ಮಾಲ್ಗುಡಿ ದಕ್ಷಿಣ ಭಾರತದ ಒಂದು ಕಾಲ್ಪನಿಕ ಪಟ್ಟಣವಾಗಿದ್ದು, ಇದು ಆರ್.ಕೆ.ನಾರಾಯಣ್ ಅವರ ಕಾದಂಬರಿಗಳು ಹಾಗೂ ಸಣ್ಣ ಕಥೆಗಳಲ್ಲಿ ಕಾಣಲ್ಪಡುತ್ತದೆ. ಅವರ ಮೊದಲ ಕಾದಂಬರಿ ಸ್ವಾಮಿ ಆಂಡ್ ಫ್ರೆಂಡ್ಸ್ (೧೯೩೫) ನಿಂದ ಇಡಿದು ಅವರ ಹದಿನೈದು ಕಾದಂಬರಿಗಳಲ್ಲಿ ಈ ಪಟ್ಟಣದ ಉಲ್ಲೇಖಗಳಿವೆ. ನಾರಾಯಣ್ ರವರು ಯಶಸ್ವಿಯಾಗಿ ಮಾಲ್ಗುಡಿಯನ್ನು ಭಾರತದ ಅಣುರೂಪದಂತೆ ಚಿತ್ರಿಸಿದ್ದಾರೆ. ಮ್ಯಾಲ್ಗುಡಿ ಡೇಸ್ ನಲ್ಲಿ ಹೇಳಿದಂತೆ ೧೯ ನೇ ಶತಮಾನದಲ್ಲಿ ಕಾಲ್ಪನಿಕ ಬ್ರಿಟಿಷ್ ಅಧಿಕಾರಿಯಾದ ಸರ್ ಫ್ರೆಡ್ರಿಕ್ ಲಾವ್ಲೆಯವರು ಕೆಲವು ಗ್ರಾಮಗಳನ್ನು ಒಟ್ಟುಗೂಡಿಸಿ ಅಭಿವೃದ್ಧಿಪಡಿಸುವ ಮೂಲಕ ಮ್ಯಾಲ್ಗುಡಿ ರಚಿಸಲ್ಪಟ್ಟಿತು. ಸರ್ ಫ್ರೆಡ್ರಿಕ್ ಲಾಲೆಯವರ ಪಾತ್ರವು ನೈಜತೆಯಲ್ಲಿ ೧೯೦೫ ರಲ್ಲಿ ಮದ್ರಾಸ್ ಗವರ್ನರ್ ಆಗಿದ್ದ 'ಆರ್ಥರ್ ಲಾವ್ಲೆ' ಅವರ ಮೇಲೆ ಆಧಾರಿತವಾಗಿದೆ.[]

ಭೂಗೋಳ ಮತ್ತು ಮೂಲಗಳು

ಬದಲಾಯಿಸಿ

ಮಲ್ಗುಡಿ ಪಟ್ಟಣ ಮೂಲತಃ ಕಾಲ್ಪನಿಕ ನದಿ ಸರಾಯುವಿನ ತೀರದಲ್ಲಿದೆ, ಕಾಲ್ಪನಿಕ ಮೆಮ್ಪಿ ಕಾಡಿನ ಬಳಿ ಇದೆ ಹಾಗೂ ಮಧ್ರಾಸ್ ಇಂದ ಕೆಲವೇ ಗಂಟೆಗಳ ದೂರದಲ್ಲಿದೆ.[][] ಮಲ್ಗುಡಿ ಕಾಲ್ಪನಿಕ ಕೃತಿ ಎಂದು ನಾರಾಯಣರು ಹೇಳಿದ್ದರಾದರೂ ಅದರ ವಾಸ್ತವ ಸ್ಥಳವು ಕೊಯಮತ್ತೂರು ಎಂಬಂತೆ ಗೋಚರಿಸುತ್ತದೆ. ಒಂದು ಬದಿಯಲ್ಲಿ ನದಿ ಮತ್ತೊಂದೆಡೆ ಕಾಡು ಹಾಗೂ ಯತಾವತ್ತಾಗಿ ಮ್ಯಾಲ್ಗುಡಿಯಂತೆಯೇ ಕಟ್ಟಡಗಳು, ಲಾಲ್ಲಿ ರಸ್ತೆ, ವೆರೈಟಿ ಹಾಲ್ ಮತ್ತು ಬಾಂಬೆ ಆನಂದ ಭವನ ಓದುಗರನ್ನು ಊಹಿಸುವುದರಿಂದ ತಡೆಯಲಿಲ್ಲ. ಮೈಸೂರಿನ ಹಿಂದಿನ ರಾಜ್ಯದಲ್ಲಿ ಕಾವೇರಿ ಮತ್ತು ಯಾದವಿಗಿರಿ ನದಿ ತೀರದಲ್ಲಿರುವ ಲಾಲ್ಗುಡಿ ಇತರ ಸಂಭಾವ್ಯ 'ಸ್ಥಳಗಳು'. ನಾರಾಯಣ್ ಒಂದು ಪುಸ್ತಕದಲ್ಲಿ ಬರೆದಿರುವಂತೆ ಬೆಂಗಳೂರಿನ ಎರಡು ಪ್ರಮುಖ ಮತ್ತು ಹಳೆಯ ಪ್ರದೇಶಗಳಾದ 'ಮಲ್ಲೇಶ್ವರಂ' ಮತ್ತು 'ಬಸವನಗುಡಿ' ಅವರಿಗಿ ಅಚ್ಚುಮೆಚ್ಚಿನ ಪಟ್ಟಣಗಳೆನಿಸಿ ಅವರು ಆ ಎರಡು ಹೆಸರುಗಳ ಪದಗಳನ್ನು ಒಗ್ಗೂಡಿಸಿ 'ಮ್ಯಾಲ್ಗುಡಿ' ಎಂಬ ಹೆಸರನ್ನು ರಚಿಸಿದರು.

ಪ್ರದೇಶಗಳು ಮತ್ತು ಹೆಗ್ಗುರುತುಗಳು

ಬದಲಾಯಿಸಿ

ಸಾರಾಯು ನದಿ

ಬದಲಾಯಿಸಿ

ಮಾಲ್ಗುಡಿ ಪಟ್ಟಣವು ಮೂಲತಃ ಸರಾಯು ನದಿ ತೀರದಲ್ಲಿದೆ. ಸ್ವಾಮಿ ಮತ್ತು ಗೆಳೆಯರು, ಸ್ವಾಮಿ, ಮಣಿ ಮತ್ತು ರಾಜಮ್ ಅವರು ಸಂಜೆಯ ಬಹುತೇಕ ಸಮಯ ಈ ನದಿಯ ಅತ್ತಿರ ಆಡುತ್ತಿದ್ದರು. ನಾರಾಯಣ್ ರವರ ಮತ್ತೊಂದು ಪುಸ್ತಕ 'ದಿ ಗೈಡ್ಸ್' ನಲ್ಲಿ ಆದ್ಯಾತ್ಮಿಕ ಭಕ್ತಿಹೊಂದಿದ ವ್ಯಕ್ತಿ ರಾಜುವು ಸರಾಯುವಿನ ತೀರದಲ್ಲಿ ನಿಂತು ಮಳೆ ಬರಲು ಉಪವಾಸ ಮಾಡಿವುದರ ಮೂಲಕ ಪ್ರಾರ್ಥಿಸುತ್ತಾನೆ. ಮಹಾತ್ಮ ಗಾಂಧಿಯವರು ಒಮ್ಮೆ ಮಾಲ್ಗುಡಿಯನ್ನು ಭೇಟಿ ಮಾಡಿದಾಗ ಸಭೆಗಳು ಮತ್ತು ಭಾಷಣಗಳು ಸರಾಯು ನದಿಯ ತೀರದಲ್ಲಿ ನಡೆದಿದ್ದವು ಎಂದು ಬರೆದಿದ್ದಾರೆ.

ಬೀದಿಗಳು ಮತ್ತು ನೆರೆಹೊರೆಗಳು

ಬದಲಾಯಿಸಿ

ಮುಂಬೈ ಆನಂದ ಭವನ ಮತ್ತು ಟ್ರುತ್ ಪ್ರಿಂಟಿಂಗ್ ವರ್ಕ್ಸ್ ಸೇರಿದಂತೆ ಹಲವಾರು ದೊಡ್ಡ ಅಂಗಡಿಗಳನ್ನೊಳಗೊಂಡ ಮಾಲ್ಗುಡಿಯು ಮಾರುಕಟ್ಟೆ ಕೇಂದ್ರವಾಗಿದೆ. ಕಬೀರ್ ಸ್ಟ್ರೀಟ್ನಲ್ಲಿ ಮಾಲ್ಗುಡಿಯ ಗಣ್ಯರ ನಿವಾಸಗಳಿದ್ದವು, ಲಾವ್ಲಿ ಎಕ್ಟೆಂಕ್ಷನ್ ಸ್ಥಳವು ಶ್ರೀಮಂತ ಮತ್ತು ಪ್ರಭಾವಿ ವ್ಯಕ್ತಿಗಳ ಮನೆಗಳನ್ನು ನಿರ್ಮಿಸಲು ಕಾಯ್ದಿರಿಸಿದೆ. ಎಲಮಾನ್ ಸ್ಟ್ರೀಟ್-ಎಣ್ಣೆ ಮಾರಾಟದ ತವರೂರು ಇದು ಕೊನೆಯ ಬೀದಿ ಆಗಿದ್ದು ಅದು ಮೀರಿ ಸರಾಯು ನದಿ ಇದೆ. ಇತರ ಬೀದಿಗಳಲ್ಲಿ ಗ್ರೋವ್ ಸ್ಟ್ರೀಟ್, ಕಾಲಿಘಾಟ್ ಲೇನ್ ಮತ್ತು ವಿನಾಯಕ್ ಮುಡಾಲಿ ಸ್ಟ್ರೀಟ್ ಗಳು ಸೇರಿವೆ.
ಎಲ್ಲಮಾನ್ ಸ್ಟ್ರೀಟ್ ಮತ್ತು ನದಿಯ ನಡುವೆ ನಲ್ಲಪ್ಪನ ತೋಡು ಮತ್ತು ಸಮಾಧಿ ಮೈದಾನವಿದೆ. ಅಸ್ಪೃಶ್ಯರು ಮತ್ತು ಕಸಗುಡಿಸುವವರು ನದಿಯ ಕೆಳಗಿನ ದಡಗಳಲ್ಲಿ ವಾಸಿಸುತ್ತಾರೆ.

ಕಟ್ಟಡಗಳು

ಬದಲಾಯಿಸಿ

ಹಳೆಯ ವೆರೈಟಿ ಹಾಲ್ ಅನ್ನು ಕೆಡವಿ ೧೯೩೫ ರಲ್ಲಿ ಅದೇ ಸ್ಥಳದಲ್ಲಿ ಪ್ಯಾಲೇಸ್ ಟಾಕೀಸ್ ಅನ್ನು ನಿರ್ಮಿಸಲಾಯಿತು. ಆಲ್ಬರ್ಟ್ ಮಿಷನ್ ಸ್ಕೂಲ್ ಮತ್ತು ಆಲ್ಬರ್ಟ್ ಮಿಷನ್ ಕಾಲೇಜ್ ಹೆಚ್ಚು ಜನಪ್ರಿಯವಾದ ಶೈಕ್ಷಣಿಕ ಸಂಸ್ಥೆಗಳಾಗಿವೆ. ಬೋರ್ಡ್ ಶಾಲೆ ಮತ್ತು ಪಟ್ಟಣ ಪ್ರಾಥಮಿಕ ಶಾಲೆಗಳು ಕೂಡ ಇವೆ.

ಇತರೆ ಹೆಗ್ಗುರುತುಗಳು

ಬದಲಾಯಿಸಿ

ಮಾಲ್ಗುಡಿ ಸಣ್ಣ ರೈಲ್ವೆ ನಿಲ್ದಾಣವನ್ನು ಹೊಂದಿದ್ದು ಇದು ಅನೇಕ ಪ್ರಸಂಗಗಳಲ್ಲಿ ಕಥಾಹಂದರಕ್ಕೆ ಕೇಂದ್ರವಾಗಿದೆ. ಮಾಲ್ಗುಡಿಯ ಪ್ರಮುಕ ಆಸ್ಪತ್ರೆ ಮಾಲ್ಗುಡಿ ಮೆಡಿಕಲ್ ಸೆಂಟರ್ (ಎಂಎಂಸಿ) ಆಗಿದೆ. ಕುದುರೆಯ ಮೇಲೆ ಕುಳಿತಿರುವ ಸರ್ ಫ್ರೆಡ್ರಿಕ್ಸ್ ನ ಪ್ರತಿಮೆಯು ಮತ್ತೊಂದು ಪಟ್ಟಣದ ಪ್ರಮುಖ ಹೆಗ್ಗುರುತಾಗಿದೆ. ಮತ್ತೊಂದು ಪ್ರಮುಖ ಸ್ಥಳವೆಂದರೆ ಯಾವುದೇ ಬೋರ್ಡ್ ಇಲ್ಲದೆ ಒಂದು ಸಣ್ಣ ರೆಸ್ಟೋರೆಂಟ್ ಇದು ಮಾಲ್ಗುಡಿನಲ್ಲಿ ನಡೆಯುವ ಚರ್ಚೆಗಳ ಕೇಂದ್ರವಾಗಿದೆ.

ಮೆಮ್ಪಿ ಫಾರೆಸ್ಟ್

ಬದಲಾಯಿಸಿ

ಮೆಮ್ಪಿ ಅರಣ್ಯವು ಸರಾಯು ನದಿಯ ಇನ್ನೊಂದು ಭಾಗದಲ್ಲಿದೆ. ಇದು ಅನೇಕ ಬೆಟ್ಟಗಳು ಮತ್ತು ಗುಹೆಗಳನ್ನು ಹೊಂದಿದೆ. ಅಲ್ಲಿ ಹುಲಿಗಳು, ಜಿಂಕೆಗಳು, ಲಂಗರುಗಳು ಮತ್ತು ನೀರಿನ ಎಮ್ಮೆಗಳು ಕಂಡುಬತ್ತವೆ.

ಪರಿಕಲ್ಪನೆ

ಬದಲಾಯಿಸಿ

ನಾರಾಯಣ್ ಅವರು ಮಾಲ್ಗುಡಿಯನ್ನು ಹೇಗೆ ಪರಿಕಲ್ಪನೆ ಮಾಡಿದ್ದಾರೆ ಎಂಬುದನ್ನು ವಿವರಿಸುವಾಗ, ಹೀಗೆ ಹೇಳುತ್ತಾರೆ,
"ಮ್ಯಾಲ್ಗುಡಿ ಎಂಬ ಸ್ಥಳದ ರಚನೆ ಮಾಡುವುದು ನನಗೆ ಒಂದು ಆವಿಷ್ಕಾರವೇ ಸರಿ, ಏಕೆಂದರೆ ನಾನು ಮಾಲ್ಗುಡಿ ಅಥವಾ ಯಾವುದೇ ನೈಜ ಸ್ಥಳವನ್ನು ಬರೆಯುವಲ್ಲಿ ಅಗತ್ಯವಾದ ಸಂಗತಿಗಳು ಮತ್ತು ವಿಷಯಗಳಿಗಾಗಿ ಯಾವುದೇ ಕಲ್ಪನೆಯನ್ನು ಹೊಂದಿರಲಿಲ್ಲ. ಮೊದಲನೆಯದಾಗಿ ನಾನು ನನ್ನ ಪಟ್ಟಣವನ್ನು ಚಿತ್ರಿಸಲಿಲ್ಲ ಆದರೆ ರೈಲ್ವೆ ನಿಲ್ದಾಣವು ಒಂದು ಆಲದ ಮರದೊಂದಿಗೆ ಒಂದು ಸಣ್ಣ ಜಗಲಿ, ಸ್ಟೇಷನ್ ಮಾಸ್ಟರ್ ಮತ್ತು ದಿನಕ್ಕೆ ಎರಡು ಸಾರಿ ಬರುವ-ಹೋಗುವ ರೈಲುಗಳು ಒಂದು ಬರುತ್ತಿರುವುದು ಮತ್ತು ಒಂದು ಹೋಗುವುದು. ವಿಜಯದಶಮಿ ಯಲ್ಲಿ ನಾನು ಕುಳಿತು ನನ್ನ ಪಟ್ಟಣದ ಬಗ್ಗೆ ಮೊದಲ ವಾಕ್ಯವನ್ನು ಬರೆದಿದ್ದೇನೆ: ರೈಲು ಈಗ ತಾನೆ ಮ್ಯಾಲ್ಗುಡಿ ನಿಲ್ದಾಣದಲ್ಲಿ ಬಂದು ನಿಂತಿತು ಎಂದು. "

ಸಮಕಾಲೀನ ಸಂಸ್ಕೃತಿಯಲ್ಲಿ

ಬದಲಾಯಿಸಿ

ಕನ್ನಡ ಚಿತ್ರರಂಗದ ನಟ ಮತ್ತು ನಿರ್ದೇಶಕ ಶಂಕರ್ ನಾಗ್ ನಿರ್ದೇಶನದ ೧೯೮೬ ರ ಆರ್.ಕೆ.ನಾರಾಯಣ್ ರವರ ಕಥೆಗಳನ್ನಾದಾರಿಸಿದ ದೂರದರ್ಶನ ಸರಣಿ "ಮಾಲ್ಗುಡಿ ಡೇಸ್" ಕರ್ನಾಟಕದಲ್ಲಿ ಹೆಚ್ಚಾಗಿ ಶಿವಮೊಗ್ಗ ಜಿಲ್ಲೆಯ ಆಗುಂಬೆ ಬಳಿ ಚಿತ್ರೀಕರಿಸಲಾಗುತ್ತು. ಆದಾಗ್ಯೂ ಕೆಲವು ಕಂತುಗಳು ಕರ್ನಾಟಕದ ಬೆಂಗಳೂರಿನಲ್ಲಿ ಹಾಗೂ ತುಮಕೂರು ಜಿಲ್ಲೆಯ ದೇವರಾಯನದುರ್ಗದಲ್ಲಿ ಚಿತ್ರೀಕರಿಸಲ್ಪಟ್ಟವು.

ಮಾಲ್ಗುಡಿಯು "ದಕ್ಷಿಣ ಭಾರತದಲ್ಲಿ ನೆಲೆಗೊಂಡಿದೆ" ಎಂಬ ಪರಿಕಲ್ಪನೆಯು ಜನಪ್ರಿಯ ಕಲ್ಪನೆಯಲ್ಲಿ ಜನ್ಮತಾಳಿದೆ ಎಂದು ತೋರುತ್ತದೆ. ದಕ್ಷಿಣ ಭಾರತದ ಕೆಲವು ರೆಸ್ಟಾರೆಂಟ್ಗಳು "ಮಾಲ್ಗುಡಿ" ಹೆಸರನ್ನು ಹೊಂದಿವೆ. ಶ್ಯಾಮ್ ಗ್ರೂಪ್ ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ನಲ್ಲಿ ಮ್ಯಾಲ್ಗುಡಿ ರೆಸ್ಟೋರೆಂಟ್ಗಳನ್ನು ನಡೆಸುತ್ತಿದೆ. "ಮಾಲ್ಗುಡಿ ಜಂಕ್ಷನ್" ಎಂಬ ರೆಸ್ಟಾರೆಂಟ್ ಕೋಲ್ಕತ್ತಾದಲ್ಲಿದೆ

ಉಲ್ಲೇಖಗಳು

ಬದಲಾಯಿಸಿ
  1. Narayan, R.K. (1956). Lawley Road and other stories. Madras: Orient Paperbacks. ISBN 0882530623.
  2. Khatri, Chote Lal. R.K. Narayan: Reflections and Re-evaluation. India: Sarup & Sons. p. 3. ISBN 9788176257138.
  3. Narayan, R.K (2000). Memories of Malgudi. Chennai: Penguin India. ISBN 9780141002453.


ಇದನ್ನೂ ನೋಡಿ

ಬದಲಾಯಿಸಿ

ಮಾಲ್ಗುಡಿ ಡೇಸ್