ಅಂಜನಿ ಪುತ್ರ ಎ. ಹರ್ಷ ನಿರ್ದೇಶಿಸಿದ ಮತ್ತು ಎಮ್.ಎನ್. ಕುಮಾರ್ ನಿರ್ಮಿಸಿದ ಭಾರತೀಯ ಕನ್ನಡ ಮಸಾಲಾ ಚಲನಚಿತ್ರ. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.[೨] ಪಿ. ರವಿಶಂಕರ್, ರಮ್ಯಾ ಕೃಷ್ಣನ್, ಮುಖೇಶ್ ತಿವಾರಿ ಮತ್ತು ಚಿಕ್ಕಣ್ಣ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.[೩] ರವಿ ಬಸ್ರೂರ್ ಅವರು ಚಿತ್ರಕ್ಕಾಗಿ ಧ್ವನಿಪಥವನ್ನು ರಚಿಸಿದ್ದಾರೆ. ಛಾಯಾಗ್ರಹಣವನ್ನು ಸ್ವಾಮಿ ಜೆ ಮಾಡಿದ್ದಾರೆ ಹಾಗೂ ದೀಪು ಎಸ್.ಕುಮಾರ್ ಚಲನಚಿತ್ರ ಸಂಕಲನ ನಿರ್ವಹಿಸಿದರು.[೪] ಈ ಚಿತ್ರ ನಿರ್ದೇಶಕ ಹರಿ ಅವರ ತಮಿಳು ಚಲನಚಿತ್ರ ಪೂಜಾಯಿ (2014) ಚಿತ್ರದ ರಿಮೇಕ್ ಆಗಿದೆ.[೫]

ಅಂಜನಿ ಪುತ್ರ
ನಿರ್ದೇಶನ ಎ. ಹರ್ಷ
ನಿರ್ಮಾಪಕಎಮ್.ಎನ್ ಕುಮಾರ್
ಚಿತ್ರಕಥೆ ಎ. ಹರ್ಷ
ಕಥೆಹರಿ
ಆಧಾರ ಪೂಜೈ
ಹರಿ
ಪಾತ್ರವರ್ಗಪುನೀತ್ ರಾಜ್ ಕುಮಾರ್
ರಶ್ಮಿಕಾ ಮಂದಣ್ಣ
ರವಿ ಬಸ್ರೂರ್
ಸಂಗೀತರವಿ ಬಸ್ರೂರ್
ಛಾಯಾಗ್ರಹಣಸ್ವಾಮಿ ಜೆ
ಸಂಕಲನದೀಪು ಎಸ್.ಕುಮಾರ್
ಸ್ಟುಡಿಯೋಎಮ್.ಎನ್.ಕೆ ಮೂವೀಸ್
ಜಯಶ್ರೀದೇವಿ ಪ್ರೊಡಕ್ಶನ್
ವಿತರಕರುಎಮ್.ಎನ್ ಕುಮಾರ್
ಬಿಡುಗಡೆಯಾಗಿದ್ದು
 • 21 ಡಿಸೆಂಬರ್ 2017 (2017-12-21)
ಅವಧಿ೨ ಘಂಟೆ ೧೯ ನಿಮಿಷ[೧]
ದೇಶಭಾರತ
ಭಾಷೆಕನ್ನಡ

ಈ ಚಲನಚಿತ್ರವನ್ನು ಅಧಿಕೃತವಾಗಿ ಫೆಬ್ರವರಿ 6, 2017 ರಂದು ಪ್ರಾರಂಭಿಸಲಾಯಿತು ಮತ್ತು ಪ್ರಧಾನ ಛಾಯಾಗ್ರಹಣವು ಒಂದು ವಾರದ ನಂತರ ಪ್ರಾರಂಭವಾಯಿತು. ಈ ಚಿತ್ರದ ಟ್ರೈಲರ್ ಅನ್ನು 2017 ರ ನವೆಂಬರ್ 24 ರಂದು ಪುನೀತ್ ರಾಜ್ ಕುಮಾರ್ ಅವರ ಪಿಆರ್ಕೆ ಆಡಿಯೊ ಕಂಪನಿಯಲ್ಲಿ ಬಿಡುಗಡೆಗೊಂಡಿತು. [೬]

ಈ ಚಲನಚಿತ್ರವನ್ನು 21 ಡಿಸೆಂಬರ್ 2017 ರಂದು ಕರ್ನಾಟಕದಲ್ಲಿ ಬಿಡುಗಡೆ ಮಾಡಲಾಯಿತು.[೭]

ಕಥಾವಸ್ತುಸಂಪಾದಿಸಿ

ತಮಿಳು ಚಲನಚಿತ್ರ ಪೂಜಾಯಿ ಚಿತ್ರದ ರಿಮೇಕ್ ಆಗಿರುವ ಆಂಜನಿಪುತ್ರ, ರಾಜ ಕುಟುಂಬಕ್ಕೆ ಸೇರಿದ ವಿರಾಜ್ ಎಂಬ ವ್ಯಕ್ತಿ ಬಗ್ಗೆ ಈ ಚಲನಚಿತ್ರದ ಕಥಾವಸ್ತು. ಅಂಜನಿ ಪುತ್ರ ಕೌಟಂಬಿಕ ಸನ್ನಿವೇಶ ಇರುವ ಪ್ರಣಯ ಚಿತ್ರ.[೮] ಅವನ ತಂದೆಯು ಮೃತಪಟ್ಟ ನಂತರ ಅವರು ತಮ್ಮ ತಂದೆಯ ಜವಳಿ ಉದ್ಯಮವಾದ ರಾಜ್ ಗ್ರೂಪ್ ಆಫ್ ಇಂಡಸ್ಟ್ರೀಸ್ನ ಮಾಲೀಕರಾದರು. ಒಮ್ಮೆ ಕುಟುಂಬದಲ್ಲಿ ಆದ ಸಮಾರಂಬದಲ್ಲಿ ವಿರಾಜ್ ನ ಚಿಕ್ಕಪ್ಪನ ಮಗಳು, ಅವನ ಸೋದರ ಸಂಬಂಧಿ, ಕೋಣೆಯ ಒಳಗಡೆ ಅವಳು ವಿರಾಜನ್ನು ಮದುವೆಯಾಗಬೇಕೆಂದು ಬಯಸುತ್ತಾಳೆ ಎಂದು ಹೇಳುತ್ತಾಳೆ. ಅವಳನ್ನು ತಡೆಯಲು ಪ್ರಯತ್ನಿಸುವಾಗ, ಅವಳ ಸೀರೆ ವಿರಾಜನ ಕೈಯಲ್ಲಿ ಬರುತ್ತೆ. ಆಗ, ಆಕೆಯ ತಂದೆ, ವಿರಾಜ ಆಕೆಗೆ ಕಿರುಕುಳ ನೀಡುತ್ತಿದ್ದಾಳೆಂದು ವಿರಾಜನ ಅಮ್ಮನ ಹತ್ತಿರ ಹೇಳುತ್ತಾರೆ. ಅದೇ ಸಮಯದಲ್ಲಿ ವಿರಾಜನ ತಾಯಿ ಬಂದು ವಿರಾಜನ್ನು ಮನೆ ಇಂದ ಹೊರಗೆ ಹಾಕುತ್ತಾರೆ. ಅಂಜನಾ ದೇವಿ ತನ್ನ ಮಗ ವೀರಾಜ್ ಅನ್ನು ತುಂಬಾ ಪ್ರೀತಿಸುತ್ತಾರೆ. ಅವನ ಒಳ್ಳೆತನ ಬಗ್ಗೆ ಎಲ್ಲರಿಗೂ ಗೊತ್ತಿದ್ದರೂ, ಅವನು ಮಾಡದ ತಪ್ಪಿಗೆ ಅಂಜನಾ ದೇವಿ ಹಿಂದೆ ಮುಂದೆ ನೋಡದೆ ಮನೆಯಿಂದ ಹೊರಹಾಕುತ್ತಾರೆ. ವಿರಾಜ್ ಒಬ್ಬ ಪ್ರಾಮಾಣಿಕನಾಗಿದ್ದರಿಂದ, ತನ್ನ ಅಮ್ಮನ ಮಾತಿಗೆ ವಿಧೇಯವಾಗಿ , ಮನೆಯಿಂದ ಹೊರನಡೆಯುತ್ತಾನೆ. [೯]


ಚಲನಚಿತ್ರದ ನಾಯಕ ಕಷ್ಟದಲ್ಲಿ ಇರುವವರಿಗೆ ಸಾಲ ನೀಡುವ ಒಬ್ಬ ಒಳ್ಳೆಯ ಹುಡುಗ. ಅವನು ಪ್ರೀತಿಸುವ ಹುಡುಗಿ ಇವನ ದೈನಂದಿನ ಜೀವನ ಶೈಲಿಯನ್ನು ಹಾಗೂ ಆರ್ಥಿಕ ಸ್ಥಿತಿಯನ್ನು ನೋಡಿ ಅವನ ಪ್ರೀತಿಯನ್ನು ನಿರಾಕರಿಸುತ್ತಾಳೆ. ಆಗ ನಾಯಕನ ಗೆಳೆಯ, ವಿರಾಜ್ ನ ರಾಜಮನೆತನದ ಹಿನ್ನೆಲೆ ಗೀತಾಳೊಡನೆ ಬಹಿರಂಗಪಡಿಸುತ್ತಾನೆ. ಇಲ್ಲಿ ನಾಯಕ ಕೇವಲ ತನ್ನ ಮನೆಯವರ ತಪ್ಪುಗ್ರಹಿಕೆ ಇಂದ ಮನೆ ಇಂದ ದೂರವಿರಬೇಕಾಗಿ ಇರುತ್ತದೆ. ನಂತರ ತನ್ನ ಕುಟುಂಬದ ಪುನರ್ಮಿಲನದಿಂದ, ವಿರಾಜ ತನ್ನ ಮನೆಯವರ ರಕ್ಶಣೆಗಾಗಿ ಖಳನಾಯಕನೊಟ್ಟಿಗೆ ಹೋರಾಡುತ್ತಾನೆ.

ಪಾತ್ರವರ್ಗಸಂಪಾದಿಸಿ

ಸಂಗೀತಸಂಪಾದಿಸಿ

ರವಿ ಬಸ್ರೂರ್ ಈ ಚಲನಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.[೧೦][೧೧] ಈ ಚಲನಚಿತ್ರದ ಸಂಗೀತವನ್ನು ಪುನೀತ್ ರಾಜ್‍ಕುಮಾರ್ (ನಟ) ಒಡೆತನದ ಪಿ.ಆರ್.ಕೆ ಆಡಿಯೊ ಖರೀದಿಸಿತ್ತು. ಈ ಚಲನಚಿತ್ರದ ಸಂಗೀತವನ್ನು ೨೪ ನವೆಂಬರ್ ೨೦೧೭ ರಂದು ಪಿ.ಆರ್.ಕೆ ಆಡಿಯೊ ಬಿಡುಗಡೆಗೊಳಿಸಿತು.

ಸಂ.ಹಾಡುಸಾಹಿತ್ಯಗಾಯಕಸಮಯ
1."ಅಂಜನಿ ಪುತ್ರ"ಕಿನ್ನಲ್ ರಾಜ್ ರವಿ ಬಸ್ರೂರ್ , ಶ್ರೀನಿವಾಸ್, ಮೋಹನ್೨:೩೩
2."ಮಾಗರಿಯ" ಚೆತನ್ ಕುಮಾರ್ ಸಚಿನ್ ಬಸ್ರೂರ್೩:೦೪
3."ಗೀತ" ರವಿ ಬಸ್ರೂರ್ ವಿಜಯ್ ಪ್ರಕಾಶ್, ಸುಪ್ರಿಯ ಲೋಹಿತ್೩:೩೧
4."೧೨೩೪ ಶಿಲ್ಲೆ ಹೊಡಿ" ವಿ. ನಾಗೇಂದ್ರ ಪ್ರಸಾದ್ಪುನೀತ್ ರಾಜ್‍ಕುಮಾರ್ (ನಟ), ಚಂದನ್ ಶೆಟ್ಟಿ೩:೩೩
5."ಚಂದ ಚಂದ"ಪ್ರಮೊದ್ ಮರವಂತೆ ರವಿ ಬಸ್ರೂರ್ , ಅನುರಾಧ ಭಟ್೩:೧೯
6."ಸಾಹುಕಾರಾ" ಕೆ. ಕಲ್ಯಾಣ್ ವಿಜಯ್ ಪ್ರಕಾಶ್೩:೦೦
ಒಟ್ಟು ಸಮಯ:೧೯:೦೫

ಉಲೇಖಗಳುಸಂಪಾದಿಸಿ

 1. https://www.filmibeat.com/kannada/movies/anjaniputra.html
 2. http://www.newindianexpress.com/entertainment/kannada/2017/feb/07/harshas-hanuman-connection-continues-with-anjani-putra-1567716.html
 3. https://lyricskart.com/anjaniputra-songs-lyrics-puneeth-rajkumar-rashmika-mandanna/
 4. http://anjaniputra.com/
 5. https://www.chitraloka.com/news/14315-puneeth-s-new-film-titled-anjaniputra.html
 6. https://www.imdb.com/title/tt7778560/
 7. https://thefinexpress.com/anjani-putra-movie-release-date-fixed-coming-december-21/6808/
 8. https://www.imdb.com/title/tt7778560/
 9. https://www.filmibeat.com/kannada/movies/anjaniputra/story.html
 10. "Anjaniputra". Filmi Beat.
 11. "Anjaniputra". Lyrics Kart.

ಕೋಂಡಿಗಳುಸಂಪಾದಿಸಿ

ಅಧಿಕೃತ ವೆಬ್ಸೈಟ್