ಸದಸ್ಯ:KR Sanjana Hebbar/ನನ್ನ ಪ್ರಯೋಗಪುಟ01
ಶ್ರೀ ಶ್ರೀ ವಿಬುಧೇಶ ತೀರ್ಥ ಶ್ರೀಪಾದರು
ಬದಲಾಯಿಸಿಶ್ರೀ ಶ್ರೀ ವಿಬುಧೇಶ ತೀರ್ಥ ಶ್ರೀಪಾದರು ( - ೨೦೦೯) ಅವರ ಆರಂಭಿಕ ಹೆಸರು ರಮೇಶ. ಇವರು ಬೋರ್ಡ್ ಹೈಸ್ಕೂಲಿನ ವಿದ್ಯಾರ್ಥಿಯಾಗಿದ್ದು ಅಂದಿನ ಪ್ರಸಿದ್ಧ ಅಧ್ಯಾಪಕರಾದ ರೋಕಿ ಫೆರ್ನಾಡಿಸರ ಪ್ರಿಯ ವಿದ್ಯಾರ್ಥಿಯಾಗಿದ್ದರು. ಬಾಲ್ಯದಲ್ಲಿಯೇ ಅಪಾರ ದೇಶಭಕ್ತಿ ಹಾಗೂ ಧೈರ್ಯವನ್ನು ಶ್ರೀಪಾದರು ಹೊಂದಿದ್ದರು. ಶ್ರೀಪಾದರು ಶೈಕ್ಷಣಿಕ, ಧಾರ್ಮಿಕ ಹಾಗೂ ಸಮಾಜ ಸೇವೆಯ ಮೂಲಕ ದೇಶದ ಪ್ರಖ್ಯಾತ ಸಂತರಾಗಿದ್ದರು. ರೋಕಿ ಫೆರ್ನಾಡಿಸ್‍ರವರ ಇಂಗ್ಲೀಷ್ ಭಾಷೆಯ ಪ್ರೌಡಿಮೆಗೆ ಬೆರಗಾದ ರಮೇಶರವರು ಗುರುಗಳ ಕುರಿತು ಅಪಾರ ಗೌರವವನ್ನು ಹೊಂದಿದ್ದರು.
ಶ್ರೀಪಾದರಿಗೆ ಆಂಗ್ಲ ಭಾಷೆಯಲ್ಲಿ ಆಸಕ್ತಿ ಮೂಡಲು ಗುರುಗಳ ಆಂಗ್ಲ ಭಾಷೆಯ ಪಾಂಡಿತ್ಯವೇ ಪ್ರಮುಖ ಕಾರಣವಾಗಿತ್ತು. ಭಾರತೀಯ ಸಂಸ್ಕೃತಿಯ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದರು. ಮಾತ್ರವಲ್ಲದೇ ದೇಶ ಪ್ರೇಮ ಬಾಲ್ಯದಿಂದಲೇ ಶ್ರೀಪಾದರು ಬ್ರಿಟಿಷರ ವಿರುದ್ಧ ಹೋರಾಡಲು ಸ್ಫೂರ್ತಿ ನೀಡಿತು.
ಆಂಗ್ಲ ಭಾಷೆಯಲ್ಲಿ ಅವರು ಆಸಕ್ತಿಯನ್ನು ಹೊಂದಿದ್ದರು. ಆರದೆ ಇಂಗ್ಲೀಷ್ ಸಂಸ್ಕೃತಿಯನ್ನು ವಿರೋಧಿಸುತ್ತರು. ವಿಬುಧೇಶ ಶ್ರೀಪಾದರು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಸ್ವಾತಂತ್ರ್ಯ ಚಳುವಳಿಯ ಕ್ರಾಂತಿ ಎಲ್ಲಡೆ ಪಸರಿಸಿತು. ಆ ಸಂದರ್ಭದಲ್ಲಿ ಉಡುಪಿ ಮುಲ್ಕಿಯಲ್ಲಿಯೂ ಬಂದು ಬೃಹತ್ ಸಮ್ಮೇಳನ ನಡೆದು ಕಡುವಿನ ಬಾಗಿಲಿನ ಶಾಂಭವಿ ಗಾರ್ಡನ್‍ನಿಂದ ಗಾಂಧೀ ಮೈದಾನದ ತನಕ ಪ್ರತಿಭಟನಾ ಮೆರವಣಿಗೆಯು ಹಬ್ಬಿತ್ತು. ಇಂತಹ ಒಂದು ಬೃಹತ್ ಸಮ್ಮೇಳನ ಮುಲ್ಕಿಯಲ್ಲಿ ಆವರೆಗೂ ನಡೆದಿರಲಿಲ್ಲ.
ಆಗಿನ ಬ್ರಿಟಿಷ್ ಸರ್ಕಾರವು ಅಪ್ರಾಪ್ತ ವಯಸ್ಸಿನ ಹೋರಾಟಗಾರ-ರಿಗೆ ಅವಕಾಶ ನೀಡಿರಲಿಲ್ಲ. ಇದರಿಂದಾಗಿ ಶ್ರೀಪಾದರಿಗೆ ಸ್ಪೂರ್ತಿ ದೊರೆಯಿತು. ದೇಶ ಪ್ರೇಮದಿಂದ ವೇದಿಕೆಯನ್ನೇರಿ ಬ್ರಿಟಿಷರ ವಿರುದ್ಧ ಭಾಷಣ ಮಾಡಿದರು. "ಬ್ರಿಟಿಷರು ಭಾರತೀಯರನ್ನು ಶೋಷಣೆ ಮಾಡಿದ್ದಾರೆ. ರಾಜ್ಯಗಳ ವಾರಿಸುದಾರಿಕೆಗೆ ದತ್ತು ಮಕ್ಕಳು ಅರ್ಹರಲ್ಲ ಎಂಬ ಕಾನೂನು ಮಾಡಿ ಅಧಿಕಾರ ಕಬಳಿಸುತ್ತಿದ್ದಾರೆ. ಭಾರತೀಯರು ಹಿಮಾಲಯವನ್ನೇರಿ ಉಗುಳಿದರೆ ಸಾಕು ಹಾರಿ ಹೋಗುವಷ್ಟು ಸಂಖ್ಯೆಯಲ್ಲಿರುವ ಬ್ರಿಟಿಷರು ನಮ್ಮನ್ನಾಳುವುದು ಅವಮಾನದ ಸಂಗತಿ" ಎಂದು ಗರ್ಜಿಸಿದರು.
ಶ್ರೀಪಾದರ ವಾಕ್ ಚಾತುರ್ಯ ಮತ್ತು ದೇಶಭಕ್ತಿಗೆ ಸಂಪೂರ್ಣ ಸಭೆಯು ನಿಬ್ಬೆರಗಾಯಿತು. ಬ್ರಿಟಿಷರ ಆಡಳಿತಕ್ಕೆ ಸವಾಲೆಸೆಯುವಂತೆ ಉಡುಪಿ ಬೋರ್ಡ್ ಹೈಸ್ಕೂಲು ವಿದ್ಯಾರ್ಥಿ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಮಾಡನ್ನೇರಿ ಧ್ವಜಾರೋಹಣ ಮಾಡಿದರು. ಸ್ವಾತಂತ್ರ್ಯ ಪಡೆದ ನಂತರವೂ ಇವರ ದೇಶಭಕ್ತಿ ಕಿಂಚಿತ್ತು ಕಡಿಮೆಯಾಗಲಿಲ್ಲ. ಪ್ರತಿ ವರ್ಷ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವದಂದು ರಾಷ್ಟ್ರಧ್ವಜಾರೋಹಣ ಮಾಡಿ ಭಾರತ ಮಾತೆಗೆ ಗೌರವ ಸಲ್ಲಿಸುತ್ತಿದ್ದರು. ಇವರು ದೇಶೀಯ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿದ್ದರು. ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ದೇಶಭಕ್ತಿ, ಸಂಸ್ಕೃತಿ, ಸಂಸ್ಕಾರ ಹಾಗೂ ವೈಜ್ಞಾನಿಕ ಅನ್ವೇಷಣೆಗೆ ಪೂರಕವಾದ ಶಿಕ್ಷಣ ನೀಡಬೇಕೆಂದು ಪ್ರತಿಪಾದಿಸಿದರು. ಶ್ರೀಗಳು ಆರಂಭಿಸಿದ ಶಿಕ್ಷಣ ಸಂಸ್ಥೆಯನ್ನು ಅವರ ಶಿಷ್ಯರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ತಮ್ಮ ಗುರುಗಳು ತೋರಿಸಿದ ಮಾರ್ಗದರ್ಶನದಂತೆ ಮುನ್ನಡಿಸಿಕೊಂಡು ಬಂದಿದ್ದಾರೆ.