ಸಾರ್ವಜನಿಕ ಬಾಂಧವ್ಯಗಳು
ಪಬ್ಲಿಕ್ ರಿಲೇಶನ್ಸ್ (PR )ಎಂದರೆ ಒಂದು ಸಂಸ್ಥೆ ಮತ್ತು ಅದರ ಸಾರ್ವಜನಿಕರ ನಡುವಿನ ಸಂಪರ್ಕವನ್ನು ನಿರ್ವಹಿಸುವುದು.[೧] ಪಬ್ಲಿಕ್ ರಿಲೇಶನ್ಸ್ ಮುಖಾಂತರ ಒಂದು ಸಂಸ್ಥೆ ಅಥವಾ ವ್ಯಕ್ತಿಗೆ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳು ಮತ್ತು ಸುದ್ದಿಗಳಂತಹ ನೇರವಾಗಿ ಹಣಪಾವತಿಯಾಗದ ಮೂಲಗಳಿಂದ ನೋಡುಗರನ್ನು ತಲುಪುವುದು ಸಾಧ್ಯವಾಗುವುದು.[೨] ಸಾರ್ವಜನಿಕ ಬಾಂಧವ್ಯವು ವಿಶ್ವಸನೀಯ ಮೂರನೇ ಸ್ತರದ ಬಹಿದ್ವಾರಗಳನ್ನು ಅವಲಂಬಿಸುವುದರಿಂದಾಗಿ ಜಾಹೀರಾತುಗಳಿಗೆ ದೊರಕದ ಮೂರನೇ ಸ್ತರದ ಯಥಾರ್ಥತೆಯು ಇದಕ್ಕೆ ಲಭ್ಯವಾಗುವುದು.[೨] ಇದರ ಚಟುವಟಿಕೆಗಳು ಸಮಾವೇಶಗಳಲ್ಲಿ ಮಾತನಾಡುವುದು, ಪ್ರೆಸ್ ಮಾಧ್ಯಮದ ಜತೆ ಕೆಲಸ ಮಾಡುವುದು ಮತ್ತು ನೌಕರವರ್ಗದೊಡನೆ ಸಂಪರ್ಕವಿರಿಸಿಕೊಳ್ಳುವುದು ಮುಂತಾದವನ್ನು ಒಳಗೊಂಡಿರುತ್ತವೆ. ಇದು ಸುಸ್ಪಷ್ಟವಾದ ಕೆಲಸವಲ್ಲವಾದುದರಿಂದಾಗಿ ಜಾಹೀರಾತುದಾರಿಕೆಯಿಂದ ಭಿನ್ನವಾಗಿ ನಿಲ್ಲುತ್ತದೆ.
PR ಅನ್ನು ನೌಕರವರ್ಗ, ಗ್ರಾಹಕವರ್ಗ, ಹೂಡಿಕೆದಾರರು, ಮತದಾರರು ಇಲ್ಲವೇ ಸಾರ್ವಜನಿಕರೊಂದಿಗಿನ ಬಾಂಧವ್ಯವನ್ನು ಉತ್ತಮಪಡಿಸಿಕೊಳ್ಳಲು ಬಳಸಿಕೊಳ್ಳಬಹುದು.[೨] ತನ್ನ ಸಾರ್ವಜನಿಕ ಚಿತ್ರಣದ ಬಗ್ಗೆ ಕಾಳಜಿಯಿರುವ ಯಾವುದೇ ಸಂಸ್ಥೆ ಒಂದಲ್ಲ ಒಂದು ರೀತಿಯಲ್ಲಿ ಸಾರ್ವಜನಿಕ ಬಾಂಧವ್ಯಗಳನ್ನು ಬಳಸಿಕೊಳ್ಳುತ್ತದೆ. ಇದಕ್ಕೆ ಸಂಬಂಧಿಸಿದ ಕಾರ್ಪೊರೇಟ್ ಸಂಪರ್ಕಗಳಡಿಯಲ್ಲಿ ಬರುವ ಕೆಲವು ಸಹೋದರ ವಿಧಾನಗಳೆಂದರೆ : ವಿಶ್ಲೇಷಕ ಬಾಂಧವ್ಯಗಳು, ಮಾಧ್ಯಮ ಬಾಂಧವ್ಯಗಳು, ಹೂಡಿಕೆದಾರ ಬಾಂಧವ್ಯಗಳು, ಆಂತರಿಕ ಸಂಪರ್ಕಗಳು ಮತ್ತು ಕಾರ್ಮಿಕ ಬಾಂಧವ್ಯಗಳು.
ಸಾರ್ವಜನಿಕ ಬಾಂಧವ್ಯಗಳಲ್ಲಿ ಹಲವಾರು ವಿಧಗಳಿದ್ದರೂ ಹೆಚ್ಚು ಮಾನ್ಯತೆಯಿರುವ ಪ್ರಕಾರಗಳೆಂದರೆ ಎಂದರೆ ಆರ್ಥಿಕ ಸಾರ್ವಜನಿಕ ಬಾಂಧವ್ಯಗಳು, ಉತ್ಪನ್ನ ಸಾರ್ವಜನಿಕ ಬಾಂಧವ್ಯಗಳು ಮತ್ತು ವಿಪತ್ಕಾಲೀನ ಸಾರ್ವಜನಿಕ ಬಾಂಧವ್ಯಗಳು.
- ಆರ್ಥಿಕ ಸಾರ್ವಜನಿಕ ಬಾಂಧವ್ಯಗಳು ವಾಣಿಜ್ಯ ವರದಿಗಾರರರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತವೆ.
- ಉತ್ಪನ್ನ ಸಾರ್ವಜನಿಕ ಬಾಂಧವ್ಯಗಳು ಒಂದು ಉತ್ಪನ್ನ ಅಥವಾ ಸೇವೆಗೆ ಜಾಹೀರಾತಿನ ಬದಲು PR ತಂತ್ರಗಳನ್ನನುಸರಿಸಿ ಪ್ರಚಾರ ನೀಡುವ ಕಾರ್ಯಗಳಿಗೆ ಸಂಬಂಧಿಸಿದವಾಗಿವೆ.
- ವಿಪತ್ಕಾಲೀನ ಸಾರ್ವಜನಿಕ ಬಾಂಧವ್ಯಗಳು ಋಣಾತ್ಮಕ ಆರೋಪ ಅಥವಾ ಮಾಹಿತಿಗೆ ಪ್ರತಿಕ್ರಿಯೆ ನೀಡುವುದಕ್ಕೆ ಸಂಬಂಧಿಸಿವೆ.
ಇಂದಿನ ಉದ್ಯಮ ಸ್ಥಿತಿಗತಿ
ಬದಲಾಯಿಸಿಜಾಹೀರಾತು ಮಾರುಕಟ್ಟೆಯ ಮೇಲೆ ತಮ್ಮ ಉತ್ಪನ್ನಗಳ ಸಲುವಾಗಿ ಅಪಾರ ಹಣ ವ್ಯಯಿಸುತ್ತಿದ್ದ News Corp., Dow Jones, ಮತ್ತು CMPಯಂತಹ ಕಾರ್ಪೊರೇಟ್ ಸಂಸ್ಥೆಗಳು ಇಂದು ಅ ವೆಚ್ಚವನ್ನು ಗಣನೀಯವಾಗಿ ಕಡಿತಗೊಳಿಸಿ ನೇರ ಜಾಹೀರಾತು ಉತ್ಪನ್ನಗಳ ಮಾರುಕಟ್ಟೆಗಳಾಗಿರುವ ಸರ್ಚ್ ಎಂಜಿನ್ನುಗಳು ಮತ್ತು ಅದೇ ರೀತಿಯ ಇನ್ನಿತರ ಮಾಧ್ಯಮಗಳ ಕಡೆ ವಾಲುತ್ತಿವೆ. ಸಾಂಪ್ರದಾಯಿಕ ಮಾಧ್ಯಮ ಪ್ರಕಾಶನಗಳು ಪತ್ರಕರ್ತರನ್ನು ಕೆಲಸದಿಂದ ತೆಗೆದುಹಾಕುತ್ತಿವೆ, ಬೀಟ್ ವರದಿಗಾರರನ್ನು ಕ್ರೋಢೀಕರಿಸುತ್ತಿವೆ, ತಮ್ಮ ಪ್ರಕಾಶನಗಳ ಗಾತ್ರವನ್ನು ಕುಗ್ಗಿಸುತ್ತಿವೆ ಮಾತ್ರವಲ್ಲದೆ ಹಲವಾರು ಪ್ರಕಾಶನಗಳು ಸಂಪೂರ್ಣವಾಗಿ ಮುಚ್ಚಿಹೋಗುತ್ತಿವೆ ಕೂಡಾ.[೩]
ಬ್ಲಾಗ್‌ಗಳು ಸಾಂಪ್ರದಾಯಿಕ ಮಾಧ್ಯಮಕ್ಕಿಂತ ಕಡಿಮೆ ಖರ್ಚುಳ್ಳವೆಂದೂ, ಹೆಚ್ಚು ಉತ್ತಮ ಸುದ್ದಿ ವಿಶ್ಲೇಷಣೆ ಮತ್ತು ಕವರೇಜ್ ನೀಡುವವೆಂದೂ ಹೇಳಲಾಗುತ್ತದೆ.[೪] ಸಾಂಪ್ರದಾಯಿಕ ಮಾಧ್ಯಮ ಸ್ಥಾನಪಲ್ಲಟಗೊಳಿಸುವತ್ತ ಪ್ರತಿದಿನವೂ ಹೆಚ್ಚುಹೆಚ್ಚಾಗಿ ಚಿಗಿತುಕೊಳ್ಳುತ್ತಿರುವ ಬ್ಲಾಗುಗಳು ತಮ್ಮ ಉತ್ತಮ ನಿರ್ವಹಣೆ ಮತ್ತು ಮಿತವ್ಯಯಕರ ವಾಣಿಜ್ಯ ಮಾದರಿಯಿಂದಾಗಿ ಹೆಚ್ಚು ಜನಪ್ರಿಯತೆ ಗಳಿಸುತ್ತಿವೆ.
ಸಾಮಾಜಿಕ ಮಾಧ್ಯಮದ ಪ್ರವೇಶವು ಇಂದು PRನ ಅಗ್ರಗಣ್ಯ ಪ್ರವೃತ್ತಿಯಾಗಿದೆ.[೫] ಆದರೆ ಸಾಮಾಜಿಕ ಮಾಧ್ಯಮದ ಏರುತ್ತಿರುವ ಬಳಕೆಯ ಜತೆಗೇ ಈ ಪ್ರವೃತ್ತಿಯು ಸಾಂಪ್ರದಾಯಿಕ ಮಾಧ್ಯಮವನ್ನು ಇಂದಿನವರೆಗೂ ಸಂಪೂರ್ಣವಾಗಿ ಸ್ಥಾನಪಲ್ಲಟಗೊಳಿಸಿಲ್ಲವೆನ್ನುವುದು ಗಮನಿಸತಕ್ಕ ವಿಚಾರವಾಗಿದೆ.[೬]
ಸರ್ಚ್ ಎಂಜಿನ್ ಆಪ್ಟಿಮೈಸೇಶನ್, ಕಂಟೆಂಟ್ ಪಬ್ಲಿಶಿಂಗ್, ಪಾಡ್‌ಕ್ಯಾಸ್ಟ್ ಮತ್ತು ವಿಡಿಯೋಗಳ ಪ್ರಾಸ್ತಾವಿಕ ಪರಿಚಯ - ಇವು ಸಾಮಾಜಿಕ ಮಾಧ್ಯಮದ ಇತರ ಬೆಳೆಯುತ್ತಿರುವ ಪ್ರವೃತ್ತಿಗಳು.[೫] ಸಾರ್ವಜನಿಕ ಬಾಂಧವ್ಯ ಉದ್ಯೋಗಿಗಳಿಗೆ ದಿನೇದಿನೇ ಬೇಡಿಕೆ ಹೆಚ್ಚಾಗುತ್ತಿದೆ. ಸಾರ್ವಜನಿಕ ಬಾಂಧವ್ಯ ವಿಭಾಗಗಳು ಯಾವುದೇ ವರ್ಗಗಳಿಗೆ ಮಿತಗೊಳ್ಳದೆ ಸಾಮಾನ್ಯವಾಗಿ ಈ ಕೆಳಗಿನ ರೀತಿಯ ಗ್ರಾಹಕವರ್ಗಗಳಿಗಾಗಿ ಕೆಲಸ ಮಾಡುತ್ತವೆ : ಸರ್ಕಾರ, ಶೈಕ್ಷಣಿಕ ಸಂಸ್ಥೆಗಳು ಮತ್ತು ಬಹಿದ್ವಾರಗಳು, ಲಾಭರಹಿತ ಸಂಸ್ಥೆಗಳು, ನಿಶ್ಚಿತ ಉದ್ಯಮಗಳು, ವ್ಯವಹಾರಗಳು ಮತ್ತು ಬೃಹತ್ ಕಂಪನಿಗಳು, ಅಥ್ಲೆಟಿಕ್ ತಂಡಗಳು ಹಾಗೂ ಮನರಂಜನಾ ಸಂಸ್ಥೆಗಳು, ಮತ್ತು ಅಂತರ್ರಾಷ್ಟ್ರೀಯ ಅವಕಾಶಗಳು.
ವಿಧಾನಗಳು, ಪರಿಕರಗಳು ಮತ್ತು ತಂತ್ರಗಳು
ಬದಲಾಯಿಸಿIt has been suggested that Black Public Relations be merged into this article or section. (Discuss) Proposed since July 2009. |
ಸಾರ್ವಜನಿಕ ಬಾಂಧವ್ಯಗಳು ಮತ್ತು ಪ್ರಚಾರ ಒಂದೇ ಅಲ್ಲದಿದ್ದರೂ ಹಲವಾರು PR ಕಂಪನಿಗಳು ಪ್ರಚಾರ ಒದಗಿಸುವ ಸೌಲಭ್ಯವನ್ನೂ ಹೊಂದಿರುವುದುಂಟು. ಪ್ರಚಾರ ಎಂದರೆ ಒಂದು ಉತ್ಪನ್ನ, ವ್ಯಕ್ತಿ, ಸೇವೆ, ಧ್ಯೇಯ ಅಥವಾ ಸಂಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹರಡಲಾಗುವ ಮಾಹಿತಿಯಾಗಿದ್ದು ಹೆಚ್ಚಿನಬಾರಿ ಪರಿಣಾಮಕಾರಿಯಾದ PR ಯೋಜನೆಯ ಪರಿಣಾಮವಾಗಿರುವುದು ಕಂಡುಬರುತ್ತದೆ.
ಸಾರ್ವಜನಿಕರನ್ನು ಗುರಿಯಾಗಿಸಿಕೊಳ್ಳುವುದು
ಬದಲಾಯಿಸಿಒಂದು ಶ್ರೋತೃವರ್ಗವನ್ನು ಗುರುತಿಸಿಕೊಳ್ಳುವುದು ಮತ್ತು ಆ ಶ್ರೋತೃವರ್ಗಕ್ಕೆ ತಕ್ಕನಾಗಿ ಎಲ್ಲ ಸಂದೇಶಗಳನ್ನೂ ರೂಪಿಸುವುದು ಸಾರ್ವಜನಿಕ ಬಾಂಧವ್ಯಗಳ ಮೂಲಭೂತ ತಂತ್ರ. ಈ ಶ್ರೋತೃವರ್ಗವು ಸಾಮಾನ್ಯ, ರಾಷ್ಟ್ರೀಯ ಅಥವಾ ಅಂತರ್ರಾಷ್ಟ್ರೀಯ ಸ್ತರದ್ದಾಗಿದ್ದರೂ ಹೆಚ್ಚಾಗಿ ಜನಸಂಖ್ಯೆಯ ಒಂದು ಭಾಗವನ್ನೊಳಗೊಂಡಿರುತ್ತದೆ. ಮಾರುಕಟ್ಟೆದಾರರು ಆಗಾಗ ’ಜನಸಂಖ್ಯಾಶಾಸ್ತ್ರ’ಕ್ಕೆ ಸಂಬಂಧಿಸಿದ "18-49 ವಯೋಮಾನದ ಕಪ್ಪು ಪುರುಷರು" ಎಂಬಂತಹ ಅರ್ಥಿಕ ಅಂಕಿಸಂಖ್ಯೆಗಳನ್ನು ಉದಾಹರಿಸುತ್ತಾರೆ. ಆದರೆ ಸಾರ್ವಜನಿಕ ಬಾಂಧವ್ಯವು ಯಾರಾದರೂ ಸುಲಭವಾಗಿ ಸಂಪರ್ಕಿಸಬಹುದಾದಂತಹ ವ್ಯಕ್ತಿಗಳನ್ನು ಶ್ರೋತೃವರ್ಗದಲ್ಲಿ ಹೊಂದಿರುತ್ತದೆ. ಉದಾಹರಣೆಗೆ, ಇತ್ತೀಚಿನ ರಾಜಕೀಯ ಶ್ರೋತೃವರ್ಗವೊಂದು "ಸಾಕರ್ ಅಮ್ಮಂದಿರು" ಹಾಗೂ "NASCAR ಅಪ್ಪಂದಿರು"ಗಳನ್ನು ಒಳಗೊಂಡಿದೆ." ಇದಲ್ಲದೇ ದೇಹದಾರ್ಢ್ಯ, ಆಹಾರಸೇವನಾ ಆಯ್ಕೆ, ಅಡ್ರಿನಲಿನ್ ಜಂಕೀಗಳಂತಹ ಮನೋಸ್ಫುಟತೆಯನ್ನಾಧರಿಸಿದ ಗುಂಪುವರ್ಗೀಕರಣವೂ ನಡೆಯುತ್ತದೆ...
ಶ್ರೋತೃವರ್ಗದ ಜತೆಗೇ ಒಂದು ಚರ್ಚಿತ ವಿಷಯದ ಬಗ್ಗೆ ’ಪಂಥ’ ಹೂಡಿರುವ ’ಪಂಥದಾರ’ರೂ ಇರುತ್ತಾರೆ ಎಲ್ಲಾ ಶ್ರೋತೃಗಳೂ ಪಂಥದಾರರು (ಅಥವಾ ಭವಿಷ್ಯದ ಪಂಥದಾರರು) ಆಗಿದ್ದರೂ, ಎಲ್ಲಾ ಪಂಥದಾರರೂ ಶ್ರೋತೃಗಳಾಗಿರಬೇಕಾಗಿಲ್ಲ. ಉದಾಹರಣೆಗೆ, ಒಂದು ಚ್ಯಾರಿಟಿ ಸಂಸ್ಥೆಯು ಒಂದು PR ಏಜೆನ್ಸಿಯನ್ನು ಒಂದು ಕಾಯಿಲೆಯನ್ನು ವಾಸಿಮಾಡುವ ಸಂಶೋಧನೆಯ ಸಲುವಾಗಿ ಒಂದು ಜಾಹೀರಾತು ಅಭಿಯಾನವನ್ನು ತಯಾರಿಸಲು ನಿಯಮಿಸುತ್ತದೆ. ಇದರಲ್ಲಿ ಚ್ಯಾರಿಟಿಸಂಸ್ಥೆ ಮತ್ತು ಕಾಯಿಲೆಯನ್ನು ಹೊಂದಿರುವ ಜನರು ಪಂಥದಾರರಾದರೆ ಈ ಅಭಿಯಾನದಿಂದ ಸಂಸ್ಥೆಗೆ ಹಣವನ್ನು ದಾನವಾಗಿ ನೀಡುವ ಯಾವುದೇ ವ್ಯಕ್ತಿ ಶ್ರೋತೃವರ್ಗಕ್ಕೆ ಸೇರಿಕೊಳ್ಳುತ್ತಾರೆ.
ಕೆಲವೊಮ್ಮೆ ಒಂದು PR ಪ್ರಯತ್ನದ ಸಮಯದಲ್ಲಿ ಶ್ರೋತೃವರ್ಗ ಮತ್ತು ಪಂಥದಾರರ ವಿಭಿನ್ನ ಹಿತಾಸಕ್ತಿಗಳ ಕಾರಣದಿಂದಾಗಿ ಹಲವಾರು ವಿಶಿಷ್ಟ ಆದರೆ ಪೂರಕ ಸಂದೇಶಗಳನ್ನು ತಯಾರು ಮಾಡಬೇಕಾಗಿಬರುತ್ತದೆ. ಇದು ಸುಲಭಸಾಧ್ಯವೇನಲ್ಲ. ಕೆಲವು ಬಾರಿ–, ಅದೂ ರಾಜಕೀಯದಲ್ಲಿ– ಒಬ್ಬ ವಕ್ತಾರ ಅಥವಾ ಕ್ಲೈಂಟ್ ಒಂದು ಶ್ರೋತೃವರ್ಗವನ್ನುದ್ದೇಶಿಸಿ ಹೇಳಿದ ಯಾವುದೋ ಒಂದು ಮಾತು ಇನ್ನೊಂದು ಶ್ರೋತೃವರ್ಗವನ್ನೋ ಪಂಥದಾರರ ವರ್ಗವನ್ನೋ ಕೆರಳಿಸಿಬಿಡುತ್ತದೆ.
ಲಾಬಿ ಗುಂಪುಗಳು
ಬದಲಾಯಿಸಿಸರ್ಕಾರೀ ನೀತಿ, ಕಾರ್ಪೊರೇಟ್ ನೀತಿ ಅಥವಾ ಸಾರ್ವಜನಿಕ ಅಭಿಮತಗಳ ಮೇಲೆ ಪ್ರಭಾವ ಬೀರುವ ಸಲುವಾಗಿ ಲಾಬಿ ಗುಂಪುಗಳನ್ನು ರಚಿಸಲಾಗುತ್ತದೆ. ಇದಕ್ಕೆ ಉದಾಹರಣೆಯೆಂದರೆ ಅಮೆರಿಕದ ವಿದೇಶಾಂಗ ನೀತಿಯ ಮೇಲೆ ಪ್ರಭಾವ ಬೀರುವ ಸಮಿತಿಗಳಲ್ಲೊಂದಾದ American Israel Public Affairs Committee ಅಥವಾ AIPAC. ಇಂತಹ ಗುಂಪುಗಳು ತಾವು ಒಂದು ನಿರ್ದಿಷ್ತವಾದ ಉದ್ದೇಶವನ್ನು ಹೊಂದಿರುವವೆಂದು ಘೋಷಿಸುತ್ತವೆ ಮತ್ತು ಈ ಉದ್ದೇಶಗಳಿಗೆ ನಿಷ್ಟವಾಗಿ ಕಾರ್ಯ ನಿರ್ವಹಿಸುತ್ತವೆ. ಯಾವುದೇ ಒಂದು ಲಾಬಿ ಗುಂಪು ತನ್ನ ನೈಜ ಉದ್ದೇಶ ಮತ್ತು ಬೆಂಬಲಿಗರನ್ನು ಗುಪ್ತವಾಗಿಟ್ಟಾಗ ಅದನ್ನು ಫ್ರಂಟ್ ಗ್ರೂಪ್ ಎನ್ನಲಾಗುವುದು. ಇದೇ ಅಲ್ಲದೆ ಸರ್ಕಾರಗಳು ಸಾರ್ವಜನಿಕ ಬಾಂಧವ್ಯ ಸಂಸ್ಥೆಗಳ ಲಾಬಿ ಮಾಡಿ ಸಾರ್ವಜನಿಕ ಅಭಿಮತವನ್ನು ಬದಲಾಯಿಸುವ ಪ್ರಯತ್ನವನ್ನೂ ಮಾಡಬಹುದು. ಇದಕ್ಕೆ ನೀಡಬಹುದಾದ ಜ್ವಲಂತ ಉದಾಹರಣೆಯೆಂದರೆ ಯುಗೋಸ್ಲಾವಿಯಾದ ಅಂತರ್ಯುದ್ಧವನ್ನು ಬಿಂಬಿಸಲಾದ ರೀತಿ. ಹೊಸದಾಗಿ ಹುಟ್ಟಿಕೊಂಡ ಕ್ರೊವೇಶಿಯಾ ಮಾತ್ತು ಬೋಸ್ನಿಯಾದ ಗಣತಂತ್ರ ಸರ್ಕಾರಗಳು ಅಮೆರಿಕನ್ PR ಸಂಸ್ಥೆಗಳ ಮೇಲೆ ಅಪಾರವಾಗಿ ಹಣ ಹೂಡಿಕೆ ಮಾಡಿ ಯು.ಎಸ್‌ನಲ್ಲಿ ತಮ್ಮತಮ್ಮ ಯುದ್ಧಕಾಲದ ಸ್ವರೂಪ ಧನಾತ್ಮಕವಾಗಿ ಕಾಣುವಂತೆ ಮಾಡಲು ಪ್ರಯತ್ನಿಸಿದವು.[೭]
ಸ್ಪಿನ್
ಬದಲಾಯಿಸಿಸಾರ್ವಜನಿಕ ಬಾಂಧವ್ಯಗಳಲ್ಲಿ ’ಸ್ಪಿನ್’ ಎಂಬ ತಂತ್ರವನ್ನು ಹದಗೆಟ್ಟ ರೀತಿಯಲ್ಲಿ, ಎಂದರೆ ಒಂದು ಪ್ರಸಂಗ ಅಥವಾ ಘಟನೆಯನ್ನು ಒಬ್ಬ ವ್ಯಕ್ತಿಯ ಪರವಾಗಿ ವಿಪರೀತ ಪಕ್ಷಪಾತ ಮಾಡುವುದರ ಮೂಲಕ ಬಿಂಬಿಸುವುದಕ್ಕಾಗಿ ಬಳಸಲಾಗುತ್ತದೆ. ಸಾಂಪ್ರದಾಯಿಕ ಸಾರ್ವಜನಿಕ ಬಾಂಧವ್ಯಗಳು ಸತ್ಯಾಂಶಗಳನ್ನು ಪುನರ್ರಚನೆ ಮಾಡುವ ತಂತ್ರವನ್ನು ಬಳಸಿದರು ಕೂಡ ’ಸ್ಪಿನ್’ ತಂತ್ರದಲ್ಲಿ ಪ್ರತೀಸಾರಿ ಅಲ್ಲದಿದ್ದರೂ ಹೆಚ್ಚಿನ ಬಾರಿ ಅದಕ್ಷ, ಧೂರ್ತತೆಯುಳ್ಳ ಮತ್ತು/ಅಥವಾ ಬಹಳ ಯುಕ್ತಿಪೂರ್ಣ ತಂತ್ರಗಳನ್ನು ಉಪಯೋಗಿಸಲಾಗುತ್ತದೆ. ರಾಜಕೀಯ ನಾಯಕದು ಪ್ರತಿವಾದ ಮಾಡಿದಾಗ ಅಥವಾ ರಾಜಕೀಯ ನಿಲುವುಗಳನ್ನು ಬದಲಾಯಿಸಿದಾಗ ವ್ಯಾಖ್ಯಾನಕಾರರು ಮತ್ತು ರಾಜಕೀಯ ವಿರೋಧಿಗಳು ಅವರ ಮೇಲೆ ಸ್ಪಿನ್ ತಂತ್ರ ಬಳಕೆ ಮಾಡಿದ ಆರೋಪ ಹೊರಿಸುವುದಿದೆ.
ಸ್ಪಿನ್ ತಂತ್ರದ ಕೆಲವು ವಿಧಾನಗಳೆಂದರೆ ತಮ್ಮ ಸ್ಥಾನವನ್ನು ಬೆಂಬಲಿಸುವ ಅಂಶಗಳು ಮತ್ತು ಉಲ್ಲೇಖಗಳನ್ನು ಮಾತ್ರ ಆಯ್ಕೆಮಾಡಿ ಮಂಡಿಸುವುದು (ಚೆರಿ ಪಿಕಿಂಗ್), ಅಲ್ಲಗಳೆಯದಿರುವಿಕೆ, ಸಿದ್ಧಪಡಿಸಲಾಗದ ಸತ್ಯಗಳನ್ನು ಊಹಿಸುವಂತೆ ಮಾತನಾಡುವುದು, ಅಸಶ್ಯವೆನಿಸಬಹುದಾದ ಅಂಶಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಸೌಮ್ಯೋಕ್ತಿಗಳ ಉಪಯೋಗ, ಮತ್ತು ಸಾರ್ವಜನಿಕ ಹೇಳಿಕೆಗಳಲ್ಲಿ ದ್ವಂದ್ವದ ಬಳಕೆ. ಸರಿಯಾದ ಸಮಯ ಸಾಧಿಸಿ ಸುದ್ದಿಯ ಪ್ರಮುಖ ಘಟನೆಗಳಿಂದ ಪ್ರಯೋಜನ ಪಡೆಯುವುದು ಸಾಧ್ಯವಾಗುವಂತೆ ಕೆಲವು ರೀತಿಯ ಸುದ್ದಿಯನ್ನು ಬಿಡುಗಡೆ ಮಾಡುವುದು ಕೂಡ ಒಂದು ಸ್ಪಿನ್ ತಂತ್ರವಾಗಿದೆ. ಈ ವಿಧಾನಕ್ಕೆ ನೀಡಬಹುದಾದ ಜನಪ್ರಿಯ ಉದಾಹರಣೆಯೆಂದರೆ ಬ್ರಿಟಿಶ್ ಸರ್ಕಾರದ ಪ್ರೆಸ್ ಅಧಿಕಾರಿಯಾಗಿದ್ದ ಜೋ ಮೂರ್ ಸೆಪ್ಟೆಂಬರ್ 11, 2001ರಂದು ಕಳುಹಿಸಿದ ಇ-ಮೆಯಿಲೊಂದರಲ್ಲಿ ( "It's a good day to bury bad news" ಎಂಬ ವಾಕ್ಯದ ಭಾವಾನುವಾದ ಅಥವಾ ತಪ್ಪು ಉಲ್ಲೇಖ ಮಾಡುತ್ತ) It's now a very good day to get out anything we want to bury ಎಂಬ ವಾಕ್ಯದ ಬಳಕೆ ಮಾಡಿದ್ದು. ಈ ವಿಷಯವು ಸುದ್ದಿಯಾದಾಗ ಎಲ್ಲೆಡೆ ವ್ಯಕ್ತವಾದ ಕ್ರೋಧದ ಕಾರಣವಾಗಿ ಆಕೆ ಕೊನೆಗೆ ತನ್ನ ಹುದ್ದೆಗೆ ರಾಜೀನಾಮೆ ನೀಡುವಂತಾಯಿತು.
ಸ್ಪಿನ್ ಡಾಕ್ಟರುಗಳು
ಬದಲಾಯಿಸಿಋಣಾತ್ಮಕ ಅರ್ಥವಿದ್ದರೂ ಸ್ಪಿನ್ ತಂತ್ರದ ಬಳಕೆಯಲ್ಲಿ ನೈಪುಣ್ಯತೆ ಹೊಂದಿದವರನ್ನು ಕೆಲವೊಮ್ಮೆ "ಸ್ಪಿನ್ ಡಾಕ್ಟರ್"ಗಳೆಂದು ಕರೆಯಲಾಗುತ್ತದೆ. ಇದು PR ಭಾಷೆಯಲ್ಲಿ ಒಬ್ಬ ಲೇಖಕನನ್ನು "ಕೃತಿಚೋರ" ಎಂದ ಹಾಗೆ. ಯುಕೆಯಲ್ಲಿ ಸಾಧಾರಣವಾಗಿ ಜನಪ್ರಿಯನಾಗಿರುವ ಸ್ಪಿನ್ ಡಾಕ್ಟರ್ ಎಂದರೆ 1994 ರಿಂದ 2003 ರವರೆಗೆ ಟೋನಿ ಬ್ಲೇರ್‌ರ ಪಬ್ಲಿಕ್ ರಿಲೇಶನ್ಸ್ ಜತೆ ಕೆಲಸ ಮಾಡಿದ ಅಲಾಸ್ಟೇರ್ ಕ್ಯಾಂಪ್‌ಬೆಲ್. ಈತ ಬ್ರಿಟಿಶ್ ಮತ್ತು ಐರಿಷ್ ಲಯನ್ಸ್ ರಗ್ಬೀ ಯೂನಿಯನ್ನ 2005ರ ನ್ಯೂಜಿಲಂಡ್ ಟೂರ್‌ನ ಸಮಯದ ಪ್ರೆಸ್ ರಿಲೇಶನ್ಸ್ ಅಧಿಕಾರಿಯ ವಿವಾದಾತ್ಮಕ ಹುದ್ದೆಯನ್ನು ನಿರ್ವಹಿಸಿದ.
ಹಲವಾರು ದೇಶಗಳ ಸರ್ಕಾರೀ ಸುದ್ದಿ ಮಾಧ್ಯಮಗಳು ಆಯಾ ಸರ್ಕಾರಕ್ಕೆ ಅನುಕೂಲವಾದ ಸುದ್ದಿಗಳನ್ನು ಆಯ್ಕೆಮಾಡಿ ಪ್ರಸಾರ ಮಾಡಿಸುವುದಲ್ಲದೆ ವಿಮರ್ಶಾತ್ಮಕವಾದ ಯಾವುದೇ ಸುದ್ದಿಯನ್ನು ಸೆನ್ಸಾರ್ ಕತ್ತರಿಗೊಳಪಡಿಸುವಂತಹ ಸ್ಪಿನ್ ತಂತ್ರವನ್ನು ಬಳಸುವುದನ್ನು ಕಾಣಬಹುದುದು. ಇದಲ್ಲದೆ ಪ್ರಜೆಗಳ ಅಭಿಮತದ ಮೇಲೆ ಯಾವಾಗಲೂ ಪ್ರಭಾವ ಬೀರಲೆಂದು ಮತ್ತು ಅವರಿಗೆ ನಿರ್ದೇಶನ ನೀಡುವ ಸಲುವಾಗಿ ಪ್ರಚಾರಕ್ರಮಗಳನ್ನು ಕೂಡ ಬಳಸಬಹುದು. ಖಾಸಗೀ ಒಡೆತನದ ಮಾಧ್ಯಮಗಳು ಕೂಡ ತಮ್ಮ ರಾಜಕೀಯ ಅಭಿಪ್ರಾಯಗಳನ್ನು ಸ್ಪಿನ್ ಮಾಡಲು ”ವಿವಾದಿತ’ ಮತ್ತು ’ಅವಿವಾದಿತ’ ಅಂಶಗಳನ್ನು ವಿರುದ್ಧಸ್ಥಾನಗಳಲ್ಲಿರಿಸಿ ತೋರಿಸುವ ತಂತ್ರಗಳನ್ನು ಬಳಸಿಕೊಳ್ಳುತ್ತವೆ.
ಮೀಟ್ ಎಂಡ್ ಗ್ರೀಟ್
ಬದಲಾಯಿಸಿಹಲವಾರು ವ್ಯವಹಾರಗಳು ಮತ್ತು ಸಂಸ್ಥೆಗಳು ಎರಡು ಅಥವಾ ಹೆಚ್ಚಿನ ಸಂಖ್ಯೆಯ ಬಣ ಅಥವಾ ಭಾಗೀದಾರರನ್ನು ಅನುಕೂಲಕರ ಜಾಗವೊಂದರಲ್ಲಿ ಭೇಟಿಮಾಡಿಸಲು ಮೀಟ್ ಎಂಡ್ ಗ್ರೀಟ್ ವಿಧಾನವನ್ನು ಬಳಸಿಕೊಳ್ಳುತ್ತವೆ. ಇವುಗಳಲ್ಲಿ ನೌಕರವರ್ಗ ಮತ್ತು ಸದಸ್ಯರು ಭಾಗವಹಿಸುವಂತೆ ಮಾಡಲು ಸಾಮಾನ್ಯವಾಗಿ ರೆಸ್ಟುರಾಗಳಿಂದ ಊಟ ತರಿಸುವುದೇ ಮೊದಲಾದಂತಹ ಪ್ರೋತ್ಸಾಹಕಗಳನ್ನು ಬಳಸಲಾಗುತ್ತದೆ.
ಮೀಟ್ ಎಂಡ್ ಗ್ರೀಟ್‌ನ ನಿರ್ದಿಷ್ಟ ವಿಧಾನಗಳ ಬಗ್ಗೆ ವಿರುದ್ಧರೀತಿಯಲ್ಲಿ ಯೋಚನೆ ಮಾಡುವ ಬಣಗಳಿವೆ. ದ ಗಾರ್ಡಿನರ್ ಸ್ಕೂಲ್ ಆಫ್ ಥಾಟ್‌ನ ಪ್ರಕಾರ ಆಹ್ವಾನಿತರಿಗೆ ವಿಧ್ಯುಕ್ತ ರೀತಿಯದಲ್ಲವೆಂದು ತಿಳಿಸದಿದ್ದ ಪಕ್ಷದಲ್ಲಿ ಎಲ್ಲಾ ಬಣಗಳೂ ಕಾರ್ಯಕ್ರಮ ಆರಂಭವಾಗಲು ನಿಗದಿಪಡಿಸಲ್ಪಟ್ಟ ಸಮಯಕ್ಕೆ ಸರಿಯಾಗಿ ಬಂದು ಸೇರಬೇಕೆಂದು ತಿಳಿಸುತ್ತದೆ. ದ ಕೊಲಾನೋವ್‌ಸ್ಕಿ ಸ್ಕೂಲ್ ಆಫ್ ಥಾಟ್ ಇದಕ್ಕೆ ವಿರುದ್ಧವಾಗಿ ಹೇಳಿಕೆ ನೀಡುತ್ತ ಬಣಗಳು ಕಾರ್ಯಕ್ರಮ ಆರಂಭವಾದ ನಂತರ ಯಾವುದೇ ಸಮಯಕ್ಕೆ ಆಗಮಿಸಬಹುದು, ಇದರಿಂದ ಹೆಚ್ಚು ನಿರಾಳವಾದ ವಾತಾವರಣದಲ್ಲಿ ಮಾತುಕತೆ ನಡೆಯಲು ಸಹಕಾರಿಯಾಗುವುದು ಎಂದು ತಿಳಿಸುತ್ತಾರೆ.
ಇತರೆ
ಬದಲಾಯಿಸಿ- ಪ್ರಚಾರ ಕಾರ್ಯಕ್ರಮಗಳು, ಹುಸಿ ಕಾರ್ಯಕ್ರಮಗಳು, ಫೋಟೋ ಆಪ್ಗಳು ಅಥವಾ ಪ್ರಚಾರ ಕೃತ್ಯಗಳು.
- ಟಾಕ್ ಶೋ ಸಂಚಾರ. ಒಬ್ಬ PR ವಕ್ತಾರ(ಅಥವಾ ಆತನ/ಆಕೆಯ ಗ್ರಾಹಕ) ದೂರದರ್ಶನ ಮತ್ತು ರೇಡಿಯೋ ಟಾಕ್ ಶೋಗಳಲ್ಲಿ ತಾವು ತಲುಪಲು ಇಚ್ಚಿಸುವ ರೀತಿಯ ಶ್ರೋತೃವರ್ಗದೊಡನೆ ಸಂದರ್ಶನಗಳಲ್ಲಿ ಭಾಗವಹಿಸುತ್ತ ’ಸಂಚಾರ ಗೈಯುತ್ತಾರೆ’.
- ಪುಸ್ತಕಗಳು ಮತ್ತು ಇತರೆ ಬರಹಗಳು
- ಬ್ಲಾಗ್‌ಗಳು
- ಒಬ್ಬ PR ಉದ್ಯೋಗಿ ಆ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಅನುಭವ ಪಡೆದ ನಂತರ ಮಾಧ್ಯಮಕ್ಷೇತ್ರ ಮತ್ತು ಸಾರ್ವಜನಿಕ ಕಾರ್ಯಕ್ಷೇತ್ರಗಳಲ್ಲಿನ ತನ್ನ ಸಂಪರ್ಕಗಳ ಶೇಖರಿತ ಪಟ್ಟಿಯೊಂದನ್ನು ತಯಾರಿಸಿಕೊಂಡಿರುತ್ತಾನೆ. ಈ "ರೊಲೋಡೆಕ್ಸ್" ಒಂದು ಬಹುಮೂಲ್ಯ ಸ್ವತ್ತಿನ ಸ್ಥಾನ ಪಡೆಯುತ್ತದೆ. ಹಲವಾರು ಬಾರಿ, ಹೆಚ್ಚಾಗಿ PRನ ಮಾಧ್ಯಮ ಬಾಂಧವ್ಯದ ಕೆಲಸಗಳಿಗಾಗಿ ಅರ್ಜಿ ಕರೆಯುವಾಗ ರೋಲೋಡೆಕ್ಸ್ ಅನ್ನು ಹೊಂದಿರುವ ಅಭ್ಯರ್ಥಿಗಳನ್ನು ಆಹ್ವಾನಿಸಲಾಗುತ್ತದೆ.
- ನೇರ ಸಂಪರ್ಕ(ಸಮೂಹ ಮಾಧ್ಯಮಗಳನ್ನು ಉಪಯೋಗಿಸುವ ಬದಲು ನೇರವಾಗಿ ಗ್ರಾಹಕರೆಡೆ) ಉದಾಹರಣೆಗೆ, ಪ್ರಿಂಟು ಮಾಡಲಾದ ವಾರ್ತಾಪತ್ರ ಮತ್ತು ಇ-ಪತ್ರಗಳು.
- ಸಂಬಂಧಿಸಿದ ಸಾಹಿತ್ಯ, ಸಾಂಪ್ರದಾಯಿಕ ಪ್ರಿಂಟಿನ ಮೂಲಕ ಮತ್ತು ಇತ್ತೀಚೆಗೆ ಪ್ರಮುಖವಾಗಿ ವೆಬ್‌ಸೈಟುಗಳ ಮೂಲಕ.
- ಅಂಗಸಮುದಾಯ ಮತ್ತು ವೃತ್ತಿಪರ ಸಂಸ್ಥೆಗಳಲ್ಲಿ ಭಾಷಣ ಮಾಡುವುದು; ಸತ್ಕಾರಕೂಟ; ವಿಚಾರಗೋಷ್ಠಿಗಳು, ಇತರೆ ಕಾರ್ಯಕ್ರಮಗಳು; ವೈಯಕ್ತಿಕ ಭಾಗವಹಿಸುವಿಕೆ.
- ಒಬ್ಬ PR ಉದ್ಯೋಗಿ ಅಥವಾ ಪ್ರಚಾರಕನನ್ನು ಆಡುಭಾಷೆಯಲ್ಲಿ "flack"("flak"ಎಂದೂ ಉಚ್ಚರಿಸಲಾಗುವುದು) ಎಂದು ಕರೆಯಲಾಗುತ್ತದೆ.
- ಒಬ್ಬ PR ವ್ಯಕ್ತಿಯು ತಾವು ಪ್ರವರ್ತನೆ ಮಾಡಬೇಕೆಂದಿರುವ ಉತ್ಪನ್ನವನ್ನು ಪತ್ರಕರ್ತನಿಗೆ ತೋರಿಸುವ ಸಲುವಾಗಿ ಆತನ ಡೆಸ್ಕಿಗೆ ಖುದ್ದಾಗಿ ತೆಗೆದುಕೊಂಡು ಹೋಗುವುದನ್ನು ಡೆಸ್ಕ್ ವಿಸಿಟ್ ಎನ್ನಲಾಗುತ್ತದೆ.
- ಒಬ್ಬ PR ವ್ಯಕ್ತಿಯು ತಾವು ಪ್ರವರ್ತನೆ ಮಾಡಬೇಕೆಂದಿರುವ ಉತ್ಪನ್ನವನ್ನು ಪತ್ರಕರ್ತನಿಗೆ ತೋರಿಸುವ ಸಲುವಾಗಿ ಆತನ ಡೆಸ್ಕಿಗೆ ಖುದ್ದಾಗಿ ತೆಗೆದುಕೊಂಡು ಹೋಗುವುದನ್ನು ಡೆಸ್ಕ್ ವಿಸಿಟ್ ಎನ್ನಲಾಗುತ್ತದೆ.
- ಆನ್‌ಲೈನ್ ಸಾಮಾಜಿಕ ಮಾಧ್ಯಮ
ರಾಜಕೀಯ ಮತ್ತು ನಾಗರಿಕ ಸಮಾಜ
ಬದಲಾಯಿಸಿಎದುರಾಳಿಯನ್ನು ಗುರುತಿಸುವುದು
ಬದಲಾಯಿಸಿರಾಜಕೀಯ ಪ್ರಚಾರ ಕಾರ್ಯಕ್ರಮಗಳಲ್ಲಿ ಬಳಸಲಾಗುವ ತಂತ್ರವೆಂದರೆ "ಎದುರಾಳಿಯನ್ನು ಗುರುತಿಸುವುದು". ಈ ಎದುರಾಳಿಗಳು ಅಭ್ಯರ್ಥಿಗಳಾಗಿರಬಹುದು, ಸಂಸ್ಥೆಗಳಾಗಿರಬಹುದು ಅಥವಾ ಇತರ ಗುಂಪುಗಳ ಜನರಾಗಿರಬಹುದು. 2004ರ ಯು.ಎಸ್ ಅಧ್ಯಕ್ಷೀಯ ಪ್ರಚಾರದ ಸಮಯದಲ್ಲಿ ಹವರ್ಡ್ ಡೀನ್ ಅವರು ಜಾನ್ ಕೆರಿಯನ್ನು "ಫ್ಲಿಪ್ ಫ್ಲಾಪರ್" ಎಂದು ಕರೆದಿದ್ದು ಮಾಧ್ಯಮದಲ್ಲಿ, ಅದರಲ್ಲೂ ಕನ್ಸರ್ವೇಟಿವ್ ಮಾಧ್ಯಮದ ಮೂಲಕ ಹೆಚ್ಚಾಗಿ, ಪದೇಪದೇ ವರದಿಯಾಯಿತು. ಇದೇ ರೀತಿ ಜಾರ್ಜ್ ಎಚ್.ಡಬ್ಲ್ಯು. ಬುಶ್ ಅವರು ಮೈಕೆಲ್ ಡುಕಾಕಿಸ್ ಅವರನ್ನು ಅಪರಾಧಗಳ ಬಗ್ಗೆ ದುರ್ಬಲ(ವಿಲ್ಲೀ ಹಾರ್ಟನ್ ಜಾಹೀರಾತು)ನೆಂದೂ, ವಿಪರೀತ ಲಿಬರಲ್("ACLUನ ಅಧಿಕೃತ ಸದಸ್ಯ") ಎಂದೂ ಬಣ್ಣಿಸಿದರು. 1996ರಲ್ಲಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ತನ್ನ ಎದುರಾಳಿ ಬಾಬ್ ಡೋಲ್‌ರ ಅಮೆರಿಕಾವನ್ನು ಮರಳಿ ಸರಳ ದಿನಗಳಿಗೆ ಕೊಂಡೊಯ್ಯುವ ಭರವಸೆಗೆ ವಿರುದ್ಧವಾಗಿ "21ನೇ ಶತಮಾನಕ್ಕೆ ಸೇತುವೆಯೊಂದನ್ನು ಕಟ್ಟುವ" ಭರವಸೆಯನ್ನು ನೀಡಿದರು. ಇದರಿಂದ ಡೋಲ್‌ರ ಬಗ್ಗೆ ಅದು ಹೇಗೋ ಆತ ಪ್ರಗತಿಗೆ ವಿರುದ್ಧವಾಗಿರುವವ ಎಂಬ ಅನಿಸಿಕೆ ಮೂಡುವಂತಾಯಿತು.
ಗರ್ಭಪಾತದ ಬಗೆಗಿನ ಚರ್ಚೆಯಲ್ಲಿ ಹಕ್ಕನ್ನು ಪ್ರತಿಪಾದಿಸುವ "ಪ್ರೊ-ಚಾಯ್ಸ್" ಎಂದು ಕರೆದುಕೊಳ್ಳುವ ಬಣವು ತನ್ನ ಎದುರಾಳಿಗಳನ್ನು ತನ್ನ ಹೆಸರಿನ ವಿರುದ್ಧವಾಗಿ "ಆಂಟಿ-ಚಾಯ್ಸ್" ಎಂದು ಕರೆದರೆ ಅದರ ಎದುರಾಳಿ ಬಣವಾದ ಜೀವವನ್ನು ಬೆಂಬಲಿಸುವ "ಫ್ರೊ-ಲೈಫ್" ಎಂದು ಕರೆದುಕೊಳ್ಳುವ ಬಣವು ತನ್ನ ಎದುರಾಳಿ ಬಣವನ್ನು "ಪ್ರೊ-ಅಬಾರ್ಶನ್" ಅಥವಾ "ಆಂಟಿ-ಲೈಫ್" ಎಂದು ಕರೆಯುತ್ತದೆ.
ಭಾಷೆಯ ನಿರ್ವಹಣೆ
ಬದಲಾಯಿಸಿಓರ್ವ ರಾಜಕಾರಣಿ ಅಥವಾ ಸಂಸ್ಥೆಯು ಒಂದು ವಿವಾದಕ್ಕೆ ಸಂಬಂಧಿಸಿದಂತೆ ಸಂದರ್ಶನಗಳಲ್ಲಿ ಅಥವಾ ಸುದ್ದಿ ಬಿಡುಗಡೆಯ ವೇಳೆಯಲ್ಲಿ ತಕ್ಕನಾದ ಜಾಣ್ಣುಡಿಗಳನ್ನು ಬಳಸಿದಲ್ಲಿ ಸುದ್ದಿ ಮಾಧ್ಯಮವು ಆ ಜಾಣ್ಣುಡಿಗಳ ಔಚಿತ್ಯದ ಬಗ್ಗೆ ಪ್ರಶ್ನೆಹಾಕದೆ ಅವನ್ನು ಅಂತೆಯೇ ಪದೇಪದೇ ಪ್ರಸಾರ ಮಾಡುವುದು. ಇದರಿಂದಾಗಿ ಸಂದೇಶ ಮತ್ತು ಅದರ ಹಿಂದೆ ಅಡಗಿರಬಹುದಾದ ಪೂರ್ವಕಲ್ಪನೆಗಳೆರಡನ್ನೂ ಚಿರಸ್ಮರಣೀಯವನ್ನಾಗಿಸಿದಂತಾಗುವುದು. ಹೆಚ್ಚಿನಬಾರಿ ಸಾಮಾನ್ಯವೆಂದುಕೊಳ್ಳಬಹುದಾದ ವಿಚಾರಗಳು ಅದಕ್ಕಿಂತ ಹೆಚ್ಚಿನದನ್ನು ಸೂಚಿಸಬಹುದು: ಉದಾಹರಣೆಗೆ "ಜೀವನ ಸಂಸ್ಕೃತಿ" ಎಂಬುದು ಸಾಧಾರಣವಾಗಿ ಒಳ್ಳೆಯ ಮನೋಭಾವನೆಯಂತೆ ಜನರಿಗೆ ತೋರಿದರೂ ಹೆಚ್ಚಿನ "ಪ್ರೋ-ಲೈಫ್" ಪ್ರತಿಪಾದಕರಿಗೆ ಗರ್ಭಪಾತ ವಿರೋಧೀ ಘೋಷಣೆಯಂತೆ ಕಾಣಿಸಬಹುದು. "ರಾಜ್ಯದ ಹಕ್ಕುಗಳು" ಎಂಬ ಪದಗುಚ್ಚವನ್ನು ಪೌರಹಕ್ಕು-ವಿರೋಧಿ ಸಂಕೇತವನ್ನಾಗಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ 196೦ರ ದಶಕದಲ್ಲಿ ಮತ್ತು 70ರ ಹಾಗೂ 80ರ ದಶಕಗಳಲ್ಲಿಯೂ ಬಳಸಲಾಯಿತು.
ಸಂದೇಶವನ್ನು ತಲುಪಿಸುವುದು
ಬದಲಾಯಿಸಿಈ ಸಂಪರ್ಕವಿಧಾನವು ಸಂದೇಶದಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ. ಶ್ರೋತೃವರ್ಗ ಮತ್ತು ತಲುಪುವ ಸಂದೇಶವನ್ನು ಅವಲಂಬಿಸಿ ಈ ವಿಧಾನದಲ್ಲಿ ನೇರ ಅಂಚೆ, ರೋಬೋಕಾಲಿಂಗ್, ಜಾಹೀರಾತುಗಳು ಮತ್ತು ಸಾರ್ವಜನಿಕ ಭಾಷಣಗಳನ್ನು ಬಳಸಲಾಗುತ್ತದೆ ಪ್ರೆಸ್ ರಿಲೀಸುಗಳನ್ನು ಕೂಡ ಬಳಸಲಾಗುತ್ತಿದೆಯಾದರೂ ಅನೇಕ ಪತ್ರಿಕೆಗಳು ಮಡಚುವಂಥದ್ದಾದರಿಂದ ಅವನ್ನು ಜಾಸ್ತಿ ಅವಲಂಬಿಸಲಾಗುವದಿಲ್ಲ ಮತ್ತು ಇತರ ವಿಧಾನಗಳು ಹೆಚ್ಚು ಜನಪ್ರಿಯವಾಗುತ್ತಿವೆ.
ಕಲಾ ಸಂಸ್ಥೆಗಳು ತಮ್ಮದೇ ಆದ ಜಾಲತಾಣಗಳ ಮೇಲೆ ಹೆಚ್ಚುಹೆಚ್ಚು ಅವಲಂಬಿತವಾಗಲು ಆರಂಭಿಸಿವೆ ಮತ್ತು ಪ್ರಚಾರ ಮತ್ತು ಸಾರ್ವಜನಿಕ ಬಾಂಧವ್ಯಕ್ಕಾಗಿ ಜಾಲದ ಒಳಗೆ ಮತ್ತು ಹೊರಗೆ ವಿಶಿಷ್ತ ಮಾರ್ಗಗಳನ್ನು ಅಭಿವೃದ್ಧಿಪಡಿಸಿವೆ.[೮]
ಇತ್ತೀಚೆಗೆ ಇಸ್ರೇಲ್ ದೇಶವು ವಿಭಿನ್ನ ಸ್ರೋತೃವರ್ಗವನ್ನು ತಲುಪುವ ಸಲುವಾಗಿ ಬ್ಲಾಗ್,[೯] MySpace ಪುಟ,[೧೦] YouTube ಚ್ಯಾನೆಲ್,[೧೧] Facebook ಪುಟ[೧೨] ಮತ್ತು ಒಂದು ರಾಜಕೀಯ ಬ್ಲಾಗ್ ಮುಂತಾದ Web 2.0 ಆಧರಿತ ಉಪಕ್ರಮಗಳ ಸರಣಿಯನ್ನು ಹೊರತಂದಿತು.[೧೩] ಇಸ್ರೇಲೀ ವಿದೇಶಾಂಗ ಕಾರ್ಯಗಳ ಮಂತ್ರಾಲಯವು ದೇಶದ ವಿಡಿಯೋ ಬ್ಲಾಗ್ ಮತ್ತು ರಾಜಕೀಯ ಬ್ಲಾಗುಗಳನ್ನು ಆರಂಭಿಸಿತು.[೧೩] ವಿದೇಶ ಮಂತ್ರಾಲಯವು ಪ್ರಥಮ ಬಾರಿಗೆ ಟ್ವಿಟರ್ ಮೂಲಕ ನಡೆಸಿದ ಪ್ರಥಮ ಮೈಕ್ರೋಬ್ಲಾಗಿಂಗ್ ಪ್ರೆಸ್ ಸಮಾವೇಶದಲ್ಲಿ ಸಲಹೆಗಾರ ಡೇವಿಡ್ ಸಾರಂಗಾ ಪ್ರಪಂಚದೆಲ್ಲೆಡೆ ಜನತೆಯಿಂದ ಹಮಸ್ ಜತೆಗಿನ ಯುದ್ಧದ ಬಗ್ಗೆ ಸಾಮಾನ್ಯ ಸಂಕ್ಷಿಪ್ತ ಟೆಕ್ಸ್ಟ್ ಮೆಸೇಜಿಂಗ್ ರೂಪದಲ್ಲಿರುವ ಪ್ರಶ್ನೆಗಳಿಗೆ ಎಲ್ಲರೆದುರೇ ಉತ್ತರ ಕೊಡುವಂತೆ ಏರ್ಪಾಡಾಗಿತ್ತು.[೧೪] ಈ ಪ್ರಶ್ನೋತ್ತರಗಳು ಮುಂದಿನ ದಿನಗಳಲ್ಲಿ ಪತ್ರಮುಖೇನ ಇಸ್ರೇಲ್ ಪೊಲಿಟಿಕ್ ಎಂಬ ದೇಶದ ಆಡಳಿತ ವಿಭಾಗದ ರಾಜಕೀಯ ಬ್ಲಾಗ್ ನಲ್ಲಿ ಪ್ರಕಟಗೊಂಡವು.[೧೫]
ಮುಂಚೂಣಿ ಗುಂಪುಗಳು
ಬದಲಾಯಿಸಿಸಾರ್ವಜನಿಕ ಬಾಂಧವ್ಯಗಳ ಅತ್ಯಂತ ವಿವಾದಾಸ್ಪದ ವಾಡಿಕೆಯೆಂದರೆ ಸಾರ್ವಜನಿಕ ಉದ್ದೇಶಗಳನ್ನು ಹೊಂದಿರುವಂತೆ ತೋರಿಸಿಕೊಳ್ಳುವ ಸಂಸ್ಥೆಗಳು ನಿಜವಾಗಿಯೂ ವ್ಯಕ್ತಿಯೊಬ್ಬನ/ಳ ಹಿತಾಸಕ್ತಿಗಳಿಗಾಗಿ ಆತನ ಜಾಮಿನುದಾರಿಕೆಯನ್ನು ಅಗೊಕಾರಗೊಲಿಸುವ ಅಥವಾ ಮರೆಮಾಚುವ ಪ್ರಕ್ರಿಯೆಯಾದ ಮುಂಚೂಣಿ ಗುಂಪು ಅಥವಾ ಫ್ರಂಟ್ ಗ್ರೂಪ್–ಗಳ ಬಳಕೆ. ಪಬ್ಲಿಕ್ ರಿಲೇಶನ್ಸ್ ಉದ್ಯಮದ ವಿಮರ್ಶಕರಾಗಿರುವ PR Watch ಮುಂತಾದವರ ಪ್ರಕಾರ ಪಬ್ಲಿಕ್ ರಿಲೇಶನ್ಸ್ ಎಂಬುದು "ಹಲವು ಮಿಲಿಯ ಡಾಲರುಗಳಿಗೆ ಬಾಡಿಗೆಗಿರುವ ಪ್ರಚಾರತಂತ್ರಗಳನ್ನು ಹೊಂದಿದ, ಸುದ್ದಿಗಳನ್ನು ಉತ್ಪತ್ತಿ ಮಾಡುವ ಮತ್ತು ಸ್ಪಿನ್ ಮಾಡುವ, ಹುಸಿಯಾದ ಮೂಲಭೂತ ಗುಂಪುಗಳನ್ನು ಹುಟ್ತುಹಾಕುವ, ತನ್ನ ಪೌರರನ್ನೇ ಗೂಢಚರ್ಯೆಹೊಳಪಡಿಸುವ ಮತ್ತು ಗಣತಂತ್ರವನ್ನು ನಾಶಮಾಡಲು ರಾಜಕೀಯ ನಾಯಕರು ಮತ್ತು ಲಾಬಿಯಿಸ್ಟರೊಂದಿಗ ಸಂಚುಹೂಡುವ ಕ್ರಿಯೆಗಳನ್ನೊಳಗೊಂಡಿದೆ". [೧] Archived 2010-01-17 ವೇಬ್ಯಾಕ್ ಮೆಷಿನ್ ನಲ್ಲಿ..
ಹಲವಾರು ಉದ್ಯಮಗಳು ಮುಂಚೂಣಿ ಗುಂಪುಗಳನ್ನು ತಮ್ಮ PR ತಂತ್ರವಾಗಿ ಬಳಸಿದ್ದರ ಬಗ್ಗೆ ದಾಖಲೆಗಳನ್ನು ಹೊಂದಿವೆ. ಕಲ್ಲಿದ್ದಲು ಗಣಿ ಕಾರ್ಪೊರೇಶನ್ನುಗಳು CO2ನ ಉಗುಳುವಿಕೆ ಮತ್ತು ಜಾಗತಿಕ ಬಿಸಿಯೇರುವಿಕೆಗಳು ಸಸ್ಯ ಬೆಳವಣಿಗೆಗೆ ಒಳ್ಳೆಯದು ಮತ್ತು ಅನುಕೂಲವಾಗುವುದು ಎಂದು ಪ್ರತಿಪಾದಿಸುವ ಪರಿಸರವಾದೀ ಗುಂಪುಗಳನ್ನು ಹುಟ್ಟುಹಾಕಿವೆ, ಬಾರ್‌ಗಳ ವಹಿವಾಟು ಗುಂಪುಗಳು ಮದ್ಯ-ವಿರೋಧೀ ಗುಂಪುಗಳ ಮೇಲೆ ಆಕ್ರಮಣ ಮಾಡುವ ಸಲುವಾಗಿ ಪ್ರಜೆಗಳ ಗುಂಪುಗಳನ್ನು ಹುಟ್ಟುಹಾಕಿವೆ, ತಂಬಾಕು ಕಂಪನಿಗಳು ಟಾರ್ಟ್ ಸುಧಾರಣೆಯನ್ನು ಬೆಂಬಲಿಸುವ ಮತ್ತು ವೈಯುಕ್ತಿಕ ಹಾನಿ ವಕೀಲರ ಮೇಲೆ ಆಕ್ರಮಣ ನಡೆಸುವ ಪ್ರಜಾಸಂಘಟನೆಗಳನ್ನು ಹುಟ್ಟುಹಾಕಿವೆ, ಅದೇ ಹೊತ್ತಿಗೆ ಟ್ರಯಲ್ ವಕೀಲರುಗಳು ಟಾರ್ಟ್ ಸುಧಾರಣೆಯನ್ನು ಅಂಗೀಕರಿಸದಿರಲು ’ಕನ್‌ಸ್ಯೂಮರ್ ಅಡ್ವೊಕೆಸಿ’ಯಂತಹ ಮುಂಚೂಣಿ ಗುಂಪ್ಪುಗಳನ್ನು ಕಟ್ಟಿದ್ದಾರೆ.[೨] Archived 2009-04-16 ವೇಬ್ಯಾಕ್ ಮೆಷಿನ್ ನಲ್ಲಿ.[೩] Archived 2006-09-25 ವೇಬ್ಯಾಕ್ ಮೆಷಿನ್ ನಲ್ಲಿ.[೪]
ಇದನ್ನೂ ನೋಡಿರಿ
ಬದಲಾಯಿಸಿಟಿಪ್ಪಣಿಗಳು
ಬದಲಾಯಿಸಿ- ↑ Grunig, James E. and Hunt, Todd. Managing Public Relations. (Orlando, FL: Harcourt Brace Jovanovich, 1984), 6e.
- ↑ ೨.೦ ೨.೧ ೨.೨ Answers.com Marketing Dictionary: Public Relations. ಅಗಸ್ಟ್ 13, 2008ರಲ್ಲಿ ಮರು ಸಂಪಾದನೆ.
- ↑ Paul Gillin (2008) Newspaper Death Watch Archived 2013-10-25 ವೇಬ್ಯಾಕ್ ಮೆಷಿನ್ ನಲ್ಲಿ.. ಅಗಸ್ಟ್ 13, 2008ರಲ್ಲಿ ಮರು ಸಂಪಾದನೆ.
- ↑ Brian Caulfield (2007) "Bye-Bye, Business 2.0 Archived 2008-09-01 ವೇಬ್ಯಾಕ್ ಮೆಷಿನ್ ನಲ್ಲಿ." Forbes. ಅಗಸ್ಟ್ 13, 2008ರಲ್ಲಿ ಮರು ಸಂಪಾದನೆ.
- ↑ ೫.೦ ೫.೧ Paul (2008) "8 Public Relations Trends to Watch" Retrieved August 29, 2008.
- ↑ http://mashable.com/2009/01/29/stats-old-media-decline/
- ↑ See Peter Viggo Jakobsen, Focus on the CNN Effect Misses the Point: The Real Media Impact on Conflict Management is Invisible and Indirect , Journal of Peace Research, vol.37, no.2. Institute of Political Science, University of Copenhagen (2000).
- ↑ "ಆರ್ಕೈವ್ ನಕಲು". Archived from the original on 2009-12-17. Retrieved 2009-12-12.
- ↑ [121] ^ ಇಸ್ರೇಲ್ ವಿಡಿಯೋ ಬ್ಲಾಗ್, ಜಗತ್ತಿಗೆ ‘ನಿಜವಾದ ಇಸ್ರೇಲಿನ ಸುಂದರವಾದ ಮುಖ’ವನ್ನು ತೋರಿಸಲು ಉದ್ದೇಶಿಸಿದೆ, ವೈನೆಟ್, ಫೆಬ್ರವರಿ 24,2008.
- ↑ Israel seeks friends through MySpace page, Bobby Johnson, The Guardian , March 23, 2007.
- ↑ Israel uses YouTube, Twitter to share its point of view, CNN , December 31, 2008
- ↑ Israel's New York Consulate launches Facebook page, Ynet, December 14, 2007.
- ↑ ೧೩.೦ ೧೩.೧ [123] ^ ಇತ್ತೀಚೆಗೆ ನ್ಯೂಯಾರ್ಕಿನಲ್ಲಿ ಇಸ್ರೇಲ್ ನಡೆಸಿದ ರಾಜತಾಂತ್ರಿಕ ಕಾರ್ಯಾಚರಣೆಯ ಪ್ರಯತ್ನವು ಹೆಚ್ಚಿನ ಸಂಖ್ಯೆಯ ಅರಬ್ ವೀಕ್ಷಕರನ್ನು ಆಕರ್ಷಿಸಿತು, ವೈನೆಟ್, ಜೂನ್ 21, 2007.
- ↑ [124] ^ ಬ್ಯಾಟಲ್ ಫ್ರಂಟ್ Twitter, HAVIV RETTIG GUR,ದ ಜೆರುಸಲೇಮ್ ಪೋಸ್ಟ್, ಡಿಸೆಂಬರ್ 30, 2008.
- ↑ [125] ^ ದ ಟಫೆಸ್ಟ್ ಕ್ವೆಸ್ಚನ್ಸ್ ಆನ್ಸರ್ಡ್ ಇನ್ ದ ಬ್ರೀಫೆಸ್ಟ್ ಟ್ವೀಟ್ಸ್, ನೋಅಮ್ ಕೊಹೆನ್, ದ ನ್ಯೂಯಾರ್ಕ್ ಟೈಮ್ಸ್, ಜನವರಿ 3, 2009; ಲಭ್ಯವಾಗಿದ್ದು- ಜನವರಿ 5,2009.
ಉಲ್ಲೇಖಗಳು
ಬದಲಾಯಿಸಿ- Bernays, Edward (1945). Public Relations. Boston, MA: Bellman Publishing Company.
- Biagi, S. (2005 Media/Impact: An Introduction to Mass Media. Chicago: Thomas Wadsworth.
- Burson, Harold (2004). E pluribus unum: The Making of Burson-Marsteller. New York: Burson-Marsteller.
- Calcagni, Thomas (2007). Tough Questions, Good Answers, Taking Control of Any Interview. Sterling, VA: Capital Books, Inc. ISBN 978-1-933102-50-4.
- Caponigro, Jeff (2000). THE CRISIS COUNSELOR: A step-by-step guide to managing a business crisis. New York: McGraw-Hill/ Contemporary Books. ISBN 0-9659606-0-9.
- Cutlip, Scott (1994). The Unseen Power: Public Relations, A History. Hillsdale, N.J.: Erlbaum Associates. ISBN 0-8058-1464-7.
- Ewen, Stuart (1996). PR!: A Social History of Spin. New York: Basic Books. ISBN 0-465-06168-0.
- Forman, Amanda (2001). Georgiana Duchess of Devonshire. New York: Random House USA Inc; New Ed edition. ISBN 0-037-5753834-0.
{{cite book}}
: Check|isbn=
value: length (help) - Grunig, James E. (1984). Managing Public Relations. New York: Holt, Rinehart and Winston. ISBN 0-03-058337-3.
{{cite book}}
: Unknown parameter|coauthors=
ignored (|author=
suggested) (help) - Hall, Phil (2007). The New PR. Mount Kisco, NY: Larstan Publishing. ISBN 0-9789182-0-7.
- International Association of Business Communicators (IABC)
- Macnamara, Jim (2005). Jim Macnamara's Public Relations Handbook (5th ed. ed.). Melbourne: Archipelago Press. ISBN 0-9587537-4-1.
{{cite book}}
:|edition=
has extra text (help) - Nelson, Joyce (1989). Sultans of Sleaze: Public Relations and the Media. Toronto: Between The Lines. ISBN 0-921284-22-5.
- Phillips, David (2001). Online Public Relations. London: Kogan Page. ISBN 0-7494-3510-0.
- Seitel, Fraser. The Practice of Public Relations. Englewood Cliffs, NJ: 10 ed. 2006 ISBN 0-13-230451-1
- Stauber, John C. (1995). Toxic Sludge is Good for You: Lies, Damn Lies, and the Public Relations Industry. Monroe, ME: Common Courage Press. ISBN 1-56751-061-2.
{{cite book}}
: Unknown parameter|coauthors=
ignored (|author=
suggested) (help) - Tye, Larry (1998). The Father of Spin: Edward L. Bernays & the Birth of Public Relations. New York: Crown Publishers. ISBN 0-517-70435-8.
- Tymson, Candy (2006). Public Relations Manual. Sydney: Tymson Communications. ISBN 0-9579130-1-X.
{{cite book}}
: Unknown parameter|coauthors=
ignored (|author=
suggested) (help) - Stoykov, Lubomir (2005). Public Relations and Business Communication. Sofia: Ot Igla Do Konetz. ISBN 954-9799-09-3.
{{cite book}}
: Unknown parameter|coauthors=
ignored (|author=
suggested) (help)
- Scott M. Cutlip/ Allen H. Center/ Glen M. Broom, "Effective Public Relations," 7th Ed., Prentice-Hall, Inc. A Simon and Schuster Company, Englewood Cliffs, N.J. 07632, 1994, Figure 10-1
- Center, Allen H. and Jackson, Patrick, "Public Relations Practices," 5th ed., Prentice Hall, Upper Saddle, N.J., 1995, pp. 14–15
- Crifasi, Sheila C., "Everything's Coming Up Rosie," from Public Relations Tactics, September, 2000, Vol. 7, Issue 9, Public Relations Society of America, New York, 2000.
- Kelly, Kathleen S., "Effective Fund Raising Management," Lawrence Erlbaum Associates, Mahwah, N.J., 1998
- Wilcox, D.L., Ault, P.H., Agee, W.K., & Cameron, G., "Public Relations Strategies and Tactics," 7th ed., Allyn & Bacon, Boston, MA, 2002
- Grunig, James E. and Hunt, Todd. Managing Public Relations. (Orlando, FL: Harcourt Brace Jovanovich, 1984), 6.
ಹೆಚ್ಚಿನ ಓದಿಗಾಗಿ
ಬದಲಾಯಿಸಿ- ಏಡ್ವರ್ಡ್ ಬಾರ್ನೇಸ್. (1928) "Propaganda".
- ಬೂರ್‌ಸ್ಟಿನ್, ಡೇನಿಯೆಲ್ ಜೆ. (1972) The Image: A Guide to Pseudo-Events in America . ನ್ಯೂ ಯಾರ್ಕ್: ಅಥೀನಿಯಮ್.
- ಈವೆನ್, ಸ್ಟೂವರ್ಟ್. (1996) PR ! A Social History of Spin. ನ್ಯೂ ಯಾರ್ಕ್: BasicBooks.
- ಹಾಲ್, ಫಿಲ್. (2007) The New PR . ಮೌಂಟ್ ಕಿಸ್ಕೋ, N.Y.: ಲಾರ್ಸ್ಟನ್ ಪಬ್ಲಿಶಿಂಗ್.
- LA YEllow Shuttle. ‘
- ಸೀಬ್, ಪ್ಯಾಟ್ರಿಕ್ ಮತ್ತು ಫಿಟ್ಜ್‌ಪ್ಯಾಟ್ರಿಕ್, ಕ್ಯಾಥಿ. (1995) Public Relations Ethics . ಫೋರ್ಟ್ ವರ್ಥ್: ಹಾರ್‌ಕೋರ್ಟ್ ಬ್ರೇಸ್ ಎಂಡ್ ಕಂಪನಿ.
ಬಾಹ್ಯ ಲಿಂಕ್‌ಗಳು
ಬದಲಾಯಿಸಿ- Public Relations ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- ಉದ್ಯಮದ ಬಗ್ಗೆ
- A History of Public Relations Archived 2010-06-02 ವೇಬ್ಯಾಕ್ ಮೆಷಿನ್ ನಲ್ಲಿ., ಪಬ್ಲಿಕ್ ರಿಲೇಶನ್ಸ್ ಸಂಸ್ಥೆಯಿಂದ