ಖಾಂಡ್ವಾ
ಖಾಂಡ್ವಾ ಮಧ್ಯ ಪ್ರದೇಶ ರಾಜ್ಯದ ಪೂರ್ವ ನೇಮಾಡ್ ಪ್ರದೇಶದಲ್ಲಿರುವ ಮುಖ್ಯ ಪಟ್ಟಣ. ಅದೇ ಹೆಸರಿನ ತಹಸೀಲ್. ಉ.ಅ. 21.830 ಮತ್ತು ಪೂ.ರೇ. 76.330 ದಲ್ಲಿ[೧] ನರ್ಮದಾ ನದೀ ಕಣಿವೆಯ ಮೇಲೆ, ಸಮುದ್ರ ಮಟ್ಟದಿಂದ 1,007' (309 ಮೀ.) ಎತ್ತರದಲ್ಲಿದೆ. ಇಲ್ಲಿಯದು ಉಷ್ಣ ವಾಯುಗುಣ. ಮಳೆ 20"-25". ಭೂಮಿ ಫಲವತ್ತಾಗಿದೆ.
ತಹಸೀಲಿನಲ್ಲಿ ಹತ್ತಿ ಅಲ್ಲದೆ ಕೆಲಮಟ್ಟಿಗೆ ಗೋದಿ ಮತ್ತು ಜೋಳ ಬೆಳೆಯುತ್ತಾರೆ. ಹತ್ತಿಯಿಂದ ಕಾಳು ತೆಗೆಯುವ ಮತ್ತು ಅದನ್ನು ಬೇಲುಗಳಾಗಿ ಕಟ್ಟುವ ಕಾರ್ಖಾನೆಗಳಿವೆ. ಖಾಂಡ್ವಾ ಹತ್ತಿಯ ಒಂದು ದೊಡ್ಡ ವ್ಯಾಪಾರ ಸ್ಥಳ. ಖಾಂಡ್ವಾದಲ್ಲಿ ಪಟ್ಟಣದ ಎಲ್ಲ ಅನುಕೂಲಗಳೂ ಉಂಟು. ಇದು ಒಂದು ರೈಲ್ವೆ ಸಂಧಿಸ್ಥಳ. ಮೋಟಾರು ರಸ್ತೆಗಳ ಕೇಂದ್ರ. ಜನಸಂಖ್ಯೆ 200,738 (2011).[೨]
ಇತಿಹಾಸ
ಬದಲಾಯಿಸಿಪ್ರಾಚೀನ ಕಾಲದಿಂದಲೂ ಖಾಂಡ್ವಾ ಮಹತ್ತ್ವದ ಸ್ಥಾನ ಪಡೆದಿದೆ. ಟಾಲೆಮಿ ಮತ್ತು ಅಲ್-ಬಿರುನಿ ಇವರ ಬರಹಗಳಲ್ಲಿ ಈ ಊರಿನ ಉಲ್ಲೇಖವಿದೆ. ಇದು ಜೈನ ಧರ್ಮದ ಕೇಂದ್ರವಾದ್ದರಿಂದ ಇಲ್ಲಿ ಅನೇಕ ಜೈನಶಿಲ್ಪಗಳನ್ನು ಕಾಣಬಹುದು. 1802 ಇಲ್ಲಿ ಯಶವಂತರಾವ್ ಹೋಳ್ಕರ್ ಮತ್ತು 1858ರಲ್ಲಿ ತಾತ್ಯಾ ಟೋಪಿ ಇವರು ಈ ಊರನ್ನು ಲೂಟಿಮಾಡಿದ್ದರು.
ಉಲ್ಲೇಖಗಳು
ಬದಲಾಯಿಸಿ- ↑ "Maps, Weather, and Airports for Khandwa, India". fallingrain.com.
- ↑ "Area of Khandwa census 2011". khandwa.nic.in. Retrieved 8 August 2012.