ಶಾಂತಿ ದವೆ
Born (1931-09-25) ೨೫ ಸೆಪ್ಟೆಂಬರ್ ೧೯೩೧ (ವಯಸ್ಸು ೯೨)
ಬದಪುರ, ಗುಜರಾತ್, ಭಾರತ
Occupationವರ್ಣಚಿತ್ರಕಾರ
Known forಭಿತ್ತಿಚಿತ್ರಕಾರ, ವರ್ಣಚಿತ್ರಗಳು
Movementಬರೋಡಾ ಗ್ರೂಪ್[೧]
Awardsಪದ್ಮಶ್ರಿ

ಶಾಂತಿ ದವೆ (ಜನನ ೨೫ ಸೆಪ್ಟೆಂಬರ್ ೧೯೩೧) ಒಬ್ಬ ಭಾರತೀಯ ವರ್ಣಚಿತ್ರಕಾರ ಮತ್ತು ಶಿಲ್ಪಿ, [೨] [೩] ಇಪ್ಪತ್ತನೇ ಶತಮಾನದ ಪ್ರಮುಖ ಭಾರತೀಯ ಕಲಾವಿದರಲ್ಲಿ ಒಬ್ಬರೆಂದು ಅನೇಕರು ಪರಿಗಣಿಸಲ್ಪಟ್ಟಿದ್ದಾರೆ. [೪] ಅವರು ಲಲಿತ ಕಲಾ ಅಕಾಡೆಮಿ ಮತ್ತು ಸಾಹಿತ್ಯ ಕಲಾ ಪರಿಷತ್ತಿನ ಮಾಜಿ ಸದಸ್ಯರಾಗಿದ್ದಾರೆ. [೫] ಭಾರತ ಸರ್ಕಾರವು ೧೯೮೫ ರಲ್ಲಿ ಅವರಿಗೆ ಪದ್ಮಶ್ರೀಯ ಗೌರವವನ್ನು ನೀಡಿತು [೬]

ಜೀವನಚರಿತ್ರೆ ಬದಲಾಯಿಸಿ

ದವೆ, ೨೫ ಸೆಪ್ಟೆಂಬರ್ ೧೯೩೧ ರಂದು ಉತ್ತರ ಗುಜರಾತ್ ಗ್ರಾಮವಾದ ಬಾದ್ಪುರದಲ್ಲಿ ಒಂದು ಸಾಧಾರಣ ಕುಟುಂಬದ ನಾಲ್ಕು ಮಕ್ಕಳಲ್ಲಿ ಒಬ್ಬರಾಗಿ ಜನಿಸಿದರು. [೭] ಅವರು 1951 ರಲ್ಲಿ ಬರೋಡಾದ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾನಿಲಯದಿಂದ ತಮ್ಮ ಶಿಕ್ಷಣವನ್ನು ಪಡೆದರು, ಅಲ್ಲಿಂದ ಅವರು ಫೈನ್ ಆರ್ಟ್ಸ್ ಫ್ಯಾಕಲ್ಟಿಯಲ್ಲಿ ತಮ್ಮ ಪದವಿ ಮತ್ತು ಸ್ನಾತಕೋತ್ತರ ಅಧ್ಯಯನವನ್ನು ಪೂರ್ಣಗೊಳಿಸಿದರು. [೫] ಅವರು ಬ್ಯಾನರ್‌ಗಳು ಮತ್ತು ಸೈನ್ ಬೋರ್ಡ್‌ಗಳನ್ನು ಮಾಡುವ ವಾಣಿಜ್ಯ ಕಲಾವಿದರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಆದರೆ ನಿಧಾನವಾಗಿ ವರ್ಣಚಿತ್ರಕಾರರಾಗಿ ತಮ್ಮ ಛಾಪು ಮೂಡಿಸಿದರು. ಇವರ ಚಿತ್ರಕೃತಿಗಳು ನ್ಯೂಯಾರ್ಕ್ ನ ಜೆ.ಎಫ಼್. ಕೆ ವಿಮಾನ ನಿಲ್ದಾಣದ ವಿ.ಐ.ಪಿ ಲಾಂಜ್‌ಗಳಲ್ಲಿ, ನ್ಯೂಯಾರ್ಕ್ ನ ಏರ್ ಇಂಡಿಯಾ ಬುಕಿಂಗ್ ಕಚೇರಿಗಳಲ್ಲಿ, ಲಾಸ್ ಏಂಜಲೀಸ್, ರೋಮ್, ಸಿಡ್ನಿ ಮತ್ತು ಪರ್ತ್ ನಲ್ಲಿ ರಾರಾಜಿಸಿತ್ತಿವೆ. [೮] [೭] ವಿಮಾನ ನಿಲ್ದಾಣದಲ್ಲಿನ ಇವರ ಭಿತ್ತಿಚಿತ್ರ ವನ್ನು ನ್ಯೂಯಾರ್ಕ್ ಟೈಮ್ಸ್ ತನ್ನ ಮುಖಪುಟದಲ್ಲಿ ೫ ಫೆಬ್ರವರಿ ೧೯೬೪ ರಂದು ಲಿಟಲ್ ಗುಜರಾತ್ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿತು. [೫]

ದವೆ ಅವರ ಚಿತ್ರಕೃತಿಗಳು ಅಮೂರ್ತವಾಗಿರುತ್ತವೆ, ಅಲಂಕಾರ ಲಿಪಿ(ಕ್ಯಾಲಿಗ್ರಫಿ), ತೈಲ ವರ್ಣ, ಎನ್ಕಾಸ್ಟಿಕ್ (ಬಿಸಿ ಮೇಣದ ಚಿತ್ರಕಲೆ) ತಂತ್ರಗಳನ್ನು ಬಳಸುತ್ತಾರೆ. ಅವರು ಮರದ ಬ್ಲಾಕ್ ಪೇಂಟಿಂಗ್, ಕಲ್ಲಿನ ಕೆತ್ತನೆ ಮತ್ತು ನೇಯ್ಗೆಯನ್ನು ಒಳಗೊಂಡಿರುವ ದೊಡ್ಡ ಪ್ರಮಾಣದ ಹಲವಾರು ಭಿತ್ತಿಚಿತ್ರಗಳನ್ನು ಮಾಡಿದ್ದಾರೆ. [೫] ಅವರು ೧೯೫೭ ರಲ್ಲಿ ತಮ್ಮ ಮೊದಲ ವೈಯಕ್ತಿಕ ಪ್ರದರ್ಶನವನ್ನು ಮಾಡಿದರು. ಪ್ರಪಂಚದ ಅನೇಕ ಭಾಗಗಳಲ್ಲಿ ಫಿಲಿಪೈನ್ಸ್, ಸ್ವಿಟ್ಜರ್ಲೆಂಡ್, ಲಂಡನ್, ಜಪಾನ್, ಫ್ರಾನ್ಸ್, ಪೂರ್ವ ಯುರೋಪ್ ಮತ್ತು ಮಧ್ಯಪ್ರಾಚ್ಯದಂತಹ ಸ್ಥಳಗಳಲ್ಲಿ ಚಿತ್ರಪ್ರದರ್ಶನಗಳನ್ನು ಮಾಡಿದ್ದಾರೆ. [೭] ಅವರ ರಚನೆಗಳನ್ನು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ನವದೆಹಲಿ ಮತ್ತು ಅನೇಕ ಸಾರ್ವಜನಿಕ ಸ್ಥಳಗಳಂತಹ ಆರ್ಟ್ ಗ್ಯಾಲರಿಗಳಲ್ಲಿ ಪ್ರದರ್ಶಿಸಲಾಗುತ್ತದೆ. ಅವರ ವರ್ಣಚಿತ್ರಗಳನ್ನು ಕ್ರಿಸ್ಟೀಸ್ [೯] [೧೦] ಸೋಥೆಬಿಸ್ [೧೦] ಮತ್ತು ಬೋನ್‌ಹಾಮ್ಸ್‌ನಂತಹ ಪ್ರತಿಷ್ಠಿತ ಪ್ರದರ್ಶನ ಮಳಿಗೆಗಳಲ್ಲಿ ಮಾರಾಟವಾಗಿದೆ. [೧೧]

ದವೆ ಅವರು ಸಾಹಿತ್ಯ ಕಲಾ ಪರಿಷತ್ತಿನ ಮಾಜಿ ಸದಸ್ಯರಾಗಿದ್ದಾರೆ ಮತ್ತು ಲಲಿತ ಕಲಾ ಅಕಾಡೆಮಿಯ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. [೭]

ಪ್ರಶಸ್ತಿಗಳು ಮತ್ತು ಮನ್ನಣೆ ಬದಲಾಯಿಸಿ

ದವೆ ಅವರು ೧೯೫೬ ರಿಂದ ೧೯೫೮ ರವರೆಗೆ ಸತತವಾಗಿ ಮೂರು ವರ್ಷಗಳ ಕಾಲ ಲಲಿತ ಕಲಾ ಅಕಾಡೆಮಿಯನ್ನು ಗೆದ್ದಿದ್ದಾರೆ [೭] ಭಾರತ ಸರ್ಕಾರವು ಅವರಿಗೆ 1985 ರಲ್ಲಿ ಪದ್ಮಶ್ರೀ ಎಂಬ ನಾಗರಿಕ ಗೌರವವನ್ನು ನೀಡಿತು [೬]

ಇದನ್ನುನೋಡಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

ಬಾಹ್ಯ ಕೊಂಡಿಗಳು ಬದಲಾಯಿಸಿ

  • "Paintings on Mint Angle". Web display. Mint Angle. 2015. Retrieved 20 July 2015.

ಟೆಂಪ್ಲೇಟು:Padma Shri Award Recipients in Art

  1. "His name is listed as Baroda Group of Artists' fifth annual exhibition of paintings by". Asia Art Archive.
  2. "Blouinartinfo". Blouinartinfo. 2015. Retrieved 20 July 2015.
  3. "Christie's profile". Christie's The Art People. 2015. Retrieved 20 July 2015.
  4. ೫.೦ ೫.೧ ೫.೨ ೫.೩ "F Hessler Art Collection". F Hessler Art Collection. 2015. Retrieved 20 July 2015.
  5. ೬.೦ ೬.೧ "Padma Awards" (PDF). Ministry of Home Affairs, Government of India. 2015. Retrieved 18 June 2015.
  6. ೭.೦ ೭.೧ ೭.೨ ೭.೩ ೭.೪ "Saffron Art". Saffron Art. 2015. Retrieved 20 July 2015.
  7. Gargi Gupta, "Distress sale?", Business Standard, January 24, 2013
  8. "Christie's profile". Christie's The Art People. 2015. Retrieved 20 July 2015."Christie's profile".
  9. ೧೦.೦ ೧೦.೧ "Mutual Art". Mutual Art. 2015. Retrieved 20 July 2015.
  10. "Bonhams". Bonhams. 2015. Retrieved 20 July 2015.