ಕಾದಲವೇಣಿ (ಇಂಗ್ಲೀಷ್: Kadalaveni) ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ಒಂದು ಹಳ್ಳಿ ಪ್ರದೇಶ.[][] ಇದು ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನಲ್ಲಿದೆ. ಕಾದಲವೇಣಿಯು ಉಪ ಜಿಲ್ಲೆಯ ಕೇಂದ್ರ ಕಾರ್ಯಾಲಯ ಗೌರಿಬಿದನೂರಿನಿಂದ ಸುಮಾರು ೬ ಕಿ.ಮೀ ದೂರದಲ್ಲಿದೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಧಾನ ಕಛೇರಿಯಿಂದ ೪೪ ಕಿ.ಮೀ ದೂರದಲ್ಲಿದೆ.

ಕಾದಲವೇಣಿ (Kadalaveni)

ಕಾದಲವೇಣಿ (Kadalaveni)
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಚಿಕ್ಕಬಳ್ಳಾಪುರ
ನಿರ್ದೇಶಾಂಕಗಳು 13.60082° N 77.47658° E
ವಿಸ್ತಾರ
 - ಎತ್ತರ
 km²
 - ೬೮೬ ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೧೧)
 - ಸಾಂದ್ರತೆ
೨೫೧೨
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೬೧೨೧೦
 - +೦೮೧೫೫
 - ಕೆಎ ೪೦

ಇತಿಹಾಸ

ಬದಲಾಯಿಸಿ

ಕಾದಲವೇಣಿ ಎಂಬ ಹೆಸರು ಮೂಲತಃ ಕನ್ನಡದ "ಕಾಲು ಹರಿದ ಓಣಿ" ಎಂಬ ಪದದಿಂದ ಬಂದಿದ್ದು, ಕಾಲಕ್ರಮೇಣ ಇದು "ಕಾದಲವೇಣಿ"ಯಾಗಿ ಮಾರ್ಪಾಡಾಗಿದೆ ಎಂದು ಹೇಳಲಾಗುತ್ತದೆ.

ಜನಸಂಖ್ಯಾಶಾಸ್ತ್ರ

ಬದಲಾಯಿಸಿ

೨೦೧೧ರ ಜನಗಣತಿಯ ಪ್ರಕಾರ ಸ್ಥಳ ಸಂಕೇತ ಅಥವಾ ಕಾದಲವೇಣಿ ಹಳ್ಳಿಯ ಗ್ರಾಮ ಕೋಡ್ ೬೨೩೨೬೨ ಎಂದು ನಮೂದಿಸಿದೆ.[] ೨೦೦೯ರ ಅಂಕಿ ಅಂಶಗಳ ಪ್ರಕಾರ, ಕಾದಲವೇಣಿ ಗ್ರಾಮವು ಗ್ರಾಮ ಪಂಚಾಯತ್ ಕೂಡ ಆಗಿದೆ.[]

ಗ್ರಾಮದ ಒಟ್ಟು ಭೌಗೋಳಿಕ ಪ್ರದೇಶವು ೮೮೦.೩೨ ಹೆಕ್ಟೇರ್ ಆಗಿದೆ. ಕಾದಲವೇಣಿ ಗ್ರಾಮದಲ್ಲಿ ಒಟ್ಟು ೨,೫೧೨ ಜನಸಂಖ್ಯೆಯನ್ನು ಹೊಂದಿದ್ದು ೧,೨೫೪ ಪುರುಷರು ಮತ್ತು ೧,೨೫೮ ಹೆಂಗಸರಿದ್ದಾರೆ. ಈ ಗ್ರಾಮದಲ್ಲಿ ಸುಮಾರು ೫೯೯ ಮನೆಗಳಿವೆ. ಕಾದಲವೇಣಿ ಗ್ರಾಮಕ್ಕೆ ಸಮೀಪದಲ್ಲಿರುವ ಪಟ್ಟಣ ಗೌರಿಬಿದನೂರು, ಇದು ಸುಮಾರು ೬ ಕಿ.ಮೀ ದೂರದಲ್ಲಿದೆ.

ಕಾದಲವೇಣಿ ಗ್ರಾಮ ಪಂಚಾಯತ್ ಗ್ರಾಮಗಳು

ಬದಲಾಯಿಸಿ
  • ಗುಂಡಾಪುರ
  • ಮರಳೂರು
  • ವೈಚಕುರಾಹಳ್ಳಿ
  • ಕಾದಲವೇಣಿ
  • ಉಡಮಲೋಡು

ಸೌಲಭ್ಯಗಳು

ಬದಲಾಯಿಸಿ

ಕಾದಲವೇಣಿ ಗ್ರಾಮವು ಈ ಕೆಳಕಂಡ ಸೌಲಭ್ಯಗಳನ್ನು ಒಳಗೊಂಡಿದೆ

  • ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
  • ಸರ್ಕಾರಿ ಪ್ರೌಢಶಾಲೆ
  • ಕೆನರಾ ಬ್ಯಾಂಕ್ - ಈ ಬ್ಯಾಂಕ್ ಕಾದಲವೇಣಿ ಗ್ರಾಮದಿಂದ ಗೌರಿಬಿದನೂರು ರಸ್ತೆಯ ಕಡೆಗೆ ಇದೆ.[]
  • ಗ್ರಾಮ ಪಂಚಾಯತ್ ಕಚೇರಿ (ಮಂಡಲ್ ಕಚೇರಿ) - ಗ್ರಾಮದ ಕೇಂದ್ರಭಾಗದಲ್ಲಿ.
  • ಕೆ.ಎಂ.ಎಫ್ (ಕರ್ನಾಟಕ ಹಾಲು ಒಕ್ಕೂಟ) ಡೈರಿ - ಕಾದಲವೇಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಬಾಗದಲ್ಲಿದೆ.
  • ಸರ್ಕಾರಿ ನ್ಯಾಯಬೆಲೆ ಅಂಗಡಿ - ಕರ್ನಾಟಕ ಸರ್ಕಾರದ ಸ್ವಾಮ್ಯದ್ದಾಗಿದೆ.
  • ರಾಷ್ಟ್ರೀಯ ಹೆದ್ದಾರಿ-೨೦೬ - ಗೌರಿಬಿದನೂರು ಹಾಗೂ ಮಧುಗಿರಿಯನ್ನು ಸಂಪರ್ಕಿಸುತ್ತದೆ.

ದೇವಾಲಯಗಳು

ಬದಲಾಯಿಸಿ
  • ಹನುಮಾನ್ ದೇವಸ್ಥಾನ
  • ಮಾರಮ್ಮ ದೇವಸ್ಥಾನ
  • ಗಣೇಶ ದೇವಾಲಯ
  • ಮಸೀದಿ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ Village code= 623262 Office of the Registrar General & Census Commissioner, India. "Census of India : Town and Village Level data".
  2. "Kadalaveni in Google Map :". {{cite web}}: Unknown parameter |deadurl= ignored (help) Kadalaveni, Chikkaballapura, Karnataka
  3. villageinfo.in. "INDIAN VILLAGE DIRECTORY: Kadalaveni". {{cite web}}: Unknown parameter |deadurl= ignored (help)
  4. BankIFSCcode.com. "IFSC Code:- CNRB0008836, CANARA BANK, KADALVENI". {{cite web}}: Unknown parameter |deadurl= ignored (help)

ಬಾಹ್ಯ ಕೊಂಡಿಗಳು

ಬದಲಾಯಿಸಿ