ಕಿಶೋರ್ ಕುಮಾರ್

ಕಿಶೋರ್ ಕುಮಾರ್ (ಹಿಂದಿ: किशोर कुमार)

ಕಿಶೋರ್ ಕುಮಾರ್

(ಆಗಸ್ಟ್ ೪, ೧೯೨೯ಅಕ್ಟೋಬರ್ ೧೩, ೧೯೮೭)

ಒಬ್ಬ ಭಾರತದ ಚಲನಚಿತ್ರ ಹಿನ್ನೆಲೆ ಗಾಯಕ ಮತ್ತು ನಟ. ಅವರು ಒಬ್ಬ ಗೀತಕಾರ, ಸಂಗೀತರಚನೆಕಾರ, ನಿರ್ಮಾಪಕ, ನಿರ್ದೇಶಕ, ಚಲನಚಿತ್ರ ಬರಹಗಾರ, ಚಿತ್ರಸಾಹಿತ್ಯ ಲೇಖಕರಾಗಿ ಕೂಡ ಗಮನಾರ್ಹವಾದ ಯಶಸ್ಸು ಸಾಧಿಸಿದರು.

ನಟನೆಯನ್ನೂ ಅಭ್ಯಾಸಮಾಡಿದ್ದರು ; ಆದರೆ ಅವರಿಗೆ ಯಶಸ್ಸು ದೊರೆತದ್ದು ಹಿಂಬದಿಗಾಯಕರಾಗಿಸಂಪಾದಿಸಿ

ಕಿಶೋರ್ ಕುಮಾರ್ ಒಬ್ಬ ಸಮೃದ್ಧಿಭರಿತ ಗಾಯಕರಾಗಿದ್ದರು ಮತ್ತು ಹಿಂದಿ, ಬಂಗಾಳಿ, ಮರಾಠಿ, ಅಸ್ಸಾಮೀ, ಗುಜರಾತಿ, ಕನ್ನಡ, ಭೋಜ್‌ಪುರಿ, ಮಳಯಾಳಮ್ ಮತ್ತು ಒರಿಯಾ ಸಹಿತ ಹಲವಾರು ಭಾರತೀಯ ಭಾಷೆಗಳಲ್ಲಿ ಹಾಡಿದ್ದರು. ಮೊಹಮ್ಮದ್ ರಫೀ, ಮತ್ತು ಮುಕೇಶ್‌ರೊಂದಿಗೆ, ಅವರು ೧೯೫೦ರ ದಶಕದಿಂದ ೧೯೮೦ರ ದಶಕದ ಮಧ್ಯದವರೆಗೆ ಬಾಲಿವುಡ್‌ನ ಪ್ರಧಾನ ಪುರುಷ ಹಿನ್ನೆಲೆ ಗಾಯಕರಲ್ಲಿ ಒಬ್ಬರಾಗಿದ್ದರು.

ಮದುವೆ ಅವರಿಗೆ ಆಟವಾಗಿತ್ತುಸಂಪಾದಿಸಿ

ಅವರು ನಾಲ್ಕು ಬಾರಿ ಮದುವೆಯಾಗಿದ್ದರು ಮತ್ತು ಇಬ್ಬರು ಪುತ್ರರನ್ನು ಅಗಲಿದರು (ಅಮಿತ್ ಕುಮಾರ್, ಇವರು ಕೂಡ ಬಾಲಿವುಡ್ ಮತ್ತು ಬಂಗಾಳಿ ಚಲನಚಿತ್ರಗಳ ಹಿನ್ನೆಲೆ ಗಾಯನದಲ್ಲಿ ವೃತಿನಿರತರಾದರು, ಮತ್ತು ಸುಮಿತ್ ಕುಮಾರ್).

ಬಾಲ್ಯಸಂಪಾದಿಸಿ

ಕಿಶೋರ್ ಕುಮಾರ್ (ಮೊದಲಿನ ಹೆಸರು ಆಭಾಸ್ ಕುಮಾರ್ ಗಾಂಗೂಲಿ) (ಬಂಗಾಳಿ :আভাষ কুমার গাঙ্গুলি) ಕೇಂದ್ರೀಯ ಪ್ರಾಂತಗಳು ಮತ್ತು ಬೇರಾರ್, ಬ್ರಿಟಿಷರ ಆಳ್ವಿಕೆಯ ಭಾರತದ (ಈಗಿನ ಮಧ್ಯ ಪ್ರದೇಶ ರಾಜ್ಯದಲ್ಲಿ) ಖಾಂಡ್ವಾ ಪಟ್ಟಣದ ಒಂದು ಬಂಗಾಳಿ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಕುಂಜಲಾಲ್ ಗಾಂಗೂಲಿ ವಕೀಲರಾಗಿದ್ದರು, ಮತ್ತು ಅವರ ತಾಯಿ ಗೌರಿ ದೇವಿ ಒಂದು ಶ್ರೀಮಂತ ಮನೆತನದಿಂದ ಬಂದವರು. ಆಭಾಸ್ ಕುಮಾರ್ ನಾಲ್ಕು ಮಕ್ಕಳ ಪೈಕಿ ಮೂರನೇಯವರು (ಅಶೋಕ್ ಕುಮಾರ್ (ಹಿರಿಯ ಪುತ್ರ), ಸತೀ ದೇವಿ, ಮತ್ತು ಅನೂಪ್ ಕುಮಾರ್ ಇತರ ಮೂರು ಮಕ್ಕಳು).

ಮನೆಯ ವಾತಾವರಣ ನಟನ-ಕಲೆಗೆ ಸಹಕಾರಿಯಾಗಿತ್ತುಸಂಪಾದಿಸಿ

ಆಭಾಸ್ ಗಾಂಗೂಲಿ ಇನ್ನೂ ಮಗುವಾಗಿದ್ದಾಗ, ಅಶೋಕ್ ಕುಮಾರ್ ಒಬ್ಬ ಜನಪ್ರಿಯ ಬಾಲಿವುಡ್ ನಟರಾದರು. ನಂತರ, ಅನೂಪ್ ಕುಮಾರ್ ಕೂಡ ಅಶೋಕ್ ಕುಮಾರ್ ಸಹಾಯದಿಂದ ಚಲನಚಿತ್ರದಲ್ಲಿ ಪ್ರವೇಶಿಸಿದರು. ತನ್ನ ಸಹೋದರರೊಂದಿಗೆ ಸಮಯ ಕಳೆಯುತ್ತ, ಆಭಾಸ್ ಕುಮಾರ್ ಕೂಡ ಚಲನಚಿತ್ರ ಮತ್ತು ಸಂಗೀತದಲ್ಲಿ ಬಹಳ ಆಸಕ್ತಿ ವಹಿಸಲು ಆರಂಭಿಸಿದನು. ಅವನು ಗಾಯಕ-ನಟ ಕುಂದನ್ ಲಾಲ್ ಸೈಗಲ್‌ರ ಅಭಿಮಾನಿಯಾದನು (ಸೈಗಲ್‌ರನ್ನು ತನ್ನ ಗುರುವೆಂದು ಭಾವಿಸಿದ್ದನು).

ಹಿಂದಿ ಚಲನಚಿತ್ರದಲ್ಲಿ ಆರಂಭದ ದಿನಗಳುಸಂಪಾದಿಸಿ

ಅಶೋಕ್ ಕುಮಾರ್ ಒಬ್ಬ ಬಾಲಿವುಡ್ ಮುಖ್ಯನಟನಾದ ಬಳಿಕ, ಗಾಂಗೂಲಿ ಕುಟುಂಬ ಮುಂಬೈಗೆ ನಿಯಮಿತವಾಗಿ ಭೇಟಿ ನೀಡತೊಡಗಿತು. ಆಭಾಸ್ ಕುಮಾರ್ ತನ್ನ ಹೆಸರನ್ನು ಕಿಶೋರ್ ಕುಮಾರ್ ಎಂದು ಬದಲಾಯಿಸಿಕೊಂಡನು ಮತ್ತು ಅವನ ಸಹೋದರ ಕೆಲಸ ಮಾಡುತ್ತಿದ್ದ ಬಾಂಬೆ ಟಾಕೀಸ್‌ನಲ್ಲಿ ವೃಂದಗಾಯಕನಾಗಿ ತನ್ನ ಚಲನಚಿತ್ರ ವೃತ್ತಿಯನ್ನು ಆರಂಭಿಸಿದನು. ನಟನಾಗಿ ಅವರ ಮೊದಲ ಚಿತ್ರ, ಅಶೋಕ್ ಕುಮಾರ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದ, ಶಿಕಾರಿ (೧೯೪೬). ಸಂಗೀತ ನಿರ್ದೇಶಕ ಖೇಮ್‌ಚಂದ್ ಪ್ರಕಾಶ್ ಇವರಿಗೆ ಚಿತ್ರ ಜಿದ್ದಿಯಲ್ಲಿ (೧೯೪೮) ಮರ್‌ನೇ ಕಿ ದುಆಯೇಂ ಕ್ಯೂ ಮಾಂಗು ಹಾಡು ಹಾಡಲು ಅವಕಾಶ ಕೊಟ್ಟರು. ಇದರ ನಂತರ, ಕಿಶೋರ್ ಕುಮಾರ್‌ರಿಗೆ ಹಲವು ಕೆಲಸಗಳು ದೊರೆತವು, ಆದರೆ ಅವರು ಚಲನಚಿತ್ರ ವೃತ್ತಿಯ ಬಗ್ಗೆ ಬಹಳ ಗಂಭೀರವಾಗಿರಲಿಲ್ಲ. ೧೯೪೯ರಲ್ಲಿ, ಅವರು ಮುಂಬೈಯಲ್ಲಿ ನೆಲೆಸಲು ನಿರ್ಧರಿಸಿದರು.

ನಿಧನಸಂಪಾದಿಸಿ

ಕಿಶೋರ್ ಕುಮಾರ್, ಅಕ್ಟೋಬರ್ ೧೯೮೭ರಲ್ಲಿ, ತೀವ್ರ ಹೃದಯಾಘಾತದಿಂದ ನಿಧನರಾದರು.