ಕಿರಿಕ್ ಪಾರ್ಟಿ
ಕಿರಿಕ್ ಪಾರ್ಟಿ ೨೦೧೬ರಲ್ಲಿ ಬಿಡುಗಡೆಯಾದ ಕಾಲೇಜು ಕ್ಯಾಂಪಸ್ ಪ್ರಣಯ, ಹಾಸ್ಯ ಕನ್ನಡ ಚಲನಚಿತ್ರವಾಗಿದೆ. ಈ ಚಿತ್ರವನ್ನು ರಿಶಬ್ ಶೆಟ್ಟಿ ನಿರ್ದೇಶಿಸಿದ್ದಾರೆ ಮತ್ತು ಜಿ.ಎಸ್. ಗುಪ್ತಾ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗ್ಡೆ, ಅರವಿಂದ್ ಐಯ್ಯರ್, ಧನಂಜಯ್ ರಂಜನ್ ಮತ್ತು ಪ್ರಮೋದ್ ಶೆಟ್ಟಿಯವರ ಪ್ರಮುಖ ತಾರಾಂಗಣವಿದೆ. ರಕ್ಷಿತ್ ಶೆಟ್ಟಿ ಸೇರಿ ದಿ ಸೆವೆನ್ ಓಡ್ಸ್ ತಂಡ ಈ ಚಿತ್ರ ಕಥೆಯನ್ನು ರಚಿಸಿದ್ದಾರೆ.[೫] ಈ ಚಲನಚಿತ್ರ ಅತ್ಯಂತ ಹೆಚ್ಚು ಹಣ ಗಳಿಸಿದ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ.
ಕಿರಿಕ್ ಪಾರ್ಟಿ | |
---|---|
ನಿರ್ದೇಶನ | ರಿಶಬ್ ಶೆಟ್ಟಿ |
ನಿರ್ಮಾಪಕ | ಜಿ.ಎಸ್. ಗುಪ್ತಾ ರಕ್ಷಿತ್ ಶೆಟ್ಟಿ |
ಲೇಖಕ | The Seven Odds,ರಕ್ಷಿತ್ ಶೆಟ್ಟಿ, ರಿಶಬ್ ಶೆಟ್ಟಿ, ಅಭಿಜಿತ್ ಮಹೇಶ್, ಧನಂಜಯ್ ರಾಜನ್, ಚಂದ್ರಜಿತ್ ಪಿ.ಬಿ.
|
ಪಾತ್ರವರ್ಗ | ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗ್ಡೆ, ಅರವಿಂದ್ ಐಯ್ಯರ್, ಧನಂಜಯ್ ರಂಜನ್, ಪ್ರಮೋದ್ ಶೆಟ್ಟಿ (ನಟ), ಅಚ್ಯುತ್ ಕುಮಾರ್
|
ಸಂಗೀತ | ಬಿ.ಅಜನೀಶ್ ಲೋಕನಾಥ್ |
ಛಾಯಾಗ್ರಹಣ | ಕರಮ್ ಚವ್ಲಾ |
ಸಂಕಲನ | ಸಚಿನ್ |
ಸ್ಟುಡಿಯೋ | ಪರಮವಾಹ ಸ್ಟುಡಿಯೋಸ್ |
ವಿತರಕರು | ಜಯಣ್ಣಾ ಫಿಲ್ಮ್ |
ಬಿಡುಗಡೆಯಾಗಿದ್ದು |
|
ಅವಧಿ | ೧೬೫ ನಿಮಿಷಗಳು[೧] |
ದೇಶ | ಭಾರತ |
ಭಾಷೆ | ಕನ್ನಡ |
ಬಂಡವಾಳ | ₹4 ಕೋಟಿ[೨] |
ಬಾಕ್ಸ್ ಆಫೀಸ್ | ₹50 ಕೋಟಿ[೩][೪] |
ಈ ಚಿತ್ರವು ರಿಶಬ್ ಶೆಟ್ಟಿ ರಿಕ್ಕಿ ಚಿತ್ರದ ನಂತರ ನಿರ್ದೇಶಿಸಿದ ಎರಡನೇಯ ಚಲನಚಿತ್ರ. ಈ ಚಿತ್ರಕ್ಕೆ ಸಂಗೀತ ನೀಡಿದವರು ಬಿ.ಅಜನೀಶ್ ಲೋಕನಾಥ್, ಕಲಾ ನಿರ್ದೇಶನ ವರದರಾಜ್ ಕಾಮತ್, ಸಾಹಸ ನಿರ್ದೇಶನ ರವಿ ವರ್ಮಾ. ಚಿತ್ರದ ಛಾಯಾಗ್ರಹಣವನ್ನು ೨೧ ಎಪ್ರಿಲ್ ೨೦೧೬ ರಂದು, ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ, ಹಾಸನದಲ್ಲಿ ಪ್ರಾರಂಭಿಸಲಾಯಿತು. ಕಿರಿಕ್ ಪಾರ್ಟಿ ಸಾರ್ವಕಾಲಿಕ ಅತಿ ಹೆಚ್ಚು ಹಣ ಗಳಿಸಿದ ಚಿತ್ರವಾಗಿದೆ. ಈ ಚಿತ್ರವು ೧೫ ಚಿತ್ರಮಂದಿರಗಳಲ್ಲಿ ೧೫೦ ದಿನ ಫುಲ್ಲ್ ಹೌಜ್ ಪ್ರದರ್ಶನ ಕಂಡು ೩೬೫ ದಿನಗಳ ಪ್ರದರ್ಶನವಾಗಿದೆ.
ಸಾರಾಂಶ
ಬದಲಾಯಿಸಿಕಿರಿಕ್ ಪಾರ್ಟಿ ತುಂಟ ವಿದ್ಯಾಥಿಗಳ ಕಥೆಯಾಗಿದೆ. ನಾಯಕ ಕರ್ಣ(ರಕ್ಷಿತ್ ಶೆಟ್ಟಿ), ಈ ಗುಂಪಿನಲ್ಲಿನವರು ಇತ್ತೀಚಿಗಷ್ಟೇ ಕಾಲೇಜಿಗೆ ಸೇರಿದ್ದಾರೆ. ಕಾಲೇಜು ಜೀವನದಲ್ಲಿ ಆಗುವ ಹಾಸ್ಯಮಯ ಘಟನೆಯನ್ನು ಇಲ್ಲಿ ಚಿತ್ರಿಸಲಾಗಿದೆ. ಕರ್ಣ ನಾಯಕನಾಗಿ ತನ್ನ ಗುಂಪಿನವರಾದ ಮಂಜು, ಲೋಕಿ, ಅಲೆಕ್ಸಾಂಡರ್ ಮಾಡುವ ತುಂಟಾಟವನ್ನು ತೋರಿಸಲಾಗಿದೆ. ಪ್ರಥಮ ವರ್ಷದಲ್ಲಿ, ತೃತೀಯ ವರ್ಷದ ಹುಡುಗಿ ಸಾನ್ವಿ ಮೇಲೆ ಮೋಹ ಚಿಗುರುತ್ತದೆ. ದ್ವಿತೀಯ ಅರ್ಧದಲ್ಲಿ ಆರ್ಯಾ, ಪ್ರಥಮ ಇಂಜಿನಿಯರಿಂಗ್ ವಿದ್ಯಾರ್ಥಿನಿಗೆ ಕರ್ಣನ ಮೇಲೆ ಪ್ರೀತಿ ಚಿಗುರುತ್ತದೆ. ಅಂತ್ಯದಲ್ಲಿ ಇಬ್ಬರೂ ಇಬ್ಬರನ್ನು ಪ್ರೀತಿಸುತ್ತಾರೆ. ತುಂಟತನ ಮಾಡುತ್ತಾ ತನ್ನ ಜವಾಬ್ದಾರಿಯನ್ನು ಕಲಿಯುವ ತುಂಟ ಹುಡುಗರ ಕಾಲೇಜು ಜೀವನ ಈ ಚಿತ್ರದಲ್ಲಿ ತೋರಿಸಲಾಗಿದೆ.
ಪಾತ್ರಗಳು
ಬದಲಾಯಿಸಿ- ರಕ್ಷಿತ್ ಶೆಟ್ಟಿ- ಕರ್ಣ, ಯಾಂತ್ರಿಕ ಎಂಜಿನಿಯರಿಂಗ್ ವಿದ್ಯಾರ್ಥಿ.and who had a crush on saanvi and later faals for aarya
- ರಶ್ಮೀಕಾ ಮಂದಣ್ಣ- ಸಾನ್ವಿ ಜೊಸೆಫ್ ಕರ್ಣಾನ ಮೇಲೆ ಪ್ರೀತಿ ಆಸಕ್ತಿ ಇರುವ ಹುಡುಗಿ, ಶಿಶ್ತಿನ ಪೋಲೀಸ್ ಅಧಿಕಾರಿಯ ಮಗಳು.
- ಸಂಯುಕ್ತಾ ಹೆಗ್ಡೆ- ಆರ್ಯ, ಪ್ರಾಂಶುಪಾಲರ ಮಗಳು, ಕರ್ಣಾನನ್ನು ಪ್ರೀತಿಸುವ ಹುಡುಗಿ.
- ಅಚ್ಯುತ್ ಕುಮಾರ್- ಗೌಶ್, ಮೆಕ್ಯಾನಿಕ್.
- ಅರವಿಂದ್ ಐಯ್ಯರ್- ಲೋಕೇಶ್
- ಧನಂಜಯ್ ರಂಜನ್- ಮಂಜುನಾಥ್ ಎಮ್.
- ಅಶ್ವಿನ್ ರಾವ್ ಪಲ್ಲಕ್ಕಿ- ರವಿ
- ಶಾಂಕರ್ ಮೂರ್ತಿ- ಸಂಕೊಚ್ ಮೂರ್ತಿ
- ಚಂದನ್ ಆಚಾರ್- ಅಲೆಕ್ಸಾಂಡರ್ ಗೇಬ್ರಿಯಲ್
- * ಸಲ್ಮಾನ್ ಅಹೇದ್-- ಪೂವಯ್ಯ[೬]
- ಪ್ರಮೋದ್ ಶೆಟ್ಟಿ- ಜ್ನಾನೆಶ್.
- ರಜತ್ ಕುಮಾರ್- ರಜತ್
- ಹನುಮಂತೇಗೌಡ - ಡಾ. ತೋಂಟದಾರ್ಯ, ಪ್ರಾಂಶುಪಾಲರು, ಮಲ್ನಾಡ್ ಕಾಲೇಜ್ ಆಫ್ ಇಂಜಿನೀರಿಂಗ್
- ಪರಮೇಶ್- ರನ್ನಾ
- ಮಂಜುನಾಥ್ ಗೌಡಾ
- ಗಿರಿ ಕೃಷ್ಣ
- ರಘು ರಾಮನಕಪ್ಪ
- ರಘು ಪಾಂಡೇಶ್ವರ
- ದಿನೇಶ್ ಮಂಗಳೂರು
- ಶ್ರೀ ಹರ್ಷ ಮಯ್ಯ
- ರಾಘವೇಂದ್ರ ಎನ್.
- ಐಶ್ವರ್ಯಾ ಅಚಪ್ಪ
- ಸುರಭಿ
- ನೀತಾ ಮುರಳೀಧರ ರಾವ್
- ಅರೋಹಿತ ಗೌಡ
- ಕೆ.ಎಸ್. ಶ್ರಿಧರ್
ಪ್ರಶಸ್ತಿಗಳು
ಬದಲಾಯಿಸಿ- ಐಐಫಎ ಉತ್ಸವಮ್-- ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ಪ್ರದರ್ಶನ(ಪುರುಷ), ಅತ್ಯುತ್ತಮ ಸಂಗೀತ ನಿರ್ದೇಶನ, ಅತ್ಯುತ್ತಮ ಸಾಹಿತ್ಯ, ಅತ್ಯುತ್ತಮ ಹಿನ್ನಲೆ ಗಾಯಕ(ಪುರುಷ),[೭]
- ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ-- ಅತ್ಯುತ್ತಮ ಕುಟುಂಬ ಮನೋರಂಜನೆ.[೮]
- ದಕ್ಷಿಣ ಫಿಲ್ಮ್ಫೇರ್--ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟ, ಅತ್ಯುತ್ತಮ ಪೋಶಕ ನಟಿ, ಅತ್ಯುತ್ತಮ ಸಂಗೀತ ನಿರ್ದೇಶನ, ಅತ್ಯುತ್ತಮ ಹಿನ್ನಲೆ ಗಾಯಕ(ಪುರುಷ),[೯]
- ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು-- ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಪೋಶಕ ನಟ, ಅತ್ಯುತ್ತಮ ಪಾದಾರ್ಪಣಾ ನಟಿ, ಅತ್ಯುತ್ತಮ ಸಂಗೀತ ನಿರ್ದೇಶನ, ಅತ್ಯುತ್ತಮ ಸಾಹಿತ್ಯ, ವರ್ಷದ ಮನರಂಜನೆ.[೧೦]
ಉಲ್ಲೇಖಗಳು
ಬದಲಾಯಿಸಿ- ↑ "Kirik Party – ಕಿರಿಕ್ ಪಾರ್ಟಿ (2016/೨೦೧೬)". kannadamoviesinfo.wordpress.com. Archived from the original on 2 February 2017. Retrieved 26 February 2017.
- ↑ "The budget of 'Kirik Party' would be around ₹4crore". The Hindu.
- ↑ "Rakshit Shetty's Kirik Party Telugu remake rights sold; talks on for other language rights". International Business Times. 28 March 2017. Retrieved 28 March 2017.
- ↑ "The campus-based film has reportedly collected ₹50 crore at the box office". indianexpress.com.[ಶಾಶ್ವತವಾಗಿ ಮಡಿದ ಕೊಂಡಿ]
- ↑ https://www.thenewsminute.com/article/balaji-manohar-roped-avane-srimannarayana-76144
- ↑ https://timesofindia.indiatimes.com/entertainment/kannada/movies/news/kirik-partys-poovaiah-is-most-wanted-now/articleshow/57536782.cms
- ↑ https://web.archive.org/web/20170328224355/http://updatebro.com/iifa-utsavam-full-show-kannada-winners/
- ↑ https://timesofindia.indiatimes.com/entertainment/kannada/movies/news/karnataka-state-film-award-winners-for-2016/articleshow/58130032.cms
- ↑ https://timesofindia.indiatimes.com/entertainment/kannada/movies/news/filmfare-awards-kirik-party-is-the-big-winner-of-the-night/articleshow/59201196.cms
- ↑ http://www.idlebrain.com/news/today/siima-2017awards-kannada.html