ಶ್ರೀರಾಮ್ ವೆಂಕಟಸುಬ್ಬ ಸೆಟ್ಟಿ ಜನಪ್ರಿಯವಾಗಿ ಎಸ್.ವಿ. ಸೆಟ್ಟಿ (ಇಂಗ್ಲೀಷ್: S.V. Setty) (೧೮೭೯-೧೯೧೮) ಎಂದು ಕರೆಯಲಾಗುತ್ತದೆ. ಇವರು ಭಾರತದ ಒಬ್ಬ ವಿಮಾನ ಚಾಲಕ ಮತ್ತು ಪ್ರಾಧ್ಯಾಪಕರಾಗಿದ್ದರು. ಇವರು ಮೂಲತಃ ಮೈಸೂರಿನವರು. ಇವರು ಭಾರತದ ಮೊದಲ ವಿಮಾನ ಚಾಲಕರು ಎಂಬ ಹಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು Avro-504 ವಿಮಾನದ ವಿನ್ಯಾಸದೊಂದಿಗೆ ಸಹಾಯ ಮಾಡಿದ್ದರು.[][][]

ಎಸ್ ವಿ. ಸೆಟ್ಟಿ
[Śrīrām Vaೆṃkaṭasubbā Saೆṭṭi] Error: {{Transliteration}}: transliteration text not Latin script (pos 10) (help)
ಎಸ್. ವೆಂಕಟಸುಬ್ಬ ಸೆಟ್ಟಿ
Born(೧೮೭೯-೧೨-೨೮)೨೮ ಡಿಸೆಂಬರ್ ೧೮೭೯
Died೧೨ ಅಕ್ಟೋಬರ್ ೧೯೧೮ (೩೮ ನೇ ವಯಸ್ಸಿನಲ್ಲಿ)
Cause of death೧೯೧೮ರ ಸಾಂಕ್ರಾಮಿಕ ಜ್ವರ
Nationalityಭಾರತೀಯರು
Alma materಫ್ಯಾರಡೆ ಹೌಸ್, ಲಂಡನ್
ಥಾಮಸ್ ಕಾಲೇಜ್
ಮಹಾರಾಜ ಕಾಲೇಜ್
Occupation(s)ವಿಮಾನ ಚಾಲಕ, ಪ್ರಾಧ್ಯಾಪಕ
Known forಭಾರತೀಯ ವಾಯುಯಾನ ಪ್ರವರ್ತಕ
Awardsಏರೋನಾಟಿಕ್ಸ್ನಲ್ಲಿ ಜನರಲ್ ಪ್ರಾವೀಣ್ಯತೆಗಾಗಿ ಚಿನ್ನದ ಪದಕ (೧೯೧೨)
ಎಸ್.ವಿ. ಸೆಟ್ಟಿ (ಬಲಗಡೆ) ಹಾಗೂ AVRO-500 ಬೈಪ್ಲೈನ್ ​​ಗ್ರೇಟ್ ವಾರ್ ವಿಂಟೇಜ್ (೧೯೧೨)

ಎಸ್.ವಿ. ಸೆಟ್ಟಿಯವರು ಬೆಂಗಳೂರಿನ ಕರ್ನಾಟಕದ ಮೊದಲ ಎಂಜಿನಿಯರಿಂಗ್ ಕಾಲೇಜು ಯೂನಿವರ್ಸಿಟಿ ವಿಶ್ವೇಶ್ವರಯ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜಿನ ಸಂಸ್ಥಾಪಕ ಪ್ರಾಧ್ಯಾಪಕರಾಗಿದ್ದರು.[]

ಆರಂಭಿಕ ಜೀವನ ಮತ್ತು ಶಿಕ್ಷಣ

ಬದಲಾಯಿಸಿ

ಎಸ್.ವಿ. ಸೆಟ್ಟಿಯವರು ೧೨ ಡಿಸೆಂಬರ್ ೧೮೭೯ ರಂದು ಮೈಸೂರಿನಲ್ಲಿ ಜನಿಸಿದರು. ತಮಿಳುನಾಡಿನ ಮದ್ರಾಸ್ ನ ಗಿಂಡಿಯಲ್ಲಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ ದಾಖಲಾಗುವ ಮೊದಲು ಮಹಾರಾಜ ಕಾಲೇಜಿನಿಂದ ಬ್ಯಾಚುಲರ್ ಆಫ್ ಆರ್ಟ್ಸ್ (ಬಿ.ಎ.) ಪದವಿಯನ್ನು ಪಡೆದರು. ಗಿಂಡಿಯಿಂದ ಅವರು ಥಾಮ್ಸನ್ ಕಾಲೇಜಿಗೆ ಹಾಗೂ ನಂತರ ರೂರ್ಕಿಗೆ ವರ್ಗಾಯಿಸಿದರು, ಅಲ್ಲಿ ಅವರು ತಮ್ಮ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದರು.[][]

ಆರಂಭಿಕ ದಿನಗಳಲ್ಲಿ ಅವರು ಮೈಸೂರಿನ ಸಾರ್ವಜನಿಕ ವರ್ಗದ ಇಲಾಖೆ (ಪಿಡಬ್ಲ್ಯೂಡಿ) ಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಕೆಲಸ ಮಾಡಿದರು, ೧೯೦೯ ರವರೆಗೆ ಇಲ್ಲಿಯೇ ಸೇವೆ ಸಲ್ಲಿಸಿದರು. ಇವರು ಮೈಸೂರು ಸರ್ಕಾರದಿಂದ ವಿದ್ಯಾರ್ಥಿವೇತನವನ್ನು ಪಡೆದು ಲಂಡನ್ ನ ಫ್ಯಾರಡೆ ಹೌಸ್ ನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾವನ್ನು ಅಧ್ಯಯನ ಮಾಡಿದರು. ಇವರು ಇಂಗ್ಲೆಂಡಿನ ರಗ್ಬಿ, ವೊಲ್ವರ್ಹ್ಯಾಂಪ್ಟನ್ ಮತ್ತು ಲಂಡನ್ನಲ್ಲಿರುವ ಇಂಜಿನಯರಿಂಗ್ ನ ಪ್ರಾಯೋಗಿಕ ಅನುಭವವನ್ನು ಪಡೆದರು. ಈ ಸಮಯದಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರ್ಸ್ ಇನ್ಸ್ಟಿಟ್ಯೂಷನ್ ನ ಸಹ ಸದಸ್ಯ ಸದಸ್ಯರಾದರು.[]

ವಾಯುಯಾನ ವೃತ್ತಿ

ಬದಲಾಯಿಸಿ

ಮೇ ೧೯೧೧ ರಲ್ಲಿ, ಸೆಟ್ಟಿಯವರು ಆ ಸಮಯದ ಇಂಗ್ಲೆಂಡಿನಲ್ಲಿ ವಿಮಾನವನ್ನು ನಿರ್ಮಿಸುವಲ್ಲಿ ವಿಶೇಷವಾದ ಪ್ರಾವೀಣ್ಯತೆ ಹೊಂದಿದ್ದ ಏಕೈಕ ಬ್ರಿಟಿಷ್ ಕಂಪನಿಯಾಗಿದ್ದ ಎ.ವಿ. ರೋಯಿ ಮತ್ತು ಕಂಪನಿ (AVRO) ಯಲ್ಲಿ ಸೇರಿಕೊಂಡರು. ಮಾರ್ಚ್ ೧೨, ೧೯೧೨ ರಂದು ಅವರು ಕೆಲವರ ಸಹಾಯದಿಂದ ವಿಮಾನವನ್ನು ನಿರ್ಮಿಸಿದರು ಮತ್ತು ಅದನ್ನು ಪರೀಕ್ಷಿಸಿದರು. ಇವರ ಮೊದಲ ವಿಮಾನ ಹಾರಾಟವು ಕಡಿಮೆ ಶಕ್ತಿಯೊಂದಿಗೆ ಯಶಸ್ವಿಯಾಯಿತು. ಮೊದಲ ಪ್ರಾಯೋಗಿಕ ವಿಮಾನ ಹಾರಟವನ್ನು ಮೆಚ್ಚಿದ ಆಸ್ಟ್ರೇಲಿಯಾದ ಜನಪ್ರಿಯ ವಿಮಾನ ಚಾಲಕ ಜಾನ್ ರಾಬರ್ಟ್ಸನ್ ಡುಯಿಗನ್, ಸೆಟ್ಟಿಯವರಿಗೆ ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಅವರು Avro ಕಂಪನಿಯ ಜೊತೆ ಒಪ್ಪಂದ ಕೂಡ ಮಾಡಿಕೊಂಡರು. ಈ ವಿಮಾನವನ್ನು ನಂತರ ಅವರೋ ಡುಯಿಗನ್' ಎಂದು ಹೆಸರಿಸಲಾಯಿತು.[][]

ಸೆಟ್ಟಿಯವರ ವಿಮಾನದ ವಿನ್ಯಾಸವು ಎ.ವಿ.ರೋಯಿಯವರಿಂದ ನಿರ್ಮಿಸಲ್ಪಟ್ಟ ಅವ್ರೋ-೫೦೦(Avro-500) ಸರಣಿಗಳಿಗೆ ಆಧಾರವಾಯಿತು. ನಂತರ, ಮೇ ೧೯೧೨ ರಲ್ಲಿ, ಇವರು ಹೊಸ ಬೈಪ್ಲೇನ್ ವಿಮಾನವನ್ನು ವಿನ್ಯಾಸಗೊಳಿಸಲು ಪ್ರಾರಂಭಿಸಿದರು. ಇದನ್ನು ಅಂದಿನ ಕಲ್ಕತ್ತೆಯ 'ದಿ ಮಾಡರ್ನ್ ರಿವ್ಯೂ' ಮಾಸಿಕ ನಿಯತಕಾಲಿಕದಲ್ಲಿ (ಜುಲೈ ೧೯೧೨, ಇಂಡಿಯಾ) ಪ್ರಕಟಿಸಲಾಯಿತು. ಈ ಒಂದು ಹೊಸ ವಿಮಾನವು ಅವರೋ-500 ವಿಮಾನದಿಂದ ಭಿನ್ನವಾಗಿತ್ತು. ಇದರ ವಿನ್ಯಾಸವನ್ನು ಪೂರ್ಣಗೊಳಿಸಿದ ನಂತರ, ಜೂನ್ ೩೦, ೧೯೧೨ ರಂದು ಅವರು ಭಾರತಕ್ಕೆ ತೆರಳಿದರು, ಜೂನ್ ೧೨, ೧೯೧೨ ರಂದು, ಸೆಟ್ಟಿಯವರು ಏರೋನಾಟಿಕ್ಸ್ನಲ್ಲಿ ಜನರಲ್ ಪ್ರಾವೀಣ್ಯತೆಗಾಗಿ ಎ.ವಿ.ರೋಯಿರಿಂದ ಚಿನ್ನದ ಪದಕವನ್ನು ಪಡೆದರು.[][][]

ಸೆಟ್ಟಿಯವರು ಭಾರತಕ್ಕೆ ತೆರಳಿದ ನಂತರ, ಅವ್ರೋ ೫೦೦ ರ ಸರಣಿಗಳಾದ ಅವ್ರೋ ೫೦೧, ೫೦೨, ೫೦೩ ಮತ್ತು ಅವ್ರೋ ೫೦೪ ಗಳನ್ನು ಬಿಡುಗಡೆ ಮಾಡಿದರು. ಪ್ರಸ್ತುತ, ಅವೆರೊ-೫೦೪ ಅನ್ನು ಹೊರತುಪಡಿಸಿ ಮೂಲಭೂತ ವಿನ್ಯಾಸದಲ್ಲಿ ಅವರೋ-೫೦೦ ವಿಮಾನವನ್ನು ಹೋಲುತ್ತದೆ. ಸೆಟ್ಟಿಯವರು ವಿನ್ಯಾಸಗೊಳಿಸಿದ ಬೈಪ್ಲೇನ್ ವಿಮಾನವು ವಿಶ್ವ ಸಮರ-೧ ರ ಜನಪ್ರಿಯ ಬಾಂಬ್ ಆಗಿ ಅವ್ರೋ-೫೦೪ ಹೊರಹೊಮ್ಮಿತು. ಅವರೋ-೫೦೪ ವಿಶ್ವದ ಪ್ರಥಮ ತರಬೇತುದಾರ ವಿಮಾನವಾಗಿ ವಿಕಸನಗೊಂಡಿತು. ನವೆಂಬರ್ ೧೯೧೪ ರಲ್ಲಿ, ಮಹಾಯುದ್ಧದಲ್ಲಿ ಜರ್ಮನಿಯ ಮೇಲೆ ಬಾಂಬ್ ಹಾಕಿದ ಮೊದಲ ವಿಮಾನವಾದ ಅವರೋ-೫೦೪ ಪ್ರಖ್ಯಾತಿ ಪಡೆಯಿತು. ಸೆಟ್ಟಿಯವರು ವಿನ್ಯಾಸಗೊಳಿಸಿದ ಅವ್ರೋ ಡುಯಿಗಾನ್ ಅವರೋ-೫೦೦ ಕ್ಕೆ ಮಾದರಿಯಾಗಿ ಮಾರ್ಪಟ್ಟಿತು ನಂತರ ಹೊಸ ಬೈಪ್ಲೇನ್ ವಿಮಾನವು ಅವರೋ-೫೦೪ ಆಗಿ ವಿನ್ಯಾಸಗೊಂಡಿತು.[]

ನಂತರದ ವರ್ಷಗಳು

ಬದಲಾಯಿಸಿ

ಸೆಟ್ಟಿಯವರು ಇಂಗ್ಲೆಂಡಿನಿಂದ ಮರಳಿದ ನಂತರ ೧೯೧೩ ರಲ್ಲಿ, ಕರ್ನಾಟಕದ ಮೊದಲ ಎಂಜಿನಿಯರಿಂಗ್ ಕಾಲೇಜ ಆದ ಬೆಂಗಳೂರಿನ ಯೂನಿವರ್ಸಿಟಿ ವಿಶ್ವೇಶ್ವರಯ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜಿನ ಸಂಸ್ಥಾಪಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು.[]

೧೯೧೮ ರಲ್ಲಿ, ಬೆಂಗಳೂರಿನ ಜನಸಂಖ್ಯೆಯ ಐದನೇ ಭಾಗದಷ್ಟು ಜನರನ್ನು ಕೊಂದ ಸಾಂಕ್ರಾಮಿಕ ರೋಗವು ಸೆಟ್ಟಿಯವರು, ಅವರ ಹೆಂಡತಿ ಮತ್ತು ಅವರ ನಾಲ್ಕು ಹೆಣ್ಣುಮಕ್ಕಳಲ್ಲಿ ಒಂದು ಮಗುವನ್ನು ಕೊಂದಿತು. ಇವರು ೧೯೧೮ರ ಅಕ್ಟೋಬರ್ ೧೨ ರಂದು ತಮ್ಮ ೩೮ ನೇ ವಯಸ್ಸಿನಲ್ಲಿ ನಿಧನರಾದರು.[]

ಉಲ್ಲೇಖಗಳು

ಬದಲಾಯಿಸಿ
  • ಪುಸ್ತಕ: The First Indian Aviator, S.V. Setty written by Kasi Visvanatha Setti, Karnataka Arya Vysya Maha Sabha, 1984, ASIN: B0000CQO8R
  1. ೧.೦ ೧.೧ Group Captain (Retd) Joseph Noronha, Goa. "S.V. SETTY (1879 – 1918)". sps-aviation. 2009, sps-aviation.com.
  2. ೨.೦ ೨.೧ The Modern Review staff. "The first Indian Aviator". History. July 1912, The Modern Review.
  3. ೩.೦ ೩.೧ Aparajith Ramnath. "S. Venkatasubba Setty: A Hidden Figure in English Aviation History". technology and business. 2017, thewire.in.
  4. UVCE. "Development Plan for Centernary Celebrations" (PDF). UVCE: 100 Years of Academic Excellence. 2017, uvcecentenary.ac.in. Archived from the original (PDF) on 2018-04-04. Retrieved 2018-04-08.
  5. ೫.೦ ೫.೧ ೫.೨ AIR MARSHAL M. MATHESWARAN AVSM VM PH.D (RETD). "Madras aviation – in peace & war". Madras Musings. 2017, madrasmusings.com.
  6. ೬.೦ ೬.೧ ೬.೨ Staff. "Was Mysorean S V Setty India's first pilot and aviator". TNN. 2009, timesofindia.indiatimes.com.
  7. ೭.೦ ೭.೧ Dr Anantha Krishnan M. "103ISC: India's first aviator Prof Setti's contributions hover around Mysuru". One India. 2016, oneindia.com.


ಬಾಹ್ಯ ಕೊಂಡಿಗಳು

ಬದಲಾಯಿಸಿ