Vidyashree175
ಹುಟ್ಟು
ಬದಲಾಯಿಸಿವಿದ್ಯಾಶ್ರೀ ಎಚ್ ಎಸ್. ನಾನು ಬೆಂಗಳೂರಿನಲ್ಲಿರುವ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದೇನೆ. ನಾನು ಬೆಂಗಳೂರಿನ ಮಡಿವಾಳದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಜುಲೈ ೧೦, ೧೯೯೯ ರಂದು ಜನಿಸಿದ. ನನ್ನ ತಂದೆ ಶಾಂತರಾಜು ಹಾಗೂ ತಾಯಿ ಈಶ್ವರಿ.
ಶಿಕ್ಷಣ
ಬದಲಾಯಿಸಿನಾನು ಕೋರಮಂಗಲದಲ್ಲಿರುವ ನನ್ನ ಅಜ್ಜಿಯ ಮನೆಯಲ್ಲಿರುವುದರಿಂದ, ಅಲ್ಲಿಯೇ ಇರುವ ಚಿನ್ಮಯ ವಿದ್ಯಾಲಯ ಎಂಬ ಖಾಸಗಿ ಶಾಲೆಯೊಂದರಲ್ಲಿ ಹತ್ತನೆಯ ತರಗತಿಯವರೆಗೆ ಓದಿ, ಶೇಕಡ ೮೬.೫ ಅಂಕಗಳನ್ನು ಗಳಿಸಿದೆ. ನಂತರ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಪದವಿ ಪೂರ್ಣ ಶಿಕ್ಷಣವನ್ನು ಶೇಕಡ ೯೨ ಅಂಕಗಳೊಂದಿಗೆ ಮುಗಿಸಿದೆ. ಮುಂದೆ ಎಮ್.ಬಿ.ಎ ಮಾಡಬೇಕು ಎಂದುಕೂಂಡಿದ್ದೇನೆ.
ಕ್ರೀಡೆಯನ್ನು ಬಹಳ ಇಷ್ಟ ಪಡುತ್ತೇನೆ. ನಮ್ಮ ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ, ನಾನು ರಾಜ್ಯ ಮಟ್ಟದ ಆಟಗಾರ್ತಿ. ಅಲ್ಲದೆ, ಶಾಲಾ ಮಟ್ಟದಲ್ಲಿ ಸಹ ಖೋ-ಖೋ, ಕಬಡ್ಡಿ ಹೀಗೆ ಅನೇಕ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿದ್ದೇನೆ. ನಾನು ಏಳನೆಯ ತರಗತಿಯಲ್ಲಿ ಓದಬೇಕಾದರೆ, ಸ್ಕೌಟ್ಸ್ ಮತ್ತು ಗಯ್ಡ್ಸ್ ಸೇರಿ, ಹಲವಾರು ಶಿಬಿರಗಳಲ್ಲಿ ಪಾಲ್ಗೊಂಡು, ದ್ವಿತೀಯ ಸೋಪಾನ ಪರೀಕ್ಷೆಯವರೆಗೆ ಮುಗಿಸಿದ್ದೇನೆ. ಆದರೆ, ಒಂಬತ್ತನೆ ತರಗತಿಗೆ ಬಂದ ನಂತರ, ಓದುವ ಗಡಿಬಿಡಿಯಲ್ಲಿ ಇದನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.
ಆಸಕ್ತಿ
ಬದಲಾಯಿಸಿಕ್ರೀಡೆಯಲ್ಲದೆ, ಭಾರತದ ಸಂಸ್ಕೃತಿಯ ಬಗ್ಗೆ ವಿಚಿತ್ರವಾದ ಕುತೂಹಲ ಮತ್ತು ಆಸೆ. ಭಾರತದಲ್ಲಿರುವ ಎಲ್ಲ ರಾಜ್ಯಗಳ ಉಡುಪು ಹಾಗೂ ನೃತ್ಯದ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳುವ ಕುತೂಹಲ. ಅಷ್ಟೇ ಅಲ್ಲದೆ ಭಾರತದ ಇತಿಹಾಸದ ಬಗ್ಗೆ ತಿಳಿಯುವ ಆಸಕ್ತಿ ನನಗಿದೆ. ಭಾರತದಾದ್ಯಂತ ಇರುವ ಎಲ್ಲ ಐತಿಹಾಸಿಕ ಸ್ಥಳಗಳನ್ನು ಒಮ್ಮಯಾದರು ನೋಡಬೇಕು. ನಾನು ಬಿಡುವಿರುವ ಸಮಯದಲ್ಲಿ ಹೆಚ್ಚಾಗಿ ಇತಿಹಾಸವಿರುವ ಪುಸ್ತಕಗಳನ್ನು ಓದುವುದು ನನ್ನ ಹವ್ಯಾಸ. ಹಾಗಾಗಿ ನನ್ನ ಕಾಲೇಜಿನ ಗ್ರ೦ಥಾಲಯಕ್ಕೆ ಬೇಟಿ ಕೊಡುತ್ತೇನೆ.
ನನ್ನ ಅಮ್ಮ ಮಾಡುವ ಅಡಿಗೆಗಳು ಬಹಳ ಇಷ್ಟ.ನನ್ನ ಜೀವನದಲ್ಲಿ ಬಹಳ ಪ್ರೀತಿಸುವ ವ್ಯಕ್ತಿಗಳು - ನನ್ನ ತಂದೆ, ತಾಯಿ, ಸೋದರ ಮಾವ(ತಾಯಿಯ ಅಣ್ಣ) ಹಾಗೂ ನನ್ನ ಗೆಳತಿ. ಈ ನಾಲ್ವರು ನನ್ನ ಜೀವನದ ನಾಲ್ಕು ಆದಾರ ಸ್ತಂಭಗಳು. ನನ್ನ ಯಾವುದೇ ಕೆಲಸಗಳಿಗೆ ಇವರ ಸಹಾಯ ಇದ್ದೇ ಇರುತ್ತದೆ. ನನಗೆ ದೇವರಲ್ಲಿ ನಂಬಿಕೆ ಇಲ್ಲ. ತಂದೆ-ತಾಯಿಯರನ್ನೇ ದೇವರೆಂದು ನಂಬುವವಳು ನಾನು.
ಗುರಿ
ಬದಲಾಯಿಸಿನನಗೆ ಸಮಾಜ ಸೇವೆ ಮಾಡುವುದಕ್ಕೆ ಬಹಳ ಇಷ್ಟ. ಅದಕ್ಕಾಗಿಯೇ ಐ.ಎ.ಎಸ್ ಮಾಡಬೇಕೆಂಬ ಆಸೆ ಇದೆ. ಅದು ಸಾಧ್ಯವಾಗದಿದ್ದೆರೆ, ಭಾರತೀಯ ವಾಯು ಪಡೆಯಲ್ಲಿಯಾದರು ಕೆಲಸ ಮಾಡಬೇಕೆಂಬ ಆಸೆ ಇದೆ.