ, ಅನ್ಯದೇಶದವರು ತಯಾರಿಸಿರುವ ಸಾಮಾನುಗಳಿಗೆ ಆಶ್ರಿತರಾಗಿರುವುದನ್ನು ಕಡಿಮೆ ಮಾಡಬೇಕು. ಇದಕ್ಕಾಗಿ ಗ್ರಾಹಕರು ಮತ್ತು ಸರ್ಕಾರ ಇಬ್ಬರು ಪ್ರಜ್ಞಾವಂತರಾಗಿ ನಿಗಾವಹಿಸಬೇಕು ಎಂದು ಬಾಬಾ ರಾಮ್‌ದೇವ್ ಹೇಳಿದ್ದಾರೆ.
ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರ ಕಪ್ಪು ಹಣ
ಬದಲಾಯಿಸಿಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರು ಕಪ್ಪು ಹಣವನ್ನು ಕಾನೂನು ಬಾಹೀರವಾಗಿ ಅಡಗಿಸಿಟ್ಟಿಸಿದ್ದಾರೆ. ಈ ಹಣದ ಮೊತ್ತ ಅಂದಾಜು ೧-೧.೫ ಟ್ರಿಲಿಯನ್ ಯುಎಸ್‌ಡಿಯಷ್ಟಿದೆ. ಇದು ಭಾರತದ ಪ್ರಜೆಗಳಿಗೆ ಸೇರಿರುವ ಹಣವಾಗಿದ್ದು, ಕಾನೂನು ಬಾಹೀರವಾಗಿ ಹೊರದೇಶದಲ್ಲಿ ಅಡಗಿಸಿಡಲಾಗಿದೆ. ಆದ್ದರಿಂದ ಸರ್ಕಾರವು ಇದರ ಬಗ್ಗೆ ಗಮನ ಹರಿಸಿ ಹಣವನ್ನು ಮರಳಿ ತರುವ ಕ್ರಮ ಕೈಗೊಳ್ಳಬೇಕು ಎಂದು ಹೇಳುವ ಮೂಲಕ ಬಾಬಾ ರಾಮ್‌ದೇವ್‌ರವರು ಸಾರ್ವಜನಿಕವಾಗಿ ಈ ವಿಷಯದ ಕುರಿತು ದನಿ ಎತ್ತಿದ್ದಾರೆ[೧]
೮೪ ಕೋಟಿ( ೮೪೦ಮಿಲಿಯನ್) ಜನರು ಪ್ರತಿದಿನ ೨೦ ರೂ ದಲ್ಲಿ ಜೀವಿಸುತ್ತಿದ್ದಾರೆ
ಬದಲಾಯಿಸಿಅಧಿಕೃತ ಸಮೀಕ್ಷೆ ಸೂಚಿಸುವಂತೆ ಸುಮಾರು ೮೪ಕೋಟಿ( ೮೪೦ಮಿಲಿಯನ್) ಜನರು (ಶೇಕಡ ೭೫%ರಷ್ಟು ಜನ) ದಿನಾ ಕೇವಲ ೨೦ರೂಗಳಲ್ಲಿ ಜೀವಿಸುತ್ತಿದ್ದಾರೆ ಅಥವಾ ೨೦ ರೂಗಳಿಗಿಂತ ಕಡಿಮೆ ವೆಚ್ಚ ಮಾಡುವಂತಹ ಸಾಮರ್ಥ್ಯ ಹೊಂದಿದ್ದವರಾಗಿದ್ದಾರೆ. ಬಾಬಾ ರಾಮ್‌ದೇವ್‌ರವರು ಇಂತಹ ಜನರಿಗಾಗಿ ಭಾರತ ಸ್ವಾಭಿಮಾನ ಆಂದೋಲನ ಎನ್ನುವ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಇದರ ಮೊದಲ ಗುರಿಯೇನೆಂದರೆ ೮೪ ಕೋಟಿ (೮೪೦ಮಿಲಿಯನ್) ಜನರ ಕ್ಷೇಮಾಭಿವೃದ್ಧಿ ಮಾಡುವ ಕಾರ್ಯವಾಗಿದೆ.
ಭಾರತ ಸ್ವಾಭಿಮಾನ ಆಂದೋಲನ
ಬದಲಾಯಿಸಿಭಾರತ ಸ್ವಾಭಿಮಾನ ಆಂದೋಲನದ ಐದು ಗುರಿಗಳು:
- .೧೦೦%ರಷ್ಟು ಮತದಾನ
- .೧೦೦% ರಾಷ್ಟ್ರೀಯತಾವಾದಿ ಆಲೋಚನೆ
- .೧೦೦% ವಿದೇಶಿ ಕಂಪನಿ(ಉದ್ಯಮ)ಗಳನ್ನು ಬಹಿಷ್ಕರಿಸಿ ’ಸ್ವದೇಶೀ’ ಉದ್ಯಮಗಳನ್ನು ಅಳವಡಿಸಿಕೊಳ್ಳುವುದು
- .೧೦೦% ದೇಶದ ಜನರನ್ನು ಸಂಘಟಿಸುವುದು (ಒಗ್ಗೂಡಿಸುವುದು)
- .೧೦೦% ಯೋಗ-ದೃಷ್ಟಿ ಹೊಂದಿರುವ ದೇಶ
ಭಾರತ ಸ್ವಾಭಿಮಾನ ಆಂದೋಲನದ ಐದು ಪ್ರತಿಜ್ಞೆಗಳು:
- . ದೇಶಾಭಿಮಾನ, ನಿಷ್ಠೆ, ಶೌರ್ಯತೆ, ದೂರದೃಷ್ಟಿ, ಧೀರತನ ಮತ್ತು ಒಳ್ಳೆಯ ಸಂಪರ್ಕ ಕೌಶಲ್ಯವನ್ನು ಹೊಂದಿರುವ ಜನಗಳಿಗೆ ಮಾತ್ರ ನಮ್ಮ ಮತವನ್ನು ನೀಡುತ್ತೇವೆ. ಶೇಕಡ ೧೦೦ರಷ್ಟು ನಾವು ಮತವನ್ನು ಹಾಕುತ್ತೇವೆ ಮತ್ತು ಬೇರೆಯವರು ಮತ ಚಲಾಯಿಸುವಂತೆ ಮಾಡುತ್ತೇವೆ.
- . ಹೊಸ ಸ್ವಾತಂತ್ರ್ಯ, ಹೊಸ ವ್ಯವಸ್ಥೆ ಮತ್ತು ಹೊಸ ಬದಲಾವಣೆಯನ್ನು ತರಲು, ನಾವು ಎಲ್ಲಾ ದೇಶಾಭಿಮಾನ, ವಿಶ್ವಾಸ, ಪ್ರಜ್ಞೆ, ಸೂಕ್ಷ್ಮತೆ, ಬುದ್ಧಿವಂತಿಕೆ ಮತ್ತು ನಿಷ್ಠೆಯನ್ನು ಹೊಂದಿರುವ ಜನರನ್ನು ಸೇರಿಸುತ್ತೇವೆ. ಮತ್ತು ಎಲ್ಲಾ ಜನರು ಜತೆಗೂಡಿ ೧೦೦% ರಾಷ್ಟ್ರೀಯ ಶಕ್ತಿಗಳನ್ನು ಒಗ್ಗೂಡಿಸುತ್ತೇವೆ. ನಾವು ಇಡೀ ಜಗತ್ತಿನಲ್ಲಿ ಭಾರತವನ್ನು ದೊಡ್ಡ ಬೃಹತ್‌ಶಕ್ತಿಯುಳ್ಳ ರಾಷ್ಟ್ರವನ್ನಾಗಿ ಮಾಡುತ್ತೇವೆ.
- . ನಾವು ಶೂನ್ಯ ತಂತ್ರಜ್ಞಾನದಿಂದ ತಯಾರಿಸಲಾದ ವಿದೇಶಿ ವಸ್ತುಗಳನ್ನು ೧೦೦%ರಷ್ಟು ಬಹಿಷ್ಕರಿಸುತ್ತೇವೆ ಮತ್ತು ದೇಶೀಯ ವಸ್ತುಗಳ ಬಳಕೆಯನ್ನು ಅಳವಡಿಸಿಕೊಳುತ್ತೇವೆ.
- . ನಾವು ೧೦೦%ರಷ್ಟು ರಾಷ್ಟ್ರೀಯತಾವಾದಿ ಚಿಂತನೆಗಳನ್ನು ಒಪ್ಪಿ ಅಳವಡಿಸಿಕೊಳ್ಳುತ್ತೇವೆ. ಆದರೆ ನಮ್ಮ ವೈಯುಕ್ತಿಕ ಜೀವನದಲ್ಲಿ ಕೆಲವೊಮ್ಮೆ ಹಿಂದೂ, ಇಸ್ಲಾಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ ಮುಂತಾದ ಧರ್ಮಗಳ ಸಂಪ್ರದಾಯಗಳನ್ನು ಗಮನಿಸುತ್ತೇವೆ ಆದರೂ ನಮ್ಮ ಸಾಮಾಜಿಕ ಜೀವನದಲ್ಲಿ ನಾವು ನಿಜವಾದ ಭಾರತೀಯರ ರೀತಿ ಬದುಕಬೇಕು - ನಿಜವಾದ
ಹಿಂದೂಸ್ತಾನಿ (ಭಾರತೀಯ) ಆಗಿ.
- . ನಾವು ಇಡೀ ದೇಶವನ್ನು ೧೦೦% ರಷ್ಟು ಯೋಗವನ್ನು ಹೊಂದಿರುವ ರಾಷ್ಟ್ರವನ್ನಾಗಿ ಮಾಡುವುದು ಮತ್ತು ನಾಗರೀಕರನ್ನು ಆರೋಗ್ಯವಂತರನ್ನಾಗಿಸಿ ತಮ್ಮ ಆಂತರ್ಯದೆಡೆಗೆ ಕೇಂದ್ರೀಕೃತಗೊಳಿಸುವುದು, ಮತ್ತು ಪ್ರತಿಯೊಬ್ಬರಲ್ಲೂ
ವಂಚನೆ, ಭ್ರಷ್ಟತೆ, ಹತಾಶ ಪರಿಸ್ಥಿತಿ, ಅಪನಂಬಿಕೆ ಮತ್ತು ದ್ವಂದ್ವ-ಮನಸ್ಥಿತಿಯ ಕಾರಣ ಅವರಲ್ಲಿ ಉಂಟಾಗಿರುವ ದೌರ್ಬಲ್ಯಗಳನ್ನು ಕಳಚಿ ಅವರು ಸ್ವಯಂ-ಪ್ರತಿಷ್ಠೆಯಿಂದ ಬಾಳುವಂತೆ ಮಾಡುತ್ತೇವೆ ಮತ್ತು ರಾಷ್ಟ್ರೀಯ ಭಾವನೆಗಳನ್ನು ಉದ್ದೀಪನಗೊಳಿಸಿ ಭಾರತದ ಮಲಗಿರುವ ಆತ್ಮಗೌರವವನ್ನು ಹೆಚ್ಚಿಸುತ್ತೇವೆ. ಭಾರತದಲ್ಲಿರುವ ಭ್ರಷ್ಟಾಚಾರವನ್ನು ನಿರ್ಮೂಲನ ಮಾಡಲು ಬಾಬಾ ರಾಮ್‌ದೇವ್‌ರವರು ಭಾರತ ಸ್ವಾಭಿಮಾನ ಆಂದೋಲನದಿಂದ ಸಾಮೂಹಿಕ ಚಳುವಳಿಯ ಯಾತ್ರೆಯನ್ನು ಪ್ರಾರಂಭಿಸಿದರು. ಈ ಆಂದೋಲನವು ಸರ್ಕಾರದ ಎಲ್ಲಾ ವಲಯದಲ್ಲೂ ಭ್ರಷ್ಟಾಚಾರದ ವಿರುದ್ಧ ಪ್ರತಿಭಟಿಸುತ್ತಿದೆ. ಭಾರತದ ಅಧಿಕಾರಿಗಳು ಕಾನೂನುಬಾಹಿರವಾಗಿ ಮಾಡುತ್ತಿರುವ ದಳ್ಳಾಳಿ ಕೆಲಸಗಳಿಂದ, ಭಾರತದ ಸಾಮಾಜಿಕ ಕೈಗಾರಿಕಾ ಕ್ಷೇತ್ರಕ್ಕೆ ವಿದೇಶಿ ಕಂಪನಿಗಳು ಪ್ರವೇಶ ಪಡೆಯುತ್ತಿವೆ. ಇದರಿಂದಾಗಿ ಎಲ್ಲ ಭಾರತೀಯ ಸಾಮಾಜಿಕ ವ್ಯವಸ್ಥೆಯ ಮೇಲೂ ಕೆಟ್ಟ ಪರಿಣಾಮವಾಗುತ್ತಿದೆ ಎಂದು ಹೇಳಿದೆ. ಸರ್ಕಾರದ ಅಂದಾಜಿನ ಪ್ರಕಾರ ಭಾರತದಲ್ಲಿ ಸುಮಾರು ೮೪ಕೋಟಿ (೮೪೦ಮಿಲಿಯನ್) ಜನರು ಮತ್ತು ಒಟ್ಟು ಜನ ಸಂಖ್ಯೆಯ ಶೇಕಡ ೭೫ರಷ್ಟು ಜನ, ಒಂದು ದಿನದಲ್ಲಿ ಕೇವಲ ೨೦ ರೂಗಳಷ್ಟು (೧ ಡಾಲರ್ ~ ೪೫ರೂ) ಮಾತ್ರ ಖರ್ಚು ಮಾಡಲು ಶಕ್ತರಾಗಿದ್ದಾರೆ, ಈ ಸಮಸ್ಯೆಯನ್ನು ಬಗೆಹರಿಸಲು ಭಾರತ ಸ್ವಾಭಿಮಾನ ಆಂದೋಲನವು ಸರ್ಕಾರದ ಭ್ರಷ್ಟತೆಯ ವಿರುದ್ಧ ಮಾಡುತ್ತಿರುವ ಹೋರಾಟ, ದೇಶದ ಬಡತನದ ಸ್ಥಿತಿಯನ್ನು ಬದಲಾಯಿಸಲು ಹೆಜ್ಜೆಯಿಡುತ್ತಿರುವ ಮೊದಲ ಮೆಟ್ಟಿಲಾಗಿದೆ.
ಈ ಸಂಸ್ಥೆಯ ಉದ್ದೇಶಗಳನ್ನು ಪೂರೈಸಲು ಭಾರತ ದೇಶದ ಸಂಸ್ಕೃತಿಯನ್ನು ಮರೆತಿರುವ ಎಲ್ಲಾ ಭಾಗಗಳಲ್ಲಿನ ಭಾರತೀಯರನ್ನು ಬರಮಾಡಿಕೊಂಡರೆ ಈ ಸಂಸ್ಥೆಯ ಉದ್ದೇಶಗಳು ಪೂರೈಕೆಯಾದಂತಾಗುತ್ತದೆ ಮತ್ತು ಇದು ಭಾರತವನ್ನು ಬೃಹತ್ ಶಕ್ತಿಯ ರಾಷ್ಟ್ರವನ್ನಾಗಿ ಮಾಡಲು ಇಡುತ್ತಿರುವ ಮೊದಲ ಹೆಜ್ಜೆಯಾಗಿದೆ ಎಂದು ಬಾಬಾ ರಾಮ್‌ದೇವ್ ಹೇಳಿದ್ದಾರೆ. ಶಿಕ್ಷಣದ ಕುರಿತು ಈ ಸಂಸ್ಥೆ ಹೊಂದಿರುವ ಎರಡು ಮುಖ್ಯ ಉದ್ದೇಶಗಳೇನೆಂದರೆ ಸ್ವದೇಶಿ ಶಿಕ್ಷಣ (ಭಾರತೀಯ ಮೂಲ ತತ್ವಗಳನ್ನು ಹೊಂದಿರುವಂತಹ ಶಿಕ್ಷಣ ವ್ಯವಸ್ಥೆ) ಮತ್ತು ಸ್ವದೇಶಿ ಚಿಕಿತ್ಸೆ (ಭಾರತೀಯ ಮೂಲ ತತ್ವಗಳನ್ನು ಹೊಂದಿರುವಂತಹ ವೈದ್ಯಕೀಯ ಶಿಕ್ಷಣ ವ್ಯವಸ್ಥೆ). ಹಿಂದಿ ಮತ್ತು ಎಲ್ಲಾ ಪ್ರಾದೇಶಿಕ (ಭಾರತೀಯ) ಸರ್ಕಾರದಲ್ಲಿರುವ ಭಾಷೆಗಳನ್ನು ಪ್ರಾಥಮಿಕ ಭಾಷೆಯನ್ನಾಗಿ ಸ್ಥಾಪಿಸುವುದು, ಇದರಲ್ಲಿ ಪ್ರಾಯೋಜಕ ಚಟುವಟಿಕೆಗಳಾದ ಶಿಕ್ಷಣ ಮತ್ತು ನ್ಯಾಯಾಂಗ ಈ ಕಾರ್ಯಕ್ರಮದ ಒಂದು ಭಾಗವಾಗಿದೆ. ಬಾಬಾ ರಾಮ್‌ದೇವ್‌ರವರು ನಮ್ಮ ದೇಶದಲ್ಲಿ ಹಿಂದಿ ಮಾತನಾಡುವ ಜನಸಂಖ್ಯೆ ಎಷ್ಟಿದೆ ಎನ್ನುವುದರ ಕಡೆ ಗಮನ ಹರಿಸಿದಾಗ ಪ್ರಾದೇಶಿಕವಾಗಿ ಮಾತನಾಡುವ ಅತ್ಯಂತ ಹೆಚ್ಚು ಜನರು ಮಾತನಾಡುವ ಭಾಷೆಗಳಲ್ಲಿ ಹಿಂದಿ ಭಾಷೆಯು ಚೀನಿ ಭಾಷೆಯ ನಂತರದ ಸ್ಥಾನ ಪಡೆದಿದೆ. ಆದರೂ ಹಿಂದಿ ಭಾಷೆ ತನ್ನ ಸ್ವಂತ ದೇಶದಲ್ಲಿ ಇಂಗ್ಲೀಷ್ ನಂತರದ ಸ್ಥಾನಮಾನವನ್ನು ಪಡೆದಿದೆ ಎನ್ನುವುದರ ಕಡೆಗೆ ಗಮನ ಸೆಳೆದಿದ್ದಾರೆ. ಅವರು ಗಮನಿಸಿದ ಮತ್ತೊಂದು ಗಂಭೀರ ವಿಷಯವೆಂದರೆ, ಜಗತ್ತಿನಲ್ಲಿ ಭಾರತ ದೇಶ ಒಂದನ್ನು ಬಿಟ್ಟು ಬೇರೆ ಯಾವುದೇ ಮುಂದುವರಿದ ರಾಷ್ಟ್ರವೂ ಸಹ ಅಧಿಕೃತ ವ್ಯವಹಾರಕ್ಕಾಗಿ ಬೇರೆ ದೇಶದ ಭಾಷೆಯನ್ನು ಬಳಸುವುದಿಲ್ಲ.
ವಿವಾದಗಳು ಮತ್ತು ಟೀಕೆಗಳು
ಬದಲಾಯಿಸಿಕಾಲಕ್ರಮೇಣ ಸ್ವಾಮಿ ರಾಮ್‌ದೇವ್‌ರವರ ಹೆಸರು ಹಲವಾರು ವಿವಾದಗಳಲ್ಲಿ ಕೇಳಿಬಂದಿದೆ.
ಕನಿಷ್ಠ ವೇತನ
ಬದಲಾಯಿಸಿಮಾರ್ಚ್ ೨೦೦೫ರಲ್ಲಿ ದಿವ್ಯ ಯೋಗ ಮಂದಿರ ಟ್ರಸ್ಟಿನ ಸುಮಾರು ೧೧೩ ಕೆಲಸಗಾರರು ಭವಿಷ್ಯ ನಿಧಿ ಮತ್ತು ಕೆಲಸಗಾರರ ವಿಮಾ ಯೋಜನಾ ವ್ಯಾಪ್ತಿಯ ಅಡಿಯಲ್ಲಿ, ಕನಿಷ್ಠ ವೇತನಗಳಿಗಾಗಿ ಚಳುವಳಿ ಮಾಡಿದ್ದರು. ನಂತರ ಆಡಳಿತ ಮಂಡಳಿ, ಜಿಲ್ಲಾ ಕಾರ್ಯನಿರ್ವಹಣಾ ಸಮಿತಿ ಮತ್ತು ಕೆಲಸಗಾರರ ನಡುವೆ ನಡೆದ ತ್ರಿಪಕ್ಷೀಯ ಸಭೆಯಲ್ಲಿ ಒಪ್ಪಂದಕ್ಕೆ ಬರಲಾಯಿತು. ಆದರೂ, ಕೆಲವು ಪ್ರಚೋದಕ ಕೆಲಸಗಾರರು ಗಲಭೆಯಲ್ಲಿ ಕೆಲವೊಂದು ವಸ್ತುಗಳನ್ನು ನಾಶಮಾಡಿದ್ದರು. ಆದ್ದರಿಂದ, ಅವರಿಗೆ ದಂಡವಿಧಿಸಿ ನಂತರ ಕೆಲಸದಿಂದ ಅಮಾನತ್ತುಗೊಳಿಸಲಾಯಿತು. ಈ ಪ್ರಕರಣವನ್ನು ಭಾರತೀಯ ಕಮ್ಯುನಿಸ್ಟ್ ಪಕ್ಷದ (ಮಾರ್ಕ್‌ಸಿಸ್ಟ್) ನಿಯಂತ್ರಿತ ಉದ್ಯೋಗ ಒಕ್ಕೂಟ ತೆಗೆದುಕೊಂಡಿದೆ. ಅವರನ್ನು ಇನ್ನೂ ಪುನಃ ಕೆಲಸಕ್ಕೆ ತೆಗೆದುಕೊಳ್ಳಬೇಕಾಗಿದೆ.[೬][೭]
ಕಾನೂನಿಗೆ ವಿರುದ್ಧವಾದ ಔಷಧಿ ತಯಾರಿಕೆಯ ಕುರಿತು ಆರೋಪ
ಬದಲಾಯಿಸಿಜನವರಿ ೨೦೦೬ರಲ್ಲಿ ಭಾರತೀಯ ಸಂಸತ್ತಿನ ಸದಸ್ಯೆ ಬೃಂದಾ ಕಾರಟ್‌ರವರು ಬಾಬಾ ರಾಮ್‌ದೇವ್‌ರವರ ದಿವ್ಯ ಯೋಗ ಮಂದಿರ ಟ್ರಸ್ಟಿನ ಔಷಧಾಲಯದಲ್ಲಿ ಔಷಧಿಗಳನ್ನು ತಯಾರಿಸಲು ಮನುಷ್ಯ ಮತ್ತು ಪ್ರಾಣಿಗಳ ಮೂಳೆಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದ್ದರು. ಹರಿದ್ವಾರದಲ್ಲಿರುವ ಟ್ರಸ್ಟ್‌ನ ಆಸ್ಪತ್ರೆ ಬ್ರಹ್ಮಕಲ್ಪ ಚಿಕಿತ್ಸಾಲಯದಲ್ಲಿ ಖರೀದಿಮಾಡಿದ ಕುಲಿಯಾ ಭಸ್ಮ ಮತ್ತು ಯೌವನಮಿತ್ರ ಬಾತಿ ಎನ್ನುವ ಈ ಔಷಧಿಗಳಲ್ಲಿ ಪ್ರಾಣಿಜನ್ಯ ವಸ್ತು ಇದೆ ಎನ್ನುವ ಅನುಮಾನದಿಂದ ಈ ಔಷಧಿಗಳ ಮಾದರಿಗಳನ್ನು ಸರ್ಕಾರಿ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಯಿತೆಂದು ವರದಿಯಾಗಿದ್ದು, ನಂತರ ಅದರಲ್ಲಿ ಪ್ರಾಣಿಗಳ ಮೂಲವಸ್ತುವಿರುವುದು ಖಚಿತವಾಗಿದೆ. ಬೃಂದಾ ಅವರು ಔಷಧಿ ಅಂಗಡಿಯಲ್ಲಿ ಪಡೆದ, ವೈದ್ಯರು ನೀಡಿರುವ ಔಷಧ ಚೀಟಿ ಮತ್ತು ಹಣಪಾವತಿಸಿದ ಚೀಟಿಯ ದಾಖಲೆಗಳನ್ನು ಮುಂದಿಟ್ಟು ಔಷಧಗಳಲ್ಲಿ ಪ್ರಾಣಿಗಳ ಮೂಲವಸ್ತುವಿದೆ ಎನ್ನುವುದಕ್ಕೆ ಆಧಾರ ತೋರಿಸಿದ್ದಾರೆ.[೭][೮]. ನಂತರ, ಈ ರೀತಿಯ ನಾಲ್ಕು ಔಷಧಿ ಮಾದರಿಗಳನ್ನು ದೆಹಲಿಯಲ್ಲಿರುವ ಸರ್ಕಾರಿ ಅಂಗೀಕೃತ ಸಂಸ್ಥೆಯಾದ ಶ್ರೀರಾಮ್ ಕೈಗಾರಿಕಾ ಸಂಶೋಧನಾ ಸಂಸ್ಥೆಗೆ ಕಳುಹಿಸಲಾಯಿತು. ಈ ಸಂಸ್ಥೆಯಿಂದ ಬಂದ ಸಂಶೋಧನಾ ವರದಿಯು, ಇವುಗಳು ಯಾವುದೇ ಆಕ್ಷೇಪಾರ್ಹ ಪದಾರ್ಥಗಳ ಅಂಶಗಳನ್ನು ಹೊಂದಿಲ್ಲ, ಇವು ಪರಿಶುದ್ಧ ಮೂಲಿಕೆಗಳು, ಎಂದು ತಿಳಿಸಿದೆ. ಅನಂತರ ಸ್ವಾಮಿರಾಮ್‌ದೇವ್ ಈ ಆರೋಪದಿಂದ ಮುಕ್ತಿ ಹೊಂದಿದರು.[೯] ಸ್ವಾಮಿ ರಾಮ್‌ದೇವ್‌ರವರ ಯೋಗ ಮಂದಿರ ಟ್ರಸ್ಟಿನ ಔಷಧಾಲಯದ ಔಷಧಿಗಳ ಕುರಿತ ಆರೋಪಗಳು ಶಮನಗೊಂಡ ನಂತರ ಔಷಧಿಗಳಿಗೆ ಜನರ ಬೇಡಿಕೆ ಮತ್ತು ಪ್ರತಿಕ್ರಿಯೆ ತುಂಬಾ ಹೆಚ್ಚಾಗಿದೆ. ಈಗ ಟ್ರಸ್ಟಿನ ಆಯುರ್ವೇದ ಔಷಧಿಗಳು ಮೊದಲಿಗಿಂತಲೂ ಹೆಚ್ಚಾಗಿ ಮಾರಾಟವಾಗುತ್ತಿವೆ.[೩]
ಸಲಿಂಗ ಕಾಮಕ್ಕೆ ವಿರೋಧ
ಬದಲಾಯಿಸಿಜುಲೈ ೨೦೦೯ರಲ್ಲಿ ದೆಹಲಿಯ ಉಚ್ಚ ನ್ಯಾಯಾಲಯವು ಭಾರತದಲ್ಲಿ ಸಲಿಂಗ ಕಾಮವನ್ನು ಅಪರಾಧವಲ್ಲವೆಂದು ತೀರ್ಪು ನೀಡಿದಾಗ, ರಾಮ್‌ದೇವ್ ಅವರು ಮಾಧ್ಯಮಗಳೆದುರು ಮಾತನಾಡುತ್ತಾ, "ಈ ತೀರ್ಪು ಸಮಾಜದಲ್ಲಿ ಅಪರಾಧ ಮತ್ತು ಮಾನಸಿಕ ಅಸ್ವಸ್ಥತೆಯನ್ನು ಉತ್ತೇಜಿಸುತ್ತದೆ. ಇದು ನಾಚಿಕೆಗೇಡಿನದು ಮತ್ತು ಅವಮಾನಕಾರಿಯಾದದ್ದು. ನಾವು ಎಲ್ಲದರಲ್ಲಿಯೂ ಪಾಶ್ಚಿಮಾತ್ಯರನ್ನು ಕಣ್ಮುಚ್ಚಿಕೊಂಡು ಅನುಸರಿಸುತ್ತಿದ್ದೇವೆ. ಇದು ಭಾರತದ ಕುಟುಂಬ ವ್ಯವಸ್ಥೆಯನ್ನು ಹಾಳುಗೆಡುವುತ್ತಿದೆ. ಸಲಿಂಗಕಾಮಿಗಳು ಅಸ್ವಸ್ಥರು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ. ಒಂದೊಮ್ಮೆ ಸರ್ಕಾರ ಈ ಕಾನೂನನ್ನು ಜಾರಿಗೆ ತರುವುದಾದಾರೆ, ನಾನು ದೆಹಲಿಯ ಬೀದಿಗಿಳಿದು ಹೋರಾಟ ನಡೆಸುತ್ತೇನೆ."[೧೦] ಎಂದು ಹೇಳಿದರು.
ಏಡ್ಸ್ ಗುಣಪಡಿಸುವ ಕುರಿತು ಪ್ರತಿಪಾದನೆ
ಬದಲಾಯಿಸಿಡಿಸೆಂಬರ್ ೨೦೦೬ರಲ್ಲಿ ಸ್ವಾಮಿ ರಾಮದೇವ್ ಅವರು ಯೋಗದ ಮೂಲಕ ಏಡ್ಸ್ ಗುಣಪಡಿಸುವುದಾಗಿ ಪ್ರತಿಪಾದಿಸಿದ್ದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಅವರ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಿರುವ ಒಂದು ವೆಬ್‌ಸೈಟ್, ಯೋಗವನ್ನು ಅಭ್ಯಾಸ ಮಾಡುತ್ತಿರುವ ಕೆಲವು ಏಡ್ಸ್ ರೋಗಿಗಳಲ್ಲಿನ CD4 ಜೀವಕೋಶ ಸಂಖ್ಯೆಯು ಹೆಚ್ಚಾಗಿದೆ ಎಂದು ಹೇಳಿದೆ[೧೧]. ಇದನ್ನೇ ಕೆಲವು ಪತ್ರಕರ್ತರು ರಾಮದೇವ್ ಏಡ್ಸ್ ಗುಣಪಡಿಸುತ್ತೇನೆಂದು ಪ್ರತಿಪಾದಿಸುತ್ತಿದ್ದಾರೆಂಬ ರೀತಿಯಲ್ಲಿ ಬರೆದಿದ್ದಾರೆ.[೧೨] ಇದರ ಪರಿಣಾಮವಾಗಿ ಭಾರತ ಕೇಂದ್ರ ಆರೋಗ್ಯ ಸಚಿವಾಲಯವು ಅವರಿಗೆ ಸೀಸ್ ಅಂಡ್ ಡೆಸಿಸ್ಟ್ ಆದೇಶವನ್ನು ನೀಡಿದೆ ಮತ್ತು ಮೆಡಿಕಲ್ ಎನ್‌ಜಿಓಗಳಿಂದ ಕಾನೂನು ರೀತ್ಯಾ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.[೧೩] ಇದಕ್ಕೆ ಪ್ರತಿಕ್ರಿಯಿಸಿದ ರಾಮದೇವ್, ತನ್ನ ಮಾತನ್ನು ತಪ್ಪಾಗಿ ಅರ್ಥೈಸಿ ಬರೆಯಲಾಗಿದೆ ಎಂದು ಹೇಳಿದರು.[೧೪] ಯೋಗ ಮತ್ತು ಆಯುರ್ವೇದಗಳು ಜೊತೆಯಾಗಿ ಏಡ್ಸ್‌ನಿಂದ ಉಂಟಾಗುವ ಬಾಧೆಯನ್ನು ತಗ್ಗಿಸುತ್ತವೆಯೇ ಹೊರತೂ ಅದನ್ನು ಗುಣಪಡಿಸುತ್ತವೆ ಎಂದು ತಾನು ಹೇಳುವುದಿಲ್ಲ ಎಂದು ಅವರು ಹೇಳಿದ್ದಾರೆ.[೧೫]
ಕ್ಯಾನ್ಸರ್ ಗುಣಪಡಿಸುವ ಕುರಿತು ಪ್ರತಿಪಾದನೆ
ಬದಲಾಯಿಸಿಅನೇಕ ಪತ್ರಿಕಾ ವರದಿಗಳು, [ಸೂಕ್ತ ಉಲ್ಲೇಖನ ಬೇಕು]ಏಳು ರೀತಿಯ ಉಸಿರಾಟ ವ್ಯಾಯಾಮಗಳನ್ನು ಅಭ್ಯಾಸ ಮಾಡಿಸುವ ಮೂಲಕ ಎದೆ, ಕಿಡ್ನಿ, ಜನನೇಂದ್ರೀಯ ಗ್ರಂಥಿ, ಗರ್ಭಕೋಶ, ಕಫ ಸ್ರಾವಕ ಗ್ರಂಥಿ, ಮೆದುಳಿನ ದುರ್ಮಾಂಸ ಮತ್ತು ಲುಕೇಮಿಯಾ ಕ್ಯಾನ್ಸರ್‌ಗಳನ್ನು ಅವರು ಗುಣಪಡಿಸುತ್ತಾರೆ ಎಂದು ಉಲ್ಲೇಖಿಸಿವೆ. ೨೦೦೮ರ ಜೂನ್ ೧೯–೨೫ರ ಅವಧಿಯಲ್ಲಿ ಹರಿದ್ವಾರದ ಯೋಗ ಗ್ರಾಮ ದಲ್ಲಿ ಸ್ಥಳೀಯ ಶಿಬಿರವನ್ನು ನಡೆಸಲಾಯಿತು, ಅನೇಕ ಕ್ಯಾನ್ಸರ್ ರೋಗಿಗಳು ಪ್ರಾಣಾಯಾಮ ಅಥವಾ ಉಸಿರಾಟ ವ್ಯಾಯಾಮಗಳನ್ನು ಮಾಡುವ ಮೂಲಕ ರಕ್ತ, ಜನನೇಂದ್ರೀಯ ಗ್ರಂಥಿ ಮತ್ತು ಎದೆ ಕ್ಯಾನ್ಸರ್‌ಗಳೊಡನೆ ಮಾಡಿದ ತಮ್ಮ ಯಶಸ್ವಿ ಬಲಪರೀಕ್ಷೆಗಳನ್ನು ವಿವರಿಸಲು ಮುಂದಾದರು.[೧೬] ಸ್ವಾಮಿ ರಾಮ್‌ದೇವ್ ಅವರು ತಮ್ಮ ಯಶಸ್ಸಿನ ಆಧಾರಗಳನ್ನು ದಾಖಲಿಸಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
ಪ್ರಶಸ್ತಿಗಳು ಮತ್ತು ಮಾನ್ಯತೆಗಳು
ಬದಲಾಯಿಸಿ- ಜನವರಿ 2007ರಲ್ಲಿ ಕೆಐಐಟಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಅನ್ನು, ವೇದ ವಿಜ್ಞಾನವಾದ ಯೋಗವನ್ನು ಜನಪ್ರಿಯಗೊಳಿಸುವಲ್ಲಿನ ತಮ್ಮ ಸಾಧನೆಗಾಗಿ ವಿಜ್ಞಾನಿ ಹಾಗೂ ನೊಬೆಲ್ ಪ್ರಶಸ್ತಿ ವಿಜೇತರಾದ ರಿಚರ್ಡ್ ಆರ್.ಈಸ್ಟಿನ್ ಅವರಿಂದ ಪಡೆದರು.[೧೭]
ಆಕರಗಳು
ಬದಲಾಯಿಸಿ- ↑ "Ramdev's yog brand launched in America".
- ↑ "Swami Ramdev". knowyoga.org. Archived from the original on 27 ಸೆಪ್ಟೆಂಬರ್ 2007. Retrieved 21 March 2007.
{{cite web}}
: Unknown parameter|dateformat=
ignored (help) - ↑ ೩.೦೦ ೩.೦೧ ೩.೦೨ ೩.೦೩ ೩.೦೪ ೩.೦೫ ೩.೦೬ ೩.೦೭ ೩.೦೮ ೩.೦೯ "Life Positive". Archived from the original on 2010-01-18. Retrieved 2010-01-29.
- ↑ ಶಂಕರಾಚಾರ್ಯರ "ಭಜಗೋವಿಂದಂ ಸ್ತೋತ್ರ".
- ↑ "Patanjali Yog Peeth - Introduction". Archived from the original on 2010-01-14. Retrieved 2010-01-29.
- ↑ "In the name of Ayurveda". The Hindu. Archived from Frontline the original on 2010-03-14. Retrieved 2021-08-29.
{{cite web}}
: Check|url=
value (help) - ↑ ೭.೦ ೭.೧ "How Karat-Ramdev War began". ExpressIndia.com. Archived from the original on 2006-04-21. Retrieved 2010-01-29.
- ↑ "Guru accused of 'human bone' drug". bbc.co.uk. 4 January 2006. Retrieved 6 January 2010.
- ↑ "Yogi cleared of animal parts row". BBC News. 8 March 2006. Retrieved 6 January 2010.
- ↑ "Gay is bad, chorus maulanas, saffron brigade & Church". DNA.
- ↑ "Ayurvedic Herbs for control of HIV, AIDS & any Sexually Transmitted Diseases". yogapranayama.com. Archived from the original on 25 ಫೆಬ್ರವರಿ 2007. Retrieved 21 March 2007.
{{cite web}}
: Unknown parameter|dateformat=
ignored (help) - ↑ "Baba Ramdev's website claims AIDS is curable". dnaindia.com. Retrieved 21 March 2007.
{{cite web}}
: Unknown parameter|dateformat=
ignored (help) - ↑ "Yoga effect on AIDS? Baba has 'proof'". moneycontrol.com. Retrieved 21 March 2007.
{{cite web}}
: Unknown parameter|dateformat=
ignored (help) - ↑ "I made no claims of curing AIDS: Ramdev". expressindia.com. Archived from the original on 30 ಜುಲೈ 2012. Retrieved 21 March 2007.
{{cite web}}
: Unknown parameter|dateformat=
ignored (help) - ↑ "I never claimed I can cure AIDS: Ramdev". dnaindia.com. Retrieved 21 March 2007.
{{cite web}}
: Unknown parameter|dateformat=
ignored (help) - ↑ "I'll stay away from politics: Ramdev". ibnlive.com. Archived from the original on 24 ಜನವರಿ 2007. Retrieved 21 March 2007.
{{cite web}}
: Unknown parameter|dateformat=
ignored (help) - ↑ "Doctorate degree for Yoga Guru Ramdev". punjabnewsline.com. Archived from the original on 29 ಆಗಸ್ಟ್ 2007. Retrieved 21 March 2007.
{{cite web}}
: Unknown parameter|dateformat=
ignored (help)
ಹೊರಗಿನ ಕೊಂಡಿಗಳು
ಬದಲಾಯಿಸಿ- ದಿವ್ಯ ಯೋಗ ಮಂದಿರ ಟ್ರಸ್ಟ್
- ಪತಂಜಲಿ ಯೋಗಪೀಠ ಯುಕೆ ಟ್ರಸ್ಟ್
- ಪತಂಜಲಿ ಯೋಗಪೀಠ ಯುಎಸ್ಎ ಟ್ರಸ್ಟ್
- ಬಾಬಾ ರಾಮ್‌ದೇವ್ ಜೀವನಚರಿತ್ರೆ
- ಬಾಬಾ ರಾಮ್‌ದೇವ್ ಫೇಸ್ಬುಕ್ ಅಭಿಮಾನಿ ಪುಟ
- ಭಾರತ ಸ್ವಾಭಿಮಾನ ಆಂದೋಲನ Archived 2010-05-27 ವೇಬ್ಯಾಕ್ ಮೆಷಿನ್ ನಲ್ಲಿ.
- www.totalbhakti.com ನಲ್ಲಿ ಬಾಬಾ ರಾಮ್ದೇವ್ಜಿ ಯೋಗ ವಿಡಿಯೊ
- ಟೆಕ್ಸಾಸ್ನ ಹಾಸ್ಟಿನ್ನಲ್ಲಿ ಸ್ವಾಮಿ ರಾಮ್‌ದೇವ್‌ರ ಯೋಗ ಶಿಬಿರ Archived 2009-08-18 ವೇಬ್ಯಾಕ್ ಮೆಷಿನ್ ನಲ್ಲಿ.
- ಹಿಂದಿ ಭಾಷೆಯಲ್ಲಿ ಸ್ವಾಮಿ ರಾಮ್ರಾಮ್ದೇವ್ ಜೊತೆ ಬಿಬಿಸಿ ವಾಕ್ ಸಂದರ್ಶನ
- ಪಿ.ಸಾಯಿನಾಥ್ರಿಂದ ದ ರಿಪಬ್ಲಿಕ್ ಆ೦ಡ್ ದ ವೇವಾರ್ಡ್ ರೇಷನಾಲಿಸ್ಟ್ Archived 2006-05-24 ವೇಬ್ಯಾಕ್ ಮೆಷಿನ್ ನಲ್ಲಿ.- ಪ್ರಬಂಧ
- ಬಾಬಾ ರಾಮ್‌ದೇವ್ ಆನ್ ದ ರೋಲ್ ಆಫ್ ವುಮೆನ್ ಇನ್ ಸೊಸೈಟಿ Archived 2011-07-26 ವೇಬ್ಯಾಕ್ ಮೆಷಿನ್ ನಲ್ಲಿ. - ಬಾಬಾ ರಾಮ್ದೇವ್ರಿಂದ ವಾಕ್ ಭಾಷಣ,
- ಬಾಬಾ ರಾಮ್‌ದೇವ್ ಯೋಗ Archived 2019-11-18 ವೇಬ್ಯಾಕ್ ಮೆಷಿನ್ ನಲ್ಲಿ.
- ಸ್ವಾಮಿ ರಾಮ್‌ದೇವ್‌ರ ಬಿಬಿಸಿ ಸಂದರ್ಶನ
- ಬಿಬಿಸಿ ಸುದ್ದಿ - ಯೋಗಿ ಕ್ಲಿಯರ್ಡ್ ಆಫ್ ಆಯ್ನಿಮಲ್ ಪಾರ್ಟ್ಸ್ ರಾ - ಮಾರ್ಚ್ 8, 2006