ಸದಸ್ಯ:V Thrishala/ನನ್ನ ಪ್ರಯೋಗಪುಟ


ತ್ರಿಶಾಲ ವಾಸುದೇವ ನನ್ನ ಹೆಸರು. ವಾಸುದೆವ ಹಾಗು ಅಶ್ವಿನಿ ನನ್ನ ತಂದೆ ತಾಯಿಯರು. ನನ್ನ ತಂದೆ ದೊಮ್ಮಲೂರು ಇಲಾಖೆಯ ಪಶುವೈದ್ಯಾಧಿಕಾರಿ ಮತ್ತು ನನ್ನ ತಾಯಿ ಗೃಹಿಣಿ (ಮನೆಯ ಮೇಲ್ವಿಚಾರಕಿ). ನಾನು ಬೆಂಗಳೂರಿನ ವಿಜಯನಗರದಲ್ಲಿ ವಾಸಿಸುತ್ತಿದ್ದೆನೆ.

ಆರಂಭಿಕ ಜೀವನ ಮತ್ತು ಶಿಕ್ಷಣ

ಬದಲಾಯಿಸಿ
 
ಕ್ರೈಸ್ಟ್ ವಿಶ್ವವಿದ್ಯಾನಿಲಯ
 ನಾನು ಹುಟ್ಟಿದ್ದು ಸೆಪ್ಟೆಂಬರ್ ಮಾಸದ ೨೪ನೇ ದಿನಾಂಕರಂದು. ನಾನು ಸಹಸ್ರವರ್ಷವಾದ ೨೦೦೦ ರಂದು ಜನಸಿದ್ದೆನೆ. ನಾನು ಹುಟ್ಟಿ ಬೆಳೆದಿದ್ದು ಮೈಸೂರಿನಲ್ಲಿ. ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಕ್ಯಾಂಬ್ರಿಡ್ಜ್ ಪ್ರೌಢಶಾಲೆಯಲ್ಲಿ ಪಡೆದು, ಹಿರಿಯ ಮಾಧ್ಯಮಿಕ ಶಿಕ್ಷಣವನ್ನು ಶ್ರೀ ವಾಣಿ ವಿದ್ಯಾ ಕೇಂದ್ರದಲ್ಲಿ ಪಡೆದಿರುವೆನು. ಈಗ ಪದವಿಪೂರ್ವ ಶಿಕ್ಷಣವನ್ನು ಕ್ರೈಸ್ಟ್ ವಿಶ್ವವಿದ್ಯಾಲಯ ಪೂರೈಸುತ್ತಿದ್ದೆನೆ. ನಾನು ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಅರ್ಥಶಾಸ್ತ್ರ, ಗಣಿತಶಾಸ್ತ್ರ ಹಾಗು ಸ೦ಖ್ಯಾಶಾಸ್ತ್ರ ವಿಷಯಗಳಲ್ಲಿ ಮುಂದುವರಿಸುತಿದ್ದೆನೆ. 

ಹುಟ್ಟೂರಿನ ಮಹತ್ವ

ಬದಲಾಯಿಸಿ
ನನ್ನ ತಾಯಿಯ ತವರೂರಾಗಿರುವ ಮೈಸೂರು ನನಗೆ ಬಹಳ ನೆಚ್ಚಿನ ಜಾಗ. ಈ ಊರಿನ ಬಗ್ಗೆ ಮಾತಾಡುವುದಾದರೆ, ಮೈಸೂರು ಸಂಸ್ಥಾನ ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯಾನಂತರ ಭಾರತ ಗಣರಾಜ್ಯವನ್ನು ಸೇರಿ ೧೯೫೦ರಲ್ಲಿ ಮೈಸೂರು ರಾಜ್ಯ ಎಂಬ ಹೆಸರು ಪಡೆಯಿತು. ನಂತರ, ಈ ರಾಜ್ಯ ೧೯೫೬ರ ಏಕೀಕರಣ "ವಿಶಾಲ ಮೈಸೂರು ರಾಜ್ಯ" ಎಂಬ ಹೆಸರು ಪಡೆಯಿತು. ಆ ಬಳಿಕ ೧೯೭೩ರಲ್ಲಿ "ಕರ್ನಾಟಕ ರಾಜ್ಯ" ಎಂಬ ಹೆಸರು ಸ್ಥಿರವಾಯಿತು. ಅಂದಿನಿಂದ ಇಂದಿನವರೆಗೂ ಮೈಸೂರು ತನ್ನನ್ನು ಪ್ರವಾಸಿಗರ ಸೆರಗಿನಲ್ಲಿಟ್ಟುಕೊಂಡೇ ತನ್ನ ಪರಂಪರೆಯನ್ನು ಕಾಪಾಡಿಕೊಳ್ಳುತ್ತಿದೆ.

ಮೈಸೂರಿನ ಪ್ರವಾಸೋದ್ಯಮ-ಮೈಸೂರು ಅರಮನೆ

ಬದಲಾಯಿಸಿ
 
ಮೈಸೂರು ಅರಮನೆಯ ಮುಂಭಾಗದ ನೋಟ
ನಾನು ರಜೆಗಳಲ್ಲಿ ಮೈಸೂರಿಗೆ ಹೋದರೆ ಅಲ್ಲಿಯ ಮೈಸೂರಿನ ಅರಮನೆಯನ್ನು ನೋಡದೆ ಬರೋಲ್ಲ. ಅರಮನೆಯ ಪೂರ್ವ ಭಾಗದಲ್ಲಿ, ಜಗನ್ಮೋಹನ ಅರಮನೆಯನ್ನು ರಾಜಕುಮಾರಿ ಮದುವೆಗಾಗಿ ಮೂರನೇ ಕೃಷ್ಣರಾಜ ಒಡೆಯರ್‌ ಆಡಳಿತಾವಧಿಯಲ್ಲಿ ೧೮೬೧ರಲ್ಲಿ ಕಟ್ಟಲಾಯಿತು. ಈ ಅರಮನೆಯ ಮುಖ್ಯ ದ್ವಾರದಲ್ಲಿ ಅಪೂರ್ವವಾದ ಕೆತ್ತನೆ ಮಾಡಲ್ಪಟ್ಟಿದೆ. ಈ ಅರಮನೆಯಲ್ಲಿ ವಸ್ತು ಸಂಗ್ರಹಾಲಯವು ೧೯೧೫ರಿಂದ ಪ್ರಾರಂಭವಾಯಿತು. ಮೈಸೂರು ಶೈಲಿಯ ತೈಲ ವರ್ಣ ಚಿತ್ರಗಳನ್ನೊಳಗೊಂಡ ಈ ವಸ್ತು ಸಂಗ್ರಹಾಲಯವನ್ನು ಒಂದು ಸಮಿತಿಗೆ ವಹಿಸಲಾಯಿತು. ನಂತರ ಈ ಅರಮನೆಗೆ ೧೯೫೫ರಲ್ಲಿ ಜಯಚಾಮರಾಜೇಂದ್ರ ಒಡೆಯರ್‌ ಆರ್ಟ್‌ ಗ್ಯಾಲರಿ ಎಂದು ಹೆಸರು ಬಂದಿತು. ಚೀನಾ, ಜಪಾನ್‌ ಇತರ ದೇಶಗಳ ಸುಪ್ರಿಸಿದ್ಧ ಚಿತ್ರಕಾರರ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಮೊಗಲ್‌, ರಜಪೂತ ಶೈಲಿಯ ಕಲಾತ್ಮಕ ವಸ್ತುಗಳು, ವಿವಿಧ ರೀತಿಯ ಗಡಿಯಾರಗಳ ಉತ್ತಮ ಸಂಗ್ರಹಗಳು, ಆಟಿಕೆಯ ಸಂಗ್ರಹಗಳು, ವಿವಿಧ ವಿವರಣೆಯನ್ನು ನೀಡುವ ವಸ್ತು ಸಂಗ್ರಹ, ಕಲಾತ್ಮಕ ಪ್ರಪಂಚಕ್ಕೆ ಕೊಂಡೊಯ್ಯುತ್ತದೆ.

ಚಾಮುಂಡಿ ಬೆಟ್ಟ

ಬದಲಾಯಿಸಿ
 
ಚಾಮುಂಡಿ ದೇವಸ್ಥಾನ
ನನಗೆ ಮೈಸೂರಿನಲ್ಲಿ ಅರಮನೆಯಲ್ಲದೆ ಚಾಮುಂಡಿ ಬೆಟ್ಟ ಬಹಳ ಇಷ್ಟ. ಬೆಟ್ಟದ ಮೇಲ್ಭಾಗವನ್ನು ಹತ್ತನೆಯ ಶತಮಾನದ ಹೊತ್ತಿಗಾಗಲೇ ಪುಣ್ಯ ಕ್ಶೇತ್ರವೆಂದು ಪರಿಗಣಿಸಲಾಗಿತ್ತು. ಇಲ್ಲಿರುವ ಆ ಕಾಲದ ಶಾಸನಗಳಲ್ಲಿ ಇದನ್ನು ಮಬ್ಬೆಲದ ತೀರ್ಥ ಅಥವಾ ಮರ್ಬ್ಬಳದ ತೀರ್ಥ ಎಂದು ಕರೆದಿದೆ. ಇಲ್ಲಿ ಹಲವರು ಸಿದ್ಧಿ ಪಡೆದರೆಂದು ಶಾಸನಗಳು ತಿಳಿಸುತ್ತವೆ. ಈಗ ಇಲ್ಲಿರುವ ಮಹಾಬಲೇಶ್ವರ ದೇವಸ್ಥಾನ, ಹೊಯ್ಸಳ ವಿಷ್ಣುವರ್ಧನನ ಕಾಲಕ್ಕಿಂತ ಮುಂಚೆಯೇ ನಿರ್ಮಿತವಾಗಿತ್ತು. ವಿಷ್ಣುವರ್ಧನನ ಕಾಲದಲ್ಲಿ ೧೧೨೮ರಲ್ಲಿ ಈ ಮರ್ಬ್ಬಳದ ತೀರ್ಥಕ್ಕೆ ದತ್ತಿ ಬಿಟ್ಟಿದ್ದ ಬಗ್ಗೆ ಶಾಸನವಿದೆ.
 
ಚಾಮುಂಡಿ ದೇವಸ್ಥಾನದ ಹಿಂಭಾಗ
 ಬೆಟ್ಟದ ಮೇಲೆ ಪ್ರತಿಷ್ಠಾಪಿಸಲಾಗಿದ್ದ ಮಹಿಷಾಸುರ ಮರ್ಧಿನಿಯನ್ನು ಮೈಸೂರು ಅರಸರು ಬೆಟ್ಟದ ತಾಯಿ ಚಾಮುಂಡೇಶ್ವರಿ ಎಂದು ಕರೆದು, ತಮ್ಮ ಕುಲದೇವತೆಯಾಗಿ ಪೂಜಿಸಿದರು ಎನ್ನುತ್ತದೆ ಇತಿಹಾಸ. ಅಂದಿನಿಂದ ಮರ್ಬಳ ತೀರ್ಥಕ್ಕೆ ಚಾಮುಂಡಿ ಬೆಟ್ಟ ಎಂಬ ಹೆಸರು ಬಂದಿರಬಹುದು ಎನ್ನುತ್ತಾರೆ ಇತಿಹಾಸ ತಜ್ಞರು. ದ್ರಾವಿಡ ಶೈಲಿಯ ದೇವಾಲಯಗಳಂತೆ ಈ ದೇವಾಲಯದಲ್ಲೂ ಸುಕನಾಸಿ ಮತ್ತು ನವರಂಗಗಳಿವೆ. ನವರಂಗಗಳಿಗೆ ಹಾಕಿಸಿರುವ ಹಿತ್ತಾಳೆ ತಗಡುಗಳು, ಸಿಂಹವಾಸನ, ಹಲವು ವಾಹನಗಳು, ದೇವಿಯ ಸ್ತೋತ್ರವನ್ನೊಳಗೊಂಡ ನಕ್ಷತ್ರಮಾಲಿಕೆ ಮತ್ತು ಇತರ ಆಭರಣಗಳನ್ನು ರಾಜಮನೆತವರು ದೇವಿಗೆ ಸಮರ್ಪಿಸಿದ್ದಾರೆ. ನನ್ನ ಓದು ಮುಗಿದ ಮೇಲೆ ನಾನು ಮೈಸೂರಿನಲ್ಲಿಯೇ ಉಳಿದುಕೊಳ್ಳುವ ಇಚ್ಛೆ ನನಗೆ.

ನನ್ನ ಅಭಿರುಚಿ ಮತ್ತು ಹವ್ಯಾಸಗಳು

ಬದಲಾಯಿಸಿ
ನಾನು ನನ್ನ ವಿರಾಮ ಸಮಯದಲ್ಲಿ ಜೆಫ್ರಿ ಆರ್ಚರ್[], ಕುವೆಂಪು[], ಸಿಡ್ನಿ ಶೆಲ್ಡ್ನನ್[], ಸುಧಾ ಮೂರ್ತಿ[], ಡೇವಿಡ್ ಬಾಲ್ಡಾಕಿ[] ಹಾಗು ಇತರ ಲೇಖಕರ ಪುಸ್ತಕಗಳ್ಳನ್ನು ಓದುತ್ತೇನೆ; ಕೊರಿಯನ್[] ಮತ್ತು ಭಾರತೀಯ[] ಸಂಗೀತವನ್ನು ಕೂಡ ಕೇಳುತ್ತೇನೆ. ಇತರರಂತೆ ನಾನು ನನ್ನ ಭವಿಷ್ಯದಲ್ಲಿ ವೃತ್ತಿ ಮತ್ತು ವೇತನದ ಬಗ್ಗೆ ಹೆಚ್ಚು ಯೋಚಿಸದೆ ಒಂದು ಒಳ್ಳೆಯ ನಾಗರಿಕ ಹಾಗು ಮತಿಶಾಲಿ ವ್ಯಕ್ತಿಯಾಗಲು ನಾನು ಆಷಿಸುತ್ತೇನೆ.

ಉಲ್ಲೆಖನಗಳು

ಬದಲಾಯಿಸಿ

ಟೆಂಪ್ಲೇಟು:Reflinks

  1. https://en.wikipedia.org/wiki/Jeffrey_Archer
  2. https://en.wikipedia.org/wiki/Kuvempu
  3. https://en.wikipedia.org/wiki/Sidney_Sheldon
  4. https://en.wikipedia.org/wiki/Sudha_Murthy
  5. https://en.wikipedia.org/wiki/David_Baldacci
  6. https://en.wikipedia.org/wiki/K-pop
  7. https://en.wikipedia.org/wiki/Indian_classical_music