ಸಿದ್ಧ ಆಹಾರ (ತ್ವರಿತ ಖಾದ್ಯ)
The examples and perspective in this article may not represent a worldwide view of the subject. |
ಸಿದ್ಧ ಆಹಾರ (ಈ ಉದ್ದಿಮೆಯೊಳಗೆ, ಇದನ್ನು ತ್ವರಿತ ಆಹಾರ ಸೇವಾ ಕೇಂದ್ರ ಅಥವಾ ಕ್ಯುಎಸ್‌ಅರ್ ಎನ್ನಲಾಗಿದೆ) ಅಥವಾ 'ತ್ವರಿತ ಖಾದ್ಯ' ಎಂದರೆ ಅತ್ಯಲ್ಪವಾವಧಿಯಲ್ಲಿ ತಯಾರಿಸಿ, ಬಡಿಸಲಾಗುವ ಆಹಾರ. ಅತ್ಯಲ್ಪ ಸಮಯದಲ್ಲಿ ತಯಾರಿಸಬಹುದಾದ ಯಾವುದೇ ಆಹಾರವನ್ನು 'ತ್ವರಿತ ಖಾದ್ಯ' ಎಂದು ಪರಿಗಣಿಸಬಹುದು. ಆಹಾರ ಕೇಂದ್ರಗಳು ಅಥವಾ ಮಳಿಗೆಗಳಲ್ಲಿ ಮೊದಲೇ ಬಿಸಿ ಮಾಡಲಾದ ಅಥವಾ ತಯಾರಿಸಲಾದ ಖಾದ್ಯಾಂಶಗಳನ್ನು ಸೇರಿಸಿ, ಗ್ರಾಹಕರು ಹೊರಗೆ ತೆಗೆದುಕೊಂಡು ಹೋಗಲೆಂದು ಮಾರಲಾದ ತಿನಿಸುಗಳಿಗೆ ಈ ಉಕ್ತಿಯನ್ನು ವಿಶಿಷ್ಟವಾಗಿ ಉಲ್ಲೇಖಿಸಲಾಗುತ್ತದೆ. ತ್ವರಿತ ಆಹಾರ ಎಂಬ ಇಂಗ್ಲಿಷ್ ಉಕ್ತಿಯನ್ನು ಮೊಟ್ಟಮೊದಲ ಬಾರಿಗೆ 1951ರಲ್ಲಿ ಮೆರಿಯಮ್-ವೆಬ್ಸ್ಟರ್ ನಿಘಂಟಿನಲ್ಲಿ ಮುದ್ರಿಸಿ ಮನ್ನಣೆ ನೀಡಲಾಯಿತು.ಯಾವುದೇ ಪೀಠೋಪಕರಣಗಳಿಲ್ಲದ(ತಾತ್ಕಾಲಿಕ ಮೇಲ್ಛಾವಣಿಯ) ಚಪ್ಪರಗಳು,[೧] ಅಥವಾ ತ್ವರಿತ ಖಾದ್ಯ ಕೇಂದ್ರಗಳು ಅಥವಾ ಶೀಘ್ರ ಸೇವಾ ಆಹಾರಕೇಂದ್ರ ಗಳಲ್ಲಿ ಇಂತಹ ತ್ವರಿತ ಖಾದ್ಯಗಳು ಲಭ್ಯ. ಈ ಆಹಾರ ಕೇಂದ್ರ ಸಮೂಹ ಉದ್ದಿಮೆಗಳ ಅಂಗವಾಗಿರುವ ಅಧಿಕೃತ ಗುತ್ತಿಗೆ ಉದ್ದಿಮೆಗಳಿಗೆ ಪ್ರಮಾಣಿತ ಖಾದ್ಯಗಳನ್ನು ಕೇಂದ್ರೀಯ ಸ್ಥಳಗಳಿಂದ ಸಾಗಿಸಲಾಗುತ್ತದೆ.[೨] ತ್ವರಿತ ಖಾದ್ಯ ಕೇಂದ್ರವೊಂದನ್ನು ಸ್ಥಾಪಿಸಲು ಅಗತ್ಯವಾದ ಬಂಡವಾಳ ತುಲನಾತ್ಮಕವಾಗಿ ಕಡಿಮೆ. ಅಲ್ಲಿಯೇ ಕುಳಿತು, ಖಾದ್ಯವನ್ನು ತರಿಸಿಕೊಂಡು ತಿನ್ನುವಂತಹ ಸ್ವಲ್ಪಮಟ್ಟಿಗೆ ಸುಸಜ್ಜಿತ ಎನ್ನಲಾದ ಆಹಾರ ಕೇಂದ್ರಗಳಿಗೆ ಅನೌಪಚಾರಿಕ ತ್ವರಿತ ಆಹಾರ ಕೇಂದ್ರ ಎನ್ನಬಹುದು.
ಇತಿಹಾಸ
ಬದಲಾಯಿಸಿಅಲ್ಪಾವಧಿಯಲ್ಲಿ ಸಿದ್ಧಪಡಿಸಿದ ಆಹಾರದ ಪರಿಕಲ್ಪನೆಯು ನಗರಾಭಿವೃದ್ಧಿಯೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಪುರಾತನ ರೋಮ್ ನಗರದ(ತಾತ್ಕಾಲಿಕವಾಗಿ ನಿರ್ಮಿಸಿದ ಮೇಲ್ಛಾವಣಿ) ಚಪ್ಪರಗಳಲ್ಲಿ ಬ್ರೆಡ್ ಹಾಗೂ ವೈನ್ ಮಾರಾಟವಾಗುತ್ತಿದ್ದವು. ಪೂರ್ವ ಏಷ್ಯಾದ ನಗರಗಳಲ್ಲಿ ಶಾವಿಗೆ ಅಂಗಡಿಗಳು ಪ್ರಮುಖ ಆಕರ್ಷಣೆಯಾಗಿವೆ. ಚಪ್ಪಟೆ ಬ್ರೆಡ್ ಮತ್ತು (ಚಿಕ್ಕ ಪ್ರಮಾಣದ ಮಾಂಸದ ಇಲ್ಲವೆ ತರಕಾರಿ ಮಿಶ್ರಣದ ಬ್ರೆಡ್ )ಫಲಫೆಲ್ ಖಾದ್ಯಗಳು ಇಂದು ಮಧ್ಯ ಪ್ರಾಚ್ಯ ವಲಯದಲ್ಲಿ ಎಲ್ಲಡೆ ಲಭ್ಯವಿವೆ. ಭಾರತದ ತ್ವರಿತ ಖಾದ್ಯಗಳಲ್ಲಿ ವಡಾ ಪಾವ್, ಪಾನಿಪುರಿ ಮತ್ತು ಮೊಸರುವಡೆ ಸೇರಿವೆ. ಪಶ್ಚಿಮ ಆಫ್ರಿಕಾದ ಫ್ರೆಂಚ್ ಭಾಷಿಕ ದೇಶಗಳಲ್ಲಿ ದೊಡ್ಡ ನಗರಗಳು ಮತ್ತು ಸುತ್ತ-ಮುತ್ತಲ ಪ್ರದೇಶಗಳಲ್ಲಿ ಹಲವು ರಸ್ತೆಬದಿ ಚಪ್ಪರಗಳಲ್ಲಿ ಬಹಳ ಹಿಂದಿನಿಂದಲೂ, ತಿನ್ನಲು ಸಿದ್ಧವಾದ, ಸುಟ್ಟ ಮಾಂಸದ ತುಣುಕುಗಳನ್ನು ಮಾರಲಾಗುತ್ತಿತ್ತು. ಇದನ್ನು ಸ್ಥಳೀಯವಾಗಿ (ಮಾಂಸ ಬೇಯಿಸುವ ಸಲಾಕೆಗಳು)ಬ್ರೊಷೆ ಗಳು ಎನ್ನಲಾಗುತ್ತದೆ. (ಯುರೋಪ್‌ನಲ್ಲಿ ಲಭ್ಯವಿರುವ ಇದೇ ಹೆಸರಿನ ಬ್ರೆಡ್ ಲಘು ಉಪಾಹಾರದೊಂದಿಗೆ ಇದನ್ನು ಹೋಲಿಕೆ ಮಾಡುವಂತಿಲ್ಲ).
ಆಧುನಿಕ-ಪೂರ್ವ ಯುರೋಪ್
ಬದಲಾಯಿಸಿರೊಮನ್ ಪುರಾತನತ್ವದ ನಗರಗಳಲ್ಲಿ, ಬಹಳಷ್ಟು ನಗರವಾಸಿಗಳು (ರೊಮನ್ ವಿನ್ಯಾಸದ ಕಟ್ಟಡಗಳು) ಇನ್ಸುಲೇ ಬಹು-ಮಹಡಿಯ ವಠಾರದ ಮನೆಗಳಲ್ಲಿ ವಾಸಿಸುತ್ತಿದ್ದರು. ಇವರು ತಮ್ಮ ಭೋಜನಕ್ಕಾಗಿ ಆಹಾರ ಮಾರಾಟಗಾರರನ್ನು ಹೆಚ್ಚು ಅವಲಂಬಿಸುತ್ತಿದ್ದರು. ಬೆಳಗಿನ ವೇಳೆ, ತಿಂಡಿಗಾಗಿ ವೈನ್‌ನಲ್ಲಿ ಅದ್ದಿದ್ದ ಬ್ರೆಡ್ ತಿನ್ನಲಾಗುತ್ತಿತ್ತು, ನಂತರ ಪೊಪಿನಾ ಎಂಬ ಸರಳ ಭೋಜನಾ ಕೇಂದ್ರಗಳಲ್ಲಿ ಬೇಯಿಸಿದ ತರಕಾರಿಗಳು ಮತ್ತು ಮಾಂಸಾಹಾರ ಸೇವಿಸಲಾಗುತ್ತಿತ್ತು.[೩] ಮಧ್ಯ ಯುಗದಲ್ಲಿ, ದೊಡ್ಡ ಪಟ್ಟಣಗಳು ಮತ್ತು ಲಂಡನ್ ಹಾಗೂ ಪ್ಯಾರಿಸ್‌ನಂತಹ ಪ್ರಮುಖ ನಗರವಲಯಗಳಲ್ಲಿ ಹಲವು ಅಂಗಡಿಗಳಲ್ಲಿ ಕಡುಬುಗಳು,(ರುಚಿಕರ ಅಂಟು-ಅಂಟಾದ ರಸಭರಿತ ಬ್ರೆಡ್ ) ಪೇಸ್ಟ್ರಿಗಳು, ಊರಿಟ್ಟ ಹಣ್ಣುಗಳು,(ಗರಿ-ಗರಿಯಾದ) ತೆಳು-ಗರುವಾದ ದೋಸೆಗಳು, ತೆಳು-ಗರುವಾದ ಸಿಹಿ ಬಿಸ್ಕಟ್‌ಗಳು, ದೋಸೆಗಳು ಮತ್ತು ಬೇಯಿಸಿದ ಮಾಂಸಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾದವು. ಪುರಾತನ ಕಾಲದ ರೋಮನ್ ನಗರಗಳಲ್ಲಿ, ಅಡುಗೆ ಮಾಡಲು ಬಾರದವರು,(ಪರಿಕರ ಇಲ್ಲದವರು) ವಿಶಿಷ್ಟವಾಗಿ ಒಂಟಿಯಾಗಿ ವಾಸಿಸುವವರು ಇಂತಹ ಅಂಗಡಿಗಳಲ್ಲಿ ಆಹಾರ ಸೇವಿಸುತ್ತಿದ್ದರು. ಪಟ್ಟಣದಲ್ಲಿ ವಾಸಿಸುವ ಶ್ರೀಮಂತರಿಗಿಂತಲೂ ಭಿನ್ನವಾಗಿ, ಇಂತಹ ಹಲವರಿಗೆ ಅಡುಗೆಮನೆಯುಳ್ಳ ಸುಸಜ್ಜಿತ ಗೃಹಗಳು ದುಬಾರಿಯಾಗಿದ್ದ ಕಾರಣ, ತ್ವರಿತ ಆಹಾರ ಕೇಂದ್ರಗಳನ್ನು ಅವಲಂಬಿಸುತ್ತಿದ್ದರು. ಪ್ರಯಾಣಿಕರು ಹಾಗೂ ಪುಣ್ಯಕ್ಷೇತ್ರಕ್ಕೆ ಹೋಗುತ್ತಿದ್ದ ಶ್ರದ್ಧಾಳುಗಳು ಮಾರ್ಗದಲ್ಲಿ ಇಂತಹ ಅಂಗಡಿಗಳಲ್ಲಿ ತ್ವರಿತ ಖಾದ್ಯ ಸೇವಿಸುತ್ತಿದ್ದರು.[೪]
ಯುನೈಟೆಡ್ ಕಿಂಗ್ಡಮ್
ಬದಲಾಯಿಸಿಕರಾವಳಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ತ್ವರಿತ ಆಹಾರದಲ್ಲಿ ಸ್ಥಳೀಯ ಚಿಪ್ಪುಮೀನು ಅಥವಾ ಕೋಳಿಸಿಂಪಿಯಂತಹ ಕಡಲ ಆಹಾರ, ಲಂಡನ್‌ನಲ್ಲಿ ಹಾವುಮೀನುಗಳನ್ನು ತಿನ್ನಲಾಗುತ್ತಿತ್ತು. ಆಗಾಗ್ಗೆ ಈ ಕಡಲ ಆಹಾರವನ್ನು ನೇರವಾಗಿ ಬಂದರುಕಟ್ಟೆಗಳಲ್ಲಿ ಅಥವಾ ಅನತಿ ದೂರದಲ್ಲಿ ಅಡುಗೆ ಮಾಡಲಾಗುತ್ತಿತ್ತು.[೫] ಹತ್ತೊಂಬತ್ತನೆಯ ಶತಮಾನದ ಮಧ್ಯದಲ್ಲಿ ಎಳೆಬಲೆ ದೋಣಿ ಬಳಸಿ ಮೀನುಗಾರಿಕೆಯಿಂದಾಗಿ, ಮೀನು ಮತ್ತು ಚಿಪ್ಸ್ ಆಹಾರವು ಬ್ರಿಟಿಷ್ ಜನರ ನೆಚ್ಚಿನ ಆಹಾರವಾಗತೊಡಗಿತು.ಬ್ರಿಟಿಷ್ ಶೈಲಿಯ ತ್ವರಿತ ಖಾದ್ಯದಲ್ಲಿ ಹಲವು ರೀತಿಯ ಪ್ರಾದೇಶಿಕ ವಿಭಿನ್ನತೆಗಳಿದ್ದವು. ಕೆಲವೊಮ್ಮೆ, ಖಾದ್ಯದ ಪ್ರಾದೇಶಿಕತೆಯು ಆ ಪ್ರದೇಶದ ಸಂಸ್ಕೃತಿಯ ಅಂಗವಾಯಿತು. ತ್ವರಿತ ಖಾದ್ಯ ಕಡುಬುಗಳಲ್ಲಿ ಬಳಸಿದ ಪದಾರ್ಥಗಳಲ್ಲಿ ವ್ಯತ್ಯಾಸಗಳಿವೆ. ಇದರಲ್ಲಿ ಸಾಮಾನ್ಯವಾಗಿ ಕೋಳಿಗಳಂತಹ ಸಾಕುಹಕ್ಕಿಗಳು, ಅಥವಾ ಕಾಡುಕೋಳಿಗಳ ಪದಾರ್ಥಗಳನ್ನು ಬಳಸಲಾಗುತ್ತದೆ. ಎರಡನೆಯ ವಿಶ್ವಯುದ್ಧದ ನಂತರ, ತ್ವರಿತ ಆಹಾರದಲ್ಲಿ ಟರ್ಕಿಕೋಳಿ ಮಾಂಸವನ್ನು ಆಗಾಗ್ಗೆ ಬಳಸಲಾಗುತ್ತಿದೆ.[೬] ಸ್ಯಾಂಡ್ವಿಚ್ ಎಂಬುದು ವಿಶಿಷ್ಟವಾಗಿ ಬ್ರಿಟಿಷ್ ಶೈಲಿಯ ತ್ವರಿತ ಆಹಾರವಾಗಿದೆ. ನಾಲ್ಕನೆಯ ಅರ್ಲ್ ಆಫ್ ಸ್ಯಾಂಡ್ವಿಚ್ ಆಗಿದ್ದ ಜಾನ್ ಮಾಂಟಗು 1762ರಲ್ಲಿ ಸ್ಯಾಂಡ್ವಿಚ್‌ನ್ನು ಜನಪ್ರಿಯಗೊಳಿಸಿದ. ತನ್ನ ಕೆಲಸ ಅಥವಾ ಜೂಜಾಟಗಳಿಗೆ ಅಡಚಣೆಯುಂಟಾಗದಂತೆ ತ್ವರಿತ ಆಹಾರ ದೊರೆಯುವಂತೆ ಮಾಡಲು ಬ್ರೆಡ್ ತುಂಡುಗಳ ನಡುವೆ ಒಣಗಿಸಿದ ಮಾಂಸವನ್ನು ಸೇರಿಸಿದ್ದ. (ಆದರೆ ಈ ಗತ ಪ್ರಯೋಗಗಳಲ್ಲಿ ವ್ಯತ್ಯಾಸವಿದೆ).[೭][೮] ಫ್ರಾನ್ಸ್ ದೇಶದಲ್ಲಿ ಜನಪ್ರಿಯವಾದ ಮಸಾಲೆ ತುಂಬಿಸಿದ (ತಾಜಾ ಬ್ರೆಡ್ ಖಾದ್ಯ)ಬ್ಯಾಗ್ವೆಟ್‌ಗಳು ಸೇರಿದಂತೆ, ಇತರೆ ಪಾಕಪದ್ಧತಿ ಮತ್ತು ಸಂಸ್ಕೃತಿಗಳಲ್ಲಿ ಈ ಸ್ಯಾಂಡ್ವಿಚ್ ಸಾಮ್ಯತೆ ಹೊಂದಿದೆ. ಯುನೈಟೆಡ್ ಕಿಂಗ್ಡಮ್‌ನಲ್ಲಿ ಈ ಖಾದ್ಯವು ವ್ಯಾಪಕ ಜನಪ್ರಿಯತೆ ಗಳಿಸಿ ಎಲ್ಲೆಡೆ ಬಳಸಲಾಗುತ್ತಿದೆ. ಆದರೂ ಸಹ, ವಿಭಿನ್ನ ಆಕಾರ-ರುಚಿಗಳಲ್ಲಿ ತಯಾರಿಸಲಾಗಿದ್ದ ಈ ಸ್ಯಾಂಡ್ವಿಚ್ ಕೇವಲ ಇತ್ತೀಚೆಗಿನ ವರ್ಷಗಳಲ್ಲಿ ತ್ವರಿತ ಆಹಾರ ಎಂದು ಪರಿಗಣಿಸಲಾಗಿದೆ. ಆರಂಭಿಕ ಹಂತದಲ್ಲಿ,(ಎಲ್ಲಾ ತೆರನಾದ ಬ್ರೆಡ್ ಆಹಾರದ ಪಟ್ಟಿ ಹೊಂದಿರುವ) ಸಬ್ವೇ ಮತ್ತು (ಸುರಳಿ ಸುತ್ತಿದ ತಾಜಾ ಸ್ಯಾಂಡ್ವಿಚ್ ಬ್ರೆಡ್ ಮಾರುವ ಪ್ರಖ್ಯಾತ) ಪ್ರೆಟ್ ಎ ಮ್ಯಾಂಗರ್ ಮಳಿಗೆಗಳಲ್ಲಿ ಈ ಸ್ಯಾಂಡ್ವಿಚ್‌ನ್ನು ಸಿದ್ದಪಡಿಸಲು ಉತ್ತೇಜಿಸಲಾಗುತ್ತಿತ್ತು.ಸ್ವದೇಶೀ ತ್ವರಿತ ಆಹಾರವಲ್ಲದೆ, ಯುನೈಟೆಡ್ ಕಿಂಗ್ಡಮ್ ಇತರೆ ದೇಶ-ಸಂಸ್ಕೃತಿಗಳಲ್ಲಿ ತಯಾರಾಗುವ ತ್ವರಿತ ಆಹಾರಗಳಿಗೂ ಮನ್ನಣೆ ನೀಡಿ ಸ್ವೀಕರಿಸಿ, ಸೇವಿಸಲಾಗುತ್ತಿದೆ. ಇವುಗಳಲ್ಲಿ ಇಟ್ಯಾಲಿಯನ್ ಪಿಝ್ಝಾ, ಚೀನೀ ಶಾವಿಗೆ, ಕಬಾಬ್, ಪಲ್ಯ ಹಾಗೂ ಕಾಮನ್ವೆಲ್ತ್ ರಾಷ್ಟ್ರಗಳ ಹಾಗೂ ಇತರೆ ದೇಶಗಳ ವಿಭಿನ್ನ ತ್ವರಿತ ಆಹಾರಗಳು ಉದಾಹರಣೆಗಳಾಗಿವೆ.[೯] ಕೆಲವು ಪ್ರದೇಶಗಳಲ್ಲಿ ಆಮದು ಮಾಡಲಾದ ತ್ವರಿತ ಆಹಾರವು ಸ್ಥಳೀಯ ಹಾಗೂ ಒಟ್ಟಾರೆ ಬ್ರಿಟಿಷ್ ಸಂಸ್ಕೃತಿ ಇವೆರಡರ ಅಂಗವಾಗಿದೆ. ಇನ್ನಷ್ಟು ಇತ್ತೀಚೆಗೆ, ಎಂದಿನಂತಿನ ತ್ವರಿತ ಆಹಾರಕ್ಕೆ ಇನ್ನಷ್ಟು ಆರೋಗ್ಯಕರ ಪರ್ಯಾಯ ಆಹಾರ ಶೈಲಿಗಳೂ ಸಹ ಹೊರಹೊಮ್ಮುತ್ತಿವೆ.2008ರಲ್ಲಿ, ತಲಾಸರಾಸರಿ ತ್ವರಿತ ಆಹಾರ ಕೇಂದ್ರಗಳು ಎಷ್ಟಿವೆ ಎಂಬ ವಿಶ್ವದಾದ್ಯಂತ ಸಮೀಕ್ಷೆ ನಡೆಸಲಾಯಿತು. ಈ ಪಟ್ಟಿಯಲ್ಲಿ ಯುನೈಟೆಡ್ ಕಿಂಗ್ಡಮ್ ಮೊದಲ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಕ್ರಮವಾಗಿ ಎರಡನೆಯ ಹಾಗೂ ಮೂರನೆಯ ಸ್ಥಾನ ಗಳಿಸಿದವು. ಎಲ್ಲ ತ್ವರಿತ ಖಾದ್ಯಗಳ 25%ರಷ್ಟು ಪಾಲು ಇಂಗ್ಲೆಂಡ್‌ನದೇ ಆಗಿತ್ತು.
ಅಮೆರಿಕಾ ಸಂಯುಕ್ತ ಸಂಸ್ಥಾನಗಳು
ಬದಲಾಯಿಸಿಮೊದಲ ವಿಶ್ವಯುದ್ಧದ ನಂತರ ಸಾಗಾಟ ವಾಹನಗಳು ಬಹಳಷ್ಟು ಜನಪ್ರಿಯತೆ ಗಳಿಸಿದವು. ಅವು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವುದರೊಂದಿಗೆ, ಡ್ರೈವ್-ಇನ್ ಆಹಾರ ಕೇಂದ್ರ (ವಾಹನಸ್ಥ ಆಹಾರ ಕೇಂದ್ರ)ಗಳನ್ನು ಪರಿಚಯಿಸಲಾಯಿತು. 1921ರಲ್ಲಿ, ಕನ್ಸಸ್‌ನ ವಿಚಿಟಾದಲ್ಲಿ ಬಿಲ್ಲಿ ಇಂಗ್ರಾಮ್ ಮತ್ತು ವಾಲ್ಟರ್ ಆಂಡರ್ಸನ್ ಸ್ಥಾಪಿಸಿದ ವೈಟ್ ಕ್ಯಾಸ್ಲ್ ಎಂಬ ಅಮೆರಿಕನ್ ಉದ್ದಿಮೆಯು ಎರಡನೆಯ ತ್ವರಿತ ಆಹಾರ ಕೇಂದ್ರ ಹಾಗೂ ಮೊಟ್ಟಮೊದಲ ಹ್ಯಾಂಬರ್ಗರ್ ಮಳಿಗೆ ಸ್ಥಾಪಿಸಿ, ಕೇವಲ ಐದು ಸೆಂಟ್ ಬೆಲೆಗೆ ಹ್ಯಾಂಬರ್ಗರ್‌ಗಳನ್ನು ಮಾರುವಲ್ಲಿ ಖ್ಯಾತಿ ಪಡೆಯಿತು.[೧೦] 1916ರಲ್ಲಿ ವಾಲ್ಟರ್ ಆಂಡರ್ಸನ್ ಮೊಟ್ಟಮೊದಲ ವೈಟ್ ಕ್ಯಾಸ್ಲ್ ಅಹಾರ ಕೇಂದ್ರವನ್ನು ವಿಚಿಟಾದಲ್ಲಿ ಆರಂಭಿಸಿದರು. ಸೀಮಿತ ಖಾದ್ಯಪಟ್ಟಿ, ಹೆಚ್ಚಿನ ಪ್ರಮಾಣ, ಅಗ್ಗ ಬೆಲೆಯ ಹಾಗೂ ಅತಿ ವೇಗದಲ್ಲಿ ಹ್ಯಾಂಬರ್ಗರ್ ತಯಾರಿಸಿ ಬಡಿಸುವುದು ಈ ಆಹಾರ ಕೇಂದ್ರದ ವೈಶಿಷ್ಟ್ಯವಾಗಿತ್ತು.[೮] ಇದರ ನವೀನತೆಯ ಅಂಗವಾಗಿ, ಆಹಾರ ತಯಾರಿಕೆಯ ವಿಧಾನ ವೀಕ್ಷಿಸಲು ಈ ಅಹಾರ ಕೇಂದ್ರದಲ್ಲಿ ಅನುಮತಿ ನೀಡಲಾಗುತ್ತಿತ್ತು. ಆರಂಭಕಾಲದಿಂದಲೂ ವೈಟ್ ಕ್ಯಾಸ್ಲ್ ಬಹಳಷ್ಟು ಯಶಸ್ಸು ಗಳಿಸಿದ್ದು, ಬಹಳಷ್ಟು ಪ್ರತಿಸ್ಪರ್ಧಿಗಳು ಈ ಕ್ಷೇತ್ರಕ್ಕೆ ಆಗಮಿಸುವಂತಾಯಿತು.ತನ್ನದೇ ವಿಶಿಷ್ಟ ರುಚಿಯ(ಷರಬತ್ತು) ಪಾನಕಕ್ಕೆ ಪ್ರಸಿದ್ಧವಾಗಿದ್ದ ಎ & ಡಬ್ಲ್ಯೂ ರೂಟ್ ಬಿಯರ್, 1921ರಲ್ಲಿ ಆಧಿಕೃತ ಗುತ್ತಿಗೆದಾರ ಪರಿಕಲ್ಪನೆಯನ್ನು ಪರಿಚಯಿಸಿ, ಪಾನಕ ತಯಾರಿಕೆಯನ್ನು ಗುತ್ತಿಗೆದಾರ ಉದ್ದಿಮೆಗೆ ನೀಡಿತು. 1930ರ ದಶಕದಲ್ಲಿ ಹೊವರ್ಡ್ ಜಾನ್ಸನ್ಸ್ ಆಹಾರ ಕೇಂದ್ರಗಳನ್ನು ಅಧಿಕೃತ ಗುತ್ತಿಗೆಗೆ ನೀಡುವಲ್ಲಿ ಮೊದಲಿಗ ಉದ್ದಿಮೆಯಾಯಿತು. ಖಾದ್ಯಪಟ್ಟಿ, ನಾಮಫಲಕಗಳು ಮತ್ತು ಜಾಹೀರಾತುಗಳನ್ನು ವಿಧ್ಯುಕ್ತವಾಗಿ ಪ್ರಮಾಣಿತಗೊಳಿಸಲಾಯಿತು.[೮] 1920ರ ದಶಕದಲ್ಲಿ(ಗ್ರಾಹಕರಿರುವ ವಾಹನದಲ್ಲಿಯೇ ಆಹಾರ ಪೂರೈಕೆ ಸೇವೆ) ಕರ್ಬ್ ಸರ್ವೀಸ್ ಸಹ ಮೊದಲ ಬಾರಿಗೆ ಪರಿಚಯಿಸಲಾಯಿತು. ಇದರಲ್ಲಿ (ಉರುಳುವ) ರೊಲರ್ ಸ್ಕೇಟ್ ಪಾದರಕ್ಷೆ ಧರಿಸಿದ ಕಾರುಮಾಣಿಗಳು ಆಹಾರ ಪೂರೈಸುತ್ತಿದ್ದರು.[೧೧] ವಿಶ್ವದಲ್ಲೇ ಅತಿ ದೊಡ್ಡ ತ್ವರಿತ ಆಹಾರ ಉದ್ದಿಮೆಯು ಅಮೆರಿಕಾ ಸಂಯುಕ್ತ ಸಂಸ್ಥಾನ ದಲ್ಲಿದೆ. ಅಮೆರಿಕಾ ಮೂಲದ ಹಲವು ತ್ವರಿತ ಆಹಾರ ಕೇಂದ್ರಗಳು ಸುಮಾರು 100ಕ್ಕಿಂತಲೂ ಹೆಚ್ಚು ದೇಶಗಳಲ್ಲಿವೆ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, ಸುಮಾರು 2 ದಶಲಕ್ಷ ಅಮೆರಿಕನ್ ನೌಕರರು, ತ್ವರಿತ ಆಹಾರ ಸೇರಿದಂತೆ, ಆಹಾರ ತಯಾರಿಕೆ ಮತ್ತು ಪೂರೈಕೆ ಸೇವೆಯ ಕ್ಷೇತ್ರಗಳಲ್ಲಿ ಉದ್ಯೋಗಿಗಳಾಗಿದ್ದಾರೆ.[೧೨]
ತ್ವರಿತ ದಿನಚರಿ (ನಿಂತದಲ್ಲಿಂದಲೇ ಪೂರೈಕೆ)
ಬದಲಾಯಿಸಿತ್ವರಿತ ಆಹಾರ ಕೇಂದ್ರಗಳಲ್ಲಿ ಹಲವು ತೆಗೆದುಕೊಂಡು ಹೋಗುವ ' ಅಥವಾ ಹೊರತೆಗೆಯುವಂತಹ ' ತ್ವರಿತ ಆಹಾರನ್ನು ಸಿದ್ಧಗೊಳಿಸಲಾಗುತ್ತದೆ. ಇದು ಆಗಾಗ್ಗೆ ವಾಹನಸ್ಥ ಸೇವೆಯನ್ನೂ ಒದಗಿಸುತ್ತದೆ. ಇದರಲ್ಲಿ ಗ್ರಾಹಕರು ತಮ್ಮ ವಾಹನಗಳಲ್ಲಿಯೇ ಕುಳಿತು ತಾವು ಹೇಳಿದ್ದ ಖಾದ್ಯವನ್ನು ತೆಗೆದುಕೊಂಡು ಹೋಗಬಹುದು. ಅಲ್ಲದೆ, ಆಹಾರ ಕೇಂದ್ರದಲ್ಲೇ ಕುಳಿತು ಖಾದ್ಯವನ್ನು ಸವಿಯಬಹುದು.ಆರಂಭದ ದಿನಗಳಿಂದಲೂ, ತ್ವರಿತ ಆಹಾರವನ್ನು ಅಲ್ಪಾವಧಿಯಲ್ಲಿ ಸೇವಿಸಬಹುದಾಗಿತ್ತು. ತಮ್ಮ-ತಮ್ಮ ಉದ್ಯೋಗ ಸ್ಥಳಗಳತ್ತ ಪಯಣಿಸುವ ಜನರು ಅತ್ಯಲ್ಪ ಸಮಯದಲ್ಲಿ ತಿಂದು ಮುಗಿಸಬಹುದಾದ ಆಹಾರವಾಗಿತ್ತು. ಈ ರೀತಿಯ ಖಾದ್ಯಗಳಿಗೆ ಯಾವುದೇ ಸಾಂಪ್ರದಾಯಿಕ ಚಮಚ,ಆಹಾರ ಹಿಡಿಕೆ, ಚಾಕುಕತ್ತರಿ ವಸ್ತುಗಳ ಅಗತ್ಯವಿರುವುದಿಲ್ಲ. ಇದು ಬರಿಗೈಯಲ್ಲೇ ತಿನ್ನಬಹುದಾದ ಆಹಾರವಾಗಿದೆ. ತ್ವರಿತ ಆಹಾರ ಕೇಂದ್ರಗಳಲ್ಲಿ ತಯಾರಿಸಲಾದ ಖಾದ್ಯಗಳಲ್ಲಿ ಮೀನು, ಚಿಪ್ಸ್, ಸ್ಯಾಂಡ್ವಿಚ್‌ಗಳು, ಕಿಣ್ವನಗೊಳಿಸದ ಬ್ರೆಡ್‌ಗಳು, ಹ್ಯಾಂಬರ್ಗರ್‌ಗಳು, ಕರಿಯಲಾದ ಕೋಳಿಮಾಂಸ, ಫ್ರೆಂಚ್ ಫ್ರೈಸ್‌ಗಳು, ಕೋಳಿ ಗಟ್ಟಿಗಳು, ಟ್ಯಾಕೊ (ಸುರುಳಿ ಅಥವಾ ಮಡಿಚು ರೊಟ್ಟಿಯಲ್ಲಿ ಮಾಂಸವಿಟ್ಟು ಬೇಯಿಸಿದ ತಿಂಡಿ)ಗಳು, ಪಿಝ್ಝಾ, ಹಾಟ್‌ಡಾಗ್‌ಗಳು (ಬ್ರೆಡ್ ಉರುಳೆಯಲ್ಲಿ ಮಾಂಸ ತುಂಬಿಸಿ ತಿನ್ನುವ ಭಕ್ಷ್ಯ) ಹಾಗೂ ಐಸ್ ಕ್ರೀಮ್ ಜನಪ್ರಿಯ. ಆದರೂ ಹಲವು ತ್ವರಿತ ಆಹಾರ ಕೇಂದ್ರಗಳಲ್ಲಿ 'ನಿಧಾನಗತಿಯಲ್ಲಿ ತಿನ್ನಬಹುದಾದ' ಮೆಣಸಿನಕಾಯಿ ಖಾದ್ಯಗಳು, ಜಜ್ಜಿದ ಆಲೂಗಡ್ಡೆಗಳು ಹಾಗೂ ಪಚಡಿಗಳೂ ಸಹ ಲಭ್ಯ.
ಇಂಧನ ಕೇಂದ್ರಗಳು
ಬದಲಾಯಿಸಿಹಲವು ಪೆಟ್ರೋಲ್/ಅನಿಲ ಇಂಧನ ಕೇಂದ್ರಗಳಲ್ಲಿ ಇಂಥ ಅನುಕೂಲ ಸಿಂಧು ಮಳಿಗೆಗಳಿವೆ. ಇಲ್ಲಿ ಮೊದಲೇ ಸಿದ್ಧಪಡಿಸಲಾದ ಸ್ಯಾಂಡ್ವಿಚ್‌ಗಳು, ಮಿಠಾಯಿಗಳು ಮತ್ತು ಬಿಸಿ ಖಾದ್ಯಗಳು ದೊರೆಯುತ್ತವೆ. ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಬಹಳಷ್ಟು ಅನಿಲ ಕೇಂದ್ರಗಳಲ್ಲಿಯೂ ಸಹ ಶೈತ್ಯಾಹಾರಗಳು ಮಾರಾಟವಾಗುತ್ತವೆ. ಇಲ್ಲಿ (ಅತ್ಯಂತ ಸೂಕ್ಷ್ಮ ಕಾವಲಿ/ಒಲೆಗಳು)ಮೈಕ್ರೊವೇವ್ ಒವೆನ್‌ಗಳೂ ಉಂಟು. ಇವನ್ನು ಬಳಸಿ ಖಾದ್ಯ ಪದಾರ್ಥಗಳನ್ನು ಬಿಸಿ ಮಾಡಿ ಸೇವಿಸಬಹುದಾಗಿದೆ.
ರಸ್ತೆ-ಬದಿ ಮಾರಾಟಗಾರರು ಮತ್ತು ರಿಯಾಯಿತಿಗಳು
ಬದಲಾಯಿಸಿವಿಶ್ವದಾದ್ಯಂತ ಸಾಂಪ್ರದಾಯಿಕ ಆಹಾರಗಳು ರಸ್ತೆ ಬದಿಯಲ್ಲಿ ಲಭ್ಯವಿವೆ. ಸಾಮಾನ್ಯವಾಗಿ, ಸ್ವತಂತ್ರ ಮಾರಾಟಗಾರರು ತಳ್ಳು-ಗಾಡಿಗಳು, ಮೇಜು, ಸಂಚಾರಿ-ಸರಳು ಕಾವಲಿ ಹಾಗೂ ಮೋಟಾರ್ ವಾಹನಗಳಲ್ಲಿ ಇಂತಹ ಸಣ್ಣಪ್ರಮಾಣದ ಅಂಗಡಿಗಳಲ್ಲಿ ಖಾದ್ಯಗಳನ್ನು ಸಿದ್ಧಪಡಿಸಿ ಮಾರುವರು. ಉದಾಹರಣೆಗೆ, ವಿಯೆಟ್ನಾಮ್ ಶಾವಿಗೆ ಮಾರಾಟಗಾರರು, ಮಧ್ಯ ಪ್ರಾಚ್ಯದಲ್ಲಿನ ಫಲಫೆಲ್ ಚಪ್ಪರಗಳು, ನ್ಯೂಯಾರ್ಕ್ ನಗರ ಹಾಟ್‌ಡಾಗ್ ಬಂಡಿಗಳು ಮತ್ತು (ಸುರಳಿ ರೊಟ್ಟಿಯಲ್ಲಿ ಮಾಂಸವಿಟ್ಟು ಬೇಯಿಸಿದ ಮೆಕ್ಸಿಕನ್ ತಿಂಡಿ ಮಾರುವ ವಾಹನಗಳು) ಟ್ಯಾಕೊ ಲಾರಿಗಳು. (ಫಿಲಿಫೈನ್ಸ್ ನಲ್ಲಿರುವ ಸಣ್ಣ ಆಹಾರ ಮಳಿಗೆಗಳು) ಟುರೊ-ಟುರೊ ಮಾರಾಟಗಾರರು (ಟಾಗಲಾಗ್ ಭಾಷೆಯಲ್ಲಿ ಹಂತದಿಂದ-ಹಂತಕ್ಕೆ ಎಂದರ್ಥ) ಫಿಲಿಪೀನ್ಸ್ ದೇಶದಲ್ಲಿ ಸರ್ವೇಸಾಮಾನ್ಯ. ಸಾಮಾನ್ಯವಾಗಿ, ಬೀದಿಬದಿ ತ್ವರೆಯ-ಖಾದ್ಯ ಅಂಗಡಿಗಳಲ್ಲಿ ಬಹಳಷ್ಟು ಹಾಗೂ ವಿಭಿನ್ನ ಆಯ್ಕೆಗಳಿವೆ. ಇದರಿಂದಾಗಿ ಹಾದುಹೋಕರ ಗಮನ ಸೆಳೆದು ಆಕರ್ಷಿಸಬಹುದಾಗಿದೆ.ಸ್ಥಳೀಯತೆ ಅವಲಂಬಿಸಿ, ಬಹಳಷ್ಟು ಬೀದಿಬದಿ ಖಾದ್ಯದಂಗಡಿಗಳಲ್ಲಿ ವಿಶಿಷ್ಟ ರೀತಿಯ ತ್ವರೆಯ-ಆಹಾರಗಳನ್ನು ತಯಾರಿಸಲಾಗುತ್ತದೆ. ಇದು ಸಂಬಂಧಿತ ನಗರದ ಸಾಂಸ್ಕೃತಿಕ ಅಥವಾ ಜನಾಂಗೀಯ ಸಂಪ್ರದಾಯವನ್ನು ಅವಲಂಬಿಸುತ್ತದೆ. ಕೆಲವು ಸಂಸ್ಕೃತಿಗಳಲ್ಲಿ ಬೀದಿಬದಿ ಅಂಗಡಿಗಳಲ್ಲಿ ಜನರಿಗೆ ಕಾಣುವಂತೆ-ಕೇಳಿಸುವಂತೆ ಬೆಲೆಗಳನ್ನು ಪದೇ ಪದೇ ಹೇಳಿ ಗ್ರಾಹಕರನ್ನು ಆಕರ್ಷಿಸಲಾಗುತ್ತದೆ. ಜೊತೆಗೆ ಒಂದಿಷ್ಟು ಸಂಗೀತ, ಅಥವಾ ಅನ್ಯ ರೀತಿಯ(ಬೀದಿ ನಾಟಕ) 'ಬೀದಿ ಬದಿಯ-ಅಭಿನಯದ'ಉಪಾಯವೂ ಉಂಟು. ಇವೆಲ್ಲವೂ ಸಹ ಗ್ರಾಹಕರನ್ನು ತಮ್ಮತ್ತ ಸೆಳೆಯುವ ತಂತ್ರಗಳಾಗಿವೆ. ಕೆಲವು ನಿದರ್ಶನಗಳಲ್ಲಿ, ಆಹಾರಕ್ಕಿಂತಲೂ ಈ ಮಾರಾಟ ತಂತ್ರಗಳೇ ಹೆಚ್ಚಾಗಿ ಗಮನ ಸೆಳೆಯುವುದುಂಟು. ಇಂತಹ ಮಾರಾಟಗಾರರೇ ಒಂದು ರೀತಿಯಲ್ಲಿ ಪ್ರವಾಸಿಗಳನ್ನು ಆಕರ್ಷಿಸುವರೆಂದರೆ ಅತಿಶಯೋಕ್ತಿ ಆಗಲಾರದು.
ಪಾಕಪದ್ಧತಿ
ಬದಲಾಯಿಸಿಆಧುನಿಕ ವಾಣಿಜ್ಯ ತ್ವರಿತ ಅಹಾರವನ್ನು ಆಗಾಗ್ಗೆ ಹೆಚ್ಚಾಗಿ ಸಂಸ್ಕರಿಸಿ, ಕೈಗಾರಿಕಾ ಶೈಲಿಯಲ್ಲಿ ಸಿದ್ಧಪಡಿಸಲಾಗುತ್ತದೆ. ಉದಾಹರಣೆಗೆ, ನಿರ್ದಿಷ್ಟ, ಸೂಕ್ತ ಗುಣಮಟ್ಟದಲ್ಲಿ ಖಾದ್ಯಾಂಶಗಳ ಬಳಕೆ ಮತ್ತು ಸಿದ್ಧಪಡಿಸುವ ವಿಧಾನಗಳುಂಟು. ಇದನ್ನು ಸಾಮಾನ್ಯವಾಗಿ ಡಬ್ಬಗಳು ಅಥವಾ ಬಿಗಿ ಪ್ಲ್ಯಾಸ್ಟಿಕ್‌ನಲ್ಲಿ ಸುತ್ತಿಡಲಾಗುತ್ತದೆ. ಇದರಿಂದಾಗಿ ವೆಚ್ಚಗಳನ್ನು ಕಡಿಮೆಗೊಳಿಸಬಹಬಹುದು. ಹಲವು ತ್ವರಿತ ಆಹಾರ ತಯಾರಿಕೆಗಳಲ್ಲಿ, ಖಾದ್ಯಪಟ್ಟಿಯಲ್ಲಿರುವ ಅಂಶಗಳನ್ನು, ಕೇಂದ್ರೀಯ ಪೂರೈಕೆ ಘಟಕದಲ್ಲಿ ಸಾಮಾನ್ಯವಾಗಿ ಸಂಸ್ಕರಿಸಲಾದ ಅಂಶಗಳಿಂದ ತಯಾರಿಸಲಾಗುತ್ತದೆ. ನಂತರ ಅವುಗಳನ್ನು ಆಹಾರ ಕೇಂದ್ರಗಳಿಗೆ ರವಾನಿಸಲಾಗುತ್ತದೆ. ಇಲ್ಲಿ ಈ ವಸ್ತುಗಳನ್ನು ಪುನಃ ಬಿಸಿ ಮಾಡಿ, ಸಾಮಾನ್ಯವಾಗಿ ಮೈಕ್ರೊವೇವ್ ಅಥವಾ ಅದ್ದಿ ಕರಿಯುವ ಮೂಲಕ ಅಡುಗೆ ಮಾಡಲಾಗುತ್ತದೆ, ಅಥವಾ ಅಲ್ಪಾವಧಿಯಲ್ಲಿ ಈ ಖಾದ್ಯಾಂಶಗಳನ್ನು ಜೋಡಿಸಲಾಗುತ್ತದೆ. ಈ ಪ್ರಕ್ರಿಯೆಯಿಂದಾಗಿ ಉತ್ಪನ್ನದ ಸುಸಂಗತ ಗುಣಮಟ್ಟ ಕಾಯ್ದುಕೊಳ್ಳಬಹುದು. ಜೊತೆಗೆ, ಗ್ರಾಹಕರಿಗೆ ತಮಗೆ ಬೇಕಾದ ಉತ್ಪನ್ನಗಳನ್ನು ಕಳುಹಿಸಿ, ಅಂಗಡಿಗಳಲ್ಲಿ ಶ್ರಮ ಮತ್ತು ಉಪಕರಣದ ಖರ್ಚನ್ನು ಉಳಿಸಿಕೊಳ್ಳಬಹುದು.ವೇಗ, ಏಕರೂಪತೆ ಮತ್ತು ಕಡಿಮೆ ವೆಚ್ಚದ ಮೇಲೆ ಒತ್ತು ನೀಡಲಾಗುತ್ತದೆ. ಇದಕ್ಕಾಗಿ, ತಯಾರಿಸಲಾದ ತ್ವರಿತ ಆಹಾರ ಉತ್ಪನ್ನಗಳನ್ನು ಆಗಾಗ್ಗೆ ನಿರ್ದಿಷ್ಟ ರುಚಿ ಅಥವಾ ಸುಸಂಗತತೆ ಮತ್ತು ತಾಜಾತನ ಕಾಯ್ದುಕೊಂಡಿರುವ ಅಂಶಗಳಿಂದ ತಯಾರಿಸಲಾಗಿರುತ್ತದೆ.
ರೂಪಾಂತರಗಳು
ಬದಲಾಯಿಸಿತ್ವರಿತ ಆಹಾರ ಎಂದಾಕ್ಷಣ, ಹ್ಯಾಂಬರ್ಗರ್ ಮತ್ತು ಕರಿದಿರುವ ತಿಂಡಿಗಳಂತಹ ಸಾಂಪ್ರದಾಯಿಕ ಅಮೆರಿಕನ್ ತ್ವರಿತ ಆಹಾರ ನೆನಪಾದರೂ, ಪಶ್ಚಿಮ ಗೋಲಾರ್ಧದಲ್ಲಿ ವ್ಯಾಪಕ ಜನಪ್ರಿಯತೆ ಗಳಿಸಿರುವ ತ್ವರಿತ ಆಹಾರ ರೂಪಗಳೂ ಇವೆ.ಖಾದ್ಯ ಆಹಾರಗಳನ್ನು ಕಟ್ಟಿ ಮಾರುವ ಚೀನೀ ಆಹಾರ ಕೇಂದ್ರಗಳೂ ಸಹ ವಿಶಿಷ್ಟ ಜನಪ್ರಿಯತೆ ಗಳಿಸಿವೆ. ಅವು ಸಾಮಾನ್ಯವಾಗಿ ಕರಿದಿರುವ ವಿಭಿನ್ನ ಏಷ್ಯನ್ ಶೈಲಿಯ ಆಹಾರ (ಆದರೆ ಯಾವಾಗಲೂ ಚೀನೀ ಅಲ್ಲ) ಮಾರಾಟವಾಗುತ್ತದೆ. ಬಹಳಷ್ಟು ಆಯ್ಕೆಗಳು ಅಕ್ಕಿ ಅಥವಾ ಮಾಂಸದ ಶಾವಿಗೆಯ ರೂಪದಲ್ಲಿವೆ. ಕೆಲವು ನಿದರ್ಶನಗಳಲ್ಲಿ ಆಹಾರವನ್ನು (ಸ್ಕ್ಯಾಂಡೇವಿನಿಯನ್ ಬಫೆ ಊಟದ ವಿಧಾನ)smörgåsbord ಅಥವಾ ಕೆಲವೊಮ್ಮೆ ಸ್ವಸಹಾಯ ಪದ್ಧತಿಯಾಗಿ ಪ್ರಸ್ತುತಗೊಳಿಸಲಾಗುತ್ತದೆ. ಗ್ರಾಹಕರು ತಾವು ಕೊಂಡುಕೊಳ್ಳುವ, ತುಂಬುವ ಡಬ್ಬದ ಗಾತ್ರವನ್ನು ಆಯ್ದು, ಅದರಲ್ಲಿ ತಮಗೆ ಬೇಕಾದ ಆಹಾರವನ್ನು ತುಂಬಿಸಿಕೊಳ್ಳಬಹುದು. ಒಂದೇ ಡಬ್ಬದಲ್ಲಿ ಹಲವು ಖಾದ್ಯ ಅಯ್ಕೆಗಳನ್ನು ತುಂಬಿಸುವುದು ಸಾಮಾನ್ಯ. ಕೆಲವು ಅಂಗಡಿಗಳಲ್ಲಿ ಖಾದ್ಯದ ಬದಲಿಗೆ ತೂಕದ ಪ್ರಕಾರ ಬೆಲೆ ನಿಗದಿಪಡಿಸುತ್ತವೆ. ಇಂತಹ ಆಹಾರ ಕೇಂದ್ರಗಳಲ್ಲಿ ಹಲವು, ಕನಿಷ್ಠ ಮೊತ್ತಕ್ಕಿಂತಲೂ ಹೆಚ್ಚಿನ ಖಾದ್ಯಗಳನ್ನು ಕೊಂಡಲ್ಲಿ ಗ್ರಾಹಕರಿರುವಲ್ಲಿ ಉಚಿತ ರವಾನೆ ಸೌಲಭ್ಯ ಒದಗಿಸುತ್ತವೆ.
ಇತ್ತೀಚೆಗೆ, ಚಿತ್ರಾನ್ನವೂ ಸಹ ಅಪಾರ ಜನಪ್ರಿಯತೆ ಗಳಿಸುತ್ತಿದೆ. ಜಪಾನ್‌ನಲ್ಲಿ ತಯಾರಿಸಲಾದ ತ್ವರಿತ ಆಹಾರದ (ಜಪಾನಿ ಭಾಷೆಯಲ್ಲಿ bentō ಎನ್ನಲಾಗುವುದು) ರೂಪವಾದ ಈ ಚಿತ್ರಾನ್ನವು ಸಾಮಾನ್ಯವಾಗಿ ಬಹಳ ತಣ್ಣಗಿರುವ, ಅಂಟಾದ ಅನ್ನ. ಇದಕ್ಕೆ ರುಚಿಯಾದ ಸಿಹಿ ಅಕ್ಕಿ ಹುಳಿರಸ ಮಿಶ್ರಣ ಮಾಡಿ, ಮೇಲ್ಭಾಗದಲ್ಲಿ ಮೀನು ಸೇರಿಸಿ ಬಡಿಸಲಾಗುತ್ತದೆ. ಪಶ್ಚಿಮ ಗೋಲಾರ್ಧದಲ್ಲಿ, ಇದನ್ನು ನೊರಿ (ಒಣಗಿಸಿದ ಲೇವರ್ (ಕಡಲ ಪಾಚಿ) ಒಂದಿಗೆ ಸೇರಿಸಿ ಮಾಡಿ ಬಡಿಸಲಾಗುತ್ತದೆ. ಭರ್ತಿ ಮಾಡಲು ಮೀನು, ಕೋಳಿ ಅಥವಾ ಸೌತೆಕಾಯಿ ಬಳಸಲಾಗುತ್ತದೆ. ಪಿಝ್ಝಾ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಸರ್ವೇಸಾಮಾನ್ಯ ತ್ವರಿತ ಆಹಾರ. ಪಾಪಾ ಜಾನ್ಸ್, ಡಾಮಿನೊಸ್ ಪಿಝ್ಝಾ, ಸಬರೊ ಹಾಗೂ ಪಿಝ್ಝಾ ಹಟ್ ಪ್ರಮುಖ ಪಿಝ್ಝಾ ಮಳಿಗೆಗಳಾಗಿವೆ. ಸಂಪ್ರದಾಯಿಕ ಪಿಝ್ಝಾ ಕೇಂದ್ರಗಳಿಗಿಂತ ಭಿನ್ನವಾಗಿರುವ ಈ ಮಳಿಗೆಗಳಲ್ಲಿ ಖಾದ್ಯಪಟ್ಟಿ ಬಹಳ ಸೀಮಿತವಾಗಿ, ಪ್ರಮಾಣಿತವಾಗಿರುತ್ತವೆ. ನಿಗದಿತ ಸಮಯಾವಧಿಯೊಳಗೆ ಗ್ರಾಹಕರ ಮನೆಗೆ ಪಿಝ್ಝಾ ರವಾನೆ ಮಾಡುವ ಸೌಲಭ್ಯವೂ ಇದೆ.ತುರ್ಕಿ ಮತ್ತು ಲೆಬನಾನ್‌ನಂತಹ ಮಧ್ಯಪ್ರಾಚ್ಯ ದೇಶಗಳಲ್ಲಿ ಕಬಾಬ್ ಕೇಂದ್ರಗಳು ಸಹ ಒಂದು ರೀತಿಯ ತ್ವರಿತ ಆಹಾರ ಕೇಂದ್ರಗಳಾಗಿವೆ. ಮಾಂಸ ಸಂಸ್ಕರಣಾ ಹೋಟೆಲ್‌ನಿಂದ ಸುಟ್ಟ ಮಾಂಸವನ್ನು ತಂದು ಹೆರೆದು, ಬೆಚ್ಚಗೆ ಮಾಡಲಾದ ಬ್ರೆಡ್ ಹಾಗೂ ಪಚಡಿ, ಜೊತೆಗೆ ದ್ರವರೂಪಿ ವ್ಯಂಜನ ಮತ್ತು ಇನ್ನೂ ಹೆಚ್ಚುವರಿ ವ್ಯಂಜನದೊಂದಿಗೆ ಬಡಿಸಲಾಗುವುದು. ಈ ಡೊನೆರ್ ಕಬಾಬ್‌ಗಳು ಅಥವಾ (ಸರಳುಗಳ ಮೇಲೆ ಬೇಯಿಸಿದ ಮಾಂಸ ಖಾದ್ಯ)ಷವರ್ಮಾಗಳು ಕಂಬಿಗಳಿಗೆ ಫೋಣಿಸಲಾದ ಮಾಂಸದ ಷೀಷ್ ಕಬಾಬ್‌ಗಳಿಗಿಂತಲೂ ಭಿನ್ನವಾಗಿವೆ. ವಿಶ್ವದಲ್ಲೆಲ್ಲೆಡೆ ಕಬಾಬ್ ಅಂಗಡಿಗಳಿವೆ. ವಿಶಿಷ್ಟವಾಗಿ ಯುರೋಪ್, ನ್ಯೂಜೀಲೆಂಡ್ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ಕಬಾಬ್‌ಗಳು ಲಭ್ಯ. ಆದರೆ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಅವು ವಿರಳ.
ಆಸ್ಟ್ರೇಲಿಯಾ, ನ್ಯೂಜೀಲೆಂಡ್ ಹಾಗೂ ಯುನೈಟೆಡ್ ಕಿಂಗ್ಡಮ್ ದೇಶಗಳಲ್ಲಿ ಮೀನು ಮತ್ತು ಚಿಪ್ ಅಂಗಡಿಗಳು ಜನಪ್ರಿಯ ತ್ವರಿತ ಆಹಾರ ಕೇಂದ್ರಗಳಾಗಿವೆ. ಮೀನನ್ನು ಚೆನ್ನಾಗಿ ಕುಟ್ಟಿ ನಂತರ ಕರಿಯಲಾಗುತ್ತದೆ.
ಡಚ್(ನೆದರ್ಲೆಂಡ್) ಜನರದ್ದು ತಮ್ಮದೇ ಆದ ತ್ವರಿತ ಆಹಾರ ರೀತಿಗಳಿವೆ. ಡಚ್ ತ್ವರಿತ ಆಹಾರದಲ್ಲಿ ಸಾಮಾನ್ಯವಾಗಿ ಫ್ರೆಂಚ್ ಫ್ರೈಸ್ (ಫ್ರಿಯೆಟ್ ಅಥವಾ ಪಟಾಟ್ ಎನ್ನಲಾಗುತ್ತದೆ) ಜೊತೆಗೆ ದ್ರವರೂಪೀ ವ್ಯಂಜನ ಮತ್ತು ಮಾಂಸ ಉತ್ಪನ್ನವನ್ನೂ ಸೇರಿಸಲಾಗುತ್ತದೆ. ಮೆಯೊನೇಯಿಸ್ ಎಂಬುದು ಫ್ರೆಂಚ್ ಫ್ರೈಸ್ ಜತೆ ಬಳಸಲಾದ ಸಾಮಾನ್ಯ ದ್ರವರೂಪೀ ವ್ಯಂಜನ. ಇದಲ್ಲದೆ ಕೆಚಪ್ ಅಥವಾ ಹೆಚ್ಚು ಖಾರ ಇರುವ ಕೆಚಪ್, ಕಡಲೇಕಾಯಿ ವ್ಯಂಜನ ಅಥವಾ ಪಿಕ್ಯಾಲಿಲಿ ಸಹ ಬಳಸಬಹುದಾಗಿದೆ. ಕೆಲವೊಮ್ಮೆ ಕರಿದಿರುವ ಪದಾರ್ಥಗಳನ್ನು speciaal (ವಿಶೇಷ): ಮೆಯೊನೇಯಿಸ್, ಇದರೊಂದಿಗೆ ಖಾರ ಮಿಶ್ರಿತ ಕೆಚಪ್ ಮತ್ತು ಲೇಪಿತ ಈರುಳ್ಳಿಗಳು; ಹಾಗೂ oorlog (ಅರ್ಥ- "ಯುದ್ಧ"): ಮೆಯೊನೇಯಿಸ್ ಮತ್ತು ಕಡಲೇಕಾಯಿ ವ್ಯಂಜನ (ಕೆಲವೊಮ್ಮೆ ಕೆಚಪ್ ಮತ್ತು ಕತ್ತರಿಸಿದ ಈರುಳ್ಳಿಗಳು) ವ್ಯಂಜನಗಳೊಂದಿಗೆ ಬಡಿಸಲಾಗುತ್ತದೆ.ಈ ಮಾಂಸದ ಉತ್ಪನ್ನವು ಸಾಮಾನ್ಯವಾಗಿ ಚೆನ್ನಾಗಿ ಕರಿದಿರುವ ಕುರುಕಲು ತಿಂಡಿಯಾಗಿರುತ್ತದೆ. ಇದರಲ್ಲಿ ಫ್ರಿಕಾಂಡೆಲ್ (ಚೆನ್ನಾಗಿ ಕರಿದಿರುವ ಚರ್ಮರಹಿತ ಕೊಚ್ಚು ಮಾಂಸ ಸಾಸೇಜ್) ಹಾಗೂ ಕ್ರೊಕೆಟ್ (ಬ್ರೆಡ್ ತುಂಡುಗಳಿಂದ ಮುಚ್ಚಲಾದ, ಚೆನ್ನಾಗಿ ಕರಿದ ಮಾಂಸ ರಾಗೂಟ್) ಸೇರಿರುತ್ತವೆ.
ವ್ಯವಹಾರ
ಬದಲಾಯಿಸಿಅಮೆರಿಕಾ ಸಂಯುಕ್ತ ಸಂಸ್ಥಾನವೊಂದರಲ್ಲೇ, ಗ್ರಾಹಕರು 2000 ರಲ್ಲಿ ತ್ವರಿತ ಆಹಾರಕ್ಕಾಗಿಯೇ $100 ದಶಲಕ್ಷದಷ್ಟು ಹಣ ಖರ್ಚು ಮಾಡಿದರು. (1970ರಲ್ಲಿ $6 ದಶಲಕ್ಷ ಹಣ ತ್ವರಿತ ಖಾದ್ಯಕ್ಕಾಗಿ ಖರ್ಚು ಮಾಡುತ್ತಿದ್ದರು).[೧೩] ತ್ವರಿತ ಆಹಾರ ಕೇಂದ್ರಗಳಲ್ಲಿ ಮಾರಾಟವು 2006ರಲ್ಲಿ $ 142 ಶತಕೋಟಿಯಷ್ಟು ತಲುಪಲಿದೆ, ಇದು 2005ರ ಅಂಕಿಅಂಶಕ್ಕಿಂತಲೂ 5%ರಷ್ಟು ಹೆಚ್ಚಾಗಲಿದೆಯೆಂದು ರಾಷ್ಟ್ರೀಯ ಭೋಜನಾ ಕೇಂದ್ರಗಳ ಸಂಘವು ಮುನ್ನಂದಾಜು ಮಾಡಿದೆ. ಇದಕ್ಕೆ ಹೋಲಿಸಿದರೆ, ಆಹಾರ ಕ್ಷೇತ್ರದ ಪೂರ್ಣಪ್ರಮಾಣದ ಅಹಾರ ಕೇಂದ್ರಗಳು $173 ಶತಕೋಟಿಯಷ್ಟು ಮಾರಾಟವಾಗಲಿದೆಯೆಂದು ಮುನ್ನಂದಾಜು ಮಾಡಲಾಗಿದೆ. ತ್ವರಿತ ಅಹಾರವು ತನ್ನ ಮಾರುಕಟ್ಟೆ ಪಾಲನ್ನು ಫಾಸ್ಟ್ ಕ್ಯಾಷುಯಲ್ ಆಹಾರ ಕೇಂದ್ರಗಳಿಗೆ ಬಿಟ್ಟುಕೊಡುತ್ತಿದೆ. ಇಂತಹ ಆಹಾರ ಕೇಂದ್ರಗಳಲ್ಲಿ ವಿಭಿನ್ನ ಶೈಲಿಯ ಹಾಗೂ ದುಬಾರಿ ಬೆಲೆಯ ಪಾಕಪದ್ಧತಿಗಳು ಲಭಿಸುತ್ತವೆ.[೧೪]
ಜಾಗತೀಕರಣ
ಬದಲಾಯಿಸಿ2006ರಲ್ಲಿ ಜಾಗತಿಕ ತ್ವರಿತ ಆಹಾರ ಮಾರುಕಟ್ಟೆಯು 4.8%ರಷ್ಟು ಬೆಳೆದು, 102.4 ಶತಕೋಟಿ ಡಾಲರ್‌ಗಳಷ್ಟು ಮೌಲ್ಯ ತಲುಪಿತು. ಪ್ರಮಾಣದ ವಿಚಾರದಲ್ಲಿ ಸುಮಾರು 80.3 ಶತಕೋಟಿಯಷ್ಟು ಖಾದ್ಯಗಳನ್ನು ಕೊಳ್ಳಲಾಯಿತು.[೧೫] ಭಾರತದಲ್ಲೇ ತ್ವರಿತ ಆಹಾರ ಕ್ಷೇತ್ರವು ವರ್ಷಕ್ಕೆ 41%ರಷ್ಟು ವೃದ್ಧಿ ಕಾಣುತ್ತಿದೆ.[೧೬] ಮೆಕ್ಡೊನಾಲ್ಡ್ಸ್ ಆಹಾರ ಕೇಂದ್ರವು ಆರು ಖಂಡಗಳಲ್ಲಿ, 126 ದೇಶಗಳಲ್ಲಿ ವ್ಯವಹಾರ ನಡೆಸುತ್ತಿದೆ. ವಿಶ್ವದಾದ್ಯಂತ 31,000 ಆಹಾರ ಕೇಂದ್ರಗಳನ್ನು ನಡೆಸುತ್ತಿದೆ.[೧೭] 1990ರ ಜನವರಿ 31ರಂದು, ಮೆಕ್ಡೊನಾಲ್ಡ್ಸ್ ಮಾಸ್ಕೊದಲ್ಲಿ ಆಹಾರ ಕೇಂದ್ರವನ್ನು ಸ್ಥಾಪಿಸಿತು. ಮೊದಲ ದಿನವೇ ಹೆಚ್ಚು ಗ್ರಾಹಕ ಸೇವೆ ಮತ್ತು ವ್ಯಾಪಾರ ಗಳಿಸಿ ದಾಖಲೆ ಮುರಿಯಿತು. ಮೆಕ್ಡೊನಾಲ್ಡ್ಸ್‌ನ ಮಾಸ್ಕೊ ಮಳಿಗೆಯು ಇಂದು ವಿಶ್ವದಲ್ಲೇ ಅತಿ ಜನನಿಬಿಡ ಆಹಾರ ಕೇಂದ್ರವಾಗಿದೆ. ಮೆಕ್ಡೊನಾಲ್ಡ್ಸ್‌ನ ಅತಿ ದೊಡ್ಡ ಅಂಗಡಿಯು ಚೀನಾ ಜನತಾ ಗಣರಾಜ್ಯದ ರಾಜಧಾನಿ ಬೀಜಿಂಗ್‌ನಲ್ಲಿದೆ. [ಸೂಕ್ತ ಉಲ್ಲೇಖನ ಬೇಕು]ವಿಶ್ವದೆಲ್ಲೆಡೆ ಇತರೆ ಹಲವು ತ್ವರಿತ ಆಹಾರ ಕೇಂದ್ರಗಳಿವೆ. ಬರ್ಗರ್ ಕಿಂಗ್ 65 ದೇಶಗಳಲ್ಲಿ 11,100ಕ್ಕಿಂತಲೂ ಹೆಚ್ಚು ಆಹಾರ ಕೇಂದ್ರಗಳನ್ನು ನಡೆಸುತ್ತಿದೆ.[೧೮] ಕೆಎಫ್‌ಸಿ 25 ದೇಶಗಳಲ್ಲಿ ವ್ಯವಹಾರ ನಡೆಸುತ್ತಿದೆ.[೧೯] ಸಬ್ವೇ ಎಂಬುದು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಅಧಿಕೃತ ಗುತ್ತಿಗೆದಾರ ಉದ್ದಿಮೆಯಾಗಿದೆ. ಮೇ 2009ರಲ್ಲಿ ಸಬ್ವೇ 90 ದೇಶಗಳಲ್ಲಿ ಸುಮಾರು 39,129 ಆಹಾರ ಕೇಂದ್ರಗಳನ್ನು ನಿರ್ವಹಿಸುತ್ತಿತ್ತು.[೨೦] ಅಮೆರಿಕಾ ದೇಶದ ಹೊರಗೆ ಮೊದಲ ಆಹಾರ ಕೇಂದ್ರವನ್ನು 1984ರ ಡಿಸೆಂಬರ್ ತಿಂಗಳಲ್ಲಿ ಬಹರೇನ್ ದೇಶದಲ್ಲಿ ಸ್ಥಾಪಿಸಲಾಯಿತು.[೨೧] ಫಿಝ್ಝಾ ಹಟ್ 97 ದೇಶಗಳಲ್ಲಿ ಅಂಗಡಿಗಳನ್ನು ಅರಂಭಿಸಿ ನಡೆಸುತ್ತಿದೆ, ಚೀನಾದಲ್ಲಿ 100 ಸ್ಥಳಗಳಲ್ಲಿ ಪಿಝ್ಝಾ ಹಟ್ ಅಂಗಡಿಗಳಿವೆ.[೨೨] ಟ್ಯಾಕೊ ಬೆಲ್ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಅಲ್ಲದೆ 12 ದೇಶಗಳಲ್ಲಿ 278 ಆಹಾರ ಕೇಂದ್ರಗಳನ್ನು ನಡೆಸುತ್ತಿದೆ.[೨೩]
ಟೀಕೆ
ಬದಲಾಯಿಸಿಕ್ಯಾಲೊರಿ ಅಂಶ, ಕೊಬ್ಬಿನ ಅಂಶ ಮತ್ತು ಗಾತ್ರಗಳ ವಿಚಾರದ ಬಗ್ಗೆ ಸೆಂಟರ್ ಫಾರ್ ಸೈಯನ್ಸ್ ಇನ್ ದಿ ಪಬ್ಲಿಕ್ ಇಂಟರೆಸ್ಟ್ ಸೇರಿದಂತೆ ಹಲವು ಗ್ರಾಹಕ ಸಂಘಗಳಿಂದ ಈ ತ್ವರಿತ ಆಹಾರ ಕೇಂದ್ರಗಳು ತೀವ್ರ ಟೀಕೆ ಎದುರಿಸುತ್ತಿವೆ. 2001ರಲ್ಲಿ, ಎರಿಕ್ ಷ್ಲಾಸರ್‌ರ 'ಫಾಸ್ಟ್ ಫುಡ್ ನೇಷನ್ ' ತನಿಖಾ ಕಾರ್ಯವು ಆಧಾರದಿಂದ ಮೇಲ್ಪಂಕ್ತಿಯ ವರೆಗೂ ತ್ವರಿತ ಆಹಾರ ಸಂಸ್ಕೃತಿ ಕುರಿತು ಅಮೆರಿಕನ್ನರಿಗೆ ವಿಸ್ತೃತ ಮಾಹಿತಿ ನೀಡಿತು. 2008ರಲ್ಲಿ, ಸೀಸರ್ ಬಾರ್ಬರ್ ಎಂಬವರು ತಮ್ಮ ಶರೀರ ಹೆಚ್ಚು ಸ್ಥೂಲವಾಗಲು ಈ ತ್ವರಿತ ಆಹಾರ ಕೇಂದ್ರಗಳೇ ಕಾರಣ ಎಂದು, ಇಂತಹ ಹಲವು ಕೇಂದ್ರಗಳ ವಿರುದ್ಧ ಮೊಕದ್ದಮೆ ಹೂಡಲು ಯತ್ನಿಸಿದರು. ಈ ಮೊಕದ್ದಮೆಯು ನ್ಯಾಯಾಲಯದ ಮುಂದೆ ಹಾಜರಾಗಲಿಲ್ಲ. ಚಿರಪರಿಚಿತ ನಗರವಲಯದ ಐತಿಹ್ಯ ಅನುಭದ ಕಥೆಗಳಲ್ಲಿ ತ್ವರಿತ ಆಹಾರದ ವೃತ್ತಾಂತಗಳ ನಿರೂಪಣೆಯಾಗಿದೆ.ಇದರ ಪ್ರಮುಖತೆಯಿಂದಾಗಿ, ತ್ವರಿತ ಆಹಾರದ ಬಗ್ಗೆ ಇಂದಿನ ಗ್ರಾಹಕರು ವಿಶಿಷ್ಟವಾಗಿ ತಮ್ಮ ಮಕ್ಕಳೊಂದಿಗೆ ಚಂಚಲತೆಯ (ಇದರಲ್ಲಿ ಬಹುಮಟ್ಟಿಗೆ ತಪ್ಪಿತಸ್ಥತೆಯ) ಮನೋಭಾವ ಹೊಂದಿರುತ್ತಾರೆ ಎಂಬುದನ್ನು ಸಮಾಜ ವಿಜ್ಞಾನಿಗಳು ಎತ್ತಿ ತೋರಿಸಿದ್ದಾರೆ.[೨೪] ಈ ತಪ್ಪಿತಸ್ಥ ಭಾವನೆಯನ್ನು ಸಂಸ್ಕರಿಸಲಾದ ಆಹಾರದ ಮೇಲೆ ಹೊರಿಸಲಾಗಿರುತ್ತದೆ. ಇಲ್ಲಿ ಆಹಾರ ಕೆಟ್ಟುಹೋಗುವುದು ಹಾಗೂ ನಿರೀಕ್ಷಿತ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವೈಫಲ್ಯದ ಕಥೆಗಳನ್ನು ಬಹಳಷ್ಟು ನಂಬಲಾಗಿದೆ.ತ್ವರಿತ ಆಹಾರದಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳಿಂದಾಗಿ, ನಿಧಾನಗತಿಯಲ್ಲಿ ಸೇವಿಸುವ ಆಹಾರ ಅಥವಾ ಸ್ಥಳೀಯ ಆಹಾರ ಬಳಕೆಯು ಹೆಚ್ಚಾಗತೊಡಗಿತು. ಈ ಚಳವಳಿಯು ಸ್ಥಳೀಯ ಪಾಕಪದ್ಧತಿಗಳು ಮತ್ತು ಆಹಾರ ಪದಾರ್ಥಗಳನ್ನು ಉಳಿಸಿ, ತ್ವರಿತ ಆಹಾರದ ಪರ ನಿಲ್ಲುವ ಯಾವುದೇ ಕಾನೂನು ಅಥವ ನಿಯಮವನ್ನು ನೇರವಾಗಿ ವಿರೋಧಿಸುವ ಇಂಗಿತ ಹೊಂದಿದೆ. ಸಮೃದ್ಧ, ಆಗಷ್ಟೇ ಕೊಯ್ಲು ಮಾಡಿರುವ ವಿವಿಧ ಪೌಷ್ಟಿಕಾಂಶಗಳನ್ನು ಹೊಂದಿರುವ, ಹಾಗೂ ಸವಿರುಚಿಯುಳ್ಳ ಸ್ಥಳೀಯ, 'ನಿಧಾನಗತಿಯ' ಆಹಾರ ಕುರಿತು ಅದರ ಪರ ವಾದಿಸುವವರು ಗ್ರಾಹಕರಿಗೆ ತಿಳಿಯಪಡಿಸಲು ಯತ್ನಿಸುತ್ತಿದ್ದಾರೆ. ಜಪಾನಿನಲ್ಲಿ, ಆಹಾರ ಪೌಷ್ಟಿಕಾಂಶ ಮತ್ತು ಉತ್ಪಾದನೆಯ ಬಗ್ಗೆ ಷೊಕುಯಿಕು ಶಿಕ್ಷಣದ ಮೇಲೆ ಒತ್ತು ನೀಡಲಾಗಿದೆ. ಸರ್ಕಾರವು ವೈಯಕ್ತಿಕ ನಿರ್ಧಾರಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದು, ಆದರೆ, ತಮ್ಮ ಆಹಾರ ಎಲ್ಲಿಂದ ಬರುತ್ತದೆ ಎಂಬ ಬಗ್ಗೆ ಪ್ರತಿಯೊಬ್ಬ ನಾಗರಿಕರೂ ತಿಳಿದು ಅರ್ಥ ಮಾಡಿಕೊಳ್ಳುವರೆಂದು ಖಾತರಿಪಡಿಸಲಿದೆ.
ಆರೋಗ್ಯ ಸಮಸ್ಯೆಗಳು
ಬದಲಾಯಿಸಿಮ್ಯಾಸಚೂಸೆಟ್ಸ್ ಮೆಡಿಕಲ್ ಸೊಸೈಟಿ ಕಮಿಟಿ ಆನ್ ನ್ಯೂಟ್ರಿಷನ್ ಹೇಳಿಕೆಯ ಪ್ರಕಾರ, ತ್ವರಿತ ಆಹಾರದಲ್ಲಿ ಕೊಬ್ಬಿನಾಂಶ ಬಹಳ ಹೆಚ್ಚಾಗಿರುತ್ತದೆ. ತ್ವರಿತ ಆಹಾರ ಸೇವಿಸುವುದರಿಂದ ಬಾಡಿ ಮಾಸ್ ಇಂಡೆಕ್ಸ್ (ಬಿಎಮ್‌ಐ) ಹಾಗೂ ಶರೀರದ ತೂಕ ಹೆಚ್ಚಾಗುವುದೆಂದು ಅಧ್ಯಯನಗಳು ತೋರಿಸಿವೆ.[೨೫] 2006ರಲ್ಲಿ ನಡೆಸಿದ ಅಧ್ಯಯನದ [೨೬] ಅಂಗವಾಗಿ, ಮನುಷ್ಯನೊಬ್ಬ ಕಾಯಂ ಆಗಿ ತ್ವರಿತ ಆಹಾರ ಸೇವಿಸುವಂತೆ, ಕೋತಿಗಳಿಗೆ ಅಷ್ಟೇ ಮಟ್ಟದ ಟ್ರ್ಯಾನ್ಸ್ ಫ್ಯಾಟ್ ಇರುವ ಪಥ್ಯಾಹಾರ ನೀಡಲಾಯಿತು. ಎರಡೂ ಪಥ್ಯಾಹಾರಗಳಲ್ಲೂ ಒಟ್ಟಾರೆ ಅಷ್ಟೇ ಕ್ಯಾಲರಿಗಳಿದ್ದವು. ಹೆಚ್ಚು ಟ್ರ್ಯಾನ್ಸ್ ಫ್ಯಾಟ್ ಸೇವಿಸಿದ ಕೋತಿಗಳಲ್ಲಿ ಬೊಜ್ಜು ಕಾಣಿಸಿಕೊಂಡಿತ್ತು. ಅಪರ್ಯಾಪ್ತ ಕೊಬ್ಬು ಹೊಂದಿದ ಖಾದ್ಯ ಸೇವಿಸಿದ ಕೋತಿಗಳಲ್ಲಿ ಬೊಜ್ಜು ಕಾಣಿಸಿಕೊಂಡಿರಲಿಲ್ಲ. ಬೊಜ್ಜುಳ್ಳ ಕೋತಿಗಳಲ್ಲಿ ಇನ್ಸುಲಿನ್-ಪ್ರತಿರೋಧ ಗುಣಗಳೂ ಸಹ ಹೆಚ್ಚಾದವು. ಇದು ಮಧುಮೇಹದ ಸೂಚಕವೂ ಆಗಿದೆ. ಆರು ವರ್ಷಗಳ ಕಾಲ ಈ ಪಥ್ಯಾಹಾರದಲ್ಲಿದ್ದ ಈ ಕೋತಿಗಳ ಶರೀರ ತೂಕವು 7.2%ರಷ್ಟು ಹೆಚ್ಚಿತ್ತು. ಅಪರ್ಯಾಪ್ತ ಕೊಬ್ಬಿನಾಂಶ ಸೇವಿಸಿದ ಕೋತಿಗಳಲ್ಲಿ ಶರೀರ ತೂಕವು ಕೇವಲ 1.8%ರಷ್ಟು ಹೆಚ್ಚಿತ್ತು.ತ್ವರಿತ ಆಹಾರ ಸೇವಿಸುವುದರಿಂದ, ಕ್ಯಾಲರಿಗಳು ಮತ್ತು ಶರೀರ ತೂಕ ಹೆಚ್ಚಾಗಿ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ' ಎಂದು ಬೊಸ್ಟನ್ ಮಕ್ಕಳ ಆಸ್ಪತ್ರೆಯ ಸ್ಥೂಲಕಾಯ ರೋಗ ವಿಭಾಗದ ನಿರ್ದೇಶಕ ಡೇವಿಡ್ ಲುಡ್ವಿಗ್ ಹೇಳಿದ್ದಾರೆ.[೨೭] ಅಮೆರಿಕನ್ ಜನರನ್ನು ಕಾಡುವ ಅಪಾಯಕಾರಿ ರೋಗಗಳ ಪಟ್ಟಿಯಲ್ಲಿ ಸ್ಥೂಲಕಾಯತ್ವ ಅಗ್ರಸ್ಥಾನದಲ್ಲಿದೆ ಎಂದು ರೋಗ ನಿಯಂತ್ರಣ ಮತ್ತು ಪ್ರತಿಬಂಧ ಕೇಂದ್ರ 2003ರಲ್ಲಿ ಘೋಷಿಸಿತ್ತು.[೨೮] ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ತಡೆಯಬಹುದಾದ ಸಾವುಗಳ ಪೈಕಿ ಇದು ಎರಡನೆಯ ಸ್ಥಾನದಲ್ಲಿದೆ. ಇದು ಪ್ರತಿ ವರ್ಷ 400,000 ಸಾವುಗಳಿಗೆ ಕಾರಣವಾಗುತ್ತದೆ.[೨೮] ಸುಮಾರು 60 ದಶಲಕ್ಷ ಅಮೆರಿಕನ್ ವಯಸ್ಕರು ಸ್ಥೂಲಕಾಯ ಹೊಂದಿದ್ದು, 127 ದಶಲಕ್ಷ ಅಮೆರಿಕನ್ನರು ಅತಿತೂಕದವರು ಎನ್ನಲಾಗಿದೆ.[೨೮] ಸ್ಥೂಲಕಾಯತ್ವದೊಂದಿಗೆ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದಾಗಿ ಚಿಕಿತ್ಸಾ ವೆಚ್ಚದ ಬಗ್ಗೆ ತಳಮಳ ಹೆಚ್ಚಾಗುತ್ತದೆ. ಆರ್‌ಟಿಐ ಇಂಟರ್ನ್ಯಾಷನಲ್ 2003ರಲ್ಲಿ ಉತ್ತರ ಕೆರೊಲಿನಾದಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಅಮೆರಿಕಾ ದೇಶದಲ್ಲಿ ಆರೋಗ್ಯ ಸೇವಾ ಖರ್ಚು ಪ್ರತಿವರ್ಷ $93 ದಶಲಕ್ಷದಷ್ಟು ಹೆಚ್ಚಲಿದೆ. ಸ್ಥೂಲಕಾಯತ್ವದೊಂದಿಗೆ ಸಂಬಂಧಿತ ಟೈಪ್ 2 ಮಧುಮೇಹ ಮತ್ತು ಹೃದ್ರೋಗ ಮುಖ್ಯ ಆರೋಗ್ಯ ಸಮಸ್ಯೆ ಒಡ್ಡಲಿವೆ.[೨೭] ಮಿತಿಮೀರಿದ ಕ್ಯಾಲರಿ ಅಂಶವು ತ್ವರಿತ ಆಹಾರದ ಇನ್ನೊಂದು ಪಿಡುಗು. ಕೃಷಿ ವಿಭಾಗದ ಸದಸ್ಯರಾದ ಬಿ. ಲಿನ್ ಮತ್ತು ಇ. ಫ್ರಝಾವೊ ತಿಳಿಸಿದಂತೆ, ತ್ವರಿತ ಆಹಾರ ತಿನ್ನುವುದರಿಂದ, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಸೇವಿಸಲಾದ ಒಟ್ಟು ಕ್ಯಾಲರಿಗಳಲ್ಲಿ ತ್ವರಿತ ಆಹಾರಕ್ಕೆ ಸಂಬಂಧಿತ ಕ್ಯಾಲರಿಗಳ ಪ್ರಮಾಣವು 3%ರಿಂದ 12%ಕ್ಕೆ ಏರಿದೆ.[೨೫] ಮೆಕ್ಡೊನಾಲ್ಡ್ಸ್ ಆಹಾರ ಕೇಂದ್ರದಲ್ಲಿ ನಿಯತ್ತಿನ ಆಹಾರದಲ್ಲಿ ಬಿಗ್ ಮ್ಯಾಕ್ ಲಾರ್ಜ್ ಫ್ರೈಸ್‌ಗಳು, ಹಾಗೂ ದೊಡ್ಡ ಕೊಕಾ ಕೋಲಾ ಪಾನೀಯವುಂಟು. ಈ ಖಾದ್ಯಗಳಿಂದ 1430 ಕ್ಯಾಲರಿಗಳು ಶರೀರದಲ್ಲಿ ಸೇರಿಕೊಳ್ಳುತ್ತವೆ. ಸುಮಾರು 2000 ಕ್ಯಾಲರಿಗಳ ಪಥ್ಯಾಹಾರವು ಇಡೀ ದಿನಕ್ಕಾಗಿ ಸೂಕ್ತ ಕ್ಯಾಲರಿ ಹಾಗೂ ಆರೋಗ್ಯಕರ ಎನ್ನಲಾಗಿದೆ. ಆದರೆ ಇದು ವಯಸ್ಸು, ತೂಕ, ಎತ್ತರ, ದೈಹಿಕ ಸಕ್ರಿಯತೆ ಮತ್ತು ಲಿಂಗ ಸೇರಿದಂತೆ ವಿವಿಧ ವಿಚಾರಗಳನ್ನು ಅವಲಂಬಿಸುತ್ತದೆ.ಕಡಿಮೆಯಾದ ನಾರಿನ ಅಂಶ, ಅತಿ ಹೆಚ್ಚು ಕ್ಯಾಲರಿ ಮತ್ತು ಟ್ರ್ಯಾನ್ಸ್ ಫ್ಯಾಟ್ಸ್‌ನ ಅಪಾಯಗಳ ಜೊತೆಗೆ, ಆಹಾರದಿಂದ ವಿಷ ಹರಡುವುದು ಇನ್ನೊಂದು ಅಪಾಯ. ಎರಿಕ್ ಷ್ಲಾಸರ್ ತಮ್ಮ ಪುಸ್ತಕ 'ಫಾಸ್ಟ್ ಫುಡ್ ನೇಷನ್: ದಿ ಡಾರ್ಕ್ ಸೈಡ್ ಆಫ್ ದಿ ಆಲ್-ಅಮೆರಿಕನ್ ಮೀಲ್'ನಲ್ಲಿ ಮಾಂಸ ಸಿದ್ಧಪಡಿಸುವ ಪ್ರಕ್ರಿಯೆ ಕುರಿತು ವಿವರಿಸಿದ್ದಾರೆ. ಮಾಂಸ ಸಿದ್ಧಪಡಿಸುವುದು ಅಮೆರಿಕಾದಲ್ಲೇ ಅತಿ ಅಪಾಯಕಾರಿ ಕೆಲಸವಾಗಿದೆ. ಬೇರೆ ಯಾವುದೇ ಕೈಗಾರಿಕಾ ಕೆಲಸಕ್ಕಿಂತಲೂ ಇದರಲ್ಲಿ ಗಾಯಗೊಳ್ಳುವ ಸಂಭವ ಮೂರು ಪಟ್ಟು ಹೆಚ್ಚು.[೨೯] ಮಾಂಸ ಸಿದ್ಧಗೊಳಿಸುವ ಕೈಗಾರಿಕೆಗಳಲ್ಲಿ ಪಶುಗಳನ್ನು ದೊಡ್ಡ ಗೋಮಾಳಗಳಲ್ಲಿ ಒಟ್ಟುಗೂಡಿಸಿ, ಸೂಕ್ತ ತರಬೇತಿ ಪಡೆದಿರದ ಸಿಬ್ಬಂದಿ ನಿರ್ವಹಿಸುವ ಸಂಸ್ಕರಣಾ ಘಟಕದಲ್ಲಿ ಸಾಗಿಸುವುದರಿಂದ, ದೊಡ್ಡ ಪ್ರಮಾಣದಲ್ಲಿ ಆಹಾರ ಕಲುಷಿತಗೊಳ್ಳುವ ಸಾಧ್ಯತೆಯಿದೆ. ಗೊಬ್ಬರವು ಮಾಂಸದೊಂದಿಗೆ ಬೆರೆತುಕೊಳ್ಳುತ್ತದೆ. ಸ್ಯಾಲ್ಮೊನೆಲಾ ಮತ್ತು ಎಸ್ಕರಿಚಿಯಾ ಕೊಲೈ ಬ್ಯಾಕ್ಟೀರಿಯಾಗಳೊಂದಿಗೆ ಇದನ್ನು ಕಲುಷಿತಗೊಳಿಸುತ್ತದೆ. 0157:H7 ಇ. ಕೊಲೈ 0157:H7 ಆಹಾರ ಕಲುಷಿತಗೊಳಿಸುವ ಸಮಸ್ಯೆಗಳಲ್ಲಿ ಅತಿ ಕೆಟ್ಟ ನಿದರ್ಶನವಾಗಿದೆ. ಸಾಮಾನ್ಯವಾಗಿ ಇದು ಸರಿಯಾಗಿ ಬೇಯಿಸದ ಬರ್ಗರ್‌ಗಳ ಮೂಲಕ ಹರಡುವ ಈ ಬ್ಯಾಕ್ಟೀರಿಯಾಗೆ ಚಿಕಿತ್ಸೆ ನೀಡುವುದು ಕಷ್ಟ. ಪ್ರತಿಜೀವಕಗಳು(ಆಂಟಿಬಯೊಟಿಕ್ಸ್ ) ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆಯಾದರೂ, ಮನುಷ್ಯನಿಗೆ ಅಪಾಯಕಾರಿ ಪರಿಣಮಿಸುವ ವಿಷಪೂರಿತ ರಾಸಾಯನಿಕಗಳನ್ನು ಬಹಳಷ್ಟು ಪ್ರಮಾಣದಲ್ಲಿ ಸೂಸುತ್ತವೆ. ಇ. ಕೊಲೈ 0157:H7ಯಿಂದ ಸೋಂಕಿತರಾದ ಜನರಲ್ಲಿ 4%ರಷ್ಟರಲ್ಲಿ ಹೀಮೊಲಿಟಿಕ್ ಯುರೆಮಿಕ್ ಸಿಂಡ್ರೊಮ್ ಉಂಟಾಗುವುದು. ಈ ಸಿಂಡ್ರೊಮ್ ಸೋಂಕಿತ ಮಕ್ಕಳಲ್ಲಿ 5%ರಷ್ಟು ಮಕ್ಕಳು ಸಾವಿಗೀಡಾಗುವರು. ಇ. ಕೊಲೈ 0157:H7 ಎಂಬುದು ಅಮೆರಿಕನ್ ಮಕ್ಕಳಲ್ಲಿ ಮೂತ್ರಪಿಂಡಗಳ ವೈಫಲ್ಯಕ್ಕೆ ಪ್ರಮುಖ ಕಾರಣವಾಗುವುದು.[೩೦] ಪೀಡಿಯಾಟ್ರಿಕ್ಸ್ ನಡೆಸಿದ ಸಂಶೋಧನಾತ್ಮಕ ಪ್ರಯೋಗದಲ್ಲಿ, ನಾಲ್ಕರಿಂದ ಹತ್ತೊಂಬ್ಬತ್ತು ವರ್ಷ ವಯಸ್ಸಿನ ವರೆಗಿನ 6,212 ಮಕ್ಕಳಿಗೆ ವೈದ್ಯಕೀಯ ತಪಾಸಣೆ ನಡೆಸಿ, ತ್ವರಿತ ಆಹಾರ ಕುರಿತು ಕೆಲವು ಮಾಹಿತಿ ಪಡೆಯಲಾಯಿತು. ಈ ಪ್ರಯೋಗದಲ್ಲಿ ಭಾಗವಹಿಸಿದವರನ್ನು ಸಂದರ್ಶಿಸಿದ ನಂತರ, ದಿನವೊಂದರಲ್ಲಿ ಇಡೀ ಸ್ಯಾಂಪಲ್‌ನಲ್ಲಿ 30.3%ರಷ್ಟು ತ್ವರಿತ ಆಹಾರ ಸೇವಿಸಿದ್ದರೆಂದು ವರದಿಯಾಗಿತ್ತು. ದೇಶದ ಎಲ್ಲಾ ಪ್ರದೇಶಗಳಲ್ಲಿ, ಎಲ್ಲ ಜನಾಂಗೀಯತೆಗಳಲ್ಲಿ, ಪುರುಷರು ಮತ್ತು ಸ್ತ್ರೀಯರಲ್ಲಿ ತ್ವರಿತ ಆಹಾರ ಭಕ್ಷಣೆ ಹೆಚ್ಚಾಗಿತ್ತು. ಇತರೆ ಮಕ್ಕಳಿಗೆ ಹೋಲಿಸಿದರೆ, ತ್ವರಿತ ಆಹಾರ ಭಕ್ಷಿಸಿದ ಮಕ್ಕಳು ಕೊಬ್ಬು, ಕಾರ್ಬೊಹೈಡ್ರೇಟ್‌ಗಳು ಹಾಗೂ ಸಕ್ಕರೆ-ಪದಾರ್ಥ ಹೊಂದಿದ ಪಾನೀಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಿದ್ದರು. ತ್ವರಿತ ಆಹಾರ ಸೇವಿಸಿದ ಮಕ್ಕಳು ನಾರು ಖಾದ್ಯ, ಹಾಲು, ಹಣ್ಣು ಹಾಗೂ ಪಿಷ್ಟೇತರ ತರಕಾರಿಗಳನ್ನು ಅತಿ ಕಡಿಮೆ ಪ್ರಮಾಣದಲ್ಲಿ ಸೇವಿಸುತ್ತಿದ್ದರು. ಈ ಪ್ರಯೋಗದ ಫಲಿತಾಂಶಗಳನ್ನು ಪರಿಶೀಲಿಸಿದ ಸಂಶೋಧಕರು, ತ್ವರಿತ ಆಹಾರ ಸೇವಿಸಿದ ಮಕ್ಕಳಲ್ಲಿ ಪಥ್ಯಾಹಾರದ ಮೇಲೆ ನಕಾರಾತ್ಮಕ ಪರಿಣಾಮ ಬೀರಿ, ಇದರಿಂದಾಗಿ ಸ್ಥೂಲಕಾಯತ್ವದ ಸಾಧ್ಯತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ತೀರ್ಮಾನಕ್ಕೆ ಬಂದರು.[೩೧]
ಸೀಸರ್ ಬಾರ್ಬರ್ ವಿವಾದ
ಬದಲಾಯಿಸಿಸೀಸರ್ ಬಾರ್ಬರ್ (ಜನನ 1945) ಮೆಕ್ಡೊನಾಲ್ಡ್ಸ್, ಬರ್ಗರ್ ಕಿಂಗ್, ವೆಂಡೀಸ್ ಮತ್ತು ಕೆಎಫ್‌ಸಿಯಂತಹ ತ್ವರಿತ ಆಹಾರ ಉದ್ದಿಮೆಗಳ ವಿರುದ್ಧ ಮೊಕ್ಕದಮೆ ಹಾಕಿದ ಒಬ್ಬ ಅಮೆರಿಕನ್ ಪ್ರಜೆ. ಈ ಭೂಪ ತಾನು ಈ ಆಹಾರ ಕೇಂದ್ರಗಳ ಉತ್ಪನ್ನಗಳನ್ನು ತಿನ್ನುವ ಚಟ ಬೆಳೆಸಿಕೊಂಡು ದಢೂತಿ ಶರೀರ ಬೆಳೆಸಿಕೊಳ್ಳುವಂತಾಯಿತು ಎಂಬ ಆರೋಪವನ್ನು ಈ ಎಲ್ಲಾ ಆಹಾರ ಕೇಂದ್ರಗಳ ವಿರುದ್ಧ ಆರೋಪ ಹೊರಿಸಿದ್ದಾನೆ.ಮೊಕದ್ದಮೆ ಹೂಡುವ ಸಮಯ, 57 ವರ್ಷ ವಯಸ್ಸಿನ ಸೀಸರ್‌ನ ದೇಹ ತೂಕ 272 ಪೌಂಡ್‌ಗಳಷ್ಟಿತ್ತು (123 ಕಿಲೊಗ್ರಾಮ್‌ಗಳು). ವೈದ್ಯಕೀಯವಾಗಿ ಸ್ಥೂಲಕಾಯದವನಾಗಿದ್ದು, ಮಧುಮೇಹವಿತ್ತು, ಅದಲ್ಲದೇ ಎರಡು ಬಾರಿ ಹೃದಯಾಘಾತವಾಗಿತ್ತು. ಆತ ಬ್ರಾಂಕ್ಸ್ ನಿವಾಸಿಯಾಗಿದ್ದು, ನಿರ್ವಹಣಾ ಕಸುಬಿನಲ್ಲಿದ್ದ. ಬಹಳ ವರ್ಷಗಳ ಕಾಲ ಆತ ಪ್ರತಿ ವಾರ ನಾಲ್ಕೈದು ಬಾರಿ ತ್ವರಿತ ಆಹಾರ ಸೇವಿಸುತ್ತಿದ್ದ.: 'ನನ್ನ ಎಲ್ಲಾ [ಆರೋಗ್ಯ ಸಮಸ್ಯೆ]ಗಳ ಮೂಲ ಕಾರಣ ಅತಿ ಕೊಬ್ಬು, ಜಿಡ್ಡು, ಉಪ್ಪು, ಎಲ್ಲ ಮೆಕ್ಡೊನಾಲ್ಡ್ಸ್, ವೆಂಡೀಸ್, ಬರ್ಗರ್ ಕಿಂಗ್ - ನಾನು ತಿನ್ನದ ತ್ವರಿತ ಆಹಾರವೇ ಇರಲಿಲ್ಲ, ನಾನು ಒಂಟಿಯಾಗಿದ್ದರಿಂದ ನಾನು ಬಹಳಷ್ಟು ತಿನ್ನುತ್ತಿದ್ದೆ. ನನಗೆ ಅಡುಗೆ ಮಾಡಲು ಬಾರದ್ದರಿಂದ ನಾನು ಇವನ್ನೇ ತಿನ್ನುತ್ತಿದ್ದೆ. ಅದು ತುಂಬಾ ಅಗತ್ಯವಾಗಿತ್ತು. ಅದು ನನ್ನನ್ನು ಮುಗಿಸುತ್ತಿದೆ,ಎಂಬ ವಿಚಾರ ನನ್ನ ತಲೆಗೆ ಬರುತಿತ್ತು. ಅದು ನನ್ನನ್ನು ಮುಗಿಸುತ್ತಿತ್ತು ಎಂದು ನನ್ನ ವೈದ್ಯರು ತಿಳಿಸಿದರು. ನನಗೆ ಸಾಯಲು ಇಷ್ಟವಿಲ್ಲ.'ಸೀಸರ್‌ನ ವಕೀಲ ಸ್ಯಾಮ್ಯುಯಲ್ ಹರ್ಷ್ ಕ್ಲಾಸ್ ಆಕ್ಷನ್ ಸ್ಥಿತಿಗಾಗಿ ಬಯಸುತ್ತಿದ್ದರು. ಇದು ಸಾಧ್ಯವಾದಲ್ಲಿ ಇಡೀ ನ್ಯೂಯಾರ್ಕ್ ರಾಜ್ಯದಲ್ಲಿನ, ಹಾಗೂ ಇಡೀ ರಾಷ್ಟ್ರದಲ್ಲೆ ಎಲ್ಲ ಸ್ಥೂಲಕಾಯದವರ ಪರವಾಗಿ ಮೊಕದ್ದಮೆ ಹೂಡಲು ಅನುಮತಿ ದೊರಕುತ್ತಿತ್ತು. ಸುಮಾರು 30%ರಷ್ಟು ಅಮೆರಿಕನ್ನರು ಅತಿತೂಕದವರಾಗಿದ್ದು, 30%ರಷ್ಟು ಸ್ಥೂಲಕಾಯದವರಾಗಿದ್ದು, ದೇಶದ ಜನಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಅಮೆರಿಕನ್ನರು ಸದಾ ಮೆಕ್ಡೊನಾಲ್ಡ್ಸ್‌ನಲ್ಲಿ ಆಹಾರ ಸೇವಿಸುವ ಕಾರಣ, ತೀರ್ಪು ಎಂತಹದ್ದಾಗಿರಬಹುದು ಎಂದು ಊಹಿಸಲು ಸುಲಭವಾಗಿತ್ತು.ಮೆಕ್ಡೊನಾಲ್ಡ್ಸ್, ಬರ್ಗರ್ ಕಿಂಗ್, ವೆಂಡೀಸ್ ಮತ್ತು ಕೆಎಫ್‌ಸಿ ಕಾರ್ಪೊರೇಷನ್‌ನಂತಹ ತ್ವರಿತ ಆಹಾರ ತಯಾರಿಕೆಯ ಉದ್ದಿಮೆಗಳು ತಾವು ಉತ್ಪಾದಿಸುವ ಅಹಾರದಲ್ಲಿ ಪೌಷ್ಟಿಕಾಂಶದ ವಿಚಾರದಲ್ಲಿ ಗ್ರಾಹಕರನ್ನು ತಪ್ಪುದಾರಿಗೆ ಎಳೆಯುತ್ತಿದೆ, ಇದು ಬೇಜವಾಬ್ದಾರಿಯುತ ವಂಚನೆಯಾಟ ಎಂದು ಹರ್ಷ್ ಆಪಾದಿಸಿದರು. ತಮ್ಮ ಖಾದ್ಯಪಟ್ಟಿಗಳಲ್ಲಿ ಇನ್ನಷ್ಟು ಆರೋಗ್ಯಕರ ಆಹಾರಗಳನ್ನು ನೀಡುವುದು ಅತ್ಯಗತ್ಯ, ಗ್ರಾಹಕರಲ್ಲಿ, ಅದರಲ್ಲೂ ವಿಶಿಷ್ಟವಾಗಿ ಬಡವರು ಮತ್ತು ಮಕ್ಕಳಲ್ಲಿ ಚಟ ಬೆಳೆಸುವಂತೆ ಮಾಡಿದೆ ಎಂದು ಅವರು ಹೇಳಿದರು.: 'ಚಟ ಬೆಳೆಸಿಕೊಳ್ಳಲು ನಿಮಗೆ ನಿಕೊಟೀನ್ ಅಥವಾ ಕಾನೂನುಬಾಹಿರ ಔಷಧದ ಅಗತ್ಯವಿಲ್ಲ; ಕಟ್ಟಾಸೆ ಹುಟ್ಟುತ್ತಿದೆ. ತ್ವರಿತ ಆಹಾರ ಉದ್ದಿಮೆಯು ಗ್ರಾಹಕರೊಂದಿಗೆ ನೇರ, ದಿಟ್ಟ ವ್ಯವಹಾರ ನಡೆಸುತ್ತಿಲ್ಲ ಎಂಬ ಬಲವಾದ ಶಂಕೆಯಿದೆ.' ಈ ಮೊಕದ್ದಮೆಯು ಹಣದ ಪರಿಹಾರ ಕೇಳಲಿಲ್ಲ, ಅಂತಿಮವಾಗಿ ಇದು ನ್ಯಾಯಾಲಯದ ಮುಂದೆ ಹಾಜರಾಗಲಿಲ್ಲ.
ಇವನ್ನೂ ನೋಡಿ
ಬದಲಾಯಿಸಿ- ಆಹಾರ ಗುಂಪುಗಳು
- ಫಾಸ್ಟ್ ಫುಡ್ ನೇಷನ್
- ಕಳಪೆ ಆಹಾರ
- ಸೂಪರ್ ಸೈಜ್ ಮಿ
- ಪಾಶ್ಚಾತ್ಯ ಶೈಲಿಯ ಆಹಾರಪಥ್ಯ
- ಇದನ್ನು ಮೆಲುಕು ಹಾಕಿ
- ದಿಢೀರನೆ ಸಿದ್ಧಪಡಿಸಿದ ಆಹಾರ ಮಂದಿರಗಳ ಪಟ್ಟಿ
- ಸಿದ್ಧಪಡಿಸಲು ಬಹಳ ಹೊತ್ತು ತೆಗೆದುಕೊಳ್ಳುವ ಆಹಾರ
ಟಿಪ್ಪಣಿಗಳು
ಬದಲಾಯಿಸಿ- ↑ Jakle, John (1999). Fast Food: Roadside Restaurants in the Automobile Age. Johns Hopkins University Press. ISBN 0-8018-6920-X.; Brueggemann, Walter (1993). Texts Under Negotiation: The Bible and Postmodern Imagination. Fortress Press. ISBN 0800627369.
- ↑ Talwar, Jennifer (2003). Fast Food, Fast Track: Immigrants, Big Business, and the American Dream. Westview Press. ISBN 0813341558.
- ↑ ಸ್ಟ್ಯಾಂಬಾಗ್ (1988), ಪಿಪಿ. 200, 209.
- ↑ ಮಾರ್ಥಾ ಕಾರ್ಲಿಂಗ್, ಫುಡ್ ಅಂಡ್ ಈಟಿಂಗ್ ಇನ್ ಮೆಡೀವಲ್ ಬಾರ್ಬೀ ಯಲ್ಲಿ 'ಫಾಸ್ಟ್ ಫುಡ್ ಅಂಡ್ ಅರ್ಬನ್ ಲಿವಿಂಗ್ ಸ್ಟ್ಯಾಂಡರ್ಡ್ಸ್ ಇನ್ ಮೆಡೀವಲ್ ಇಂಗ್ಲೆಂಡ್' ಪಿಪಿ. 27-51.
- ↑ BBC (2006-08-31). "Eel and pie shop". BBC. Retrieved November 24, 2007.
- ↑ BBC News (2007-02-07). "How turkey became a fast food". BBC. Retrieved November 23, 2007.
- ↑ Linda Stradley. "History of Sandwiches". What's Cooking America. Retrieved June 26, 2008.
- ↑ ೮.೦ ೮.೧ ೮.೨ James P Farrell. "The Evolution of the Quick Service Restaurant". A Management Consultant @ Large. Retrieved February 14, 2008.
- ↑ World InfoZone Ltd. "United Kingdom Information". World InfoZone Ltd. Retrieved November 23, 2007.
- ↑ National Public Radio (2002). "The Hamburger". NPR. Archived from the original on September 11, 2002. Retrieved November 23, 2007.
- ↑ ಲೂ ಎಲೆನ್ ಮೆಗಿನ್ಲೆ ಹಾಗೂ ಸ್ಟಿಫಾನಿ ಸ್ಪರ್ ಅವರ ಹಾಂಕ್ ಫಾರ್ ಸರ್ವಿಸ್ Archived 2009-08-09 ವೇಬ್ಯಾಕ್ ಮೆಷಿನ್ ನಲ್ಲಿ. (ಟ್ರೇ ಡೇಯ್ಸ್ ಪಬ್ಲಿಷಿಂಗ್, 2004) ನೋಡಿ.
- ↑ ಯು.ಎಸ್. ಬ್ಯೂರೊ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್, ಆಕ್ಯೂಪೇಷನಲ್ ಎಂಪ್ಲಾಯ್ಮಂಟ್ ಸ್ಟ್ಯಾಟಿಸ್ಟಿಕ್ಸ್
- ↑ Schlosser, Eric (2001). Fast Food Nation: The Dark Side of the All-American Meal. Houghton Mifflin Books. ISBN 0395977894.
- ↑ John Eligon (2008-01-13). "Where to Eat? A New Restaurant Genre Offers Manhattan More Choices". ದ ನ್ಯೂ ಯಾರ್ಕ್ ಟೈಮ್ಸ್. Retrieved 2008-12-30.
Though still a relatively small sector within the nation's $350 billion restaurant industry, several fast-casual chains are showing success and growth in Manhattan, and industry experts say it could be a sign of the sector's maturity and sustainability nationwide.
- ↑ "Research and Markets".
- ↑ "Worldwatch Institute". Archived from the original on 2019-08-19. Retrieved 2010-09-29.
- ↑ "The Fast Food Factory".
- ↑ "Burger King".
- ↑ "KFC". Archived from the original on 2011-02-24. Retrieved 2010-09-29.
- ↑ Subway publication (2008). "Official SUBWAY Restaurants Web Site". Subway Restaurants. Retrieved 2009-05-24.
- ↑ "Subway".
- ↑ "Yum! Brands". Archived from the original on 2010-02-08. Retrieved 2010-09-29.
- ↑ "Taco Bell".
- ↑ ರಾಬಿನ್ ಕ್ರೊಫ್ಟ್ (2006),ಫೋಲ್ಕ್ಲೋರ್, ಫ್ಯಾಮಿಲೀಸ್ ಅಂಡ್ ಫಿಯರ್: ಅಂಡರ್ಸ್ಟಾಂಡಿಂಗ್ ಕಂಸಮ್ಷನ್ ಡೆಕಿಷನ್ಸ್ ಥ್ರೂ ಒರಲ್ ಟ್ರೆಡಿಷನ್, ಜರ್ನಲ್ ಆಫ್ ಮಾರ್ಕೆಟಿಂಗ್ ಮ್ಯಾನೆಜ್ಮೆಂಟ್ , 22:9/10 , ಪಿಪಿ 1053-1076, ISSN 0267-257X
- ↑ ೨೫.೦ ೨೫.೧ "Fast Food, Race/Ethnicity, and Income: A Geographic Analysis" (PDF). Archived from the original (PDF) on 2010-07-26. Retrieved 2010-09-29.
- ↑ "Why fast foods are bad, even in moderation".
- ↑ ೨೭.೦ ೨೭.೧ ವಾರ್ನರ್
- ↑ ೨೮.೦ ೨೮.೧ ೨೮.೨ ಒಬೆಸಿಟಿ
- ↑ ಷಿಯೊಸರ್ ಇ. ಫಾಸ್ಟ್ ಫುಡ್ ನೇಷನ್: ದಿ ಡಾರ್ಕ್ ಸೈಡ್ ಆಫ್ ದಿ ಆಲ್-ಅಮೆರಿಕನ್ ಮೀಲ್. ನ್ಯೂಯಾರ್ಕ್, ಎನ್‌ವೈ: ಹಾಟನ್ ಮಿಫ್ಲಿನ್; 2001.
- ↑ "ಆರ್ಕೈವ್ ನಕಲು". Archived from the original on 2009-07-31. Retrieved 2010-09-29.
- ↑ "ಎಫೆಕ್ಟ್ಸ್ ಆಫ್ ಫಾಸ್ಟ್-ಫುಡ್ ಕಂಸಮ್ಷನ್ ಆನ್ ಎನರ್ಜಿ ಇಂಟೇಕ್ ಅಂಡ್ ಡಯೆಟ್ ಕ್ವಾಲಿಟಿ ಅಮಾಂಗ್ ಚಿಲ್ಡ್ರನ್ ಇನ್ ಎ ನ್ಯಾಷನಲ್ ಹೌಸ್ಹೋಲ್ಡ್ ಸರ್ವೆ." ಪೀಡಿಯಾಟ್ರಿಕ್ಸ್ 113.1 (2004): 112-118. ಇ-ಜರ್ನಲ್ಸ್. ಇಬಿಎಸ್‌ಸಿಒ. ವೆಬ್. 27 ಅಕ್ಟೊಬರ್ 2009.
ಗ್ರಂಥಸೂಚಿ
ಬದಲಾಯಿಸಿ- ಆಡಮ್ಸ್, ಕ್ಯಾಥರೀನ್. "ರಿಫ್ರೇಮಿಂಗ್ ದಿ ಒಬೆಸಿಟಿ ಡಿಬೇಟ್: ಮೆಕ್‌ಡೊನಾಲ್ಡ್ಸ್ ರೋಲ್ ಮೇ ಸರ್ಪ್ರೈಸ್ ಯು.[ಶಾಶ್ವತವಾಗಿ ಮಡಿದ ಕೊಂಡಿ]" ಜರ್ನಲ್ ಆಫ್ ಲಾ ಮೆಡಿಸೀನ್ ಅಂಡ್ ಎಥಿಕ್ಸ್ 35 (2007): 154-157. ಅಕಾಡೆಮಿಕ್ ಸರ್ಚ್ ಪ್ರೀಮಿಯರ್. ಇಬಿಎಸ್‌ಸಿಒಹಾಸ್ಟ್. ನೆವಡಾ ವಿಶ್ವವಿದ್ಯಾನಿಲಯ, ರಿನೊ ಲೈಬ್ರೆರೀಸ್. 3 ಫೆಬ್ರವರಿ 2008).
- ಆರ್ನ್ಡ್, ಮೈಕಲ್. "ಮೆಕ್ಡೊನಾಲ್ಡ್ಸ್ 24/7.[ಶಾಶ್ವತವಾಗಿ ಮಡಿದ ಕೊಂಡಿ]" ಬ್ಯುಸಿನೆಸಸ ವೀಕ್ 4020 (2007): 64-72. ಅಕ್ಯಾಡೆಮಿಕ್ ಸರ್ಚ್ ಪ್ರೀಮಿಯರ್. ಇಬಿಎಸ್‌ಸಿಒಹಾಸ್ಟ್. ನೆವಡಾ ವಿಶ್ವವಿದ್ಯಾನಿಲಯ, ರಿನೊ ಲೈಬ್ರೆರೀಸ್. 22 ಫೆಬ್ರವರಿ 2008).
- ಫುಡ್ ಅಂಡ್ ಈಟಿಂಗ್ ಇನ್ ಮೆಡೀವಲ್ ಯುರೋಪ್. ಮಾರ್ಥಾ ಕಾರ್ಲಿನ್ ಅಂಡ್ ಜೊಯೆಲ್ ಟಿ. ರೊಸೆಂಥಾಲ್ (ಸಂಪಾದಕರು). ದಿ ಹ್ಯಾಂಬಲ್ಡನ್ ಪ್ರೆಸ್, ಲಂಡನ್. 1998. ISBN 1-85285-148-1
- ಹೋಗನ್, ಡೇವಿಡ್. ಸೆಲಿಂಗ್ 'ಎಮ್ ಬೈ ದಿ ಸ್ಯಾಕ್: ವೈಟ್ ಕ್ಯಾಸ್ಲ್ ಅಂಡ್ ದಿ ಕ್ರಿಯೇಷನ್ ಆಫ್ ಅಮೆರಿಕನ್ ಫುಡ್ . ನ್ಯೂಯಾರ್ಕ್: ನ್ಯೂಯಾರ್ಕ್ ಯುನಿವರ್ಸಿಟಿ ಪ್ರೆಸ್, 1997.
- ಕ್ರೊಕ್, ರೇ ವಿತ್ ರಾಬರ್ಟ್ ಆಂಡರ್ಸನ್. ಗ್ರೈಂಡಿಂಗ್ ಇಟ್ ಔಟ್: ದಿ ಮೇಕಿಂಗ್ ಆಫ್ ಮೆಕ್ಡೊನಾಲ್ಡ್ಸ್ . ಸೇಂಟ್ ಮಾರ್ಟಿನ್ಸ್ ಪ್ರೆಸ್, 1998.
- ಲೆವಿನ್ಸ್ಟೇನ್, ಹಾರ್ವಿ. ಪ್ಯಾರಡಾಕ್ಸ್ ಆಫ್ ಪ್ಲೆಂಟಿ: ಎ ಸೊಷಿಯಲ್ ಹಿಸ್ಟರಿ ಆಫ್ ಈಟಿಂಗ್ ಇನ್ ಮಾಡರ್ನ್ ಅಮೆರಿಕಾ. ಬರ್ಕಲೆ: ಯುನಿವರ್ಸಿಟಿ ಆಫ್ ಕ್ಯಾಲಿಫೊರ್ನಿಯಾ ಪಿ, 2003. 228-229.
- ಲಕ್ಸೆಂಬರ್ಗ್, ಸ್ಟ್ಯಾನ್. ರೋಡ್ಸೈಡ್ ಎಂಪಯರ್ಸ್: ಹೌ ದಿ ಚೈನ್ಸ್ ಫ್ರಾಂಚೈಸ್ಡ್ ಅಮೆರಿಕಾ . ನ್ಯುಯಾರ್ಕ್: ವೈಕಿಂಗ್, 1995.
- ಮೆಕ್ಗಿಂಲೆ, ಲೂ ಎಲೆನ್ ವಿತ್ ಸ್ಟಿಫಾನೀ ಸ್ಪರ್, ಹಾಂಕ್ ಫಾರ್ ಸರ್ವಿಸ್: ಎ ಮ್ಯಾನ್, ಎ ಟ್ರೇ ಅಂಡ್ ದಿ ಗ್ಲೊರಿ ಡೇಯ್ಸ್ ಆಫ್ ದಿ ಡ್ರೈವ್-ಇನ್. ಸೇಂಟ್ ಲೂಯಿಸ್: ಟ್ರೇ ಡೇಯ್ಸ್ ಪಬ್ಲಿಷಿಂಗ್, 2004. ಪಾರ್ಕ್‌ಮೂರ್ ಉಪಾಹಾರ ಮಂದಿರಗಳ ಚಿತ್ರಗಳನ್ನು ವೀಕ್ಷಿಸಲು, ಡ್ರೈವ್-ಇನ್ ರೆಸ್ಟ್ರಾಂಟ್ ಫೋಟೋಸ್ Archived 2010-10-02 ವೇಬ್ಯಾಕ್ ಮೆಷಿನ್ ನಲ್ಲಿ. ನೋಡಿ.
- ಒಬೆಸಿಟಿ ಇನ್ ಅಮೆರಿಕಾ. ದಿ ಎಂಡೊಕ್ರೀನ್ ಸೊಸೈಟಿ: ದಿ ಹಾರ್ಮೊನ್ ಫೌಂಡೇಷನ್. 27 ಏಪ್ರಿಲ್ 2008 ದಿ ಒಬೆಸಿಟಿ ಕ್ರೈಸಿಸ್: ವಾಟ್ಸ್ ಇಟ್ ಆಲ್ ಎಬೌಟ್?
- ಪೆಸಿಫಿಕ್ ರಿಸರ್ಚ್ ಇಂಸ್ಟಿಟ್ಯೂಟ್, ಕ್ಯಾಪಿಟಲ್ ಐಡಿಯಾಸ್, ವ. 7, ನಂ. 31, 8 ಆಗಸ್ಟ್ 2002.
- ಷ್ಲಾಸರ್, ಎರಿಕ್, ಫಾಸ್ಟ್ ಫುಡ್ ನೇಷನ್: ದಿ ಡಾರ್ಕ್ ಸೈಡ್ ಆಫ್ ದಿ ಆಲ್-ಅಮೆರಿಕನ್ ಮೀಲ್ , ಹಾಟನ್ ಮಿಫ್ಲಿನ್ ಕಂಪೆನಿ, 2001
- ಷುಲ್ಟ್ಜ್, ಹೊವಾರ್ಡ್ ಹಾಗೂ ಡೊರಿ ಜೊನ್ಸ್ ಯಾಂಗ್, ಪೋರ್ ಯಾವರ್ ಹಾರ್ಟ್ ಇಂಟು ಇಟ್: ಹೌ ಸ್ಟಾರ್ಬಕ್ಸ್ ಬಿಲ್ಟ್ ಎ ಕಂಪೆನಿ ಒನ್ ಕಪ್ ಅಟ್ ಎ ಟೈಮ್ , ಹೈಪಿರಿಯನ್, 1999
- ಸ್ಟ್ಯಾಂಬಾಗ್, ಜಾನ್ ಇ., ದಿ ಏನ್ಷಿಯೆಂಟ್ ರೊಮನ್ ಸಿಟಿ ಜೆಹೆಚ್‌ಯು ಪ್ರೆಸ್, 1988. ISBN 978-0-8018-3692-3.
- ವಾರ್ನರ್, ಮೆಲಾನೀ "ಸ್ಯಾಲಡ್ಸ್ ಆರ್ ನೊ, ಚೀಪ್ ಬರ್ಜರ್ಸ್ ರಿವೈವ್ ಮೆಕ್ಡೊನಾಲ್ಡ್ಸ್[ಶಾಶ್ವತವಾಗಿ ಮಡಿದ ಕೊಂಡಿ]" ದಿ ನ್ಯೂಯಾರ್ಕ್ ಟೈಮ್ಸ್ 19 ಏಪ್ರಿಲ್ 2006. ಅಕಾಡೆಮಿಕ್ ಸರ್ಚ್ ಪ್ರೀಮಿಯರ್. EBSCOhost ಇಬಿಎಸ್‌ಸಿಒಹಾಸ್ಟ್. ನೆವಡಾ ವಿಶ್ವವಿದ್ಯಾನಿಲಯ, ರಿನೊ ಲೈಬ್ರೆರೀಸ್. 3 ಫೆಬ್ರವರಿ 2008).
ಹೊರಗಿನ ಕೊಂಡಿಗಳು
ಬದಲಾಯಿಸಿ- ಕ್ಯೂಎಸ್ಆರ್ ಮ್ಯಾಗಝೀನ್ - ದಿಢೀರನೆ ಸಿದ್ಧಪಡಿಸಲಾದ ಆಹಾರ ಉದ್ದಿಮೆಯಲ್ಲಿನ ವಿದ್ಯಮಾನಗಳನ್ನು ವರದಿ ಮಾಡುವ ಪತ್ರಿಕೆ
- ದಿ ಬ್ರಿಟಿಷ್ ಲೈಬ್ರೆರಿ - ಫಾಸ್ಟ್ ಫುಡ್ ಅಂಡ್ ಸ್ಹ್ಯಾಕ್ಸ್ ಇಂಡಸ್ಟ್ರಿ ಗೈಡ್ (ಮಾಹಿತಿ ಮೂಲ) Archived 2010-08-20 ವೇಬ್ಯಾಕ್ ಮೆಷಿನ್ ನಲ್ಲಿ.
- ವೆಗನ್ ಈಟಿಂಗ್ ಔಟ್ Archived 2019-08-29 ವೇಬ್ಯಾಕ್ ಮೆಷಿನ್ ನಲ್ಲಿ. - ಡಿಢೀರನೆ ಸಿದ್ಧಪಡಿಸಲಾದ ಸಂಪೂರ್ಣ ಸಸ್ಯಾಹಾರ ಖಾದ್ಯಪಟ್ಟಿ ಆಯ್ಕೆಗಳು.
- ರಿಸೆಷನ್-ಪಿಂಚ್ಡ್ ಫ್ಲಾಕ್ ಟು ಕೆಎಫ್‌ಸಿ ಫಾರ್ ಸುಗರ್-ಕೋಟೆಡ್ ಪ್ರೊಟೀನ್ - ದಿಢೀರನೆ ಸಿದ್ಧಪಡಿಸಲಾದ ಆಹಾರ ಕೇಂದ್ರಗಳಲ್ಲಿ ತಿನ್ನುವುದು ಅಥವಾ ಮನೆಯಲ್ಲಿ ಅಡುಗೆ ಮಾಡುವುದು - ಇವೆರಡರಲ್ಲಿ ಯಾವುದು ನಿಜಕಕ್ಊ ಹೆಚ್ಚು ಸಮಯ ಮತ್ತು ಹಣ ಉಳಿತಾಯ ಮಾಡಬಲ್ಲದು?
- ಸೀಸರ್ ಬಾರ್ಬರ್ ಮೊಕದ್ದಮೆಯ ಒಂದು ಪ್ರತಿ
- ವೈ ಕ್ವಿಕ್, ಚೀಪ್ ಫುಡ್ ಇಸ್ ಅಕ್ಚುಯಲಿ ಮೋರ್ ಎಕ್ಸ್ಪೆನ್ಸಿವ್ ಡಾ. ಮಾರ್ಕ್ ಹೈಮನ್ ಅವರ ಲೇಖನ
- ಅಡ್ವೆಂಚರ್ಸ್ ಇನ್ ಫಾಸ್ಟ್ ಫುಡ್ Archived 2019-05-14 ವೇಬ್ಯಾಕ್ ಮೆಷಿನ್ ನಲ್ಲಿ. ಪ್ರಮುಖ ತ್ವರಿತ ಆಹಾರ ಮಳಿಗೆಗಳ ಬಗ್ಗೆ ಮಾಹಿತಿ ಮತ್ತು ಇತಿಹಾಸ