ವಕ್ತಾರನು (ಅಥವಾ ವಕ್ತಾರೆ) ಇತರರ ಪರವಾಗಿ ಮಾತನಾಡಲು ನೇಮಿಸಿಕೊಳ್ಳಲಾದ ಅಥವಾ ಚುನಾಯಿತನಾದ ವ್ಯಕ್ತಿ.[೧]

ಕರ್ತವ್ಯಗಳು ಮತ್ತು ಕಾರ್ಯಸಂಪಾದಿಸಿ

ವರ್ತಮಾನದ ಮಾಧ್ಯಮ ಸಂವೇದಿ ವಿಶ್ವದಲ್ಲಿ, ಅನೇಕ ಸಂಸ್ಥೆಗಳು ಸಾರ್ವಜನಿಕ ಘೋಷಣೆಗಳನ್ನು ಅತ್ಯಂತ ಸೂಕ್ತ ರೀತಿಯಲ್ಲಿ ಮತ್ತು ಅತ್ಯಂತ ಸೂಕ್ತ ಮಾಧ್ಯಮಗಳ ಮೂಲಕ ಮಾಡಲಾಗಿದೆ ಎಂದು ಖಚಿತಪಡಿಸಲು ಪತ್ರಿಕೋದ್ಯಮ, ಸಂವಹನ, ಸಾರ್ವಜನಿಕ ಬಾಂಧವ್ಯಗಳು ಮತ್ತು ಸಾರ್ವಜನಿಕ ಆಡಳಿತದಲ್ಲಿ ವಿಧ್ಯುಕ್ತ ತರಬೇತಿ ಪಡೆದ ವೃತ್ತಿಗರನ್ನು ನೇಮಕ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಅನುಕೂಲಕರ ಸಂದೇಶಗಳ ಪ್ರಭಾವವನ್ನು ಗರಿಷ್ಠೀಕರಿಸುವುದು, ಮತ್ತು ಅನಾನುಕೂಲಕರ ಸಂದೇಶಗಳ ಪ್ರಭಾವವನ್ನು ಕನಿಷ್ಠೀಕರಿಸುವುದು ಇದರ ಉದ್ದೇಶವಾಗಿರುತ್ತದೆ. ರಾಜಕೀಯ ಪಕ್ಷಗಳು, ಕಂಪನಿಗಳು, ಪ್ರಸಿದ್ಧ ವ್ಯಕ್ತಿಗಳು, ಸರ್ಕಾರಗಳು ವಕ್ತಾರರನ್ನು ಹೊಂದಿರಬಹುದು. ಜನಪ್ರಿಯ ಸ್ಥಳೀಯ ಹಾಗೂ ರಾಷ್ಟ್ರೀಯ ಕ್ರೀಡಾಪಟುಗಳು, ಅಥವಾ ದೂರದರ್ಶನ ಹಾಗೂ ಚಲನಚಿತ್ರ ತಾರೆಯರಂತಹ ಪ್ರಸಿದ್ಧ ವ್ಯಕ್ತಿಗಳ ವಕ್ತಾರರನ್ನು ಹಲವುವೇಳೆ ವಾಣಿಜ್ಯ ಜಾಹೀರಾತಿಗಾಗಿ ಆಯ್ಕೆ ಮಾಡಲಾಗುತ್ತದೆ.

ಉಲ್ಲೇಖಗಳುಸಂಪಾದಿಸಿ

"https://kn.wikipedia.org/w/index.php?title=ವಕ್ತಾರ&oldid=948313" ಇಂದ ಪಡೆಯಲ್ಪಟ್ಟಿದೆ