ಮುಖ್ಯ ಮೆನು ತೆರೆ

ರಶ್ಮಿಕಾ ಮಂದಣ್ಣ (ಜನನ: ೫ ಏಪ್ರಿಲ್ ೧೯೯೬), ಒಬ್ಬ ಭಾರತೀಯ ರೂಪದರ್ಶಿ ಹಾಗೂ ಕನ್ನಡ ಚಿತ್ರನಟಿ. ತನ್ನ ವೃತ್ತಿಜೀವನವನ್ನು ಒಬ್ಬ ರೂಪದರ್ಶಿಯಾಗಿ ಪ್ರಾರಂಭಿಸಿದ ಅವರು ಕನ್ನಡ ಚಲನಚಿತ್ರ ಕಿರಿಕ್ ಪಾರ್ಟಿಯೊಂದಿಗೆ ೨೦೧೬ ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.[೨]

ರಶ್ಮಿಕಾ ಮಂದಣ್ಣ
Rashmika at an interview for devadasu.png
ಜನನ (1996-04-05) 5 April 1996 (age 23)[೧]
ವೃತ್ತಿನಟಿ, ರೂಪದರ್ಶಿ
Years active೨೦೧೬–ಇಲ್ಲಿಯವರೆಗೆ

ಪರಿವಿಡಿ

ಆರಂಭಿಕ ಮತ್ತು ವೈಯಕ್ತಿಕ ಜೀವನಸಂಪಾದಿಸಿ

ರಶ್ಮಿಕಾ ಅವರು ಕರ್ನಾಟಕಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಒಂದು ಕೊಡವ ಕುಟುಂಬದಲ್ಲಿ ಜನಿಸಿದರು.[೩][೪] ಇವರು ಕೂರ್ಗ್ ಪಬ್ಲಿಕ್ ಸ್ಕೂಲ್ ನಲ್ಲಿ ಆರಂಭಿಕ ವಿಧ್ಯಾಬ್ಯಾಸವನ್ನು ಪಡೆದರು, ಮೈಸೂರು ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಮತ್ತು ಆರ್ಟ್ಸ್ ನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದರು. ಎಂ.ಎಸ್.ರಾಮಯ್ಯ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ & ಕಾಮರ್ಸ್ನಿಂದ ಸೈಕಾಲಜಿ, ಜರ್ನಲಿಸಮ್ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ರಶ್ಮಿಕಾ ರವರು ೨೦೧೪ ರ ಬೆಂಗಳೂರು ಟೈಮ್ಸ್ ನ ೨೫ ಅತ್ಯಂತ ಅಪೇಕ್ಷಣೀಯ ಮಹಿಳೆಯರ ಪಟ್ಟಿಯಲ್ಲಿ ತಮ್ಮ ಸ್ಥಾನವನದನು ಗಿಟ್ಟಿಸಿಕೊಂಡರು. ೨೦೧೬ ರಲ್ಲಿ ಅವರು ೨೪ನೇ ಸ್ಥಾನದಲ್ಲಿದ್ದರು ನಂತರ ೨೦೧೭ ರಲ್ಲಿ ಅವರು 'ಮೊದಲ ಬಾರಿಗೆ' ಬೆಂಗಳೂರ್ ಟೈಮ್ಸ್ ೨೦೧೭ರ ಅತ್ಯಂತ ಅಪೇಕ್ಷಣೀಯ ಮಹಿಳೆಯರ ಪಟ್ಟಿಯಲ್ಲಿ ಮೊದಲ ಸ್ಥಾನಬನ್ನು ತಮ್ಮದಾಗಿಸಿಕೊಂಡರು.[೫]

ವೃತ್ತಿ ಜೀವನಸಂಪಾದಿಸಿ

ರಶ್ಮಿಕಾ ಅವರು ೨೦೧೪ ರಲ್ಲಿ ಮಾಡೆಲಿಂಗ್ ಪ್ರಾರಂಭಿಸಿದರು. ಅದೇ ವರ್ಷ ಅವರು ಕ್ಲೀನ್ ಅಂಡ್ ಕ್ಲಿಯರ್ ಫ್ರೆಶ್ ಫೇಸ್ ಆಫ್ ಇಂಡಿಯಾ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು ಹಾಗು ಕ್ಲೀನ್ ಅಂಡ್ ಕ್ಲಿಯರ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ನಂತರ ಅವರು ಲಾಮೋಡ್ ಬೆಂಗಳೂರಿನ ಅತ್ಯತ್ತಮ ರೂಪದರ್ಶಿ ಹುಡುಕಾಟ ೨೦೧೫ ರಲ್ಲಿ ಟಿ.ವಿ.ಸಿ ಯ ಪ್ರಶಸ್ತಿಯನ್ನು ಪಡೆದರು. ಈ ಸ್ಪರ್ಧೆಯಲ್ಲಿ ಅವರ ಚಿತ್ರಗಳು ಕಿರಿಕ್ ಪಾರ್ಟಿ ಚಲನಚಿತ್ರದ ತಯಾರಕರನ್ನು ಆಕರ್ಷಿಸಿತು, ನಂತರ ಆಕೆಯು ೨೦೧೬ ರ ಆರಂಭದಲ್ಲಿ ನಾಯಕಿ ನಟಿಯಾಗಿ ನಟಿಸಿದರು. ದಿ ಟೈಮ್ಸ್ ಆಫ್ ಇಂಡಿಯಾ ದ ಸಂದರ್ಶನವೊಂದರಲ್ಲಿ ಅವರು ಹೀಗೆ ಹೇಳಿದರು: "ಕಿರಿಕ್ ಪಾರ್ಟಿಯ ತಯಾರಕರು ಕ್ಲೀನ್ ಅಂಡ್ ಕ್ಲಿಯರ್ ಫ್ರೆಶ್ ಫೇಸ್ ಆಫ್ ಇಂಡಿಯಾ ೨೦೧೪ರ ಸ್ಪರ್ಧೆಯಿಂದ ನನ್ನ ಚಿತ್ರವನ್ನು ಕಂಡರು - ಅದರಲ್ಲಿ ನಾನು ಕಾಲೇಜು ಸುತ್ತಿನಲ್ಲಿ ನೃತ್ಯ ಮಾಡುತ್ತಿದ್ದೆ. ಚಿತ್ರದಲ್ಲಿ ನಟಿಸುವಂತೆ ಕೇಳಿಕೊಂಡರು. ನಾನು ಯಾವಾಗಲೂ ಚಿತ್ರಗಳಲ್ಲಿ ನಟಿಸಬೇಕೆಂದು ಬಯಸಿದ್ದೆ."[೬] ಇವರು ಕಿರಿಕ್ ಪಾರ್ಟಿ ಚಲನಚಿತ್ರದಲ್ಲಿ ಕರ್ಣ(ರಕ್ಷಿತ್ ಶೆಟ್ಟಿ)ನ ಕಾಲೇಜು ಪ್ರೇಯಸಿ ಸಾನ್ವಿ ಜೋಸೆಫ್ ಪಾತ್ರದಲ್ಲಿ ನಟಿಸಿದರು. ಈ ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಒಳ್ಳೆಯ ಪ್ರಶಂಸೆಗೆ ಪಾತ್ರವಾಯಿತು. ಜೊತೆಗೆ, ರಶ್ಮಿಕಾ ಅಭಿನಯವು ಮೆಚ್ಚುಗೆಯನ್ನು ಪಡೆಯಿತು ಹಾಗು ೨೦೧೬ ರ ಅತ್ಯುತ್ತಮ ನಟಿ (ಚೊಚ್ಚಲ) ಯಾಗಿ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (SIIMA) ಪ್ರಶಸ್ತಿಯನ್ನು ಗೆದ್ದುಕೊಂಡರು.[೭] [೮]

ಮಾರ್ಚ್ ೨೦೧೭ರ ವೇಳೆಗೆ, ರಶ್ಮಿಕಾ ಅವರು ಪುನೀತ್ ರಾಜ್‍ಕುಮಾರ್ ನೊಂದಿಗೆ ಹರ್ಷ ನಿರ್ದೇಶನದ ಚಲನಚಿತ್ರ ಅಂಜನಿ ಪುತ್ರ ಚಲನಚಿತ್ರದಲ್ಲಿ ಅಭಿನಯಿಸಿದರು. ಇವರು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಮಕ್ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಸದ್ಯ ಆಕೆಯ ತೆಲುಗು ಚಿತ್ರರಂಗದ ಚೊಚ್ಚಲ ಚಿತ್ರ 'ಚಲೋ' ನಾಗಾ ಶೋರಿಯಾರವರೊಡನೆ ಅಭಿನಯಿಸಿದ್ದು ತೆರೆ ಕಾಣಲು ಸಿದ್ದವಾಗಿದೆ.[೯]

ಚಲನಚಿತ್ರಗಳ ಪಟ್ಟಿಸಂಪಾದಿಸಿ

ಕೀಲಿ
  ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ
ವರ್ಷ ಶೀರ್ಷಿಕೆ ಪಾತ್ರ ನಾಯಕ ನಟ ನಿರ್ದೇಶಕ ಭಾಷೆ ಟಿಪ್ಪಣಿಗಳು ಉಲ್ಲೇಖಗಳು
೨೦೧೬ ಕಿರಿಕ್ ಪಾರ್ಟಿ ಸಾನ್ವಿ ಜೋಸೆಫ್ ರಕ್ಷಿತ್ ಶೆಟ್ಟಿ ರಿಷಭ್ ಶೆಟ್ಟಿ ಕನ್ನಡ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (SIIMA) ಅತ್ಯುತ್ತಮ ನಟಿ (ಚೊಚ್ಚಲ)
ನಾಮ ನಿರ್ದೇಶನಗೊಂಡಿದೆ—IIFA ಉತ್ಸವಂ ಅತ್ಯುತ್ತಮ ನಟಿಗಾಗಿ ಪ್ರಶಸ್ತಿ
[೧೦]
೨೦೧೭ ಅಂಜನಿ ಪುತ್ರ ಗೀತಾ ಪುನೀತ್ ರಾಜ್‍ಕುಮಾರ್ ಹರ್ಷ ಕನ್ನಡ ಅತ್ಯುತ್ತಮ ನಟಿಗಾಗಿ ಲವ್-ಲವಿಕೆ ರೀಡರ್ಸ್ ಚಾಯ್ಸ್ ಪ್ರಶಸ್ತಿ
ಚಮಕ್ ಖುಷಿ ಗಣೇಶ್ ಸುನಿ ಕನ್ನಡ
೨೦೧೮ ಚಲೋ ಎಲ್.ಕಾರ್ತಿಕ್ ನಾಗ ಶೌರ್ಯ ವೆಂಕಿ ಕುಡುಮುಲ ತೆಲುಗು
ಗೀತಾ ಗೋವಿಂದಂ ಗೀತಾ ವಿಜಯ್ ದೇವರಕೊಂಡ ಪರಶುರಾಮ್
ದೇವದಾಸ್ ಇನ್ಸ್ಪೆಕ್ಟರ್ ಪೂಜ ನಾನಿ ಶ್ರೀರಾಮ್ ಆದಿತ್ಯ
ಯಜಮಾನ  ದರ್ಶನ್ ತೂಗುದೀಪ್ ಕನ್ನಡ ಚಿತ್ರೀಕರಣ ಪ್ರಗತಿಯಲ್ಲಿದೆ
ಪೊಗರು   ದೃವ ಸರ್ಜಾ ಚಿತ್ರೀಕರಣ ಪ್ರಗತಿಯಲ್ಲಿದೆ
೨೦೧೯ ಡಿಯರ್ ಕಾಮ್ರೇಡ್ ಭರತ್ ಕಮ್ಮ ತೆಲುಗು ಚಿತ್ರೀಕರಣ ಪ್ರಗತಿಯಲ್ಲಿದೆ
ಭೀಶ್ಮ ವೆಂಕಿ ಕುಂದುಮುಲ ಚಿತ್ರೀಕರಣ ಪ್ರಗತಿಯಲ್ಲಿದೆ


ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳುಸಂಪಾದಿಸಿ

Year Award Language Film Result
೨೦೧೭ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು - ಅತ್ಯುತ್ತಮ ನಟಿ ಕನ್ನಡ ಕಿರಿಕ್ ಪಾರ್ಟಿ ಗೆದ್ದ
ಐಐಎಫ್ಎ ಉತ್ಸವಮ್ ಪ್ರಶಸ್ತಿ - ಅತ್ಯುತ್ತಮ ನಟಿ ನಾಮನಿರ್ದೇಶನ
೨೦೧೮ ಲವ್ ಲವಿಕೆ ರೀಡರ್ಸ್ ಚಾಯ್ಸ್ ಪ್ರಶಸ್ತಿ - ಅತ್ಯುತ್ತಮ ನಟಿ ಅಂಜನಿ ಪುತ್ರ ಗೆದ್ದ
ಝೀ ಕನ್ನಡ ಹೆಮ್ಮೆಯ ಕನ್ನಡತಿ ಪ್ರಶಸ್ತಿ- ಅತ್ಯುತ್ತಮ ನಟಿ
ದಕ್ಷಿಣ ಫಿಲ್ಮ್ಫೇರ್ ಪ್ರಶಸ್ತಿ - ಅತ್ಯುತ್ತಮ ನಟಿ ಚಮಕ್ ನಾಮನಿರ್ದೇಶನ
ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು - ಅತ್ಯುತ್ತಮ ನಟಿ

ಉಲ್ಲೇಖಗಳುಸಂಪಾದಿಸಿ

  1. https://m.timesofindia.com/topic/Rashmika-Mandanna
  2. "A reel Virajpet beauty". Deccanchronicle.com. Retrieved 2017-01-22. 
  3. Sharadhaa, A. (21 December 2016). "Rashmika mandanna says it's all luck by chance". The New Indian Express. Retrieved 31 March 2017. 
  4. "This Coorg lass who is all set to make her debut with Kirik Party, chats about her journey so far". www.deccanchronicle.com. 
  5. "These hotties are the most desirable women". The Times of India. 
  6. "Meet Saanvi, the hottie from Kirik Party". 
  7. "Kirik Party Movie Review". The Times of India. 
  8. "Youngsters Live The Kirik Life Here". The New Indian Express. 31 December 2016. 
  9. Sharadhaa, A. (16 March 2017). "Rashmika mandanna 's tollywood debut with Naga Shourya". The New Indian Express. Retrieved 31 March 2017. 
  10. "Rashmika Mandanna: Meet Saanvi, the hottie from Kirik Party". The Times of India. 24 December 2016. Retrieved 22 January 2017. 

ಬಾಹ್ಯ ಕೊಂಡಿಗಳುಸಂಪಾದಿಸಿ