ಹನುಮಂತೇಗೌಡ (ನಟ)

ಭಾರತೀಯ ನಟ

ಹನುಮಂತೇಗೌಡ ಅಥವಾ ಹನುಮಂತಗೌಡ (ಆಂಗ್ಲ:Hanumanthegowda - ೯ ನವೆಂಬರ್ ೧೯೬೨), ಕನ್ನಡದಲ್ಲಿ ನಟಿಸುವ ರಂಗಭೂಮಿ, ಕಿರುತೆರೆ ಮತ್ತು ಸಿನಿಮಾ ನಟ. ಪೋಷಕ ಪಾತ್ರಗಳಿಗೆ ಹೆಸರಾದವರು. ಜಾಲಿಡೇಸ್ (೨೦೦೯), ನಮ್ಮ ಪ್ರೀತಿಯ ರಾಮು (೨೦೦೩), ಕಿರಿಕ್ ಪಾರ್ಟಿ (೨೦೧೬), ಹೆಬ್ಬೆಟ್ ರಾಮಕ್ಕ (೨೦೧೮) ಮತ್ತು ಜೆಂಟಲ್ ಮ್ಯಾನ್ (೨೦೨೦) ಅವರು ನಟಿಸಿದ ಕೆಲವು ಪ್ರಮುಖ ಚಿತ್ರಗಳು.[೧][೨][೩][೪]

ಹನುಮಂತೇಗೌಡ
Hanumantegowda Kannada Actor
ಜನನ (1962-11-09) ೯ ನವೆಂಬರ್ ೧೯೬೨ (ವಯಸ್ಸು ೬೧)
ಉದ್ಯೋಗ
  • ನಟ
ಸಕ್ರಿಯ ವರ್ಷಗಳು೧೯೯೯–ಈವರೆಗೆ
ಜೀವನ ಸಂಗಾತಿಶಶಿಕಲಾ
ಮಕ್ಕಳು2

ವೈಯಕ್ತಿಕ ಜೀವನ ಬದಲಾಯಿಸಿ

ಹನುಮಂತೇಗೌಡರು ಚಿಕ್ಕನಾಯಕನಹಳ್ಳಿಯ ಕೃಷಿಕ ಕುಟುಂಬವೊಂದರಲ್ಲಿ ಹುಟ್ಟಿದರು.[೫] ತೋವಿನಕೆರೆಯಲ್ಲಿ ಶಾಲಾಶಿಕ್ಷಣ ಮುಗಿಸಿದ ಅವರು ಪದವಿ ಓದಿಗಾಗಿ ಬೆಂಗಳೂರಿಗೆ ಬಂದರು.[೫]

ಶಶಿಕಲಾ ಅವರನ್ನು ಮದುವೆಯಾದ ಹನುಮಂತೇಗೌಡರಿಗೆ ಇಬ್ಬರು ಮಕ್ಕಳಿದ್ದಾರೆ.

ನಟನಾವೃತ್ತಿ ಬದಲಾಯಿಸಿ

ಕಾಲೇಜು ದಿನಗಳಿಂದಲೇ ರಂಗಭೂಮಿಯಲ್ಲಿ ಸಕ್ರಿಯರಾದ ಹನುಮಂತೇಗೌಡರಿಗೆ ಕಿರುತೆರೆಯ ಅವಕಾಶಗಳು ಸಿಕ್ಕವು. ೨೦೦೩ರಲ್ಲಿ ತೆರೆಕಂಡ ನಮ್ಮ ಪ್ರೀತಿಯ ರಾಮು ಅವರು ನಟಿಸಿದ ಮೊದಲ ಚಲನಚಿತ್ರ.[೬]

ಸುಂಟರಗಾಳಿ, ಜಾಲಿಡೇಸ್, ಕೇರ್ ಆಫ್ ಫುಟ್ಬಾತ್ 2 ಚಿತ್ರಗಳಲ್ಲಿನ ನಟನೆ ಅವರಿಗೆ ಹೆಸರು ತಂದವು. ೨೦೧೬ರಲ್ಲಿ ಬಂದ ಕಿರಿಕ್ ಪಾರ್ಟಿ ಚಿತ್ರದ ಕಾಲೇಜು ಪ್ರಾಂಶುಪಾಲ ‛ತೋಂಟದಾರ್ಯ’ ಪಾತ್ರ ಅಪಾರ ಮೆಚ್ಚುಗೆ ಪಡೆಯಿತು.[೭] ಇದೇ ಚಿತ್ರ ತೆಲುಗಿನಲ್ಲಿ ಕಿರಾಕ್ ಪಾರ್ಟಿ ಹೆಸರಿನಲ್ಲಿ ನಿರ್ಮಾಣವಾದಾಗ ಪ್ರಾಂಶುಪಾಲ ಪಾತ್ರವನ್ನು ಇವರೇ ನಿರ್ವಹಿಸುವ ಮೂಲಕ ತೆಲುಗು ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದರು. ರಾಷ್ಟ್ರಪ್ರಶಸ್ತಿ ಪಡೆದ ೨೦೧೮ರ ಕನ್ನಡ ಚಿತ್ರ ಹೆಬ್ಬೆಟ್ ರಾಮಕ್ಕದಲ್ಲಿ ಭ್ರಷ್ಟ ಶಾಸಕನ ಪಾತ್ರವನ್ನು ನಿರ್ವಹಿಸಿದ್ದಾರೆ.[೮][೯][೧೦]

೨೦೨೦ರ ಆಗಸ್ಟ್ ನಲ್ಲಿ, ಖ್ಯಾತ ಕಿರುತೆರೆ ನಿರೂಪಕಿ, ನಟಿ ಅನುಶ್ರೀ ಅವರ ತಂದೆಯೇ ಹನುಮಂತೇಗೌಡ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿತ್ತು. ಅದನ್ನು ನಿರಾಕರಿಸಿದ ಗೌಡರು ಈ ವದಂತಿಯ ವಿರುದ್ಧ ದೂರು ನೀಡಿದ್ದರು.[೧೧] ಇಂದಿಗೂ ಕಿರುತೆರೆ, ರಂಗಭೂಮಿ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಹನುಮಂತೇಗೌಡರು ಸುಮಾರು 40ಕ್ಕೂ ಹೆಚ್ಚಿನ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.

ನಟಿಸಿದ ಚಿತ್ರಗಳು ಬದಲಾಯಿಸಿ

  • ನಮ್ಮ ಪ್ರೀತಿಯ ರಾಮು (೨೦೦೩)
  • ಶ್ರೀರಾಮಪುರ ಪೊಲೀಸ್ ಸ್ಟೇಶನ್ (೨೦೦೪)
  • ಸುಂಟರಗಾಳಿ (೨೦೦೫)
  • ಶಾಸ್ತ್ರಿ (೨೦೦೫)
  • ಬೆಳ್ಳಿ ಬೆಟ್ಟ (೨೦೦೬)
  • ಯುವ (೨೦೦೯)
  • ಜಾಲಿಡೇಸ್ (೨೦೦೯)
  • ಪೊರ್ಕಿ (೨೦೧೦)
  • ಮಿ. ಐರಾವತ (೨೦೧೫)
  • ಕಿರಿಕ್ ಪಾರ್ಟಿ (೨೦೧೬)
  • ಕಿರಾಕ್ ಪಾರ್ಟಿ (೨೦೧೮)
  • ಹೆಬ್ಬೆಟ್ ರಾಮಕ್ಕ (೨೦೧೮)
  • ಅರ್ಜುನ್ ಗೌಡ (೨೦೨೦)[೧೨][೧೩]
  • ಜೆಂಟಲ್ ಮ್ಯಾನ್ (2020)

ಉಲ್ಲೇಖಗಳು ಬದಲಾಯಿಸಿ

  1. "Celebrity Hanumanthegowda". filmibeat.com. Retrieved 17 ಸೆಪ್ಟೆಂಬರ್ 2020.
  2. "Hanumanthegowda on Moviebuff". moviebuff.com. Retrieved 18 ಸೆಪ್ಟೆಂಬರ್ 2020.
  3. "Celebrity Hanumanthegowda". maskmanreviews.com. Archived from the original on 9 ಅಕ್ಟೋಬರ್ 2020. Retrieved 18 ಸೆಪ್ಟೆಂಬರ್ 2020.
  4. Sunayana Suresh (7 ಫೆಬ್ರವರಿ 2020). "Gentleman movie review:A film that is high on emotions and action". Times of India. Retrieved 18 ಸೆಪ್ಟೆಂಬರ್ 2020.
  5. ೫.೦ ೫.೧ "Kannada supporting actor Hanumanthegowda". nettv4u.com. Retrieved 18 ಸೆಪ್ಟೆಂಬರ್ 2020.
  6. "Namma Preethiya Ramu movie review". Viggy.com. Retrieved 18 ಸೆಪ್ಟೆಂಬರ್ 2020.
  7. "Kirik Party cast and crew". nowrunning.com. Retrieved 18 ಸೆಪ್ಟೆಂಬರ್ 2020.
  8. "Hebbet Rammakka wins regional film award". The New Indian Express. 14 ಏಪ್ರಿಲ್ 2018.
  9. "ಕತ್ತಲಿಂದ ಬೆಳಕಿಗೆ ರಾಮಕ್ಕಳ ಪಯಣ" [Journey of Ramakka from dark to light]. Udayavani (in Kannada). 27 ಏಪ್ರಿಲ್ 2020. Retrieved 6 ಅಕ್ಟೋಬರ್ 2020.{{cite news}}: CS1 maint: unrecognized language (link)
  10. "ಜನರ ಎದುರು ರಾಷ್ಟ್ರಪ್ರಶಸ್ತಿ ಚಿತ್ರ ಹೆಬ್ಬೆಟ್ ರಾಮಕ್ಕ" [National award winning film Hebbet Ramakka in front of people]. cinecircle.in (in Kannada). 24 ಏಪ್ರಿಲ್ 2018. Retrieved 6 ಏಪ್ರಿಲ್ 2020.{{cite news}}: CS1 maint: unrecognized language (link)
  11. "ನಾನು ಅನುಶ್ರೀ ತಂದೆ ಅಲ್ಲ: ಸ್ಯಾಂಡಲ್ ವುಡ್ ಖ್ಯಾತ ನಟ ಹನುಮಂತೇಗೌಡ" [I'm not Anushree's father says famous actor of Sandalwood Hanumanthegowda]. Kannadabignews.in (in Kannada). 1 ಆಗಸ್ಟ್ 2020. Archived from the original on 14 ಅಕ್ಟೋಬರ್ 2020. Retrieved 6 ಅಕ್ಟೋಬರ್ 2020.{{cite news}}: CS1 maint: unrecognized language (link)
  12. "'ಪ್ರಜ್ವಲ್ ಗೌಡ' ಸಿನಿಮಾ ತಂಡ" [Prajwal Gowda cinema(Cast and crew)]. Prajavani (in Kannada). 3 ಡಿಸೆಂಬರ್ 2019. Retrieved 6 ಅಕ್ಟೋಬರ್ 2020.{{cite news}}: CS1 maint: unrecognized language (link)
  13. "ಅರ್ಜುನ್ ಗೌಡ ಚಿತ್ರೀಕರಣ ಅಂತಿಮ ಘಟ್ಟಕ್ಕೆ" [Arjun Gowda filming at final stage]. Udayavani (in Kannada). 11 ಸೆಪ್ಟೆಂಬರ್ 2019. Retrieved 6 ಅಕ್ಟೋಬರ್ 2020.{{cite news}}: CS1 maint: unrecognized language (link)

ಹೊರಗಿನ ಕೊಂಡಿಗಳು ಬದಲಾಯಿಸಿ

ಹನುಮಂತೇಗೌಡ @ ಐ ಎಮ್ ಡಿ ಬಿ