ಮೂಲ್ಕಿ
ಮೂಲ್ಕಿ ಅಥವಾ ಮುಲ್ಕಿಯು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನಲ್ಲಿರುವ ಒಂದು ಪಂಚಾಯತ್ ಪಟ್ಟಣ. ಇದನ್ನು ಮೊದಲು ಮೂಲಿಕಾಪುರ ಎಂದು ಕರೆಯಲಾಗುತ್ತಿತ್ತು, ನಂತರ ಮೂಲ್ಕಿ ಎಂಬುವುದು ಪ್ರಚಲಿತಕ್ಕೆ ಬಂದಿತು. ಆದರೆ, ಮಾತಾನಾಡುವಾಗ ಮೂಲ್ಕಿಯನ್ನು ಮುಲ್ಕಿ ಎಂದು ಉಚ್ಛಾರಣೆ ಮಾಡುತ್ತಾರೆ. ಮೂಲ್ಕಿ ವಿವಿಧ ಧರ್ಮದ ಜನರನ್ನು ಹೊಂದಿರುವ ಪಟ್ಟಣವಾಗಿದೆ. ಇದು ಸುರತ್ಕಲ್ ಉತ್ತರಕ್ಕೆ 10 ಕಿ.ಮೀ ದೂರದಲ್ಲಿದೆ. ಕಾರ್ನಾಡ್ ಮುಲ್ಕಿಯೊಳಗಿನ ಒಂದು ಪ್ರದೇಶವಾಗಿದೆ. ೮೦೦ ವರ್ಷ ಇತಿಹಾಸವಿರುವ ಬಪ್ಪನಾಡು ದುರ್ಗಾಪರಮೇಶ್ವರಿ ದೇವಾಸ್ಥಾನವು ಈ ಮೂಲ್ಕಿಯಲ್ಲಿರುವ ಶಾಂಭವಿ ನದಿಯ ದಡದಲ್ಲಿದೆ. ಮೂಲ್ಕಿಯಿಂದ ಸ್ವಲ್ಪ ದೂರದಲ್ಲಿ ಮಂಗಳೂರು, ಉಡುಪಿ ಜಿಲ್ಲೆ ಮತ್ತು ಮೂಡುಬಿದಿರೆ ಇದೆ. ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ೧೭ರಲ್ಲಿ ಬರುತ್ತದೆ.
ಮುಲ್ಕಿ ತಾಲೂಕು
ಮುಲ್ಕಿ Moolikapur, Mulky | |
---|---|
ತಾಲೂಕು | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ದಕ್ಷಿಣ_ಕನ್ನಡ |
Elevation | ೭ m (೨೩ ft) |
Population (2011[೧]) | |
• Total | ೧೭,೨೭೪ |
ಭಾಷೆ | |
• ಅಧಿಕೃತ | ಕನ್ನಡ |
ಭಾಷೆ | |
• ಪ್ರಾದೇಶಿಕ | ಕನ್ನಡ, ತುಳು, ಕೊಂಕಣಿ |
ಸಮಯ ವಲಯ | ಯುಟಿಸಿ+5:30 (IST) |
PIN | 574154 |
ISO 3166 code | IN-KA |
ವಾಹನ ನೋಂದಣಿ | KA-19 |
ಜಾಲತಾಣ | karnataka |
ಇತಿಹಾಸ
ಬದಲಾಯಿಸಿಪುರಾತನ ಕಾಲದಲ್ಲಿ ಮೂಲಿಕಾ ವೃಕ್ಷ ವನರಾಶಿಗಳಿಂದ ಸುಶೋಭಿಸುತ್ತಿದ್ದ ಪ್ರದೇಶವಾದುದರಿಂದ ಇದು ಮೂಲಿಕಾಪುರ-ಮೂಲಕಾಪುರ-ಮೂಲಿಕೆ-ಮೂಲ್ಕಿ ಎಂಬ ಹೆಸರಲ್ಲಿ ಪ್ರಸಿದ್ಧವಾಯಿತು. ಮೂಲ್ಕಿಯು ಪುರಾತನ ಪಟ್ಟಣ ಹಾಗೂ ಬಂದರುಗಳಲ್ಲಿ ಒಂದಾಗಿತ್ತು. ಮೂಲ್ಕಿ ಜಿಲ್ಲೆಯು ವ್ಯಾಪಾರೀ ಭೂಪಟದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದೆ. ಇಲ್ಲಿಂದ ಶಾಂಭವಿ ನದಿಯ ಮೂಲಕ ಅಕ್ಕಿ, ಕರಿಮೆಣಸು, ಚಿಪ್ಪುಮೀನು ಹಡಗುಗಳ ಮೂಲಕ ರಫ್ತಾಗುತ್ತಿತ್ತು. ಮೂಲ್ಕಿ ಸೀಮೆಯನ್ನು ಸಾಮಂತರಸರು ಮುಲ್ಕಿ ಸೀಮೆಯ ದಂಡನಾಯಕರು ಆಳುತ್ತಿದ್ದರು.
ಶಿಕ್ಷಣ ಸಂಸ್ಥೆಗಳು
ಬದಲಾಯಿಸಿರೈಲು ನಿಲ್ದಾಣ
ಬದಲಾಯಿಸಿಮೂಲ್ಕಿ ರೈಲು ನಿಲ್ದಾಣವು ಕೊಂಕಣ ರೈಲ್ವೆಯ ಒಂದು ನಿಲ್ದಾಣವಾಗಿದೆ. ಇದು ಮೂಲದಿಂದ 724.800 ಕಿಮೀ (450.4 ಮೈಲಿ) ದೂರದಲ್ಲಿದೆ. ಈ ಮೂಲ್ಕಿ ರೈಲು ನಿಲ್ದಾಣದ ಹಿಂದಿನ ನಿಲ್ದಾಣವೆಂದರೆ ನಂದಿಕೂರು ರೈಲು ನಿಲ್ದಾಣ ಮತ್ತು ಮುಂದಿನ ನಿಲ್ದಾಣವು ಸುರತ್ಕಲ್ ರೈಲು ನಿಲ್ದಾಣವಾಗಿದೆ.
ಗಮನಾರ್ಹ ವ್ಯಕ್ತಿಗಳು
ಬದಲಾಯಿಸಿ- ಶ್ರೀನಿಧಿ ಶೆಟ್ಟಿ
- ಸುನೀಲ್ ಶೆಟ್ಟಿ
- ಗಿರೀಶ್ ಕಾರ್ನಾಡ್
- ಮುಲ್ಕಿ ಸುಂದರ್ ರಾಮ್ ಶೆಟ್ಟಿ
- ಕಾರ್ನಾಡ್ ಸದಾಶಿವ ರಾವ್
- ಬುದ್ಧಿ ಕುಂದರನ್
- ಸ್ಟಾನ್ ಆಗೈರಾ
- ಅಮ್ಮೆಂಬಳ ಸುಬ್ಬಾ ರಾವ್ ಪೈ
ಮಾಧ್ಯಮ
ಬದಲಾಯಿಸಿಸಮೀಪದ ಮಂಗಳೂರು ಮತ್ತು ಉಡುಪಿ ನಗರಗಳು ಮುಲ್ಕಿಯ ಬಗ್ಗೆ ಸುದ್ದಿಗಳನ್ನು ವರದಿ ಮಾಡುವ ಮುದ್ರಣ ಪ್ರಕಟಣೆಗಳು ಮತ್ತು ಅಂತರಜಾಲ ತಾಣಗಳನ್ನು ಒದಗಿಸುತ್ತವೆ. ಅತ್ಯಂತ ಪ್ರಮುಖವಾದ ಸ್ಥಳೀಯ ಸುದ್ದಿ ಮೂಲಗಳು:
- ಉದಯವಾಣಿ
- ಕರಾವಳಿ ಅಲೆ
- ಡೈಜಿವರ್ಲ್ಡ್
- ವಾರ್ತಾಭಾರತಿ
- ಪ್ರಜಾವಾಣಿ
- ಟೈಮ್ಸ್ ಆಫ್ ಇಂಡಿಯಾ
ಬಾಹ್ಯ ಸಂಪರ್ಕಗಳು
ಬದಲಾಯಿಸಿ- w:en:Mulki,_India
- w:en:Mulki_railway_station
- ಬಪ್ಪನಾಡು_ದುರ್ಗಾಪರಮೇಶ್ವರಿ
- ಮೂಲಿಕಾಪುರ
- karnataka.gov.in
ಉಲ್ಲೇಖಗಳು
ಬದಲಾಯಿಸಿ- ↑ http://www.citypopulation.de/php/india-[ಶಾಶ್ವತವಾಗಿ ಮಡಿದ ಕೊಂಡಿ] karnataka.php?cityid=2942401000