ಸ್ವಾಮಿ
ಹಿಂದೂ ಧರ್ಮದಲ್ಲಿ ತ್ಯಾಗದ (ಸನ್ಯಾಸ) ಮಾರ್ಗವನ್ನು ಆರಿಸಿಕೊಂಡ ಅಥವಾ ವೈಷ್ಣವ ಪಂಥದಂತೆ ಧಾರ್ಮಿಕವಾಗಿ ದೀಕ್ಷೆ ಪಡೆದ ಒಬ್ಬ ಸನ್ಯಾಸಿಗೆ[೧] ನೀಡಲಾಗುವ ಗೌರವಾನ್ವಿತ ಶೀರ್ಷಿಕೆ ಸ್ವಾಮಿ ಆಗಿದೆ.[೨] ಇದನ್ನು ಹೆಸರಿನ ಮೊದಲು ಅಥವಾ ನಂತರ ಬಳಸಲಾಗುತ್ತದೆ (ಸಾಮಾನ್ಯವಾಗಿ ಅಳವಡಿಸಿಕೊಂಡ ಧಾರ್ಮಿಕ ಹೆಸರು). ಪರ್ಯಾಯ ರೂಪವಾದ ಸ್ವಾಮಿನಿ (ಸ್ವಾಮಿಣಿ) ಅನ್ನು ಕೆಲವೊಮ್ಮೆ ಎಲ್ಲವನ್ನು ತ್ಯಜಿಸುವ ಸ್ತ್ರೀಯರು ಬಳಸುತ್ತಾರೆ.
ಸ್ವಾಮೀಜಿ ಎಂಬ ಪದದ ಸಂಸ್ಕೃತ ಮೂಲದ ಅರ್ಥ "ಸ್ವಯಂ" (ಸ್ವತಃ ವ್ಯಕ್ತಿ) ಎಂಬುದಾಗಿದೆ[೩] ಮತ್ತು ಇದನ್ನು ಸ್ವತಃ ತಿಳಿದಿರುವ ಮತ್ತು ಸ್ವತಃ ತನ್ನನ್ನು ಅರಿತುಕೊಳ್ಳುವವನು ಎಂದು ಅನುವಾದಿಸಬಹುದು.[೧] ಈ ಪದವನ್ನು ಸಾಮಾನ್ಯವಾಗಿ ನಿರ್ದಿಷ್ಟ ಯೋಗ ಪದ್ಧತಿಯಲ್ಲಿ ಪಾಂಡಿತ್ಯವನ್ನು ಸಾಧಿಸಿದ ಅಥವಾ ಒಂದು ಅಥವಾ ಹೆಚ್ಚಿನ ಹಿಂದೂ ದೇವರುಗಳಿಗೆ ಆಳವಾದ ಭಕ್ತಿ (ಭಕ್ತಿ) ಪ್ರದರ್ಶಿಸಿದ ಒಬ್ಬ ವ್ಯಕ್ತಿಗೆ ಎಂದು ಹೇಳಲಾಗುತ್ತದೆ.[೧]ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟು ವ್ಯುತ್ಪತ್ತಿಯನ್ನು ಹೀಗೆ ನೀಡುತ್ತದೆ:[೪]
ಯಜಮಾನ, ಪ್ರಭು, ರಾಜ ಎಂಬರ್ಥವನ್ನು ಹೊಂದಿದ ಹಿಂದಿಯ ಸ್ವಾಮಿ(svāmī) ಎಂಬುದು ಹಿಂದೂಗಳು ಗೌರವಾನ್ವಿತ ಸಂಬೋಧನೆಯ ಪದವಾಗಿ ಬಳಸುವುದಾಗಿದೆ, < ಅದೇ ರೀತಿ ಸಂಸ್ಕೃತದಲ್ಲಿ ಕೂಡ ಸ್ವಾಮಿನ್ ಎಂದರೆ ದೇವರ ವಿಗ್ರಹ ಅಥವಾ ದೇವಾಲಯ ಎಂದು.
ಸ್ವಾಮಿಯ ಹೆಸರಿನ ಪೂರ್ವದಲ್ಲಿ ಅಥವಾ ನಂತರದಲ್ಲಿ ಸ್ವಾಮೀಜಿ ಎಂದು ಬಳಸಲಾಗುತ್ತದೆ.
ಆಧುನಿಕ ಗೌಡೀಯ ವೈಷ್ಣವ ಧರ್ಮದಲ್ಲಿ, ಭಕ್ತಿಸಿದ್ಧಾಂತ ಸರಸ್ವತಿಯ ಗೌಡೀಯ ಕಂಠಹಾರದಲ್ಲಿ ನೀಡಲಾಗುವ ಸನ್ಯಾಸಿಯ ೧೦೮ ಹೆಸರುಗಳಲ್ಲಿ ಸ್ವಾಮಿಯೂ ಸಹ ಒಂದಾಗಿದೆ, ಜೊತೆಗೆ ಗೋಸ್ವಾಮಿಯನ್ನು ಸಾಂಪ್ರದಾಯಿಕವಾಗಿ ಗೌರವಾರ್ಥ ಶೀರ್ಷಿಕೆಯಾಗಿ ಬಳಸಲಾಗುತ್ತದೆ.[೫]
ಸ್ವಾಮಿ ಎಂಬುದು ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿರುವ ಬೈರಾಗಿ ಜಾತಿಯ ಉಪನಾಮವಾಗಿದೆ.ಬಂಗಾಳಿಯಲ್ಲಿ ಸ್ವಾಮಿ ಎಂಬುದು ಮೂಲ ಅರ್ಥದೊಂದಿಗೆ "ಗಂಡ" ಎಂಬ ಅರ್ಥವನ್ನು ಕೂಡ ಕೊಡುತ್ತದೆ. ಈ ಪದಕ್ಕೆ ಖಮೇರ್, ಅಸ್ಸಾಮಿ ಮತ್ತು ಒಡಿಯಾ, ಮಲಯಾಳಂ ಭಾಷೆಯಲ್ಲಿ "ಗಂಡ" ಎಂಬ ಅರ್ಥವೂ ಇದೆ,ಮತ್ತು ಇದನ್ನು ಸುಅಮಿ ಎಂದು ಉಚ್ಚರಿಸಲಾಗುತ್ತದೆ.,[೬] a "ಗಂಡ", ಸಾಮಿ (สามี) ಅಥವಾ ಸ್ವಾಮಿ (สวามี) (สวามี) ಎಂಬುವುದು ಥಾಯ್ ಭಾಷೆಯಿಂದ ಪದದಿಂದ ಬಂದಿದೆ.
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ ೧.೨ Boeving, Nicholas Grant (2014). "Swamis". In Leeming, David A. (ed.). Encyclopedia of Psychology and Religion (2nd ed.). Boston: Springer Verlag. pp. 1760–1761. doi:10.1007/978-1-4614-6086-2_673. ISBN 978-1-4614-6087-9.
- ↑ Brewer, E. Cobham (2009). Rockwood, Camilla (ed.). Brewer's Dictionary of Phrase and Fable. London: Chambers Harrap. "Swami" entry. ISBN 9780550104113. OL 2527037W..
- ↑ Yogananda, Paramhamsa (1997). Autobiography of a Yogi. Mumbai: Jaico Publishing House. p. 14.ಟೆಂಪ್ಲೇಟು:Unreliable source
- ↑ "swami". Oxford English Dictionary (online ed.). Oxford University Press. 2011. Retrieved 31 August 2011.
- ↑ Narasingha, Bhakti Gaurava. "Bhaktivedanta". Sri Narasingha Chaitanya Ashram. Retrieved 5 January 2022.
- ↑ "Istilah Malaysia". Pusat Rujukan Persuratan Melayu. Dewan Bahasa dan Pustaka Malaysia. Retrieved 31 May 2013.