NaveenNkadalaveni
ನನ್ನ ಹೆಸರು ನವೀನ್ ಎನ್ ಮೂಲತಃ ಕಾದಲವೇಣಿ ಗ್ರಾಮ, ಗೌರಿಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದವ.
ವಿಧ್ಯಾಭ್ಯಾಸ
ಬದಲಾಯಿಸಿ- ಪದವಿ ಪೂರ್ವ ಶಿಕ್ಷಣ- ವಿಷಯ: ಪಿ.ಸಿ.ಎಮ್.ಬಿ - ಎಸ್.ಎಸ್,ಇ.ಎ ಸರ್ಕಾರಿ ಪದವಿ ಪೂರ್ವ ಕಾಲೇಜು, ಗೌರಿಬಿದನೂರು, ಚಿಕ್ಕಬಳ್ಳಾಪುರ
- ಇನ್ಫಾರ್ಮರೇಶನ್ ಸೈನ್ಸ್ ಎಂಜಿನಿಯರಿಂಗ್-(೨೦೧೦-೨೦೧೪):ಯುನಿವೆರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್, ಬೆಂಗಳೂರು,ಕರ್ನಾಟಕ
ಪ್ರಸ್ತುತ ದಿನಗಳು
ಬದಲಾಯಿಸಿಅರೇಕಲ್ ಸಾಫ್ಟವೇರ್ ಕಂಪನಿ, ಬೆಂಗಳೂರಿನಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿತ್ತೆದ್ದೇನೆ. ೧ ರಿಂದ ೧೦ ನೇ ತರಗತಿಯವರೆಗೂ ಕನ್ನಡ ಮಾದ್ಯಮದಲ್ಲಿ ಅಧ್ಯಯನ ಮಾಡಿದ್ದರಿಂದ, ಕನ್ನಡದ ಮೇಲೆ ಒಲವು ಸಹಜವಾಗಿ ನನ್ನಲ್ಲಿದೆ. ಆ ಮಾತ್ರಕ್ಕೆ ಬೇರೆ ಭಾಷೆಗಳ ಮೇಲೆ ಕೀಳರಿಮೆ ನನ್ನಲ್ಲಿ ಇಲ್ಲ. ಎಲ್ಲಾ ಭಾಷೆಗಳನ್ನು ಪ್ರೀತಿಸೋಣ ಕುವೆಂಪುರವರು ಹೇಳಿದಂತೆ ವಿಶ್ವ ಮಾನವರಾಗೋಣ.
ವಿಕಿಪೀಡಿಯದಲ್ಲಿ ನನ್ನ ಪಯಣ
ಬದಲಾಯಿಸಿಅದು ೨೦೧೪ರ ಆಗಸ್ಟ್ ತಿಂಗಳು, ೨ ತಿಂಗಳಿನ ಮುಂಚೆಯಷ್ಟೇ ಎಂಜಿನಿಯರಿಂಗ್ ವಿಧ್ಯಾಬ್ಯಾಸ ಮುಗಿಸಿದ್ದೆ, ಉದ್ಯೋಗಕ್ಕೆ ಅಕ್ಟೋಬರ್ ನಲ್ಲಿ ಸೇರಬೇಕಾಗಿದ್ದ ಕಾರಣ ಕೆಲವು ತಿಂಗಳುಗಳು ರಜೆ ದೊರೆತವು. ಹಾಗೆ ಇಂಟರ್ನೆಟ್ ಅಲ್ಲಿ ಏನೋ ಹುಡುಕುತ್ತಿದ್ದಾಗ ನನಗೆ ಬೇಕಾದ ಮಾಹಿತಿ ವಿಕಿಪೀಡಿಯದಲ್ಲಿ ದೊರೆಯಿತು. ಕಾಲೇಜಿನ ದಿನಗಳಲ್ಲಿ ವಿಕಿಪೀಡಿಯಾ ಮಾಡಿದ ಸಹಾಯವನ್ನು ಮರೆಯಲಾರದೆ ಮೊದಲು ಇಂಗ್ಲೀಷ್ ವಿಕಿಪೀಡಿಯಾದಲ್ಲಿ ಲೇಖನಗಳನ್ನು ಬರೆಯುವುದು ಹೇಗೆ ಎಂದು ಗೂಗಲ್ ಮಾಡಿ ತಿಳಿದುಕೊಂಡು ವಿಕಿಪೀಡಿಯಾಕ್ಕೆ ನನ್ನ ಪ್ರಥಮ ಕೊಢುಗೆಯಾಗಿ Gubbi Thotadappa ಎಂಬ ಪುಟವನ್ನು ರಚಿಸಿದೆ.
ಅದಾದ ಎರಡು ವರ್ಷಗಳ ಬಳಿಕ ಅಂದರೆ ೨೦೧೬ ರ ಆಗಸ್ಟ್ ನಲ್ಲಿ Gubbi Thotadappa ಅನ್ನು ಇಂಗ್ಲೀಷ್ ಇಂದ ಕನ್ನಡಕ್ಕೆ ಕೃತಕವಾಗಿ ಅನುವಾದಿಸಿದೆ. ಗುಬ್ಬಿ ತೋಟದಪ್ಪ ಈ ಪುಟ ನಾನು ರಚಿಸಿದ ಕನ್ನಡದ ಪ್ರಥಮ ಲೇಖನ. ಇದಾದ ಬಳಿಕ, ವಾರಾಂತ್ಯಗಳಲ್ಲಿ ಸಮಯ ಸಿಕ್ಕಾಗ ಕೆಲ ಹೊಸ ಲೇಖನಗಳನ್ನು ಹುಟ್ಟಾಕುತ್ತಿದ್ದೇನೆ.
ನನ್ನ ಪ್ರಕಾರ ಒಂದು ವಿಕಿಪೀಡಿಯ ಪುಟವು ಸರಿಯಾದ ಟೆಂಪ್ಲೆಟ್, ಚಿತ್ರಗಳು ಹಾಗೂ ಸರಿಯಾದ ವಾಕ್ಯಗಳನ್ನೊಳಗೊಂಡಿರಬೇಕು. ನಾನು ರಚಿಸುವ ಎಲ್ಲಾ ಪುಟಗಳಲ್ಲಿ ಈ ಅಂಶಗಳನ್ನು ಆದಷ್ಟೂ ಅಳವಡಿಸುಲು ಪ್ರಯತ್ನಿಸುತ್ತಿದ್ದೇನೆ. ಒಂದು ಗುಣಮಟ್ಟದ ವಿಕಿ ಪುಟವನ್ನು ರಚಿಸಿ ಆ ಲೇಖನವನ್ನು ಓದುವುದರಲ್ಲಿ ಸಿಗುವ ಖುಷಿಯೇ ಆಗಾಗ್ಗೆ ನಾನು ವಿಕಿಪೀಡಿಯಾದಲ್ಲಿ ಕಾಲ ಕಳೆಯಲು ಸ್ಪೂರ್ತಿ.
ನಾನು ಹುಟ್ಟು ಹಾಕಿದ ವಿಕಿಪೀಡಿಯಾ ಲೇಖನಗಳು
ಬದಲಾಯಿಸಿಕನ್ನಡ
ಬದಲಾಯಿಸಿ- ಗುಬ್ಬಿ ತೋಟದಪ್ಪ
- ಉತ್ತರಕಾಂಡ
- ರವಿ ಡಿ. ಚನ್ನಣ್ಣನವರ್
- ಕಾದಲವೇಣಿ
- ಸಿಂಧುತಾಯಿ ಸಪ್ಕಾಲ್
- ಕೆ. ಪಿ. ಪುಟ್ಟಣ್ಣ ಚೆಟ್ಟಿ
- ಮಾಲ್ಗುಡಿ
- ಮಾಸ್ಟರ್ ಮಂಜುನಾಥ್
- ರಶ್ಮಿಕಾ ಮಂದಣ್ಣ
- ಸೂಲಗಿತ್ತಿ ನರಸಮ್ಮ
- ಎಸ್.ವಿ. ಸೆಟ್ಟಿ
- ಕೆ. ಸಿವನ್
- ಎಲೆ ಮಲ್ಲಪ್ಪ ಶೆಟ್ಟಿ
- ಜನೋಪಕಾರಿ ದೊಡ್ಡಣ್ಣ ಶೆಟ್ಟಿ
- ವಂಶವೃಕ್ಷ (ಕಾದಂಬರಿ)
- ೨೦೧೯ ರ ಬಂಡೀಪುರ ಕಾಡ್ಗಿಚ್ಚು
- ಜೆನ್ನಿಫರ್ ಲಾರೆನ್ಸ್
ಇಂಗ್ಲೀಷ್
ಬದಲಾಯಿಸಿಇಂಗ್ಲೀಷ್ ನಲ್ಲಿ ಹೆಚ್ಚು ಸಕ್ರೀಯನಾಗಿದ್ದೇನೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಬೇಟಿ ಕೊಡಿ: NaveenNkadalaveni