ಬೆಂಗಳೂರು

ನನ್ನ ಹೆಸರು ನಮ್ರತ ಎಸ್. ನಾನು ಹುಟ್ಟಿದ್ದು ಹಾಸನ ಜಿಲ್ಲೆಯಲ್ಲಿ ಹಾಗು ಬೆಳೆದಿದ್ದು ಕೆಂಪೇಗೌಡರು ನೆರ್ಮಿಸಿರುವ ಬೆಂಗಳೂರು ಮಹಾನಗರದಲ್ಲಿ .ನನ್ನ ತಂದೆಯ ಹೆಸರು ಸತೀಶ್ ಮತ್ತು ತಾಯಿಯ ಹೆಸರು ಗೀತ.ನನ್ನ ಜೀವನದ ಪ್ರತಿಯೊಂದು ಸಾಧನೆ ಅವರ ಆಶೀರ್ವಾದ, ಪ್ರೀತಿ ಮತ್ತು ಸಹಾಯದಿಂದ. ನಾನು ನನ್ನ ಪ್ರಾರ್ಮಿಕ ಶಿಕ್ಷಣವನ್ನು ಕ್ರೈಸ್ಟ್ ಶಾಲೆಯಲ್ಲಿ ಪಡೆದೆ.ನಂತರದ ಶಿಕ್ಷಣವನ್ನು ಶ್ರೀ ಶ್ರೀ ರವಿಶಂಕರ ವಿದ್ಯಾಬಮಂದಿರದಲ್ಲಿ ಪಡೆದೆ. ನಾನು ನನ್ನ ಪದವಿ ಪೂರ್ವಕ ಶಿಕ್ಷಣವನ್ನು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪಡೆದಿದ್ದೇನೆ. ಈಗ ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ, ಅರ್ಥಶಾಸ್ತ್ರ,ಗಣಿತಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರವನ್ನು ಓದುತ್ತಿದ್ದೇನೆ.

ಶಿಕ್ಷಣ

ಬದಲಾಯಿಸಿ

ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಕ್ರೈಸ್ಟ್ ಶಾಲೆಯಲ್ಲಿ ಪಡೆದು, ನಂತರದ ಶಿಕ್ಷಣವನ್ನು ಶ್ರೀ ಶ್ರೀ ರವಿಶಂಕರ ವಿದ್ಯಾಬಮಂದಿರದಲ್ಲಿ ಪಡೆದೆ. ನಾನು ನನ್ನ ಪದವಿ ಪೂರ್ವಕ ಶಿಕ್ಷಣವನ್ನು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪಡೆದಿದ್ದೇನೆ. ಈಗ ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಅರ್ಥಶಾಸ್ತ್ರ,ಗಣಿತಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರವನ್ನು ಓದುತ್ತಿದ್ದೇನೆ.

ಪುಸ್ತಕಗಳ ಮೇಲಿನ ಆಸಕ್ತಿ

ಬದಲಾಯಿಸಿ
ಒಬ್ಬರನ್ನು ಸೋಲಿಸುವುದು ಬಹಳ ಸುಲಭ, ಆದರೆ ಒಬ್ಬರನ್ನು ಗೆಲ್ಲುವುದು ಬಹಳ ಕಷ್ಟ.

ಎ.ಪಿ.ಜೆ. ಅಬ್ದುಲ್ ಕಲಾಂ

ನಾನು ಮೂರನೆಯ ತರಗತಿಯಲ್ಲಿ ಇರಬೇಕಾದರೆ ನನ್ನ ಚಿಕ್ಕಮ್ಮ ನನಗೆ ಪಂಚತಂತ್ರ ಕತೆಗಳ ಪುಸ್ತಕವನ್ನು ಉಡುಗೊರೆಯಾಗಿ ಕೊಟ್ಟರು.ಈ ಪುಸ್ತಕ, ನಾನು ಓದಿದ ಮೊದಲನೆಯ ಪುಸ್ತಕ.ಅಂದಿನಿಂದ ಇಂದಿನವರೆಗೂ, ಪುಸ್ತಕಗಳು ನನ್ನ ಜೀವನದ ಅಮೂಲ್ಯ ಭಾಗವಾಗಿವೆ.ಸ್ವಾಮಿ ವಿವೇಕಾನಂದ, ಪೂರ್ಣಚಂದ್ರ ತೇಜಸ್ವಿ, ಕುವೆಂಪು, ಬಿ.ಜಿ.ಎಲ್.ಸ್ವಾಮಿ, ಅಕ್ಕಮಹಾದೇವಿ, ಬಸವಣ್ಣ, ಅಬ್ದುಲ್ ಕಲಾಮ್, ಮೊದಲಾದವರ ಪುಸ್ತಕಗಳು ನನ್ನ ಮೇಲೆ ಬಹಳ ಪ್ರಭಾವ ಬೀರಿವೆ.ಅವರು ಹೇಳಿದ ಮಾತುಗಳು ಇಂದೂ ನನ್ನ ಮನಸ್ಸಿನಲ್ಲಿವೆ.

ಸಂಗೀತಾಭ್ಯಾಸ

ಬದಲಾಯಿಸಿ

ನಾನು ಐದನೇ ತರಗತಿಯಲ್ಲಿ ಇರಬೇಕಾದರೆ, ಶ್ರೀ ಸಾಯಿತೆಜಸ್ ಚಂದ್ರಶೇಕರ್ ಅವರ ಬಳಿ ಸಂಗೇತಾಭ್ಯಾಸವನ್ನು ಪ್ರಾರಂಭಿಸಿದೆ. ಎಂ. ಎಸ್. ಸುಬ್ಬಲಕ್ಷ್ಮಿ, ಎಂ. ಬಾಲಮುರಳಿಕೃಷ್ಣ, ಕಿಶೋರ್ ಕುಮಾರ್, ಲತಾ ಮಂಗೇಶ್ಕರ್, ಮೊಹಮ್ಮದ್ ರಫಿ,ಪಂಚಾಕ್ಷರಿ ಗವಾಯಿ, ಶ್ರೇಯಾ ಗೋಶಾಲ್, ಸೋನು ನಿಗಮ್ ಮತ್ತು ಅರಿಜಿತ್ ಸಿಂಘ್ ನನ್ನ ಅಚ್ಚುಮೆಚ್ಚಿನ ಗಾಯಕರು.

ಪ್ರವಾಸ

ಬದಲಾಯಿಸಿ
 
ಮೈಸೂರು ಅರಮನೆ

ನನಗೆ ಹೊಸ ಜಾಗಗಳನ್ನು ನೋಡುವುದು ಹಾಗು ಅದರ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳುವುದು ಬಹಳ ಇಷ್ಟ. ಮೈಸೂರು, ಕನ್ಯಾಕುಮಾರಿ,ಜೈಪುರ, ಶಿಲ್ಲಾಂಗ್, ಚಂಡೀಗಢ ಹಾಗು ಪಣಜಿ ನನಗೆ ತುಂಬಾ ಇಷ್ಟವಾದ ಜಾಗಗಳು. ಪ್ರತಿಯೊಂದು ಜಾಗಕ್ಕೂ ತನ್ನದೆಯಾದ ಅನನ್ಯತೆಯಿದೆ. ಅಲ್ಲಿನ ಜನ, ಅವರು ಧರಿಸುವ ಬಟ್ಟೆ, ತಿನ್ನುವ ಆಹಾರ ವಿಭಿನ್ನವಾಗಿವೆ.

"ಗಾಂಧಿ" ಎಂಬ ಚಲನಚಿತ್ರ

ಬದಲಾಯಿಸಿ
ನನ್ನನ್ನು ಸಂಕೋಲೆಯಲ್ಲಿ ಬಂಧಿಸಿಡಬಹುದು, ಹಿಂಸಿಸಬಹುದು, ಅಷ್ಟೆ ಯಾಕೆ ನನ್ನ ಈ ದೇಹವನ್ನು ನಾಶ ಪಡಿಸಬಹುದು. ಆದರೆ, ಯಾವತ್ತಿಗೂ ನನ್ನ ಆತ್ಮಬಲವನ್ನು ಬಂಧಿಸಿಡಲಾಗದು.

ಮಹಾತ್ಮಾ ಗಾಂಧಿ

 
ಮಹಾತ್ಮಾ ಗಾಂಧಿ

"ಗಾಂಧಿ", ಎಂಬ ಚಲನಚಿತ್ರವನ್ನು ನೋಡಿದ ನಂತರ, ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿದುಕೊಳ್ಳಬೇಕೆಂಬ ಆಸಕ್ತಿ ನನ್ನಲ್ಲಿ ಮೂಡಿತು.ಮಹಾತ್ಮಾ ಗಾಂಧಿ,ಚಂದ್ರಶೇಖರ ಆಜಾದ್‌‌‌,ಅನ್ನಿ ಬೆಸೆಂಟ್,ಈಶ್ವರ ಚಂದ್ರ ವಿದ್ಯಾಸಾಗರ,ಲಾಲಾ ಲಜಪತ ರಾಯ್,ಸುಭಾಷ್ ಚಂದ್ರ ಬೋಸ್ ಮೊದಲಾದವರ ಬಗ್ಗೆ ತಿಳಿದುಕೊಂಡೆ. ಅವರ ಧೈರ್ಯ, ಸಾಹಸ ಮತ್ತು ತ್ಯಾಗ ನನ್ನ ಹೃದಯವನ್ನು ಮುಟ್ಟಿತು.ಅವರ ಜೀವನ ಮತ್ತು ಮಾತುಗಳು ನನ್ನ ಬದುಕಿನ ದಾರಿದೀಪವಾಗಿದೆ.

ಗಾಂಧೀಜಿಯವರ ಆತ್ಮಚರಿತ್ರೆ "ಸತ್ಯದೊಂದಿಗೆ ನನ್ನ ಪ್ರಯೋಗಗಳು", ಭಾರತಕ್ಕೆ ಸ್ವಾತಂತ್ರ್ಯ ಕೊಡಿಸಲು ಅವರು ಮಾಡಿದ ಹೋರಾಟ ಮತ್ತು ಅವರು ಅಹಿಂಸಾ ಮಾರ್ಗದಲ್ಲಿ ನಡೆದ ಪ್ರಯಾಣವನ್ನು ತುಂಬಾ ಸ್ಪೂರ್ತಿದಾಯಕ ಬರೆದಿದ್ದಾರೆ.

ಜೀವನದ ಗುರಿ

ಬದಲಾಯಿಸಿ

ನನ್ನ ಹೆತ್ತವರು ನನ್ನ ಮೇಲೆ ಹೆಮ್ಮೆ ಪಡುವಂತೆ ಮಾಡುವುದೇ,ನನ್ನ ಜೀವನದ ಗುರಿ.ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗಳಿಸಿ ನನ್ನ ಕೈಯಲ್ಲಾದಷ್ಟು ಸಮಾಜಸೇವೆ ಮಾಡುತ್ತೇನೆ.ನನ್ನ ತಾಯಿ ನನಗೆ ಯಾವಾಗಲು," ಜೀವನದಲ್ಲಿ ನಾವು ಏನಾದರು ಸಾಧಿಸಬೇಕೆಂದರೆ, ಕಷ್ಟ ಪಡಬೇಕು.ಇಲ್ಲದಿದ್ದರೆ ನಾವು ನಮ್ಮ ಜೀವನದಲ್ಲಿ ಏನನ್ನೂ ಸಾಧಿಸಲಾಗದು", ಎಂದು ಹೇಳುತ್ತಿದ್ದರು.ಅವರ ಈ ಮಾತು ನನ್ನ ಜೀವನದ ದಾರಿದೀಪವಾಗಿದೆ.

ಎಲ್ಲರಿಗು ತಮ್ಮ ಜೀವನದಲ್ಲಿ ಆಸೆಗಳಿರುತ್ತವೆ. ಕೆಲವರಿಗೆ ಹಣ, ಕೆಲವರಿಗೆ ಆಸ್ತಿ ಮುಂತಾದವು. ಆದರೆ ನನ್ನ ಆಸೆ ಜನರ ಗೌರವವನ್ನು ಗಳಿಸುವುದು.ಜನರ ಮುಖದಲ್ಲಿ ನಗು ಮೂಡಿಸುವುದು, ಏಕೆಂದರೆ, ಆಸ್ತಿ, ಅಂತಸ್ತು ಇವೆಲ್ಲದಕ್ಕು ಬೆಲೆ ಕಟ್ಟಬಹುದು. ಆದರೆ ಮನುಷ್ಯ, ಆತನ ನಗು, ಗೌರವ ಇವಕ್ಕೆಲ್ಲ ಬೆಲೆ ಕಟ್ಟಲು ಆಗುವುದಿಲ್ಲ. ಇವೆಲ್ಲವೂ ಅಮೂಲ್ಯವಾದವು!